Author: kannadanewsnow57

ಬೆಂಗಳೂರು : ಜನರಿಗೆ ಸುಗಮ ಆಡಳಿತ ನೀಡುವ ಭಾಗವಾಗಿ ಜೂನ್ 1 ರಿಂದ ನೋಂದಣಿ ಕಚೇರಿಗಳು ಶನಿವಾರ-ಭಾನುವಾರದ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸಲಿವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಾದ ಕೆ.ಎ. ದಯಾನಂದ ಈ ಬಗ್ಗೆ ಮಾಹಿತಿ ನೀಡಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜೂನ್ 1ರಿಂದಲೇ ರಜಾ ದಿನಗಳಲ್ಲಿಯೂ ಸಬ್ ರಿಜಿಸ್ಟರ್ ಕಚೇರಿಗಳನ್ನು ತೆರೆಯಲು ನಿರ್ಧರಿಸಿವೆ. ರಾಜ್ಯದ ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಬರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದು ಕಚೇರಿ ಮಾತ್ರ ಕಾರ್ಯನಿರ್ವಹಿಸಲಿದೆ. ಪ್ರತಿ ಸಬ್ ರಿಜಿಸ್ಟ್ರಾರ್ ಕಚೇರಿಗಳು ಸರದಿ ಆಧಾರದ ಮೇಲೆ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ರಜಾ ದಿನದಂದು ಕಾರ್ಯ ನಿರ್ವಹಿಸಬೇಕು.ರಜಾ ದಿನ ಕಾರ್ಯನಿರ್ವಹಿಸಿದ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ, ಸಿಬ್ಬಂದಿಗೆ ಮಂಗಳವಾರ ರಜಾ ದಿನವೆಂದು ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಗಳ ರಜಾ ದಿನ ಕರ್ತವ್ಯ ನಿರ್ವಹಿಸುವ ವೇಳಾಪಟ್ಟಿಯನ್ನು ಕಾವೇರಿ 2.0 ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏನಾದರೂ…

Read More

ಬೆಂಗಳೂರು : ರಾಜ್ಯ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಪಾನ್ ಪರಾಗ್, ತಂಬಾಕು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ತಿಂದು ಉಗುಳುವುದನ್ನು ನಿಷೇಧಿಸಿ ರಾಜ್ಯ ಸರಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಮತ್ತು ಗುಟ್ಕಾ ಉಗುಳಿದರೆ 1 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಮತ್ತು, ತಂಬಾಕು, ಗುಟ್ಕಾ ಉಗುಳಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರ ರೂಪಿಸಿದ್ದ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ ಸರಬರಾಜು ವಿತರಣೆ ವಿನಿಮಯ –ಕರ್ನಾಟಕ(ತಿದ್ದುಪಡಿ) ಮಸೂದೆ 2024ಕ್ಕೆ ಮೇ 23 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 (2023ರ ಕರ್ನಾಟಕ ಅಧಿನಿಯಮ ಸಂಖ್ಯೆ:13)ರ ಪ್ರಕರಣ 6ರ ಅಡಿಯಲ್ಲಿ ಅಧಿಕೃತಗೊಳಿಸಿದ the Cigarettes and…

Read More

ಬೆಂಗಳೂರು : ಅನರ್ಹ ಪಡಿತರ ಚೀಟಿದಾರರಿಗೆ ಸಿಎಂ ಸಿದ್ದರಾಮಯ್ಯ ಬಿಗ್ ಶಾಕ್ ನೀಡಿದ್ದು, ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಒಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಆರೋಗ್ಯ, ಕಂದಾಯ, ಗ್ರಾಮೀಣಾಭಿವೃದ್ಧಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಸತತ 9 ಗಂಟೆಗಳ ಕಾಲ ಸುಧೀರ್ಘ ಸಭೆ ನಡೆಸಿದ್ದಾರೆ. ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಯಾಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸುಮಾರು ಶೇ. 74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಿಯಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಪ್ರಶ್ನಿಸಿದರು.

