Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಮುಂದಿನ ವರ್ಷದಿಂದ ಉಚಿತವಾಗಿ ನೋಟ್ಬುಕ್ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಮಕ್ಕಳಿಗಾಗಿ ಹಾಲು, ಮೊಟ್ಟೆ ಮತ್ತು ಬಿಸಿಯೂಟ ಯೋಜನೆ ಜಾರಿಗೊಳಿಸಲಾಗಿದೆ. ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ವರ್ಷಕ್ಕೆ ₹65 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಮುಂದಿನ ವರ್ಷದಿಂದ ಉಚಿತವಾಗಿ ನೋಟ್ಬುಕ್ ವಿತರಿಸಲಾಗುವುದು. ಈಗಾಗಲೇ ಉಚಿತವಾಗಿ ಪಠ್ಯಪುಸ್ತಕಗಳನ್ನು ನೀಡುತ್ತಿದ್ದೇವೆ. ಮಕ್ಕಳಿಗಾಗಿ ಹಾಲು, ಮೊಟ್ಟೆ ಮತ್ತು ಬಿಸಿಯೂಟ ಯೋಜನೆ ಜಾರಿಗೊಳಿಸಲಾಗಿದೆ. ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ವರ್ಷಕ್ಕೆ ₹65 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1964308120651649526
ಬೆಂಗಳೂರು: ಈಡಿಗ ಸಮುದಾಯ ಎಂಜನಿಯರಿಂಗ್ ಕಾಲೇಜಷ್ಟೇ ಅಲ್ಲ, ಮೆಡಿಕಲ್ ಕಾಲೇಜನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ’ ಉದ್ಘಾಟಿಸಿ ಮಾತನಾಡಿ, ಈಡಿಗ – ಬಿಲ್ಲವ ಸಮಾಜದ ಸಮುದಾಯ ಭವನ ನಿರ್ಮಾಣ, ಹಾಸ್ಟೆಲ್ ನಿರ್ಮಾಣಕ್ಕೆ ಸ್ಥಳ ಒದಗಿಸಿದವುದೂ ಸೇರಿದಂತೆ ನಮ್ಮ ಸರ್ಕಾರ ಅನುದಾನವನ್ನು ನೀಡಲಿದೆ. ಈಡಿಗರು, ಬಿಲ್ಲವರ ಅಭಿವೃದ್ಧಿ ನಿಗಮ ಈಗಾಗಲೇ ಘೋಷಣೆಯಾಗಿದೆ. ಕಾನೂನುನಾತ್ಮಕವಾಗಿ ಅವುಗಳನ್ನು ನೋಂದಣಿ ಮಾಡುವ ಕಾರ್ಯ ಆಗಬೇಕಾಗಿದೆ. ದೇವರಾಜ ಅರಸು ನಿಗಮದಲ್ಲಿ ಇದಕ್ಕಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅದರ ಬದಲಿಗೆ ನಿಗಮಗಳಲ್ಲಿಯೇ ಸ್ವತಂತ್ರವಾಗಿ ಇಡಲು ಕ್ರಮ ಕೈಗೊಳ್ಳಲಾಗುವುದು. ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಮಾಡಲಾಗುವುದು ಎಂದರು. ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳ ಉದ್ದೇಶವನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯ, ಜಾತಿಗೆ ಮೀಸಲಾಗದೇ, ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಸಮಾಜದಲ್ಲಿರುವ ಜಾತಿವ್ಯವಸ್ಥೆ, ಮೂಢನಂಬಿಕೆ, ಅಂಧಶ್ರದ್ಧೆಯ…
ಮಂಗಳೂರು: ಅಪ್ರಾಪ್ತ ಮಕ್ಕಳ ಕೈಗೆ ಸ್ಕೂಟರ್ ನೀಡುವ ಪೋಷಕರೇ ಎಚ್ಚರ, ಮಂಗಳೂರಿನಲ್ಲಿ ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ನೀಡಿದ ತಂದೆಗೆ ಕೋರ್ಟ್ ಬರೋಬ್ಬರಿ 27 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಮಂಗಳೂರಿನ ಬಜಪೆ ಪೇಟೆಯಲ್ಲಿ ವಾಹನ ತಪಾಸಣೆ ವೇಳೆ ಟ್ರಿಪಲ್ ರೈಡ್ ಮಾಡಿಕೊಂಡು ಬಂದ ಸ್ಕೂಟರ್ ಸವಾರ ಅಪ್ರಾಪ್ತ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಂದೆಗೆ 27,500 ರು. ದಂಡ ವಿಧಿಸಲಾಗಿದೆ. ಆ. 25ರಂದು ಬಜಪೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಟ್ರಿಪಲ್ ರೈಡ್‌ನಲ್ಲಿ ಆಗಮಿಸಿದ ಸ್ಕೂಟರ್‌ನ್ನು ನಿಲ್ಲಿಸಿ ದಾಖಲೆ ಪರಿಶೀಲಿಸಿದ್ದರು. ವಿಚಾರಣೆ ವೇಳೆ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರ್ ಚಲಾಯಿಸಲು ಪೋಷಕರು ವಾಹನ ನೀಡಿರುವುದು ದೃಢಪಟ್ಟಿತ್ತು. ಈ ಬಗ್ಗೆ ಬಜಪೆ ಪೊಲೀಸರು ದೋಷಾರೋಪಣ ಪಟ್ಟಿ ತಯಾರಿಸಿ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸ್ಕೂಟರ್ ಮಾಲೀಕನಿಗೆ 27,500 ರು.ದಂಡ ವಿಧಿಸಿ ಆದೇಶಿಸಿದೆ.
