Author: kannadanewsnow57

ಬೆಂಗಳೂರು : ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅ.4ರಿಂದ 10ರವರೆಗೆ ಉತ್ತಮ ಮಳೆಯಾಗಲಿದೆ. ಈ ಅವಧಿಯಲ್ಲಿ ಕೆಲವೆಡೆ ಮಳೆಗಿಂತ ಬಿರುಗಾಳಿ ಜಾಸ್ತಿ ಇರಲಿದೆ ಎಂದು ಇಲಾಖೆ ಮಾಹಿತಿ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್. ಗದಗ, ಹಾವೇರಿ, ಕೊಪ್ಪಳ, ಯಾದಗಿರಿಯಲ್ಲಿ ಭಾರಿ ಮಳೆಯಾಗಲಿದೆ. ಮುಂದಿನ ಒಂದು ವಾರ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗುವ ಸಂಭವ ಇದ್ದು, ಇಂದಿನಿಂದ 5 ದಿನ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.

Read More

ಬೆಂಗಳೂರು: ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ / ಡಿಪ್ಲೊಮಾ ಕೋರ್ಸುಗಳ ಪ್ರವೇಶಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅ.4ರಿಂದ (ಬೆ. 11) ಅ.9 (ಬೆಳಿಗ್ಗೆ 11) ರೊಳಗೆ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ನೀಟ್-ಪಿಜಿ 2025ರಲ್ಲಿ ಅರ್ಹತೆ ಪಡೆದಿರುವ ಹಾಗೂ ಅರ್ಹತಾ ಮಾನದಂಡಗಳನ್ನು ಪೂರೈಸುವ ಕರ್ನಾಟಕ ಸೇವಾನಿರತ ಅರ್ಹ ಅಭ್ಯರ್ಥಿಗಳಿಂದ 2025-26ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ ಸ್ನಾತಕೋತ್ತರ ಡಿ ಎನ್ ಬಿ ಹಾಗೂ ಡಿಪ್ಲೊಮಾ ವೈದ್ಯಕೀಯ ಕೋರ್ಸುಗಳಿಗೂ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಶುಕ್ರವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳು, ಖಾಸಗಿ ಮತ್ತು ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಾಗುವ ಸರ್ಕಾರಿ ಕೋಟಾ ಸೀಟುಗಳು ಮತ್ತು ಖಾಸಗಿ ಮತ್ತು ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳಲ್ಲಿನ ಖಾಸಗಿ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ನೋಂದಣಿ ಶುಲ್ಕ, ದಾಖಲಾತಿ ಪರಿಶೀಲನೆಯ ವಿವರಗಳು,…

Read More

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ, ಇದು ಇಂದಿನಿಂದ (ಅಕ್ಟೋಬರ್ 4) ಜಾರಿಗೆ ಬರುತ್ತದೆ. ಈಗ, ಚೆಕ್‌ಗಳನ್ನು ಠೇವಣಿ ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.  ಹೌದು, ಹಿಂದೆ, ಚೆಕ್ ಕ್ಲಿಯರೆನ್ಸ್‌ಗಳು ಎರಡು ದಿನಗಳವರೆಗೆ ತೆಗೆದುಕೊಳ್ಳುತ್ತಿದ್ದವು. ಆರ್‌ಬಿಐನ ಹೊಸ ಮಾರ್ಗಸೂಚಿಗಳ ಪ್ರಕಾರ, ಅಕ್ಟೋಬರ್ 4 ರಿಂದ ಪ್ರಾರಂಭಿಸಿ, ಎಲ್ಲಾ ಬ್ಯಾಂಕುಗಳು ಒಂದೇ ದಿನದೊಳಗೆ ಚೆಕ್‌ಗಳನ್ನು ತೆರವುಗೊಳಿಸಬೇಕಾಗುತ್ತದೆ. ಒಂದೇ ಪ್ರಸ್ತುತಿ ಅವಧಿ ಇರುತ್ತದೆ ಎಂದು ಆರ್‌ಬಿಐ ಹೇಳಿದೆ, ಅಲ್ಲಿ ಚೆಕ್‌ಗಳನ್ನು ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ ಪ್ರಸ್ತುತಪಡಿಸಬೇಕು. ಸ್ವೀಕರಿಸುವ ಬ್ಯಾಂಕ್ ಚೆಕ್ ಅನ್ನು ಸ್ಕ್ಯಾನ್ ಮಾಡಿ ಕ್ಲಿಯರೆನ್ಸ್ ಹೌಸ್‌ಗೆ ಕಳುಹಿಸುತ್ತದೆ. ನಂತರ ಕ್ಲಿಯರೆನ್ಸ್ ಹೌಸ್ ಚೆಕ್‌ನ ಚಿತ್ರವನ್ನು ಪಾವತಿಸುವ ಬ್ಯಾಂಕ್‌ಗೆ ಕಳುಹಿಸುತ್ತದೆ. ಇದರ ನಂತರ, ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ ದೃಢೀಕರಣ ಅಧಿವೇಶನ ನಡೆಯಲಿದೆ. ಕ್ಲಿಯರಿಂಗ್ ಬ್ಯಾಂಕ್ ಚೆಕ್‌ನಲ್ಲಿ ಧನಾತ್ಮಕ ಅಥವಾ…

