Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು ಜುಲೈ 31, ಗುರುವಾರ ವಾಣಿಜ್ಯ LPG ಸಿಲಿಂಡರ್ಗಳ ಬೆಲೆ ಕಡಿತವನ್ನು ಘೋಷಿಸಿದ್ದು, ಬೃಹತ್ ಅಡುಗೆ ಇಂಧನವನ್ನು ಅವಲಂಬಿಸಿರುವ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಪರಿಹಾರವನ್ನು ನೀಡುತ್ತಿವೆ. 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ನ ಬೆಲೆಯನ್ನು ಸುಮಾರು 33.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ವಾಣಿಜ್ಯ LPG ಸಿಲಿಂಡರ್ನ ಹೊಸ ಬೆಲೆ ಆಗಸ್ಟ್ 1 ರ ಇಂದಿನಿಂದ ಜಾರಿಗೆ ಬರಲಿದೆ. ಪರಿಷ್ಕೃತ ಬೆಲೆಗಳು ದೈನಂದಿನ ಕಾರ್ಯಾಚರಣೆಗಳಿಗೆ ಈ ಸಿಲಿಂಡರ್ಗಳನ್ನು ಬಳಸುವ ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತವೆ. ಆದಾಗ್ಯೂ, ದೇಶೀಯ LPG ಸಿಲಿಂಡರ್ ದರಗಳಲ್ಲಿ ಅಂತಹ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಮನೆಗಳಿಗೆ ಸ್ವಲ್ಪ ಪರಿಹಾರವಿದೆ. ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳನ್ನು ನೋಡೋಣ (ಆಗಸ್ಟ್ 1, 2025) ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ, ಆಗಸ್ಟ್ 1 ರಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ 1,631.50 ರೂ.…
ಬೆಂಗಳೂರು: ಆಗಸ್ಟ್.1ರ ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಲ್ಲಿ ಆಟೋ ಮೀಟರ್ ದರವನ್ನು ಪರಿಷ್ಕರಿಸಿ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಮೂಲಕ ಬೆಂಗಳೂರಲ್ಲಿ ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಸರ್ಕಾರದ ಅಧಿಕೃತ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಕುರಿತು ಕೂಲಂಕುಶವಾಗಿ ಪರಿಶೀಲಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ದರಗಳನ್ನು ಪರಿಷ್ಕರಿಸಿದೆ. ದಿನಾಂಕ 01-08-2025ರಿಂದ ನೂತನ ದರಗಳು ಜಾರಿಗೆ ಬರಲಿದೆ ಎಂದಿದೆ. ಆಗಸ್ಟ್.1ರಿಂದ ಆಟೋ ಮೀಟರ್ ದರ ಎಷ್ಟು ಹೆಚ್ಚಳ ಗೊತ್ತಾ.? ಆಗಸ್ಟ್.1, 2025ರಿಂದ ಜಾರಿಗೆ ಬರುವಂತೆ ಕನಿಷ್ಠ ದರ ಮೊದಲ 2 ಕಿಲೋಮೀಟರ್ ಗೆ ರೂ.36 ನಿಗದಿ ಪಡಿಸಲಾಗಿದೆ. ಅದು ಮೂರು ಜನ ಪ್ರಯಾಣಿಕರಿಗೆ. ಈ ನಂತ್ರ ಪ್ರತಿ ಕಿಲೋಮೀಟರ್ ಗೆ ರೂ.18ಗಳನ್ನು ಮೂರು ಜನ ಪ್ರಯಾಣಿಕರು ತೆರಳೋದಕ್ಕೆ…
