Author: kannadanewsnow57

ಚಿತ್ರದುರ್ಗ : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂದ ನಟ ದರ್ಶನ್‌ ವಿರುದ್ಧ ರೇಣುಕಾ ಸ್ವಾಮಿ ತಂದೆ ಶಿವನಗೌಡ ಅವರು ಕಿಡಿಕಾರಿದ್ದು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಕೊಲೆ ಮಾಡುವಂತಹ ತಪ್ಪು ಮಾಡಿಲ್ಲ. ಪ್ರಕರಣವನ್ನು ಸಿಬಿಐಗೆ ನೀಡಬೇಕು. ನನ್ನ ಸೊಸೆ ಈಗ ಐದು ತಿಂಗಳ ಗರ್ಭಿಣಿ, ಅವಳಿಗೆ ಯಾರು ಆಸರೆ ಆಗ್ತಾರೆ. ಸರ್ಕಾರದಿಂದ ನನ್ನ ಸೊಸೆಗೆ ಪರಿಹಾರ ಕೊಡಬೇಕು. ಪ್ರಕರಣದ ಆರೋಪಿಗಳಾದ ದರ್ಶನ್‌, ಪವಿತ್ರಾಗೌಡಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿ ಆಕ್ರೋಶ ಮುಗಿಲು ಮುಟ್ಟಿದ್ದು ದರ್ಶನ್‌ ಎಲ್ಲಾ ಫಿಲ್ಮ್ನ ಗಳನ್ನು ಬ್ಯಾಣ್‌ ಮಾಡಬೇಕು ಅತನನ್ನು ಚಿತ್ರರಂಗದಿಂದ ನಿಷೇಧಿಸಬೇಕು, ದರ್ಶನ್‌ ಮತ್ತು ಗ್ಯಾಂಗ್‌ ಕಠಿಣ ಶಿಕ್ಷೆಯಾಗಬೇಕು. ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು. ಪವಿತ್ರಾ ಗೌಡಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕೊಲೆಯಾದ ರೇಣುಕಾಸ್ವಾಮಿ ನನ್ನ ಸೊಸೆಗೆ ಅನ್ಯಾಯ ಆಗಿದೆ, ಪರಿಹಾರ ಕೊಡಬೇಕುಉ. ಅವನ ಹತ್ರ ಎಂತಾ ಕಂತ್ರಿ…

Read More

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಅನ್ನು ಖಾಸಗೀಕರಣಗೊಳಿಸುವ ಯಾವುದೇ ಸಾಧ್ಯತೆಯನ್ನು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ. ಎರಡನೇ ಬಾರಿಗೆ ಸಚಿವಾಲಯದ ಜವಾಬ್ದಾರಿಗಳನ್ನು ವಹಿಸಿಕೊಂಡ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪುರಿ, ಜಾಗತಿಕ ಕಚ್ಚಾ ಬೆಲೆಗಳು ಬ್ಯಾರೆಲ್ಗೆ 70-80 ಡಾಲರ್ಗಿಂತ ಕಡಿಮೆಯಾಗದ ಹೊರತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಕ್ಷಣದ ಇಳಿಕೆ ಇರುವುದಿಲ್ಲ ಎಂದು ಒತ್ತಿ ಹೇಳಿದರು. “ಬಿಪಿಸಿಎಲ್ ಮೊದಲ ಮೂರು ತ್ರೈಮಾಸಿಕಗಳಲ್ಲಿ ಷೇರು ಮಾರಾಟದ ಮೊತ್ತಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ” ಎಂದು ಅವರು ಹೇಳಿದರು. ಬಿಪಿಸಿಎಲ್ನಲ್ಲಿನ ತನ್ನ ಸಂಪೂರ್ಣ 52.98% ಪಾಲನ್ನು ಮಾರಾಟ ಮಾಡಲು ಸರ್ಕಾರ ಯೋಜಿಸಿತ್ತು, 2022 ರ ಹಣಕಾಸು ವರ್ಷದಲ್ಲಿ ಅಂದಾಜು 45,000 ಕೋಟಿ ರೂ. ಇದಕ್ಕಾಗಿ ಆಸಕ್ತಿಯ ಅಭಿವ್ಯಕ್ತಿಗಳು (ಇಒಐ) ಅಥವಾ ಆರಂಭಿಕ ಬಿಡ್ಗಳನ್ನು ಸರ್ಕಾರವು ಮಾರ್ಚ್ 2020 ರಲ್ಲಿ ಆಹ್ವಾನಿಸಿತು. ಮುಂಬೈ, ಕೊಚ್ಚಿ ಮತ್ತು ಮಧ್ಯಪ್ರದೇಶದಲ್ಲಿ ಸಂಸ್ಕರಣಾಗಾರಗಳನ್ನು ಹೊಂದಿರುವ ಇಂಡಿಯನ್ ಆಯಿಲ್ ನಂತರ ಭಾರತದ ಎರಡನೇ ಅತಿದೊಡ್ಡ ತೈಲ…

