Author: kannadanewsnow57

ಬೆಂಗಳೂರು : ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂಬ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ನಾನು ಹೇಳಿಲ್ಲ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಬಾದಾಮಿ ಅಭಿವೃದ್ಧಿ, ಬಾದಾಮಿ ಗುಹೆಗಳ ರಕ್ಷಣೆಗೆ ಅನುದಾನ 1 ಸಾವಿರ ಕೋಟಿ ಪ್ರಸ್ತಾವನೆ ರೆಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿ ಎಂದಿದ್ದೆ. ಅಷ್ಟೊಂದು ದುಡ್ಡು ನಾವು ಕೊಡಲು ಆಗಲ್ಲ ಎಂದು ಹೇಳಿದ್ದೆ. ಬಜೆಟ್ ಗಾತ್ರ ಹೆಚ್ಚಾಗಿದೆ. ಹಣ ಇಲ್ಲ ಅಂತಾ ಹೇಗೆ ಹೇಳಲು ಆಗುತ್ತೆ ಎಂದರು. ಗ್ಯಾರಂಟಿ ಒಂದೇ ಅಲ್ಲ,, ನೀರಾವರಿ, ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಸರ್ಕಾರದ ಬಳಿ ದುಡ್ಡೇ ಇಲ್ಲ ಅಂತೀನಾ, ಅಷ್ಟು ಪ್ರಜ್ಞೆ ಇಲ್ಲವೇ? ವಸ್ತುಸ್ಥಿತಿ ಗೊತ್ತಿದೆ. ನನಗಿಂತ ಚೆನ್ನಾಗಿ ಯಾರಿಗೆ ಅರ್ಥವಾಗುತ್ತದೆ. ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ನಾನು ಹಾಗೆ ಮಾತನಾಡುವುದಿಲ್ಲ. ರಾಜ್ಯದಲ್ಲಿ ಅರ್ಥಿಕ ಸ್ಥಿತಿ ಸದೃಢವಾಗಿದೆ ಎಂದರು.

Read More

ನವದೆಹಲಿ : ಪ್ರತಿ ಹೊಸ ತಿಂಗಳ ಆರಂಭದಂತೆ, ಮುಂಬರುವ ಜುಲೈ ತಿಂಗಳಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ವಿಶೇಷವಾಗಿ ಭಾರತೀಯ ರೈಲ್ವೆ ದೊಡ್ಡ ಬದಲಾವಣೆಗಳನ್ನು ಜಾರಿಗೆ ತರಲಿದೆ. ಇವು ರೈಲು ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರಲಿವೆ. ರೈಲ್ವೆ ನಿಯಮ ಬದಲಾವಣೆಯನ್ನು ನಾವು ನೋಡಿದರೆ, ದರ ಹೆಚ್ಚಳದಿಂದ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್ಗೆ ನಿಯಮಗಳು ಬದಲಾಗುತ್ತಿವೆ. ಅದೇ ಸಮಯದಲ್ಲಿ, ತಿಂಗಳ ಮಧ್ಯದಲ್ಲಿ ಒಂದು ಬದಲಾವಣೆಯನ್ನು ಜಾರಿಗೆ ತರಲಾಗುವುದು. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ… ಮೊದಲ ಬದಲಾವಣೆ – ರೈಲು ದರದಲ್ಲಿ ಹೆಚ್ಚಳ ಜುಲೈ ತಿಂಗಳು ಅನೇಕ ದೊಡ್ಡ ಬದಲಾವಣೆಗಳನ್ನು ತರಲಿದೆ ಮತ್ತು ಇವುಗಳಲ್ಲಿ ಭಾರತೀಯ ರೈಲ್ವೆಗೆ ಸಂಬಂಧಿಸಿದ ಬದಲಾವಣೆಗಳೂ ಸೇರಿವೆ. ತಿಂಗಳ ಮೊದಲ ದಿನಾಂಕದಿಂದ ಅಂದರೆ ಜುಲೈ 1, 2025 ರಿಂದ, ಭಾರತೀಯ ರೈಲ್ವೆ ಪ್ರಯಾಣಿಕರ ದರವನ್ನು ಹೆಚ್ಚಿಸಲಿದೆ, ಆದರೂ ಇದು ಸ್ವಲ್ಪ ಹೆಚ್ಚಳವಾಗಿದ್ದರೂ ಹಲವು ವರ್ಷಗಳಲ್ಲಿ ಮೊದಲ ಬಾರಿಗೆ ರೈಲು ಟಿಕೆಟ್ ಹೆಚ್ಚಳ ಸಂಭವಿಸಲಿದೆ. ಇದರ ಅಡಿಯಲ್ಲಿ, ವಿಶೇಷವಾಗಿ ದೂರದ…