ಬಾಗಲಕೋಟೆ : ರಾಜ್ಯದಲ್ಲಿ ಘೋರ ಕೃತ್ಯವೊಂದು ನಡೆದಿದ್ದು, ಡೀಸೆಲ್ ಸುರಿದು ಹೆತ್ತ ಮಗನನ್ನೇ ಸಜೀವವಾಗಿ ತಂದೆ-ತಾಯಿ ಸುಟ್ಟು ಹಾಕಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿಯ ಬಿದರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುಶ್ಚಟಗಳ ದಾಸನಾಗಿ, ಸಾಲ ಮಾಡಿಕೊಂಡು, ಆಸ್ತಿಯಲ್ಲಿ ಪಾಲು ಕೇಳಿ, ಮನೆಯವರ ಮೇಲೆ ಹಲ್ಲೆಗೆ ಯತ್ನಿಸಿದ ಮಗನನ್ನು ತಂದೆ-ತಾಯಿ ಹಾಗೂ ಸಹೋದರ ಸೇರಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅನೀಲ ಕಾನಟ್ಟಿ (32) ಕೊಲೆಯಾದ ಯುವಕ. ಆತನ ಸಹೋದರ ಬಸವರಾಜ (35), ತಂದೆ ಪರಪ್ಪ (62), ತಾಯಿ ಶಾಂತಾ (55) ಬಂಧಿತರು. ಶುಕ್ರವಾರ ರಾತ್ರಿ ಅನೀಲ ಮನೆಯಲ್ಲಿ ಜಗಳ ಮಾಡಿ, ನಿಮ್ಮನ್ನೆಲ್ಲ ಸಾಯಿಸುತ್ತೇನೆ ಎಂದು ಮುಂದಾದಾಗ ಪೋಷಕರು ಹತ್ಯೆಗೈದಿದ್ದಾರೆ. ಕಣ್ಣಿಗೆ ಕಾರದ ಪುಡಿ ಎರಚಿ, ಹಗ್ಗದಿಂದ ಕುತ್ತಿಗೆಗೆ ಬಿಗಿದು, ಎರಡೂ ಕೈ ಕಟ್ಟಿ, ಹೊರಗೆಳೆದು ತಂದು, ಆತನ ಮೈಮೇಲೆ ಡೀಸೆಲ್ ಸುರಿದು, ಸುಟ್ಟು ಹಾಕಿದ್ದಾರೆ.
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರುಡೆ ಗಿರಕಿ ಬಿಜೆಪಿ ಕಾರ್ಯಕರ್ತ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯ ಎರಡು ಗುಂಪುಗಳ ನಡುವಣ ತಿಕ್ಕಾಟಕ್ಕೆ ಧರ್ಮಸ್ಥಳವನ್ನು ದುರುಪಯೋಗ ಮಾಡಿ ಕೊಂಡು ಬಲಿಪಶು ಮಾಡುತ್ತಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಸತ್ಯಾಂಶ ಒದಗಿಸಿರುವವರು ನಾವು. ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು ಎಂದು ಆರೋಪಿಸಿದ್ದಾರೆ. ಬುರುಡೆ ಗಿರಾಕಿ ಯಾರು? ಬಿಜೆಪಿ ಕಾರ್ಯಕರ್ತರಲ್ಲವೇ? ಧರ್ಮಸ್ಥಳಕ್ಕೆ ಅಪಮಾನ ಆಗಿದ್ದರೆ ಅದು ಬಿಜೆಪಿ ನಾಯಕರು ಹಾಗೂ ಅದರ ಸಂಘಟನೆಯವರಿಂದ ಮಾತ್ರ ಎಂದು ಹೇಳಿದ್ದಾರೆ.