Read More

ನವದೆಹಲಿ : ಉತ್ತರ ಪ್ರದೇಶದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗುಡಿಸಲಿಗೆ ಲಾರಿ ನುಗ್ಗಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಹರ್ದೋಯ್ನಲ್ಲಿ ಮರಳು ಸಾಗಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿ ಪಲ್ಟಿಯಾಗಿದೆ. ಪರಿಣಾಮ ಒಂದೇ ಕುಟುಂಬದ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ .ಟ್ರಕ್ ಪಲ್ಟಿಯಾದ ನಂತರ ಚೆಲ್ಲಿದ ಮರಳಿನ ಅಡಿಯಲ್ಲಿ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದ ಇಡೀ ಕುಟುಂಬ ಹೂತುಹೋಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Read More

ಚಿತ್ರದುರ್ಗ : ರೇಣುಕಾಸ್ವಾಮಿ ಹತ್ಯೆ ಮಾಡಿದ ದರ್ಶನ್‌ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು ಎಂದು ರೇಣುಕಾಸ್ವಾಮಿ ತಾಯಿ ರತ್ನಮ್ಮ ಆಗ್ರಹಿಸಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿ ಆಕ್ರೋಶ ಮುಗಿಲು ಮುಟ್ಟಿದ್ದು ದರ್ಶನ್‌ ಎಲ್ಲಾ ಫಿಲ್ಮ್ನ ಗಳನ್ನು ಬ್ಯಾಣ್‌ ಮಾಡಬೇಕು ಅತನನ್ನು ಚಿತ್ರರಂಗದಿಂದ ನಿಷೇಧಿಸಬೇಕು, ದರ್ಶನ್‌ ಮತ್ತು ಗ್ಯಾಂಗ್‌ ಕಠಿಣ ಶಿಕ್ಷೆಯಾಗಬೇಕು. ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು. ಪವಿತ್ರಾ ಗೌಡಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಹಿಡಿಶಾಪ ಹಾಕಿದ್ದಾರೆ. ನನ್ನ ಸೊಸೆಗೆ ಅನ್ಯಾಯ ಆಗಿದೆ, ಪರಿಹಾರ ಕೊಡಬೇಕುಉ. ಅವನ ಹತ್ರ ಎಂತಾ ಕಂತ್ರಿ ಬುದ್ದಿ ಇತ್ತು ಗೊತ್ತಾಗಿದೆ. ಅವನಿಗೆ ಕಠಿಣ ಶಿಕ್ಷೆಯಾಗಬೇಕು, ನಮ್ಮ ವಂಶ ನಿರ್ವಂಶ ಮಾಡಿದ ದರ್ಶನ್‌ಗೆ ತಕ್ಕ ಶಾಸ್ತಿ ಆಗಲಿ. ನನ್ನ ಮಗನನ್ನು ಕೊಂದಂತೆ ಅವನನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More

