Subscribe to Updates
Get the latest creative news from FooBar about art, design and business.
Author: kannadanewsnow57
ತೆಲಂಗಾಣ : ಇತ್ತೀಚಿಗೆ ಮಕ್ಕಳಲ್ಲಿ ಲೋಬಿಪಿ, ಹೃಯದಾಘಾತದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಈ ನಡುವೆ ತೆಲಂಗಾಣದ ವನಪರ್ತಿ ಜಿಲ್ಲೆಯ ಎಸ್ಸಿ ಬಾಲಕರ ಹಾಸ್ಟೆಲ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಹಠಾತ್ತನೆ ತೀವ್ರ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ. ಮೃತನನ್ನು ಗೋಪಾಲಪೇಟೆ ಮಂಡಲ ಕೇಂದ್ರದಲ್ಲಿರುವ ಎಸ್ಸಿ ಬಾಲಕರ ಹಾಸ್ಟೆಲ್ನಲ್ಲಿ ಓದುತ್ತಿದ್ದ ಉಡುಮುಲ ಭರತ್ (8 ನೇ ತರಗತಿ) ಎಂದು ಗುರುತಿಸಲಾಗಿದೆ. ಪ್ರತಿದಿನದಂತೆ ಬೆಳಿಗ್ಗೆ 5.30 ಕ್ಕೆ ಎಚ್ಚರಗೊಳ್ಳುತ್ತಿದ್ದ ಭರತ್, ತನ್ನ ದೈನಂದಿನ ಕೆಲಸಗಳನ್ನು ನೋಡಿಕೊಂಡನು, ಮತ್ತು ಬೆಳಿಗ್ಗೆ 7 ಗಂಟೆಗೆ, ಹಾಸ್ಟೆಲ್ ಕಾಂಪೌಂಡ್ನ ಗೋಡೆಯ ಮೇಲೆ ಓದಲು ಕುಳಿತಿದ್ದನು. ಇದ್ದಕ್ಕಿದ್ದಂತೆ, ಅವನು ತೀವ್ರ ಅಸ್ವಸ್ಥನಾದನು. ವಿದ್ಯಾರ್ಥಿ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಾಗ, ಅವರಿಗೆ ಫಿಡ್ಸ್ ಆಗುತ್ತಿದೆ ಎಂದು ಭಾವಿಸಿ ಸಹ ವಿದ್ಯಾರ್ಥಿಗಳು ಅವರ ಕೈಯಲ್ಲಿ ಕೀಲಿಗಳ ಗುಂಪನ್ನು ಇಟ್ಟರು. ನಂತರ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಮತ್ತು ಪ್ರಥಮ ಚಿಕಿತ್ಸೆ ನೀಡಲಾಯಿತು. ಅಲ್ಲಿಂದ ಅವರನ್ನು ಉತ್ತಮ ಚಿಕಿತ್ಸೆಗಾಗಿ ನರಸಿಂಗಯ್ಯ ಪಲ್ಲಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಲೋ…
ಉಡುಪಿ : ಉಡುಪಿಯ ಶಾರದಾ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದ್ದು, ಶಾಲೆಗೆ ಬಾಂಬ್ ಪತ್ತೆ ದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಉಡುಪಿಯ ಶಾರದಾ ಶಾಲೆಗೆ ಇ-ಮೇಲ್ ಮೂಲಕ ಅಪರಿಚಿತರಿಂದ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಕ್ಷಣವೇ ಶಾಲಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಾಂಬ್ ಪತ್ತೆ ದಳ, ಶ್ವಾನ ದಳದ ಸಿಬ್ಬಂದಿ ಶಾಲೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಎಂಜಿಎಂ ರಸ್ತೆ ಬಳಿಯ ಶಾರದಾ ಶಾಲೆ ಸುತ್ತಮುತ್ತ ಬಿಗಿ ಭದ್ರತೆಕೈಗೊಳ್ಳಲಾಗಿದೆ.
