Author: kannadanewsnow57

ಕೋಲಾರ : ರಾಜ್ಯದಲ್ಲಿ ಮತ್ತೊಂದು ಘೋರ ಘಟನೆಯೊಂದು ನಡೆದಿದ್ದು, ಸೀಮೆಎಣ್ಣೆ ಸುರಿದುಕೊಂಡು ತಾಯಿ,ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಿಕೆರೆ ನಡೆದಿದೆ. ಅರಿಕೆರೆ ಗ್ರಾಮದ ಬಳಿ ಕೋಳಿಫಾರಂನಲ್ಲಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ರಶ್ಮಿಪ್ರಿಯ (34) ಹಾಗೂ ಪ್ರಭಾತ್ (7) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪತಿ ದೀಪಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಮಂಡ್ಯ : ಮಂಡ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಘಟನೆ ನಡೆದಿದೆ. ಮದುವೆ ಕ್ಯಾನ್ಸಲ್ ಆಗಿದ್ದಕ್ಕೆ ಮನನೊಂದು ಯುವತಿ ಕಾವ್ಯ (26) ಕ್ರಿಮಿನಾಶ ಸೇವಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಹಾಸನ ಮೂಲದ ಯುವಕನ ಜೊತೆಗೆ ಕಾವ್ಯಾಗೆ ಮದುವೆ ಫಿಕ್ಸ್ ಆಗಿತ್ತು. ಯುವಕನ ಮನೆಯವರು ಮದುವೆ ಕ್ಯಾನ್ಸಲ್ ಮಾಡಿಕೊಂಡ ಹಿನ್ನೆಲೆಯಲ್ಲಿ ಮನನೊಂದು ಕಾವ್ಯಾ ಕ್ರಿಮಿನಾಶ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪೊಲೀಸ್, ಶಿಕ್ಷಣ, ಕೃಷಿ ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಲ್ಲಿ ಅನುಮೋದಿತ ಹುದ್ದೆಗಳ ನೇರ ನೇಮಕಾತಿಗೆ ಹೊಸದಾಗಿ ಅಧಿಸೂಚನೆ ಹೊರಬೀಳಲಿದೆ. ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣದಂತೆ ಈಗಾಗಲೇ ನಿಗದಿಯಾದ ರೋಸ್ಟರ್ ಬಿಂದು ಆಧರಿಸಿ ಅನುಮೋದಿತ ಹುದ್ದೆಗಳ ನೇರ ನೇಮಕಾತಿಗೆ ಹೊಸದಾಗಿ ಅಧಿಸೂಚನೆ ಹೊರಡಿಸಲು ಮತ್ತು ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದೆ. ಕೃಷಿ, ಪಶು ಸಂಗೋಪನೆ, ಶಿಕ್ಷಣ, ಪೊಲೀಸ್, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 80,000ಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಸಂಬಂಧಿತ ನೇಮಕಾತಿ ಪ್ರಾಧಿಕಾರಗಳಿಂದ ಸರಣಿ ಅಧಿಸೂಚನೆಗಳು ಶೀಘ್ರವೇ ಹೊರಬೀಳಲಿವೆ. ಈ ಮೂಲಕ ವರ್ಷಗಳಿಂದ ಸ್ಥಗಿತಗೊಂಡಿದ್ದ ನೇಮಕ ಪ್ರಕ್ರಿಯೆ ಶುರುವಾಗಲಿದೆ. ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನ ಆಧರಿಸಿ ಹೊರಡಿಸಿದ ಈ ಸುತ್ತೋಲೆಯಿಂದಾಗಿ ಕಳೆದ…

Read More

ಬೆಂಗಳೂರು: ನಾಡಹಬ್ಬ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಿರುವ ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡಬೇಕೆಂಬ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ. ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ. ಸರ್ಕಾರದ ಕ್ರಮಕ್ಕೆ ತಡೆ ನೀಡಬೇಕು. ಮೈಸೂರಿನ ರಾಜಮನಎತನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿಯಾಗಿದೆ. ಬಾನು ಮುಷ್ತಾಕ್ ಅವರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶನ ನೀಡುವಂತೆ ಪ್ರತಾಪ್ ಸಿಂಹ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ರೈಲ್ವೆ ಹಳಿ ಮೇಲೆ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ದೀಪಾಂಜಲಿ ನಗರದ ರೈಲ್ವೆ ಟ್ರ್ಯಾಕ್ ಮೇಲೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಶವದ ಗುರುತು ಸಿಕ್ಕಿಲ್ಲ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಗುರುತು ಪತ್ತೆಗೆ ತನಿಖೆ ನಡೆಸಿದ್ದಾರೆ

