Subscribe to Updates
Get the latest creative news from FooBar about art, design and business.
Author: kannadanewsnow57
ವೆನಿಜುವೆಲಾದ ಮೇಲೆ ಶನಿವಾರ ಮುಂಜಾನೆ ಅಮೆರಿಕ ನಡೆಸಿದ ದಾಳಿಯಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ವೆನಿಜುವೆಲಾದ ಹಿರಿಯ ಅಧಿಕಾರಿಯೊಬ್ಬರು ಪ್ರಾಥಮಿಕ ವರದಿಗಳನ್ನು ವಿವರಿಸುವಾಗ ನ್ಯೂಯಾರ್ಕ್ ಟೈಮ್ಸ್ ಗೆ ತಿಳಿಸಿದ್ದಾರೆ ಏತನ್ಮಧ್ಯೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಫಾಕ್ಸ್ ನ್ಯೂಸ್ಗೆ ಮಾತನಾಡಿ, ಯಾವುದೇ ಅಮೆರಿಕನ್ ಸೈನಿಕರು ಸಾವನ್ನಪ್ಪಿಲ್ಲ ಎಂದು ಹೇಳಿದರು. ಆದಾಗ್ಯೂ, ಕೆಲವು ಸೇವಾ ಸದಸ್ಯರು ಗಾಯಗೊಂಡಿದ್ದಾರೆ ಎಂದು ಅವರು ಸೂಚಿಸಿದರು. ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಹೊರತೆಗೆಯಲು ಚಲಿಸುತ್ತಿರುವ ಯುಎಸ್ ಹೆಲಿಕಾಪ್ಟರ್ ಗಳು ಗುಂಡಿನ ದಾಳಿಗೆ ಒಳಗಾಗಿವೆ ಎಂದು ಟ್ರಂಪ್ ಅವರೊಂದಿಗೆ ಮಾರ್-ಎ-ಲಾಗೊದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್ ಡಾನ್ ಕೇನ್ ಹೇಳಿದರು. ಒಂದು ಹೆಲಿಕಾಪ್ಟರ್ ಅನ್ನು ಹೊಡೆದಿದೆ ಆದರೆ “ಹಾರಲು ಯೋಗ್ಯವಾಗಿದೆ” ಮತ್ತು ಎಲ್ಲಾ ಯುಎಸ್ ವಿಮಾನಗಳು “ಮನೆಗೆ ಬಂದಿವೆ” ಎಂದು ಅವರು ಹೇಳಿದರು https://twitter.com/gxldehaalandd/status/2007346108150784376?ref_src=twsrc%5Etfw%7Ctwcamp%5Etweetembed%7Ctwterm%5E2007346108150784376%7Ctwgr%5E7ed0971af62e5ce7d0eb08df618aa5e289e09037%7Ctwcon%5Es1_c10&ref_url=https%3A%2F%2Fkannadadunia.com%2Fus-launches-massive-airstrike-on-venezuela-after-trumps-warning-watch-video%2F
ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳೀಸೋ ಕೃತ್ಯ ನಡೆದಿದ್ದು, ನಿಧಿಗಾಗಿ ದತ್ತು ಪೋಷಕರಿಂದ ಮಗುವನ್ನು ಬಲಿ ಕೊಡಲು ಯತ್ನಿಸಿರುವ ಘಟನೆ ಸೂಲಿಬೆಲೆಯಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲೆಬೆಲೆಯ ಜನತಾ ಕಾಲೋನಿಯಲ್ಲಿ ನಿಧಿಗಾಗಿ ಮನೆಯಲ್ಲಿ ಗುಂಡಿ ತೋಡಿ ಮಗು ಬಲಿಗಾಗಿ ಪೂಜೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ವೇಳೆ 8 ತಿಂಗಳ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಸೈಯದ್ ಇಮ್ರಾನ್ ಎಂಬುವರ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಬೇರೆಯವರಿಂದ ಗಂಡು ಮಗುವನ್ನು ಖರೀದಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಹುಣ್ಣಿಮೆ ಹಿನ್ನೆಲೆ ಮಗು ಬಲಿ ಕೊಡುತ್ತಿದ್ದಾರೆಂದು ಅಪರಿಚಿತರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕರೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆಯನ್ನು ಪರಿಶೀಲಿಸಿದಾಗ ಮನೆಯ ಕೋಣೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿದ್ದು ಪತ್ತೆಯಾಗಿದೆ. ಸದ್ಯ ಅಧಿಕಾರಿಗಳು ಮಗುವನ್ನು ಶಿಶುಕೇಂದ್ರಕ್ಕೆ ರವಾನಿಸಿ ತನಿಖೆ ಮಾಡುತ್ತಿದ್ದಾರೆ. ಸೂಲೆಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…
ನವದೆಹಲಿ : ದೆಹಲಿಯ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯಲ್ಲಿ ಅಮ್ರೋಹಾದ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಲುಷಿತ ಫಾಸ್ಟ್ ಫುಡ್’ನಿಂದ ಪರಾವಲಂಬಿ ಮಿದುಳಿನ ಸೋಂಕಿನಿಂದ ಸಾವನ್ನಪ್ಪಿದ್ದಾಳೆ. ಬಲಿಪಶು ಇಲ್ಮಾ ನದೀಮ್ ಮೆದುಳಿನಲ್ಲಿ 20 ರಿಂದ 25 ಟೇಪ್‌ವರ್ಮ್ ಸಿಸ್ಟ್‌ಗಳು ಪತ್ತೆಯಾಗಿದ ನಂತರ ಆತನಿಗೆ ನ್ಯೂರೋಸಿಸ್ಟಿಸರ್ಕೋಸಿಸ್ ಇರುವುದು ಪತ್ತೆಯಾಯಿತು. ಬಿಎ ಮೊದಲ ವರ್ಷದ ವಿದ್ಯಾರ್ಥಿನಿ ನಿರಂತರ ತಲೆನೋವು ಮತ್ತು ರೋಗಗ್ರಸ್ತವಾಗುವಿಕೆಗಳಿಂದ ಬಳಲುತ್ತಿದ್ದಳು. ಇನ್ನಿದಕ್ಕೆ ವೈದ್ಯಕೀಯ ತಜ್ಞರು ಬೀದಿ ತಿಂಡಿಗಳಲ್ಲಿ ಹೆಚ್ಚಾಗಿ ಕಂಡುಬರುವ ಸರಿಯಾಗಿ ತೊಳೆಯದ ಎಲೆಕೋಸು ಸೇವನೆ ಎಂದಿದ್ದಾರೆ. ಪರಾವಲಂಬಿ ಲಾರ್ವಾಗಳು ಬೇಯಿಸದ ಫಾಸ್ಟ್ ಫುಡ್’ನಲ್ಲಿ ಬದುಕಬಲ್ಲವು, ಅಂತಿಮವಾಗಿ ಜೀರ್ಣಾಂಗ ವ್ಯವಸ್ಥೆಯಿಂದ ಕೇಂದ್ರ ನರಮಂಡಲಕ್ಕೆ ಹೋಗುತ್ತವೆ. ದೆಹಲಿಗೆ ವರ್ಗಾಯಿಸುವ ಮೊದಲು ಮೀರತ್’ನಲ್ಲಿ ನದೀಮ ಸ್ಥಿತಿ ಶೀಘ್ರವಾಗಿ ಹದಗೆಟ್ಟಿದ್ದು, ಅಲ್ಲಿ ಆಕೆ ಸಾವಪ್ಪಿದ್ದಾಳೆ. ಇನ್ನು ಈ ಕುರಿತು ಆರೋಗ್ಯ ಅಧಿಕಾರಿಗಳು, ಸಾರ್ವಜನಿಕರು ಎಲೆ ತರಕಾರಿಗಳನ್ನ ಸಂಪೂರ್ಣವಾಗಿ ಕುದಿಸುವುದನ್ನ ಖಚಿತಪಡಿಸಿಕೊಳ್ಳಬೇಕೆಂದು ಮತ್ತು ಬೀದಿ ಆಹಾರದಲ್ಲಿ ಫಾಸ್ಟ್‍ಫುಡ್ ಸೇವಿಸುವಾಗ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರವು ಮತ್ತೆ 6 ಮಂದಿ ಕೆಎಎಸ್ (KAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಹೀಗಿದೆ
ಬೆಂಗಳೂರು : ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯ, ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಈ ವರ್ಷ ಬರೋಬ್ಬರಿ 75 ಸಾವಿರ ಹುದ್ದೆಗಳ ನೇಮಕಾತಿ ನಡೆಯಲಿದೆ. ಹೌದು, ಕರ್ನಾಟಕದಲ್ಲಿ 18 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ನಡೆಯಲಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ 22,000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭಾರತೀಯ ಅಂಚೆ ಇಲಾಖೆಯಲ್ಲಿ 30 ಸಾವಿರ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. ಆಗಸ್ಟ್-ಅಕ್ಟೋಬರ್ ನಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳ ಸರಣಿ ಆರಂಭವಾಗಲಿದ್ದು, 5,000ಕ್ಕೂ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ನಿರೀಕ್ಷಿಸಲಾಗಿದೆ. ಕರ್ನಾಟಕದಲ್ಲಿ 18 ಸಾವಿರ ಶಾಲಾ ಶಿಕ್ಷಕರ ನೇಮಕಾತಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 18 ಸಾವಿರ ಶಿಕ್ಷಕರ ನೇಮಕಾತಿಗೆ ಇದೇ ತಿಂಗಳು ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಶಾಲಾರಂಭವಾಗುವ ಜೂನ್ ವೇಳೆಗೆ ರಾಜ್ಯ ಸರ್ಕಾರ 18 ಸಾವಿರ ಶಿಕ್ಷಕರ ನೇಮಕಾತಿ ನಡೆಸಲಿದೆ. ಇದಕ್ಕಾಗಿ ಈಗಾಗಲೇ ಟಿಇಟಿಯನ್ನು ಮುಗಿಸಿ ಫಲಿತಾಂಶ ಪ್ರಕಟಿಸಿದೆ. ಜನವರಿಯಲ್ಲಿ ಶಿಕ್ಷಕರ…
ಬೆಂಗಳೂರು : 2025-26ನೇ ಸಾಲಿನ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ-1ರ ವೇಳಾಪಟ್ಟಿ ಮತ್ತು ಮಾರ್ಗಸೂಚಿಯನ್ವಯ ಪರೀಕ್ಷೆಯನ್ನು ನಡೆಸುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಹತ್ವದ ಆದೇಶ ಹೊರಡಿಸಿದೆ. 2025-263 ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-1ನ್ನು 05.01.2026 ರಿಂದ 10.01.2026 ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು, ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಪೂರ್ವ ಸಿದ್ದತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ, ಅಯಾ ದಿನದ ಪ್ರಶ್ನೆಪತ್ರಿಕೆಯನ್ನು ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಸಂಬಂಧಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಯನ್ನು ಮುದ್ರಿಸಿಕೊಂಡು ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸುವುದು. ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ದಿಕ್ಕೂಚಿಯಾಗಿರುತ್ತದೆ. ಆದ್ದರಿಂದ ಪೂರ್ವಸಿದ್ಧತಾ ಪರೀಕ್ಷೆಯನ್ನು ಮುಖ್ಯ ಪರೀಕ್ಷೆಯನ್ನು ನಡೆಸುವ ರೀತಿಯಲ್ಲಿಯೇ ಶಿಸ್ತುಬದ್ಧವಾಗಿ, ಹಾಗೂ ಪಾರದರ್ಶಕವಾಗಿ ನಡೆಸಲು, ಜಿಲ್ಲಾ ಉಪನಿರ್ದೇಶಕರು…
