Author: kannadanewsnow57

ದಾವಣಗೆರೆ : ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಪ್ರತಾಪ್‌ ಸಹೋದರ ಅಸಹಜ ಸಾವು ಎಂದು ದೂರು ದಾಖಲಿಸಿದ್ದಾರೆ. ಬಿ.ಸಿ.ಪಾಟೀಲ್‌ ಅವರ ಅಳಿಯ ಪ್ರತಾಪ್‌ ಕುಮಾರ್‌ ಅವರು ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣ ಸಂಬಂಧಿಸಿದಂತೆ ಪ್ರತಾಪ್‌ ಕುಮಾರ್‌ ಸಹೋದರ ಪ್ರಭುದೇವ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರತಾಪ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಅಸಹಜ ಸಾವು, ಮದುವೆಯಾಗಿ ೧೬ ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇಂದು ದಾವಣಗೆರೆ ಜಿಲ್ಲೆಯ ಕತ್ತಲಗೆರೆಯಲ್ಲಿ ʻಪ್ರತಾಪ್‌ʼ ಅಂತ್ಯಕ್ರಿಯೆ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಕೆ.ಜಿ ಪ್ರತಾಪ್‌ ಕುಮಾರ್‌ (42) ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬಿ.ಸಿ.ಪಾಟೀಲ್‌ ಅವರ ಪುತ್ರಿ ಸೌಮ್ಯಾ ಪಾಟೀಲ್‌ ರನ್ನು 2008 ರಲ್ಲಿ ವಿವಾಹವಾಗಿದ್ದ ಪ್ರತಾಪ್‌ ಕುಮಾರ್‌ ಹೊನ್ನಾಳಿ ತಾಲೂಕಿನ ಶಿವಮೊಗ್ಗ-ಹರಿಹರ ರಸ್ತೆಯಲ್ಲಿರುವ…

Read More

ಫತೇಪುರ : ಉತ್ತರ ಪ್ರದೇಶದ ಫೇತಪುರದಲ್ಲಿ ಡಕಾಯಿತನೊಬ್ಬ ಜೀವಂತ ಹಾವೊಂದನ್ನು ಹಿಡಿದು ಕಚ್ಚಿ ತಿಂದಿರುವ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಉತ್ತರ ಪ್ರದೇಶದ ಫತೇಪುರದಲ್ಲಿ ಡಕಾಯಿತ ಗಂಗಾ ಪ್ರಸಾದ್ ಕೇವತ್ ಎಂಬ ಡಕಾಯಿತನ ವೀಡಿಯೊ ವೈರಲ್ ಆಗಿದೆ. ಇದರಲ್ಲಿ, ಅವನು ಜೀವಂತ ಹಾವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಜೀವಾವಧಿ ಶಿಕ್ಷೆ ಅನುಭವಿಸಿದ ನಂತರ ಗಂಗಾ ಪ್ರಸಾದ್ ಕೆಲವು ದಿನಗಳ ಹಿಂದೆ ಹೊರಬಂದನು. ನಂತರ ಅವನು ಜೀವಂತ ಹಾವನ್ನು ತಿನ್ನುವ ವೀಡಿಯೊ ವೈರಲ್ ಆದ ನಂತರ, ಪೊಲೀಸರು ತಕ್ಷಣ ತನಿಖೆ ಪ್ರಾರಂಭಿಸಿದರು. ಕಿಶನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕಾದ ಡೇರಾ ಗ್ರಾಮಕ್ಕೆ ಈ ಪ್ರಕರಣ ಸಂಬಂಧಿಸಿದೆ. https://Twitter.com/bstvlive/status/1810272589753061815?ref_src=twsrc%5Etfw%7Ctwcamp%5Etweetembed%7Ctwterm%5E1810272589753061815%7Ctwgr%5E149faaf89ed0e4b5318c40cbbad37e320a09d8b6%7Ctwcon%5Es1_&ref_url=https%3A%2F%2Fkannadadunia.com%2Flive-news%2Fshocking-bhupa-who-was-bitten-and-eaten-by-a-snake-the-video-went-viral%2F ಗಂಗಾ ಪ್ರಸಾದ್ ಡಕಾಯಿತ ಶಂಕರ್ ಕೇವತ್ ಗ್ಯಾಂಗ್ ನ ಸದಸ್ಯನಾಗಿದ್ದ. ಪೊಲೀಸರ ಎನ್ಕೌಂಟರ್ನಲ್ಲಿ ಶಂಕರ್ ಕೇವತ್ ಕೊಲ್ಲಲ್ಪಟ್ಟಿದ್ದ. ಇದರೊಂದಿಗೆ, ಗಂಗಾ ಪ್ರಸಾದ್ ಕೇವತ್ ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದರು. ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ…

