Author: kannadanewsnow57

ಬೆಂಗಳೂರು : ಎಂಟನೇ ತರಗತಿ ಪಾಸಾದವರಿಗೆ ಐಟಿಐ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಎಂಟನೇ ತರಗತಿ ಪಾಸಾದವರೂ ITI ಮಾಡಲು ಸುವರ್ಣಾವಕಾಶ, ಎಂಟನೇ ತರಗತಿ ಪಾಸಾದವರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ಎಂಟನೇ ತರಗತಿ ಪಾಸಾದವರಿಗೂ ಆಯ್ದ ಕೋರ್ಸ್‌ ಗಳ ಪ್ರವೇಶ ✔️ ವೆಲ್ಡಿಂಗ್‌ ✔️ ಶೀಟ್‌ ಮೆಟಲ್‌ ವರ್ಕ್‌ ✔️ ವುಡ್‌ ವರ್ಕಿಂಗ್‌ ಟೇಕ್ನಿಸಿಯನ್‌ ಕೆಲಸ ಕಲಿಯಿರಿ ✔️ ಕಟ್ಟಂಗ್‌ ಅಂಡ್‌ ಸೀವಿಂಗ್‌ ✔️ ಡ್ರೆಸ್‌ಮೇಕಿಂಗ್‌ ✔️ ವಯರ್‌ ಮ್ಯಾನ್‌ ಆಗುವ ಅವಕಾಶ ” ಪ್ರವೇಶ ಪ್ರಾರಂಭ ” ಸಂಪರ್ಕಿಸಿ ಕೌಶಲ್ಯ ಸಹಾಯವಾಣಿ 155 267 Online ಮಾಹಿತಿತಾಗಿ https://www.cite.karnataka.gov.in/ ಪ್ರವೇಶಕ್ಕಾಗಿ ಹಾಗೂ ಕೋರ್ಸ್‌ ಗಳ ಮಾಹಿತಿಗಾಗಿ ಕೂಡಲೇ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಕುಮಾರ ಬಂಗಾರಪ್ಪ ಅವರ ಮನೆಯ ಮುಂದೆ ನಟ ಶಿವರಾಜ್‌ ಕುಮಾರ್‌ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಮನೆಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರಬಂಗಾರಪ್ಪ ನಿವಾಸದ ಮುಂದೆ ನಟ ಶಿವರಾಜ್‌ ಕುಮಾರ್‌ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಕುಮಾರಬಂಗಾರಪ್ಪ ಶಿವರಾಜ್‌ ಕುಮಾರ್‌ ಅವರ ಕ್ಷಮೆ ಕೇಳಬೇಕು ಎಂದು ಹೇಳಿ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ತಕ್ಷಣವೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್‌ ಕುಮಾರ್‌ ಸೋಲಿನ ಬೆನ್ನಲ್ಲೇ ಟ್ವೀಟ್‌ ಮಾಡಿದ್ದ ಕುಮಾರ ಬಂಗಾರಪ್ಪ, ನನ್ನ ತಂಗಿಯ ಗಂಡ Dr. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು. ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ. ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು.…

Read More

ಬೆಂಗಳೂರು :  ಸರ್ಕಾರಗಳು ಸಿನಿಮಾ ತಾರೆಯರ ಅನಗತ್ಯ ಸ್ಮಾರಕಗಳನ್ನು ನಿರ್ಮಿಸಿ ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ನಟ ಚೇತನ್‌ ಅಹಿಂಸಾ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ಅವರು, ಚಿತ್ರರಂಗದ ತಾರೆಯೊಬ್ಬರಿಗೆ 10 ಗುಂಟೆ ಸ್ಮಾರಕ ನಿರ್ಮಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದ್ದು, ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ‘ನ್ಯಾಯಾಲಯದ ಸಮಯದ ವ್ಯರ್ಥ’ ಎಂದು ಕರೆದಿದೆ. ಇದು ನ್ಯಾಯಾಲಯಗಳ ಅತ್ಯಂತ ಅಗತ್ಯವಾದ ದೂರದೃಷ್ಟಿಯ ಕ್ರಮವಾಗಿದೆ ಎಂದರು. ಸರ್ಕಾರಗಳು ಈಗಾಗಲೇ ಇಂತಹ ಚಲನಚಿತ್ರ ತಾರೆಯರ ಅನಗತ್ಯ ಸ್ಮಾರಕಗಳು ಮತ್ತು ಐತಿಹಾಸಿಕ ವ್ಯಕ್ತಿಗಳಿಗೆ ಅನುಪಯುಕ್ತ ಪ್ರತಿಮೆಗಳನ್ನು ನಿರ್ಮಿಸಲು ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುತ್ತಿವೆ ಎಂದು ಹೇಳಿದ್ದಾರೆ.

