Author: kannadanewsnow57

ಬೀದರ್‌ : ಬೀದರ್‌ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದ್ದು, ದುಷ್ಕರ್ಮಿಗಳು ಅಂತ್ಯಕ್ರಿಯೆ ಮಾಡಿದ ಒಂದೂವರೆ ವರ್ಷದ ಮಗುವಿನ ಶವವನ್ನು ಹೊರಗೆ ತೆಗೆದು ಶವವನ್ನು ಮರಕ್ಕೆ ಕಟ್ಟಿರುವ ಘಟನೆ ನಡೆದಿದೆ. ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅನಾರೋಗ್ಯದಿಂದ ಅಂಬಯ್ಯಸ್ವಾಮಿ ಎಂಬುವರ ಒಂದೂವರೆ ವರ್ಷದ ಮಗು ಮೃತಪಟ್ಟಿತ್ತು. ಬಳಿಕ ನಿನ್ನೆ ಮಗುವನ್ನು ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಶವವನ್ನು ಹೊರಗೆ ತೆಗೆದು ಶವಕ್ಕೆ ಕಪ್ಪು ಬಟ್ಟೆ ಕಟ್ಟಿ ಮರಕ್ಕೆ ಕಟ್ಟಿಹೋಗಿದ್ದಾರೆ. ಇದು ಮಾಟಮಂತ್ರ ಮಾಡುವವರಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು : ಬಡ ವಾಲ್ಮೀಕಿ ಸಮುದಾಯವರಿಗೆ ಸೇರಬೇಕಾಗಿದ್ದ ಹಣವನ್ನು ಹವಾಲಾ ದಂಧೆಕೋರರಿಗೆ ಕಾಂಗ್ರೆಸ್‌ ಸರ್ಕಾರ ತಲುಪಿಸಿದೆ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕುರಿತು ಪೋಸ್ಟ್‌ ಮಾಡಿರುವ ಬಿಜೆಪಿ, ಬಡ ವಾಲ್ಮೀಕಿ ಸಮುದಾಯದವರಿಗೆ ಸೇರಬೇಕಾಗಿದ್ದ ಹಣವನ್ನು ಹವಾಲಾ ದಂಧೆಕೋರರಿಗೆ ತಲುಪಿಸಿದೆ ಕಾಂಗ್ರೆಸ್ ಸರ್ಕಾರ. ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ ಹವಾಲಾ ದಂಧೆಕೋರರು ಭಾಗಿಯಾಗಿದ್ದಾರೆಂದರೆ, ಇದೊಂದು ವ್ಯವಸ್ಥಿತ ರೀತಿಯಲ್ಲಿ ನಡೆದ ಹಗಲುದರೋಡೆ ಎಂಬುದಂತೂ ಸಾಬೀತಾಗಿದೆ ಎಂದು ಕಿಡಿಕಾರಿದೆ. ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಮಾರ್ಗದರ್ಶನವಿಲ್ಲದೆ ಇಂತಹ ವ್ಯವಸ್ಥಿತ ದರೋಡೆ ರಾಜ್ಯದಲ್ಲಿ ನಡೆಯಲು ಸಾಧ್ಯವೇ ಇಲ್ಲ, ನಿಜಕ್ಕೂ ನಿಮಗೆ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ನೀಡಬೇಕೆಂಬ ಕಾಳಜಿ ಇದ್ದರೆ, ಮೊದಲು ನಿಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದೆ.

Read More

ಬೆಂಗಳೂರು ; ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಭೇಟಿಗೆ ಇಂದು ಕುಟುಂಬ ಬಂದಿದ್ದು, ಈ ವೇಳೆ ದರ್ಶನ್‌ ತಾಯಿ ಮೀನಾ ಭಾವುಕರಾಗಿದ್ದಾರೆ.  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ನೋಡಲು ಕುಟುಂಬಸ್ಥರು ಖಾಸಗಿ ವಾಹನದಲ್ಲಿ ಆಗಮಿಸಿದ್ದು,  ದರ್ಶನ್‌ ತಾಯಿ ಮೀನಾ, ಸೋದರ ದಿನಕರ್‌, ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ ಜೈಲಿಗೆ ಭೇಟಿ ನೀಡಿದ್ದಾರೆ. ಜೈಲಿನಲ್ಲಿ ನಟ ದರ್ಶನ್‌ ನೋಡಿ ತಾಯಿ ಮೀನಾ ಭಾವುಕರಾಗಿದ್ದಾರೆ. ದರ್ಶನ್‌ ರನ್ನು ಅಪ್ಪಿ ಮೀನಾ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಸಹೋದರ ದಿನಕರ್‌ ದರ್ಶನ್‌ ಗೆ ಧೈರ್ಯ ತುಂಬಿದ್ದಾರೆ. ಸಹೋದರ ಜೊತೆಗೆ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