Read More

ನವದೆಹಲಿ : ಉದ್ಯೋಗಾಕಾಂಕ್ಷಿಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ (SSC) ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ 7,565 ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೋರಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯಡಿಯಲ್ಲಿ ಒಟ್ಟು 7,565 ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಯಾವುದೇ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಯಾವುದೇ ಕೋರ್ಸ್ನಲ್ಲಿ ಇಂಟರ್ಮೀಡಿಯೇಟ್ ಉತ್ತೀರ್ಣರಾದ ನಿರುದ್ಯೋಗಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ನಲ್ಲಿ ವಿಳಂಬವಿಲ್ಲದೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರಗಳು ಇಂತಿವೆ.. ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಪುರುಷ ಹುದ್ದೆಗಳು: 4,408 ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಮಹಿಳಾ ಹುದ್ದೆಗಳು: 2,496 ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಪುರುಷ (ಮಾಜಿ ಸೈನಿಕರು – ಇತರರು) ಹುದ್ದೆಗಳು: 285 ಕಾನ್ಸ್ಟೇಬಲ್ (ಕಾರ್ಯನಿರ್ವಾಹಕ) ಪುರುಷ (ಮಾಜಿ ಸೈನಿಕರು – ಕಮಾಂಡೋ) ಹುದ್ದೆಗಳು: 376 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಇಂಟರ್ಮೀಡಿಯೇಟ್ ಉತ್ತೀರ್ಣರಾಗಿರಬೇಕು. ದೆಹಲಿ ಪೊಲೀಸ್ ಸಿಬ್ಬಂದಿಯ ಮಕ್ಕಳು,…

Read More

ಬಾಗಲಕೋಟೆ: ಗಣತಿ ಕಾರ್ಯಕ್ಕೆ ಹೋದ ಶಿಕ್ಷಕಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ತಾಲೂಕಿನ ಬೋಡನಾಯಕನದಿನ್ನಿ ಕ್ರಾಸ್ ಬಳಿ ನಡೆದಿದೆ. ದಾನಮ್ಮ ವಿಜಯಕುಮಾರ ನಂದರಗಿ (52) ಸಾವನ್ನಪ್ಪಿರುವ ಶಿಕ್ಷಕಿ. ಗಣತಿ ಕಾರ್ಯ ಮುಗಿಸಿಕೊಂಡು ಪುತ್ರನ ಜೊತೆ ಮನೆ ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ತಾಲೂಕಿನ ರಾಂಪುರ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ದಾನಮ್ಮ ನಂದರಗಿ (45) ಮೃತ ಶಿಕ್ಷಕಿ. ಬಾಗಲಕೋಟೆ ತಾಲೂಕಿನ ಸೀತಿಮನಿ ಗ್ರಾಮಕ್ಕೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಪುತ್ರನ ಜೊತೆ ಬೈಕ್‌ ಮೇಲೆ ಬಾಗಲಕೋಟೆಯತ್ತ ಬರು ವಾಗ ಬೋಡನಾಯಕನದಿನ್ನಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಬೈಕ್‌ ಉರುಳಿ ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿದ್ದಾರೆ.