ನ್ಯೂಯಾರ್ಕ್: ಆಘಾತಕಾರಿ ಘಟನೆಯೊಂದರಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಸಹೋದರನನ್ನು ಗುಂಡಿಕ್ಕಿ ಕೊಂದು ತಾಯಿಯನ್ನು ಗಾಯಗೊಳಿಸಿದ ಘಟನೆ ನ್ಯೂಯಾರ್ಕ್ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ನ್ಯೂಯಾರ್ಕ್ನ ರಿಚ್ಮಂಡ್ ಹಿಲ್ ನೆರೆಹೊರೆಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಜನಸಂಖ್ಯೆಯ ಸುಮಾರು 26 ಪ್ರತಿಶತದಷ್ಟು ಜನರು ಭಾರತಕ್ಕೆ ಸೇರಿದವರು ಅಥವಾ ಕೆರಿಬಿಯನ್ನವರು ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಯನ್ನು ಕರಮ್ಜಿತ್ ಮುಲ್ತಾನಿ (33) ಎಂದು ಗುರುತಿಸಲಾಗಿದ್ದು, ಮೃತಪಟ್ಟವನನ್ನು ವಿಪನ್ಪಾಲ್ (27) ಎಂದು ಗುರುತಿಸಲಾಗಿದೆ. ಗಾಯಗೊಂಡ ತಾಯಿಯನ್ನು (52) ಇನ್ನೂ ಗುರುತಿಸಲಾಗಿಲ್ಲ. ಆಕೆಯ ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ತನ್ನ ಸಹೋದರನನ್ನು ಗುಂಡಿಕ್ಕಿ ಕೊಂದ ನಂತರ ಕರಮ್ಜಿತ್ ಮುಲ್ತಾನಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. “ಕರಮ್ಜಿತ್ ಅವರ ದೇಹವು ಬೀದಿ ಮೂಲೆಯ ಬಳಿ ತಲೆಗೆ ಗುಂಡು ತಗುಲಿದ ಗಾಯದೊಂದಿಗೆ ಶವವಾಗಿ ಪತ್ತೆಯಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ತಂದೆ ಭೂಪಿಂದರ್ ಮುಲ್ತಾನಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತನ್ನ ಕುಟುಂಬದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಮತ್ತು ತನ್ನ…

Read More

ನವದೆಹಲಿ:ಹಣಕಾಸು ಮತ್ತು ಐಟಿ ಷೇರುಗಳ ಲಾಭದ ಬೆಂಬಲದೊಂದಿಗೆ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಬುಧವಾರದ ವಹಿವಾಟು ಅವಧಿಯನ್ನು ಸಕಾರಾತ್ಮಕ ಟಿಪ್ಪಣಿಯಲ್ಲಿ ಪ್ರಾರಂಭಿಸಿದವು. ಬೆಳಿಗ್ಗೆ 10:05 ರ ಸುಮಾರಿಗೆ ಬಿಎಸ್ಇ ಸೆನ್ಸೆಕ್ಸ್ 498.83 ಪಾಯಿಂಟ್ಸ್ ಏರಿಕೆಗೊಂಡು 76,955.42 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 150.30 ಪಾಯಿಂಟ್ಸ್ ಏರಿಕೆಗೊಂಡು 23,415.15 ಕ್ಕೆ ತಲುಪಿದೆ. ಚಂಚಲತೆ ಮತ್ತಷ್ಟು ಕುಸಿದಿದ್ದರಿಂದ ಇತರ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಸಹ ಲಾಭ ಗಳಿಸಿದವು. ವಲಯ ಸೂಚ್ಯಂಕಗಳಲ್ಲಿ, ಹೆಚ್ಚಿನ ತೂಕದ ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ ಮತ್ತು ನಿಫ್ಟಿ ಫೈನಾನ್ಷಿಯಲ್ಸ್ ಸುಮಾರು 0.8% ರಷ್ಟು ಏರಿಕೆ ಕಂಡರೆ, ನಿಫ್ಟಿ ಮೀಡಿಯಾ ಹೆಚ್ಚಿನ ಲಾಭ ಗಳಿಸಿದೆ. ಕೋಲ್ ಇಂಡಿಯಾ, ಬಿಪಿಸಿಎಲ್, ಟಾಟಾ ಮೋಟಾರ್ಸ್, ಬಜಾಜ್ ಫೈನಾನ್ಸ್ ಮತ್ತು ಎಲ್ಟಿಐಎಂ ನಿಫ್ಟಿ 50 ನಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಬ್ರಿಟಾನಿಯಾ, ಟೈಟಾನ್, ಏಷ್ಯನ್ ಪೇಂಟ್ಸ್, ಎಚ್ ಯುಎಲ್ ಮತ್ತು ನೆಸ್ಲೆ ಇಂಡಿಯಾ ನಷ್ಟ ಅನುಭವಿಸಿದ ಷೇರುಗಳಾಗಿವೆ. ಮೆಹ್ತಾ ಈಕ್ವಿಟೀಸ್ ಲಿಮಿಟೆಡ್ನ…