Read More

ಬೆಂಗಳೂರು : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಚಿವ ಮಧು ಬಂಗಾರಪ್ಪ ಸಿಹಿಸುದ್ದಿ ನೀಡಿದ್ದು, ನಮ್ಮ ಸರ್ಕಾರ 18000 ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ” ಮತ್ತು “ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ”ವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಕೆಪಿಎಸ್ ಶಾಲೆಗಳ ಸಂಖ್ಯೆಯನ್ನು 800 ಕ್ಕೆ ಹೆಚ್ಚಳ ಮಾಡಲಾಗಿದೆ. ಎಲ್ಕೆಜಿ ಶಾಲೆಗಳ ಸಂಖ್ಯೆಯನ್ನು 1 ಸಾವಿರದಿಂದ 4ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಶಾಲಾ ಮಕ್ಕಳಿಗೆ ವಾರದ ಎಲ್ಲಾ ದಿನಗಳಂದು ಮೊಟ್ಟೆ ನೀಡಲಾಗುತ್ತಿದೆ. 50 ಪಿಯು…

Read More

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭಾರತೀಯ ಸೇನೆ ಹಾಗೂ ಇತರೆ ಯೂನಿಫಾರ್ಮ ಸೇವೆಗಳಿಗೆ ಸೇರಬಯಸುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ 2025-26 ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗೆ 3ನೇ ಬ್ಯಾಚ್ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗಳ ಅರ್ಹ ಅಭ್ಯರ್ಥಿಗಳು (ಬಾಲಕರಿಗೆ ಮಾತ್ರ) ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತೆ: ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿಯು ಪ್ರವರ್ಗ-1ರ ರೂ.2.50 ಲಕ್ಷ ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ)ರ ರೂ.1 ಲಕ್ಷ ಇರಬೇಕು.ಅಭ್ಯರ್ಥಿಯು 10ನೇ ತರಗತಿಯಲ್ಲಿ ಉತ್ತಿರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕ ಮತ್ತು ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಸಮಾನವಾದ ಗ್ರೇಡ್ ಪಡೆದಿರಬೇಕು. ಅಭ್ಯರ್ಥಿಯ ವಯೋಮಿತಿ 17 ರಿಂದ 20 ವರ್ಷದೊಳಗಿರಬೇಕು. ಸೆಪ್ಟಂಬರ್-01 2025ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸನ್ನು ಪರಿಗಣಿಸಲಾಗುವುದು.…

Read More

ಭೂಮಿಯ ನೆರಳಿನ ಮೂಲಕ ಹಾದುಹೋಗುವಾಗ ಚಂದ್ರನು ಕೆಂಪು ಬಣ್ಣದಲ್ಲಿ ಹೊಳೆಯುವ ಅಸಾಧಾರಣ ಖಗೋಳ ಘಟನೆಗೆ ಭಾರತ ಸಾಕ್ಷಿಯಾಗಲಿದೆ. ಈ ಘಟನೆಯನ್ನು ಬ್ಲಡ್ ಮೂನ್ ಮತ್ತು ವಿದ್ಯಮಾನವನ್ನು ಸಂಪೂರ್ಣ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. ಈ ಅಪರೂಪದ ವಿದ್ಯಮಾನವು ದೇಶದ ಹೆಚ್ಚಿನ ಭಾಗಗಳಲ್ಲಿ ಗೋಚರಿಸುತ್ತದೆ, ಅತ್ಯಂತ ನಾಟಕೀಯ ಹಂತವು ತಡರಾತ್ರಿ ಸಂಭವಿಸುತ್ತದೆ ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಇರುತ್ತದೆ. ಭಾರತದಲ್ಲಿ ಗ್ರಹಣ ಸಮಯ ಚಂದ್ರ ಗ್ರಹಣವು ಸೆಪ್ಟೆಂಬರ್ 7 ರಂದು ರಾತ್ರಿ 8:58 ಕ್ಕೆ (ಪೆನಂಬ್ರಲ್ ಹಂತ) ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 8 ರಂದು ಮುಂಜಾನೆ 2:25 ಕ್ಕೆ ಕೊನೆಗೊಳ್ಳುತ್ತದೆ, ಆದರೆ ಈ ಘಟನೆಯ ಮುಖ್ಯಾಂಶವೆಂದರೆ, ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿ ಮುಳುಗಿರುವಾಗ ಕಾಣುತ್ತದೆ ಸಂಪೂರ್ಣ ಗ್ರಹಣ ಹಂತವು ರಾತ್ರಿ 11:00 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾರತೀಯ ಕಾಲಮಾನ 12:22 ಕ್ಕೆ ಕೊನೆಗೊಳ್ಳುತ್ತದೆ, ರಾತ್ರಿ 11:41 ರ ಸುಮಾರಿಗೆ ಗರಿಷ್ಠ ಗ್ರಹಣದಲ್ಲಿ ಅದರ ಆಳವಾದ ಕೆಂಪು ಹೊಳಪನ್ನು ತಲುಪುತ್ತದೆ. ಸ್ಪಷ್ಟ ಆಕಾಶವು…

