Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : 2024-25ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಆಯವ್ಯಯ ಘೋಷಿತ ಕಂಡಿಕೆ 96(d) ರಡಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್‌ನೆಟ್ ಸೌಲಭ್ಯಗಳನ್ನು ಎರಡು ವರ್ಷಗಳ ಪ್ಯಾಕೇಜ್ ಅಡಿಯಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2024-25ನೇ ಸಾಲಿನಲ್ಲಿ ಸರ್ಕಾರವು ಮಂಡಿಸಿರುವ ಆಯವ್ಯಯ ಕಂಡಿಕೆ 96(d) ರಲ್ಲಿ ಕೆಳಕಂಡಂತೆ ಘೋಷಣೆ ಮಾಡಲಾಗಿದೆ; “ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಇಂಟರ್‌ನೆಟ್ ಸೌಲಭ್ಯಗಳನ್ನು ಎರಡು ವರ್ಷಗಳ ಪ್ಯಾಕೇಜ್ ಅಡಿಯಲ್ಲಿ ಒದಗಿಸಲು 50 ಕೋಟಿ ರೂ. ಮೀಸಲಿಡಲಾಗುವುದು” ಮೇಲೆ ಓದಲಾದ ಕ್ರಮಾಂಕ (2) ರಲ್ಲಿ 2024-25ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ 4202-01-201-1-04 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಮೂಲಭೂತ ಸೌಕರ್ಯ ಉಪ ಲೆಕ್ಕಶೀರ್ಷಿಕೆ: 180 ಯಂತ್ರೋಪಕರಣ ಮತ್ತು ಸಾಧನ ಸಾಮಗ್ರಿಗಳು ರೂ. 2500.00 ಲಕ್ಷಗಳನ್ನು ಸದರಿ…
ನವದೆಹಲಿ;ಲುಸೆರ್ನ್ ನಗರದ ಬಳಿಯ ಸ್ವಿಟ್ಜರ್ಲೆಂಡ್ನ ಬ್ಯೂರ್ಗೆನ್ಸ್ಟಾಕ್ ರೆಸಾರ್ಟ್ನಲ್ಲಿ ವಾರಾಂತ್ಯದಲ್ಲಿ ಸ್ವಿಸ್ ಆಯೋಜಿಸುವ ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸುವ ಏಕೈಕ ದಕ್ಷಿಣ ಏಷ್ಯಾದ ದೇಶ ಭಾರತವಾಗಿದೆ ಎಂದು ಸಂಘಟಕರು ಬಿಡುಗಡೆ ಮಾಡಿದ ಭಾಗವಹಿಸುವ ದೇಶಗಳ ಪಟ್ಟಿ ತಿಳಿಸಿದೆ. 90 ಕ್ಕೂ ಹೆಚ್ಚು ದೇಶಗಳು – ಅರ್ಧದಷ್ಟು ಯುರೋಪ್ – ಮತ್ತು ವಿಶ್ವಸಂಸ್ಥೆ ಸೇರಿದಂತೆ ಸಂಸ್ಥೆಗಳು ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದರೆ, ರಷ್ಯಾ (ಆಹ್ವಾನಿಸಲಾಗಿಲ್ಲ), ಚೀನಾ ಮತ್ತು ಪಾಕಿಸ್ತಾನ ಕೆಲವು ಗಮನಾರ್ಹ ಗೈರುಹಾಜರಿಗಳಾಗಿವೆ. ಭಾರತವನ್ನು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಪವನ್ ಕಪೂರ್ ಪ್ರತಿನಿಧಿಸಲಿದ್ದಾರೆ. ಆಹ್ವಾನವನ್ನು ನಿರಾಕರಿಸಿದ ಚೀನಾ, “ರಷ್ಯಾ ಸಭೆಯಲ್ಲಿ ಭಾಗವಹಿಸದ ಕಾರಣ, ಶಾಂತಿ ಶೃಂಗಸಭೆಯಲ್ಲಿ ಉಕ್ರೇನ್ ಏಕಪಕ್ಷೀಯ ಹಾಜರಾತಿ ಅರ್ಥಹೀನವಾಗುತ್ತದೆ” ಎಂದು ಹೇಳಿದೆ. ಶಾಂತಿ ಶೃಂಗಸಭೆಗಿಂತ ಹೆಚ್ಚಾಗಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ “ಶಾಂತಿ ಸೂತ್ರ” ವನ್ನು ಉತ್ತೇಜಿಸಲು ಇದು ಒಂದು ವೇದಿಕೆಯಾಗಿದೆ ಎಂದು ಬೀಜಿಂಗ್ ಹೇಳಿದೆ. ಯುಕೆ ಪ್ರಧಾನಿ ರಿಷಿ ಸುನಕ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜರ್ಮನ್ ಚಾನ್ಸಲರ್…
