Author: kannadanewsnow57

ಬೆಂಗಳೂರು : ರಾಜ್ಯ ಸರ್ಕಾರ ಕಾರ್ಮಿಕರ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, 2023-24 ಮತ್ತು 2024-25ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಮಕ್ಕಳ ಅರ್ಜಿಗಳನ್ನು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (ಎಸ್ಎಸ್ಪಿ) ಮೂಲಕ ಸಲ್ಲಿಸಲು ಡಿಸೆಂಬರ್ 31ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಮುಖ ಸೂಚೆನಗಳು ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು – https://kbocwwb. karnataka.gov.in (Registration Number) 2 (Reference Number) ನಮೂದಿಸಿ ಕಡ್ಡಾಯವಾಗಿ ದಿನಾಂಕ: 31-12-2024 ರೊಳಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಲು ಸೂಚಿಸಿದೆ. ಅಲ್ಲದೇ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿ ಎನ್.ಪಿ.ಸಿ.ಐ ಮ್ಯಾಪಿಂಗ್ (NPCI Mapping) ಮಾಡಿಸುವುದು ಕಡ್ಡಾಯವಾಗಿರುತ್ತದೆ. ಈ ಹಿಂದೆ ಪ್ರೀ ಮೆಟ್ರಿಕ್ (1 ರಿಂದ 10ನೇ ತರಗತಿ) ತರಗತಿಗಳಲ್ಲಿ ಶೈಕ್ಷಣಿಕ ಧನಸಹಾಯಕ್ಕಾಗಿ ಎಸ್.ಎಸ್.ಪಿ ತಂತ್ರಾಂಶದ ಮೂಲಕ ಕರ್ನಾಟಕ ಸರ್ಕಾರದ ಯಾವುದಾದರೂ ಇಲಾಖೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಗಾರ್ಮೆಂಟ್ ಬಸ್ ಹರಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಉತ್ತರ ತಾಳ ಹೆಗ್ಗಡದೇವನಪುರ ಬಳಿ ಗೋಲ್ಡನ್ ಸೀಮ್ಸ್ ಇಂಡಸ್ಟ್ರೀಸ್ ಪ್ರೈ.ಲಿ. ಕಂಪನಿಯ ಬಸ್ ಹರಿದ ಪರಿಣಾಮ ಕಂಪಿನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ನಳಿನಾ (28) ಎಂದು ಗುರುತಿಸಲಾಗಿದೆ. ನಳಿನಾ ಕಳೆದ 2 ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಳಿನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೇಬಾಗಿ ಗ್ರಾಮದಲ್ಲಿ ಕೇವಲ 5 ರೂ. ಕುರ್ ಕುರೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, 10 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಹೊನ್ನೇಬಾಗಿ ಗ್ರಾಮದಲ್ಲಿ ಕುರ್ ಕುರೆ ಪ್ಯಾಕೇಟ್ ವಿಚಾರಕ್ಕೆ ಅತೀಫ್ ಉಲ್ಲಾ ಹಾಗೂ ಸದ್ದಾಂ ಕುಟುಂಬದ ನಡುವೆ ಗಲಾಟೆಯಾಗಿದ್ದು, ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ. ಅತೀಫ್ ಉಲ್ಲಾ ಹೊನ್ನೇಬಾಗಿ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ. ಸದ್ದಾಂ ಕುಟುಂಬದ ಮಕ್ಕಳು ಅಂಗಡಿಯಲ್ಲಿ ಕುರ್ ಕುರೆ ಖರೀದಿ ಮಾಡಿದ್ದಾರೆ. ಆದರೆ ಕುರ್ ಕುರೆ ಅವಧಿ ಮುಗಿದಿದೆ. ಬೇರೆಯದನ್ನು ಕೊಡು ಎಂದು ಕೇಳಿದಕ್ಕೆ ಗಲಾಟೆ ಶುರುವಾಗಿದ್ದು, ಘಟನೆ ಸಂಬಂಧ ಸದ್ದಾಂ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಳಿಕ ಅತೀಫ್ ಕುಟುಂಬಸ್ಥರು ಸದ್ದಾಂ ಕುಟುಂಬದರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಹಲ್ಲೆ ಮಾಡುವ ಸಂದರ್ಭದಲ್ಲಿ ಬಿಡಿಸಲು ಬಂದವರ ಮೇಲೆಯೂ ಹಲ್ಲೆ ನಡೆಸಿದ್ದು, ಗಾಯಗೊಂಡವರನ್ನು ಚನ್ನಗಿರಿ…

Read More

ರವಿ ಗ್ರಹ : ಒಂದು ರಾಶಿಯಲ್ಲಿ ಒಂದು ತಿಂಗಳು ಮಾತ್ರ ಇರುತ್ತಾನೆ.. ಚಂದ್ರ : 2¼ ದಿನಗಳು.. ಕುಜ : 1¼ ತಿಂಗಳು.. ಬುಧ : 1 ತಿಂಗಳು , ಗುರು : 12 ತಿಂಗಳು, ಅಂದರೆ ಒಂದು ವರ್ಷ ಒಂದು ಮನೆಯಲ್ಲಿ ಇರುತ್ತಾನೆ. ಶುಕ್ರ : 1 ತಿಂಗಳು , ಶನೇಶ್ವರ : 30 ತಿಂಗಳು, ಅಂದರೆ 2 ½ ವರ್ಷ.. ರಾಹು : 18 ತಿಂಗಳು ಅಂದರೆ 1½ ವರ್ಷ.. ಕೇತು : 18 ತಿಂಗಳು, ಅಂದರೆ 1½ ವರ್ಷ … ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ…

Read More

ಬೆಂಗಳೂರು : ಶ್ವೇತಗೌಡ ಚಿನ್ನದ ವ್ಯಾಪಾರಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣ ಸಂಬಂಧ ಮಾಜಿ ಸಚಿವ ವರ್ತೂರು ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ. ಪುಲಕೇಶಿ ಉಪನಗರದ ಎಸಿಪಿ ಕಚೇರಿಗೆ ವರ್ತೂರು ಪ್ರಕಾಶ್ ಆಗಮಿಸಿದ್ದು, ಎಸಿಪಿ ಗಿರೀಶ್ ವರ್ತೂರು ಪ್ರಕಾಶ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಚಿನ್ನ ಖರೀದಿಸಿ 2 ಕೋಟಿ ರೂ.ಗೆ ಹೆಚ್ಚು ವಂಚನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ವರ್ತೂರು ಪ್ರಕಾಶ್ ಸೇರಿದಂತೆ ಹಲವು ಗಣ್ಯರ ಹೆಸರು ಬಳಸಿಕೊಂಡು ಚಿನ್ನ ಖರೀದಿಸಿ ಕೋಟ್ಯಾಂತರ ರೂ. ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪುಲಕೇಶಿ ನಗರದ ಉಪ ವಿಭಾಗದ ಪೊಲೀಸರು ಬಂಧಿಸಿದ್ದು, ಇದೀಗ ವರ್ತೂರ್ ಪ್ರಕಾಶ್ ಅವರ ವಿಚಾರಣೆ ನಡೆಸಲಾಗುತ್ತಿದೆ.

Read More

ಹುಬ್ಬಳ್ಳಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಪ್ರಕರಣವನ್ನು ಸಿಐಡಿ ತನಿಖೆ ನೀಡಿ ಆದೇಶ ಹೊರಡಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಈಗಾಗಲೇ ನಾನು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ ನೀಡಿದ್ದೇನೆ. ತನಿಖೆಗೆ ಆದೇಶಿಸಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡಲ್ಲ. ಕೇಸ್ ತನಿಖೆ ನಡೆಯುತ್ತಿದ್ದು, ಸಭಾಪತಿ ತಮ್ಮ ಕೆಲಸ ಮಾಡಿದ್ದಾರೆ. ಪೊಲೀಸರು ತನಿಖೆ ಮಾಡಬೇಕಿದೆ. ಸಿ.ಟಿ.ರವಿ ತಾನು ಆ ಪದ ಬಳಸಿಲ್ಲ ಎನ್ನುತ್ತಿದ್ದಾರೆ ಎಂದರು. ಈ ಪ್ರಕರಣದ ಬಗ್ಗೆ ಪೊಲಿಸರು ತನಿಖೆ ಮಾಡಿದ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ತನಿಖೆ ನಡೆಯುವಾಗ ಹೆಚ್ಚು ಮಾತನಾಡೋದು ಸರಿಯಲ್ಲ. ತನಿಖೆಯಾಗಲಿ ಎಂದು ಹೇಳಿದ್ದಾರೆ.

