Author: kannadanewsnow57

ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ಹಮ್ಮಿಕೊಂಡಿರುವ ತುರ್ತು ಹಾಗೂ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಜೂನ್ 20ರ ಇಂದು ಬೆಂಗಳೂರಿನ 25ಕ್ಕೂ ಹೆಚ್ಚು ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ. ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗುವ ಈ ವಿದ್ಯುತ್ ಕಡಿತವು ಸಂಜೆ 4 ಅಥವಾ 5 ಗಂಟೆಯವರೆಗೆ ಮುಂದುವರಿಯಲಿದೆ. ಆರ್.ಆರ್.ನಗರ ಮತ್ತು ಬನಶಂಕರಿ ಉಪಕೇಂದ್ರಗಳಲ್ಲಿ ನಡೆಯಲಿರುವ ತುರ್ತು ಕಾಮಗಾರಿಗಳಿಂದಾಗಿ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಭಾರತ್ ಲೇಔಟ್, ಪಟಾಲಮ್ಮ ದೇವಸ್ಥಾನದ ಹಿಂಭಾಗ, ಹ್ಯಾಪಿ ವ್ಯಾಲಿ ಲೇಔಟ್, ವಿನಾಯಕ ಲೇಔಟ್, ಉತ್ತರಹಳ್ಳಿ, ಅಪ್ಪಯ್ಯ ಸ್ವಾಮಿ ಲೇಔಟ್, ವಡ್ಡರಪಾಳ್ಯ, ಬನಶಂಕರಿ 5ನೇ ಮತ್ತು 6ನೇ ಹಂತ, ಪೂರ್ಣಪ್ರಜ್ಞ ಲೇಔಟ್, ಮಂತ್ರಿ ಆಲ್‌ಫೈನ್ಸ್, ದ್ವಾರಕಾನಗರ, 80 ಅಡಿ ರಸ್ತೆ, ಶ್ರೀನಗರ, ಹೊಸಕೆರೆಹಳ್ಳಿ, ಪಿಇಎಸ್ ಕಾಲೇಜು ಸುತ್ತಮುತ್ತ, ವೀರಭದ್ರನಗರ, ಬ್ಯಾಂಕ್ ಕಾಲೋನಿ, ಎನ್‌ಟಿವೈ ಲೇಔಟ್, ತ್ಯಾಗರಾಜನಗರ, ಬಸವನಗುಡಿ, ಬನಶಂಕರಿ 3ನೇ…

