Author: KNN IT TEAM

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ವಿಧಾನಸಭೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಇನ್ನೂ ಅಂತಿಮಗೊಂಡಿಲ್ಲ. ಈ ನಡುವೆ ಜನವರಿ 9 ಕ್ಕೆ ಸಿದ್ದರಾಮಯ್ಯ ಕೋಲಾರ ಪ್ರವಾಸ ಕೈಗೊಂಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. https://kannadanewsnow.com/kannada/police-search-the-drain-for-1-hour-after-listening-to-a-mentally-challenged-man-read-this-news-to-know-why/ ಜನವರಿ 9 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಕೋಲಾರಕ್ಕೆ ಹೋಗಿ ಬಂದಿರುವ ಸಿದ್ದರಾಮಯ್ಯ ಇದೀಗ ಮತ್ತೆ ಕೋಲಾರಕ್ಕೆ ಹೋಗುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಜನವರಿ 9 ರಂದೇ ಕೋಲಾರದಲ್ಲಿ ಅಧಿಕೃತವಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡ್ತಾರಾ? ಎಂಬುದು ಕಾದು ನೋಡಬೇಕು. ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬುದು ಇನ್ನೂ ಫೈನಲ್ ಆಗಿಲ್ಲ, ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮಗನಿಗಾಗಿ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಇತ್ತ ಸಿದ್ದರಾಮಯ್ಯನವರು ತಮಗೆ ಕೈ ಹಿಡಿದ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಸದ್ಯ ಕೋಲಾರದ ಕಡೆ ಮುಖಮಾಡಿರುವ ಸಿದ್ದರಾಮಯ್ಯ ಈ…

Read More

ಬೆಂಗಳೂರು: ನಗರದ ನಡು ರಸ್ತೆಯಲ್ಲಿದ್ದಂತ ಚರಂಡಿಯಿಂದ ಏಕಾಏಕಿ ಮೇಲೆದ್ದು ಬಂದಿದ್ದಂತ ವ್ಯಕ್ತಿಯೊಬ್ಬ, ಇನ್ನೂ 30 ಜನ ಇದ್ದಾರೆ ಎಂಬುದಾಗಿ ಹೇಳಿದ್ದನು. ಈ ಹಿನ್ನಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಲ ಕಾಲ ಚರಂಡಿಯನ್ನೆಲ್ಲಾ ಹುಡುಕಾಡಿ, ಹೈರಾಣಾಗಿರೋ ಘಟನೆ ಶನಿವಾರ ನಡೆದಿದೆ. ಬೆಂಗಳೂರಿನ ಯಶವಂತಪುರದ ಎಂಇಐ ಸಿಗ್ನಲ್ ಬಳಿಯಲ್ಲಿ, ನಿನ್ನೆ ಬೆಳಿಕ್ಕೆ 10.30ರ ಸುಮಾರಿಗೆ ವ್ಯಕ್ತಿಯೊಬ್ಬ ಏಕಾಏಕಿ ಚರಂಡಿಯಿಂದ ಮೇಲೆ ಬಂದಿದ್ದಾನೆ. ಇದನ್ನು ಗಮನಿಸಿದಂತ ಸ್ಥಳೀಯರು, ಆತನನ್ನು ಪ್ರಶ್ನಿಸಿದಾಗ ನಾನು ಶ್ರೀರಾಮಪುರದಿಂದ ಇಲ್ಲಿಗೆ ಚರಂಡಿಯೊಳಗೆ ಬಂದಿದ್ದೇನೆ. ಇನ್ನೂ 30 ಜನರು ಚರಂಡಿ ಒಳಗೆ ಇದ್ದಾರೆ ಎಂಬುದಾಗಿ ಹೇಳಿದ್ದಾನೆ. ವ್ಯಕ್ತಿ ಹೇಳಿದಂತ ಮಾತನಿಂದ ಬೆಚ್ಚಿದ ಸ್ಥಳೀಯರು, ಚರಂಡಿಯೊಳಗೆ ಯಾರೋ ಸಿಲುಕಿರಬೇಕು ಎಂದು ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸುಮಾರು ಒಂದು ತಾಸು ಚರಂಡಿಯನ್ನು ಪರಿಶೀಲಿಸಿದೆ. ಆದ್ರೇ ಚರಂಡಿಯಲ್ಲಿ ಯಾರೂ ಪತ್ತೆಯಾಗಿಲ್ಲ. ಈ ಬಳಿಕ ಚರಂಡಿಯಿಂದ ಮೇಲೆದ್ದು…

