Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಬೆಂಗಳೂರು ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ ವಿತರಿಸುವ ಸಂಬಂಧ ಆರೋಗ್ಯ ಇಲಾಖೆಯು ಇಸ್ಕಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಹೌದು, ಬಡರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರ ವಿತರಿಸಲು ಆರೋಗ್ಯ ಇಲಾಖೆಯು ಇಸ್ಕಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ ಇದರಿಂದ ಪ್ರತಿ ಆಸ್ಪತ್ರೆಯ 250 ರೋಗಿಗಳಿಗೆ ಪ್ರತಿ ದಿನ ಆಹಾರ ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ 9 ತಿಂಗಳ ಅವಧಿಗೆ ₹1.37 ಕೋಟಿಯನ್ನು ಆರೋಗ್ಯ ಇಲಾಖೆಯಿಂದ ಭರಿಸಲಾಗುತ್ತದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. https://twitter.com/KarnatakaVarthe/status/1963221638054338565 ಬೆಂಗಳೂರಿನ ಸಿ.ವಿ. ರಾಮನ್ ನಗರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ವಿತರಿಸುವ ಮೂಲಕ ವಿಶೇಷ ಪೌಷ್ಟಿಕ ಆಹಾರ ಯೋಜನೆಗೆ ಚಾಲನೆ ನೀಡಿದ ದಿನೇಶ್ ಗುಂಡೂರಾವ್, ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ. ಪ್ರತಿದಿನ ಬೆಳಗಿನ ಉಪಹಾರ, ಸಂಜೆ ಲಘು ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ರೋಗಿಗಳಿಗೆ ವಿತರಿಸಲಾಗುವುದು. ರೋಗಿಗಳ…
ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಯಡಿ ಲಕ್ಷ್ಮೀ ಸಾಗರ ಪಂಪ್ ಹೌಸ್ ನಿಂದ ಕೋಲಾರ ಜಿಲ್ಲೆಯ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಇಂದು ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ನಾವು ಹಿಂದಿನ ಸಲ ಅಧಿಕಾರದಲ್ಲಿದ್ದಾಗ ಕೈಗೊಂಡ ಯೋಜನೆಗಳು ಈ ಭಾಗದ ರೈತರ ಜೀವನ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. 250ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪ್ರತಿನಿತ್ಯ ಹರಿಸಲಾಗುತ್ತಿದೆ. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆಯಡಿ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸಲಾಗುವುದು. ಮೊದಲನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ – ಚಿಕ್ಕಬಳ್ಳಾಪುರ ಕೆರೆಗಳನ್ನು ಯಶಸ್ವಿಯಾಗಿ ತುಂಬಿಸಲಾಗಿದೆ. ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಕೆರೆ ತುಂಬಿಸಿದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡಿದೆ. ಯೋಜನೆ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರೂ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಬೆಳೆಗಳಿಗೆ, ದನಕರುಗಳಿಗೆ ಯಾವುದೇ ತೊಂದರೆ…
ಬೆಂಗಳೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ. ಇಂದು ನಾಡಹಬ್ಬ ದಸರಾದ ಕರೆಯೋಲೆ ನೀಡಿ, ನನ್ನನ್ನು ಪ್ರೀತಿಯಿಂದ ಆಮಂತ್ರಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು. ನಾವೆಲ್ಲರೂ ಜೊತೆಗೂಡಿ ಈ ಬಾರಿಯ ದಸರಾ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. https://twitter.com/siddaramaiah/status/1963521982462308587