Read More

ಚಿತ್ರದುರ್ಗ : ರೇಣುಕಾಸ್ವಾಮಿ ಹತ್ಯೆ ಕುರಿತು ಕಣ್ಣೀರು ಹಾಕಿರುವ ಪತ್ನಿ ಸಹನಾ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಮನುಷ್ಯರಲ್ವಾ? ನನಗೆ ನ್ಯಾಯ ಕೊಡಿಸಿ, ದೊಡ್ಡ ನಟರೇ ಹೀಗೆ ಮಾಡಿದ್ರೆ ತಪ್ಪಲ್ವಾ? ನನ್ನ ಗಂಡ ತಪ್ಪು ಮಾಡಿದ್ರೆ ವಾರ್ನಿಂಗ್‌ ಮಾಡಿ ಬಿಡಬಹುದಾಗಿತ್ತು ಎಂದು ಕಣ್ಣೀರು ಹಾಕಿದ್ದಾರೆ. ಪವಿತ್ರಾಗೌಡ ಹೆಣ್ಣಾಗಿ ಮತ್ತೊಬ್ಬ ಹೆಣ್ಣಿನ ತಾಳಿ ಕಿತ್ತುಕೊಂಡಿರುವುದು ಎಷ್ಟು ಸರಿ ಹೇಳಿ. ಅವರು ಮನುಷ್ಯರಲ್ವಾ? ಅವರಿಗೆ ಹೆಂಡತಿ ಮಕ್ಕಳಿಲ್ವಾ? ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರೇಣುಕಸ್ವಾಮಿ ಪತ್ನಿ ಸಹನಾ ಆಗ್ರಹಿಸಿದ್ದಾರೆ. ನನ್ನ ಮನೆಯವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ. ನಾನು ಗೃಹಿಣಿ, ಹೀಗೆ ಆಗಬಾರದಿತ್ತು. ಮದುವೆ ಆಗಿ ಒಂದು ವರ್ಷ ಅಷ್ಟೇ ಆಗಿದೆ. ನಾನು ತಾಯಿಯಾಗುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಹೀಗಾದರೆ ಏನು ಮಾಡೋದು. ಮೊನ್ನೆ ಕರೆ ಮಾಡಿ ನಮ್ಮ ಜೊತೆ ಮಾತನಾಡಿದ್ದರು. ಅದೇ ಕೊನೆ. ಅವರೇನು ದರ್ಶನ್ ಅಭಿಮಾನಿ ಆಗಿರಲಿಲ್ಲ. ದರ್ಶನ ಮೇಲೆ ಆರೋಪ ಬಂದಿರೋದಕ್ಕೆ ನ್ಯಾಯ…