Read More

ಬೆಂಗಳೂರು : ರಾಜ್ಯದಲ್ಲಿ ಜನವರಿ 26 ರಿಂದ ಸುಮಾರು 400 ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ (NEP) ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ ಮತ್ತು ಅಗತ್ಯವಿರುವ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಎನ್ಇಪಿ ಚಟುವಟಿಕೆ ಆಧಾರಿತ ಶಿಕ್ಷಣವಾಗಿದೆ ಮತ್ತು ಪಠ್ಯಕ್ರಮ-ಕೇಂದ್ರಿತವಲ್ಲ. ವಿದ್ಯಾರ್ಥಿಗಳು ಎನ್ಇಪಿ ಅಡಿಯಲ್ಲಿ ಅನೇಕ ಪುಸ್ತಕಗಳನ್ನು ಓದಬೇಕು ಎಂದು ನಾನು ಭಾವಿಸಿಲ್ಲ. ಹೊಸ ಪಠ್ಯಕ್ರಮದ ಪ್ರಕಾರ ಶಿಕ್ಷಕರಿಗೆ ತರಬೇತಿ ನೀಡಲಾಗುವುದು” ಎಂದು ಅವರು ಹೇಳಿದರು. ರಾಜ್ಯದಲ್ಲಿ 2,500 ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲು ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಎಸ್ಸಿ ಮತ್ತು ಎಸ್ಟಿಗಳಿಗೆ ನಿಗದಿಪಡಿಸಿದ ಹೊಸ ಮೀಸಲಾತಿಯ ಶೇಕಡಾವಾರು ಪ್ರಕಾರ ಶಿಕ್ಷಕರ ನೇಮಕಾತಿ ನಡೆಯಲಿದೆ.2,500 ಹುದ್ದೆಗಳಲ್ಲಿ 250 ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ. https://kannadanewsnow.com/kannada/beware-before-ordering-biryani-online-young-woman-dies-in-kerala/ https://kannadanewsnow.com/kannada/bigg-news-today-koppal-gavisiddheswara-maharathotsava-heres-the-important-information-for-the-devotees/

Read More

ಕಾಸರಗೋಡು: ಪುಡ್ ಡಿಲಿವರಿ ಆಪ್ ಮೂಲಕ ಆನ್ ಲೈನ್ ನಲ್ಲಿ ಯುವತಿಯೊಬ್ಬಳು ಬಿರಿಯಾನಿ ಆರ್ಡರ್ ಮಾಡಿದ್ದಳು. ಬಿರಿಯಾನಿ ಊಟ ಬಂದ ಬಳಿಕ, ಅದನ್ನು ಸೇವಿಸಿದಂತ ಯುವತಿ ಸಾವನ್ನಪ್ಪಿರೋ ಘಟನೆ ಕೇರಳದ ಕಾಸರಗೋಡಿನ ಪೆರುಂಬಳದಲ್ಲಿ ನಡೆದಿದೆ. ಡಿಸೆಂಬರ್ 31ರಂದು ಕಾಸರಗೋಡಿನ ರೆಸ್ಟೋರೆಂಟ್ ಒಂದರಿಂದ ಅಂಜು ಶ್ರೀಪಾರ್ವತಿ(20) ಬಿರಿಯಾನಿ ಆರ್ಡರ್ ಮಾಡಿದ್ದಳು. ಹೀಗೆ ಆರ್ಡರ್ ಮಾಡಿದಂತ ಬಿರಿಯಾನಿ ತಿಂದ ಬಳಿಕ ಯುವತಿ ಪುಡ್ ಪಾಯಿಸನ್ಸ್ ನಿಂದ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೇ ಪುಡ್ ಪಾಯಿಸನ್ ಬಳಿಕ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತ ಅಂಜು ಶ್ರೀಪಾರ್ವತಿ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಪೋಷಕರು ನೀಡಿದಂತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವಂತ ಪೊಲೀಸರು, ಮರಣೋತ್ತರ ಪರೀಕ್ಷೆ ಬಳಿಕ, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನೂ ಈ ಘಟನೆಯ ಬಳಿಕ ಎಚ್ಚತ್ತುಕೊಂಡಿರುವಂತ ಕೇರಳ ಸರ್ಕಾರವು, ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಅಲ್ಲದೇ ಪುಡ್ ಪಾಯಿಸನ್ಸ್ ಆರೋಪ…