ಮೈಸೂರು : ದರ್ಶನ್ ಮೇಲಿನ ಕೊಲೆ ಆರೋಪ ಪ್ರಕರಣದಲ್ಲಿ ಯಾವ ಪ್ರಭಾವಿಗಳೂ ನನ್ನನ್ನು ಭೇಟಿಯಾಗಲು ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಮೇಲಿನ ಕೊಲೆ ಆರೋಪ ಪ್ರಕರಣದಲ್ಲಿ ಯಾವ ಪ್ರಭಾವಿಗಳೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಕಾನೂನು ರೀತಿ ಹೇಗೆ ತನಿಖೆಯಾಗಬೇಕು ಹಾಗೆಯೇ ಆಗುತ್ತದೆ, ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಸುತ್ತ ಶಾಮಿಯಾನ ಹಾಕಿರುವ ನಿರ್ಧಾರದ ಹಿಂದಿನ ಉದ್ದೇಶ ನನಗೂ ತಿಳಿದಿಲ್ಲ. ಪೊಲೀಸರು ನನಗೆ ಮಾಹಿತಿ ನೀಡಿ ತೀರ್ಮಾನ ಮಾಡಿಲ್ಲ. ಸಾಮಾನ್ಯ ಜನರಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಸಾಮಾನ್ಯ ಜನ ಹೇಗೆ ಹೇಳುತ್ತಾರೊ ಹಾಗೆ ಕೇಳುತ್ತೇವೆ ಎಂದರು.
ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್ ಸಿ) ನಾಯಕ ಸಿರಿಲ್ ರಾಮಫೋಸಾ ಅವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ರಾಷ್ಟ್ರೀಯ ಅಸೆಂಬ್ಲಿ ಮರು ಆಯ್ಕೆ ಮಾಡಿದೆ. ಗುರುವಾರ ನಡೆದ ರಾಷ್ಟ್ರೀಯ ಅಸೆಂಬ್ಲಿಯ ಮೊದಲ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ರೇಮಂಡ್ ಜೊಂಡೊ, ಅಧ್ಯಕ್ಷೀಯ ಚುನಾವಣೆಯಲ್ಲಿ ರಾಮಫೋಸಾ 283 ಮತಗಳನ್ನು ಗಳಿಸಿ ಜಯಗಳಿಸಿದರೆ, ಇನ್ನೊಬ್ಬ ನಾಮನಿರ್ದೇಶಿತ ಎಕನಾಮಿಕ್ ಫ್ರೀಡಂ ಫೈಟರ್ಸ್ನ ಜೂಲಿಯಸ್ ಮಾಲೆಮಾ 44 ಮತಗಳನ್ನು ಪಡೆದರು ಎಂದು ಘೋಷಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತಮ್ಮ ಮೊದಲ ಭಾಷಣದಲ್ಲಿ, ರಮಾಫೋಸಾ ಅವರು ಮರು ಆಯ್ಕೆಯನ್ನು “ದೊಡ್ಡ ಜವಾಬ್ದಾರಿ” ಎಂದು ಒಪ್ಪಿಕೊಂಡಿದ್ದಾರೆ ಮತ್ತು ಅವರನ್ನು ಬೆಂಬಲಿಸದವರೊಂದಿಗೆ ಸಹ ಕೆಲಸ ಮಾಡುತ್ತಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೇ ಅಂತ್ಯದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ದಕ್ಷಿಣ ಆಫ್ರಿಕಾದ ಜನರು ತಮ್ಮ ನಾಯಕರು ತಮ್ಮ ಅಗತ್ಯಗಳನ್ನು ಪೂರೈಸಲು ಒಟ್ಟಾಗಿ ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತಾರೆ ಎಂಬುದನ್ನು…