Read More

ಪುಣೆ : ಮಹಾರಾಷ್ಟ್ರದ ಲೋನಾವಾಲಾದಲ್ಲಿ ಭಾನುವಾರ ನಿರಂತರ ಮಳೆಯಿಂದಾಗಿ ಭೂಶಿ ಅಣೆಕಟ್ಟು ಉಕ್ಕಿ ಹರಿದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ ಐದು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ 1:30 ಕ್ಕೆ ಈ ಘಟನೆ ನಡೆದಿದ್ದು, ನಂತರ ಶೋಧ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದವು. 2 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಐದು ಜನರು ಪುಣೆ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಪುಣೆ ಎಸ್ಪಿ ಪಂಕಜ್ ದೇಶ್ಮುಖ್ ತಿಳಿಸಿದ್ದಾರೆ. https://twitter.com/i/status/1807435796053385238 ನಾವು 40 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಯ ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಮತ್ತು 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಅವರು ಒಂದೇ ಕುಟುಂಬದ ಭಾಗವೆಂದು ತೋರುತ್ತದೆ ಮತ್ತು ಭೂಶಿ ಅಣೆಕಟ್ಟಿನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತಕ್ಕೆ ಜಾರಿ ಕೆಳಭಾಗದ ಜಲಾಶಯದಲ್ಲಿ ಮುಳುಗಿದರು” ಎಂದು ದೇಶ್ಮುಖ್ ತಿಳಿಸಿದ್ದಾರೆ.…

Read More

ಹಾಸನ : ಹಾಸನದ ಎಸ್‌ ಪಿ ಕಚೇರಿ ಆವರಣದಲ್ಲೇ ಪೊಲೀಸ್‌ ಕಾನ್ಸ್‌ ಟೇಬಲ್‌ ವೊಬ್ಬರು ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಾಸನದ ಎಸ್‌ ಪಿ ಕಚೇರಿ ಎದುರಲ್ಲೇ ಪತ್ನಿಗೆ ನಗರದ ಪೊಲೀಸ್‌ ಠಾಣೆಯ ಕಾನ್ಸ್‌ ಟೇಬಲ್‌ ಲೋಕನಾಥ್‌ ಚಾಕುವಿನಿಂದ ಇರಿದಿದ್ದು, ಇದಿಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಕಾನ್ಸ್‌ ಟೇಬಲ್‌ ಲೋಕನಾಥ್‌ ನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಪತ್ನಿ ಮಮತಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಮಮತಾ ಹಾಗೂ ಲೋಕನಾಥ್‌ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಂದು ಎಸ್‌ ಪಿ ಕಚೇರಿಗೆ ದೂರು ನೀಡಲು ಬಂದ ಪತ್ನಿ ಮಮತಾಗೆ ಲೋಕನಾಥ್‌ ಚಾಕುವಿನಿಂದ ಇರಿದಿದ್ದ.

Read More

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಬಂಧನ ಮತ್ತು ರಿಮಾಂಡ್ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಬಂಧನ ಮತ್ತು ರಿಮಾಂಡ್ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಸಿಬಿಐ ದಾಖಲಿಸಿದ ಪ್ರಕರಣದ ವಿರುದ್ಧ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

Read More

ಹಾಸನ : ಹಾಸನದ ಎಸ್‌ ಪಿ ಕಚೇರಿ ಆವರಣದಲ್ಲೇ ಪೊಲೀಸ್‌ ಕಾನ್ಸ್‌ ಟೇಬಲ್‌ ವೊಬ್ಬರು ಪತ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಹಾಸನದ ಎಸ್‌ ಪಿ ಕಚೇರಿ ಎದುರಲ್ಲೇ ಪತ್ನಿಗೆ ನಗರದ ಪೊಲೀಸ್‌ ಠಾಣೆಯ ಕಾನ್ಸ್‌ ಟೇಬಲ್‌ ಲೋಕನಾಥ್‌ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದು, ಪೊಲೀಸರು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಪತ್ನಿ ಮಮತಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಮಮತಾ ಹಾಗೂ ಲೋಕನಾಥ್‌ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಂದು ಎಸ್‌ ಪಿ ಕಚೇರಿಗೆ ದೂರು ನೀಡಲು ಬಂದ ಪತ್ನಿ ಮಮತಾಗೆ ಲೋಕನಾಥ್‌ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ.