ಸಮಾಜ ಕಲ್ಯಾಣ ಇಲಾಖೆಯಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ಎಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಸುರಕ್ಷಾ ಕ್ರಮಗಳ ಬಗ್ಗೆ ಜಿ.ಪಂ. ಸಿಇಓ ಸುತ್ತೋಲೆ ಹೊರಡಿಸಿದ್ದಾರೆ. ನಿಲಯ ಮೇಲ್ವಿಚಾರಕರು ವಿದ್ಯಾರ್ಥಿನಿಲಯಗಳಲ್ಲಿ ಅಳವಡಿಸಿರುವ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಸಿ.ಸಿ.ಟಿವಿ ಕ್ಯಾಮಾರ ಕೆಟ್ಟು ಹೋದ ಸಂದರ್ಭದಲ್ಲಿ ತಕ್ಷಣವೇ ದುರಸ್ತಿ ಮಾಡಿಸಿ ಚಾಲ್ತಿಯಲ್ಲಿರುವಂತೆ ನೋಡಿ ಕೊಳ್ಳಬೇಕು. ಪ್ರತಿ ತಿಂಗಳು ಸಿ.ಸಿ.ಟಿವಿ ವೀಡಿಯೋ ದೃಶ್ಯಗಳನ್ನು ಸಿ.ಡಿ. ಅಥವಾ ಪೆನ್ಡ್ರೈ ವ್ನಓಲ್ಲಿ ಸಂಗ್ರಹಿಸಿಡಬೇಕು. ವಿದ್ಯಾರ್ಥಿನಿಲಯದ ದ್ವಾರದಲ್ಲಿ ಸಿಬ್ಬಂದಿ ಹಾಗೂ ರಿಜಿಸ್ಟರ್ ಇರಿಸಿ, ವಿದ್ಯಾರ್ಥಿಗಳು ಹೊರಗೆ ತೆರಳುವ ಹಾಗೂ ಒಳಗೆ ಬರುವ ಮುನ್ನ ಹೆಸರು, ಹೊಗುವ ಸಮಯ, ಸ್ಥಳ ಮತ್ತು ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ವಿದ್ಯಾರ್ಥಿಗಳು ರಜೆ ಕೋರಿದ್ದಲ್ಲಿ ಪೋಷಕರಿಗೆ ಅಥವಾ ಪತ್ರದ ಮೂಲಕ ಖಾತರಿಪಡಿಸಿಕೊಂಡ ನಂತರವೇ ವಿದ್ಯಾರ್ಥಿಗಳಿಂದ ರಜೆ ಅರ್ಜಿ ಪಡೆದು ಮಂಜೂರು ಮಾಡಬೇಕು. ವಿದ್ಯಾರ್ಥಿನಿಯರು ರಜೆ ಮೇಲೆ ತೆರಳಿದ ಸಂದರ್ಭದಲ್ಲಿ ಪೋಷಕರ ಮೋಬೈಲ್ ಸಂಖ್ಯೆಗೆ ವಿಡಿಯೋ ಕರೆ ಮಾಡಿ ಸುರಕ್ಷಿತವಾಗಿ…
ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮೀಣ ಜನತೆಗೆ ಸಿಹಿಸುದ್ದಿ ನೀಡಿದ್ದು, ನಾಡ ಕಛೇರಿಯ 44 ಸೇವೆಗಳು ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರದಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕ್ಕೆ ಕರೆಮಾಡಿ. ಪಂಚಮಿತ್ರ ಸಹಾಯವಾಣಿ- ಸದಾ ನಿಮ್ಮೊಂದಿಗೆ. ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಈಗ ನಾಡಕಚೇರಿ ಸೇವೆಗಳು ಲಭ್ಯ, ಜಾತಿ ಮತ್ತು ಆದಾಯ ಪ್ರಮಾಣಕ್ಕೆ ಅಲೆದಾಡುವ ಅಗತ್ಯವಿಲ್ಲ, ನಾಡಕಚೇರಿಯ 44 ಸೇವೆಗಳು ಬಾಪೂಜಿ ಸೇವಾಕೇಂದ್ರಗಳಲ್ಲಿ ಸಿಗಲಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ಬಾಪೂಜಿ ಸೇವಾ ಕೇಂದ್ರಗಳಲ್ಇ 85 ಸೇವೆಗಳು ಲಭ್ಯವಿವೆ.
ಬೆಂಗಳೂರು : ಯೂಟ್ಯೂಬರ್ ಸಮೀರ್ ಎಂ.ಡಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದು ಬೆಂಗಳೂರಿನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹೌದು, ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಹುಲ್ಲಹಳ್ಳಿ ನಿವಾಸಕ್ಕೆ ದೌಡಾಯಿಸಿದ ಬೆಳ್ತಂಗಡಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಮೀರ್ ಮನೆಯಲ್ಲಿರುವಾಗಲೇ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ವಾರೆಂಟ್ ಪಡೆದು ಪೊಲೀಸರು ದಾಳಿಗೆ ಮುಂದಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ನವದೆಹಲಿ : 33 ಜೀವರಕ್ಷಕ ಔಷಧಗಳು ಮತ್ತು ಔಷಧಿಗಳ ಮೇಲಿನ GST 12% ರಿಂದ ಶೂನ್ಯಕ್ಕೆ ಇಳಿದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. “ಕೃಷಿ ಸರಕುಗಳಾದ ಟ್ರ್ಯಾಕ್ಟರ್ಗಳು, ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಯಂತ್ರಗಳು, ಕೊಯ್ಲು ಅಥವಾ ಒಕ್ಕಣೆ ಯಂತ್ರಗಳು, ಹುಲ್ಲು ಅಥವಾ ಮೇವು ಬೇಲರ್ಗಳು, ಗೊಬ್ಬರ ಯಂತ್ರಗಳು ಇತ್ಯಾದಿಗಳು 12 ರಿಂದ 5% ಕ್ಕೆ ಇಳಿಯುತ್ತಿವೆ” ಎಂದು ಅವರು ಹೇಳುತ್ತಾರೆ. 12 ನಿರ್ದಿಷ್ಟ ಜೈವಿಕ ಕೀಟನಾಶಕಗಳ ಮೇಲಿನ GST 12% ರಿಂದ 5% ಕ್ಕೆ ಇಳಿಯುತ್ತಿದೆ. ಅಲ್ಲದೆ, 12 ರಿಂದ 5 ಕ್ಕೆ ನೈಸರ್ಗಿಕ ಮೆಂಥಾಲ್… ಮತ್ತೆ, 12 ರಿಂದ 5 ಕ್ಕೆ, ಕರಕುಶಲ ವಸ್ತುಗಳು ಮತ್ತು ಕಾರ್ಮಿಕ-ತೀವ್ರ ವಲಯಗಳು. ಅವು ಯಾವುವು? ಕರಕುಶಲ ವಸ್ತುಗಳು, ಅಮೃತಶಿಲೆ, ಟ್ರಾವರ್ಟೈನ್ ಬ್ಲಾಕ್ಗಳು, ಗ್ರಾನೈಟ್ ಬ್ಲಾಕ್ಗಳು ಮತ್ತು ಮಧ್ಯಂತರ ಚರ್ಮದ ಸರಕುಗಳು. ಸಿಮೆಂಟ್ ಮೇಲಿನ GST 28% ರಿಂದ 18% ಕ್ಕೆ ಇಳಿದಿದೆ. 33 ಜೀnirm ವರಕ್ಷಕ…
ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಸ್ವಾವಲಂಬಿ ಸಾರಥಿ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೆ.10 ಕೊನೆಯ ದಿನ.!