Read More

ಬೆಂಗಳೂರು : ರಾಜ್ಯದ ಎಲ್ಲಾ ಮಲ್ಟಿಫ್ಲೆಕ್ಸ್‍ಗಳಲ್ಲಿ ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ 200 ರೂ.ಗಳ ದರ ಮಿತಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ಮುಂದುವರಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನ ಪೀಠದಲ್ಲಿ ದಾಖಲಾಗಿದ್ದ, ರಿಟ್ ಅಪೀಲು ಸಂಖ್ಯೆ: 1623/2025ರ (ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಇಂಡಿಯಾ) ಪ್ರಕರಣದಲ್ಲಿ ದಿನಾಂಕ:30.09.2025ರಂದು ಮಾನ್ಯ ನ್ಯಾಯಾಲಯವು ಸಿನಿಮಾ ಟಿಕೆಟ್‍ಗಳ ಮೇಲೆ ವಿಧಿಸಿದ್ದ ರೂ.200/-ಗಳ ಮಿತಿಗೆ ದಿನಾಂಕ:23.09.2025ರಂದು ನೀಡಿದ ತಡೆಯಾಜ್ಞೆಯನ್ನು ಮುಂದುವರೆಸುವ ಜೊತೆಗೆ, ಈ ಕೆಳಕಂಡಂತೆ ಆದೇಶಿಸಿರುತ್ತದೆ. ದಾಖಲೆಗಳ ನಿರ್ವಹಣೆ: ಪ್ರತಿವಾದಿ ಸಂಖ್ಯೆ 1 ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಲ್ಟಿಪ್ಲೆಕ್ಸ್‍ಗಳು, ಮಾರಾಟವಾದ ಪ್ರತಿಯೊಂದು ಟಿಕೆಟ್‍ಗೆ ಸಮಗ್ರ ಮತ್ತು ಲೆಕ್ಕಪರಿಶೋಧಿಸಬಹುದಾದ ದಾಖಲೆಗಳನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ. ದಾಖಲೆಗಳು ಈ ಕೆಳಗಿನವುಗಳನ್ನು ಒಳಗೊಂಡಿರಬೇಕು: ಮಾರಾಟದ ದಿನಾಂಕ ಮತ್ತು ಸಮಯ, ಆನ್‍ಲೈನ್ ಅಥವಾ ಭೌತಿಕ ಕೌಂಟರ್‍ಗಳಲ್ಲಿ ಬುಕಿಂಗ್ ಮಾಡಿರುವ ವಿವರ,  ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ನೆಟ್ ಬ್ಯಾಂಕಿಂಗ್ ಅಥವಾ ನಗದು ಪಾವತಿ ಮಾಡಿರುವ ವಿವರ,…

Read More

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳನ್ನು 2025-26ನೇ ಸಾಲಿನಲ್ಲಿ ನೇರ ನಗದು ವರ್ಗಾವಣೆ ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಿ, ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸಲಾಗಿದೆ. ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ನಿರುದ್ಯೋಗ ಭತ್ಯೆ, ಶಿಶುಪಾಲನಾ ಭತ್ಯೆ, ಮರಣ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ಯೋಜನೆ, ದೃಷ್ಠಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‍ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆಯಂತ್ರ ಯೋಜನೆ, ಸಾಧನ ಸಲಕರಣೆ ಯೋಜನೆ, ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್‍ಚೇರ್ ಯೋಜನೆಗಳಿಗೆ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಮೇಲ್ಕಂಡ ಯೋಜನೆಗಳಿಗೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಸೇವಾಸಿಂಧು ಪೋರ್ಟಲ್‍ನಡಿ (https://sevasindhu.karnataka.gov.in/sevasindhu/kannada) ಆನ್‍ಲೈನ್ ಮೂಲಕ ವಿಕಲಚೇತನರು ಅರ್ಜಿ…

Read More

ಮೈಸೂರು : ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಮತಾಂತರ ಹಾಗೂ ಜಾತಿಗಳನ್ನು ಒಡೆಯುವ ದೃಷ್ಠಿಯಿಂದ ರಾಜ್ಯ ಸರ್ಕಾರ ಸಮೀಕ್ಷೆ ಮಾಡುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ಹೇಳಿಕೆ ಅವರ ಅಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಪ್ರಹ್ಲಾದ್ ಜೋಷಿಯವರು ಕೇಂದ್ರ ಸಚಿವರಾಗಿದ್ದು, ಕೇಂದ್ರ ನಡೆಸಲಿರುವ ಜಾತಿಸಮೀಕ್ಷೆಯ ಉದ್ದೇಶವನ್ನು ತಿಳಿಸಬೇಕು. ಕೇಂದ್ರ ಸರ್ಕಾರಕ್ಕೆ ಜಾತಿ, ಧರ್ಮ ಒಡೆಯುವ ಉದ್ದೇಶವಿದೆಯೇ? ಕರ್ನಾಟಕದಲ್ಲಿ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಜನರ ಸ್ಥಿತಿಗತಿಯ…