ಉಡುಪಿ : ಚಾಕೊಲೇಟ್ ಆಮಿಷವೊಡ್ಡಿ 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಳೇಬಾವಿ ಗ್ರಾಮದ ಮುತ್ತು ಎನ್ನಲಾಗಿದ್ದು, ಜನವರಿ 23 ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ಪೊಳೀಸರು 5 ವಿಶೇಷ ತಂಡಗಳನ್ನು ರಚಿಸಿದ್ದರು. ಹಲವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಸಾರ್ವಜನಿಕರ ಸಹಾಯವನ್ನು ಕೋರಿದ ನಂತರ, ಪೊಲೀಸರು ಅಂತಿಮವಾಗಿ ನಿನ್ನೆ ಸಂಜೆ ಶ್ರೀ ಕೃಷ್ಣ ಮಠದ ಸುತ್ತಮುತ್ತಲಿನ ವಾದಿರಾಜ್ 3 ನೇ ಕ್ರಾಸ್ ಬಳಿ ಮುತ್ತುನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಅಂಗಡಿ ಬಳಿ ಆಟವಾಡುತ್ತಿದ್ದ ವೇಳೆ ಕಾಮುಕನೊಬ್ಬ ಚಾಕೊಲೇಟ್ ಕೊಡಿಸುವುದಾಗಿ ಕರೆದುಕೊಂಡು ಬಾಲಕಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡುವ ವೇಳೆ ಬಾಲಕಿ ಕಿರುಚಿಕೊಂಡಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಬೆಂಗಳೂರು : ಇತ್ತೀಚಿಗೆ ಮಕ್ಕಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮೈಸೂರಿನಲ್ಲಿ ಹೃದಯಾಘಾತದಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.ನಾಗರಾಜ್ , ವಸಂತ ದಂಪತಿ ಪುತ್ರಿ ದೀಪಿಕಾ (15) ಮೃತಪಟ್ಟಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ದೀಪಿಕಾಳನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗ ಮಧ್ಯೆ ಬಾಲಕಿ ಮೃತಪಟ್ಟಿದ್ದಾಳೆ . ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೃದಯಾಘಾತ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಕುಸಿದು ಬಿದ್ದು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು : ನೋಂದಾಯಿತ ಕಾರ್ಮಿಕರು ಮರಣ ಹೊಂದಿದ ವೇಳೆ ಅಂತ್ಯಕ್ರಿಯೆಗೆ ಮಂಡಳಿಯು ಅವರ ನಾಮ ನಿರ್ದೇಶಿತರಿಗೆ ಸಹಾಯಧನ ನೀಡುತ್ತದೆ. ಈ ಸೌಲಭ್ಯ ಪಡೆಯಲು ಮೃತ ಫಲಾನುಭವಿಯ ವಯಸ್ಸು 60 ವರ್ಷದೊಳಗಿರಬೇಕು. ನೋಂದಾಯಿತ ಕಾರ್ಮಿಕರು ಮರಣಹೊಂದಿದ ವೇಳೆ ಅವರ ಅಂತ್ಯಕ್ರಿಯೆಗೆ ಮಂಡಳಿಯು ಅವರ ನಾಮ ನಿರ್ದೇಶಿತರಿಗೆ ಸಹಾಯಧನವನ್ನು ನೀಡುತ್ತದೆ ಸಲ್ಲಿಸಬೇಕಾದ ದಾಖಲೆಗಳು * ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ * ರೇಷನ್ ಕಾರ್ಡ್ ಪ್ರತಿ * ಬ್ಯಾಂಕ್ ಪಾಸ್ ಬುಕ್ ಪ್ರತಿ * ಮರಣ ಪ್ರಮಾಣ ಪತ್ರ * ಅವಲಂಬಿತರ ಸ್ವಯಂ ದೃಢೀಕೃತ ಆಧಾರ್ ಕಾರ್ಡ್ ಪ್ರತಿ ಗಮನಿಸಿ ಫಲಾನುಭವಿಯು ಮೃತಪಟ್ಟ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಮೃತ ಫಲಾನುಭವಿಯ ನಾಮ ನಿರ್ದೇಶಿತರು ಈ ಸೌಲಭ್ಯ ಪಡೆದುಕೊಳ್ಳಬಹುದಾಗಿರುತ್ತದೆ