Read More

ಹೈದರಾಬಾದ್ : ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರಕ್ಕೆ ಸಂಕಷ್ಟ ತಪ್ಪುವಂತೆ ಕಾಣುತ್ತಿಲ್ಲ. ಇದೀಗ ಚಿತ್ರದಲ್ಲಿ ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದುಕಾಂಗ್ರೆಸ್ ಎಂಎಲ್ ಸಿ ತೀನ್ಮಾರ್ ಮಲ್ಲಣ್ಣ ಪುಷ್ಪ 2 ಚಿತ್ರದ ಬಗ್ಗೆ ದೂರು ನೀಡಿದ್ದಾರೆ. ತೇನ್ಮಾರ್ ಮಲ್ಲಣ್ಣ ಅವರು ಮೇಡ್ಚಲ್ ಮಲ್ಕಾಜ್ ಗಿರಿ ಜಿಲ್ಲೆಯ ಮೇಡಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪುಷ್ಪ 2 ಚಿತ್ರದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ತಿನ್ಮಾರ್ ಮಲ್ಲಣ್ಣ ಮಾತನಾಡಿ. ನಾನು ಥಿಯೇಟರ್ ಗೆ ಹೋಗಿ ಪುಷ್ಪ 2 ಸಿನಿಮಾ ನೋಡಿದೆ. ಸಿನಿಮಾದ ಕೆಲವು ದೃಶ್ಯಗಳು ತುಂಬಾ ಕಳಪೆಯಾಗಿವೆ. ಸ್ಮಗ್ಲರ್ ಪೊಲೀಸ್ ಅಧಿಕಾರಿಯ ಕಾರಿಗೆ ಡಿಕ್ಕಿ ಹೊಡೆದ ನಂತರ ಅಲ್ಲು ಅರ್ಜುನ್ ಸ್ವಿಮ್ಮಿಂಗ್ ಪೂಲ್‌ಗೆ ಎಸೆಯುವ ದೃಶ್ಯಗಳಿವೆ ಮತ್ತು ಪೊಲೀಸ್ ಅಧಿಕಾರಿ ಈಜುಕೊಳಕ್ಕೆ ಬಿದ್ದಿದ್ದಾರೆ. ಇಂತಹ ದೃಶ್ಯಗಳು ಪೊಲೀಸರಿಗೆ ತುಂಬಾ ಅವಮಾನಕರ. ನಿರ್ದೇಶಕ ಸುಕುಮಾರ್, ನಿರ್ಮಾಪಕರು ಹಾಗೂ ನಾಯಕ ಅಲ್ಲು ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನಾತ್ಮಕವಾಗಿ, ಆ ದೃಶ್ಯವನ್ನು ಕತ್ತರಿಸಬೇಕು…

Read More

ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಜನರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ದುಬಾರಿ ವೆಚ್ಚದ 17 ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ‘ಕಾರ್ಪಸ್‌ ಫಂಡ್’ ಸ್ಥಾಪಿಸಿ ಭರಿಸುವ ಯೋಜನೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಹೌದು, ರಾಜ್ಯ ಸರ್ಕಾರವು ಈ ಕುರಿತು ಮಹತ್ವದ ಆದೇಶ ಹೊರಡಿಸಿದ್ದು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಅಡಿಯಲ್ಲಿ ಪ್ರಸ್ತುತ ಲಭ್ಯ ಇರುವ 47 ಕೋಟಿ ರೂ. ಮೊತ್ತದಲ್ಲಿ ಕಾರ್ಪಸ್‌ ಫಂಡ್ ಸೃಜಿಸಿ ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಒಟ್ಟು 33 ಕಾಯಿಲೆಗಳಲ್ಲಿ 16 ಕಾಯಿಲೆಗಳಿಗೆ ರಾಜ್ಯ ಸರ್ಕಾರದ ಆಯುಷ್ಮಾನ್‌ ಭಾರತ್‌– ಆರೋಗ್ಯ ಕರ್ನಾಟಕ, ಜೀವ ಸಾರ್ಥಕತೆ ಮುಂತಾದ ಯೋಜನೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಉಳಿದ 17 ಕಾಯಿಲೆಗಳ ಚಿಕಿತ್ಸಾ ವಿಧಾನಗಳ ವೆಚ್ಚವನ್ನು ಬಡ್ಡಿ ಮೊತ್ತದಲ್ಲಿ ಭರಿಸಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

