Subscribe to Updates
Get the latest creative news from FooBar about art, design and business.
Author: kannadanewsnow57
ಕೊಪ್ಪಳ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಕೊಪ್ಪಳದಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಶವ ಸುಟ್ಟು ಹಾಕಿದ ಘಟನೆ ನಡೆದಿದೆ. ಬೂದಗುಂಪ ಗ್ರಾಮದ ದ್ಯಾಮಣ್ಣ ವಜ್ರಬಂಡಿ (38) ಎಂಬ ವ್ಯಕ್ತಿಯನ್ನು ಲವರ್ ಜೊತೆಗೆ ಸೇರಿ ಪತ್ನಿಯೇ ಹತ್ಯೆ ಮಾಡಿ ಶವ ಸುಟ್ಟು ಹಾಕಿದ್ದಾಳೆ. ದ್ಯಾಮಣ್ಣ ಸುಮಾರು ವರ್ಷದ ಹಿಂದೆ ಕಾಮನೂರ ಗ್ರಾಮದ ನೇತ್ರಾವತಿ ಎಂಬಾಕೆಯನ್ನು ಮದುವೆಯಾಗಿದ್ದ. ಆದರೇ ಪತ್ನಿಗೆ ಅದೇ ಗ್ರಾಮದ ಶ್ಯಾಮಣ್ಣ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಶ್ಯಾಮಣ್ಣ ಗೆ ಕೂಡ ಈ ಹಿಂದೆ ಮದುವೆಯಾಗಿ ಮೂವರು ಮಕ್ಕಳಿದ್ದರು, ಆದರೂ ಕೂಡ ಆರೋಪಿ ನೇತ್ರಾವತಿ ಜೊತೆ ಅಕ್ರಮವಾಗಿ ಸಂಬಂಧ ಇಟ್ಟುಕೊಂಡಿದ್ದ. ಆದರೆ ಈ ವೇಳೆ ಇಬ್ಬರ ಪ್ರೀತಿಗೆ ಪತಿ ಅಡ್ಡಿಯಾಗುತ್ತಾನೆ ಎಂದು ಲವರ್ ಜೊತೆಗೆ ಸೇರಿ ನೇತ್ರಾವತಿ ದ್ಯಾಮಣ್ಣನನ್ನ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಳೆ. ಲವರ್ ಶ್ಯಾಮಣ್ಣ ಜೊತೆಗೆ ಸೇರಿ ನೇತ್ರಾವತಿ 5 ಕಿಲೋ ಮೀಟರ್ ದೂರದವರೆಗೆ ಹೋಗಿ ಶವ ಸುಟ್ಟು…
ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಇಂದು ಮಹತ್ವದ ದಿನವಾಗಿದೆ. ಕೆ.ಆರ್ ನಗರ ಮಹಿಳೆಯ ಅತ್ಯಾಚಾರ ಪ್ರಕರಣದ ಸಂಬಂಧ ಇಂದು ತೀರ್ಪನ್ನು ಕೋರ್ಟ್ ಪ್ರಕಟಿಸಲಿದೆ. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಅವರು ಜಾಮೀನು ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಜೈಲೇ ಗತಿ ಎನ್ನುವಂತೆ ಆಗಿತ್ತು. ಈ ನಡುವೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಕೆ.ಆರ್ ನಗರ ಮಹಿಳೆಯ ಅತ್ಯಾಚಾರ ಪ್ರಕರಣದ ವಾದ ಪ್ರತಿ ವಾದವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆಸಿತ್ತು. ಇದೀಗ ಈ ಪ್ರಕರಣದಲ್ಲಿ ಕಾಯ್ದಿರಿಸಿದ್ದಂತ ತೀರ್ಪನ್ನು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕಟಿಸಲಿದೆ. ಪ್ರಜ್ವಲ್ ರೇವಣ್ಣರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಎರಡೂ ಕಡೆ ವಕೀಲರಿಂದ ಸ್ಪಷ್ಟನೆ ಕೇಳಿದ ಕೋರ್ಟ್ ಆಗಸ್ಟ್ 1 ಕ್ಕೆ ತೀರ್ಪು ಮುಂದೂಡಿತ್ತು. ಸ್ಪಷ್ಟೀಕರಣ ಬೇಕಿದ್ದರಿಂದ ತೀರ್ಪು ಮುಂದೂಡಿಕೆಯಾಗಿದೆ ಎಂದು ಜಡ್ಜ್ ಹೇಳಿದ್ದರು. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಜ್ವಲ್ ರೇವಣ್ಣ ವಿರುದ್ಧ…