ಡೆಹ್ರಾಡೂನ್: ಭಾರತದಲ್ಲಿಯೇ ಮೊದಲ ಬಾರಿಗೆ ಇಂದಿನಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ. ಈ ಮೂಲಕ ವಿವಾಹ, ವಿಚ್ಛೇದನ, ಆಸ್ತಿಗೆ ಎಲ್ಲಾ ಧರ್ಮಿಯರಿಗೂ ಒಂದೇ ಕಾಯ್ದೆ ಅನ್ವಯವಾಗಲಿದೆ. ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನೀತಿ ಸಂಹಿತೆ ಜಾರಿಗೆ ಬರಲಿದೆ. ಜನವರಿ 27 ರಂದು ಮಧ್ಯಾಹ್ನ 12.30 ರ ನಂತರ ಉತ್ತರಾಖಂಡದಲ್ಲಿ ಯುಸಿಸಿ ಜಾರಿಗೆ ಬರಲಿದೆ. ಅದೇ ದಿನ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಯುಸಿಸಿ ಪೋರ್ಟಲ್ ಅನ್ನು ಸಹ ಉದ್ಘಾಟಿಸಲಿದ್ದಾರೆ. ಎಲ್ಲಾ ಧರ್ಮದವರಿಗೆ ಸಂಹಿತೆಯ ಅನ್ವಯ ಸರ್ಕಾರದಲ್ಲಿ ವಿವಾಹ ನೋಂದಣಿ ಕಡ್ಡಾಯವಾಗಿರುತ್ತದೆ. ಆಯಾ ಧರ್ಮದ ಅನುಸಾರ ಬೇರೆ ಬೇರೆ ವಿವಾಹ ನೋಂದಣಿ ಇನ್ನು ಇರುವುದಿಲ್ಲ. ಎಲ್ಲಾ ಧರ್ಮೀಯರಿಗೂ ವಿಚ್ಛೇದನ, ಆಸ್ತಿಗೆ ಒಂದೇ ಕಾನೂನು ಜಾರಿಯಲ್ಲಿರುತ್ತದೆ. ಮದುವೆಯ ರೀತಿಯಲ್ಲಿ ಲಿವ್ ಇನ್ ಸಂಬಂಧಕ್ಕೂ ನೋಂದಣಿ ಕಡ್ಡಾಯವಾಗಿರುತ್ತದೆ. ಇದು ಉತ್ತರಾಖಂಡ ರಾಜ್ಯದ ನಿವಾಸಿಗಳಿಗೆ ಅನ್ವಯವಾಗಿರುತ್ತದೆ. ಅನ್ಯ ರಾಜ್ಯಗಳಲ್ಲಿರುವ ಉತ್ತರಾಖಂಡ ಮೂಲದವರಿಗೂ ಅನ್ವಯವಾಗಲಿದೆ. ಮಗು ಜನಿಸಿದಲ್ಲಿ 7 ದಿನದೊಳಗೆ ನೋಂದಣಿ ಕಡ್ಡಾಯವಾಗಿದೆ. ಉತ್ತರಾಖಂಡ ಯುಸಿಸಿ ನಿಯಮಗಳ…
ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ವಿಶ್ವವಿದ್ಯಾಲಯಗಳ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದು, ವಿಶ್ವವಿದ್ಯಾಲಯಗಳ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ ತಿಳಿಸಿದ್ದಾರೆ.
ಬೆಂಗಳೂರು : ಕ್ಯಾನ್ಸರ್ ಗೆದ್ದು ಬೆಂಗಳೂರಿಗೆ ವಾಪಸ್ ಆಗಿರುವ ನಟ ಶಿವರಾಜ್ ಕುಮಾರ್ ಅವರನ್ನು ಇಂದು 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಲಿದ್ದಾರೆ. ಸದ್ಯ ಕ್ಯಾನ್ಸಲ್ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಆಗಮಿಸಿರುವ ನಟ ಶಿವರಾಜಕುಮಾರ್ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಆರೋಗ್ಯ ವಿಚಾರಿಸಲಿದ್ದಾರೆ. ಕಳೆದ 2024 ಡಿಸೇಂಬರ್ 18ರಂದು ಚಿಕಿತ್ಸೆಗಾಗಿ ಅಮೆರಿಕಗೆ ತೆರಳಿದ್ದ ಶಿವರಾಜ್ಕುಮಾರ್ ಅವರಿಗೆ ಚಿಕಿತ್ಸೆ ಯಶಸ್ವಿಯಾಗಿದೆ. ಚಿಕಿತ್ಸೆಯ ನಂತರವೂ ಕೆಲ ದಿನಗಳ ಕಾಲ ಅಮೆರಿಕಾದಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಶಿವಣ್ಣ ಹೆಚ್ಚು ಕಮ್ಮಿ ಒಂದು ತಿಂಗಳ ನಂತರ ಬೆಂಗಳೂರಿಗೆ ಮರಳಿ ಬಂದಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಲಿದ್ದಾರೆ.
