Author: kannadanewsnow57

ನವದೆಹಲಿ : ಜಾಗತಿಕವಾಗಿ ಕರೋನಾ ಸಾಂಕ್ರಾಮಿಕ ರೋಗ ಹರಡಿ 4 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈ ಸಮಯದಲ್ಲಿ ಕರೋನಾದ ಅನೇಕ ರೂಪಾಂತರಗಳು ಬಹಿರಂಗಗೊಂಡಿವೆ. ಜನರು ಈ ಸಾಂಕ್ರಾಮಿಕ ರೋಗದ ಸೌಮ್ಯದಿಂದ ತೀವ್ರವಾದ ರೋಗಲಕ್ಷಣಗಳನ್ನು ವರದಿ ಮಾಡಿದ್ದಾರೆ. ಕೊರೊನಾ ಭೀತಿ ಇನ್ನೂ ನಿಂತಿಲ್ಲ. ಏತನ್ಮಧ್ಯೆ, ಶೈಕ್ಷಣಿಕ ಜರ್ನಲ್ ಸೈನ್ಸ್ ಅಡ್ವಾನ್ಸಸ್ ನಲ್ಲಿ ಜೀವಿತಾವಧಿಯ ಬಗ್ಗೆ ವರದಿಯನ್ನು ಪ್ರಕಟಿಸಲಾಗಿದೆ. ಈ ವರದಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿರಸ್ಕರಿಸಿದೆ. ಕರೋನಾದಿಂದಾಗಿ ಭಾರತದಲ್ಲಿ ಜೀವಿತಾವಧಿಯ ಪ್ರಮಾಣವು ಗಮನಾರ್ಹವಾಗಿ ಕುಸಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 2019 ಮತ್ತು 2020 ರ ನಡುವೆ ಭಾರತದಲ್ಲಿ ಸರಾಸರಿ ವಯಸ್ಸು 2.6 ವರ್ಷಗಳಷ್ಟು ಕಡಿಮೆಯಾಗಿದೆ. ಅಧ್ಯಯನದ ಪ್ರಕಾರ, ಸಾಮಾಜಿಕವಾಗಿ ಹಿಂದುಳಿದ ಗುಂಪುಗಳು ಮತ್ತು ಮುಸ್ಲಿಮರ ಜೀವಿತಾವಧಿ ಕಡಿಮೆಯಾಗಿದೆ. ಇದರಲ್ಲಿ, ಕುಸಿತವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ವರದಿಯನ್ನು ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಸಚಿವಾಲಯ ತಿರಸ್ಕರಿಸಿದೆ. ಸಚಿವಾಲಯವು…

Read More

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ 2898 ಎಡಿ ಚಿತ್ರದ ನಿರ್ಮಾಪಕರು ಮತ್ತು ನಟರಿಗೆ ಮಾಜಿ ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಶನಿವಾರ ಲೀಗಲ್ ನೋಟಿಸ್ ನೀಡಿದ್ದಾರೆ. ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ತಾರೆ ಪ್ರಭಾಸ್ ಸೇರಿದಂತೆ ಇತರರಿಗೆ ನೋಟಿಸ್ ನೀಡಲಾಗಿದೆ. ಈ ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಪ್ರತಿಪಾದಿಸಿದರು. ಈ ಬಗ್ಗೆ ಮಾತನಾಡಿದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಭಾರತದ ಭಾವನಾತ್ಮಕ ಮತ್ತು ಭಕ್ತಿ ಭೂದೃಶ್ಯದ ಮಹತ್ವವನ್ನು ಒತ್ತಿ ಹೇಳಿದರು. “ಭಾರತವು ಭಾವನೆಗಳು, ನಂಬಿಕೆ ಮತ್ತು ಭಕ್ತಿಯ ಭೂಮಿಯಾಗಿದೆ. ಸನಾತನ ಧರ್ಮದ ಮೌಲ್ಯಗಳನ್ನು ಹಾಳು ಮಾಡಬಾರದು. ಸನಾತನ ಧರ್ಮಗ್ರಂಥಗಳನ್ನು ಬದಲಾಯಿಸಬಾರದು. ಭಗವಾನ್ ಕಲ್ಕಿ ನಾರಾಯಣ್ ನಮ್ಮ ನಂಬಿಕೆಯ ಕೇಂದ್ರಬಿಂದುವಾಗಿದ್ದಾರೆ. ಅವನನ್ನು ವಿಷ್ಣುವಿನ ಅಂತಿಮ ಅವತಾರವೆಂದು ಪರಿಗಣಿಸಲಾಗಿದೆ. ಪುರಾಣಗಳಲ್ಲಿ ಕಲ್ಕಿಯ ಅವತಾರದ ಬಗ್ಗೆ ಬಹಳಷ್ಟು ಬರೆಯಲಾಗಿದೆ ಮತ್ತು ಇದರ ಆಧಾರದ ಮೇಲೆ ಪ್ರಧಾನಿ ಮೋದಿ ಫೆಬ್ರವರಿ…

