Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ 48 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಲೈಂಗಿಕ ಸಮಸ್ಯೆಗೆ ಪರಿಹಾರ ಮಾಡುವುದಾಗಿ ಹೇಳಿ ಟೆಕ್ಕಿಯಿಂದ 48 ಲಕ್ಷ ರೂ. ದೋಚಲಾಗಿದೆ. ಟೆಕ್ಕಿ 48 ಲಕ್ಷ ರೂ. ಸಾಲ ಮಾಡಿ ಆಯುರ್ವೇದಿಕ್ ಔಷಧಿ ಖರೀದಿಸಿದ್ದರು. ಆದರೆ ಔಷಧಿಯಿಂದ ಸಾಫ್ಟ್ ವೇರ್ ಇಂಜಿನಿಯರ್ ತಮ್ಮ ಕಿಡ್ನಿಯನ್ನೇ ಕಳೆದುಕೊಂಡಿದ್ದಾರೆ. ಪುಟ್ ಪಾತ್ ಪಕ್ಕದ ಟೆಂಟ್ ನಲ್ಲಿ ಆಯುರ್ವೇದ ಚಿಕಿತ್ಸೆ ನೆಪದಲ್ಲಿ ವಂಚಿಸಲಾಗಿದೆ. ಮೊದಲು ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹೋಗಿದ್ದ ವೇಳೆ ವಿಜಯ್ ಗುರೂಜಿಗೆ ಹೇಳಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ವ್ಯಕ್ತಿ ಭರವಸೆ ನೀಡಿದ್ದಾನೆ. ದೇವರಾಜ್ ಬೂಟಿ ಹೆಸರಿನ 1 ಗ್ರಾಂ ಔಷಧಿಗೆ 1,60,000 ರೂ. ದರ ನಿಗದಿ ಮಾಡಲಾಗಿದೆ. ಯಶವಂತಪುರದ ಆಯುರ್ವೇದಿಕ್ ಶಾಪ್ ನಲ್ಲಿ ಖರೀದಿಸುವಂತೆ ಸಲಹೆ ನೀಡಿದ್ದಾನೆ. ವಿಜಯಲಕ್ಷ್ಮೀ ಶಾಪ್…
ಎಡಿಟರ್ ಡೆಸ್ಕ್: ಕನ್ನಡ ನ್ಯೂಸ್‌ನೌ ನಿಂದ ಮತ್ತೊಂದು ಹೊಸ ಸುದ್ದಿ ವೆಬ್‌ಸೈಟ್ ಶುರುವಾಗಲಿದ್ದು. ಇಲ್ಲಿಗೆ ಜಿಲ್ಲಾವಾರು ವರದಿಗಾರರು ಬೇಕಾಗಿದ್ದಾರೆ. ವರದಿಗಾರಿಕೆಯಲ್ಲಿ ತೀವ್ರ ಆಸಕ್ತಿ, ಸಾಮಾನ್ಯ ಜ್ಞಾನ, ಪ್ರಸಕ್ತ ವಿದ್ಯಮಾನಗಳ ಅರಿವು ಅನಿವಾರ್ಯ. ಸುಲಲಿತವಾಗಿ ಕನ್ನಡ ಮಾತಾಡಲು, ಘಟನೆ ನಡೆಯುತ್ತಿರುವಲ್ಲಿಂದಲೇ ವರದಿ, ಸಂದರ್ಶನ ಮಾಡಲು ತಿಳಿದಿರಬೇಕು. ಒಂದೆರಡು ವರ್ಷಗಳ ಅನುಭವ ಇರುವವರಿಗೆ ಆದ್ಯತೆ. ಹೊಸಬರಿಗೂ ಅವಕಾಶವಿದೆ. ಆಸಕ್ತರು ಕೂಡಲೇ ಸಂಪೂರ್ಣ ವಿವರಗಳುಳ್ಳ ಅರ್ಜಿ ಸಲ್ಲಿಸಿ ನಮ್ಮ ಮೇಲ್ ಐಡಿ kannadanadudigi@gmail.com
ದುಮ್ಕಾ:ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಜಾರ್ಖಂಡ್ ನ ದುಮ್ಕಾದಲ್ಲಿ ಇಂದು ಬೆಳಿಗ್ಗೆ ದುಷ್ಕರ್ಮಿಗಳು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹನ್ಸ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಧೆತ್ ಪಂಚಾಯತ್ನ ಬರ್ದೇಹಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆಗಳು ಇಡೀ ಪ್ರದೇಶದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿವೆ. ವರದಿಗಳ ಪ್ರಕಾರ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮನೆಯಲ್ಲಿ ಮಲಗಿದ್ದಾಗ ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ, ಆದರೆ ಪತಿಯ ಶವ ಸುಮಾರು 500 ಮೀಟರ್ ದೂರದ ಹೊಲದಲ್ಲಿ ಪತ್ತೆಯಾಗಿದೆ. ಗ್ರಾಮಸ್ಥರು ಬೆಳಿಗ್ಗೆ ಹೊರಗೆ ಹೋದಾಗ, ಶವಗಳು ಪತ್ತೆಯಾಗಿವೆ. ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡವನ್ನು ಕರೆಸಿ ತನಿಖೆ ಆರಂಭಿಸಿದ್ದಾರೆ. ಮೃತರೆಲ್ಲರನ್ನೂ ಗುರುತಿಸಲಾಗಿದೆ. ಮೃತರನ್ನು ಬೀರೇಂದ್ರ ಮಾಂಝಿ (30), ಆರತಿ ಕುಮಾರ್ (24), ರೋಹಿ ಕುಮಾರಿ (4) ಮತ್ತು…
ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಬಾಂಬರ್ ಉಮರ್ ಸಂಪರ್ಕದಲ್ಲಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆತ್ಮಾಹುತಿ ಬಾಂಬರ್ ಉಮರ್ ಸಂಪರ್ಕದಲ್ಲಿದ್ದ ತುಫೈಲ್ ನಿಯಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ನವೆಂಬರ್ 10ರಂದು ಸಂಜೆ ದೆಹಲಿಯ ಕೆಂಪುಖೋಟೆಯ ಮೆಟ್ರೋ ನಿಲ್ದಾಣದ ಬಳಿ i20 ಕಾರು ಸ್ಫೋಟಗೊಂಡಿತ್ತು. ಆತ್ಮಾಹುತಿ ಬಾಂಬರ್ ಕಾರು ಸ್ಫೋಟಿಸಿದ್ದ. ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಕೃತ್ಯದ ಹಿಂದೆ ವೈಟ್ ಕಾಲರ್ ಉಗ್ರರ ಕೈವಾಡವಿರುದು ದೃಢಪಟ್ಟಿದೆ. ಇದಕ್ಕೂ ಮುನ್ನ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಂಚುಕೋರ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ ಕಾರು ಸ್ಫೋಟದಲ್ಲಿ ಭಯೋತ್ಪಾದಕ ಉಮರ್ ಗೆ ಸಹಾಯ ಮಾಡಿದ ಸಕ್ರಿಯ ಸಹ-ಸಂಚುಕೋರ ಜಾಸಿರ್ ಬಿಲಾಲ್ ಅಲಿಯಾಸ್ ಡ್ಯಾನಿಶ್. ಜೈಶ್-ಎ-ಮೊಹಮ್ಮದ್ ಸಂಘಟನೆಯ ಆಶ್ರಯದಲ್ಲಿ ವೈದ್ಯರನ್ನು ಬ್ರೈನ್ ವಾಶ್ ಮಾಡಿದವನು ಈತ.…
ಚಾಮರಾಜನಗರ : ಬೆಂಗಳೂರಲ್ಲಿ 7 ಕೋಟಿ 11 ಲಕ್ಷ ದರೋಡೆ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ, ರಾಜ್ಯದಲ್ಲಿ ಮತ್ತೊಂದು ದರೋಡೆ ನಡೆದಿದ್ದು ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ವ್ಯಾಪಾರಿಯ ಕಾರು ಅಡ್ಡಗಟ್ಟಿ ಕೋಟ್ಯಾಂತರ ಮೌಲ್ಯದ ನಾಣ್ಯ ದರೋಡೆ ಮಾಡಲಾಗಿದ. ಹೌದು ಕೇರಳದ ದರೋಡೆ ಗ್ಯಾಂಗ್ ಒಂದು ತಡರಾತ್ರಿ ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಬಂಡಿಪುರ ಅರಣ್ಯದಲ್ಲಿ ಚಿನ್ನದ ವ್ಯಾಪಾರಿ ಕಾರನ್ನು ಅಡ್ಡಗಟ್ಟಿ ನಗನಾಣ್ಯ ದೋಚಿ ಪರಾರಿಯಾಗಿದ್ದಾರೆ. ರಾತ್ರಿ ಮೂಲೆಹೊಳೆ ಮೂಲಕ ಕೇರಳಕ್ಕೆ ಚಿನ್ನದ ವ್ಯಾಪಾರಿ ತೆರಳಿದ್ದ. ವ್ಯಾಪಾರವನ್ನು ಹಿಂಬಾಲಿಸಿ ಕೆರಳ ಗ್ಯಾಂಗ್ ದರೋಡೆ ಮಾಡಿದೆ. ಕಳೆದ 3-4 ವರ್ಷಗಳಿಂದ ಈ ಒಂದು ಕೇರಳ ಗ್ಯಾಂಗ್ ಸಕ್ರಿಯವಾಗಿದೆ ದೂರು ನೀಡಲು ಚಿನ್ನದ ವ್ಯಾಪಾರಿ ಮೀನಾ ಮೇಷ ಎಣಿಸುತ್ತಿದ್ದು, ಪ್ರಕರಣದ ಮಾಹಿತಿ ಸೋರಿಕೆ ಆಗದಂತೆ ವ್ಯಾಪಾರಿ ನೋಡಿ ಅಂತ ಹೇಳಿದ್ದ. ಪೊಲೀಸರು ಗದರಿದ ನಂತರ ವ್ಯಾಪಾರಿ ಗುಂಡ್ಲುಪೇಟೆ ಠಾಣೆಗೆ ಬಂದಿದ್ದಾನೆ ದೂರು ನೀಡಲು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ವ್ಯಾಪಾರಿ ಬಂದಿದ್ದಾನೆ. ಸದ್ಯ ಪೊಲೀಸರಿಂದ ಚೆಕ್ಪೋಸ್ಟ್ ಬಳಿಯ ಸಿಸಿ ಕ್ಯಾಮೆರಾ…
ಮಂಡ್ಯ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಪೇಂಟ್ ತರಲು ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಪೇಂಟ್ ತರಲು ಹೋದ ವ್ಯಕ್ತಿ ಕಾರ್ಡಿಯಾ ಅಟ್ಯಾಕ್ ನಿಂದ ಪೇಂಟ್ ಅಂಗಡಿಯಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತಕ್ಕೆ ಬಲಿಯಾದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ(58) ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿ. ಹಲಗೂರಿನ ಪೇಂಟ್ ಅಂಗಡಿಯೊಂದಕ್ಕೆ ತೆರಳಿದ್ದ ಈರಣ್ಣಯ್ಯ.ಈ ವೇಳೆ ಏಕಾಏಕಿ ನಿಂತಲ್ಲೆ ಕುಸಿದು ಬಿದ್ದಿದ್ದಾರೆ. ಅಂಗಡಿ ಮಾಲೀಕ ಮೇಲೆತ್ತುವಷ್ಟರಲ್ಲಿ ಸ್ಥಳದಲ್ಲೆ ಈರಣ್ಣಯ್ಯ ಸಾವನ್ನಪ್ಪಿದ್ದಾರೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಶೇ.50ರಷ್ಟು ರಿಯಾಯಿತಿಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸೋದಕ್ಕೆ ಮತ್ತೆ ಅವಕಾಶ ನೀಡಿದೆ. ಈ ಬೆನ್ನಲ್ಲೇ ಆನ್ ಲೈನ್ ವಂಚಕರ ಜಾಲವೂ ಸಕ್ರೀಯವಾಗಿದೆ. ಆರ್ ಟಿ ಓ ಚಲನ್ ಎಂಬುದಾಗಿ ಆಪ್ ಫೈಲ್ ಬಂದಿದ್ದರೇ ಕ್ಲಿಕ್ ಮಾಡಬೇಡಿ ಎಂಬುದಾಗಿ ಇಲಾಖೆ ಎಚ್ಚರಿಸಿದೆ. ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಆರ್.ಟಿ.