ಬೆಂಗಳೂರು : ಧರ್ಮಸ್ಥಳ ಫೈಲ್ಸ್ ಸಿನಿಮಾ ಜೊತೆಗೆ ವೆಬ್ ಸಿರೀಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಈಗಾಗಲೇ ಫೀಲ್ಮ್ ಚೇಂಬರ್ ನಲ್ಲಿ ಟೈಟಲ್ ನೋಂದಣಿಯನ್ನು ಚಿತ್ರತಂಡ ಮಾಡಿಸಿದೆ. ಹೌದು, ಧರ್ಮಸ್ಥಳ ಫೈಲ್ಸ್ ಸಿನಿಮಾ ಜೊತೆಗೆ ವೆಬ್ ಸಿರೀಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಈಗಾಗಲೇ ಫೀಲ್ಮ್ ಚೇಂಬರ್ ನಲ್ಲಿ ಟೈಟಲ್ ನೋಂದಣಿಯನ್ನು ಚಿತ್ರತಂಡ ಮಾಡಿಸಿದ್ದು, ಫಿಲ್ಮ್ ಚೇಂಬರ್ ಟೈಟಲ್ ಕಮಿಟಿಯಿಂದಲೂ ಸಿನಿಮಾಗೆ ಅನುಮತಿ ಸಿಕ್ಕಿದೆ. ಈಗಾಗಲೇ ನಿರ್ದೇಶಕರಿಂದ ಚಿತ್ರತಂಡ ಕಥೆ ತಯಾರು ಮಾಡಲಾಗಿದೆ. ಮಲಯಾಳಿ ನಿರ್ದೇಶಕ ವಿ.ಕೆ. ಪ್ರಕಾಶ್ ರಿಂದ ಸಿನಿಮಾ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಸಿನಿಮಾಗೆ ಕತೆಯನ್ನು ಎಂ.ಎಸ್. ರಮೇಶ್ ತಯಾರು ಮಾಡುತ್ತಿದ್ದಾರೆ. ಶೀಘ್ರದಲ್ಲೇ ಬಹಿರಂಗವಾಗಿ ಸಿನಿಮಾವನ್ನು ಚಿತ್ರತಂಡ ಘೋಷಣೆ ಮಾಡಲಿದೆ.
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವನ ದೇಹದ ಪೂರ್ತಿ ಅಸ್ಥಿ ಪಂಜರ ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ. ದೂರುದಾರ ತೋರಿಸಿದ ಜಾಗದಲ್ಲಿ 6ನೇ ಪಾಯಿಂಟ್ ನಲ್ಲಿ ತಲೆಬುರುಡೆ ಸೇರಿ ಪೂರ್ತಿ ಅಸ್ಥಿ ಪಂಜರ ಸಿಕ್ಕಿವೆ ಎಂದು ಮಾಹಿತಿ ತಿಳಿದು ಬಂದಿದೆ.ಸದ್ಯ 6ನೇ ಪಾಯಿಂಟ್ ನಲ್ಲಿ ಸಿಕ್ಕ ಸಂಪೂರ್ಣ ಅಸ್ತಿ ಪಂಜರವನ್ನು ANATOMICAL POSITTON’ ನಲ್ಲಿಟ್ಟು ಮಹಜರು ನಡೆಸಲಾಗುತ್ತದೆ. ಮನುಸ್ಯನ ದೇಹ ರಚನೆ ಇರೋ ರೀತಿಯಲ್ಲಿಟ್ಟು ಮಹಜರು ಮಾಡಲಾಗುತ್ತದೆ. ಮಂಗಳೂರು ಮೆಡಿಕಲ್ ಕಾಲೇಜಿಗೆ ಅಸ್ಥಿ ಪಂಜರ ರವಾನಿಸಲಾಗುತ್ತದೆ. ನೇತ್ರಾವತಿ ನದಿ ತೀರದ 6ನೇ ಪಾಂಟ್ ನಲ್ಲಿ ನಿನ್ನೆ ಶೋಧಕಾರ್ಯಾಚರಣೆ ವೇಳೆ ಮೂಳೆಗಳು ಪತ್ತೆಯಾಗಿವೆ. ಇವು ಪುರುಷನ ದೇಹದ ತಲೆಬುರುಡೆ, ಕೈ-ಕಾಲಿನ ಮೂಳೆಗಳು ಎನ್ನಲಾಗಿವೆ. ಸದ್ಯ 6ನೇ ಪಾಯಿಮ್ಟ್ ನಲ್ಲಿ ಎಸ್ ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯಗೊಂಡಿದೆ.
