Author: kannadanewsnow57

ನವದೆಹಲಿ : ವಿಪ್ರೋ ಟರ್ಬೊ ಹೈರಿಂಗ್-2025 ಹೆಸರಿನಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಎಂಜಿನಿಯರಿಂಗ್ ಪದವಿ ಪಡೆದ ಫ್ರೆಶರ್’ಗಳು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 28ರೊಳಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗ ಸ್ಥಳವು ದೇಶಾದ್ಯಂತ ಇದೆ. 2025ರಲ್ಲಿ B.Tech ಪೂರ್ಣಗೊಳಿಸಿದ ಅಥವಾ ಅಂತಿಮ ವರ್ಷದಲ್ಲಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಬಳ 5.5 ಲಕ್ಷ ರೂ. ಇದಲ್ಲದೆ, ಒಂದು ಲಕ್ಷ ಬೋನಸ್ ಇದೆ. ಅರ್ಜಿ ಪೂರ್ಣಗೊಂಡ ನಂತರ, ಅರ್ಹ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು https://careers.wipro.com/ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಅರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಅಥವಾ B.Tech ಉತ್ತೀರ್ಣರಾಗಿರಬೇಕು. ಪದವಿಯನ್ನು 2025ರಲ್ಲಿ ಪೂರ್ಣಗೊಳಿಸಿರಬೇಕು. ಸಿಎಸ್ ಮತ್ತು ಐಟಿ ವಿಭಾಗದಲ್ಲಿ ಎಂಜಿನಿಯರಿಂಗ್ ಉತ್ತೀರ್ಣರಾಗಿರಬೇಕು. 10ನೇ ತರಗತಿ ಮತ್ತು ಇಂಟರ್ ಮೀಡಿಯೇಟ್’ನಲ್ಲಿ ಶೇ.60ರಷ್ಟು ಅಂಕಗಳನ್ನು ಪಡೆದಿರಬೇಕು. ಅಭ್ಯರ್ಥಿಗೆ ಬ್ಯಾಕ್ಲಾಗ್ ಇದ್ದರೂ ಸಹ 3 ವರ್ಷಗಳವರೆಗೆ ಅಂತರವಿದ್ದರೂ, ಅರ್ಜಿ ಸಲ್ಲಿಸಲು…

Read More

ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳದ ಕೊನೆಯ ‘ಸ್ನಾನ’ದಲ್ಲಿ ಭಾಗವಹಿಸುವ ಭಕ್ತರ ಮೇಲೆ ಹೂವಿನ ಸುರಿಮಳೆ ಸುರಿಸಲಾಗಿದೆ. ಮಹಾ ಕುಂಭಮೇಳ ಇಂದು ಮುಕ್ತಾಯಗೊಳ್ಳುತ್ತದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಮಹಾಶಿವರಾತ್ರಿಯಂದು ತೆರೆ ಬೀಳಲಿದೆ. ಇಂದು ತ್ರಿವೇಣಿ ಸಂಗಮದಲ್ಲಿ ಕೊನೆಯ ಅಮೃತ ಸ್ನಾನ ನಡೆಯಲಿದ್ದು, 1 ಕೋಟಿಗೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ಕುಂಭಮೇಳದ ಎಸ್ಎಸ್ಪಿ ಅಜೇಶ್ ದ್ವಿವೇದಿ ಅವರು ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿ, ಹೆಚ್ಚಿನ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಅವರು ವಲಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಇದರ ಅಡಿಯಲ್ಲಿ ಭಕ್ತರು ತಾವು ಬರುವ ಮಾರ್ಗಕ್ಕೆ ಹತ್ತಿರದ ಘಾಟ್ನಲ್ಲಿ ಸ್ನಾನ ಮಾಡಿ ಅದೇ ಮಾರ್ಗದಿಂದ ಮರಳುತ್ತಾರೆ ಎಂದು ಹೇಳಿದರು. ಜನಸಂದಣಿಯನ್ನು ನೋಡಿ, ನಾವು ವಲಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ, ಇದರ ಅಡಿಯಲ್ಲಿ ಭಕ್ತರು ತಾವು ಬರುವ ಮಾರ್ಗಕ್ಕೆ ಹತ್ತಿರದ ಘಾಟ್ ನಲ್ಲಿ ಸ್ನಾನ ಮಾಡಿ ಅದೇ ಮಾರ್ಗದಿಂದ…

Read More

ಬೆಳಗಾವಿ : ಕನ್ನಡ ಮಾತನಾಡಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪುಂಡರು ಹಲ್ಲೆ ನಡೆಸಿದ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆಯುತ್ತಿದೆ. ಇದೀಗ ಕರ್ನಾಟಕ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ 3 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರದ ಬಸ್ ತಡೆದು, ಪ್ರತಿಭಟನೆ ನಡೆಸಲಾಗಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ ತಡೆದು ಪ್ರತಿಭಟನೆ ನಡೆಸಲಾಗಿದೆ. ಕೊಲ್ಹಾಪುರದಲ್ಲಿ ಶಿವಸೇನೆ ಭಾರೀ ಪ್ರತಿಭಟನೆ ಮಾಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ – ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಸರ್ಕಾರಿ ಬಸ್ ಸಂಚಾರ ಮೂರು ದಿನಗಳಿಂದ ಬಂದ್ ಆಗಿದ್ದು, ಇಂದು ಕೂಡ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೊಲ್ಲಾಪುರದಲ್ಲಿ ಶಿವಸೇನೆ ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ. ಸದ್ಯ ಕರ್ನಾಟಕ-ಮಹಾರಾಷ್ಟ್ರ ನಡುವಿನ 250 ಕ್ಕೂ ಹೆಚ್ಚು ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ನಾಳೆಯಿಂದ ಬಸ್ ಸಂಚಾರ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Read More

ನವದೆಹಲಿ : ಡಿಬಿಎಸ್ ಗ್ರೂಪ್ ಹೋಲ್ಡಿಂಗ್ಸ್ ಲಿಮಿಟೆಡ್ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 4,000 ಗುತ್ತಿಗೆ ಮತ್ತು ತಾತ್ಕಾಲಿಕ ಸಿಬ್ಬಂದಿಯನ್ನ ಕಡಿತಗೊಳಿಸಲು ಯೋಜಿಸಿದೆ. ಆಗ್ನೇಯ ಏಷ್ಯಾದ ಅತಿದೊಡ್ಡ ಸಾಲದಾತ ಸುಮಾರು 8,000 ರಿಂದ 9,000 ಸಿಬ್ಬಂದಿಯನ್ನ ಹೊಂದಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿಯೂಷ್ ಗುಪ್ತಾ ಬ್ಲೂಮ್ಬರ್ಗ್ ನ್ಯೂಸ್ನ ಪ್ರಶ್ನೆಗೆ ಉತ್ತರಿಸಿದರು. ತನ್ನ ವ್ಯವಹಾರದಲ್ಲಿ ಎಐನ್ನ ಮತ್ತಷ್ಟು ಅಳವಡಿಸಿಕೊಂಡ ನಂತರ ಬ್ಯಾಂಕ್ ತನ್ನ ಉದ್ಯೋಗಿಗಳನ್ನ ಕಡಿತಗೊಳಿಸುತ್ತದೆ ಎಂದು ಸುದ್ದಿ ಸಂಸ್ಥೆ ವರದಿಯನ್ನ ಅವರು ದೃಢಪಡಿಸಿದರು. ಖಾಯಂ ಸಿಬ್ಬಂದಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಿರ್ಗಮನ ಸಿಇಒ ಹೇಳಿದರು. ಸಿಂಗಾಪುರ ಮೂಲದ ಡಿಬಿಎಸ್ ಸುಮಾರು 41,000 ಸಿಬ್ಬಂದಿಯನ್ನ ಹೊಂದಿದೆ ಮತ್ತು ಪ್ರಸ್ತುತ ಉಪ ಸಿಇಒ ಆಗಿರುವ ಟಾನ್ ಸು ಶಾನ್ ಮಾರ್ಚ್ 28 ರಂದು ಗುಪ್ತಾ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