Read More

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಮೊಬೈಲ್ ನಮ್ಮ ಜೀವನವನ್ನು ಸುಲಭಗೊಳಿಸಿದೆ. ಇಂದು ಮೊಬೈಲ್ ಮೂಲಕ ಅನೇಕ ಕೆಲಸಗಳನ್ನು ಮಾಡಲಾಗುತ್ತದೆ. ಆದರೆ ಸೈಬರ್ ಅಪರಾಧಿಗಳು ಜನರ ಮೊಬೈಲ್ಗಳನ್ನು ಹ್ಯಾಕ್ ಮಾಡಲು ತಂತ್ರಜ್ಞಾನದ ಲಾಭವನ್ನು ಪಡೆಯುತ್ತಿದ್ದಾರೆ. ಮೊಬೈಲ್ ಅನ್ನು ಹ್ಯಾಕ್ ಮಾಡುವ ಮೂಲಕ, ಅವರು ಬಳಕೆದಾರರ ವೈಯಕ್ತಿಕ ಡೇಟಾವನ್ನು ಸೋರಿಕೆ ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಇಂದು ನಿಮಗೆ ಒಂದು ಟ್ರಿಕ್ ಹೇಳಲಿದ್ದೇವೆ, ಇದು ನಿಮ್ಮ ಮೊಬೈಲ್ ಹ್ಯಾಕರ್ ಗಳ ಗುರಿಯಾಗಿದೆಯೇ ಎಂದು ತಕ್ಷಣವೇ ತಿಳಿಯುತ್ತದೆ. ಫೋನ್ ನಲ್ಲಿ ಹಸಿರು ಲೈಟ್ ಉರಿಯುತ್ತದೆ ಸ್ಮಾರ್ಟ್ಫೋನ್ಗಳಲ್ಲಿ ಅನೇಕ ವೈಶಿಷ್ಟ್ಯಗಳಿವೆ, ಇದನ್ನು ಬಳಸಿಕೊಂಡು ಬಳಕೆದಾರರು ಹ್ಯಾಕಿಂಗ್ ಅನ್ನು ಸುಲಭವಾಗಿ ಪತ್ತೆಹಚ್ಚಬಹುದು. ನಾವು ಫೋನ್ ನ ಮೈಕ್ ಅನ್ನು ಬಳಸುವಾಗ, ಆಂಡ್ರಾಯ್ಡ್ ಫೋನ್ ಮೇಲಿನ ಬಲಭಾಗದಲ್ಲಿ ಹಸಿರು ಚುಕ್ಕೆಯ ಆಯ್ಕೆಯನ್ನು ಪಡೆಯುತ್ತದೆ ಎಂದು ನೀವು ಗಮನಿಸಿರಬಹುದು. ಮತ್ತೊಂದೆಡೆ, ನೀವು ಫೋನ್ ಬಳಸದಿದ್ದರೆ ಅಥವಾ ಮೈಕ್ ಅನ್ನು ಪ್ರವೇಶಿಸದಿದ್ದರೆ, ಅದರ ನಂತರವೂ, ಮೇಲಿನ ಬಲಭಾಗದಲ್ಲಿ…

