Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ವಿಸ್ತಾರಾ ವಿಮಾನವನ್ನು ಫ್ರಾಂಕ್‌ಫರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಶನಿವಾರ ಮುಂಜಾನೆ ಹೇಳಿಕೆಯಲ್ಲಿ, ವಿಮಾನವು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. ಅಕ್ಟೋಬರ್ 18, 2024 ರಂದು ದೆಹಲಿಯಿಂದ ಲಂಡನ್‌ಗೆ ಕಾರ್ಯಾಚರಿಸುತ್ತಿರುವ ವಿಸ್ತಾರಾ ಫ್ಲೈಟ್ UK17 ಸಾಮಾಜಿಕ ಮಾಧ್ಯಮದಲ್ಲಿ ಭದ್ರತಾ ಬೆದರಿಕೆಯನ್ನು ಸ್ವೀಕರಿಸಿದೆ. ಪ್ರೋಟೋಕಾಲ್‌ಗೆ ಅನುಗುಣವಾಗಿ, ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ತಿಳಿಸಲಾಯಿತು ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ, ಪೈಲಟ್‌ಗಳು ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ತಿರುಗಿಸಲು ನಿರ್ಧರಿಸಿದರು. “ವಕ್ತಾರರು ಹೇಳಿದರು. ಏತನ್ಮಧ್ಯೆ, ಬೆಂಗಳೂರಿನಿಂದ ಮುಂಬೈಗೆ ಶುಕ್ರವಾರ ಹಾರಾಟ ನಡೆಸಬೇಕಿದ್ದ ಕ್ಯೂಪಿ 1366 ವಿಮಾನವು ನಿರ್ಗಮಿಸುವ ಸ್ವಲ್ಪ ಸಮಯದ ಮೊದಲು ಭದ್ರತಾ ಎಚ್ಚರಿಕೆಯನ್ನು ಸ್ವೀಕರಿಸಿದೆ ಎಂದು ಆಕಾಶ ಏರ್ ತಿಳಿಸಿದೆ. “ಆದ್ದರಿಂದ ಸುರಕ್ಷತೆ ಮತ್ತು ಸುರಕ್ಷತಾ ಕಾರ್ಯವಿಧಾನಗಳ ಪ್ರಕಾರ, ಸ್ಥಳೀಯ ಅಧಿಕಾರಿಗಳು ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಿದ್ದರಿಂದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ನೆಲದ ಮೇಲೆ…
ಬೆಂಗಳೂರು: ದೀಪಾವಳಿ ಹತ್ರ ಬಂದಿದೆ. ಸರದಿ ಸಾಲು ರಜೆ ಇರುವುದರಿಂದ ಎಲ್ಲರೂ ಊರು ಕಡೆ ಪ್ರಯಾಣ ಬೆಳೆಸುತ್ತಾರೆ. ಹೀಗಿರುವ ದೀಪಾವಳಿ ಹಬ್ಬಕ್ಕೆ ಬಸ್ ಮಾಲೀಕರಿಂದ ಶಾಕ್ ನೀಡಿದೆ. ಖಾಸಗಿ ಬಸ್ಸುಗಳು ಟಿಕೆಟ್ ದರ ಏರಿಕೆ ಮಾಡಿವೆ. ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವ ಹಿನ್ನೆಲೆ ಸಾಕಷ್ಟು ಜನರು ಊರಿನತ್ತ ಹೋಗುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ಸುಗಳ ಮಾಲೀಕರು ಬಸ್ ಟಿಕೆಟ್ ದರ ಹೆಚ್ಚಿಸಿದ್ದಾರೆ. ಈ ಬಾರಿಯ ದೀಪಾವಳಿ ಹಬ್ಬ ಅ.31 ರಿಂದ 2 ರವರೆಗೆ ಇರಲಿದೆ. ಅಂದರೆ ಗುರುವಾರದಿಂದ ಶನಿವಾರದವರೆಗೆ ಇರಲಿದ್ದು, ಭಾನುವಾರವೂ ರಜೆ ಸೇರಿದರೆ ಒಟ್ಟು ನಾಲ್ಕು ದಿನ ಸರ್ಕಾರಿ ರಜೆ ಇರಲಿದೆ. ಸಾಲು ಸಾಲು ರಜೆಯ ಜೊತೆಗೆ ಹಬ್ಬ ಇರುವ ಕಾರಣದಿಂದ ಬೆಂಗಳೂರಿನಿಂದ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಬೇಕಾಬಿಟ್ಟಿಯಾಗಿ ಟಿಕೆಟ್ ಪ್ರಯಾನ ದರ ಹೆಚ್ಚಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ 2,000 ರೂ.ನಿಂದ 5,000 ರೂ. ಟಿಕೆಟ್…