Read More

ನವದೆಹಲಿ: ಭಾರತ್ ಜೋಡೋ ಯಾತ್ರೆ(Bharat Jodo Yatra)ಯಲ್ಲಿ ರಾಹುಲ್‌ ಗಾಂಧಿ ಜೊತೆ ಮಗುವೊಂದು ಚಳಿಯಲ್ಲಿ ಧೋತಿಯನ್ನು ಮಾತ್ರ ಧರಿಸಿ ನಡೆದುಕೊಂಡು ಹೋಗುತ್ತಿರುವ ಫೋಟೋವೊಂದು ವೈರಲ್‌ ಆಗುತ್ತಿದ್ದು, ರಾಹುಲ್‌ ಬಿಜೆಪಿ ಟೀಕೆಗೆ ಗುರಿಯಾಗಿದ್ದಾರೆ. ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಕೈ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ. ʻಕೇವಲ ಧೋತಿಯನ್ನು ಮಾತ್ರ ಧರಿಸಿ ಆಡುವ ಮಗುವಿನೊಂದಿಗೆ ಗಾಂಧಿ ಕುಡಿ ಕೈ ಹಿಡಿದು ನಡೆಯುತ್ತಿರುವ ಚಿತ್ರʼವನ್ನು ಟ್ವೀಟ್ ಮಾಡಿದ್ದಾರೆ. “4 ಡಿಗ್ರಿ ತಾಪಮಾನದಲ್ಲಿ, ನಾಚಿಕೆಗೇಡಿನ ವ್ಯಕ್ತಿ ಮಾತ್ರ ಮಗುವನ್ನು ರಾಜಕೀಯಕ್ಕಾಗಿ ಬಟ್ಟೆಯಿಲ್ಲದೆ ತಿರುಗುವಂತೆ ಮಾಡಬಹುದು” ಎಂದು ಬಗ್ಗಾ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಮಗುವಿನೊಂದಿಗೆ ಕೇವಲ ಧೋತಿಯನ್ನು ಧರಿಸಿರುವ ಫೋಟೋವನ್ನು ಶೀರ್ಷಿಕೆ ಬರೆದ್ದಾರೆ. 4 डिग्री तापमान में राजनीति के लिए एक बच्चे को कपड़े उतार के घुमाना एक बेशर्म ही कर सकता हैं pic.twitter.com/9ZSzitf3EQ — Tajinder Pal Singh Bagga (@TajinderBagga)…

Read More

ಕೊಪ್ಪಳ : ನಾಡಿನ ಹೆಸರಾಂತ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳ ಗವಿಮಠದ ಜಾತ್ರೆಯ ಮಹಾರಥೋತ್ಸವ ಇಂದು ಸಂಜೆ 5 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇಶಾ ಫೌಂಡೇಶನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. https://kannadanewsnow.com/kannada/air-india-to-shut-down-liquor-services-due-to-urinary-infarction-effect-of-passengers/ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-2023ರ ಅಂಗವಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಜನವರಿ 08 ರಂದು ನಡೆಯಲಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸಿ ಕ.ಕ.ರ.ಸಾ ನಿಗಮದಿಂದ ಕೊಪ್ಪಳ ಕೇಂದ್ರ ಬಸ್ ನಿಲ್ದಾಣ ಹಾಗೂ ಕೊಪ್ಪಳದ ಇತರೆ ಕಡೆಗಳಿಂದ ಸಾರ್ವಜನಿಕ ಭಕ್ತಾಧಿಗಳಿಗೆ ಹೆಚ್ಚಿನ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗುರುತ್ತದೆ. ಬಸ್ ಮಾರ್ಗ ಹಾಗೂ ಹೊರಡುವ ಸ್ಥಳಗಳು: ಗದಗ, ಯಲಬುರ್ಗಾ, ಕುಕನೂರ ಕಡೆಗೆ ಮತ್ತು ಅಳವಂಡಿ, ಮುಂಡರಗಿ ಕಡೆಗೆ, ಈ ಎರಡೂ ಮಾರ್ಗಗಳಿ ಕೊಪ್ಪಳ ಕೇಂದ್ರೀಯ ಬಸ್‌ನಿಲ್ದಾಣದಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹೊಸಪೇಟೆ, ಗಂಗಾವತಿ ಮಾರ್ಗಗಳಿಗೆ ನಗರದ ಹೊಸಪೇಟೆ ರಸ್ತೆಯ ಮಾತಾ ಹೋಟೆಲ್ ಹತ್ತಿರ…