Read More

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಜನರು ಅವುಗಳನ್ನು ನೋಡಿ ಆಶ್ಚರ್ಯಚಕಿತರಾಗುವಷ್ಟು ಇರುತ್ತವೆ. ವೈರಲ್ ವಿಡಿಯೋಗಳಲ್ಲಿ ಜನರು ವಿಚಿತ್ರವಾದ ಕೆಲಸಗಳನ್ನು ಮಾಡುವುದನ್ನು ಸಹ ಅನೇಕ ಬಾರಿ ಕಾಣಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ವೃದ್ಧರೊಬ್ಬರು ಜೀವಂತ ಹಾವಿನೊಂದಿಗೆ ಆಟವಾಡುತ್ತಿರುವುದು ಕಂಡುಬರುತ್ತದೆ. ಅವರು ಹಾವಿನೊಂದಿಗೆ ಆಟವಾಡುತ್ತಿರುವುದು ಆಟಿಕೆಯಂತೆ. ಕೆಲವೊಮ್ಮೆ ಆ ವ್ಯಕ್ತಿ ಹಾವಿನ ಹೆಡೆಯನ್ನು ತನ್ನ ಬಾಯಿಯೊಳಗೆ ಇಟ್ಟುಕೊಳ್ಳುತ್ತಾನೆ ಮತ್ತು ಕೆಲವೊಮ್ಮೆ ತನ್ನ ಬೆರಳನ್ನು ಹಾವಿನ ಬಾಯಿಯಲ್ಲಿ ಇಡುತ್ತಾನೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವೃದ್ಧರೊಬ್ಬರು ತಮ್ಮ ಕುತ್ತಿಗೆಗೆ ಹಾವನ್ನು ನೇತುಹಾಕಿರುವುದನ್ನು ಕಾಣಬಹುದು. ಇದರ ನಂತರ, ಅವರು ಹಾವಿನ ಹೆಡೆಯನ್ನು ಹಿಡಿದು ಬಾಯಿಯಲ್ಲಿ ಇಟ್ಟುಕೊಳ್ಳುತ್ತಾರೆ. ಆ ವ್ಯಕ್ತಿ ತನ್ನ ಹಲ್ಲುಗಳಿಂದ ಹಾವಿನ ಹೆಡೆಯನ್ನು ಹಿಡಿಯುತ್ತಾನೆ. ಕೆಲವೊಮ್ಮೆ ಅವರು ಹಾವಿನ ಬಾಯಿಯಲ್ಲಿ ತಮ್ಮ ಬೆರಳನ್ನು ಇಡುತ್ತಾರೆ. ಈ ಅಪಾಯಕಾರಿ ಆಟವನ್ನು ನೋಡಿ, ಅಲ್ಲಿದ್ದ ಜನರು ಕೂಡ ಆಶ್ಚರ್ಯಚಕಿತರಾದರು ಮತ್ತು…

Read More

ಬೆಂಗಳೂರು : ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಮೊಬೈಲ್‌ ಗಳನ್ನು ಚಾರ್ಜ್‌ ಹಾಕುವಾಗ ತುಂಬ ಎಚ್ಚರಿಕೆ ವಹಿಸುವುದು ಅಗತ್ಯವಿದೆ. ಒಂದು ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಫೋಣ್‌ ಬಾಂಬ್‌ ನಂತೆ ಸ್ಪೋಟಗೊಳ್ಳಬಹುದು. ಮೊಬೈಲ್ ನಲ್ಲಿ ಸ್ಫೋಟದ ಹೆಚ್ಚಿನ ಘಟನೆಗಳು ನಕಲಿ ಚಾರ್ಜರ್‌ ಗಳಿಂದ ಸಂಭವಿಸುತ್ತವೆ.ಸಂದರ್ಭದಲ್ಲಿ, ನಿಮ್ಮ ಮೊಬೈಲ್ ಚಾರ್ಜರ್ ಬಗ್ಗೆ ನೀವು ಕಾಳಜಿ ವಹಿಸಬೇಕು. ಮೊಬೈಲ್ ಫೋನ್ ಬ್ಯಾಟರಿಗಳ ಸ್ಫೋಟ ಮತ್ತು ರಕ್ಷಣೆಯ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.‌ ನಿಮ್ಮ ಫೋನ್‌ ಚಾರ್ಜ್‌ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ನಕಲಿ ಚಾರ್ಜರ್, ಬ್ಯಾಟರಿಯನ್ನು ಎಂದಿಗೂ ಬಳಸಬೇಡಿ. ನೀವು ಬ್ರಾಂಡ್ ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಫೋನ್ ಬಳಸುತ್ತಿದ್ದರೆ, ಅದೇ ಬ್ರಾಂಡ್ ಚಾರ್ಜರ್ ಬಳಸಿ. ಚಾರ್ಜರ್ ಪಿನ್ ಒದ್ದೆಯಾಗಲು ಎಂದಿಗೂ ಬಿಡಬೇಡಿ. ಪಿನ್ ಒಣಗಿದ ನಂತರವೇ ಅದನ್ನು ಚಾರ್ಜ್ ಮಾಡಿ. ಫೋನ್ ಬ್ಯಾಟರಿ ಹಾನಿಗೊಳಗಾದರೆ, ತಕ್ಷಣ ಅದನ್ನು ಬದಲಿಸಿ. ಯಾವಾಗಲೂ ಮೂಲ…

Read More