Read More

ಮಂಡ್ಯ: ಮಂಡ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ವಿವಾಹಿತ ಪ್ರಿಯತಮೆಯನ್ನು ಹತ್ಯೆಗೈದು ಜಮೀನಿನಲ್ಲಿ ಶವ ಮುಚ್ಚಿಟ್ಟು ಯುವಕ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಮಂಡ್ಯದ ಜಿಲ್ಲೆಯ ಕರೋಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯಾದ ಮಹಿಳೆಯನ್ನು ಹಾಸನ  ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ (35) ಎಂದು ಗುರುತಿಸಲಾಗಿದೆ. ಕರೋಟಿ ಗ್ರಾಮದ ಪುನೀತ್ ಹತ್ಯೆಗೈದ ಆರೋಪಿಯಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಯುವಕನಿಗೆ ಪ್ರೀತಿ ಪರಿಚಯವಾಗಿದ್ದಳು. ಗಂಡ, ಮಕ್ಕಳಿದ್ದರೂ ಪುನೀತ್ ಜೊತೆ ಪ್ರೀತಿ ಲವ್ನಲ್ಲಿ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರಿಗೆ ಒಟ್ಟಿಗೆ ಕಾರಿನಲ್ಲಿ ತೆರಳಿದ್ದರು ಎನ್ನಲಾಗಿದ್ದು, ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಮಹಿಳೆಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೆ.