Read More

ಕಲಬುರಗಿ : ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರದ ಕುರಿತಂತೆ ಸಚಿವ ಶಿವರಾಜ್‌ ತಂಗಡಗಿ ಮಹತ್ವದ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಮಾಡೋದು ಹೈಕಮಾಂಡ್‌, ಸ್ವಾಮೀಜಿಗಳು ತಮ್ಮ ವೈಯಕ್ತಿಕ ವಿಚಾರ ಹೇಳಿದ್ದಾರೆ. ಸ್ವಾಮೀಜಿಗಳ ಹೇಳಿಕೆ ಕುರಿತು ಹೆಚ್ಚಿನ ಚರ್ಚೆ ಮಾಡುವುದು ಬೇಡ. ನಮ್ಮ ಹೈಕಮಾಂಡ್‌ ಬಲಿಷ್ಠವಾಗಿದ್ದು, ಸಿಎಂ ಬದಲಾವಣೆ ಮಾಡುವುದು ಹೈಕಮಾಂಡ್‌ ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರ ಕರ್ನಾಟಕ ಕಾಂಗ್ರೆಸ್​ ನಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಒಕ್ಕಲಿಗ ಸ್ವಾಮೀಜಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕೆಂದು ಶ್ರೀಶೈಲ ಜಗದ್ಗುರುಗಳು ಒತ್ತಾಯಿಸಿದ್ದಾರೆ.

Read More

ಬೆಂಗಳೂರು ; ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ ಭೇಟಿಗೆ ಇಂದು ಕುಟುಂಬ ಖಾಸಗಿ ವಾಹನದಲ್ಲೇ ಬಂದಿದ್ದು, ಬಂಧಿಖಾನೆ ಇಲಾಖೆ ಕಾನೂನು ಗಾಳಿಗೆ ತೂರಿದೆ ಎಂಬ ಆರೋಪ ಕೇಳಿಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ನೋಡಲು ಕುಟುಂಬಸ್ಥರು ಖಾಸಗಿ ವಾಹನದಲ್ಲಿ ಆಗಮಿಸಿದ್ದು, ರಾಜಾರೋಷವಾಗಿ ದರ್ಶನ್‌ ಕುಟುಂಬದವರನ್ನು ಜೈಲಿಗೆ ಪ್ರವೇಶ ನೀಡಲಾಗಿದೆ. ದರ್ಶನ್‌ ತಾಯಿ ಮೀನಾ, ಸೋದರ ದಿನಕರ್‌, ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್‌ ಖಾಸಗಿ ವಾಹನದಲ್ಲಿ ಜೈಲಿಗೆ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್‌ ಕುಟುಂಬದವರನ್ನು ಮಾಧ್ಯಮದವರ ಕಣ್ಣುತಪ್ಪಿಸಿ ಖಾಸಗಿ ಕಾರಿನಲ್ಲಿ ಹೆಡ್‌ ಕಾನ್ಸ್‌ ಟೇಬಲ್‌ ವೊಬ್ಬರು ಜೈಲಿನೊಳಗೆ ಕರೆದುಕೊಂಡು ಹೋಗಿದ್ದಾರೆ.

Read More

ಕೊಲಂಬೊ : ಶ್ರೀಲಂಕಾದ ಹಿರಿಯ ರಾಜಕಾರಣಿ ಮತ್ತು ದೇಶದ ತಮಿಳು ಅಲ್ಪಸಂಖ್ಯಾತರ ಪ್ರಚಾರಕ ರಾಜವರೋಥಿಯಂ ಸಂಪಂತನ್ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಸಂಪಂತನ್ ಕಳೆದ 23 ವರ್ಷಗಳಿಂದ ತಮಿಳು ರಾಷ್ಟ್ರೀಯ ಒಕ್ಕೂಟ (ಟಿಎನ್ಎ) ಎಂಬ ವೈವಿಧ್ಯಮಯ ಒಕ್ಕೂಟವನ್ನು ಮುನ್ನಡೆಸಿದರು. ಟಿಎನ್ಎ ಶ್ರೀಲಂಕಾದ ಉತ್ತರ ಮತ್ತು ಪೂರ್ವದ ತಮಿಳರನ್ನು ಪ್ರತಿನಿಧಿಸುವ ಪ್ರಮುಖ ರಾಜಕೀಯ ಗುಂಪು. ಸಂಪಂತನ್ ಅವರ ನಿಧನದ ಸುದ್ದಿಯನ್ನು ಟಿಎನ್ಎ ನಾಯಕ ಎಂ.ಎ.ಸುಮಂತಿರನ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ದೃಢಪಡಿಸಿದ್ದಾರೆ. https://Twitter.com/TNAmediaoffice/status/1807483213859913743?ref_src=twsrc%5Etfw%7Ctwcamp%5Etweetembed%7Ctwterm%5E1807483213859913743%7Ctwgr%5E5e94d2a876c77ad0bb48f01cd6ed0a814f88b38f%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Fmode%3Dpwalangchange%3Dtruelaunch%3Dtrue ಸಂಪಂತನ್ ಅವರನ್ನು 2015 ರಲ್ಲಿ ವಿರೋಧ ಪಕ್ಷದ ನಾಯಕರಾಗಿ ನೇಮಿಸಲಾಯಿತು, 32 ವರ್ಷಗಳಲ್ಲಿ ಸಂಸದೀಯ ಹುದ್ದೆಯನ್ನು ಅಲಂಕರಿಸಿದ ಜನಾಂಗೀಯ ಅಲ್ಪಸಂಖ್ಯಾತ ಗುಂಪಿನ ಮೊದಲ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Read More