Subscribe to Updates
Get the latest creative news from FooBar about art, design and business.
Author: kannadanewsnow57
ಛತ್ತೀಸ್ಗಢ ರಾಜ್ಯದ ರಾಜೇಶ್ವರಿ ಎಂಬ ಬಾಲಕಿ ‘ಎಪಿಡರ್ಮೋಲಿಟಿಕ್ ಇಚ್ಥಿಯೋಸಿಸ್’ ಎಂಬ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಈ ಕಾಯಿಲೆಯಿಂದಾಗಿ, ಚರ್ಮದ ಪುನರುತ್ಪಾದನಾ ಪ್ರಕ್ರಿಯೆಯು ಹಾನಿಗೊಳಗಾಗುತ್ತದೆ ಮತ್ತು ಆಕೆಯ ದೇಹವು ಕ್ರಮೇಣ ಕಲ್ಲು ಮತ್ತು ಮರದ ತೊಗಟೆಯಾಗಿ ಬದಲಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ ಎಂದು ವೈದ್ಯರು ಹೇಳುತ್ತಾರೆ, ಇದು ಬಾಲಕಿಯ ಇಡೀ ದೇಹವನ್ನು ಚಿಪ್ಪುಗಳಿಂದ ತುಂಬಿಸಿ ತೀವ್ರ ನೋವನ್ನುಂಟುಮಾಡಿದೆ. ರೋಗಲಕ್ಷಣಗಳನ್ನು ಮಾತ್ರ ನಿಯಂತ್ರಿಸಬಹುದು ಎಂದು ಅವರು ಹೇಳುತ್ತಾರೆ. ಈ ಅಪರೂಪದ ಕಾಯಿಲೆಯಿಂದ ಬಾಲಕಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಕುಳಿತಾಗ ಅಥವಾ ನಿಂತಾಗಲೂ ಅವಳು ಅಸಹನೀಯ ನೋವಿನಿಂದ ಬಳಲುತ್ತಿದ್ದಾಳೆ. https://twitter.com/ChotaNewsApp/status/2002426885763215671?ref_src=twsrc%5Etfw%7Ctwcamp%5Etweetembed%7Ctwterm%5E2002426885763215671%7Ctwgr%5E2d5447c85dd4ff889bdfae7bc10dcc78f4a183ed%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Flaunch%3Dtruemode%3Dpwa
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 11ನೇ ತರಗತಿಯ ವಿದ್ಯಾರ್ಥಿನಿಯ ಸಾವಿಗೆ ಅತಿಯಾದ ಫಾಸ್ಟ್ ಫುಡ್ ಸೇವನೆಯೇ ಕಾರಣ ಎಂದು ಹೇಳಲಾಗಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ವೈದ್ಯರ ಪ್ರಕಾರ, ಜಂಕ್ ಫುಡ್ ದೀರ್ಘಕಾಲದವರೆಗೆ ಸೇವಿಸುವುದರಿಂದ ಆಕೆಯ ಕರುಳು ತೀವ್ರವಾಗಿ ಹಾನಿಗೊಳಗಾಗಿದೆ. ವರದಿಗಳ ಪ್ರಕಾರ, ವಿದ್ಯಾರ್ಥಿನಿ ಅಮ್ರೋಹಾದ ನಗರ್ ಕೊಟ್ವಾಲಿ ಪ್ರದೇಶದ ಅಫ್ಘಾನ್ ಮೊಹಲ್ಲಾ ನಿವಾಸಿಯಾಗಿದ್ದಳು. ಆಕೆಗೆ ಚೌಮಿನ್, ಮ್ಯಾಗಿ, ಪಿಜ್ಜಾ ಮತ್ತು ಬರ್ಗರ್’ಗಳಂತಹ ಫಾಸ್ಟ್ ಫುಡ್ ತಿನ್ನುವ ಅಭ್ಯಾಸವಿತ್ತು ಎಂದು ಕುಟುಂಬ ಸದಸ್ಯರು ಹೇಳುತ್ತಾರೆ. ಸ್ವಲ್ಪ ಸಮಯದಿಂದ ಆಕೆಯ ಆರೋಗ್ಯ ಹದಗೆಡುತ್ತಿತ್ತು, ನಂತರ ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ಆಕೆಯ ಸ್ಥಿತಿ ಗಂಭೀರವಾದಾಗ ದೆಹಲಿಯ ಏಮ್ಸ್’ಗೆ ಉಲ್ಲೇಖಿಸಲಾಯಿತು. ವೈದ್ಯರ ಪ್ರಕಾರ, ಫಾಸ್ಟ್ ಫುಡ್’ನ ಅತಿಯಾದ ಸೇವನೆಯು ವಿದ್ಯಾರ್ಥಿಯಲ್ಲಿ ಗಂಭೀರ ಕರುಳಿನ ಸಮಸ್ಯೆಯನ್ನ ಉಂಟು ಮಾಡಿತು. ಕರುಳನ್ನ ಸ್ವಚ್ಛಗೊಳಿಸಲು ಶಸ್ತ್ರಚಿಕಿತ್ಸೆಯನ್ನ ಸಹ ನಡೆಸಲಾಯಿತು, ಆದ್ರೆ, ವಿದ್ಯಾರ್ಥಿನಿಯ ಜೀವವನ್ನ ಉಳಿಸಲಾಗಲಿಲ್ಲ. ಚಿಕಿತ್ಸೆಯ…
ಶೀತ ತಿಂಗಳುಗಳಲ್ಲಿ, ಅನೇಕ ಜನರು ಮಲಗಲು ಹೋಗುವಾಗಲೂ ಬೆಚ್ಚಗಿರಲು ಸ್ವೆಟರ್ ಅನ್ನು ಹಾಕುತ್ತಾರೆ. ಆದರೆ ಮಲಗುವಾಗ ಸ್ವೆಟರ್ ಧರಿಸುವುದು ನಿಜವಾಗಿಯೂ ಸುರಕ್ಷಿತವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಬೆಚ್ಚಗಿನ ಬಟ್ಟೆಗಳಲ್ಲಿ ಮಲಗುವುದು ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ, ಇದು ಚಡಪಡಿಕೆ, ಚರ್ಮದ ಕಿರಿಕಿರಿ, ತುರಿಕೆ, ರಕ್ತಪರಿಚಲನೆಯ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಬೆಚ್ಚಗಿನ ಬಟ್ಟೆಗಳು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಹಾಸಿಗೆಗೆ ಸ್ವೆಟರ್ ಧರಿಸುವುದು ನಿಮ್ಮ ದೇಹದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದು ಮೊದಲಿಗೆ ಸ್ನೇಹಶೀಲವೆಂದು ಅನಿಸಬಹುದಾದರೂ, ಹೆಚ್ಚುವರಿ ಉಷ್ಣತೆಯು ನಿಮ್ಮ ದೇಹದ ನೈಸರ್ಗಿಕ ತಂಪಾಗಿಸುವ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ. ನಿದ್ರೆಯ ಸಮಯದಲ್ಲಿ, ನಿಮ್ಮ ದೇಹದ ತಾಪಮಾನವು ನೈಸರ್ಗಿಕವಾಗಿ ಕಡಿಮೆಯಾಗುತ್ತದೆ, ಇದು ನಿಮಗೆ ಹೆಚ್ಚು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಅತಿಯಾದ ತಾಪವು ಈ ಪ್ರಕ್ರಿಯೆಯನ್ನು ಅಡ್ಡಿಪಡಿಸಬಹುದು, ಇದು ಅಸ್ವಸ್ಥತೆ ಮತ್ತು ಪ್ರಕ್ಷುಬ್ಧ ರಾತ್ರಿಗಳಿಗೆ ಕಾರಣವಾಗುತ್ತದೆ. ನಿದ್ರೆಯ ಅಡಚಣೆಯ ಅಪಾಯಗಳು ಸೂಕ್ತ…
ಕೊಬ್ಬಿನ ಗಡ್ಡೆಗಳು ಎದೆ, ಕಂಕುಳು, ಬೆನ್ನು, ತೊಡೆಗಳು, ಕೈಗಳು ಮತ್ತು ಕುತ್ತಿಗೆ ಸೇರಿದಂತೆ ದೇಹದ ಮೇಲೆ ಸಣ್ಣ ಉಂಡೆಗಳಾಗಿ ಕಾಣಿಸಿಕೊಳ್ಳುತ್ತವೆ. ಈ ಕೊಬ್ಬಿನ ಗಡ್ಡೆಗಳು ಸ್ಪರ್ಶಿಸಿದಾಗ ನೋವು ಉಂಟು ಮಾಡುವುದಿಲ್ಲ. ಈ ಕೊಬ್ಬಿನ ಗಡ್ಡೆ ಯಾವುದೇ ಹಾನಿಯನ್ನು ಉಂಟುಮಾಡದಿದ್ದರೂ, ನಾವು ಅವುಗಳಿಗೆ ಚಿಕಿತ್ಸೆ ಪಡೆಯುವುದು ಸೂಕ್ತ. ಕೊಬ್ಬಿನ ಗಡ್ಡೆಗಳನ್ನು ಕರಗಿಸಲು ಅತ್ಯುತ್ತಮ ಮನೆಮದ್ದು.! 1) ಕಪ್ಪು ಜೀರಿಗೆ – 1 ಟೀಸ್ಪೂನ್ 2) ಅರಿಶಿನ ಪುಡಿ – 5 ಗ್ರಾಂ ನೀರು – 1 ಲೋಟ ಮಾಡುವ ವಿಧಾನ :- ಒಂದು ಲೋಟದಲ್ಲಿ ನೀರನ್ನು ಸುರಿಯಿರಿ ಮತ್ತು ಅದಕ್ಕೆ ಒಂದು ಟೀಸ್ಪೂನ್ ಕಪ್ಪು ಜೀರಿಗೆಯನ್ನ ಸೇರಿಸಿ. ನಂತರ, ಐದು ಗ್ರಾಂ ಅರಿಶಿನ ಪುಡಿಯನ್ನ ಸೇರಿಸಿ ಮತ್ತು ರಾತ್ರಿಯಿಡೀ ನೆನೆಸಿಡಿ. ಮರುದಿನ, ಈ ಕಪ್ಪು ಜೀರಿಗೆ ನೀರನ್ನ ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಒಲೆಯ ಮೇಲೆ ಕಡಿಮೆ ಶಾಖದಲ್ಲಿ ಎರಡು ನಿಮಿಷಗಳ ಕಾಲ ಕುದಿಸಿ. ನಂತರ, ನೀವು ಈ ಪಾನೀಯವನ್ನು ಸೋಸಿ ಕುಡಿದರೆ, ಕೊಬ್ಬಿನ…