ಓ ಚಲನ್ ಎಂದು ನಂಬಿಸಿ ವಂಚಿಸುತ್ತಾರೆ. ಎಚ್ಚರ..! ಯಾವುದೇ ಕಾರಣಕ್ಕೂ ಇಂಥ Apk ಫೈಲ್‌ಗಳ ಮೇಲೆ ಕ್ಲಿಕ್ ಮಾಡದಿರಿ ಎಂಬುದಾಗಿ ಮನವಿ ಮಾಡಿದೆ. ಇನ್ನೂ ಒಂದು ವೇಳೆ ನೀವು ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ಪಡೆದು, ಪಾವತಿಸೋದಕ್ಕೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಂತೆ ತಿಳಿಸಿದೆ. ವಾಹನ ಮಾಲೀಕರು ಆರ್ ಟಿ ಓ ಚಲನ್ ಎಂಬುದಾಗಿ ಬಂದಂತ Apk ಫೈಲ್ ಡೌನ್ ಲೋಡ್ ಮಾಡಿಕೊಂಡರೇ, ಮೊಬೈಲ್ ನಲ್ಲಿನ ಗೌಪ್ಯ ದತ್ತಾಂಶಗಳನ್ನು ಆನ್ ಲೈನ್ ಕಳ್ಳರು ಕದಿಯೋ ಸಾಧ್ಯತೆ ಇದೆ. ಆ…
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುತ್ತಾರೆ. ಪ್ರತಿಯೊಬ್ಬರಿಗೂ ಅಡುಗೆ ಅನಿಲ ಸಿಲಿಂಡರ್ ಇರಬೇಕು ಮತ್ತು ಸೌದೆ ಒಲೆಯ ಮೇಲೆ ಅಡುಗೆ ಮಾಡಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಉಜ್ವಲ ಯೋಜನೆಯನ್ನು ಲಭ್ಯಗೊಳಿಸಿದೆ. ಆದಾಗ್ಯೂ, ಪ್ರಸ್ತುತ, ದೇಶದ ಪ್ರತಿಯೊಂದು ಮನೆಯಲ್ಲೂ ಗ್ಯಾಸ್ ಸಿಲಿಂಡರ್‌ಗಳು ಲಭ್ಯವಿದೆ. ಆದಾಗ್ಯೂ, ನೀವು ಬಯಸಿದಂತೆ ಗ್ಯಾಸ್ ಸಿಲಿಂಡರ್ ಅನ್ನು ಬಳಸಿದರೆ, ಗ್ಯಾಸ್ ಬೇಗನೆ ಖಾಲಿಯಾಗುವ ಸಾಧ್ಯತೆಯಿದೆ. ನೀವು ಕೆಲವು ತಂತ್ರಗಳನ್ನು ಅನುಸರಿಸಿದರೆ, ನೀವು ಗ್ಯಾಸ್ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಬಹುದು. ಬರ್ನರ್: ಅನೇಕ ಜನರು ಅಡುಗೆ ಮಾಡುವಾಗ ಬರ್ನರ್ ಅನ್ನು ಮೇಲಕ್ಕೆ ತಿರುಗಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದರಿಂದಾಗಿ, ನಿಮ್ಮ ಎಲ್‌ಪಿಜಿ ಅನಿಲ ಬೇಗನೆ ಖಾಲಿಯಾಗಬಹುದು. ಅದಕ್ಕಾಗಿಯೇ ನೀವು ಏನನ್ನಾದರೂ ಬಿಸಿ ಮಾಡಲು ಅಥವಾ ಬೇಯಿಸಲು ಬಯಸಿದರೆ, ಜ್ವಾಲೆಯು ಪಾತ್ರೆಯ ಕೆಳಭಾಗದಲ್ಲಿರುವಂತೆ ಬರ್ನರ್ ಅನ್ನು ತಿರುಗಿಸಿದರೆ ಸಾಕು. ಈ ಕಾರಣದಿಂದಾಗಿ, ಎಲ್‌ಪಿಜಿ ಸಿಲಿಂಡರ್ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಸ್ಟೌವ್ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು: ನಿಮ್ಮ ಸ್ಟೌವ್…