Read More

ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿಗೆ 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಜಿಲ್ಲೆಯ ರೈತ ಮಕ್ಕಳ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2025ರ ಮೇ 02 ರಿಂದ 2025 ರ ಫೆ.28 ರ ವರೆಗೆ ಒಟ್ಟು 10 ತಿಂಗಳ ತರಬೇತಿಯನ್ನು ನೀಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಗುರಿ ಮಹಿಳೆಯರು 8, ಪುರುಷರು 16, ಪರಿಶಿಷ್ಟ ಜಾತಿ 03, ಪರಿಶಿಷ್ಟ ಪಂಗಡ 01 ಮತ್ತು ಇತರೆ 20 ಅಭ್ಯರ್ಥಿಗಳು ಸೇರಿ ಒಟ್ಟು 24 ಅಭ್ಯರ್ಥಿಗಳನ್ನು ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಆಯ್ಕೆ ಮಾಡುತ್ತಾರೆ. ಅಭ್ಯರ್ಥಿಗಳ ವಯೋಮಿತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 18 ವರ್ಷದಿಂದ 33 ವರ್ಷದೊಳಗೆ ಇರಬೇಕು. ಇತರರಿಗೆ 18 ವರ್ಷದಿಂದ 30 ವರ್ಷದೊಳಗೆ ಹಾಗೂ ಮಾಜಿ ಸೈನಿಕರಿಗೆ 33 ರಿಂದ 65 ವರ್ಷದೊಳಗಿರಬೇಕು.…

Read More

ಕೋಲ್ಕತ್ತಾ : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರನ್ನು ಕೊಂದು ಶವವನ್ನು ತುಂಡು-ತುಂಡಾಗಿ ಕತ್ತರಿಸಿ ಸೂಟ್ ಕೇಸ್ ನಲ್ಲಿ ಸಾಗಿಸುವಾಗ ತಾಯಿ-ಮಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಕೋಲ್ಕತ್ತಾದ ಗಂಗಾ ನದಿಯಲ್ಲಿ ಶವವನ್ನು ವಿಲೇವಾರಿ ಮಾಡಲು ಯತ್ನಿಸುತ್ತಿದ್ದಾಗ ಸ್ಥಳೀಯರು ತಾಯಿ-ಮಗಳ ಜೋಡಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಫಲ್ಗುಣಿ ಘೋಷ್ ಮತ್ತು ಆಕೆಯ ತಾಯಿ ಆರತಿ ಘೋಷ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಆ ಶವವನ್ನು ಫಲ್ಗುಣಿ ಘೋಷ್ ಅವರ ಮಾವನ ಸಹೋದರಿ ಸುಮಿತಾ ಘೋಷ್ (55) ಅವರದು ಎಂದು ಗುರುತಿಸಲಾಗಿದೆ. ಉತ್ತರ ಕೋಲ್ಕತ್ತಾದ ಕುಮಾರ್ತುಲಿಯ ಗಂಗಾ ನದಿಯ ದಡದ ಬಳಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಹಿಳೆಯರು ಮೊದಲು ನೀಲಿ ಟ್ರಾಲಿ ಸೂಟ್ ಕೇಸ್ ನೊಂದಿಗೆ ಕಾಣಿಸಿಕೊಂಡರು. ಅವರ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಸ್ಥಳೀಯರು ಮಹಿಳೆಯರ ಬಳಿ ಹೋಗಿ ಸೂಟ್ ಕೇಸ್ ತೆರೆಯಲು ಹೇಳಿದ್ದಾರೆ. ಆರಂಭದಲ್ಲಿ ತೆರೆಯಲು ನಿರಾಕರಿಸಿದರು. ಮತ್ತಷ್ಟು ಪ್ರಚೋದಿಸಿದ ನಂತರ, ಅವರು…