ದಾವಣಗೆರೆ : ತಳಸಮುದಾಯದಲ್ಲಿ ಅಜ್ಞಾನದಿಂದ ಮೂಡನಂಬಿಕೆಗಳಿಗೆ ಕಟ್ಟುಬಿದ್ದು ಸಾಮಾಜಿಕ ಪಿಡುಗುಗಳ ಆಚರಣೆಯಲ್ಲಿ ತೊಡಗಿದವರಿಗೆ ಜಾಗೃತಿ ಮೂಡಿಸುವ ಜೊತೆಗೆ ಅಶಕ್ತರಿಗೆ ನೆರವಾಗುವ ಮೂಲಕ ಸಮ ಸಮಾಜ ನಿರ್ಮಾಣ, ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಅಧಿಕಾರಿ ವರ್ಗದವರು ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕೆಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಪಿ.ಎಂ.ನರೇಂದ್ರಸ್ವಾಮಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಾಂಗದವರ ಅಭಿವೃದ್ದಿಗಾಗಿ 2013 ರ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗುತ್ತಿದೆ. ಮೀಸಲಿರಿಸಿದ ಅನುದಾನವನ್ನು ಈ ಜನಾಂಗದ ಅಭಿವೃದ್ದಿಗಾಗಿಯೇ ವೆಚ್ಚ ಮಾಡಬೇಕೆಂದು ಕಾಯಿದೆಯಲ್ಲಿದೆ. ಪರಿಶಿಷ್ಟರ ಅನುದಾನದ ಮೂಲಕ ಎಸ್‍ಸಿ, ಎಸ್‍ಟಿ ಜನರ ಜೀವನ ಮಟ್ಟ ಸುಧಾರಣೆ, ಶೈಕ್ಷಣಿಕ ಅಭಿವೃದ್ದಿ, ಸಾಮಾಜಿಕ ಪಿಡುಗಗಳ ನಿವಾರಣೆ ಜೊತೆಗೆ ಅವರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು…
ಕರ್ನಾಟಕ ಸರ್ಕಾರದಿಂದ 2024-25 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯ ಎಂಟು ತಾಲ್ಲೂಕಿನ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯಲ್ಲಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಹೋಬಳಿ ಮಟ್ಟದ 11 ಬೆಳೆಗಳಾದ ಹುರುಳಿ, ಕುಸುಮೆ, ಹೆಸರು ಬೆಳೆಗಳು ಮಳೆ ಆಶ್ರಿತ ಬೆಳೆಗಳಾಗಿವೆ. ಜೋಳ ಮತ್ತು ಮುಸಿಕಿನ ಜೋಳ ಬೆಳೆಗಳು ನೀರಾವರಿ ಆಶ್ರಿತ ಬೆಳೆಗಳಾಗಿವೆ. ಗೋಧಿ, ಸೂರ್ಯಕಾಂತಿ ಹಾಗೂ ಕಡಲೆ ಬೆಳೆಗಳು ನೀರಾವರಿ ಮತ್ತು ಮಳೆ ಆಶ್ರಿತ ಬೆಳೆಗಳಾಗಿವೆ. ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂದೋಳ, ನವಲಗುಂದ, ಅಣ್ಣಿಗೇರಿ ತಾಲ್ಲೂಕಿನಲ್ಲಿ ಜೋಳ ಮತ್ತು ಕಡಲೆ ಮಳೆ ಆಶ್ರಿತ ಬೆಳೆಗಳಾಗಿವೆ. ಕಲಘಟಗಿ ತಾಲ್ಲೂಕಿನಲ್ಲಿ ಜೋಳ ಮಳೆ ಆಶ್ರಿತ ಬೆಳೆಯಾಗಿದೆ. ಜೋಳ ಮತ್ತು…
ನವದೆಹಲಿ : ದೇಶದಲ್ಲಿ ಬಾಲ್ಯವಿವಾಹ ತಡೆ ಕಾಯ್ದೆಯನ್ನ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಬಾಲ್ಯವಿವಾಹ ನಿಷೇಧ ಕಾಯಿದೆ, 2006 ಎಲ್ಲಾ ವೈಯಕ್ತಿಕ ಕಾನೂನುಗಳ ಮೇಲೆ ಪರಿಣಾಮಕಾರಿಯಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಬಾಲ್ಯ ವಿವಾಹವನ್ನ ನಿಷೇಧಿಸುವ ಕಾನೂನಿನಲ್ಲಿ ಕೆಲವು ದೋಷಗಳಿವೆ. ಬಾಲ್ಯ ವಿವಾಹವು ಜೀವನ ಸಂಗಾತಿಯನ್ನ ಆಯ್ಕೆ ಮಾಡುವ ಆಯ್ಕೆಯನ್ನ ತೆಗೆದುಹಾಕುತ್ತದೆ. ಬಾಲ್ಯ ವಿವಾಹವನ್ನ ಎದುರಿಸಲು ಅಂತರ್ ಶಿಸ್ತಿನ ವಿಧಾನದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ವಿಶೇಷವಾಗಿ ಹೆಣ್ಣು ಮಗುವಿನ ಪ್ರಕರಣದಲ್ಲಿ. ‘ವೈಯಕ್ತಿಕ ಕಾನೂನು’ ಬಾಲ್ಯವಿವಾಹ ನಿಷೇಧ ಕಾಯ್ದೆಯ ಮೇಲೆ ಪರಿಣಾಮ ಬೀರುವುದಿಲ್ಲ! ‘ವೈಯಕ್ತಿಕ ಕಾನೂನು’ ಬಾಲ್ಯವಿವಾಹ ನಿಷೇಧ ಕಾಯ್ದೆಯ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಬಾಲ್ಯದಲ್ಲಿ ನಡೆಸುವ ವಿವಾಹಗಳು ತಮ್ಮ ಆಯ್ಕೆಯ ಜೀವನ ಸಂಗಾತಿಯನ್ನ ಆಯ್ಕೆ ಮಾಡುವ ಆಯ್ಕೆಯನ್ನ ತೆಗೆದುಹಾಕುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ…