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವನ ದೇಹದ ಪೂರ್ತಿ ಅಸ್ಥಿ ಪಂಜರ ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ. ದೂರುದಾರ ತೋರಿಸಿದ ಜಾಗದಲ್ಲಿ 6ನೇ ಪಾಯಿಂಟ್ ನಲ್ಲಿ ತಲೆಬುರುಡೆ ಸೇರಿ ಪೂರ್ತಿ ಅಸ್ಥಿ ಪಂಜರ ಸಿಕ್ಕಿವೆ ಎಂದು ಮಾಹಿತಿ ತಿಳಿದು ಬಂದಿದೆ. ಸದ್ಯ 6ನೇ ಪಾಯಿಂಟ್ ನಲ್ಲಿ ಸಿಕ್ಕ ಸಂಪೂರ್ಣ ಅಸ್ತಿ ಪಂಜರವನ್ನು ANATOMICAL POSITTON’ ನಲ್ಲಿಟ್ಟು ಮಹಜರು ನಡೆಸಲಾಗುತ್ತದೆ. ಮನುಸ್ಯನ ದೇಹ ರಚನೆ ಇರೋ ರೀತಿಯಲ್ಲಿಟ್ಟು ಮಹಜರು ಮಾಡಲಾಗುತ್ತದೆ. ಮಂಗಳೂರು ಮೆಡಿಕಲ್ ಕಾಲೇಜಿಗೆ ಅಸ್ಥಿ ಪಂಜರ ರವಾನಿಸಲಾಗುತ್ತದೆ. ನೇತ್ರಾವತಿ ನದಿ ತೀರದ 6ನೇ ಪಾಂಟ್ ನಲ್ಲಿ ನಿನ್ನೆ ಶೋಧಕಾರ್ಯಾಚರಣೆ ವೇಳೆ ಮೂಳೆಗಳು ಪತ್ತೆಯಾಗಿವೆ. ಇವು ಪುರುಷನ ದೇಹದ ತಲೆಬುರುಡೆ, ಕೈ-ಕಾಲಿನ ಮೂಳೆಗಳು ಎನ್ನಲಾಗಿವೆ. ಸದ್ಯ 6ನೇ ಪಾಯಿಮ್ಟ್ ನಲ್ಲಿ ಎಸ್ ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯಗೊಂಡಿದೆ.
ನವದೆಹಲಿ : ಭಾರತದ ಚುನಾವಣಾ ಆಯೋಗ (ECI) ಇತ್ತೀಚಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ಗೆ ಆಧಾರ್ ಭಾರತೀಯ ಪೌರತ್ವಕ್ಕೆ ಮಾನ್ಯ ಪುರಾವೆಯಲ್ಲ ಎಂದು ಹೇಳಿದೆ. ಆದ್ದರಿಂದ, ಭಾರತದಲ್ಲಿ ನಿಮ್ಮ ಪೌರತ್ವವನ್ನು ಸಾಬೀತುಪಡಿಸಲು ನೀವು ಸಲ್ಲಿಸಬಹುದಾದ ದಾಖಲೆಗಳ ಪಟ್ಟಿ ಇಲ್ಲಿದೆ. ಭಾರತದ ಪ್ರಮುಖ ಮತ್ತು ಮೂಲಭೂತ ದಾಖಲೆಗಳಲ್ಲಿ ಒಂದಾದ ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ ಎಂದು ಕೇಂದ್ರ ಸರ್ಕಾರ ಪದೇ ಪದೇ ಸ್ಪಷ್ಟಪಡಿಸಿದೆ. ಅಲ್ಲದೆ, ದಾಖಲೆಯ ಪ್ರತಿಯೊಂದು ಪ್ರತಿಯೂ ಆಧಾರ್ “ಗುರುತಿನ” ಪುರಾವೆಯಾಗಿದೆ ಮತ್ತು “ಪೌರತ್ವ”ವಲ್ಲ ಎಂದು ಹೇಳುವ ಟಿಪ್ಪಣಿಯನ್ನು ಸಹ ಹೊಂದಿರುತ್ತದೆ. ಜುಲೈ 10 ರಂದು ನಡೆದ ವಿಚಾರಣೆಯ ನಂತರ, ಭಾರತದ ಚುನಾವಣಾ ಆಯೋಗ (ECI) ಸುಪ್ರೀಂ ಕೋರ್ಟ್ಗೆ ಆಧಾರ್ ಯಾವುದೇ ವ್ಯಕ್ತಿಯ ಪೌರತ್ವವನ್ನು ಮೌಲ್ಯೀಕರಿಸುವುದಿಲ್ಲ ಎಂದು ಹೇಳಿದ ನಂತರ, ಭಾರತೀಯ ಪೌರತ್ವವನ್ನು ಸಾಬೀತುಪಡಿಸುವ ಅಧಿಕೃತ ದಾಖಲೆಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಭಾರತೀಯ ಸರ್ಕಾರವು ಪೌರತ್ವದ ಮಾನ್ಯ ಪುರಾವೆಯಾಗಿ ಪರಿಗಣಿಸುವ ದಾಖಲೆಗಳ ಪಟ್ಟಿ ಇಲ್ಲಿದೆ. ಇದು ಜನನ ಪ್ರಮಾಣಪತ್ರ ಮತ್ತು ಇತರ…
ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮತ್ತೆ 4 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
ಸೌದಿ ಅರೇಬಿಯಾದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಪಾರ್ಕ್ ನಲ್ಲಿರುವ ಬೃಹತ್ ಸ್ವಿಂಗ್ ಮುರಿದು ಬಿದ್ದು 23 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಸೌದಿ ಅರೇಬಿಯಾದ ತೈಫ್ನ ಅಲ್ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್ನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಜೆಟ್ ಚಕ್ರವನ್ನು ಹೋಲುವ ಜೋಕಾಲಿ ಕಂಬವೊಂದು ಇದ್ದಕ್ಕಿದ್ದಂತೆ ಮುರಿದು 23 ಜನರು ಗಾಯಗೊಂಡಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉತ್ತಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. https://twitter.com/NDTVWORLD/status/1950854434319417538?ref_src=twsrc%5Etfw%7Ctwcamp%5Etweetembed%7Ctwterm%5E1950854434319417538%7Ctwgr%5E19af0b9eb9c7951cf2dfd9f401fbf8b4b50c143b%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fhindi%2Fforyou%3Fmode%3Dpwaaction%3Dclick