Read More

ಬೆಂಗಳೂರು : 2025-26 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿಗಳ ವರ್ಗಾವಣೆ ಕುರಿತಂತೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ಸನ್ 2025-26 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಸದರಿ ಆದೇಶದಂತೆ, ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಆಯಾ ವೃಂದಗಳ ಕಾರ್ಯನಿರತ ವೃಂದ ಬಲದ (Working Strength) ಶೇ. 6 ನ್ನು (6%) ಮೀರದಂತೆ ದಿನಾಂಕ:15-05-2025 ರಿಂದ ದಿನಾಂಕ: 14-06-2025 ವರೆಗೆ ವರ್ಗಾವಣೆ ಕೈಗೊಳ್ಳಲು ಗ್ರೂಪ್ ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖಾ ಸಚಿವರಿಗೆ ಹಾಗೂ ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದದ ನೌಕರರಿಗೆ ಸಂಬಂಧಿಸಿದಂತೆ ಆಯಾ ನೇಮಕಾತಿ ಪ್ರಾಧಿಕಾರಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ. ಪ್ರಯುಕ್ತ ಶಾಲಾ ಶಿಕ್ಷಣ ಇಲಾಖೆಯ ಈ ಆಯುಕ್ತಾಲಯ ವ್ಯಾಪ್ತಿಯಲ್ಲಿನ ಬೋಧಕೇತರ ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರ ವರ್ಗಾವಣೆ ಮಾಡುವ ಕುರಿತು ಆಯಾ…

Read More

ಬೆಂಗಳೂರು : ಖಜಾನೆ-2 ರಲ್ಲಿನ ಪಿಂಚಣಿಗೆ ಸಂಬಂಧಿಸಿದಂತೆ ಕೆಲವೊಂದು ಹೊಸ ಕಾರ್ಯಚಟುವಟಿಕೆಗಳ ಸೇರ್ಪಡೆ ಕುರಿತು ಹಾಗೂ ನಿವೃತ್ತಿ ವೇತನವನ್ನು ಪಡೆಯಲು ಸ್ವೀಕರ್ತರ ವಿಧ 28 ರಲ್ಲಿ ನೊಂದಾವಣೆಯಾಗಲು ಇನ್ನೊಂದು ಬ್ಯಾಂಕ್ ಖಾತೆಯನ್ನು ತೆರೆಯದೆ ವೇತನ ಬ್ಯಾಂಕ್ ಖಾತೆಯನ್ನು ಮುಂದುವರೆಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಖಜಾನೆ-2 ರಲ್ಲಿ, ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಪಾವತಿಸಲು ನೌಕರರನ್ನು ಸ್ವೀಕರ್ತರ ವಿಧ 27 ರಲ್ಲಿ ಸ್ವೀಕರ್ತರನ್ನಾಗಿ ನೋಂದಾಯಿಸಲಾಗುತ್ತದೆ. ಸದರಿ ನೌಕರರು ಸೇವೆಯಿಂದ ನಿವೃತ್ತರಾದಲ್ಲಿ ಪಿಂಚಣಿ ಸೌಲಭ್ಯವನ್ನು ಪಾವತಿಸಲು ಅವರನ್ನು ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಬೇಕಾಗಿರುತ್ತದೆ. ಒಂದೇ ಬ್ಯಾಂಕ್ ಖಾತೆಗೆ 2 ಸ್ವೀಕರ್ತರ ವಿಧಗಳಲ್ಲಿ ನೋಂದಾಯಿಸಲು ಅವಕಾಶವಿಲ್ಲದಿರುವುದರಿಂದ ಪ್ರಸ್ತುತ ನಿವೃತ್ತಿದಾರರು ಮತ್ತೊಂದು ಬ್ಯಾಂಕ್ ಖಾತೆಯನ್ನು ತೆರೆದು ವಿವರಗಳನ್ನು ನೀಡಬೇಕಾಗಿರುತ್ತದೆ. ಈ ರೀತಿ ಇನ್ನೊಂದು ಬ್ಯಾಂಕ್ ಖಾತೆಯನ್ನು ತೆರೆದು, ಪಿಂಚಣಿ ಸ್ವೀಕರ್ತರ ವಿಧ-28 ರಲ್ಲಿ ಸ್ವೀಕರ್ತರಾಗಿ ನೋಂದಾಯಿಸುವ ಬದಲು ವೇತನ ಬ್ಯಾಂಕ್ ಖಾತೆಯಲ್ಲೇ ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಲು ಈ ಕೆಳಕಂಡಂತೆ ಅವಕಾಶ ಕಲ್ಪಿಸಲಾಗಿದೆ.…