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ ಮತ್ತೆ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು,ವಿಜಯನಗರ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡು ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಿ ಉಳಿಯುವ ಸಾಧ್ಯತೆ ಇದೆ ಎಂದು ಹವಾಮಾನ…
ನವದೆಹಲಿ : ಉಪರಾಷ್ಟ್ರಪತಿ ಚುನಾವಣೆಗೂ ಮುನ್ನ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಎಲ್ಲಾ ಸಂಸದರಿಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾರ್ಯಾಗಾರದಲ್ಲಿ, ಚುನಾವಣಾ ಪ್ರಕ್ರಿಯೆ, ಮತದಾನದ ವಿಧಾನಗಳು ಸೇರಿದಂತೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಿದ್ದರು. ಅವರ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಸಂಸದರ ಕೊನೆಯ ಸಾಲಿನಲ್ಲಿ ಪ್ರಧಾನಿ ಕುಳಿತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಸಂಸದ ರವಿ ಕಿಶನ್ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಳತೆಯಿಂದ ಈ ಹಿಂದೆ ಹಲವು ಬಾರಿ ಸಾಮಾನ್ಯ ಜನರ ಹೃದಯ ಗೆದ್ದಿದ್ದಾರೆ. ಶಿಷ್ಟಾಚಾರವನ್ನು ಮುರಿದು, ಪ್ರಧಾನಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ತಮ್ಮ ಬೆಂಬಲಿಗರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಅವರು ಮಕ್ಕಳ ಮೇಲೆ ಪ್ರೀತಿಯನ್ನು ಸುರಿಸುತ್ತಿರುವುದು ಕಂಡುಬರುತ್ತದೆ. ಈಗ NDA ಕಾರ್ಯಾಗಾರದಲ್ಲಿ ಕೊನೆಯ ಸಾಲಿನಲ್ಲಿ ಕುಳಿತಿರುವ ಪ್ರಧಾನಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರಳತೆಯನ್ನು ಸಾಮಾಜಿಕ…
ಬೆಂಗಳೂರು: ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾದಲ್ಲಿ ಸೋಮವಾರ (ಸೆಪ್ಟೆಂಬರ್ 8) ಆರೋಗ್ಯ ಮಾತೆಯ ರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲ ರಸ್ತೆಗಳಲ್ಲಿವಾಹನ ಸಂಚಾರ ನಿರ್ಬಂಧಿಸಲಾಗಿದೆ. ದಿನಾಂಕ: 08/09/2025 ರಂದು ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಗ್ಯ ಮಾತೆಯ ರಥೋತ್ಸವ ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ 01.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಸಂಚಾರ ನಿರ್ಬಂಧಿಸಿರುವ ರಸ್ತೆಗಳು: 1. ಜ್ಯೋತಿಕೆಫೆ ವೃತ್ತದಿಂದ ರಸಲ್ ಮಾರ್ಕೆಟ್ ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. 