Read More

ಸದ್ಯ ಫೋನ್ ನಮ್ಮ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಮೊದಲೆಲ್ಲಾ ನಾವು ಅಗತ್ಯವಿದ್ರೆ ಮಾತ್ರ ಫೋನ್ ಬಳಸುತ್ತಿದ್ದೆವು. ಆದ್ರೆ, ಈಗ ಹಾಗಿಲ್ಲ. ಮೊಬೈಲ್ ಅಗತ್ಯವಿರಲಿ ಅಥವಾ ಇಲ್ಲದಿರಲಿ ಬಳಸ್ತಾನೆ ಇರ್ತೇವೆ. ನಮ್ಮ ಕೆಲಸದ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ್ರೂ ಸಹ ನಾವು ನಮ್ಮ ಸ್ವಲ್ಪ ಸಮಯವನ್ನ ಫೋನ್’ನೊಂದಿಗೆ ಕಳೆಯುತ್ತೇವೆ. ಇನ್ನು ಹೇಳಬೇಕು ಅಂದ್ರೆ ಬಹಳಷ್ಟು ಜನ ಎಚ್ಚರವಾಗುತ್ತಿದ್ದಂತೆ ಸೆಲ್ ಫೋನ್ ನೋಡ್ತಾರೆ. ಇನ್ನು ಇತ್ತಿಚಿಗೆ ಸಣ್ಣ ಮಕ್ಕಳು ಸಹ ಈ ಫೋನ್’ಗಳಿಗೆ ವ್ಯಸನಿಗಳಾಗುತ್ತಿದ್ದಾರೆ. ತಿನ್ನಲು, ಮಲಗಲು ಅಷ್ಟೇ ಯಾಕೆ ನಿಮ್ಮ ಮಾತು ಕೇಳಲು ಕೂಡ ಫೋನ್ ತೋರಿಸುವ ಅಮಿಷ ಹೊಡ್ಡಬೇಕು. ಇನ್ನು ಕೆಲವೊಂದಿಷ್ಟು ಜ ಒಂದು ಹೆಜ್ಜೆ ಮುಂದೆ ಹೋಗಿ ಮೊಬೈಲ್ ಫೋನ್ ಶೌಚಾಲಯಕ್ಕೆ ಒಯ್ಯುತ್ತಿದ್ದಾರೆ. ಹೌದು, ಸಾಕಷ್ಟು ಜನ ತಮ್ಮ ಮೊಬೈಲ್ ಫೋನ್ ಶೌಚಾಲಯಕ್ಕೆ ಒಯ್ಯುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಹೆಚ್ಚು ಸಮಯವನ್ನ ಕಳೆಯಲು ಇದು ಮುಖ್ಯ ಕಾರಣವಾಗಿದೆ. ಆದ್ರೆ, ಈ ರೀತಿಯಾಗಿ ಶೌಚಾಲಯಗಳಿಗೆ ಮೊಬೈಲ್ ಒಯ್ಯುವುದು ಮತ್ತು ಅಲ್ಲಿ ಹೆಚ್ಚು…

Read More

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೊಸ ‘ಗೋಲ್ಡ್ ಕಾರ್ಡ್’ ಯೋಜನೆಯನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ವಲಸಿಗರು 5 ಮಿಲಿಯನ್ ಡಾಲರ್ (ರೂ. 43 ಕೋಟಿಗಿಂತ ಹೆಚ್ಚು) ಪಾವತಿಸುವ ಮೂಲಕ ಈ ವಿಶೇಷ ಕಾರ್ಡ್ ಪಡೆಯಬಹುದು. ಈ ಗೋಲ್ಡ್ ಕಾರ್ಡ್ ಗ್ರೀನ್ ಕಾರ್ಡ್‌ನ ಪ್ರೀಮಿಯಂ ಆವೃತ್ತಿಯಾಗಿದ್ದು, ಇದನ್ನು ಹೊಂದಿರುವವರು ಅಮೆರಿಕದ ಪೌರತ್ವ ಪಡೆಯಲು ದಾರಿ ತೆರೆಯುತ್ತದೆ. ಗೋಲ್ಡ್ ಕಾರ್ಡ್ ಬಗ್ಗೆ ಟ್ರಂಪ್ ಹೇಳಿದ್ದೇನು? ಓವಲ್ ಕಚೇರಿಯಲ್ಲಿ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರೊಂದಿಗೆ ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕುತ್ತಾ ಟ್ರಂಪ್, “ನಾವು ಗೋಲ್ಡ್ ಕಾರ್ಡ್ ಮಾರಾಟ ಮಾಡಲಿದ್ದೇವೆ. ನಿಮ್ಮ ಬಳಿ ಗ್ರೀನ್ ಕಾರ್ಡ್ ಇದೆ, ಇದು ಗೋಲ್ಡ್ ಕಾರ್ಡ್. ನಾವು ಆ ಕಾರ್ಡ್‌ನ ಮೌಲ್ಯವನ್ನು ಸುಮಾರು $5 ಮಿಲಿಯನ್ ಎಂದು ಪರಿಗಣಿಸುತ್ತೇವೆ ಮತ್ತು ಇದು ನಿಮಗೆ ಗ್ರೀನ್ ಕಾರ್ಡ್‌ನ ಎಲ್ಲಾ ವೈಶಿಷ್ಟ್ಯಗಳನ್ನು ಮತ್ತು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆ ಎರಡು ವಾರಗಳಲ್ಲಿ ಪ್ರಾರಂಭವಾಗಲಿದೆ ಮತ್ತು ಇದಕ್ಕೆ…