Read More

ಬೆಗಳೂರು : ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಇಷ್ಟು ದಿನ ಮಹಿಳೆಯರಿಗೆ 2000 ನೀಡುತ್ತಾ ಬಂದಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಲಿಂಗತ್ವ ಅಲ್ಪಸಂಖ್ಯಾತರಿಗೂ ಕೂಡ ಇನ್ನು ಮುಂದೆ ಅವರ ಖಾತೆಗೆ 2,000 ಹಣ ಬರಲಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ ನೀಡಲಾಗಿದ್ದು, ರಾಜ್ಯ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಯನ್ನು ಪರಿಗಣಿಸಲು ಸರ್ಕಾರವು ಅನುಮೋದನೆ ನೀಡಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಿದೆ. ಅದರಂತೆ ಇನ್ನು ಮುಂದೆ ಮಹಿಳೆಯರ ಜೊತೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಕೂಡ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆ ಅಡಿ ಅವರ ಖಾತೆಗೆ 2000 ಹಣ ಬಂದು ಬೀಳಲಿದೆ. ಅದರಿಂದ ಸಹಜವಾಗಿ ಲಿಂಗತ ಅಲ್ಪಸಂಖ್ಯಾತರ ಆರ್ಥಿಕ ಮಟ್ಟ ಸುಧಾರಿಸುತ್ತದೆ ಎಂದು ಹೇಳಲಾಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ? ಲಿಂಗತ್ವ ಅಲ್ಪಸಂಖ್ಯಾತ ಯೋಜನೆಯಡಿ ಪ್ರಯೋಜನ ಪಡೆಯಲು ಅನುವಾಗುವಂತೆ ಗೃಹಲಕ್ಷ್ಮೀ ಯೋಜನೆಯ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವಾಗ Na- tional Portal For…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಡುರಸ್ತೆಯಲ್ಲೇ ಬಿಎಂಟಿಸಿ ಬಸ್‌ ಹೊತ್ತಿ ಉರಿದ ಘಟನೆ ನಡೆದಿದೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಬಿಎಂಟಿಸಿ ಬಸ್‌ ಹೊತ್ತು ಉರಿದಿರುವ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Read More

ನವದೆಹಲಿ : ಮುಂಬರುವ ದಿನಗಳಲ್ಲಿ ಟಿವಿ ನೋಡುವುದು ಅಗ್ಗವಾಗಬಹುದು. ಇದಕ್ಕೆ ಕಾರಣವೆಂದರೆ ಟೆಲಿಕಾಂ ನಿಯಂತ್ರಕ ಟ್ರಾಯ್ ವಿತರಣಾ ಪ್ಲಾಟ್ಫಾರ್ಮ್ ಆಪರೇಟರ್ಗಳು (ಡಿಪಿಒಗಳು) ಚಾನೆಲ್ಗಳ ಗುಚ್ಛದಲ್ಲಿ ಗ್ರಾಹಕರಿಗೆ ನೀಡುವ ರಿಯಾಯಿತಿಯ ಮಿತಿಯನ್ನು ಶೇಕಡಾ 45 ಕ್ಕೆ ಹೆಚ್ಚಿಸಿದೆ. ಈಗ ಈ ವಿನಾಯಿತಿ ಮಿತಿ ಶೇಕಡಾ 15 ರಷ್ಟಿತ್ತು. ಟ್ರಾಯ್ ₹ 130 ರ ಮಿತಿಯನ್ನು ತೆಗೆದುಹಾಕಿದೆ ಮತ್ತು ಪ್ರಸಾರಕರು ಈಗ 45 ಪ್ರತಿಶತದಷ್ಟು ರಿಯಾಯಿತಿ ನೀಡಿದ್ದಾರೆ. ಟ್ರಾಯ್ ಹೊರಡಿಸಿದ ಸುಂಕ ಆದೇಶದ ಪ್ರಕಾರ, ಡಿಪಿಒಗಳು ವಿಧಿಸುವ ನೆಟ್ವರ್ಕ್ ಸಾಮರ್ಥ್ಯ ಶುಲ್ಕದ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ. ಡಿಪಿಒಗಳು ಈಗ ಚಾನೆಲ್ ಗಳ ಸಂಖ್ಯೆ, ಪ್ರದೇಶ ಮತ್ತು ಚಂದಾದಾರರ ವರ್ಗದ ಆಧಾರದ ಮೇಲೆ ನೆಟ್ ವರ್ಕ್ ಶುಲ್ಕವನ್ನು ವಿಧಿಸಲು ಸಾಧ್ಯವಾಗುತ್ತದೆ. ಪ್ರಸ್ತುತ, ಡಿಪಿಒಗಳು 200 ಚಾನೆಲ್ಗಳಿಗೆ 130 ರೂ ಮತ್ತು 200 ಕ್ಕೂ ಹೆಚ್ಚು ಚಾನೆಲ್ಗಳಿಗೆ 160 ರೂ.ಗಳನ್ನು ನೆಟ್ವರ್ಕ್ ಶುಲ್ಕವಾಗಿ ವಿಧಿಸುತ್ತಾರೆ. ಈಗ ಪ್ರಸಾರಕರು ಈ ಶುಲ್ಕವನ್ನು ತಮ್ಮದೇ ಆದ ರೀತಿಯಲ್ಲಿ ನಿಗದಿಪಡಿಸಬಹುದು. ದೂರದರ್ಶನದಂತಹ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಡುರಸ್ತೆಯಲ್ಲೇ ಬಿಎಂಟಿಸಿ ಬಸ್‌ ಹೊತ್ತಿ ಉರಿದ ಘಟನೆ ನಡೆದಿದೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಬಿಎಂಟಿಸಿ ಬಸ್‌ ಹೊತ್ತು ಉರಿದಿರುವ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Read More