Read More

ಬೆಂಗಳೂರು : ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಮೊದಲ ಹಂತದಲ್ಲಿ ಬೆಂಗಳೂರಿನ 250 ಅಂಗನವಾಡಿಗಳನ್ನು ಗುರುತಿಸಿದ್ದು, ಹಂತಹಂತವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಎಲ್ ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೊರೆತ ತಾತ್ವಿಕ ಒಪ್ಪಿಗೆ ಮೇರೆಗೆ ಹಂತ-ಹಂತವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿಯೂ ಪೂರ್ವ ಪ್ರಾಥಮಿಕ (LKG & UNG) ಗಳನ್ನು ಪ್ರಾರಂಭಿಸಲು ಆದೇಶಿಸಲಾಗಿದೆ. ಅದರಂತೆ, ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (LKG & UKG) ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಉತ್ತರ ಜಿಲ್ಲೆಯ 62, ಪೂರ್ವ ಜಿಲ್ಲೆಯ 20, ಕೇಂದ್ರ ಜಿಲ್ಲೆಯ 50, ಬೆಂಗಳೂರು ರಾಜ್ಯ (ಪ್ರೊಜೆಕ್ಟ್) 50, ಬೆಂಗಳೂರು ದಕ್ಷಿಣ 48, ಆನೆಕಲ್ 20 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, 1,238 ಗಂಡು ಹಾಗೂ 1,203 ಹೆಣ್ಣು ಮಕ್ಕಳು ಸೇರಿ ಒಟ್ಟೂ 2,441 ಮಕ್ಕಳು ಇದರಲ್ಲಿ ಒಳಗೊಳ್ಳಲಿದ್ದಾರೆ.…

Read More

ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಅಬ್ಬರ ಮುಂದುವರೆದಿದ್ದು, ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಎರಡಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುವ ಪ್ರದೇಶವನ್ನು ಡೆಂಗ್ಯೂ ಹಾಟ್‌ ಸ್ಪಾಟ್‌ ಎಂದು ಗುರುತಿಸಲಾಗುತ್ತದೆ. ಬೆಂಗಳೂರು ನಗರದಲ್ಲಿ ಡೆಂಗಿ ಪ್ರಕರಣಗಳನ್ನು ಮತ್ತಷ್ಟು ನಿಯಂತ್ರಿಸಲು ಈಗ ನೂತನ ಕ್ರಮವನ್ನು ಕೈಗೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ 100ಮೀಟರ್‌ ವ್ಯಾಪ್ತಿಯಲ್ಲಿ ಎರಡಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದರೆ, ಆ ಪ್ರದೇಶವನ್ನು ಹಾಟ್‌ ಸ್ಪಾಟ್‌ ಎಂದು ಗುರುತಿಸಲಾಗುತ್ತದೆ. ಹಾಟ್‌ ಸ್ಪಾಟ್‌ ಆಗಿ ಗುರುತಿಸಿಕೊಂಡಿರುವ ಪ್ರದೇಶಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಜ್ವರ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ಡೆಂಗಿ ನಿಯಂತ್ರಣದಲ್ಲಿ ಸ್ವಚ್ಛತೆ, ಸೊಳ್ಳೆ ನಿವಾರಕಗಳ ಮಹತ್ವದ ಕುರಿತು ಜಾಗೃತಿ ಮೂಡಿಸಿ ಭಿತ್ತಿಪತ್ರವನ್ನು ವಿತರಿಸಲಾಗುತ್ತದೆ.

Read More

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹಣಕಾಸು ಇಲಾಖೆ ಸಚಿವರೂ ಆದ ಮುಖ್ಯಮಂತ್ರಿಗಳ ಸಮ್ಮತಿ ಇಲ್ಲದೇ ಅವರ ಗಮನಕ್ಕೆ ಬಾರದೆ ಹಣವರ್ಗಾವಣೆ ಆಗಲು ಸಾಧ್ಯವೇ ಇರಲಿಲ್ಲ.ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ದಿನ ಸಮೀಪಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ಇವತ್ತು ರಾಜ್ಯದಲ್ಲಿ ಉದ್ಭವವಾಗಿದೆ. ಹಗರಣ ಹಿನ್ನೆಲೆಯಲ್ಲಿ ನೈತಿಕತೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅಲ್ಲಿವರೆಗೆ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಎಂ ಸದನದಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದು, ಸತ್ಯಸಂಗತಿಗಳನ್ನು ಮರೆಮಾಚಿ, ಸದನಕ್ಕೆ ಮತ್ತು ರಾಜ್ಯದ ಜನತೆಗೆ ತಪ್ಪು ಮಾಹಿತಿ, ತಪ್ಪು ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ. ಸಿಎಂ ಈ ಹಗರಣದಿಂದ ತಪ್ಪಿಸಿ ಕೊಂಡು ಹೋಗಲು ಸಾಧ್ಯವಿಲ್ಲ ಎಂಬುದು ಸತ್ಯ ಎಂದು ವಿಜಯೇಂದ್ರ ಎಚ್ಚರಿಸಿದರು. ಕೇವಲ ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್ ಅವರಷ್ಟೇ ಅಲ್ಲದೆ ಇನ್ನೂ…