2. ಬ್ರಾಡ್‌ವೇ ರಸ್ತೆಯಲ್ಲಿ ರಸಲ್ ಮಾರ್ಕೆಟ್ ಕಡೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. 3. ಧರ್ಮರಾಜ ಕೋಯಿಲ್ ಸ್ಪೀಟ್ ಸ್ಟ್ರೀಟ್ – ಓ.ಪಿ.ಹೆಚ್.ರಸ್ತೆ ವರೆಗೆ ರಸಲ್ ಮಾರ್ಕೆಟ್ ಕಡೆಗೆ ಬರುವ ವಾಹನ ಸಂಚಾರವನ್ನು ತಾಜ್ ವೃತ್ತದಲ್ಲಿ ನಿರ್ಬಂಧಿಸಲಾಗಿರುತ್ತದೆ. 4. ಬಿ.ಆರ್ಿ.ವಿ ಜಂಕ್ಷನ್ ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಸೇರಿದಂತೆ…
ನವದೆಹಲಿ : ಭಾರತ ಸೇರಿದಂತೆ ಇಡೀ ಜಗತ್ತು ನಿನ್ನೆ ರಾತ್ರಿ ಪೂರ್ಣ ಚಂದ್ರಗ್ರಹಣ ಮತ್ತು ರಕ್ತಸಿಕ್ತ ಚಂದ್ರನನ್ನು ಕಂಡಿತು. ಭಾನುವಾರ ರಾತ್ರಿ, ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರದವರೆಗೆ, 2025 ರ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಲಾಯಿತು, ಇದು ರಾತ್ರಿ 9:57 ಕ್ಕೆ ನಿಖರವಾಗಿ ಪ್ರಾರಂಭವಾಗಿ 1:28 ಕ್ಕೆ ಕೊನೆಗೊಂಡಿತು. ಚಂದ್ರನಿಗೆ ಸುಮಾರು 3 ಗಂಟೆ 27 ನಿಮಿಷಗಳ ಕಾಲ ಗ್ರಹಣ ಬಿದ್ದಿತು ಮತ್ತು ಈ ಸಮಯದಲ್ಲಿ ಕಂಡುಬಂದ ಚಂದ್ರನ ಸುಂದರ ನೋಟಗಳು ಜೀವಿತಾವಧಿಯಲ್ಲಿ ಸ್ಮರಣೀಯವಾಗಿ ಉಳಿದಿವೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದು ಚಂದ್ರನ ಮೇಲ್ಮೈಯಲ್ಲಿ ತನ್ನ ನೆರಳನ್ನು ಹಾಕಿದಾಗ ಒಟ್ಟು ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರಗ್ರಹಣವು ಚಂದ್ರನನ್ನು ಕೆಂಪು ಬಣ್ಣದಲ್ಲಿ ಹೊಳೆಯುವಂತೆ ಮಾಡುತ್ತದೆ. ಇಂದು 82 ನಿಮಿಷಗಳ ಕಾಲ, ಪ್ರಪಂಚದಾದ್ಯಂತದ ವೀಕ್ಷಕರು ಚಂದ್ರನನ್ನು ನಾಟಕೀಯವಾಗಿ ಕೆಂಪು ಬಣ್ಣದಲ್ಲಿ ಹೊಳೆಯುವುದನ್ನು ನೋಡಿದರು. ತಾಮ್ರ ಬಣ್ಣದ ಚಂದ್ರ ಮತ್ತು ಸುತ್ತಮುತ್ತಲಿನ ನಕ್ಷತ್ರಗಳ ನಡುವಿನ ವ್ಯತ್ಯಾಸವು ಅದ್ಭುತವಾಗಿತ್ತು, ಇದು ಖಗೋಳ ಪ್ರಿಯರು…
ಬಾಗಲಕೋಟೆ : ರಾಜ್ಯದಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಕಂಠಪೂರ್ತಿ ಕುಡಿದು ಪತಿಯೊಬ್ಬ ತನ್ನ ಪತ್ನಿಯ ತೆಲಬೋಳಿಸಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಸಪ್ಪ ಎಂಬಾತ ತನ್ನ ಸ್ನೇಹಿತ ಸದಾಶಿವ ನ್ಯಾಮಗೌಡನ ಜೊತೆಗೆ ಸೇರಿಕೊಂಡು ಪತ್ನಿ ಶ್ರೀದೇವಿಯ ಅರ್ಧತಲೆ ಬೋಳಿಸಿದ್ದಾನೆ. ಬಸಪ್ಪ ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಪತಿ ಕಾಟ ತಾಳಲಾಗದೇ ಪತ್ನಿ ಶ್ರೀದೇವಿ ತವರು ಮನೆಗೆ ಹೋಗಿದ್ದರು. 2 ತಿಂಗಳ ಹಿಂದಷ್ಟೇ ಗಂಡನ ಮನೆಗೆ ಶ್ರೀದೇವಿ ವಾಪಸ್ ಆಗಿದ್ದಳು. ನಿನ್ನೆ ಕೂಡ ಮದ್ಯ ಸೇವಿಸಿ ಬಂದಿದ್ದಕ್ಕೆ ಬಸಪ್ಪ-ಶ್ರೀದೇವಿ ನಡುವೆ ಜಗಳವಾಗಿದ್ದು, ಈ ವೇಳೆ ಬಸಪ್ಪ ತನ್ನ ಸ್ನೇಹಿತ ಜೊತೆಗೆ ಸೇರಿ ಪತ್ನಿ ತಲೆಬೋಳಿಸಿದ್ದಾನೆ.