Read More

ನವದೆಹಲಿ : ಡಿಜಿಟಲ್ ಪೇಮೆಂಟ್ಸ್ ಆ್ಯಪ್ ಆಗಿರುವ ಫೋನ್‌ಪೇ (PhonePe) ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಸತತ 365 ದಿನಗಳ ಕಾಲ (ಒಂದು ವರ್ಷ) ಯಾವುದೇ ವಹಿವಾಟು ನಡೆಸದ ವ್ಯಾಲೆಟ್ ಖಾತೆಗಳಿಗೆ ದಂಡ ವಿಧಿಸಲು ಕಂಪನಿ ನಿರ್ಧರಿಸಿದೆ. ಹಾಗಾದರೆ ಈ ಚಾರ್ಜ್‌ಗಳಿಂದ ಬಚಾವಾಗಲು ನೀವೇನು ಮಾಡಬೇಕು? ಈ ನಿಯಮ ಯಾರಿಗೆ ಅನ್ವಯಿಸುತ್ತದೆ? ಫೋನ್‌ಪೇ ವ್ಯಾಲೆಟ್‌ನ ಈ ಹೊಸ ಮೈಂಟೆನೆನ್ಸ್ ನಿಯಮದ ಸಂಪೂರ್ಣ ವಿವರ ಇಲ್ಲಿದೆ. ಫೋನ್‌ ಪೇ ತಂದಿರುವ ಹೊಸ ನಿಯಮವೇನು? ಫೋನ್‌ಪೇ ತನ್ನ ಇತ್ತೀಚಿನ ಪಾಲಿಸಿ ಅಪ್‌ಡೇಟ್‌ನಲ್ಲಿ, ಬಳಕೆಯಾಗದೆ ಬಿದ್ದಿರುವ (ಇನ್-ಆಕ್ಟಿವ್) ವ್ಯಾಲೆಟ್‌ಗಳ ಮೇಲೆ ರೂ. 100 ತ್ರೈಮಾಸಿಕ (Quarterly) ಮೈಂಟೆನೆನ್ಸ್ ಶುಲ್ಕವನ್ನು ವಿಧಿಸುವುದಾಗಿ ಪ್ರಕಟಿಸಿದೆ. ಯಾವುದೇ ಬಳಕೆದಾರರು ತಮ್ಮ ಫೋನ್‌ಪೇ ವ್ಯಾಲೆಟ್ ಮೂಲಕ ವರ್ಷವಿಡೀ ಯಾವುದೇ ಆರ್ಥಿಕ ವಹಿವಾಟು ನಡೆಸದಿದ್ದರೆ, ಅಂತಹ ವ್ಯಾಲೆಟ್ ಅನ್ನು ‘ಇನ್-ಆಕ್ಟಿವ್’ ಎಂದು ಪರಿಗಣಿಸಲಾಗುತ್ತದೆ. ಪ್ಲಾಟ್‌ಫಾರ್ಮ್‌ನ ಸುಧಾರಣೆ ಮತ್ತು ಭದ್ರತಾ ಮಾನದಂಡಗಳನ್ನು ಕಾಯ್ದುಕೊಳ್ಳಲು ಈ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.…

Read More

ರೈತರಿಗೆ ಕೇಂದ್ರ ಸರ್ಕಾರವು ಸೂಪರ್ ನ್ಯೂಸ್ ನೀಡಿದೆ. ರೈತರಿಗೆ ನೀಡಲಾಗುವ ಬಹುನಿರೀಕ್ಷಿತ ಪಿಎಂ ಕಿಸಾನ್ (PM-Kisan) ಯೋಜನೆಯ ಹಣವನ್ನು ಜೂನ್ 20 ರಂದು ಬಿಡುಗಡೆ ಮಾಡಲಾಗುತ್ತಿದೆ. 2026-27ರ ಹಣಕಾಸು ವರ್ಷದ ಮೊದಲ ಕಂತಿನ ಹಣವನ್ನು ಶನಿವಾರದಂದು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈ ಹಿಂದೆ 22ನೇ ಕಂತಿನ ಹಣವನ್ನು ಅಸ್ಸಾಂನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದರು. ಈಗ 23ನೇ ಕಂತಿನ ಹಣವನ್ನು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್ನಿಂದ ರಿಲೀಸ್ ಮಾಡಲಿದ್ದಾರೆ. ಈ ಯೋಜನೆಯಡಿ ದೇಶದ ಸುಮಾರು 9.44 ಕೋಟಿ ರೈತರ ಖಾತೆಗಳಿಗೆ ಒಟ್ಟು 18,880 ಕೋಟಿ ರೂಪಾಯಿ ಜಮೆಯಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಂದು ಪ್ರಮುಖ ಪ್ರಕಟಣೆ ಹೊರಡಿಸಿದ್ದು, ಪಿಎಂ ಕಿಸಾನ್ ಹಣವನ್ನು ಪಡೆಯಲು ಫಲಾನುಭವಿಗಳು ಇ-ಕೆವೈಸಿ (e-KYC) ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ. ಒಟಿಪಿ (OTP) ಕಡ್ಡಾಯ ಪಿಎಂ ಕಿಸಾನ್ ಪೋರ್ಟಲ್ ಮೂಲಕ ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಕೊಳ್ಳಬಹುದು ಎಂದು ಕೇಂದ್ರ ತಿಳಿಸಿದೆ.…