Read More

ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೆ ಇಬ್ಬರು ಬಲಿಯಾಗಿದ್ದು, ವಿಷ ಸೇವಿಸಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಹಾಸನ ಜಿಲ್ಲೆಯ ಅರಕಲಗೂಡಿನ ಕೇಶವಯ್ಯ (61) ಕೊಪ್ಪಳದ ಯಂಕಪ್ಪ ಬಂಗಿ (28) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಳ್ಳುಮುದ್ದನಹಳ್ಳಿಯಲ್ಲಿ ಮನೆ ಹರಾಜಿಗೆ ನೋಟಿಸ್ ಅಂಟಿಸಿದ್ದರಿಂದ ಬೇಸತ್ತು ಕೇಶವಯ್ಯ (61) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೇಶವಯ್ಯ ಮನೆ ಕಟ್ಟಲು ಫೈನಾನ್ಸ್ ನಲ್ಲಿ ಸಾಲ ಮಾಡಿಕೊಂಡಿದ್ದರು. ಕೊಪ್ಪಳ ಜಿಲ್ಲೆಯ ಬೆನಕನಾಳ ಗ್ರಾಮದಲ್ಲಿ ಸಾಲಗಾರರ ಕಾಟಕ್ಕೆ ಬೇಸತ್ತು ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕ ಯಂಕಪ್ಪ ಬಂಗಿ (38) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಂಕಪ್ಪ ಸರ್ಕಾರಿ ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಮಾಡಿಕೊಂಡಿದ್ದರು.

Read More

ಖಾರ್ಟೂಮ್ : ಸುಡಾನ್ ರಾಜಧಾನಿ ಖಾರ್ಟೌಮ್‌ನ ಹೊರವಲಯದಲ್ಲಿ ಮಿಲಿಟರಿ ವಿಮಾನವೊಂದು ಪತನಗೊಂಡು ಹಲವಾರು ಅಧಿಕಾರಿಗಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಸುಡಾನ್ ಸೇನೆ ನೀಡಿದೆ. ಮಂಗಳವಾರ ತಡರಾತ್ರಿ ಬಿಡುಗಡೆಯಾದ ಹೇಳಿಕೆಯಲ್ಲಿ, ಸುಡಾನ್ ಸೇನೆಯು ವಿಮಾನ ನಿಲ್ದಾಣದಿಂದ ಹಾರುವಾಗ ವಿಮಾನ ಅಪಘಾತಕ್ಕೀಡಾಗಿದ್ದು, ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತ ಸ್ಥಳದಲ್ಲಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಆಂಟೊನೊವ್ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎಂದು ಮಿಲಿಟರಿ ಮೂಲವೊಂದು ಈ ಹಿಂದೆ ಎಎಫ್‌ಪಿಗೆ ತಿಳಿಸಿತ್ತು. ಗ್ರೇಟರ್ ಖಾರ್ಟೌಮ್‌ನ ಭಾಗವಾಗಿರುವ ಓಮ್‌ಡರ್ಮನ್‌ನಲ್ಲಿರುವ ಸೇನೆಯ ಅತಿದೊಡ್ಡ ಲಾಜಿಸ್ಟಿಕಲ್ ಕೇಂದ್ರಗಳಲ್ಲಿ ಒಂದಾದ ವಾಡಿ ಸೆಡ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ.

Read More