ನಂಜನಗೂಡು: ರಾಜ್ಯದಲ್ಲಿ ಹೃದಯಾಘಾತದಿಂದ ಮತ್ತೊಬ್ಬರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ರಾಕ್ಷಸ ಮಂಟಪ ವೃತ್ತದಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವತಿಯಿಂದ ಜರುಗುವ ಅಂಧಕಾಸುರ ವಧೆ ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತ ಸಹಾಯಕ ಅರ್ಚಕ ಶಂಕರ ಉಪಾಧ್ಯಾಯ (55) ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ. ಪ್ರತಿ ವರ್ಷ ಸಂಪ್ರದಾಯದಂತೆ ನಡೆಯುವ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅರ್ಚಕ ಉಪಾಧ್ಯಾಯ ಉತ್ಸವಮೂರ್ತಿ ಇದ್ದ ಪಲ್ಲಕ್ಕಿಗೆ ಭುಜ ಕೊಟ್ಟು ನಡೆಯುತ್ತಿದ್ದ ಕುಸಿದು ಬಿದ್ದರು. ಪಕ್ಕದಲ್ಲೇ ನಿಂತಿದ್ದ ಇತರ ಅರ್ಚಕರು ಉಪಾಧ್ಯಾಯ ಅವರ ನೆರವಿಗೆ ಧಾವಿಸಿದರು. ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಬೆಂಗಳೂರು: ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ರಾಜ್ಯ ಸರ್ಕಾರದ ವಿವಿಧ ಆದೇಶಗಳಲ್ಲಿ ಕಾಲಕಾಲಕ್ಕೆ ಪಹಣಿ ತಿದ್ದುಪಡಿ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರರಿಗೆ ಪ್ರತ್ಯಾಯೋಜಿಸಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಅದರಂತೆ ದಿನಾಂಕ:30.06.2025 ಕ್ಕೆ ಸದರಿ ಪ್ರತ್ಯಾಯೋಜನೆಯ ಅವಧಿಯು ಮುಕ್ತಾಯಗೊಂಡಿರುತ್ತದೆ ಎಂದಿದ್ದಾರೆ. ಸದರಿ ಕಂದಾಯ ಅದಾಲತ್ ಯೋಜನೆಯನ್ನು 2014ನೇ ಸಾಲಿನಿಂದ ಆರಂಭಿಸಿದ್ದು, ಜೂನ್ 2025 ರವರೆಗೂ ವಿಸ್ತರಿಸಲಾಗಿರುತ್ತದೆ. ಆದಾಗ್ಯೂ ಪಹಣಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ಕಂದಾಯ ಅದಾಲತ್ ಅವಧಿಯನ್ನು ವಿಸ್ತರಿಸಲು ಕೋರಿ ಕೆಲವು ತಾಲ್ಲೂಕುಗಳಿಂದ ಮನವಿಗಳು ಸ್ವೀಕೃತವಾಗಿರುತ್ತವೆ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರರಿಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸುವ ಕುರಿತಂತೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು 15 ದಿನಗಳಲ್ಲಿ ಸಲ್ಲಿಸಲು ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯದ ಗ್ರಾಮೀಣ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ ನೀಡಿದ್ದು, ಗ್ರಾಮೀಣ ಭಾಗದ ಜನತೆ ಸುಲಭವಾಗಿ ತಮ್ಮ ಜಮೀನಿನ ಇ-ಖಾತೆಯನ್ನು ಪಡೆಯುವಂತೆ ಇ-ಸ್ವತ್ತು ತಂತ್ರಾಂಶ 2.0 ಅನ್ನು ರೂಪಿಸಲಾಗಿದೆ. ಗ್ರಾಮೀಣ ಭಾಗದ ಆಸ್ತಿ ಮಾಲೀಕರು ತಂತ್ರಾಂಶದ ಮೂಲಕವೇ ಗ್ರಾಮ ಪಂಚಾಯತಿ ಸೇವೆಗಳ ಶುಲ್ಕ, ಮ್ಯುಟೇಶನ್ ಶುಲ್ಕ ನಿರ್ಧಾರವಾಗುತ್ತದೆ. ಇದು ಗ್ರಾಮೀಣರ ಆಸ್ತಿ ಸಂಬಂಧಿತ ಕೆಲಸಗಳನ್ನು ಸುಗಮಗೊಳಿಸಿದೆ. ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ಖಾತೆ ಇ-ಸ್ವತ್ತು ತಂತ್ರಾಂಶದ ಪ್ರಯೋಜನಗಳು ನಿಮ್ಮ ಕೃಷಿಯೇತರ ಜಮೀನಿಗೆ ಇ-ಖಾತಾ ಪಡೆಯುವುದು ಈಗ ಸುಲಭವಾಗಿದೆ. ಸಾರ್ವಜನಿಕರು ಮನೆಯಲ್ಲಿದ್ದೇ ಆಸ್ತಿ ದಾಖಲೆಗಳನ್ನು ಪಡೆಯಬಹುದು. ಇ-ಸ್ವತ್ತು ನಮೂನೆಗಳು ನಿಗದಿತ ಕಾಲಾವಧಿಯೊಳಗೆ ಲಭಿಸಲಿವೆ. ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಯಂಚಾಲಿತ ಅನುಮೋದನೆ ಸಿಗಲಿದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಇ-ಖಾತಾ ವಿತರಣೆಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರ ಅನುಮೋದನೆಗೆ ಅವಕಾಶ. ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಏಕರೂಪದ/ ಮಾದರಿಯ ತೆರಿಗೆ ಹಾಗೂ ಶುಲ್ಕಗಳು ನಿಗದಿ. ಗ್ರಾಮಪಂಚಾಯಿತಿ ಸೇವೆಗಳ ಶುಲ್ಕ ಹಾಗೂ ಮ್ಯುಟೇಶನ್ ಶುಲ್ಕ ತಂತ್ರಾಂಶದ ಮೂಲಕವೇ…
ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ರಕ್ಷಣೆ ನೀಡುವ ಉದ್ದೇಶದಿಂದ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಹೊಸದಾಗಿ ಅಕ್ಕ ಪಡೆ ಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಿದ್ದು, ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಮಹೀಂದ್ರಾ ಬೊಲೆರೋ ವಾಹನಗಳನ್ನು ಖರೀದಿಸಿ, ನೋಂದಾಯಿಸಲ್ಪಟ್ಟಿರುವ ವಾಹನಗಳನ್ನು ಆಯಾ ಜಿಲ್ಲೆಗಳಿಗೆ ಮರುಹಂಚಿಕೆ ಮಾಡಿರುತ್ತಾರೆ. ಹಾಗೂ ನಾಲ್ಕು ಮಹಿಳಾ ಗೃಹರಕ್ಷಕರನ್ನೊಳಗೊಂಡ ಒಂದು ತಂಡವನ್ನು ಪ್ರತಿ ಜಿಲ್ಲೆಗೆ ರಚನೆ ಮಾಡಲಾಗಿರುತ್ತದೆ. ಜನೆವರಿ 05, 2026 ರಂದು ಧಾರವಾಡ ಸೃಜನಾ ರಂಗ ಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಧಾರವಾಡ ಜಿಲ್ಲೆಯ ಪಂಚ ಗ್ಯಾರಂಟಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸರ್ಕಾರದಿಂದ ಜಾರಿಯಾಗಿರುವ ಹೊಸ ಅಕ್ಕಪಡೆ ಯೋಜನೆಗೆ ಅಧಿಕೃತ ಚಾಲನೆ ನೀಡುವರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ…














