Author: kannadanewsnow57

ಬೆಂಗಳೂರು : ಬಂಧಿಸುವ ಸನ್ನಿವೇಶ ಬಂದರೆ ಯಾವುದೇ ಮುಲಾಜಿ ಇಲ್ಲದೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಇಂದು ಗಿಣಿಗೇರ ಏರ್ಸ್ಟ್ರಿಪ್ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುತ್ತಾರೆ ಎಂದು ಕುಮಾರಸ್ವಾಮಿ ಭಯ ಬಿದ್ದಿದ್ದಾರೆ. ಪ್ರಾಸಿಕ್ಯೂಷನ್ ಗೆ ನಾವು ಕೇಳಿಲ್ಲ. ಖಾಸಗಿಯವರೂ ಸಹ ಕೇಳಿಲ್ಲ. ಎಸ್ ಐಟಿ ಹಾಗೂ ಲೋಕಾಯುಕ್ತ ತನಿಖೆ ಮಾಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ.  ಸಾಕ್ಷ್ಯ ಸಂಗ್ರಹ ಮಾಡಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದಾರೆ.  ಕುಮಾರಸ್ವಾಮಿ ವಿರುದ್ಧ ಸಾಕ್ಷ್ಯಗಳು ಇವೆ ಅಂತ ಅರ್ಥ ಎಂದರು. ಕುಮಾರಸ್ವಾಮಿಯವರ ಪ್ರಕರಣದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯಪಾಲರು, ತನ್ನ ವಿರುದ್ದ ಮಾತ್ರ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ಅನುಮತಿ ನೀಡಿದ್ದಾರೆ. ಇದು ತಾರತಮ್ಯವಲ್ಲವೇ ಎಂದು ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.  ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಧಿಸುವ ಬಗ್ಗೆಯೇ ಮುಖ್ಯಮಂತ್ರಿಗಳು ಯೋಚಿಸುತ್ತಿದ್ದಾರೆ ಎಂಬ…

Read More

ಬೆಂಗಳೂರು :  ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಸಲ್ಲಿಸಿರುವ ಅರ್ಜಿ ಅಂಗೀಕೃತವಾಗದ ಅಭ್ಯರ್ಥಿಗಳು ಇದೇ ಆಗಸ್ಟ್‌ 26ರೊಳಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ತಿಳಿಸಿದೆ. ಪ್ರಾಧಿಕಾರವು ಪೂರಕ ದಾಖಲೆಗಳನ್ನು ಪರಿಗಣಿಸಿ ಅರ್ಜಿಗಳನ್ನು ದೃಢೀಕರಿಸಲಿದೆ. ಅರ್ಜಿದಾರರು ತಮ್ಮ ಅರ್ಜಿ ಸ್ಥಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಲಿಂಕ್‌ ಮೂಲಕ ಪರಿಶೀಲಿಸಬಹುದು. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀ್ಕ್ಷೆಗೆ ಹಾಜರಾಗಬೇಕು. ಸೆ. 29 ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಇನ್ನು ಗ್ರಾಮ ಆಡಳಿತ  ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಆಗಸ್ಟ್ 26 ರೊಳಗೆ ಪೂರಕ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿದಾರರು ತಮ್ಮ ಅರ್ಜಿ ಸ್ಥಿತಿಯನ್ನು ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.

Read More

ನವದೆಹಲಿ : ಬಡ್ತಿಯು ಉದ್ಯೋಗಿಯ ಜನ್ಮಸಿದ್ಧ ಹಕ್ಕಲ್ಲ, ಆದರೆ ಕಿರಿಯರನ್ನು ಪರಿಗಣಿಸಿದಾಗ ಬಡ್ತಿಗೆ ಪರಿಗಣಿಸುವ ಹಕ್ಕು ಉದ್ಭವಿಸುತ್ತದೆ ಎಂದು ಜಾರ್ಖಂಡ್ ಹೈಕೋರ್ಟ್  ತೀರ್ಪು ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ಜಾರ್ಖಂಡ್ ಹೈಕೋರ್ಟ್ನ ನ್ಯಾಯಮೂರ್ತಿ ದೀಪಕ್ ರೋಷನ್ ಅವರ ನ್ಯಾಯಾಲಯವು ಬಡ್ತಿಯು ಉದ್ಯೋಗಿಯ ಜನ್ಮಸಿದ್ಧ ಹಕ್ಕಲ್ಲ, ಆದರೆ ಕಿರಿಯರನ್ನು ಪರಿಗಣಿಸಿದಾಗ ಬಡ್ತಿಗೆ ಪರಿಗಣಿಸುವ ಹಕ್ಕು ಉದ್ಭವಿಸುತ್ತದೆ ಎಂದು ತೀರ್ಪು ನೀಡಿದೆ. ನ್ಯಾಯಾಲಯವು ಮನವಿಗೆ ಅನುಮತಿ ನೀಡಿತು. ಬೇರೆ ಯಾವುದೇ ಕಾನೂನು ಅಡೆತಡೆಗಳಿಲ್ಲದಿದ್ದರೆ ಮತ್ತು ಅರ್ಜಿದಾರರು ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ಪಡೆಯಲು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ ಅರ್ಜಿದಾರರ ಪ್ರಕರಣವನ್ನು ಪರಿಗಣಿಸುವಂತೆ ಅವರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರು. ಆದೇಶ ಸ್ವೀಕರಿಸಿದ ನಾಲ್ಕು ವಾರಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಅರ್ಜಿದಾರ ದಯಾ ರಾಮ್ ಅವರು ಅರ್ಜಿಯನ್ನು ಸಲ್ಲಿಸಿದ್ದರು ಎಂಬುದು ಗಮನಾರ್ಹವಾಗಿದೆ. ಸಹಾಯಕ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡುವ ತಮ್ಮ ಪ್ರಕರಣವನ್ನು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅವರು ಕೋರಿದ್ದರು. ಬಡ್ತಿಗೆ…

Read More

ಬೆಂಗಳೂರು : ಮುಡಾ ಹಗರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮುಡಾ  ವಾಪಸ್ ಪಡೆದ ನಿವೇಶನ ಕ್ಕೆ ಬದಲಾಗಿ ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಸಿಎಂ ಪತ್ನಿಯೇ ಪತ್ರ ಬರೆದಿದ್ದರು ಎನ್ನಲಾಗಿತ್ತು. ಈಗ ಈ ದಾಖಲೆಗಳನ್ನೇ ತಿರುಚಿರುವ ಆರೋಪ ಬಂದಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ್ದು, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ಕಪ್ಪು ಚುಕ್ಕೆ ಮೇಲೆ ವೈಟ್ನರ್‌” ಹಾಕಿ ಸಾಕ್ಷ್ಯ ನಾಶ! ಭ್ರಷ್ಟಾತಿ ಭ್ರಷ್ಟ ಸಿದ್ದರಾಮಯ್ಯನವರ ಮುಡಾ ಹಗರಣದ ಒಂದೊಂದೇ ದಾಖಲೆಗಳು ದಿನಕ್ಕೊಂದರಂತೆ ಬಯಲಾಗುತ್ತಲೇ ಇವೆ. ಇದರ ನುಡವೆ ಬಿಡುಗಡೆ ಆಗುತ್ತಿರುವ ದಾಖಲೆಗಳನ್ನು ಕುತಂತ್ರದ ಮೂಲಕ ಮುಚ್ಚಿ ಹಾಕಲಾಗುತ್ತಿದೆ ಎಂದುಕಿಡಿಕಾರಿದೆ. ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿ ಅವರು ವಿಜಯನಗರದಲ್ಲೇ ಸೈಟು ಕೊಡಿ ಎಂದು ಪತ್ರ ಬರೆದಿದ್ದು ಬೆಳಕಿಗೆ ಬಂದಿದೆ. ಆದರೆ, ಸಿದ್ದರಾಮಯ್ಯ ಅವರು ಹಾಕಿದ ಭ್ರಷ್ಟಾಚಾರದ ಗಂಜಿಗೆ ಮುಡಾ ಅಧಿಕಾರಿಗಳು ಸಿಎಂ ಪತ್ನಿ ಬರೆದ ಪತ್ರದಲ್ಲಿನ ಸಾಲುಗಳಿಗೆ ವೈಟ್ನರ್‌ ಹಾಕಿ ಹಗರಣ ಮುಚ್ಚಿ ಹಾಕಲು ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿದೆ.…