Read More

ಚೆನ್ನೈ : ಶಾಲಾ ಪ್ರವೇಶ ಬಯಸುವ ಮಗು ವರ್ಗಾವಣೆ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಒತ್ತಾಯಿಸದಂತೆ ಕೇಳಿದ್ದು, ಮದ್ರಾಸ್ ಹೈಕೋರ್ಟ್ ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ಸುತ್ತೋಲೆಗಳು / ಸೂಚನೆಗಳು / ಆದೇಶಗಳನ್ನು ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಶಾಲಾ ಶುಲ್ಕವನ್ನು ಪಾವತಿಸದಿರುವ ಅಥವಾ ವಿಳಂಬವಾಗಿ ಪಾವತಿಸುವ ಬಗ್ಗೆ ಟಿಸಿಯಲ್ಲಿ ಅನಗತ್ಯ ನಮೂದುಗಳನ್ನು ಮಾಡದಂತೆ ನ್ಯಾಯಾಲಯವು ಶಾಲೆಗಳಿಗೆ ಸೂಚಿಸಿದೆ. ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ, ಆರ್ಟಿಇ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ಪ್ರಾರಂಭಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಪೋಷಕರಿಂದ ಶುಲ್ಕದ ಬಾಕಿಯನ್ನು ಸಂಗ್ರಹಿಸಲು ಶಾಲೆಗಳಿಗೆ ಟಿಸಿ ಒಂದು ಸಾಧನವಲ್ಲ ಎಂದು ಗಮನಿಸಿದ ನ್ಯಾಯಮೂರ್ತಿ ಎಸ್.ಎಂ.ಸುಬ್ರಮಣ್ಯಂ ಮತ್ತು ನ್ಯಾಯಮೂರ್ತಿ ಸಿ.ಕುಮಾರಪ್ಪನ್ ಅವರ ನ್ಯಾಯಪೀಠ, ಶುಲ್ಕದ ಬಾಕಿಗೆ ಸಂಬಂಧಿಸಿದಂತೆ ಟಿಸಿಯಲ್ಲಿ ನಮೂದು ಮಾಡಿದಾಗ, ಅದು ಮಗುವಿಗೆ ಕಳಂಕ ತರುತ್ತದೆ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಮಾನಸಿಕ ಕಿರುಕುಳದ ಒಂದು ರೂಪವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಶುಲ್ಕವನ್ನು ಪಾವತಿಸದ ಅಥವಾ…

Read More

ಬೆಂಗಳೂರು : ನಕಲಿ ದಾಖಲೆ ಮೋಸದ ವ್ಯವಹಾರಗಳಿಂದ ನಿಮ್ಮ ಆಸ್ತಿ ರಕ್ಷಣೆಗಾಗಿ ಕೂಡಲೇ ಜಮೀನಿನ ದಾಖಲೆಯ ಜೊತೆ ಆಧಾರ್ ಲಿಂಕ್ ಮಾಡುವಂತೆ ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ. ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ” ಎಂದು ತಿಳಿಸಿದ್ದಾರೆ. ರಾಜ್ಯದಾದ್ಯಂತ 4 ಕೋಟಿಗೂ ಅಧಿಕ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್‌ಟಿಸಿಗಳನ್ನು ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ, 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಕಲಬುರಗಿ ವಿಭಾಗದಲ್ಲಿ 45 ಲಕ್ಷ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 18 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 40 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ…