ಬೆಂಗಳೂರು : ಒಂದೇ ದಿನ ಕರ್ನಾಟಕ ಲೋಕಸೇವಾ ಆಯೋಗ (KPSC), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೇರಿ ಹಲವು ನೇಮಕಾತಿಗಳಿಗೆ ಪರೀಕ್ಷೆ ನಿಗದಿಪಡಿಸಲಾಗಿದ್ದು, ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸಿಬಿಎಸ್‌ಇ, ಯುಪಿಎಸ್‌ಸಿ ಮುಂತಾದ ಸಂಸ್ಥೆಗಳಿಂದ ವಿವಿಧ ಹುದ್ದೆಗಳ ನೇಮಕಾತಿ ಹಾಗೂ ವೃತ್ತಿಪರ ಸ್ಪರ್ಧಾತ್ಮಕ ಪರೀಕ್ಷೆಗಳು ಒಂದೇ ದಿನಾಂಕಗಳಂದು ನಿಗದಿಯಾಗಿದೆ. ಕೆಪಿಎಸ್‌ಸಿಯಿಂದ 100 ಭೂಮಾಪಕರ ಹುದ್ದೆಗಳ (ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ) ನೇಮಕಾತಿಗೆ ಜು.7ರಂದು ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಯಾಗಿದೆ. ಅದೇ ದಿನ ಸಿಬಿಎಸ್ ಇಯಿಂದ ಸಿಟಿಇಟಿ ಪರೀಕ್ಷೆ ಮತ್ತು ಯುಪಿಎಯಿಂದ ಇಪಿಎಫ್‌ಒ ನ 322 ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ ಪರೀಕ್ಷೆ ನಿಗದಿಯಾಗಿದೆ. ಆಗಸ್ಟ್ 11ರಂದು ಕರ್ನಾಟಕ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಹಾಗೂ ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್ ಸಿ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ. ಇನ್ನೂ ಅದೇ ದಿನ ಕೆಇಎ ಕರ್ನಾಟಕ ನಗರ ನೀರು ಸರಬರಾಜು ಮತ್ತು…
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದು, ಇದೀಗ ದರ್ಶನ್ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮಾರಾಗಳ ದೃಶ್ಯವಳಿ ಒದಗಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ವಕೀಲರಿಬ್ಬರು ಅರ್ಜಿ ಸಲ್ಲಿಸಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ವಿಶೇಷ ಸೌಲಭ್ಯದ ಆರೋಪ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ 48 ಗಂಟೆಗಳ ದೃಶ್ಯಾವಳಿ ಒದಗಿಸುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆ ಯಡಿ ಇಬ್ಬರು ವಕೀಲರು ಮನವಿ ಸಲ್ಲಿಸಿದ್ದಾರೆ. ಅನ್ನ ಪೂರ್ಣೇಶ್ವರಿ ನಗರ ಠಾಣೆಗೆ ಭೇಟಿ ನೀಡಿದ ವಕೀಲರಾದ ನರಸಿಂಹ ಮೂರ್ತಿ ಹಾಗೂ ಉಮಾಪತಿ ಅವರು, ದರ್ಶನ್ ಬಂಧನ ಬಳಿಕದ 48 ಗಂಟೆಗಳ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಒದಗಿಸುವಂತೆ ಠಾಣಾಧಿಕಾರಿಗೆ ಂನವಿ ಮಾಡಿದ್ದಾರೆ.
ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೂನ್ 15, 16 ರಂದು ಎರಡು ದಿನ ವಿದ್ಯುತ್ ಕಡಿತ ಘೋಷಿಸಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಬೆಂಗಳೂರು ಬೆಳಗ್ಗೆ 10ರಿಂದ ಮಧ್ಯಾಹ್ನ 5 ರವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವನ್ನು ಘೋಷಿಸಿವೆ. ಜೂನ್ 15 ರ ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಬಾಪೂಜಿನಗರ, ಕವಿಕಾ ಲೇಔಟ್, ಬ್ಯಾಟರಾಯನಪುರ ಐಯ್ಯಣ್ಣಶೆಟ್ಟಿ ಬಡಾವಣೆ, ಗಣಪತಿನಗರ, ಪ್ರೈಡ್ ಅಪಾರ್ಟ್‌ಮೆಂಟ್, ದೀಪಾಂಜಲಿನಗರ, ಪಟೇಲ್ ಪುಟ್ಟಯ್ಯ ಕೈಗಾರಿಕಾ ಪ್ರದೇಶ, ಬಿಎಚ್‌ಇಎಲ್, ಮುತ್ತಾಚಾರಿ ಕೈಗಾರಿಕಾ ಪ್ರದೇಶ, ಜ್ಯೋತಿನಗರ, ಗಂಗೊಂಡನಹಳ್ಳಿ, ಅಜಿತ್ ಸೇರ್ ಕೈಗಾರಿಕಾ ಪ್ರದೇಶ, ವಿನಾಯಕ ಬಡಾವಣೆ, ಮೆಟ್ರೋ ಲೇಔಟ್, ನಾಯಂಡಹಳ್ಳಿ, ಬ್ಯಾಟರಾಯನಪುರ, ಮೈಸೂರು ರಸ್ತೆ, ಶೋಭಾ ಟೆಂಟ್ ರೋಡ್, ಗುಡ್ಡದಹಳ್ಳಿ ಎಕ್ಸ್‌ಟೆನ್ನನ್, ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್, ಆರ್.ಆರ್.ನಗರ ಸುತ್ತಮುತ್ತ…
ಮೈಸೂರು : ರಾಜ್ಯದಲ್ಲಿ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ, ಈ ಬಗ್ಗೆ ಯಾವುದೇ ಅನುಮಾನಗಳು ಬೇಡ. ಅವು ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಲೋಕಸಭೆಯಲ್ಲಿ ಒಂದು ಸ್ಥಾನದಿಂದ 9 ಸ್ಥಾನಗಳನ್ನು ಪಡೆದಿದ್ದೇವೆ. ನಮ್ಮ ನಿರೀಕ್ಷೆಯಷ್ಟು ಫಲಿತಾಂಶ ಬಂದಿಲ್ಲ. ಒಂದರಿಂದ 9 ಸ್ಥಾನಕ್ಕೇರಿದ್ದು, ಕಳೆದ ಬಾರಿಗಿಂತ 13% ಹೆಚ್ಚು ಮತಗಳ ಹಂಚಿಕೆ ನಮ್ಮ ಪರವಾಗಿದೆ. ಹಾಗೆಂದು ನಮ್ಮ ಬೆನ್ನು ತಟ್ಟಿಕೊಳ್ಳುತ್ತಿಲ್ಲ. ನಮ್ಮ ಫಲಿತಾಂಶ ಕಳೆದ ಬಾರಿಗಿಂತ ಉತ್ತಮವಾಗಿದೆ ಆದರೆ ನಿರೀಕ್ಷೆಯಂತೆ ಆಗಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣದಲ್ಲಿ ದೂರು ನೀಡಿರುವವರು ಯಾರು? ಸರ್ಕಾರ ಅಲ್ಲ, ಖಾಸಗಿ ವ್ಯಕ್ತಿ ದೂರು ನೀಡಿದ್ದು ಹೌದಲ್ವಾ? ಹೀಗಿರುವಾಗ ದ್ವೇಷದ ರಾಜಕಾರಣ ಎಲ್ಲಿದೆ? ಕಾನೂನು ರೀತಿ ಕೆಲಸ ಮಾಡುವ ಪೋಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಎಲ್ಲರೂ…