Read More

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ರ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಇಂದು ಸಚಿವ ಈಶ್ವರ್ ಖಂಡ್ರೆ  ಚಾಲನೆ ನೀಡಿದ್ದಾರೆ. ನಾಗರಹೊಳೆಯ ವೀರನಹೊಸಹಳ್ಳಿ ಗೆಟ್ ಬಳಿ ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಯಾದ ಜಂಬೂಸವಾರಿಗೆ ಇಂದು ಅಭಿಮನ್ಯು ನೇತೃತ್ವದ 9 ಗಜಗಳ ಪಡೆಗೆ ಮೈಸೂರು ಅರಮನೆಯ ಪುರೋಹಿತರು ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ರವರೊಂದಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.  ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ನಂತರ ಲಾರಿಗಳ ಮೂಲಕ ಆನೆಗಳ ತಂಡ ಮೈಸೂರಿಗೆ ಆನೆಗಳು ಆಗಮಿಸಲಿವೆ. ಈ ಭಾರಿ 14 ಆನೆಗಳು ಮೈಸೂರು ದಸರೆಯಲ್ಲಿ ಭಾಗವಹಿಸಲಿವೆ. ಈ ಭಾರಿ ಅದ್ದೂರಿ ಹಾಗೂ ಸಾಂಪ್ರದಾಯಿಕ ದಸರೆಗೆ ಸರ್ಕಾರ ಸಿದ್ದತೆ ನಡೆಸಿದೆ. ಹೀಗಿದೆ ‘ಮೈಸೂರು ದಸರಾ ಆನೆ’ಗಳ ಪಟ್ಟಿ ಈ ಬಾರಿಯೂ ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದು, ಮಹೇಂದ್ರ, ಗೋಪಿ, ಭೀಮ, ಪ್ರಶಾಂತ, ಧನಂಜಯ, ಸುಗ್ರೀವ, ಹಿರಣ್ಯ, ರೋಹಿತ,…

Read More

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ರ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಇಂದು ಸಚಿವ ಈಶ್ವರ್ ಖಂಡ್ರೆ  ಚಾಲನೆ ನೀಡಿದ್ದಾರೆ. ನಾಗರಹೊಳೆಯ ವೀರನಹೊಸಹಳ್ಳಿ ಗೆಟ್ ಬಳಿ ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆಯಾದ ಜಂಬೂಸವಾರಿಗೆ ಇಂದು ಅಭಿಮನ್ಯು ನೇತೃತ್ವದ 9 ಗಜಗಳ ಪಡೆಗೆ ಮೈಸೂರು ಅರಮನೆಯ ಪುರೋಹಿತರು ತುಲಾ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ ರವರೊಂದಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.  ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ನಂತರ ಲಾರಿಗಳ ಮೂಲಕ ಆನೆಗಳ ತಂಡ ಮೈಸೂರಿಗೆ ಆನೆಗಳು ಆಗಮಿಸಲಿವೆ. ಈ ಭಾರಿ 14 ಆನೆಗಳು ಮೈಸೂರು ದಸರೆಯಲ್ಲಿ ಭಾಗವಹಿಸಲಿವೆ. ಈ ಭಾರಿ ಅದ್ದೂರಿ ಹಾಗೂ ಸಾಂಪ್ರದಾಯಿಕ ದಸರೆಗೆ ಸರ್ಕಾರ ಸಿದ್ದತೆ ನಡೆಸಿದೆ. ಹೀಗಿದೆ ‘ಮೈಸೂರು ದಸರಾ ಆನೆ’ಗಳ ಪಟ್ಟಿ ಈ ಬಾರಿಯೂ ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದು, ಮಹೇಂದ್ರ, ಗೋಪಿ, ಭೀಮ, ಪ್ರಶಾಂತ, ಧನಂಜಯ, ಸುಗ್ರೀವ, ಹಿರಣ್ಯ, ರೋಹಿತ,…