Read More

ಬೀದರ್ : ಮದ್ಯ ಪ್ರಿಯರೇ ಎಚ್ಚರ. ಇನ್ಮುಂದೆ ರಾಜ್ಯದ ಶಾಲೆಗಳು, ಉದ್ಯಾನಗಳಲ್ಲಿ ಮದ್ಯ ಸೇವಿಸಿದ್ರೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಆ‌ರ್.ಬಿ. ತಿಮ್ಮಾಪೂರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಶಾಲೆಗಳಲ್ಲಿ ಹಾಗೂ ಉದ್ಯಾನಗಳಲ್ಲಿ ಯಾರಾದ್ರೂ ಮದ್ಯ ಸೇವಿಸಿವುದು ಕಂಡು ಬಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಯ ಸುತ್ತ ಮದ್ಯ ಮಾರಾಟ ಕುರಿತ ಮಕ್ಕಳು ಮನವಿ ಸಲ್ಲಿಸಿದ್ದಾರೆ. ಕ್ರಮಕ್ಕೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಗಾರ್ಡನ್ ಇರುವುದು ವಾಯು ವಿಹಾರಕ್ಕೆ ಮಾತ್ರ. ಇಲ್ಲಿ ಮದ್ಯ ಸೇವನೆ ಮಾಡುವುದರಿಂದ ಅಲ್ಲಿನ ವಾತಾವರಣ ಕಲುಷಿತವಾಗುತ್ತಿದೆ. ಇದು ಸಾರ್ವಜನಿಕವಾದ ಸ್ಥಳವಾಗಿದ್ದು, ಅದರ ಪವಿತ್ರತೆಯನ್ನು ಕಾಯ್ದುಕೊಳ್ಳುವುದು ಎಲ್ಲ ಜವಾಬ್ದಾರಿ. ಮದ್ಯ ಕುಡಿಯುವುದು ಗಮನಕ್ಕೆ ಬಂದರೆ‌ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.

Read More

ಬೆಂಗಳೂರು : ರಾಜ್ಯದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಬಿಗ್‌ ಶಾಕ್‌ ನೀಡಿದ್ದು, ಪ್ರಸಕ್ತ ಶೈಕ್ಷಿಣಿಕ ಸಾಲಿನಿಂದಲೇ ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಟರ್‌ ಕೋರ್ಸ್‌ಗಳ ಶುಲ್ಕವನ್ನು ಶೇ.10 ಹೆಚ್ಚಿಳ ಮಾಡಲಾಗಿದೆ. ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಸರ್ಕಾರಿ ಕಾಲೇಜುಗಳು, ಸರ್ಕಾರಿ ಅನುದಾನಿತ ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಶೇ.50 ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಟ‌ರ್ ಸೀಟುಗಳಿಗೆ 42,116 ರು. ಶುಲ್ಕ ನಿಗದಿಪಡಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಬಿಗ್‌ ಶಾಕ್‌ ನೀಡಿದೆ. ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೆ 76,135 ರು. ಅಥವಾ 84,596 ರು. ಶುಲ್ಕ ನಿಗದಿಯಾಗಿದೆ. ಕಾಮೆಡ್-ಕೆ ಕೋಟಾದ ಸೀಟುಗಳಿಗೆ 1,86, 111 ರೂ.ಅಥವಾ 2,61,477 ರು. ಗೆ ಹೆಚ್ಚಳವಾಗಿದೆ.

Read More

ಬಳ್ಳಾರಿ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ವಿಶೇಷ ವರ್ಗಗಳ ಮೀಸಲಾತಿ ಅಡಿಯಲ್ಲಿ 6ನೇ ತರಗತಿಗೆ ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ.ಬಿ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿರುವ 19 ವಸತಿ ಶಾಲೆಗಳಲ್ಲಿ ವಿಶೇಷ ಮೀಸಲಾತಿ ಅಡಿಯಲ್ಲಿ ಪ್ರಸಕ್ತ ಸಾಲಿಗೆ 6ನೇ ತರಗತಿ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಜು.25 ಕೊನೆಯ ದಿನಾಂಕವಾಗಿದೆ. ಆಸಕ್ತ ವಿದ್ಯಾರ್ಥಿಗಳು ಕೆಇಎ ಇಲಾಖೆ ವೆಬ್‍ಸೈಟ್ https://cetonline.karnataka.gov.in/kreis24d/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇಲಾಖಾ ವ್ಯಾಪ್ತಿಯಲ್ಲಿ ಬರುವ ಸಫಾಯಿ ಕರ್ಮಚಾರಿ, ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್, ಚಿಂದಿ ಆಯುವವರು, ಸ್ಮಶಾನ ಕಾರ್ಮಿಕರ ಮಕ್ಕಳು (ಶೇ.10), ಬಾಲ ಕಾರ್ಮಿಕರು, ಜೀತ ವಿಮುಕ್ತ ಕಾರ್ಮಿಕರ ಮಕ್ಕಳು, ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳು (ಶೇ.10), ಶೇ.25 ಕ್ಕಿಂತ ಹೆಚ್ಚಿನ ಅಂಗವಿಕಲತೆ ಮಕ್ಕಳು, ಹೆಚ್‍ಐವಿ ತುತ್ತಾದ ಮಕ್ಕಳು, ಒಬ್ಬ ಪೆÇೀಷಕ, ಅನಾಥ…

Read More