Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು: ಪ್ರಸಕ್ತ ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಉಚಿತ ತರಬೇತಿಗೆ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿಜಯಪುರ, ದಾವಣಗೆರೆ, ತುಮಕೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರಗಳಲ್ಲಿ NEET ಮತ್ತು JEE (M&A) ಪರೀಕ್ಷಾ ಪೂರ್ವ ತರಬೇತಿಗಳನ್ನು ಹಾಗೂ ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ CLAT, CA Foundation 2 MAT (class room coaching) ನೀಡುತ್ತಿದ್ದು, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. Online ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:07.12.2024ರ ಸಂಜೆ 3:00 ಗಂಟೆ ಆಗಿದ್ದು, ಹೆಚ್ಚಿನ ವಿವರಗಳಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in ನೋಡಲು ತಿಳಿಸಿದೆ.
ನವದೆಹಲಿ : ಕೇಂದ್ರ ಸಚಿವ ಸಂಪುಟ ಸೋಮವಾರ ಪ್ಯಾನ್ 2.0 ಗೆ ಅನುಮೋದನೆ ನೀಡಿದೆ, ಅಲ್ಲಿ ಕ್ಯೂಆರ್ ಕೋಡ್ನೊಂದಿಗೆ ಪ್ಯಾನ್ ಕಾರ್ಡ್’ಗೆ ಉಚಿತವಾಗಿ ನವೀಕರಣವನ್ನ ಹೊರತರಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದರು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ಎ ಅಡಿಯಲ್ಲಿ 1972 ರಿಂದ ಪ್ಯಾನ್ ಬಳಕೆಯಲ್ಲಿದೆ ಮತ್ತು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ, 78 ಕೋಟಿ ಪ್ಯಾನ್ಗಳನ್ನು ವಿತರಿಸಲಾಗಿದೆ, ಇದು ಶೇಕಡಾ 98 ರಷ್ಟು ವ್ಯಕ್ತಿಗಳನ್ನು ಒಳಗೊಂಡಿದೆ ಎಂದು ವೈಷ್ಣವ್ ಹೇಳಿದರು. ಅಧಿಕೃತ ಹೇಳಿಕೆಯ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಆದಾಯ ತೆರಿಗೆ ಇಲಾಖೆಯ ಪ್ಯಾನ್ 2.0 ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಏನಿದು ಪ್ಯಾನ್ 2.0.? ಸಿಸ್ಟಮ್ ನವೀಕರಣ : ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಸಂಪೂರ್ಣವಾಗಿ ನವೀಕರಿಸಿದ, ತಂತ್ರಜ್ಞಾನ ಚಾಲಿತ ಚೌಕಟ್ಟು. ಸಾಮಾನ್ಯ ವ್ಯವಹಾರ ಗುರುತಿಸುವಿಕೆ : ನಿರ್ದಿಷ್ಟ ವಲಯಗಳಲ್ಲಿ ವ್ಯವಹಾರ ಸಂಬಂಧಿತ…