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖಗೆ ಪ್ರಾಶಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್ ಅವರಿಗೆ `Z’ ಕೆಟಗರಿ ಸೆಕ್ಯೂರಿಟ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಝಡ್ ಕೆಟಗರಿ ಸೆಕ್ಯೂರಿಟಿ ನೀಡಲಾಗಿದೆ.  ಬುಲೆಟ್ ಫ್ರೂಫ್ ಕಾರುನ್ನೂ ಸಹ ನೀಡಲಾಗಿದೆ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ವಹಿಸಿದ್ದು, ಆಗಸ್ಟ್ 29 ರವರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೂಟ್ ಭಾಗಿಯಾಗಲಿದ್ದ ಕಾರ್ಯಕ್ರಮಗಳನ್ನು ರಾಜಭವನ ಮುಂದೂಡಿದೆ. ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಇದರ ಬೆನ್ನಲ್ಲಿಯೇ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

Read More

ಮಾಸ್ಕೋ : ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಉತ್ತುಂಗಕ್ಕೇರಿದೆ. ಉಕ್ರೇನಿಯನ್ ಸೈನ್ಯವು ರಷ್ಯಾದ ಅನೇಕ ಪ್ರದೇಶಗಳನ್ನು ಸಹ ವಶಪಡಿಸಿಕೊಂಡಿದೆ. ಈಗ ಉಕ್ರೇನ್ ರಷ್ಯಾದ ರಾಜಧಾನಿ ಮಾಸ್ಕೋ ಮೇಲೆ ಅತಿದೊಡ್ಡ ಡ್ರೋನ್ ದಾಳಿ ನಡೆಸಿದೆ ಎಂಬ ಸುದ್ದಿ ಬಂದಿದೆ. ಬುಧವಾರ, ಉಕ್ರೇನ್ ಮಾಸ್ಕೋ ಮೇಲೆ 10 ಡ್ರೋನ್ಗಳಿಂದ ದಾಳಿ ನಡೆಸಿತು, ಅವುಗಳನ್ನು ರಷ್ಯಾ ಸೈನ್ಯವು ಹೊಡೆದುರುಳಿಸಿದೆ. ಫೆಬ್ರವರಿ 2022 ರಲ್ಲಿ ಉಕ್ರೇನ್ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ರಾಜಧಾನಿಯ ಮೇಲೆ ನಡೆದ ಅತಿದೊಡ್ಡ ಡ್ರೋನ್ ದಾಳಿಗಳಲ್ಲಿ ಇದು ಒಂದಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

Read More

ನವದೆಹಲಿ : ಭಾರತ ಸರ್ಕಾರವು ದೇಶದ ವಿವಿಧ ನಾಗರಿಕರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತದೆ. ದೇಶದ ಕೋಟ್ಯಂತರ ಜನರು ಸರ್ಕಾರದ ಈ ಯೋಜನೆಗಳ ಲಾಭವನ್ನು ಪಡೆಯುತ್ತಾರೆ. ಭಾರತದಲ್ಲಿ ದೈಹಿಕವಾಗಿ ಸಮರ್ಥರಲ್ಲದ ಅನೇಕ ಜನರಿದ್ದಾರೆ. ವಿವಿಧ ಅಂಗವೈಕಲ್ಯ ಹೊಂದಿರುವ ವಿಕಲಚೇತನರಿಗಾಗಿ ಭಾರತದಲ್ಲಿ ವಿವಿಧ ಯೋಜನೆಗಳನ್ನು ಸಹ ನಿರ್ವಹಿಸಲಾಗುತ್ತಿದೆ. ಇದರ ಪ್ರಯೋಜನಗಳನ್ನು ದೇಶದ ಲಕ್ಷಾಂತರ ಅಂಗವಿಕಲರಿಗೆ ನೀಡಲಾಗುತ್ತದೆ. ಭಾರತ ಸರ್ಕಾರ ಮತ್ತು ಭಾರತದ ವಿವಿಧ ರಾಜ್ಯಗಳ ಸರ್ಕಾರಗಳು ಅಂಗವಿಕಲರಿಗೆ ಸಹಾಯ ಮಾಡಲು ಅನೇಕ ಯೋಜನೆಗಳನ್ನು ನಡೆಸುತ್ತವೆ. ಲಕ್ಷಾಂತರ ಅಂಗವಿಕಲರಿಗೆ ಪ್ರಯೋಜನವಾಗುವ ಅಂತಹ ಕೆಲವು ಯೋಜನೆಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಆದ್ದರಿಂದ ಮತ್ತೆ ತಿಳಿಯೋಣ. ಘರೌಂಡಾ ಯೋಜನೆ ಭಾರತ ಸರ್ಕಾರದ ಘರೌಂಡಾ ಯೋಜನೆಯಡಿ, ಅಂಗವಿಕಲರು ಪ್ರಯೋಜನ ಪಡೆಯುತ್ತಾರೆ. ಘರೌಂಡಾ ಯೋಜನೆಯನ್ನು ರಾಷ್ಟ್ರೀಯ ಟ್ರಸ್ಟ್ ಮೂಲಕ ದೇಶದ 40 ಸ್ಥಳಗಳಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯಡಿ, ಅಂಗವಿಕಲರಿಗೆ ಉಳಿಯಲು ವ್ಯವಸ್ಥೆ ಮಾಡಲಾಗುತ್ತದೆ. ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದರೊಂದಿಗೆ, ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಅವರಿಗೆ ಅಧ್ಯಯನದಲ್ಲಿ…