Read More

ನವದೆಹಲಿ :ಅಧಿಕ ತೂಕದಿಂದ ಬಳಲುತ್ತಿರುವವರಿಗೆ ಇದು ಒಳ್ಳೆಯ ಸುದ್ದಿ. ಡ್ಯಾನಿಶ್ ಔಷಧ ಕಂಪನಿ ನೊವೊ ನಾರ್ಡಿಸ್ಕ್ ‘ವೆಗೋವಿ’ ಎಂಬ ಇಂಜೆಕ್ಷನ್ ಅನ್ನು ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ, ನೊವೊ ನಾರ್ಡಿಸ್ಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯ ಮಂಗಳವಾರ (ಜೂನ್ 24) ಈ ಔಷಧಿಯನ್ನು ಬಿಡುಗಡೆ ಮಾಡಿದ್ದಾರೆ. ಬೊಜ್ಜಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಔಷಧಿ ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಎಲ್ಲಾ ಔಷಧ ಅಂಗಡಿಗಳಲ್ಲಿ ಇದು ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ. ವೆಗೋವಿ ಎಂಬ ಇಂಜೆಕ್ಷನ್ ನಾಲ್ಕು ವಾರಗಳ ಡೋಸಿಂಗ್ ಸೈಕಲ್ನಲ್ಲಿದೆ. ಇದು ನಾಲ್ಕು ವಾರಗಳವರೆಗೆ ವಾರಕ್ಕೆ 0.25 ಮಿಗ್ರಾಂನ ಅತ್ಯಂತ ಕಡಿಮೆ ಡೋಸ್ನೊಂದಿಗೆ ಪ್ರಾರಂಭವಾಗುತ್ತದೆ. ಅದರ ನಂತರ, ತಿಂಗಳಿಗೆ ಡೋಸ್ ಅನ್ನು ಕ್ರಮೇಣ ವಾರಕ್ಕೆ 0.5 ಮಿಗ್ರಾಂ ಹೆಚ್ಚಿಸಲಾಗುತ್ತದೆ. ಒಂದು ತಿಂಗಳಿಗೆ ಡೋಸ್ ಅನ್ನು ವಾರಕ್ಕೆ 1 ಮಿಗ್ರಾಂ ಹೆಚ್ಚಿಸಲಾಗುತ್ತದೆ. ಅದರ ನಂತರ, ವೈದ್ಯರ ಶಿಫಾರಸಿನ ಪ್ರಕಾರ ಡೋಸ್ ಅನ್ನು ಮತ್ತಷ್ಟು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಪಿಜಿ ಮಾಲೀಕನೋರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಬೆಂಗಳೂರಿನ ಬನಶಂಕರಿ 2 ನೇ ಹಂತದ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಪಿಜಿ ಮಾಲೀಕ ರವಿತೇಜ ರೆಡ್ಡಿ ಕಳೆದ ವಾರವಷ್ಟೇ ಪಿಜಿಗೆ ಬಂದಿದ್ದ ಯುವತಿ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪಿಜಿಯಲ್ಲಿ ಯುವತಿಯೋರ್ವಳ ಚಿನ್ನದ ಉಂಗುರ ಕಳೆದು ಹೋಗಿದ್ದು, ಇದನ್ನು ವಿಚಾರಿಸುವ ನೆಪದಲ್ಲಿ ವಿಚಾರಣೆ ಮಾಡಲು ಬಂದ ರವಿತೇಜ ರೆಡ್ಡಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.  ಬೆಂಗಳೂರಿನ ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕೇಸ್ ಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಡಿ ( E.D) ಅಧಿಕಾರಿಗಳು ನಗರದ ಹಲವು ಕಡೆ ದಾಳಿ ನಡೆಸಿದ್ದಾರೆ. ನಗರದ 18 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಸೇರಿ ಹಲವು ಕಡೆ ದಾಳಿ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಆಷಾಢ ನವರಾತ್ರಿ ಜೂನ್ 26 ರಿಂದ ಜುಲೈ 4 ರವರೆಗೆ ಇರುತ್ತದೆ. ಈ 9 ದಿನಗಳಲ್ಲಿ, ವಾರಘಿಯನ್ನು ಸ್ಮರಿಸಿ ಈ 1 ಪದವನ್ನು ಹೇಳಿ. ವಾರಘಿಯನ್ನು ಅನುಭವಿಸುವ ಅವಕಾಶವು ನಿಮಗೆ ದೊರೆಯುತ್ತದೆ.  ಆಷಾಢ ನವರಾತ್ರಿ 2025  ನವರಾತ್ರಿಯಲ್ಲಿ ನಾಲ್ಕು ವಿಧಗಳಿವೆ. ಪಂಗುಣಿ ಮಾಸದ ಅಮಾವಾಸ್ಯೆಯ ನಂತರ ವಸಂತ ನವರಾತ್ರಿಯನ್ನು ಆಚರಿಸಲಾಗುತ್ತದೆ. ಆಷಾಢ ನವರಾತ್ರಿಯನ್ನು ಮಣ್ಣೆತ್ತಿನ ಮಾಸದ ಅಮಾವಾಸ್ಯೆಯ ನಂತರ ಆಚರಿಸಲಾಗುತ್ತದೆ. ಪುರಟ್ಟಸಿ ಮಾಸದ ಅಮಾವಾಸ್ಯೆಯ ನಂತರ ಶಾರದ ನವರಾತ್ರಿಯನ್ನು ಆಚರಿಸಲಾಗುತ್ತದೆ. ಥೈ ಮಾಸದ ಅಮಾವಾಸ್ಯೆಯ ನಂತರ ಶ್ಯಾಮಲ ನವರಾತ್ರಿಯನ್ನು ಆಚರಿಸಲಾಗುತ್ತದೆ. ಈಗ ಆನಿ ಮಾಸ ನಡೆಯುತ್ತಿದೆ. ಇಂದು ಜೂನ್ 25 ರಂದು ಅಮಾವಾಸ್ಯೆಯ ದಿನ. ಅಮಾವಾಸ್ಯೆಯ ನಂತರದ ದಿನವಾದ ಜೂನ್ 26 ರಂದು ಆಷಾಡ ನವರಾತ್ರಿ ಪ್ರಾರಂಭವಾಗುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ…