ಬಿಹಾರ : ಬಿಹಾರದ ಬೆಗುಸರಾಯ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳಿಗ್ಗೆ ಹತಿದಾ ಜಂಕ್ಷನ್ನಿಂದ ಬೇಗುಸರಾಯ್ ಕಡೆಗೆ ಐದು ಜನರನ್ನು ಕರೆದೊಯ್ಯುತ್ತಿದ್ದ ಆಟೋ ರಿಕ್ಷಾ ಈ ಅಪಘಾತ ಸಂಭವಿಸಿದೆ. ಆಟೋ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸೇರಿದಂತೆ ಆಟೋದಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ. ವಿವರಗಳ ಪ್ರಕಾರ, ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಇನ್ನೂ ಗುರುತಿಸಲಾಗಿಲ್ಲ. ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಮತ್ತು ಸಾವನ್ನಪ್ಪಿದವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.

Read More

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಕೊಲೆ ಆರೋಪಿಗಳ 9 ವಾಹನಗಳನ್ನು ಸೀಜ್‌ ಮಾಡಿದ್ದು, ವಾಹನಗಳ ಕುರಿತು ಮಾಹಿತಿ ನೀಡುವಂತೆ ಆರ್‌ ಟಿಒ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ರೇಣುಕಾಸ್ವಾಮಿ ಕೊಲೆ ಬಳಿಕ ಶವ ಸಾಗಿಸಲು ಬಳಸಿದ್ದ ವಾಹನ ಸೇರಿದಂತೆ ಬೈಕ್‌, ಸ್ಕಾರ್ಪಿಯೋ ಕಾರು ಸೇರಿದಂತೆ 9 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದೀಗ ಈ ವಾಹನಗಳ ಮಾಲೀಕರು ಯಾರು? ವಾಹನಗಳು ಯಾರ ಹೆಸರಿನಲ್ಲಿವೆ ಎಂದು ಮಾಹಿತಿ ನೀಡುವಂತೆ ಆರ್‌ ಟಿಒಗೆ ಪತ್ರ ಬರೆಯಲಾಗಿದೆ. ರಾಜಾಜೀನಗರ, ಯಶವಂತಪುರ, ಕೋರಮಂಗಲ, ಇಂದಿರಾನಗರ ಹಾಗೂ ತುಮಕೂರಿನ ಆರ್‌ ಟಿಒ ಕಚೇರಿಗೆ ಪತ್ರ ಬರೆದಿರುವ ಕಾಮಾಕ್ಷಿ ಪಾಳ್ಯ ಪೊಲೀಸರು ವಾಹನಗಳ ಮಾಲೀಕರ ಕುರಿತು ಮಾಹಿತಿ ನೀಡವಂತೆ ಕೋರಿದೆ.

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದ್ದು, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ ಶಿವಮೊಗ್ಗ ಬಿ ಉಪ ವಿಭಾಗದ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಬಂಧಿಸಲು ಹೋದ ವೇಳೆ ಆರೋಪಿ ರಜಾಕ್‌ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ ಈ ವೇಳೆ ಪೊಲೀಸರು ಆರೋಪಿ ರಜಾಕ್‌ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ರಜಾಕ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಬಂಧಿಸಲು ಹೋದ ವೇಳೆ ಪೊಲೀಸ್‌ ಸಿಬ್ಬಂದಿ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಹೀಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದು, ಸದ್ಯ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಆರೋಪಿಯನ್ನು ದಾಖಲಿಸಲಾಗಿದೆ.

Read More