ನವದೆಹಲಿ : ಆಗಸ್ಟ್ 2025 ನಿಮ್ಮ ಮಾಸಿಕ ವೆಚ್ಚಗಳ ಮೇಲೆ ಪರಿಣಾಮ ಬೀರುವ ಹಲವಾರು ಆರ್ಥಿಕ ಬದಲಾವಣೆಗಳನ್ನು ತರುತ್ತಿದೆ. ಕ್ರೆಡಿಟ್ ಕಾರ್ಡ್ ನೀತಿಗಳಿಂದ ಹಿಡಿದು UPI ನಿಯಮಗಳು ಮತ್ತು LPG ಬೆಲೆಗಳವರೆಗೆ, ಆರು ಪ್ರಮುಖ ನವೀಕರಣಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿವೆ. ಜುಲೈ ತಿಂಗಳು ಕೊನೆಗೊಳ್ಳುತ್ತಿದ್ದಂತೆ ಆಗಸ್ಟ್ನಿಂದ ಹಲವಾರು ಮಹತ್ವದ ಬದಲಾವಣೆಗಳು ಸಂಭವಿಸಲಿವೆ, ಅದು ಜನರ ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಆಗಸ್ಟ್ 1 ರಿಂದ ನಿಯಮ ಬದಲಾವಣೆಗಳು LPG ಬೆಲೆಗಳಲ್ಲಿ ಬದಲಾವಣೆ ಸಾಧ್ಯತೆ ಜುಲೈ 1 ರಂದು, ವಾಣಿಜ್ಯ LPG ಸಿಲಿಂಡರ್ಗಳ ಬೆಲೆಯನ್ನು ₹60 ರಷ್ಟು ಕಡಿತಗೊಳಿಸಲಾಯಿತು. ಈಗ, ಆಗಸ್ಟ್ 1 ರಿಂದ ದೇಶೀಯ LPG ಸಿಲಿಂಡರ್ಗಳ ಬೆಲೆ ಕಡಿತದ ನಿರೀಕ್ಷೆಯಲ್ಲಿ ಗ್ರಾಹಕರು ಇದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ, ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಹಲವು ಬಾರಿ ಪರಿಷ್ಕರಿಸಲಾಗಿದೆ, ಆದರೆ ದೇಶೀಯ LPG ದರಗಳು ಹೆಚ್ಚಾಗಿ ಒಂದೇ ಆಗಿವೆ. ಈ ಬದಲಾವಣೆಯು ಮನೆಯ ಬಜೆಟ್ಗಳಿಗೆ ಪರಿಹಾರವನ್ನು ತರಬಹುದು – ಅಥವಾ…
ಕೃಷಿ ಜಮೀನುಗಳ ಮಾಲೀಕರು ಮೃತರಾದಲ್ಲಿ ಸದರಿ ಜಮೀನನ್ನು ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರಸ್ತುತ ಸರಕಾರದಿಂದ ಇ-ಪೌತಿ ಆಂದೋಲನದ ಮೂಲಕ ಶಿವಮೊಗ್ಗ ತಾಲ್ಲೂಕಿನ ಜಮೀನುಗಳನ್ನು ಉಚಿತವಾಗಿ ವಾರಸತ್ವದ ವಂಶಾವಳಿ ಪ್ರಕಾರ ಪಹಣಿ ಪತ್ರಿಕೆ ಮಾಡಿಕೊಡಲಾಗುತ್ತಿದೆ. ಈ ರೀತಿಯ ಜಮೀನುಗಳನ್ನು ವಾರಸುದಾರರು ಕೂಡಲೇ ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ವಾರಸುದಾರರ ಆಧಾರ್ ಕಾರ್ಡ್ ಇತ್ಯಾದಿ ಪೂರಕ ಎಲ್ಲಾ ದಾಖಲೆಗಳನ್ನು ತಮ್ಮ ಗ್ರಾಮಕ್ಕೆ ಸಂಬAಧಿಸಿದ ಗ್ರಾಮ ಆಡಳಿತಾಧಿಕಾರಿಗಳ ಹತ್ತಿರ ಸಲ್ಲಿಸಿ ಭೂ ಮಾಲೀಕರು ಮೃತರಾಗಿರುವ ಜಮೀನುಗಳ ವಾರಸುದಾರರಿಗೆ ಖಾತೆಯನ್ನು ಉಚಿತವಾಗಿ ಇ-ಪೌತಿ ಆಂದೋಲನದ ಮೂಲಕ ಪಹಣಿ ಮಾಡಿಸಿಕೊಳ್ಳಬಹುದಾಗಿರುತ್ತದೆ. ಸಾರ್ವಜನಿಕರು ಈ ಬಗ್ಗೆ ಮದ್ಯವರ್ತಿಗಳಿಗೆ ಅವಕಾಶ ಕೊಡದೇ ನೇರವಾಗಿ ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳನ್ನು ಹಾಗೂ ರಾಜಸ್ವ ನಿರೀಕ್ಷಕರನ್ನು ಭೇಟಿ ಮಾಡಿ ಉಚಿತವಾಗಿ ನಿಮ್ಮ ಜಮೀನಿನ ಖಾತೆಯನ್ನು ಬದಲಾಯಿಸಿಕೊಳ್ಳಲು ತಿಳಿಸಿದೆ. ಇ-ಪೌತಿ ಆಂದೋಲನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಇ-ಪೌತಿ…
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶೋಧಕಾರ್ಯದ ವೇಳೆ ಸಿಕ್ಕ ಡೆಬಿಟ್ ಕಾರ್ಡ್ ನ ರಹಸ್ಯ ಬಯಲಾಗಿದ್ದು, ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಹೌದು, ಧರ್ಮಸ್ಥಳದಲ್ಲಿ ಶವಗಳ ಶೋಧಕಾರ್ಯದ ವೇಳೆ ಪಾಯಿಂಟ್ 1 ರಲ್ಲಿ ಸಿಕ್ಕಿದ್ದ ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್ ನ ರಹಸ್ಯ ಬಯಲಾಗಿದ್ದು, ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದಾರೆ. ಪ್ಯಾನ್ ಕಾರ್ಡ್ ವಾರಸುದಾರ ನೆಲಮಂಗಲ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ. ಕಳೆದ ಮಾರ್ಚ್ ನಲ್ಲಿ ಪ್ಯಾನ್ ಕಾರ್ಡ್ ವಾರಸುದಾರ ಮೃತಪಟ್ಟಿದ್ದರು. ಇನ್ನೂ ಇಂದು 6ನೇ ಪಾಯಿಂಟ್ ನಲ್ಲಿ 12 ಮೂಳೆಗಳು ಪತ್ತೆಯಾಗಿವೆ, ಕೈ, ಕಾಲಿನ 2 ಮೂಳೆ ಸೇರಿದಂತೆ ಇತರೆ ಸಣ್ಣ ಮೂಳೆಗಳು ಪತ್ತೆಯಾಗಿವೆ, ಬುರಡೆಯ ಎರಡು ತುಂಡುಗಳು ಪತ್ತೆಯಾಗಿವೆ. ಮೂಳೆ, ಬುರುಡೆಯ ತುಂಡು ಸಂರಕ್ಷಿಸಿ ಎಫ್ ಎಸ್ ಎಲ್ ತಂಡ ಕೊಂಡೊಯ್ಯಲಿದೆ. ಯಾವುದೇ ಸಾಕ್ಷ್ಯ ನಾಶವಾಗದಂತೆ ಎಸ್ ಐಟಿಯಿಂದ ಕಟ್ಟೆಚ್ಚರ, ಗುಂಡಿಯೊಳಗೆ ನೀರು ತುಂಬಿದರೆ ಸಾಕ್ಷ್ಯ ನಾಶವಾಗುವ ಆತಂಕದ ಹಿನ್ನೆಲೆಯಲ್ಲಿ 6ನೇ ಪಾಯಿಂಟ್…
ಆಗಸ್ಟ್ 8 ರಿಂದ ರಾಯಚೂರು ಜಿಲ್ಲೆಯಲ್ಲಿ ನಡೆಯಲಿರುವ ಅಗ್ನಿವೀರ್ ಸೇನಾ ನೇಮಕಾತಿಗೆ ಕೊಪ್ಪಳ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ಹಾಜರಾಗುವಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ದಾರಾಮೇಶ್ವರ ಅವರು ತಿಳಿಸಿದ್ದಾರೆ. ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯಿಂದ ಅಗ್ನಿವೀರ್ ನೇಮಕಾತಿಯಡಿ ರಾಜ್ಯದ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಈ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು www.joinindianarmy.nic.in ನಲ್ಲಿ ಪ್ರಕಟಿಸಲಾಗಿದ್ದು, ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೇ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಕೊಪ್ಪಳ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ತಮ್ಮ ಪ್ರವೇಶ ಪತ್ರವನ್ನು ಪಡೆದುಕೊಂಡು ಆಗಸ್ಟ್ 8 ರಿಂದ ಆ. 25ರ ವರೆಗೆ ರಾಯಚೂರು ಜಿಲ್ಲೆಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯುವ ಸೇನಾ ನೇಮಕಾತಿಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನ 2ನೇ ಹಂತದ ಮನೆಯಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಯುವತಿಯರಿಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ಮೈಕೋ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಸಿಹಿಸುದ್ದಿ ನೀಡಿದ್ದು, ತಾಲ್ಲೂಕು ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಗು ಸೇವೆಯು ದಿನವಿಡೀ ಲಭ್ಯವಿರಬೇಕು ಎಂಬ ವ್ಯವಸ್ಥೆ ತರಲು ನಿರ್ಧಾರ ಮಾಡಲಾಗಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಇಬ್ಬರು ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರು, ಮಕ್ಕಳ ತಜ್ಞರನ್ನು ನೇಮಿಸಲಾಗುತ್ತದೆ. ರಾಜ್ಯದಲ್ಲಿ ಖಾಲಿ ಇರುವ 223 ವೈದ್ಯರು, 400 ಫಾರ್ಮಸಿಸ್ಟ್ ಟೆಕ್ನಿಷಿಯನ್ಸ್, 1300 ಪಿಎಚ್ಸಿಒ, ಆರೋಗ್ಯ ನಿರೀಕ್ಷಕರ ನೇಮಕಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದ್ದಾರೆ. ಓಲಾ, ಉಬರ್ ಆ್ಯಪ್ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಆಂಬ್ಯುಲೆನ್ಸ್ ಸೇವಾ ಗ್ರಾಹಕರಿಗೂ ನೀಡಬೇಕಿದೆ. ಈ ನಿಟ್ಟಿನಲ್ಲಿ ಪಾರದರ್ಶಕ ಆಯ್ಕೆ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಜೊತೆಗೆ ಖಾಸಗಿ ಸಂಸ್ಥೆ ಮೂಲಕ ನಡೆಸುತ್ತಿರುವ 108 ಆರೋಗ್ಯ ಸೇವೆಯನ್ನು ಕೂಡ ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲಾಗುವುದು. ಮುಂದೆ ಈ ವಾಹನಗಳು ಡಿಸಿ, ಸಿಇಒ, ಡಿಎಚ್ಒ ಕಂಟ್ರೋಲ್ನಲ್ಲಿ ಇರಲಿವೆ ಎಂದು ತಿಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ…
ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಗೃಹಲಕ್ಷ್ಮೀಯರಿಗೆ ಶಕ್ತಿ ತುಂಬಲು ಜಂಟಿ ಹೊಣೆಗಾರಿಕೆ ಗುಂಪು ರಚನೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಗೃಹಲಕ್ಷ್ಮಿಯರಿಗೆ ಇನ್ನಷ್ಟು ಆರ್ಥಿಕ ಶಕ್ತಿ ತುಂಬಲು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮಾದರಿಯಲ್ಲಿ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಲಾಗುವುದು. ಗೃಹಲಕ್ಷ್ಮಿ ಯೋಜನೆ ಈಗಾಗಲೇ ಜನಪ್ರಿಯಗೊಂಡಿದ್ದು, ಫಲಾನುಭವಿಗಳನ್ನು ಒಳಗೊಂಡ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಲು ನಿರ್ಧರಿಸಲಾಗಿದೆ. ಆರಂಭದಲ್ಲಿ ಪ್ರಾಯೋಗಿಕವಾಗಿ 500 ಗುಂಪುಗಳನ್ನು ರಚಿಸಲಾಗುವುದು. ಆಗಸ್ಟ್ 2ರಂದು ನಡೆಯಲಿರುವ ಅಂಗನವಾಡಿ ಕೇಂದ್ರಗಳ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೇಕರಿ ರಘು ಹಾಗೂ ಯಶಸ್ವಿನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಟ ಪ್ರಥಮ್ ಗೆ ಡ್ರ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ರೌಡಿಶೀಟರ್ ಗಳಾದ ಬೇಕರಿ ರಘು ಹಾಗೂ ಯಶಸಿನಿ ಇಂದು ದೊಡ್ದಬಳ್ಳಾಪುರ ಗ್ರಾಮಾಂತರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಆರೋಪಿಗಳು ಬಳಿಕ ದೊಡ್ಡಬಳ್ಳಾಪುರ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ದೊಡ್ಡಬಳ್ಳಾಪುರ ಜಿಲ್ಲಾ ಸೆಷನ್ಸ್ ಕೋರ್ಟ್ ಅರ್ಜಿ ವಿಚಾರಣೆ ನಡೆಸಿದ್ದು, ಬಳಿಕ ಜಾಮೀನು ಮಂಜೂರು ಮಾಡಿದೆ.