Read More

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಎಸ್‌ ಐಟಿ ವಶದಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣರನ್ನು ಎಸ್‌ ಐಟಿ ಅಧಿಕಾರಿಗಳು ಇಂದು ಸ್ಥಳ ಮಹಜರಿಗಾಗಿ ಹಾನಸ, ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಇಂದು ಬೆಳಗಿನ ಜಾವ ಪ್ರಜ್ವಲ್‌ ರೇವಣ್ಣರನ್ನು ಹಾಸನ ಹಾಗೂ ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ. ಹಾಸನ, ಹೊಳೆನರಸೀಪುರದ ತೋಟದ ಮನೆಗಳಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಬಳಿಕ ಸಂಸದರ ಕಚೇರಿ ಸೇರಿದಂತೆ ಇತರೆಡೆ ಸ್ಥಳ ಮಹಜರು ನಡೆಯುವ ಸಾಧ್ಯತೆ ಇದೆ.

Read More

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಹತ್ಯೆಯಾಗಿದ್ದು, ಚಿಟ್‌ ಫಂಡ್‌ ಉದ್ಯೋಗಿಯನ್ನು ತುಂಡು ತುಂಡಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಚಿಟ್‌ ಫಂಡ್‌ ಉದ್ಯೋಗಿಯನ್ನು ಆರೋಪಿ ಮನೆಯಲ್ಲೇ ತುಂಡುತುಂಡಾಗಿ ಕತ್ತರಿಸಿ ಹತ್ಯೆ ಮಾಡಿ, ಮೃತದೇಹದ ಭಾಗಗಳನ್ನು ಬೇರೆ ಬೇರೆ ಮೋರಿಗೆ ಎಸೆದು ಸಾಕ್ಷ್ಯ ನಾಶ ಮಾಡಿದ್ದಾರೆ.ಮೂರು ದಿನಗಳಿಂದ ಹುಡುಕಾಟ ನಡೆಸಿದರೂ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಕೊಲೆಯಾದ ದುರ್ದೈವಿ ಕೆವಿ ಶ್ರೀಕಾಂತ್ (34) ಎಂಬುದು ತಿಳಿದುಬಂದಿದೆ. ಶ್ರೀಕಾಂತ್ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚೀಟ್ ಫಂಡ್​​ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ. ಮಾಧವ ರಾವ್ ಎಂಬಾತ ಕೊಲೆ ಆರೋಪಿಯಾಗಿದ್ದು, ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ಎಸಗಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ ಸ್ಥಳ‌ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ರಾಮಮೂರ್ತಿನಗರ ಪೊಲೀಸರಿಂದ ಕೊಲೆ (302) ಮತ್ತು ಸಾಕ್ಷಿ ನಾಶ (201)ರಡಿ ಕೇಸ್ ದಾಖಲಾಗಿದೆ.

Read More

ಬೆಂಗಳೂರು : ಜೂನ್ 13ರ ಗುರುವಾರ ಬೆಳಿಗ್ಗೆ 11:00 ಗಂಟೆಗೆ ರಾಜ್ಯ ಸಚಿವ ಸಂಪುಟದ 2024ನೇ ಸಾಲಿನ 9ನೇ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಕರೆಯಲಾಗಿದೆ. ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಮುಂದಿನ ಗುರುವಾರ ನಡೆಯಲಿದೆ. ಚುನಾವಣೆ ಬಳಿಕ ನಡೆಯುತ್ತಿರುವ ಈ ಸಭೆ ಮಹತ್ವ ಪಡೆದಿದ್ದು, ವಿಶೇಷವಾಗಿ ಗ್ಯಾರಂಟಿ ಯೋಜನೆ ಸೇರಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

Read More

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಯುಪಿಎಸ್ಸಿ ಐಎಎಸ್ 2024 ಪ್ರವೇಶ ಪತ್ರವನ್ನು ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ತಮ್ಮನ್ನು ಯಶಸ್ವಿಯಾಗಿ ನೋಂದಾಯಿಸಿಕೊಂಡ ಮತ್ತು ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುವ ಅರ್ಜಿದಾರರು ಈಗ ಪರೀಕ್ಷಾ ದಿನಾಂಕದಂದು ಅಥವಾ ಅದಕ್ಕೂ ಮೊದಲು ತಮ್ಮ ಪ್ರವೇಶ ಪತ್ರಗಳನ್ನು ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಪೇಪರ್ 1 ಮತ್ತು ಪೇಪರ್ 2 ಗಾಗಿ ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದೆ. ಯುಪಿಎಸ್ಸಿ ಐಎಎಸ್ 2024 ಪರೀಕ್ಷೆ ಜೂನ್ 16 ರಂದು ನಡೆಯಲಿದೆ. ಪೇಪರ್ 1 ಮತ್ತು ಪೇಪರ್ 2 ಗಾಗಿ ಇದನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ. ಯುಪಿಎಸ್ಸಿ ನೀಡುವ ಪ್ರವೇಶ ಪತ್ರದಲ್ಲಿ ನಿರ್ದಿಷ್ಟ ಪರೀಕ್ಷೆಯ ಸಮಯ, ವರದಿ ಮಾಡುವ ಸಮಯ ಮತ್ತು ಪರೀಕ್ಷಾ ದಿನದ ಇತರ ನಿರ್ಣಾಯಕ ಸೂಚನೆಗಳನ್ನು ವಿವರಿಸಲಾಗುತ್ತದೆ. https://upsconline.nic.in/eadmitcard/admitcard_csp_2024/  ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು.

Read More

ಬೆಂಗಳೂರು : ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಮೊಬೈಲ್‌ ಗಳನ್ನು ಚಾರ್ಜ್‌ ಹಾಕುವಾಗ ತುಂಬ ಎಚ್ಚರಿಕೆ ವಹಿಸುವುದು ಅಗತ್ಯವಿದೆ. ಒಂದು ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಫೋಣ್‌ ಬಾಂಬ್‌ ನಂತೆ ಸ್ಪೋಟಗೊಳ್ಳಬಹುದು. ಮೊಬೈಲ್ ನಲ್ಲಿ ಸ್ಫೋಟದ ಹೆಚ್ಚಿನ ಘಟನೆಗಳು ನಕಲಿ ಚಾರ್ಜರ್‌ ಗಳಿಂದ ಸಂಭವಿಸುತ್ತವೆ.ಸಂದರ್ಭದಲ್ಲಿ, ನಿಮ್ಮ ಮೊಬೈಲ್ ಚಾರ್ಜರ್ ಬಗ್ಗೆ ನೀವು ಕಾಳಜಿ ವಹಿಸಬೇಕು. ಮೊಬೈಲ್ ಫೋನ್ ಬ್ಯಾಟರಿಗಳ ಸ್ಫೋಟ ಮತ್ತು ರಕ್ಷಣೆಯ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.‌ ನಿಮ್ಮ ಫೋನ್‌ ಚಾರ್ಜ್‌ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ನಕಲಿ ಚಾರ್ಜರ್, ಬ್ಯಾಟರಿಯನ್ನು ಎಂದಿಗೂ ಬಳಸಬೇಡಿ. ನೀವು ಬ್ರಾಂಡ್ ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಫೋನ್ ಬಳಸುತ್ತಿದ್ದರೆ, ಅದೇ ಬ್ರಾಂಡ್ ಚಾರ್ಜರ್ ಬಳಸಿ. ಚಾರ್ಜರ್ ಪಿನ್ ಒದ್ದೆಯಾಗಲು ಎಂದಿಗೂ ಬಿಡಬೇಡಿ. ಪಿನ್ ಒಣಗಿದ ನಂತರವೇ ಅದನ್ನು ಚಾರ್ಜ್ ಮಾಡಿ. ಫೋನ್ ಬ್ಯಾಟರಿ ಹಾನಿಗೊಳಗಾದರೆ, ತಕ್ಷಣ ಅದನ್ನು ಬದಲಿಸಿ. ಯಾವಾಗಲೂ ಮೂಲ…