Read More

ನವದೆಹಲಿ :ಬುಧವಾರ ಬೆಳಿಗ್ಗೆ 7:03 ಕ್ಕೆ ಅಂಡಮಾನ್ ಸಮುದ್ರದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಇದಕ್ಕೂ ಮೊದಲು, ಬೆಳಿಗ್ಗೆ 1:43 ಕ್ಕೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. USGS ಪ್ರಕಾರ, ಈ ಭೂಕಂಪವು ಪೋರ್ಟ್ ಬ್ಲೇರ್ನಲ್ಲಿ 270 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಇದಕ್ಕೂ ಮೊದಲು, ಬುಧವಾರ ಬೆಳಗಿನ ಜಾವ 1 ಗಂಟೆಗೆ ಸಂಭವಿಸಿದ ಭೂಕಂಪದ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ NCS, “ಭಾರತೀಯ ಸಮಯ 01:43:50 ಕ್ಕೆ ಭೂಕಂಪ ಸಂಭವಿಸಿದೆ, ಆದರೆ ಅದರ ಕೇಂದ್ರಬಿಂದು ಸಮುದ್ರ ಮೇಲ್ಮೈಯಿಂದ ಸುಮಾರು 20 ಕಿಲೋಮೀಟರ್ ಆಳದಲ್ಲಿದೆ” ಎಂದು ಹೇಳಿದೆ. ಭೂಕಂಪದಿಂದಾಗಿ ಯಾವುದೇ ಸಾವುನೋವುಗಳು ಅಥವಾ ಆಸ್ತಿಗೆ ಹಾನಿಯಾದ ಬಗ್ಗೆ ತಕ್ಷಣದ ವರದಿ ಇಲ್ಲ. 24 ಗಂಟೆಗಳಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದೆ ಮಂಗಳವಾರದಿಂದ ಬುಧವಾರ ಬೆಳಿಗ್ಗೆವರೆಗೆ ಅಂಡಮಾನ್ ಸಮುದ್ರದಲ್ಲಿ ಮೂರು ಬಾರಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಮಂಗಳವಾರ ಮಧ್ಯಾಹ್ನ 3:47…

Read More

ನವದೆಹಲಿ : ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಿದೆ. ದಿನದ ವಹಿವಾಟಿನ ಸಮಯದಲ್ಲಿ ಸೆನ್ಸೆಕ್ಸ್ 3250 ಕ್ಕೂ ಹೆಚ್ಚು ಅಂಕ ಏರಿಕೆಯಾಗಿದ್ದು, ಮತ್ತು ನಿಫ್ಟಿ 25,100ರ ಗಡಿ ದಾಟಿದೆ. ಸೆನ್ಸೆಕ್ಸ್ 800 ಅಂಕಗಳ ಜಿಗಿತ. ನಿಫ್ಟಿ 25,200 ದಾಟಿದೆ; ಟೈಟಾನ್ 2% ಏರಿಕೆಯಾಗಿದೆ ಎಂದು ವರದಿಯಾಗಿದೆ.

Read More

2025-26 ನೇ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿರುವ ಅಸಂಘಟಿತ ಕೈಮಗ್ಗ ನೇಕಾರರು ತಮ್ಮ ನೇಕಾರಿಕೆಯ ಉದ್ಯೋಗಕ್ಕಾಗಿ ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳಿಂದ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಸಂಘಟಿತ ಕೈಮಗ್ಗ ನೇಕಾರರು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅಥವಾ ಬ್ಯಾಂಕಗಳಿಂದ ಅರ್ಜಿ ನಮೂನೆ ಪಡೆದು, ಜುಲೈ 15, 2025 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0836- 2448834 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More