ವೈದ್ಯಕೀಯ ವಿಜ್ಞಾನದ ಪ್ರಕಾರ ವಯಸ್ಸಿನ ವ್ಯಕ್ತಿಗೆ ಸಾಕಷ್ಟು ನಿದ್ರೆ ಮಾಡುವುದು ಮುಖ್ಯ. ಏಕೆಂದರೆ ಸಾಕಷ್ಟು ನಿದ್ದೆ ಮಾಡುವುದರಿಂದ ವ್ಯಕ್ತಿಯು ಒತ್ತಡ ಮತ್ತು ಖಿನ್ನತೆಯಿಂದ ಬಳಲುವುದಿಲ್ಲ ಮತ್ತು ಮೆದುಳಿನ ಕಾರ್ಯನಿರ್ವಹಣೆಯು ಉತ್ತಮವಾಗಿ ಉಳಿಯುತ್ತದೆ. ಇಂದು ಈ ವಿಷಯದಲ್ಲಿ ನಾವು ವಯಸ್ಸಿಗೆ ಅನುಗುಣವಾಗಿ ಎಷ್ಟು ಗಂಟೆಗಳ ನಿದ್ರೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿಯಲು ಪ್ರಯತ್ನಿಸುತ್ತೇವೆ. ಆದ್ದರಿಂದ ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. 1. ನವಜಾತ ಶಿಶುವಿನ. ವೈದ್ಯಕೀಯ ವಿಜ್ಞಾನದ ಪ್ರಕಾರ, ನವಜಾತ ಶಿಶುಗಳು ಸರಿಸುಮಾರು 14-17 ಗಂಟೆಗಳ ನಿದ್ದೆ ತೆಗೆದುಕೊಳ್ಳಬೇಕು. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. 2. 3-5 ವರ್ಷ ವಯಸ್ಸು. ತಜ್ಞರ ಪ್ರಕಾರ, ಈ ವಯಸ್ಸಿನ ಮಕ್ಕಳಿಗೆ 10-13 ಗಂಟೆಗಳ ನಿದ್ರೆ ಸಾಕಷ್ಟು ನಿದ್ರೆ ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ. 3. 6-13 ವರ್ಷ ವಯಸ್ಸು. ವೈದ್ಯರ ಪ್ರಕಾರ, ನ್ಯಾಷನಲ್ ಸ್ಲೀಪ್ ಫೌಂಡೇಶನ್ (ಎನ್ಎಸ್ಎಫ್) ಈ ಮಕ್ಕಳಿಗೆ 9 ರಿಂದ 11 ಗಂಟೆಗಳ ನಿದ್ರೆಯನ್ನು ಶಿಫಾರಸು ಮಾಡುತ್ತದೆ. ಎಷ್ಟೋ ಗಂಟೆಗಳ ನಿದ್ದೆ ಅವರನ್ನು…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರೇ ಗಮನಿಸಿ. ಕರ್ನಾಟಕ ನಾಗರಿಕ ಸೇವೆ (ವರ್ತನೆ) ನಿಯಮಗಳು 1966ರ ಮುಖ್ಯಾಂಶಗಳು ಉಲ್ಲಂಘನೆಗೆ ವಿಧಿಸಬಹುದಾದ ದಂಡನೆಗಳು ಹಾಗೂ ಕೆ.ಸಿ.ಎಸ್. (ಸಿಸಿಎ) ನಿಯಮಗಳ ಸ್ಕೂಲ ಪರಿಚಯ ಇಲ್ಲಿದೆ. ಈ ನಿಯಮಗಳು ಸರ್ಕಾರಿ ಹುದ್ದೆಗಳಿಗೆ ನೇಮಿಸಿದ ಮತ್ತು ಸರ್ಕಾರಿ ಕಾರ್ಯ ಸಂಬಂಧಕ್ಕೆ ತೈನಾತಿಸಲ್ಪಟ್ಟ ಎಲ್ಲಾ ನೌಕರರಿಗೂ ಅನ್ವಯಿಸುತ್ತದೆ. (ನಿಯಮ 1) ಆದರೆ ಈ ಮುಂದೆ ಕಾಣಿಸಿದ ವರ್ಗಕ್ಕೆ ಸೇರಿದ ನೌಕರರಿಗೆ ಅನ್ವಯವಾಗುವುದಿಲ್ಲ. ಅ) ಅಖಿಲ ಭಾರತ ಸೇವಾ ಸದಸ್ಯರು ಆ) ರಾಜ್ಯಪಾಲರು, ಸಾಮಾನ್ಯ ಅಥವಾ ವಿಶೇಷ ಅಧಿಸೂಚನೆ ಹೊರಡಿಸಿ ಯಾವ ಹುದ್ದೆಯಲಿ ಇರುವಂತಹವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಿರುವ ನೌಕರರು. ಇ) ಔದ್ಯಮಿಕ ನಿಯೋಜನೆ (ಸ್ಥಾಯೀ ಆದೇಶಗಳು) ಶಾಸನ 1946 (1946ರ ಕೇಂದ್ರ ಶಾಸನ ಸಂಖ್ಯೆ 20)ರ ಉಪಬಂಧಗಳು ಅನ್ವಯವಾಗುವ ಸರ್ಕಾರದ ಯಾವುದೇ ಕೈಗಾರಿಕಾ ಉದ್ಯಮದ ನೌಕರರು. ಅರ್ಥವಿವರಣೆ : (ನಿಯಮ 2) (ಅ) ಸರ್ಕಾರ ಎಂದರೆ : ಕರ್ನಾಟಕ ಸಕಾರ (ಆ) ಸರ್ಕಾರಿ ನೌಕರ ಎಂದರೆ…