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವ ಗುರಿಯೊಂದಿಗೆ ʼಶಿಕ್ಷಣ ಕೋಪೈಲಟ್ʼ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೈಕ್ರೋಸಾಫ್ಟ್ ಮತ್ತು ಶಿಕ್ಷಣ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ “ಶಿಕ್ಷಣ ಕೋಪೈಲೆಟ್” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಆವಿಷ್ಕಾರಗಳನ್ನೂ ತರುವ ನಿಟ್ಟಿನಲ್ಲಿ “ಶಿಕ್ಷಣ ಕೋಪೈಲಟ್” ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಚಾಲಿತ ಡಿಜಿಟಲ್ ಸಂಶೋಧನಾ ಯೋಜನೆ ಜಾರಿಮಾಡಲಾಗಿದೆ. ಶಿಕ್ಷಕರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ “ಶಿಕ್ಷಣ ಫೌಂಡೇಶನ್” ಮತ್ತು “ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾ” ನಡುವಿನ ಸಹಯೋಗದೊಂದಿಗೆ ಈ ಕಾರ್ಯಕ್ರಮ ತರಲಾಗಿದೆ. ಶಿಕ್ಷಕರು ಮಕ್ಕಳ ಶಕ್ತಿ ಮತ್ತು ದೌರ್ಬಲ್ಯವನ್ನು ಗುರುತಿಸಿ, ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಆವಿಷ್ಕಾರಗಳನ್ನೂ ತರುವ ಚಿಂತನೆಯ ಕಾರ್ಯಕ್ರಮ ಇದಾಗಿದೆ. ಕಲಿಕೆಯ ಫಲಿತಾಂಶಗಳನ್ನು…
ಬೆಂಗಳೂರು : ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳ 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಈ ಬಾರಿ ಬೋರ್ಡ್ ಪರೀಕ್ಷೆ ಇರುವುದಿಲ್ಲ. ಈ ಹಿಂದಿನಂತೆ ಶಾಲಾ ಹಂತದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 5, 8, 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಬದಲಿಗೆ ಈ ಹಿಂದೆ ಇದ್ದಂತೆ ಶಾಲಾ ಹಂತದಲ್ಲಿ ಮೌಲ್ಯಾಂಕನ- 2(ಎಸ್ಎ-2). 11ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುವುದು. 5, 8, 9, 11ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಕೆಲವು ಖಾಸಗಿ ಶಾಲಾ ಸಂಘಟನೆಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿವೆ. ಪ್ರಕರಣದ ವಿಚಾರಣೆ ವೇಳೆ ಮಂಡಳಿ ಪರೀಕ್ಷೆ ನಡೆಸದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ವರ್ಷವೂ ಬೋರ್ಡ್ ಪರೀಕ್ಷೆ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಸ್ಥಳೀಯ ಪಠ್ಯಕ್ರಮ, ಭಾಷೆ ಮತ್ತು…
ಬೆಂಗಳೂರು : ಪ್ರವರ್ಗ-2ಎ ಅಡಿ ಮೀಸಲಾತಿ ಒದಗಿಸುವಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದ ನಿಯೋಗದೊಂದಿಗೆ ನಡೆಸಿದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರು ಪಂಚಮಸಾಲಿ ಸಮುದಾಯದ ಮೀಸಲಾತಿ ಕುರಿತಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದ ನಿಯೋಗದೊಂದಿಗೆ ನಡೆಸಿದ ಸಭೆಯ ಮುಖ್ಯಾಂಶಗಳನ್ನು ಮುಂದೆ ಓದಿ. •ಪ್ರವರ್ಗ-2ಎ ಅಡಿ ಮೀಸಲಾತಿ ಒದಗಿಸುವಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದರು. • ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲಾ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುವುದು ನಮ್ಮ ಸರ್ಕಾರದ ನಿಲುವು. • ಶಾಶ್ವತವಾದ ಹಿಂದುಳಿದ ವರ್ಗಗಳ ಆಯೋಗವಿದೆ. ಅದರ…