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮವು 2025-26 ನೇ ಸಾಲಿನ ಉದ್ಯೋಗಿನಿ, ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ಅರ್ಹ ಮಹಿಳೆಯರು ಸೇವಾ ಸಿಂಧು ಪೋರ್ಟಲ್ನಲ್ಲಿ ಡಿಸೆಂಬರ್ 15 ರೊಳಗಾಗಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗಿನಿ ಯೋಜನೆ:- 55 ವರ್ಷದ ಒಳಗಿನ ಮತ್ತು ವಾರ್ಷಿಕ ಆದಾಯ ರೂ 1,50,000 ದ ಒಳಗಿರುವ ನಿರುದ್ಯೋಗಿ ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆ ಕೈಕೊಳ್ಳಲು ಬ್ಯಾಂಕ್ ಗಳಿಂದ ಗರಿಷ್ಟ ರೂ 3,00,000 ದವರೆಗೆ ಸಾಲ ಮತ್ತು ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಬ್ಯಾಂಕ್ ಸಾಲದ ಶೇ.50 (ಗರಿಷ್ಠ ರೂ 1,50,000) ಸಹಾಯಧನ ಮತ್ತು ಎಸ್ ಸಿ ಎಸ್ ಟಿ ಹೊರತುಪಡಿಸಿ ಉಳಿದ ಎಲ್ಲಾ ಸಮುದಾಯದವರಿಗೂ ಶೇ 30 (ಗರಿಷ್ಟ…
ಬೆಂಗಳೂರು : ಪಿ.ಎಂ. ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್-ಸೆಟ್ಗಾಗಿ ಅರ್ಜಿ ಸಲ್ಲಿಸಿರುವ ರೈತರ ಗಮನಕ್ಕೆತಾಂತ್ರಿಕ ಕಾರ್ಯಸಾಧ್ಯತೆ ಹೊಂದಿರುವ ಅರ್ಜಿಗಳ ರೈತರುಗಳಿಗೆ ಈಗಾಗಲೇ ಮೊಬೈಲ್ ಸಂದೇಶಗಳನ್ನು ರವಾನಿಸಲಾಗಿದೆ/ರವಾನಿಸಲಾಗುತ್ತಿದೆ. ಈ ಸಂಬಂಧ ರೈತರು ತಮ್ಮ ಪಾಲಿನ ವಂತಿಗೆಯನ್ನು ದಿನಾಂಕ: 30.12.2025 ರೊಳಗೆ ಪಾವತಿಸಲು ಅಂತಿಮ ಗಡುವು ನಿಗಧಿಪಡಿಸಲಾಗಿದೆ. ಸದರಿ ಗಡುವಿನ ಒಳಗಾಗಿ ಪಾವತಿಸಲು ವಿಫಲವಾದಲ್ಲಿ, ಅಂತಹ ಅರ್ಜಿಗಳನ್ನು ರದ್ದುಪಡಿಸಲಾಗುವುದು. ಆನ್ಲೈನ್ ಮುಖಾಂತರ ವಂತಿಗೆಯನ್ನು ಪಾವತಿಸಲು www.souramitra.com ดู “PAY FARMER SHARE”ನ್ನು ಕ್ಲಿಕ್ ಮಾಡಿ ತಮ್ಮ ಅರ್ಜಿ ಸಂಖ್ಯೆ / ಮೊಬೈಲ್ ಸಂಖ್ಯೆ ನಮೂದಿಸಿ ಪಾವತಿಸಬಹುದಾಗಿರುತ್ತದೆ. ಹಣಪಾವತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು KREDL ನ ಸಹಾಯವಾಣಿ : 080-22202100 & 8095132100 ಮುಖಾಂತರ ಪಡೆದುಕೊಳ್ಳಲು ಸೂಚಿಸಲಾಗಿದೆ.
ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲಿ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಸ್ತಿ ಮಾಲೀಕರಿಗೆ ಇ-ಖಾತೆ ಪಡೆಯುವುದನ್ನು ಸರ್ಕಾರ ಸರಳೀಕರಿಸಿದ್ದು, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಮುಖಾಂತರ ಈ ಕೆಳಕಂಡ ಅಗತ್ಯ ದಾಖಲಾತಿಗಳಾದ ಮಾಲೀಕರ ಭಾವಚಿತ್ರ, ಆಸ್ತಿಯ ಕಟ್ಟಡ/ನಿವೇಶನದ ಜಿ.ಪಿ.ಎಸ್. ಛಾಯಾಚಿತ್ರ, ಪ್ರಸ್ತುತ ಸಾಲಿನವರೆಗೆ ಪಾವತಿಸಿರುವ ಆಸ್ತಿ, ನೀರಿನ, ಯು.ಜಿ.ಡಿ, ಘನತ್ಯಾಜ್ಯ ಹಾಗೂ ಇತರೆ ಚಲನ್ ಪ್ರತಿಗಳು, ವಿದ್ಯುತ್ ಆರ್.ಆರ್.ಸಂಖ್ಯೆ, ಸ್ವತ್ತಿನ ನೋಂದಾಯಿತ ದಾಖಲಾತಿಗಳು ಇ.ಸಿ, ನಮೂನೆ-15 ಮತ್ತು 16, ಮಾಲೀಕರ ಆಧಾರ್ ಕಾರ್ಡ್, ಪಾನ್ಕಾಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಮಾಲೀಕರ ದೂರವಾಣಿ ಸಂಖ್ಯೆ, ಆಸ್ತಿಯ ಭೂಪರಿವರ್ತನಾ ಆದೇಶ, ಅನುಮೋದಿತ ಲೇಔಟ್ ನಕ್ಷೆ ಪ್ರತಿ, ಕಟ್ಟಡ ಪರವಾನಗಿ ಪ್ರತಿ ಹಾಗೂ ಸ್ವತ್ತಿಗೆ ಸಂಬAದಿಸಿದ ಇತರ ಪೂರಕ ದಾಖಲಾತಿಗಳನ್ನು ಆನ್ಲೈನ್ನಲ್ಲಿ ಹಾಜರುಪಡಿಸಿ ಸದರಿ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಆನ್ಲೈನ್ನಲ್ಲಿ ಇ-ಖಾತೆ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ www.eaasthi.karnataka.gov.in ಸಹಾಯವಾಣಿ ಸಂಖ್ಯೆ:7259585959…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆ (OPS) ಮರು ಜಾರಿ ಸಂಬಂಧ ಅಂತಿಮ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರದ ಅಧ್ಯಯನ ಸಮಿತಿ ಅಧ್ಯಕ್ಷೆ ಹಾಗೂ ಅಭಿವೃದ್ಧಿ ಆಯುಕ್ತ ಉಮಾ ಮಹದೇವನ್ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗದ ಜತೆಗೆ ವಿಧಾನಸೌಧದಲ್ಲಿ ಸೋಮವಾರ ಅವರು ಚರ್ಚೆ ನಡೆಸಿದರು. ದಿನಾಂಕ: 22-12-2025ರ ಸರ್ಕಾರದ ಎನ್ಪಿಎಸ್ ಅಧ್ಯಯನ ಸಮಿತಿ ಸಭೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಈ ಮುಂದಿನ ಮಾಹಿತಿಗಳನ್ನು ಎನ್.ಪಿ.ಎಸ್. ರದ್ದುಗೊಳಿಸಿ ಒ.ಪಿ.ಎಸ್. ಜಾರಿಗೊಳಿಸಲು ಸಲ್ಲಿಸಲಾಗಿದೆ. ಪೂರಕ ಅಂಶಗಳು ಭಾರತ ಸರ್ಕಾರ NPS ಯೋಜನೆಯನ್ನು 01-04-2004ರ ಜಾರಿಗೊಳಿಸಿರುತ್ತದೆ. ಕರ್ನಾಟಕ ಸರ್ಕಾರ 01-04-2006ರ ನಂತರ ಜಾರಿಗೊಳಿಸಿದೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇದುವರೆವಿಗೂ ಈ ಯೋಜನೆ ಜಾರಿಗೆ ಬಂದಿರುವುದಿಲ್ಲ. ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸೇವೆಗಳಿಗೆ ಮಾತ್ರ ಯೋಜನೆಯನ್ನೇ ಮುಂದುವರೆಸಿರುತ್ತವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ವೇತನದಿಂದ, ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ನಿಖರ ಮೊಬಲಗಿನ ಕಟಾವಣೆ ಹಾಗೂ ಕಟಾವಣೆ ಮೊಬಲಗಿನ ತಿದ್ದುಪಡಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಖಜಾನೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್.ಆರ್.ಎಂ.ಎಸ್. ತಂತ್ರಾಂಶಗಳ ಅನುಕಲನ ವೇದಿಕೆಯ ಮೂಲಕ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಕಟಾವಣೆಯಾಗುತ್ತಿರುವ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತಿನ ಮೊಬಲಗುಗಳು, ವಿಮಾ ಇಲಾಖೆಯ ದತ್ತಾಂಶದಂತೆ ಕಟಾವಣೆಯಾಗಬೇಕಿರುವ ಮೊಬಲಗುಗಳಿಗಿಂತ ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ. ಉಲ್ಲೇಖಿತ ಸುತ್ತೋಲೆಯಲ್ಲಿ, ಈ ಮೇಲೆ ವಿವರಿಸಿರುವಂತೆ ವ್ಯತ್ಯಾಸವಿರುವ 15,287 ಪ್ರಕರಣಗಳನ್ನು ಗುರುತಿಸಿ, ದತ್ತಾಂಶವನ್ನು ಜಿಲ್ಲಾವಾರು ಪ್ರತ್ಯೇಕಿಸಿ, Excel Sheet ನಲ್ಲಿ ನಮೂದಿಸಿ, ಜಿಲ್ಲಾ ವಿಮಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸದರಿ ಪ್ರಕರಣಗಳನ್ನು ಭೌತಿಕ ಕಡತಗಳೊಂದಿಗೆ ಪರಿಶೀಲಿಸಿ, ನ್ಯೂನತೆಯಿರುವ ಪ್ರಕರಣಗಳನ್ನು ಪ್ರತ್ಯೇಕಿಸಿ, ವಿಮಾದಾರರ…
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ ಶಿಕ್ಷಕರ ಸಭೆಯನ್ನು ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಮಹಾಸಭೆಯನ್ನು ನಡೆಸುವ ಬಗ್ಗೆ ಉಲ್ಲೇಖಿತ ಸುತ್ತೋಲೆಯೊಂದಿಗೆ ನೀಡಲಾಗಿರುವ ಸೂಚನೆಗಳು ಮತ್ತು ಅನುಬಂಧದಲ್ಲಿ ತಿಳಿಸಲಾಗಿರುವ ವೇಳಾಪಟ್ಟಿಯಂತೆ ಹಾಗೂ ನವೆಂಬರ್ 14ರಂದು ಮಕ್ಕಳ ದಿನಾಚಾರಣೆಯ ಪ್ರಯುಕ್ತ ರಾಜ್ಯಾದ್ಯಂತ ಪೋಷಕರ-ಶಿಕ್ಷಕರ ಮಹಾ ಸಭೆಯಯನ್ನು ಅಯೋಜಿಸಿ ನಡೆಸಲಾಗಿದೆ. ಇದೇ ರೀತಿ ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಸಭೆಯನ್ನು ಕಡ್ಡಾಯವಾಗಿ ನಡೆಸಲು ಈ ಕೆಳಕಂಡ ದಿನಾಂಕಗಳನ್ನು ನಿಗಧಿಪಪಡಿಸಿದೆ ಹಾಗೂ ಈ ಕೆಳಕಂಡ ನಮೂನೆಯಂತೆ ವರದಿಯನ್ನು ಕ್ರೋಡಿಕರಿಸಿ ಈ ಕಛೇರಿಗೆ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆಯ ಸಂಬಂಧಿಸಿದ ಎಲ್ಲಾ ಆಧಿಕಾರಿಗಳಿಗೆ ಅಗತ್ಯ ಕ್ರಮವಹಿಸಲು ತಿಳಿಸಲಾಗಿದೆ (ಸುತ್ತೋಲೆ ಲಗತ್ತಿಸಿದೆ).