ನವದೆಹಲಿ : ಬಾಲ್ಯದಲ್ಲಿಯೇ ವಿಚ್ಛೇದನ ಪಡೆದ ಪೋಷಕರ ಹಿರಿಯ ವಯಸ್ಕರಿಗೆ ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವು ಕಂಡುಹಿಡಿದಿದೆ. PLOS One ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನವು 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 13,000 ಕ್ಕೂ ಹೆಚ್ಚು ಜನರನ್ನು ತನಿಖೆ ಮಾಡಿತು. 18 ವರ್ಷ ತುಂಬುವ ಮೊದಲು ವಿಚ್ಛೇದನ ಪಡೆದ ಪೋಷಕರಲ್ಲಿ ಅಖಂಡ ಕುಟುಂಬಗಳಲ್ಲಿ ಬೆಳೆದವರಿಗಿಂತ ಪಾರ್ಶ್ವವಾಯು ಬರುವ ಸಾಧ್ಯತೆ 60% ಹೆಚ್ಚಾಗಿದೆ ಎಂದು ಫಲಿತಾಂಶಗಳು ತೋರಿಸಿವೆ. ವಿಜ್ಞಾನಿಗಳು ಖಿನ್ನತೆ, ಮಧುಮೇಹ ಮತ್ತು ಸಾಮಾಜಿಕ ಪ್ರತ್ಯೇಕತೆಯನ್ನು ಪರಿಗಣಿಸಿದ ನಂತರವೂ ಈ ಹೆಚ್ಚಿನ ಅಪಾಯ ಮುಂದುವರೆದಿದೆ, ಇವೆಲ್ಲವೂ ವ್ಯಕ್ತಿಯ ಪಾರ್ಶ್ವವಾಯು ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಮೆದುಳಿನ ಒಂದು ಭಾಗಕ್ಕೆ ರಕ್ತ ಪೂರೈಕೆಯನ್ನು ಏನಾದರೂ ನಿರ್ಬಂಧಿಸಿದಾಗ ಅಥವಾ ಮೆದುಳಿನಲ್ಲಿ ರಕ್ತನಾಳ ಒಡೆದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಎರಡೂ ಸಂದರ್ಭಗಳಲ್ಲಿ, ಮೆದುಳಿನ ಭಾಗಗಳು ಹಾನಿಗೊಳಗಾಗುತ್ತವೆ ಅಥವಾ ಸಾಯುತ್ತವೆ. ಪಾರ್ಶ್ವವಾಯು ಶಾಶ್ವತ ಮಿದುಳಿನ ಹಾನಿ, ದೀರ್ಘಕಾಲೀನ ಅಂಗವೈಕಲ್ಯ ಅಥವಾ ಸಾವಿಗೆ…
ಬೆಂಗಳೂರು : ಮುಡಾ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಹಾಗೂ ಭೈರತಿ ಸುರೇಶ್ ಗೆ ಇಡಿ ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಇಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಸಂಜೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇಡಿ ಸಮನ್ಸ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಇಡಿ ನೋಟಿಸ್ ನೀಡಿದೆ. ಮುಡಾ ಹಗರಣದ ವಿಚಾರಣೆ ನಡೆಸುತ್ತಿರುವ ED ಇದೀಗ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ಮೂಲಕ ಮುಡಾ ಹಗರಣದಲ್ಲಿ ಮತ್ತೊಂದು ತಿರುವು ಸಿಕ್ಕಂತಾಗಿದೆ. ಇಂದು ಮುಡಾ ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ಅರ್ಜಿಯ ವಿಚಾರಣೆ ನಡೆಯುತ್ತಿರುವ ಹೊತ್ತಲ್ಲೇ ವಿಚಾರಣೆಗೆ ಹಾಜರಾಗುವಂತೆ ಸಿಎಂ ಪತ್ನಿ ಪಾರ್ವತಿ ಅವರಿಗೆ ಇಡಿ ನೋಟಿಸ್ ನೀಡಿದೆ.