Read More

ನವದೆಹಲಿ:ಸಾಮಾನ್ಯ ವಿಮಾ ಉತ್ಪನ್ನದ ಅಡಿಯಲ್ಲಿ 50,000 ಅಥವಾ ಅದಕ್ಕಿಂತ ಹೆಚ್ಚಿನ (ಮೋಟಾರು ವಿಮೆಯ ಸಂದರ್ಭದಲ್ಲಿ) ಮತ್ತು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ (ಮೋಟಾರು ವಿಮೆ ಹೊರತುಪಡಿಸಿ) ಯಾವುದೇ ನಷ್ಟವನ್ನು ನೋಂದಾಯಿತ ಸರ್ವೇಯರ್ ಮತ್ತು ನಷ್ಟ ಮೌಲ್ಯಮಾಪಕರು ಕಡ್ಡಾಯವಾಗಿ ಸಮೀಕ್ಷೆ ಮಾಡಬೇಕಾಗುತ್ತದೆ ಎಂದು ಐಆರ್ಡಿಎಐ ಹೇಳಿದೆ. ಪಾಲಿಸಿದಾರರಿಗೆ ಹೆಚ್ಚಿನ ನಮ್ಯತೆ ಮತ್ತು ಸ್ವಾತಂತ್ರ್ಯವನ್ನು ನೀಡುವ ಮೂಲಕ, ಚಿಲ್ಲರೆ ಪಾಲಿಸಿದಾರರು ವಿಮಾದಾರರಿಗೆ ತಿಳಿಸುವ ಮೂಲಕ ಯಾವುದೇ ಸಮಯದಲ್ಲಿ ವಿಮಾ ಪಾಲಿಸಿಯನ್ನು ರದ್ದುಗೊಳಿಸಬಹುದು ಮತ್ತು ಉಳಿದ ಪಾಲಿಸಿ ಅವಧಿಗೆ ಮರುಪಾವತಿ ಪಡೆಯಬಹುದು ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಹೇಳಿದೆ. “ಪಾಲಿಸಿದಾರರು ಪಾಲಿಸಿಯನ್ನು ರದ್ದುಗೊಳಿಸಿದರೆ, ಅವನು / ಅವಳು ರದ್ದತಿಗೆ ಕಾರಣಗಳನ್ನು ನೀಡುವ ಅಗತ್ಯವಿಲ್ಲ. ಚಿಲ್ಲರೆ ಪಾಲಿಸಿದಾರರಿಗೆ ಕನಿಷ್ಠ 7 ದಿನಗಳ ನೋಟಿಸ್ ನೀಡುವ ಮೂಲಕ ಸ್ಥಾಪಿತ ವಂಚನೆಯ ಆಧಾರದ ಮೇಲೆ ಮಾತ್ರ ವಿಮಾದಾರರು ಪಾಲಿಸಿಯನ್ನು ರದ್ದುಗೊಳಿಸಬಹುದು ” ಎಂದು ಐಆರ್ಡಿಎಐ ಮಂಗಳವಾರ ಈ ವಲಯದಲ್ಲಿ ಹಲವಾರು ಸುಧಾರಣೆಗಳನ್ನು ಘೋಷಿಸುವಾಗ…

Read More

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ನಟ ದರ್ಶನ್‌ ಗೆ ನಟ ಜಗ್ಗೇಶ್‌ ಟಾಂಗ್‌ ಕೊಟ್ಟಿದ್ದು, ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ನಟ ಜಗ್ಗೇಶ್‌, ಸರ್ವಆತ್ಮಾನೇನಬ್ರಹ್ಮ ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ. ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ, ಅವನ ಪಾಪಕರ್ಮ ಅವನ ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲಾ, ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ ಎಂದು ಟ್ವೀಟ್‌ ಮಾಡಿದ್ದಾರೆ. https://twitter.com/Jaggesh2/status/1800589040762408969

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಮಾಡಿರುವ ಈ ಕೆಲಸ ಚಿತ್ರರಂಗಕ್ಕೆ ಶೋಭೆ ತರುವಂತದಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಈ ಘಟನೆ ಚಿತ್ರರಂಗಕ್ಕೆ ಶೋಭೆ ತರುವಂತದಲ್ಲ. ರಾಜ್‌ ಕುಮಾರ್‌, ವಿಷ್ಣವರ್ಧನ್‌, ಅಂಬರೀಶ್‌ ಅಂತಹವರನ್ನು ನೋಡಿ ದರ್ಶನ್‌ ಕಲಿಯಬೇಕು. ತಪ್ಪು ಮಾಡಿದ್ರೆ ಕರೆದು ಬುದ್ದಿ ಹೇಳಬೇಕಿತ್ತು ಎಂದರು. ಕೊಲೆಯಾದ ರೇಣುಕಾಸ್ವಾಮಿ ತಂದೆ ತಾಯಿಗೆ ನಾವು ಧೈರ್ಯ ಹೇಳಬೇಕು. ಯಾರದ್ದೂ ತಪ್ಪು, ಯಾರು ಸರಿ ಅನ್ನೋದನ್ನು ಪೊಲೀಸರು ನೋಡಬೇಕಾಗುತ್ತದೆ ಎಂದು ಹೇಳಿದ್ದಾರೆ.

Read More