Read More

ನವದೆಹಲಿ : ಸ್ಥಳೀಯ ದಿನಸಿ ಅಂಗಡಿಯ ಮುಂದಿರುವ ಸಣ್ಣ ಕ್ಯೂಆರ್ ಕೋಡ್ (QR Code), ಸ್ನೇಹಿತರಿಗೆ ಕ್ಷಣಮಾತ್ರದಲ್ಲಿ ಹಣ ಕಳುಹಿಸುವುದು ಅಥವಾ ತಕ್ಷಣವೇ ಬಿಲ್ ಪಾವತಿಸುವುದು—ಇವೆಲ್ಲವೂ ಇಂದು ಕೋಟ್ಯಂತರ ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಈ ಅತ್ಯಂತ ಸರಳ ಅನುಭವದ ಹಿಂದೆ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬ ಶಕ್ತಿಶಾಲಿ ಡಿಜಿಟಲ್ ಮೂಲಸೌಕರ್ಯ ಕೆಲಸ ಮಾಡುತ್ತಿದೆ. ನಗದು ಮತ್ತು ಸಾಂಪ್ರದಾಯಿಕ ಬ್ಯಾಂಕಿಂಗ್ ಪ್ರಕ್ರಿಯೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಹಣಕಾಸಿನ ವಹಿವಾಟುಗಳನ್ನು ವೇಗಗೊಳಿಸಲು ಇದನ್ನು ಪ್ರಾರಂಭಿಸಲಾಯಿತು. ಯುಪಿಐ ಯಶಸ್ಸು ಕೇವಲ ಸೌಕರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ತಂತ್ರಜ್ಞಾನ, ನಾವೀನ್ಯತೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯ (Financial Inclusion) ಅದ್ಭುತ ಕಥೆಯಾಗಿದೆ. ಇದರ ಹಿಂದೆ ಸುರಕ್ಷಿತ ಡೇಟಾ ವಿನಿಮಯ, ಬ್ಯಾಂಕಿಂಗ್ ನೆಟ್‌ವರ್ಕ್‌ಗಳು ಮತ್ತು ನೈಜ-ಸಮಯದ (Real-time) ಸಂವಹನ ವ್ಯವಸ್ಥೆಗಳ ತಾಂತ್ರಿಕ ವಿಜ್ಞಾನ ಅಡಗಿದೆ. ಯುಪಿಐ ಹಿಂದಿರುವ ತಂತ್ರಜ್ಞಾನವೇನು? ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಅಭಿವೃದ್ಧಿಪಡಿಸಿರುವ ಯುಪಿಐ, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ…