Read More

ಶಿವಮೊಗ್ಗ : ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಿದ್ದು, ಈ ನಡುವೆ ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಮಹಿಳೆಯ ಮೇಲೆ ಹಲ್ಲೆ ಮಾಡಿ ದೋಚಲು ಪ್ರಯತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಹೌದು, ಶಿವಮೊಗ್ಗದ ಆಝಾದ್ ನಗರ ಕ್ಲರ್ಕ್‌ ಪೇಟೆಯಲ್ಲಿ ನವೀದ್ ಮತ್ತು ಅವರ ತಾಯಿ ದಿಲ್ ಶಾದ್ (45) ಅವರಿದ್ದ ಮನೆಗೆ ತಲ್ಲೀಮಾ ಮತ್ತು ಅಸ್ಲಂ ಎಂಬುವರು ಭೇಟಿ ನೀಡಿ, ತಾವು ಜಾತಿ ಗಣತಿ ಮಾಡಲು ಬಂದಿದ್ದೇವೆ. ಆಧಾರ್‌ ಕಾರ್ಡ್ ತನ್ನಿ ಎಂದು ಹೇಳಿ ಇಬ್ಬರು ಮನೆಯೊಳಗೆ ನುಗ್ಗಿ ದರೋಡೆಗೆ ಯತ್ನಿಸಿದ್ದಾರೆ. ತಲ್ಲೀಮಾ ಮತ್ತು ಅಸ್ಲಂ ಅವರು ನವೀದ್ ತಾಯಿ ದಿಲ್‌ಶಾದ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ದಿಲ್ ಶಾದ್ ಮನೆಯಿಂದ ಹೊರಗೆ ಓಡಿ ಹೋಗಿ ಇಬ್ಬರನ್ನು ಕೂಡಿ ಹಾಕಿದ್ದಾರೆ. ಬಳಿಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Read More

ಬೆಂಗಳೂರು: ನಗರ‌ ಪಾಲಿಕೆಯ ವ್ಯಾಪ್ತಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ಕ್ಕೆ ನಾಗರಿಕರು ಸಹಕರಿಸುವಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಮನವಿ ಮಾಡಿದ್ದಾರೆ. ಸಮೀಕ್ಷೆದಾರರಿಗೆ 29-09-2025 ಮತ್ತು 03-10-2025ರಂದು ಎರಡು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಸಮೀಕ್ಷೆ ಸುಗಮವಾಗಿ ನಡೆಯಲು ಒಟ್ಟು 9 ಮಂದಿ ಕೆ.ಎ.ಎಸ್. ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ 2 ವಲಯಗಳಲ್ಲಿನ ವಿಧಾನಸಭಾ ಕ್ಷೇತ್ರಗಳ 64 ವಾರ್ಡ್‌ಗಳ ಒಟ್ಟು 14.65 ಲಕ್ಷ ಮನೆಗಳು ಈ ಸಮೀಕ್ಷೆಗೆ ಒಳಪಡಲಿವೆ ಎಂದಿದ್ದಾರೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ವಿಧಾನಸಭಾ ಕ್ಷೇತ್ರಗಳಾದ ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ (ಭಾಗಶಃ), ರಾಜರಾಜೇಶ್ವರಿ ನಗರ, ಯಶವಂತಪುರ ಹಾಗೂ ದಾಸರಹಳ್ಳಿ (ಭಾಗಶಃ) ಸೇರಿವೆ. ಹಿಂದುಳಿದ ವರ್ಗಗಳ ಆಯೋಗ ಮತ್ತು ಸರ್ಕಾರದ ನಿರ್ದೇಶನದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ–2025 ನಡೆಸಲು ಎಲ್ಲಾ…

Read More