Read More

ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಘೋರ ದುರಂತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಬಳಿಯ ತಾಳಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಓರ್ವ ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡವರನ್ನು ಕೊಳ್ಳೆಗಾಲ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆಗೆ ಯತ್ನಿಸಿದವರು ಮೈಸೂರು ಜಿಲ್ಲೆಯ ಕೆ.ಆರ್.‌ ಪೇಟೆ ತಾಲೂಕಿನ ಚಂದಗಾಲು ಗ್ರಾಮದ ಕುಟುಂಬ ಎಂದು ಗುರುತಿಸಲಾಗಿದೆ. ಮಹದೇಶ್ವರ ದರ್ಶನ ಪಡೆದು ವಾಪಸ್‌ ಬರುವಾಗ ಆತ್ಮಹತ್ಯೆಗೆ ಯತ್ನಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಸೇಂಟ್ ಪೀಟರ್ಸ್ಬರ್ಗ್ (ರಷ್ಯಾ): ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ದೊಡ್ಡ ಹೇಳಿಕೆ ನೀಡಿದ್ದಾರೆ. ಎರಡನೇ ಮಹಾಯುದ್ಧದ ನಂತರ ಯುರೋಪಿನ ಭೀಕರ ಸಂಘರ್ಷವು ಪರಮಾಣು ಯುದ್ಧಕ್ಕೆ ಉಲ್ಬಣಗೊಳ್ಳುವುದಿಲ್ಲ ಎಂಬ ಕ್ರೆಮ್ಲಿನ್ ನಿಂದ ಇದು ಬಲವಾದ ಸಂಕೇತವಾಗಿದೆ. ಪುಟಿನ್ ಅವರ ಈ ಘೋಷಣೆಯೊಂದಿಗೆ, ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ಇಡೀ ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಫೆಬ್ರವರಿ 2022 ರಲ್ಲಿ ಉಕ್ರೇನ್ಗೆ ಸೈನ್ಯವನ್ನು ಕಳುಹಿಸಲು ಪುಟಿನ್ ಆದೇಶಿಸಿದಾಗ, ರಷ್ಯಾ ತನ್ನ ರಕ್ಷಣೆಗಾಗಿ ಅಗತ್ಯವಿದ್ದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ಅವರು ಹಲವಾರು ಸಂದರ್ಭಗಳಲ್ಲಿ ಹೇಳಿದ್ದರು. ಆದಾಗ್ಯೂ, ಪುಟಿನ್ ಪರಮಾಣು ದಾಳಿಯ ಕಲ್ಪನೆಯನ್ನು ಪಶ್ಚಿಮದ ಟೀಕೆಗಳಿಗೆ ಕಾರಣವೆಂದು ಹೇಳಿದರು. ಆದರೆ ಉಕ್ರೇನ್ ನೊಂದಿಗಿನ ಯುದ್ಧವನ್ನು ಗೆಲ್ಲಲು ಪರಮಾಣು ದಾಳಿಯ ಅಗತ್ಯವಿಲ್ಲ ಎಂದು ಅವರು ಈಗ ಸ್ಪಷ್ಟಪಡಿಸಿದ್ದಾರೆ. ಸೇಂಟ್ ಪೀಟರ್ಸ್ಬರ್ಗ್ ಇಂಟರ್ನ್ಯಾಷನಲ್ ಎಕನಾಮಿಕ್ ಫೋರಂನ ಪೂರ್ಣ ಅಧಿವೇಶನದಲ್ಲಿ, ರಷ್ಯಾದ ಪ್ರಭಾವಿ ವಿಶ್ಲೇಷಕ ಮಿತಗಾಮಿ ಸೆರ್ಗೆಯ್ ಕರಗನೊವ್ ಪ್ರಶ್ನೆಯನ್ನು ಕೇಳಿದರು: ರಷ್ಯಾ…

Read More