Read More

ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಕೊಂಬೆಟ್ಟು ಎಂಬಲ್ಲಿ ಮುಸ್ಲಿಂ ಶಾಲಾ ಬಾಲಕಿಗೆ ಸಹಪಾಠಿಯೊಬ್ಬ ಚಾಕುವಿನಿಂದ ಇರಿದ ಘಟನೆ ನಡೆದಿದೆ. ದಾಳಿಕೋರ ಅದೇ ಶಾಲೆಯ ವಿದ್ಯಾರ್ಥಿಯಾಗಿದ್ದು, ಹಲ್ಲೆ ನಡೆಸಲು ಚಾಕುವನ್ನು ಬಳಸಿದ್ದಾನೆ. ಗಾಯಗೊಂಡ ಬಾಲಕಿಯನ್ನು ಕೂಡಲೇ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸ್ಥಳೀಯ ಪೊಲೀಸರು ತ್ವರಿತವಾಗಿ ಸ್ಪಂದಿಸಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದ ನಂತರ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಅಧಿಕಾರಿಗಳು ಆರೋಪಿ ವಿದ್ಯಾರ್ಥಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ತನಿಖೆ ನಡೆಯುತ್ತಿರುವಾಗ, ದಾಳಿಯ ಹಿಂದಿನ ಉದ್ದೇಶವು ಈ ಹಂತದಲ್ಲಿ ಅಸ್ಪಷ್ಟವಾಗಿದೆ. ಆರಂಭದಲ್ಲಿ, ಶಾಲೆಯ ಪ್ರಾಂಶುಪಾಲರು ಬಾಲಕಿಯ ಗಾಯಗಳ ಸ್ವರೂಪವನ್ನು ತಪ್ಪಾಗಿ ವರದಿ ಮಾಡಿದರು, ಅವು ಆಕಸ್ಮಿಕವಾಗಿ ಅವಳ ಕೈಯ ಮೇಲೆ ಬಿದ್ದ ಗಾಜಿನಿಂದ ಉಂಟಾಗಿವೆ ಎಂದು ಹೇಳಿದರು. ಈ ಊಹೆಯ ಆಧಾರದ ಮೇಲೆ, ಪ್ರಾಂಶುಪಾಲರು ವಿದ್ಯಾರ್ಥಿಯನ್ನು ಪ್ರಥಮ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಆದಾಗ್ಯೂ, ನಂತರದ ವೀಡಿಯೊ ಹೇಳಿಕೆಯಲ್ಲಿ, ಗಾಯಗೊಂಡ ವಿದ್ಯಾರ್ಥಿನಿ ಇದು ನಿಜವಲ್ಲ ಮತ್ತು ಅವಳು…

Read More