Read More

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಲಾಕರ್‌ಗಳಲ್ಲಿ ಇಟ್ಟಿದ್ದ ಚಿನ್ನಾಭರಣಗಳು ಕಳವಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಂತಹ ಘಟನೆಗಳು ಸಂಭವಿಸಿದಾಗ ಗ್ರಾಹಕರಲ್ಲಿ ಒಂದು ಪ್ರಮುಖ ಪ್ರಶ್ನೆ ಮೂಡುವುದು ಸಹಜ: ಲಾಕರ್‌ನಲ್ಲಿರುವ ಚಿನ್ನ ಕಾಣೆಯಾದರೆ ಬ್ಯಾಂಕ್ ನಷ್ಟ ಪರಿಹಾರ ನೀಡುತ್ತದೆಯೇ? ನೀಡಿದರೆ ಎಷ್ಟು ನೀಡುತ್ತದೆ? ಬ್ಯಾಂಕ್ ಲಾಕರ್ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಬ್ಯಾಂಕ್ ಜವಾಬ್ದಾರಿ ಯಾವಾಗ ಇರುತ್ತದೆ? ಆರ್‌ಬಿಐ ನಿಯಮಗಳ ಪ್ರಕಾರ, ಗ್ರಾಹಕರು ಲಾಕರ್‌ನಲ್ಲಿ ಏನೇನು ವಸ್ತುಗಳನ್ನು ಇಟ್ಟಿದ್ದಾರೆ ಎಂಬುದನ್ನು ಬ್ಯಾಂಕುಗಳು ದಾಖಲಿಸಿಕೊಳ್ಳುವುದಿಲ್ಲ. ಹಾಗಾಗಿ ಲಾಕರ್‌ನಲ್ಲಿರುವ ವಸ್ತುಗಳ ಜವಾಬ್ದಾರಿ ಸಂಪೂರ್ಣವಾಗಿ ಗ್ರಾಹಕರದ್ದೇ ಆಗಿರುತ್ತದೆ. ಆದರೆ, ಬ್ಯಾಂಕಿನ ನಿರ್ಲಕ್ಷ್ಯ, ನೌಕರರ ವಂಚನೆ, ಭದ್ರತಾ ಲೋಪಗಳು ಅಥವಾ ಲಾಕರ್ ನಿರ್ವಹಣೆಯಲ್ಲಿನ ವೈಫಲ್ಯದಿಂದಾಗಿ ವಸ್ತುಗಳು ಕಳವಾಗಿದ್ದರೆ, ಬ್ಯಾಂಕ್ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಕಡ್ಡಾಯವಾಗಿ ನಷ್ಟ ಪರಿಹಾರ ನೀಡಬೇಕಾಗುತ್ತದೆ. ಸಿಗುವ ನಷ್ಟ ಪರಿಹಾರ ಎಷ್ಟು? ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ…

Read More

ಛತ್ತೀಸ್‌ಗಢ: ಪತ್ನಿಯ ಚಾರಿತ್ರ್ಯದ ಮೇಲೆ ಶಂಕೆ ವ್ಯಕ್ತಪಡಿಸಿ ಆಕೆಗೆ ಕ್ರೂರವಾಗಿ ಥಳಿಸಿ, ತಲೆಬೋಳಿಸಿದ ಅಮಾನವೀಯ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಿತೇಂದ್ರ ಘಾಸಿಯಾ ಎಂದು ಗುರುತಿಸಲಾಗಿದೆ. ಜಿಲ್ಲೆಯ ಪಾಂಡೋಪಾರಾ ಗ್ರಾಮದಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆದ ಬಳಿಕ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಡೆದಿದ್ದೇನು? ಬಾಧಿತ ಮಹಿಳೆ ನೀಡಿರುವ ದೂರಿನ ಪ್ರಕಾರ, ಆರೋಪಿ ಜಿತೇಂದ್ರ ಘಾಸಿಯಾ ಘಟನೆಯ ದಿನ ಮದ್ಯಪಾನ ಮಾಡಿ ಬಂದು ಜಗಳ ತೆಗೆದಿದ್ದಾನೆ. ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿ, ಕತ್ತರಿ ಹಾಗೂ ಬ್ಲೇಡ್‌ನಿಂದ ಬಲವಂತವಾಗಿ ತಲೆಬೋಳಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಆತ, ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಹೆಚ್ಚಿದ…