ಬೆಂಗಳೂರು: ನಗರದಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಹಿನ್ನಲೆಯಲ್ಲಿ, ಬೆಂಗಳೂರಿನ ಕೆಲ ಏರಿಯಾಗಳಲ್ಲಿ ಅಕ್ಟೋಬರ್ 19 ರ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು ಕವಿಪ್ರನಿನಿ ವತಿಯಿಂದ 66/11 ಕೆ.ವಿ. ರಾಜರಾಜೇಶ್ವರಿ ನಗರ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನಲೆಯಲ್ಲಿ ಜಯನಗರ ವಿಭಾಗದ ದ18ನೇ ಉಪವಿಭಾಗದ ಈ ಪ್ರದೇಶಗಳಾದ ಮ್ಯೆಲಸಂದ್ರ, ಐಡಿಯಲ್ ಹೋಮ್ಸ್, ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರ ಪಾಳ್ಯ, ಗಾಮಕಲ್ಲು, ಬೆಮ್ಎಲ್ ಲೇಔಟ್, ಬಿಹೆಚ್ ಸಿಎಸ್ ಲೇಔಟ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ದಿನಾಂಕ.19-10-2024 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 5.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿದೆ. ದಿನಾಂಕ 19.10.2024 (ಶನಿವಾರ) ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 01:00 ಗಂಟೆಯವರೆಗೆ 66/11ಕೆ.ವಿ ಬ್ರಿಗೇಡ್ ಮೆಟ್ರೋಪೋಲಿಸ್’ ಸ್ಟೇಷನ್ ನಲ್ಲಿ 31.5 ಎಮ್.ವಿ.ಎ ಶಕ್ತಿ ಪರಿವರ್ತಕ-01 ರ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ…
ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೌಕರಿ ಪ್ರಸ್ತಾವನೆಗಳನ್ನು ಆನ್‌ಲೈನ್ ತಂತ್ರಾಂಶದಲ್ಲಿ ನಿರ್ವಹಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ವಿಷಯದನ್ವಯ ಅನುಕಂಪದ ನೇಮಕಾತಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ತಂತ್ರಾಂಶದ ಮುಖಾಂತರ ಇಇಡಿಎಸ್ ನಲ್ಲಿ ನಿರ್ವಹಿಸಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಲಾಖಾ ವೆಬ್‌ಸೈಟ್ https://schooleducation.karnataka.gov.in ಭೌತಿಕವಾಗಿ ಸ್ವೀಕೃತಿಯಾಗಿ ನಿರ್ವಹಣೆ ಕ್ರಮಗಳು ಆಗುತ್ತಿದ್ದು ಇದರಿಂದ ಹಲವು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನಗತ್ಯ ತೊಂದರೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಅಸಾಧಾರಣ ವಿಳಂಬವನ್ನೂ ಸಹ ಗಮನಿಸಿದ್ದು ದೂರುಗಳಿಗೆ ದಾರಿಯಾಗಿದೆ. ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ಮತ್ತು ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬಹುದಾದ ರೀತಿಯಲ್ಲಿ ಈಗಾಗಲೇ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಪ್ರಸ್ತುತ ವಿವಿಧ ಜಿಲ್ಲೆಗಳಿಂದ ಆನ್‌ಲೈನ್ ಪರೀಕ್ಷೆಗೆ ಮಾಡ್ಯೂಲ್‌ನ್ನು ಒದಗಿಸಿ ವರದಿಗಳನ್ನು ಪಡೆಯಲಾಗುತ್ತಿದೆ. ವರದಿಗಳ ಆಧಾರದಲ್ಲಿ ತಂತ್ರಾಂಶವು ಅತ್ಯಂತ ಸಮರ್ಥವಾಗಿ ಮತ್ತು ಸುಲಭ ವ್ಯವಹರಣೆಗೆ ಸೂಕ್ತವಾಗಿ ಇರುತ್ತದೆ. ಇನ್ನು ಮುಂದೆ ಎಲ್ಲಾ ಅನುಕಂಪದ ನೇಮಕಾತಿ ಅರ್ಜಿಗಳನ್ನು ಆನ್‌ಲೈನ್ ವ್ಯವಸ್ಥೆಯಲ್ಲಿಯೇ ಸ್ವೀಕರಿಸಲು ಮತ್ತು ಆಯಾ ಕಛೇರಿ ಹಂತಗಳಲ್ಲಿ ಮತ್ತು…