Read More

ಬೆಂಗಳೂರು: ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸುವ ಮೂಲಕ ನುಡಿದಂತೆ ನಡೆದಿದೆ. ಇಡುಗಂಟು ಯೋಜನೆಯು 01-01- 2024 ರಿಂದ ಜಾರಿಗೆ ಬರಲಿದ್ದು ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಥವಾ ಮರಣ ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಇಡು ಗಂಟು ಯೋಜನೆ ಅನ್ವಯಿಸಲಿದೆ. ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರಿಗೂ ಈ ಯೋಜನೆ ಗೆ ಒಳಪಡಲಿದ್ದಾರೆ .ಈ ಯೋಜನೆಗೆ ಒಟ್ಟಾರೆ 44.15 ಕೋಟಿ ರೂಪಾಯಿಗಳನ್ನು ಸರ್ಕಾರ ಕಾಯ್ದಿರಿಸಿ ಆದೇಶ ಹೊರಡಿಸಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರ ಕುಟುಂಬದವರಿಗೂ ಉಚಿತ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಆರೋಗ್ಯ ಸಂಜೀವಿನಿ ಯೋಜನೆ ಎಂಬುದಾಗಿ ಕರೆಯುವಂತ ಯೋಜನೆಯಡಿ ಸರ್ಕಾರಿ ನೌಕರರ ಕುಟುಂಬಸ್ಥರ ನೋಂದಣಿ ಕಡ್ಡಾಯ. ಹಾಗಾದ್ರೇ ಇದಕ್ಕೆ ಏನೆಲ್ಲ ದಾಖಲೆ ಬೇಕು ಅಂತ ಮುಂದೆ ಓದಿ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅರ್ಹ ಸರ್ಕಾರಿ ನೌಕರರ ಕೆಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಪತ್ನಿ ಅಥವಾ ಪತ್ನಿಯ ಉದ್ಯೋಗದ ವಿವರ, ತಂದೆಯ ವಿವರ, ತಾಯಿ, ಮಲ ತಾಯಿ, ಮಕ್ಕಳ ಮಾಹಿತಿಯನ್ನು ನಮೂದಿಸಬೇಕಾಗಿದೆ. ಈ ದಾಖಲೆಗಳು ಕಡ್ಡಾಯ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು ಅರ್ಹ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. 1.ಸರ್ಕಾರಿ ನೌಕರನ ಹಾಗೂ ಕುಟುಂಬದ ಅರ್ಹ ಸದಸ್ಯರ ಭಾವಚಿತ್ರ – ಪ್ರತಿಯೊಬ್ಬರ ಭಾವಚಿತ್ರವನ್ನು ಪ್ರತ್ಯೇಕವಾಗಿ ನೀಡಬೇಕು. ಪ್ರತಿ ಐದು ವರ್ಷಗಳಿಗೆ ಒಮ್ಮೆ ಹೊಸ ಭಾವಚಿತ್ರ ಒದಗಿಸಬೇಕು. 2.ಜನ್ಮ ದಿನಾಂಕ ದಾಖಲೆಗಳು 3.ಆಧಾರ್ ಕಾರ್ಡ್ ಗಳು 4.ವೇತನ ಚೀಟಿಗಳು 5.ಕಾನೂನು…