ಬೆಂಗಳೂರು: ಆಗಸ್ಟ್.1ರ ಇಂದಿನಿಂದ ಜಾರಿಗೆ ಬರುವಂತೆ ಬೆಂಗಳೂರಲ್ಲಿ ಆಟೋ ಮೀಟರ್ ದರವನ್ನು ಪರಿಷ್ಕರಿಸಿ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಮೂಲಕ ಬೆಂಗಳೂರಲ್ಲಿ ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಸರ್ಕಾರದ ಅಧಿಕೃತ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಕುರಿತು ಕೂಲಂಕುಶವಾಗಿ ಪರಿಶೀಲಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ದರಗಳನ್ನು ಪರಿಷ್ಕರಿಸಿದೆ. ದಿನಾಂಕ 01-08-2025ರಿಂದ ನೂತನ ದರಗಳು ಜಾರಿಗೆ ಬರಲಿದೆ ಎಂದಿದೆ. ಆಗಸ್ಟ್.1ರಿಂದ ಆಟೋ ಮೀಟರ್ ದರ ಎಷ್ಟು ಹೆಚ್ಚಳ ಗೊತ್ತಾ.? ಆಗಸ್ಟ್.1, 2025ರಿಂದ ಜಾರಿಗೆ ಬರುವಂತೆ ಕನಿಷ್ಠ ದರ ಮೊದಲ 2 ಕಿಲೋಮೀಟರ್ ಗೆ ರೂ.36 ನಿಗದಿ ಪಡಿಸಲಾಗಿದೆ. ಅದು ಮೂರು ಜನ ಪ್ರಯಾಣಿಕರಿಗೆ. ಈ ನಂತ್ರ ಪ್ರತಿ ಕಿಲೋಮೀಟರ್ ಗೆ ರೂ.18ಗಳನ್ನು ಮೂರು ಜನ ಪ್ರಯಾಣಿಕರು ತೆರಳೋದಕ್ಕೆ…
ನವದೆಹಲಿ : ಆಗಸ್ಟ್ 2025 ನಿಮ್ಮ ಮಾಸಿಕ ವೆಚ್ಚಗಳ ಮೇಲೆ ಪರಿಣಾಮ ಬೀರುವ ಹಲವಾರು ಆರ್ಥಿಕ ಬದಲಾವಣೆಗಳನ್ನು ತರುತ್ತಿದೆ. ಕ್ರೆಡಿಟ್ ಕಾರ್ಡ್ ನೀತಿಗಳಿಂದ ಹಿಡಿದು UPI ನಿಯಮಗಳು ಮತ್ತು LPG ಬೆಲೆಗಳವರೆಗೆ, ಆರು ಪ್ರಮುಖ ನವೀಕರಣಗಳು ಆಗಸ್ಟ್ 1 ರಿಂದ ಜಾರಿಗೆ ಬರಲಿವೆ. ಜುಲೈ ತಿಂಗಳು ಕೊನೆಗೊಳ್ಳುತ್ತಿದ್ದಂತೆ ಆಗಸ್ಟ್ನಿಂದ ಹಲವಾರು ಮಹತ್ವದ ಬದಲಾವಣೆಗಳು ಸಂಭವಿಸಲಿವೆ, ಅದು ಜನರ ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಆಗಸ್ಟ್ 1 ರಿಂದ ನಿಯಮ ಬದಲಾವಣೆಗಳು LPG ಬೆಲೆಗಳಲ್ಲಿ ಬದಲಾವಣೆ LPG ಸಿಲಿಂಡರ್ಗಳ ಬೆಲೆ ಕಡಿತವನ್ನು ಘೋಷಿಸಿದ್ದು, ಬೃಹತ್ ಅಡುಗೆ ಇಂಧನವನ್ನು ಅವಲಂಬಿಸಿರುವ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಪರಿಹಾರವನ್ನು ನೀಡುತ್ತಿವೆ. 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ನ ಬೆಲೆಯನ್ನು ಸುಮಾರು 33.50 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ವಾಣಿಜ್ಯ LPG ಸಿಲಿಂಡರ್ನ ಹೊಸ ಬೆಲೆ ಆಗಸ್ಟ್ 1 ರ ಇಂದಿನಿಂದ ಜಾರಿಗೆ ಬರಲಿದೆ. SBI ಕ್ರೆಡಿಟ್ ಕಾರ್ಡ್ ವಿಮಾ ಕವರ್ ಕೊನೆಗೊಳ್ಳುತ್ತದೆ ನೀವು SBI ಕ್ರೆಡಿಟ್…