ನವದೆಹಲಿ : ಭಾರತದ ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕುವಂತೆ ಕೋರಿ ಕನಿಷ್ಠ ಮೂರು ಅರ್ಜಿಗಳನ್ನ ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. 1976 ರಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ 42ನೇ ತಿದ್ದುಪಡಿಯ ಮೂಲಕ ಈ ಪದಗಳನ್ನ ಪೀಠಿಕೆಯಲ್ಲಿ ಸೇರಿಸಲಾಯಿತು. ಸಂವಿಧಾನವನ್ನ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವು ಪೀಠಿಕೆಗೂ ವಿಸ್ತರಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್ ಅವರ ನ್ಯಾಯಪೀಠ ಹೇಳಿದೆ. “ರಿಟ್ ಅರ್ಜಿಗಳಿಗೆ ಹೆಚ್ಚಿನ ಚರ್ಚೆ ಮತ್ತು ತೀರ್ಪು ಅಗತ್ಯವಿಲ್ಲ. ಸಂವಿಧಾನದ ಮೇಲೆ ಸಂಸತ್ತಿನ ಅಧಿಕಾರವನ್ನು ತಿದ್ದುಪಡಿ ಮಾಡುವುದು ಪೀಠಿಕೆಗೆ ವಿಸ್ತರಿಸುತ್ತದೆ. ಇಷ್ಟು ವರ್ಷಗಳ ನಂತರ ಪ್ರಕ್ರಿಯೆಯನ್ನು ಅಷ್ಟು ರದ್ದುಗೊಳಿಸಲಾಗುವುದಿಲ್ಲ ಎಂದು ನಾವು ವಿವರಿಸಿದ್ದೇವೆ. ದತ್ತು ಸ್ವೀಕಾರದ ದಿನಾಂಕವು 368 ನೇ ವಿಧಿಯ ಅಡಿಯಲ್ಲಿ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ, ಇದನ್ನು ಪ್ರಶ್ನಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ಸನ್ನಿವೇಶದಲ್ಲಿ ಸಮಾಜವಾದ ಮತ್ತು ಜಾತ್ಯತೀತತೆಯ ಅರ್ಥವೇನು ಮತ್ತು ಅದರ ಬಗ್ಗೆ…
ಬೆಂಗಳೂರು : ನವೆಂಬರ್- 26 ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವಂತೆ, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ।।ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡುವಂತೆ ಸೂಚಿಸಿದೆ. ಮುಂದುವರೆದು, ನವೆಂಬರ್-26ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ।।ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರವನ್ನು ಕಡ್ಡಾಯವಾಗಿ ಇಡುವಂತೆ ಸೂಚಿಸಿದೆ.
ಬೆಂಗಳೂರು: ರಾಜ್ಯಾಧ್ಯಂತ ರದ್ದುಗೊಂಡಿದ್ದಂತ ಅರ್ಹರ ಬಿಪಿಎಲ್ ರೇಷನ್ ಕಾರ್ಡ್ ಸಮಸ್ಯೆ ಸರಿಪಡಿಸಲಾಗಿದೆ. ಇನ್ನೂ ಕೆಲವರದ್ದು ಸರಿ ಪಡಿಸಲಾಗುತ್ತಿದೆ. ಇದೀಗ ರಾಜ್ಯಾಧ್ಯಂತ ಮತ್ತೆ ಅರ್ಹರ ಬಿಪಿಎಲ್ ಕಾರ್ಡ್ ಆಯಕ್ಟೀವ್ ಮಾಡಲಾಗಿದೆ. ಹೀಗಾಗಿ ಹಿಂದಿನ ತಿಂಗಳಂತೆಯೇ ಪರಿಡತ ಧಾನ್ಯ ವಿತರಣೆಯಾಗಲಿದೆ. ಸುದ್ದಿಗಾರರೊಂದಿಗೆ ಮಾತನಾಡಿದಂತ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಕೂಲಿ ಮಾಡುವವರು, ಬಡವರಿಗೆ ತೊಂದರೆ ಆಗಬಾರದು ಅಂತ ಅರ್ಹರ ಬಿಪಿಎಲ್ ಕಾರ್ಡ್ ಮತ್ತೆ ಆಯಕ್ಟೀವ್ ಮಾಡಲಾಗಿದೆ. ಯಾರಿಗೂ ತೊಂದರೆ ಆಗೋದಿಲ್ಲ ಅಂತ ತಿಳಿಸಿದರು. ಅರ್ಹರ ಬಿಪಿಎಲ್ ಕಾರ್ಡ್ ಆಯಕ್ಟೀವ್ ಆಗಿದ್ದು, ಹಿಂದಿನ ತಿಂಗಳು ಹೇಗೆ ಅಕ್ಕಿ ಸಿಗುತ್ತಿತ್ತೋ ಅದೇ ರೀತಿ ಈ ತಿಂಗಳು ಸಿಗಲಿದೆ ಎಂದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಅವರನ್ನು ಭೇಟಿ ಮಾಡುತ್ತೇನೆ. ಅಕ್ಕಿ ವಿತರಣೆ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ಅಂದಹಾಗೇ ರಾಜ್ಯಾಧ್ಯಂತ ಅರ್ಹರ ಬಿಪಿಎಲ್ ರೇಷನ್ ಕಾರ್ಡ್ ಸರಿ ಪಡಿಸುವಂತ ಪ್ರಕ್ರಿಯೆಯನ್ನು ಆಹಾರ ಇಲಾಖೆ ಚಾಲು ಮಾಡಿದೆ. ಸರ್ಕಾರದ ಸೂಚನೆಯಂತೆ ಅರ್ಹರ ಬಿಪಿಎಲ್ ರೇಷನ್…
ಚಿತ್ರದುರ್ಗ : ವಿಫಲವಾದ ಪರಿವರ್ತಕದ ಬದಲಾವಣೆಗೆ ಮಧ್ಯವರ್ತಿ, ಏಜೆನ್ಸಿ, ಅಧಿಕಾರಿ ಹಾಗೂ ನೌಕರರಿಗೆ ಹಣ ನೀಡಬಾರದು ಎಂದು ರೈತರಿಗೆ ಹಾಗೂ ಸಾರ್ವಜನಿಕರಿಗೆ ಬೆಸ್ಕಾಂ ಸೂಚನೆ ನೀಡಿದೆ. ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿ ಬರುವ ಚಿತ್ರದುರ್ಗ ಗ್ರಾಮೀಣ, ಹೊಳಲ್ಕೆರೆ, ಹೊಸದುರ್ಗ, ಶ್ರೀರಾಂಪುರ ಉಪವಿಭಾಗದ ವ್ಯಾಪ್ತಿಯಲ್ಲಿ ಪರಿವರ್ತಕಗಳು ವಿಫಲವಾದರೆ ನಗರ ವ್ಯಾಪ್ತಿಯಲ್ಲಿ 24 ಗಂಟೆಯೊಳಗಾಗಿ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ 72 ಗಂಟೆಯೊಳಗೆ ಪರಿವರ್ತಕವನ್ನು ಬದಲಾಯಿಸಲು ನಿಯಮವಿದ್ದು, ಬಫರ್‍ಸ್ಟಾಕ್ ಅಡಿಯಲ್ಲಿ ಎಲ್ಲಾ ಉಪವಿಭಾಗಗಳಿಗೆ ಪರಿವರ್ತಕಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಪರಿವರ್ತಕಗಳನ್ನು ಚಿತ್ರದುರ್ಗ ನಗರ ಮತ್ತು ಗ್ರಾಮೀಣ ಉಪವಿಭಾಗದಲ್ಲಿ ಗಜಲಕ್ಷ್ಮೀ ಎಂಟರ್‍ಪ್ರೈಸೆಸ್ ಅವರು ಹೊಳಲ್ಕೆರೆ ಉಪವಿಭಾಗದಲ್ಲಿ ಸಾಯಿರಾಮ್ ಎಂಟರ್‍ಪ್ರೈಸ್ಸಸ್ ಅವರು ಹಾಗೂ ಹೊಸದುರ್ಗ ಮತ್ತು ಶ್ರೀರಾಂಪುರ ಉಪವಿಭಾಗದಲ್ಲಿ ವಿಘೇಶ್ವರ ಎಂಟರ್‍ಪ್ರೈಸಸ್ ಏಜೆನ್ಸಿ ಅವರಿಗೆ ನೀಡಲಾಗಿದ್ದು, ಪರಿವರ್ತಕಗಳನ್ನು ರಿಪೇರಿ ಮಾಡಿ ಸರಬರಾಜು ಮಾಡುತ್ತಿದ್ದಾರೆ. ವಿಫಲವಾದ ಪರಿವರ್ತಕ ಬದಲಾವಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಹಾಗೂ ದೂರುಗಳಿಗಾಗಿ ಬೆಸ್ಕಾಂ ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ದೂರವಾಣಿ ಸಂಖ್ಯೆ 9448279014 ಹಾಗೂ ಸಹಾಯಕ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಅದೇ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸದಾಗಿ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿದು ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ದಿನಾಂಕ: 28.10.2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಹೊರಡಿಸಬಾರದೆಂದು ಸೂಚಿಸಲಾಗಿದೆ ಎಂದಿದ್ದಾರೆ. ಈ ದಿನಾಂಕದ ಪೂರ್ವದಲ್ಲಿ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದಲ್ಲಿ ಅಥವಾ ಆಯ್ಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದಲ್ಲಿ ಅಂತಹ ನೇಮಕಾತಿಗಳಿಗೆ ಹೊರಡಿಸಲಾಗಿದ್ದ, ಅಧಿಸೂಚನೆಯನ್ವಯವೇ ಪೂರ್ಣಗೊಳಿಸಬಹುದಾಗಿದೆ. ಮೇಲ್ಕಂಡ ಸೂಚನೆಗಳನ್ನು ಎಲ್ಲಾ ಆಯ್ಕೆ ಪ್ರಾಧಿಕಾರಗಳು/ನೇಮಕಾತಿ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸತಕ್ಕದು ಎಂದು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾμÉಗಳ ಕೇಂದ್ರ ಸಂಸ್ಥೆಗಳು ಒಂದಾಗಿ ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲ ಸರ್ಕಾರಿ ನೌಕರರಿಗಾಗಿ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯನ್ನು ನಡೆಸುತ್ತಿದ್ದು, ರಾಜ್ಯದ ಎಲ್ಲ ನಗರಸಭೆ, ಕವಿಪ್ರನಿನಿ, ಕೆಎಸ್ಸಾರ್ಟಿಸಿ, ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ಹೆಸರು ನೋಂದಾಯಿಸಿಕೊಳ್ಳಬಹುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ಹೆಸರು ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಸರ್ಕಾರದ ಅಧಿಸೂಚನೆಯಂತೆ ವಿನಾಯಿತಿ ಇರುತ್ತದೆ. ಈ ಯೋಜನೆಯನ್ನು ಸಾರ್ವಜನಿಕರಿಗೂ ವಿಸ್ತರಿಸಲಾಗಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ, 18 ರಿಂದ 60 ವರ್ಷದೊಳಗಿನ ಆಸಕ್ತರು ಅರ್ಜಿ ಭರ್ತಿ ಮಾಡಿ ಜೊತೆಯಲ್ಲಿ 250 ರೂ. ಡಿಮ್ಯಾಂಡ್ ಡ್ರಾಪ್ಟನ್ನು ಕಳುಹಿಸಿಕೊಡಬೇಕು. ನೋಂದಣಿತರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಿಕೊಡಲಾಗುತ್ತದೆ. ತರಬೇತಿ ಮತ್ತು ಸಂಪರ್ಕ ಶಿಬಿರದ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೂವತ್ತೆಂಟನೆಯ ತಂಡದ ತರಬೇತಿಯು…
ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ಬರುವ ಪ್ರಸ್ತಾವನೆಗಳನ್ನು ಇನ್ಮುಂದೆ ಆನ್ ಲೈನ್ ತಂತ್ರಾಂಶದ ಮೂಲಕವೇ ನಿರ್ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅನುಕಂಪದ ನೇಮಕಾತಿ ಅರ್ಜಿಗಳನ್ನು ಪ್ರಸ್ತುತ ಭೌತಿಕವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಇದರಿಂದ ಹಲವು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನಗತ್ಯ ತೊಂದರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅರ್ಜಿ ವಿಲೇವಾರಿ ವಿಳಂಬವೂ ಆಗುತ್ತಿದೆ. ಹೀಗಾಗಿ ಆನ್ ಲೈನ್ ತಂತ್ರಾಂಶ ಇಇಡಿಎಸ್ ನಲ್ಲಿ ನಿರ್ವಹಣೆಯ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ. ನುಕಂಪದ ನೇಮಕಾತಿ ಅರ್ಜಿಗಳನ್ನು ಸಂಪೂರ್ಣವಾಗಿ ಆನ್‌ಲೈನ್ ತಂತ್ರಾಂಶದ ಮುಖಾಂತರ ಇಇಡಿಎಸ್ ನಲ್ಲಿ ನಿರ್ವಹಿಸಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಲಾಖಾ ವೆಬ್‌ಸೈಟ್ https://schooleducation.karnataka.gov.in ಭೌತಿಕವಾಗಿ ಸ್ವೀಕೃತಿಯಾಗಿ ನಿರ್ವಹಣೆ ಕ್ರಮಗಳು ಆಗುತ್ತಿದ್ದು ಇದರಿಂದ ಹಲವು ಪ್ರಕರಣಗಳಲ್ಲಿ ಅರ್ಜಿದಾರರಿಗೆ ಅನಗತ್ಯ ತೊಂದರೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಅಸಾಧಾರಣ ವಿಳಂಬವನ್ನೂ ಸಹ ಗಮನಿಸಿದ್ದು ದೂರುಗಳಿಗೆ ದಾರಿಯಾಗಿದೆ. ಇನ್ನು ಮುಂದೆ ಅರ್ಜಿದಾರರಿಗೆ ಅನುಕೂಲವಾಗುವಂತೆ ಮತ್ತು ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬಹುದಾದ ರೀತಿಯಲ್ಲಿ ಈಗಾಗಲೇ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು…
ಬೆಂಗಳೂರು: ದಿನಾಂಕ 26.11.2024 (ಮಂಗಳವಾರ) ಇಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆಯವರೆಗೆ 66/11ಕೆವಿ ಬಿ.ಎಮ್.ಟಿ.ಸಿ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: “ಯು.ಬಿ.ಸಿಟಿ, ಐ.ಟಿ.ಸಿ ಹೋಟೆಲ್, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಹೊಂಬೇಗೌಡ ನಗರ, ಸಂಪಗಿ ನಗರ, ಜೆ.ಸಿ ರೋಡ, ಶಾಂತಿನಗರ, ಬಿಟಿಎಸ್ ರೋಡ, ರಿಚ್ಮಂಡ ಸರ್ಕಲ್, ರೆಸಿಡೆನೆಸ್ಸಿ ರೋಡ, ಸುಧಾಮನಗರ, ಕೆ.ಎಚ್ ರೋಡ,ವೀಲ್ಸನ್ ಗಾರ್ಡನ್, ಡಬಲ್ ರೋಡ, ಲಾಲಬಾಗ್ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ ಇಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ವಿಲ್ಸನ್ ಗಾಡðನ್, ಹೊಂಬೆಗೌಡ ನಗರ, ಸಂಪಂಗಿರಾಮ ನಗರ, ಜೆ.ಸಿ. ರಸ್ತೆ, ಶಾಂತಿನಗರ, ಬಿಟಿಎಸ್ ರಸ್ತೆ, ಸುದಾಮನಗರ, ಕೆ.ಎಚ್. ರಸ್ತೆ, ಶಾಂತಿನಗರ, ಡಬಲ್ ರೋಡ್, ಸುಬ್ಬಯ್ಯ ಸರ್ಕಲ್, ಸಿದ್ದಯ್ಯ ರಸ್ತೆ, ಲಾಲ್ ಬಾಗ್ ರಸ್ತೆ…