Read More

ಬೆಂಗಳೂರು : ಬ್ಯಾಂಕಿನ ದ್ವಾರ ವೇತನ ಪಡೆಯುತ್ತಿರುವ ಹಾಗೂ ಪಡೆಯಲು ಇಚ್ಚಿಸುವ ಸರ್ಕಾರಿ / ಆರೇ ಸರ್ಕಾರಿ / ನೌಕರರಿಗೆ ಬ್ಯಾಂಕಿನಿಂದ ರೂಪಿಸಲಾಗಿರುವ ವೇತನ ಪ್ಯಾಕೇಜ್, ವಿವಿಧ ಸಾಲಗಳ ಮೇಲಿನ `ಬಡ್ಡಿದರ’  ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳನ್ವಯ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸರ್ಕಾರಿ ನೌಕರರ ಸಮಗ್ರ ವೇತನ ಪ್ಯಾಕೇಜ್‌ನ್ನು ಉಲ್ಲೇಖ (1)ರ ಆದೇಶದ ಷರತ್ತಿಗೊಳಪಟ್ಟು ಉಲ್ಲೇಖ (2) ಮತ್ತು (3) ರ ಸರ್ಕಾರಿ ನೌಕರರ ಒಕ್ಕೂಟಗಳ ಮನವಿಗನುಸಾರವಾಗಿ ಉಲ್ಲೇಖ (4) ರನ್ವಯ ಬ್ಯಾಂಕಿನ ಮಾನ್ಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಾನ್ಯ ಉಪಾಧ್ಯಕ್ಷರು ಹಾಗೂ ಸ್ಥಳೀಯ ನಿರ್ದೇಶಕರು ಹಾಗೂ ಬ್ಯಾಂಕಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ ಸರ್ಕಾರಿ ನೌಕರರ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿದಂತೆ ಉಲ್ಲೇಖ (5) ರನ್ವಯ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸದರಿ ಸಮಗ್ರ ವೇತನ ಪ್ಯಾಕೇಜ್‌ನ್ನು ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿರುತ್ತದೆ. ಸರ್ಕಾರಿ ನೌಕರರ ಸಮಗ್ರ ವೇತನ ಪ್ಯಾಕೇಜ್‌ನಲ್ಲಿನ ಅಂಶಗಳನ್ನು ಈ ಪತ್ರದ…

Read More

ಭಾರತದ ಕೆಲವು ಭಾಗಗಳಲ್ಲಿ ಮತ್ತು ಪ್ರಪಂಚದಾದ್ಯಂತ ಇತ್ತೀಚೆಗೆ ಕೋವಿಡ್-19 ಉಲ್ಬಣಗೊಳ್ಳುತ್ತಿರುವುದರಿಂದ, ಆರೋಗ್ಯ ತಜ್ಞರು ವೈರಸ್‌ನ ಹೊಸ ರೂಪಾಂತರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. NB.1.8.1. ಓಮಿಕ್ರಾನ್‌ನ ಈ ಉಪರೂಪವು ಅದರ ಪೂರ್ವವರ್ತಿಗಳಿಗಿಂತ ಹೆಚ್ಚು ರೋಗನಿರೋಧಕ-ತಪ್ಪಿಸಿಕೊಳ್ಳುವ ಆರಂಭಿಕ ಲಕ್ಷಣಗಳನ್ನು ತೋರಿಸಿದೆ, ಅಂದರೆ ಲಸಿಕೆ ಹಾಕಿದ ಅಥವಾ ಹಿಂದೆ ಸೋಂಕಿಗೆ ಒಳಗಾದ ಜನರಲ್ಲಿಯೂ ಸಹ ದೇಹದ ರಕ್ಷಣೆಯಿಂದ ತಪ್ಪಿಸಿಕೊಳ್ಳುವಲ್ಲಿ ಇದು ಉತ್ತಮವಾಗಿರಬಹುದು. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, NB.1.8.1 ಅನ್ನು “ಮೇಲ್ವಿಚಾರಣೆಯಲ್ಲಿರುವ ರೂಪಾಂತರ” ಎಂದು ವರ್ಗೀಕರಿಸಲಾಗಿದೆ, ಇದು ವೈರಸ್ ನಡವಳಿಕೆಯ ಮೇಲೆ ಪರಿಣಾಮ ಬೀರುವ ಆನುವಂಶಿಕ ಬದಲಾವಣೆಗಳನ್ನು ಹೊಂದಿರುವ ತಳಿಗಳಿಗೆ ಒಂದು ವರ್ಗವಾಗಿದೆ, ಆದರೆ ಇದು ಇನ್ನೂ ಗಮನಾರ್ಹ ಸಾರ್ವಜನಿಕ ಆರೋಗ್ಯ ಪರಿಣಾಮವನ್ನು ತೋರಿಸಿಲ್ಲ. ಆದಾಗ್ಯೂ, ಆರಂಭಿಕ ಅಧ್ಯಯನಗಳು ಮತ್ತು ತಜ್ಞರ ವಿಶ್ಲೇಷಣೆಗಳು NB.1.8.1 ರೋಗನಿರೋಧಕ ರಕ್ಷಣೆಯನ್ನು ಭಾಗಶಃ ತಪ್ಪಿಸಿಕೊಳ್ಳುವ ಸಾಮರ್ಥ್ಯದಿಂದಾಗಿ ಕೋವಿಡ್-19 ರ ಹರಡುವಿಕೆಯನ್ನು ನಿರ್ವಹಿಸುವಲ್ಲಿ ಹೊಸ ಸವಾಲನ್ನು ಒಡ್ಡಬಹುದು ಎಂದು ಸೂಚಿಸುತ್ತವೆ. NB.1.8.1 ಎಂದರೇನು? NB.1.8.1 ಓಮಿಕ್ರಾನ್ ವಂಶಾವಳಿಯ ಭಾಗವಾಗಿದೆ, ಇದು LP.8.1…