Read More

ದೋಹಾ: ಭಾರತದ ಸ್ಟಾರ್ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಅವರು 2026ರ ಕ್ರೀಡಾ ಋತುವಿನ ತಮ್ಮ ಮೊದಲ ಸ್ಪರ್ಧೆಯಲ್ಲೇ ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ದೋಹಾ ಡೈಮಂಡ್ ಲೀಗ್‌ನಲ್ಲಿ ನಿಗದಿತ ಅರ್ಹತಾ ಗುರಿಯನ್ನು ದಾಟುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ತಮ್ಮ ಎರಡನೇ ಪ್ರಯತ್ನದಲ್ಲಿ 82.77 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ, ಕಾಮನ್‌ವೆಲ್ತ್ ಕ್ರೀಡಾಕೂಟದ ಅರ್ಹತಾ ಮಾನದಂಡವಾದ 82.61 ಮೀಟರ್ ಅನ್ನು ನೀರಜ್ ಸುಲಭವಾಗಿ ದಾಟಿದರು. ಈ ಅದ್ಭುತ ಪ್ರದರ್ಶನವು ಅವರನ್ನು ಸ್ಪರ್ಧೆಯ ಆ ಹಂತದಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯಿತಲ್ಲದೆ, ಬಹು-ಕ್ರೀಡಾಕೂಟಕ್ಕೆ ಅವರ ಆಯ್ಕೆಯನ್ನು ಖಚಿತಪಡಿಸಿತು. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ತಾರೆ ದೋಹಾದಲ್ಲಿ ಈ ಋತುವಿನ ತಮ್ಮ ಮೊದಲ ಪಂದ್ಯವನ್ನಾಡಿದ ನೀರಜ್ ಚೋಪ್ರಾ ಅಂತಿಮವಾಗಿ ನಾಲ್ಕನೇ ಸ್ಥಾನ ಪಡೆದರು. ಅವರ ಮೊದಲ ಪ್ರಯತ್ನ ‘ಫೌಲ್’ (Foul) ಆಗಿತ್ತು. ಎರಡನೇ ಪ್ರಯತ್ನದಲ್ಲಿ 82.77 ಮೀಟರ್ ಎಸೆದರು. ಮೂರನೇ ಪ್ರಯತ್ನದಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದ್ದು, ಜಾವೆಲಿನ್…

Read More

ಬೆಂಗಳೂರು: ಜೂನ್ ತಿಂಗಳು ಮುಗಿಯುತ್ತಾ ಬಂದರೂ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಕರ್ನಾಟಕದ ಹಲವೆಡೆ ತೀವ್ರ ಬರದ ಆತಂಕ ಎದುರಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲೇ ಮಳೆರಾಯ ಮುನಿಸಿಕೊಂಡಿದ್ದು, ಜೀವನದಿಗಳ ಒಡಲು ಬತ್ತಿ ಹೋಗುತ್ತಿವೆ. ಜೂನ್ ಮೊದಲ ವಾರದಲ್ಲಿ ಅಬ್ಬರಿಸಿದ್ದ ಮಳೆರಾಯ ಅಷ್ಟೇ ವೇಗದಲ್ಲಿ ಮಾಯವಾಗಿದ್ದು, ಬೆಳೆಗಳು ಒಣಗುವ ಹಂತ ತಲುಪಿವೆ. ಕೋಟಿ ಕೋಟಿ ಜನರಿಗೆ ನೀರುಣಿಸುವ ಕರುನಾಡಿನ ಜೀವನದಿ ಕಾವೇರಿಯ ಉಗಮಸ್ಥಾನವಾದ ಕೊಡಗಿನಲ್ಲೇ ಮುಂಗಾರು ಕೈಕೊಟ್ಟಿದೆ. ಪ್ರತಿವರ್ಷ ಈ ಅವಧಿಗೆ ಮೈದುಂಬಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ಈಗ ಕಲ್ಲುಗಳು ಮಾತ್ರ ಕಾಣಿಸುತ್ತಿದ್ದು, ಕೇವಲ ಅರ್ಧದಿಂದ ಒಂದು ಅಡಿಯಷ್ಟು ಮಾತ್ರ ನೀರು ಹರಿಯುತ್ತಿದೆ. ಹವಮಾನ ವರದಿಯ ಪ್ರಕಾರ ಕೊಡಗಿನಲ್ಲಿ ಈ ಬಾರಿ ಶೇಕಡಾ 70 ರಷ್ಟು ಮಳೆ ಕೊರತೆಯಾಗುವ ಸಾಧ್ಯತೆ ಇದ್ದು, ಇದು ಮುಂಬರುವ ದಿನಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಾವೇರಿ ನೀರಿನ ವಿವಾದಕ್ಕೆ ಕಾರಣವಾಗುವ ಆತಂಕ ಮೂಡಿಸಿದೆ. ಜೂನ್ ಮೊದಲ ವಾರದಲ್ಲಿ ಬಿದ್ದ…