Read More

ನವದೆಹಲಿ: ಹಿರಿಯ ನಾಗರೀಕರ ಸ್ಥಿರ ಠೇವಣಿಗಳ(ಎಫ್ ಡಿ) ಮೇಲಿನ ಬಡ್ಡಿದರ ಮೂರು ವರ್ಷಗಳ ಬಳಿಕ ಶೇ.8ಕ್ಕೇರಿಸಿದೆ. ಈ ಮೂಲಕ ಹಿರಿಯ ನಾಗರೀಕರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಂತೆ ಆಗಿದೆ. ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಹಿರಿಯ ನಾಗರೀಕರ ಎಫ್ ಡಿ ಮೇಲಿನ ಬಡ್ಡಿದರವನ್ನು ಇಳಿಸಲಾಗಿತ್ತು. ಇದೀಗ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿರುವ ಕಾರಣ ಸಾಲದ ಬಡ್ಡಿದರದ ಜೊತೆಗೆ, ಠೇವಣಿ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ. ಸದ್ಯ ಕೆಲ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಶೇ.8ರಷ್ಟು ಬಡ್ಡಿದರ ನೀಡುತ್ತಿವೆ. ಸರ್ಕಾರವು ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿಯಲ್ಲಿ ಸ್ಥಿರ ಠೇವಣಿಗಳ ಮೇಲಿನ ಆದಾಯವನ್ನು 7.4 ರಿಂದ 8ಕ್ಕೆ ಹೆಚ್ಚಿಸಿದೆ. ಪ್ರಯಾಣಿಕರ ಮೂತ್ರ ವಿರಸರ್ಜನೆ ಎಫೆಕ್ಟ್: ಏರ್ ಇಂಡಿಯಾದಲ್ಲಿ ಇನ್ಮುಂದೆ ಮದ್ಯ ಸೇವೆ ಬಂದ್? ನವದೆಹಲಿ: ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಪಾನಮತ್ತ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಘಟನೆ ನಡೆದ ಬಳಿಕ, ಏರ್ ಇಂಡಿಯಾ ವಿಮಾನದಲ್ಲಿ ಮದ್ಯ ವಿತರಣೆಯನ್ನು ನಿಷೇಧಿಸಲಾಗುತ್ತಿದೆ ಎನ್ನಲಾಗುತ್ತಿದೆ. ಕಳೆದ ಶನಿವಾರದಂದು ಏರ್ ಇಂಡಿಯಾ…

Read More

ನವದೆಹಲಿ: ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಪಾನಮತ್ತ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಘಟನೆ ನಡೆದ ಬಳಿಕ, ಏರ್ ಇಂಡಿಯಾ ವಿಮಾನದಲ್ಲಿ ಮದ್ಯ ವಿತರಣೆಯನ್ನು ನಿಷೇಧಿಸಲಾಗುತ್ತಿದೆ ಎನ್ನಲಾಗುತ್ತಿದೆ. ಕಳೆದ ಶನಿವಾರದಂದು ಏರ್ ಇಂಡಿಯಾ ವಿಮಾದನಲ್ಲಿ ವ್ಯಕ್ತಿಯೊಬ್ಬ ಪಾನಮತ್ತ ಸ್ಥಿತಿಯಲ್ಲಿ ಮಹಿಳೆಯ ಮೇಲೆಯೇ ಮೂತ್ರ ವಿರಸರ್ಜನೆ ಮಾಡಿದ್ದನು. ಈ ಬಗ್ಗೆ ಏರ್ ಇಂಡಿಯಾದ ಸಿಇಒ ಕ್ಯಾಂಪ್ ಬೆಲ್ ವಿಲ್ಸನ್ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದರು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಸಂಭವಿಸದಂತೆ ನೋಡಿಕೊಳ್ಳುತ್ತೇವೆ. ಈ ಹಿನ್ನಲೆಯಲ್ಲಿಯೇ ವಿಮಾನದಲ್ಲಿ ಮದ್ಯ ವಿತರಣೆ ನೀತಿಯನ್ನು ಮರುಪರಿಶೀಲಿಸೋದಾಗಿ ಹೇಳುವ ಮೂಲಕ, ರದ್ದು ಪಡಿಸೋ ಸುಳಿವನ್ನು ನೀಡಿದ್ದಾರೆ. ಡಿಸೆಂಬರ್ 26ರಂದು ನಡೆದ ಮದ್ಯ ಸೇವಿಸಿದಂತ ವ್ಯಕ್ತಿ ಮೂತ್ರ ವಿಸರ್ಜನೆ ಪ್ರಕರಣ ಸಂಬಂಧ ಈಗಾಗಲೇ ನಾವು ನಾಲ್ವರು ವಿಮಾನ ಸಿಬ್ಬಂದಿ ಮತ್ತು ಪೈಲಟ್ ಗೆ ನೋಟಿಸ್ ನೀಡಲಾಗಿದ್ದೆ. ಆಂತರೀಕ ವರದಿ ಸಲ್ಲಿಕೆವರೆಗೂ ಅವರನ್ನು ಕರ್ತವ್ಯಕ್ಕೆ ಹಾಜರಾಗದಂತೆ ಸೂಚಿಸಲಾಗಿದೆ ಎಂಬುದಾಗಿಯೂ ತಿಳಿಸಿದ್ದಾರೆ. https://kannadanewsnow.com/kannada/do-you-know-what-the-first-sunrise-of-the-new-year-was-like-watch-the-video-here/ https://kannadanewsnow.com/kannada/bigg-news-important-information-for-government-primary-and-high-school-students-in-the-state-quiz-programme-under-rashtriya-avishkar-abhiyan/ https://kannadanewsnow.com/kannada/good-news-for-metro-commuters-whatsapp-qr-code-allowed-to-buy-tickets-at-once/