Read More

ಠಾಣೆ : ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಆರೋಗ್ಯ ಹಠಾತ್ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಮೂತ್ರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಹಠಾತ್ ಆರೋಗ್ಯ ಹದಗೆಟ್ಟ ಕಾರಣ ಅವರನ್ನು ಠಾಣೆಯ ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಬ್ಳಿಗೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆ ಇದೆ ವೈದ್ಯರು ತಿಳಿಸಿದ್ದಾರೆ. ವಿನೋದ್ ಕಾಂಬ್ಳಿ ಅವರು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೂತ್ರ ಸೋಂಕಿನಿಂದ ಬಳಲುತ್ತಿರುವುದಾಗಿ ಮತ್ತು ಇದರಿಂದಾಗಿ ಅವರು ಮೂರ್ಛೆ ಹೋಗಿದ್ದೆ ಎಂದು ಹೇಳಿದ್ದಾರೆ. ಆಗಾಗ್ಗೆ ಮೂತ್ರ ವಿಸರ್ಜನೆಯು ಈ ರೋಗಗಳ ಸಂಕೇತವಾಗಿದೆ ಮೂತ್ರನಾಳದ ಸೋಂಕುಗಳು (UTIs): ಮೂತ್ರಕೋಶ ಅಥವಾ ಮೂತ್ರನಾಳದ ಮೇಲೆ ಪರಿಣಾಮ ಬೀರುವ ಬ್ಯಾಕ್ಟೀರಿಯಾದ ಸೋಂಕುಗಳು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು, ಜೊತೆಗೆ ನೋವು, ಸುಡುವಿಕೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಮಧುಮೇಹ: ಆಗಾಗ್ಗೆ ಮೂತ್ರ ವಿಸರ್ಜನೆಯು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್‌ನಲ್ಲಿ ಸಂಭವಿಸಬಹುದು ಏಕೆಂದರೆ ಅಧಿಕ…

Read More

ಬೆಂಗಳೂರು: ಅಮೆರಿಕದ ನ್ಯೂಯಾರರ್ಕ್‌ನ ಎನ್‌ಸಿಐ ಆಸ್ಪತ್ರೆಯಲ್ಲಿ ನಟ ಶಿವರಾಜ್ ಕುಮಾರ್ ಗೆ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ತಮ್ಮ ನೆಚ್ಚಿನ ನಟ ಬೇಗ ಗುಣಮುಖವಾಗಲೇಂದು ಅಭಿಮಾನಿಗಳು ವಿಶೇಷ ಪೂಜೆ ಮಾಡಿದ್ದಾರೆ. ಡಿಸೆಂಬರ್ 24ರ ಇಂದು ನಟ ಶಿವರಾಜ್ ಕುಮಾರ್ ಅವರಿಗೆ ಆಪರೇಷನ್ ನಡೆಯಲಿದೆ. ಆ ಬಳಿಕ ಚಿಕಿತ್ಸೆ ಪಡೆದು ಜನವರಿ.26ಕ್ಕೆ ಬೆಂಗಳೂರಿಗೆ ಅವರು ವಾಪಾಸ್ಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಆರೋಗ್ಯಕ್ಕಾಗಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿದ್ದಾರೆ. ಡಾ ಮುರುಗೇಶನ್ ಮನೋಹರ್ ವೈಧ್ಯರಿಂದ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಮೂತ್ರ ಕೋಶದ ಕೆಳಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಇನ್ನೂ ಮೊದಲ ಹಂತದಲ್ಲೇ ಇದೆ. ಹೀಗಾಗಿ ಶಿವರಾಜ್ ಕುಮಾರ್ ಆಪರೇಷನ್ ಮಾಡಿಸಲಿದ್ದಾರೆ. ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಗಳು ದೇವಸ್ಥಾನಗಳಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಅಮೇರಿಕಾಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಭಾವುಕರಾಗಿಯೇ ಮಾತನಾಡಿದಂತ ನಟ ಶಿವರಾಜ್ ಕುಮಾರ್, ನಿನ್ನೆಯಿಂದಲೇ ನಾನು ಅಮೇರಿಕಾಕಕ್ಕೆ ತೆರಳುತ್ತಿರುವಂತ ವಿಷಯ ತಿಳಿದು ಮನೆಗೆ ಸಂಬಂಧಿಕರು, ಕುಟುಂಬಸ್ಥರು,…

Read More