Read More

ನವದೆಹಲಿ : ನೀವು ಹೊಸ ಐಫೋನ್ ಅಥವಾ ಮ್ಯಾಕ್‌ಬುಕ್ ಖರೀದಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದು ಖಚಿತವಾಗಿದೆ. ಜಾಗತಿಕವಾಗಿ ಎದುರಾಗಿರುವ ಮೆಮೊರಿ ಚಿಪ್‌ಗಳ ತೀವ್ರ ಕೊರತೆಯಿಂದಾಗಿ ಆಪಲ್ ಕಂಪನಿಯು ತನ್ನ ಪ್ರಮುಖ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಸ್ಪಷ್ಟ ಸುಳಿವು ನೀಡಿದೆ. ಆಪಲ್ ಸಿಇಒ ಟಿಮ್ ಕುಕ್ ಅವರ ಇತ್ತೀಚಿನ ಹೇಳಿಕೆಗಳು ಈಗ ತಂತ್ರಜ್ಞಾನ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಬೆಲೆ ಏರಿಕೆಗೆ ಕಾರಣವೇನು? ಪ್ರಸ್ತುತ ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ಕ್ರಾಂತಿ ನಡೆಯುತ್ತಿದೆ. ಎಐ ಡೇಟಾ ಸೆಂಟರ್‌ಗಳ ನಿರ್ವಹಣೆಗಾಗಿ ಹೈ-ಬ್ಯಾಂಡ್‌ವಿಡ್ತ್ ಮೆಮರಿ (HBM) ಮತ್ತು ಡಿಆರ್‌ಎಎಮ್ (DRAM) ಚಿಪ್‌ಗಳ ಬೇಡಿಕೆ ವಿಪರೀತವಾಗಿ ಹೆಚ್ಚಾಗಿದೆ. ಚಿಪ್ ತಯಾರಕ ಕಂಪನಿಗಳು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಗಿಂತ ಹೆಚ್ಚಾಗಿ ಎಐ ಡೇಟಾ ಸೆಂಟರ್‌ಗಳಿಗೆ ಆದ್ಯತೆ ನೀಡಿ ಚಿಪ್‌ಗಳನ್ನು ಪೂರೈಸುತ್ತಿವೆ. ಇದರಿಂದಾಗಿ ಸಾಮಾನ್ಯ ಸ್ಮಾರ್ಟ್‌ಫೋನ್ ಹಾಗೂ ಲ್ಯಾಪ್‌ಟಾಪ್‌ಗಳಿಗೆ ಬಳಸುವ ಮೆಮೊರಿ ಚಿಪ್‌ಗಳ ಕೊರತೆ ಉಂಟಾಗಿದ್ದು, ಅವುಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಇಷ್ಟು ದಿನ…

Read More

ಬೆಂಗಳೂರು: ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ ಅವರ ಫೋಟೋ ಮತ್ತು ವಿಡಿಯೋಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ನಿವಾಸಿಗಳಾದ ಚಂದ್ರಕಾಂತ್ ಹಾಗೂ ರಂಜಿತ್ ಮತ್ತು ಬಾಗಲಕೋಟೆ ಮೂಲದ ರವಿಕುಮಾರ್ ಬಂಧಿತ ಆರೋಪಿಗಳು. ಸದ್ಯ ಬಂಧಿತರಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತಮ್ಮ ಹೆಸರಿನಲ್ಲಿ ಹರಿದಾಡುತ್ತಿದ್ದ ಅಶ್ಲೀಲ ಡೀಪ್‌ ಫೇಕ್ ಚಿತ್ರ ಹಾಗೂ ವಿಡಿಯೋಗಳ ವಿರುದ್ಧ ನಟಿ ರುಕ್ಮಿಣಿ ವಸಂತ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಅಧಿಕೃತವಾಗಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Read More