ಬೆಂಗಳೂರು : ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಗಳಿಂದ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಆಯಾಯ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್ ವಿಳಾಸ: https://sevasindhu.karnataka.gov.in ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ(ಬ್ಯಾಂಕುಗಳ ಸಹಯೋಗದೊಂದಿಗೆ): ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ ಹಸುಗಳಿಗೆ ಘಟಕ ವೆಚ್ಚದ ಶೇ.50.ರಷ್ಟು ಸಹಾಯಧನ ಅಥವಾ ಗರಿಷ್ಟ 1.25 ಲಕ್ಷ ರೂ., ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಘಟಕ ವೆಚ್ಚದ ಶೇ70.ರಷ್ಟು ಸಹಾಯಧನ ಅಥವಾ ಗರಿಷ್ಟ 2 ಲಕ್ಷ ರೂ., ಸ್ವಾವಲಂಬಿ ಸಾರಥಿ: ಸರಕು ವಾಹನ/ಟ್ಯಾಕ್ಸಿ(ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ ಘಟಕ…
ಬೆಂಗಳೂರು : ಸೌಜನ್ಯ ಪ್ರಕರಣ ಮೇಲ್ಮನವಿಗೆ ಸೂಕ್ತವಾಗಿದೆಯೇ ಎಂಬುದನ್ನು ಸೌಜನ್ಯ ತಾಯಿ ನಿರ್ಧರಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆ ಮಾಡಿದೆ. ಈಗ ಸುಪ್ರೀಂ ಕೋರ್ಟಿನ ವೆಚ್ಚ ಭರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳುತ್ತಿದ್ದಾರೆ. ಪ್ರಕರಣ ಮೇಲ್ಮನವಿಗೆ ಸೂಕ್ತವಾಗಿದೆಯೇ ಎಂಬುದನ್ನು ಸೌಜನ್ಯ ತಾಯಿ ನಿರ್ಧರಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಧರ್ಮಸ್ಥಳಕ್ಕೆ ಬಿಜೆಪಿ ಮಾಡಿದ ಯಾತ್ರೆ ರಾಜಕೀಯ ಪ್ರೇರಿತ. ನಿಜವಾಗಿ ಅದು ಧರ್ಮಸ್ಥಳ ಚಲೋ ಅಲ್ಲ, “ರಾಜಕೀಯ ನಾಟಕ”ದಂತಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು : 70 ಸಾವಿರ ರೂ.ಲಂಚ ಪಡೆಯುತ್ತಿರುವಾಗಲೇ ದೇವನಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಲೋಕಯುಕ್ತ ಬಲೆಗೆ ಬಿದ್ದಿದ್ದಾರೆ. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಅಂಬರೀಶ್ ಎಂಬುವರ 70 ಸಾವಿರ ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆ ಬಿದ್ದಿದ್ದಾರೆ. ಪೋಕ್ಸೋ ಕೇಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಲಂಚ ಸ್ವೀಕರಿಸುತ್ತಿದ್ದ ಹಿನ್ನೆಲೆಯಲ್ಲಿ ನೊಂದ ಯುವತಿ ಕಡೆಯವರ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಿಎಸ್ ಐ ಜಗದೇವಿ. 75 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೇವನಹಳ್ಳಿ ಪಿಎಸ್ ಐ ಜಗದೇವಿ. ಈ ಹಿಂದೆ 5 ಸಾವಿರ ರೂ. ನೀಡಿದ್ದು, ಇಂದು 70 ಸಾವಿರ ರೂ. ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಎಸ್ ಐ ಜಗದೇವಿ ಪರ ಲಂಚ ಸ್ವೀಕರಿಸುತ್ತಿದ್ದ ಪಿಸಿ ಅಂಬರೀಶ್ ಲೋಕಾಯುಕ್ತ ಬಲೆ ಬಿದ್ದಿದ್ದಾರೆ. ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ಪಿಎಸ್ ಐ ಜಗದೇವಿ, ಪಿಸಿ ಮಂಜುನಾಥ್ ಪರಾರಿಯಾಗಿದ್ದಾರೆ. ಪಿಸಿ ಅಂಬರೀಶ್ ನನ್ನು ವಶಕ್ಕೆ…