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ 2024-25ನೇ ಸಾಲಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಅಂಧರೆ 6-7, 8 ತರಗತಿ ಶಾಲೆಗಳನ್ನಾಗಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ 7ನೇ ತರಗತಿಯನ್ನು 8ನೇ ತರಗತಿಯಾಗಿ ಉನ್ನತೀಕರಿಸಿ ಪ್ರಾರಂಭಿಸುವ ಬಗ್ಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಜ್ಞಾಪನ ಹೊರಡಿಸಿದ್ದು, ರಾಜ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗೆ ಅಂದರೆ 6 ರಿಂದ 7ನೇ ತರಗತಿ ಉನ್ನತೀಕರಣಕ್ಕಾಗಿ 145 ಶಾಲೆಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇವುಗಳಲ್ಲಿ 55 ಶಾಲೆಗಳನ್ನು ಶಿಫಾರಸ್ಸು ಮಾಡಲಾಗಿದೆ ಎಂದಿದ್ದಾರೆ. ಇನ್ನೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಉನ್ನತೀಕರಿಸಿ ಪ್ರಾರಂಭಿಸೋದಕ್ಕಾಗಿ 41 ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಉನ್ನತೀಕರಿಸಿದ ಶಾಲೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ. ರಾಜ್ಯದ ಯಾವೆಲ್ಲ ಶಾಲೆ ಉನ್ನತೀಕರಣ ಎನ್ನುವ ಪಟ್ಟಿ ಈ ಕೆಳಗಿದೆ
ಬೆಂಗಳೂರು:ಜನನ ಪ್ರಮಾಣಪತ್ರದಲ್ಲಿ ತನ್ನ ಜನ್ಮ ದಿನಾಂಕವನ್ನು ತಿರುಚಿದ್ದಕ್ಕಾಗಿ ಚರ್ಚ್‌ನ ಮಾಜಿ ಮುಖ್ಯಸ್ಥನನ್ನು ದೋಷಿ ಎಂದು ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ. ಜನನ ಪ್ರಮಾಣ ಪತ್ರದಲ್ಲಿ ತಮ್ಮ ಜನ್ಮ ದಿನಾಂಕವನ್ನು ತಿರುಚಿದ್ದಕ್ಕಾಗಿ ಚರ್ಚ್ ನ ಮಾಜಿ ಮುಖ್ಯಸ್ಥರೊಬ್ಬರನ್ನು ದೋಷಿ ಎಂದು ಘೋಷಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. 2004ರ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠವು ಜೂನ್ 3ರಂದು ಈ ಆದೇಶವನ್ನು ಹೊರಡಿಸಿತ್ತು. ಈ ಹಿಂದೆ ವಿಚಾರಣಾ ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗಿದ್ದ ಮತ್ತು ಈ ತೀರ್ಪನ್ನು ಕೆಳ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ವಿಫಲವಾದ ಮಾಜಿ ಚರ್ಚ್ ಮುಖ್ಯಸ್ಥರು ಸಲ್ಲಿಸಿದ ಮೇಲ್ಮನವಿಯು ಪ್ರಶ್ನಾರ್ಹ ಪ್ರಕರಣವಾಗಿತ್ತು. ಅವರು 1944 ರ ಬದಲು 1945 ರಲ್ಲಿ ಜನಿಸಿದ್ದಾರೆ ಎಂದು ತೋರಿಸಲು ಅವರು ತಮ್ಮ ಜನನ ಪ್ರಮಾಣಪತ್ರವನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ, ಇದರಿಂದಾಗಿ ಚರ್ಚ್ ಮುಖ್ಯಸ್ಥರಾಗಿ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ತರುವಾಯ, ವಿಚಾರಣಾ ಮ್ಯಾಜಿಸ್ಟ್ರೇಟ್ ಫೋರ್ಜರಿಗೆ…