Read More

ಇದು ನಿಜಕ್ಕೂ ಹೃದಯವಿದ್ರಾವಕ ಮತ್ತು ದುಃಖಕರ ಕಥೆ. ಲಂಡನ್‌ನ ವರ್ಜೀನಿಯಾ ಮೆಕ್‌ಕಲೋ ತನ್ನ ಹೆತ್ತವರನ್ನು ಹಣಕ್ಕಾಗಿ ಕ್ರೂರವಾಗಿ ಕೊಂದಿದ್ದು ಮಾತ್ರವಲ್ಲದೆ, ಅವರ ಶವಗಳನ್ನು 4 ವರ್ಷಗಳ ಕಾಲ ಮನೆಯಲ್ಲಿಯೇ ಬಚ್ಚಿಟ್ಟಿದ್ದಳು, ಇದು ಅವಳ ಕ್ರೌರ್ಯ ಮತ್ತು ನಿರ್ದಯತೆಯನ್ನು ತೋರಿಸುತ್ತದೆ. ಬ್ರಿಟಿಷ್ ಮಾಧ್ಯಮ ವರದಿಗಳ ಪ್ರಕಾರ, 36 ವರ್ಷದ ವರ್ಜೀನಿಯಾ ಜೂನ್ 2019 ರಲ್ಲಿ ತನ್ನ ತಾಯಿ ಲೋಯಿಸ್ ಮತ್ತು ತಂದೆ ಜಾನ್ ಮೆಕ್‌ಕಲೋ ಅವರನ್ನು ಕ್ರೂರವಾಗಿ ಕೊಲೆ ಮಾಡಿದ್ದಳು. ಇಬ್ಬರೂ ಸುಮಾರು 70 ವರ್ಷ ವಯಸ್ಸಿನವರಾಗಿದ್ದರು. ಇದರ ಹಿಂದಿನ ಕಾರಣ ಮಹಿಳೆಯ ತಲೆಯ ಮೇಲೆ ಭಾರೀ ಸಾಲದ ಹೊರೆ ಬೀಳುವ ಭಯ ತನ್ನ ಹೆತ್ತವರಿಗೆ ಸತ್ಯ ತಿಳಿದರೆ, ತಾನು ಸಿಕ್ಕಿಬೀಳುತ್ತೇನೆ ಎಂದು ವರ್ಜೀನಿಯಾ ಭಯಪಟ್ಟಳು ಮತ್ತು ಈ ಭಯದಿಂದಾಗಿ ಅವಳು ಈ ಭಯಾನಕ ಹೆಜ್ಜೆ ಇಟ್ಟಳು. ಮಗಳು ನಾಲ್ಕು ವರ್ಷಗಳ ಕಾಲ ತನ್ನ ಹೆತ್ತವರ ಮೃತ ದೇಹಗಳೊಂದಿಗೆ ವಾಸಿಸುತ್ತಿದ್ದಳು ಇದಲ್ಲದೆ, ಕ್ರೂರಿ ಮಗಳು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಧಿಸಲಾದ ಲಾಕ್‌ಡೌನ್…

Read More