Read More

ಕಲಬುರಗಿ : ಪ್ರಮುಖ ಬೆಳೆ ತೊಗರಿ ನೆಟೆ ರೋಗದಿಂದ ತತ್ತರಿಸಿ ಭಾಗಶ: ಹಾನಿಯಾಗಿದ್ದ್ದು, ಸೂಕ್ತ ಪರಿಹಾರ ಕೋರಿ ಶೀಘ್ರದಲ್ಲಿಯೇ ಸಿ.ಎಂ. ಬಳಿ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು. ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆ.ಡಿ.ಪಿ.) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆಟೆ ರೋಗಕ್ಕೆ ವಿಶೇಷ ಪರಿಹಾರದ ಜೊತೆಗೆ ಸಂಪೂರ್ಣ ಬೆಳೆ ವಿಮೆಗೆ ಪರಿಹಾರಕ್ಕೆ ಕೋರಲಾಗುವುದು. ಇದಲ್ಲದೆ ಕೃಷಿ, ತೋಟಗಾರಿಕೆ ಸಚಿವರನ್ನು ಸಹ ಭೇಟಿ ಮಾಡಲಾಗುವುದು. ಈ ಸಂಬಂಧ ವಿಸ್ತøತ ವರದಿಯನ್ನು 2 ದಿನದಲ್ಲಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರಿಗೆ ಸೂಚಿಸಿದರು. ಕೃಷಿ ಇಲಾಖೆ ಮೇಲಿನ ಚರ್ಚೆ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ ಪಟೇಲ್ ಮಾತನಾಡಿ, 2022ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 8.54 ಲಕ್ಷ ಹೆಕ್ಟೇರ್…

Read More

ಲಾತೂರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಲಾತೂರ್‌ನಲ್ಲಿ ಮಹಿಳೆಯೊಬ್ಬಳು ತನಗೆ ಮತ್ತೆ ಹೆಣ್ಣು ಮಗು ಜನಿಸಿದೆ ಎಂದು ಅಸಮಾಧಾನಗೊಂಡು, ತನ್ನ 3 ದಿನದ ಹಸುಳೆಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಒಸ್ಮಾನಾಬಾದ್‌ನ ಲೋಹರಾ ತಹಸಿಲ್‌ನ ಹೋಳಿ ನಿವಾಸಿ 25 ವರ್ಷದ ಮಹಿಳೆ ಕಾಸರ್ ಜವಾಲಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿಸೆಂಬರ್ 29 ರಂದು ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಆಕೆ ಬೇಸರಗೊಂಡಿದ್ದಳು. ಮಗು ಹುಟ್ಟಿದ ಮೂರನೇ ದಿನ ಕರವಸ್ತ್ರದಿಂದ ಮಗುವಿನ ಕತ್ತು ಹಿಸುಕಿ ಕೊಂದಿದ್ದಾಳೆ. ಸಾವಿನ ಪ್ರಕರಣದ ತನಿಖೆಯ ನಂತರ ತನ್ನ ಹೆಣ್ಣು ಮಗುವನ್ನು ಕೊಂದ ಆರೋಪದ ಮೇಲೆ ಇದೀಗ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. https://kannadanewsnow.com/kannada/we-do-business-in-22-states-not-all-are-with-bjp-gautam-adani/ https://kannadanewsnow.com/kannada/bigg-news-important-information-for-government-primary-and-high-school-students-in-the-state-quiz-programme-under-rashtriya-avishkar-abhiyan/ https://kannadanewsnow.com/kannada/we-do-business-in-22-states-not-all-are-with-bjp-gautam-adani/ https://kannadanewsnow.com/kannada/bigg-news-important-information-for-government-primary-and-high-school-students-in-the-state-quiz-programme-under-rashtriya-avishkar-abhiyan/

Read More