Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಹಿಳೆಯರು ಮಕ್ಕಳಿಗೆ ಹಾಲುಣಿಸುವ ಆರೈಕೆ ಕೇಂದ್ರ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಉತ್ತರ ನೀಡಿದರು. ರಾಜ್ಯದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಹಿಳೆಯರು, ಮಕ್ಕಳಿಗೆ ಹಾಲುಣಿಸುವ ಆರೈಕೆ ಕೇಂದ್ರ ತೆರೆಯುವ ಕುರಿತ ಸಲಹೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಲಿದೆ. ಪ್ರಸ್ತುತ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್, ಯಶವಂತಪುರ ಮೆಟ್ರೋ ನಿಲ್ದಾಣ, ಚಿಕ್ಕಪೇಟೆ ಮೆಟ್ರೋ ನಿಲ್ದಾಣ ಮತ್ತು ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಶಿಶು ಆಹಾರ ಕೇಂದ್ರಗಳು ಇವೆ. ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಹಾಗೂ ಅಂಗವಿಕಲರಿಗೆ ಶೌಚಾಲಯಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದರು. https://twitter.com/KarnatakaVarthe/status/1869681398317002946?ref_src=twsrc%5Etfw%7Ctwcamp%5Etweetembed%7Ctwterm%5E1869681398317002946%7Ctwgr%5E742a831720fe7f6c12893d1240057f39b3abbcd6%7Ctwcon%5Es1_&ref_url=https%3A%2F%2Fkannadadunia.com%2Flive-news%2Fgood-news-for-women-the-government-is-planning-to-open-breastfeeding-care-centers-in-all-metro-stations-of-the-state%2F
ಬೆಂಗಳೂರು : ಆಯುಕ್ತಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ನೌಕರರು ಇನ್ಮುಂದೆ ರಜೆ ಮಂಜೂರಾತಿಯನ್ನು ಕಡ್ಡಾಯವಾಗಿ ಇ ಆಫೀಸ್ ತಂತ್ರಜ್ಞಾನದಲ್ಲಿ ಸಲ್ಲಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಯುಕ್ತಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ ನೌಕರರು ಇನ್ನು ಮುಂದೆ ಕಡ್ಡಾಯವಾಗಿ ಇ ಆಫೀಸ್ ತಂತ್ರಾಂಶದಲ್ಲಿ ಎಲ್ಲಾ ರೀತಿಯ ರಜೆ ಕೋರಿಕೆಯನ್ನು ಸಲ್ಲಿಸಿ ಮೇಲಾಧಿಕಾರಿಗಳ ಮಂಜೂರಾತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಿಳಿಸಲಾಗಿದೆ. ಇ ಆಫೀಸ್ ತಂತ್ರಾಂಶದಲ್ಲಿ ಯಾವುದೇ ರೀತಿಯ ತೊಂದರೆಗಳ ನಿವಾರಣೆಗೆ ಶ್ರೀ ಹರೀಶ್ ತಂತ್ರಜ್ಞರು ಇ ಆಫೀಸ್ ಇವರನ್ನು ಸಂರ್ಪರ್ಕಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರು : ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕ ಭಾರತ್ ಗೌರವ್ ಯೋಜನೆಯಡಿ ದಕ್ಷಿಣ ಕ್ಷೇತ್ರಗಳ ಯಾತ್ರೆ, ದ್ವಾರಕಾ ಯಾತ್ರೆ ಮತ್ತು ಪುರಿಜಗನ್ನಾಥ ದರ್ಶನ ಯಾತ್ರೆಗಳಿಗೆ ಪ್ರವಾಸ ಕೈಗೊಳ್ಳಲು ಇಚ್ಛಿಸುವ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಮತ್ತು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ-ಸಿ ಅಧಿಸೂಚಿತ ದೇವಸ್ಥಾನಗಳಲ್ಲಿ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರನ್ನು ಉಚಿತವಾಗಿ ಕಳುಹಿಸಲು ಹಾಗೂ ಇದಕ್ಕೆ ತಗುಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ದಕ್ಷಿಣ ಕ್ಷೇತ್ರಗಳ ಯಾತ್ರಾ : ರಾಮೇಶ್ವರ-ಕನ್ಯಾಕುಮಾರಿ-ಮಧುರೈ-ತಿರುವನಂತಪುರA ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಯಾತ್ರಾ ಪ್ಯಾಕೇಜ್‌ಗೆ ಒಟ್ಟು ರೂ. 25,000/- ಗಳು ತಗುಲಲಿದ್ದು, ಕರ್ನಾಟಕ ಸರ್ಕಾರದ ವತಿಯಿಂದ ಅಂದಾಜು ರೂ. 10,000/- ಗಳನ್ನು ಭರಿಸಲಾಗುವುದು. ಇದರಲ್ಲಿ ಫಿಕ್ಸೆಡ್ ಹ್ಯೂಲೇಜ್, ಆರ್‌ಯು ಚಾರ್ಚ್, ಸ್ಟೇಬಲಿಂಗ್ ಚಾರ್ಚ್, ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಹಾಗೂ ಸಹಾಯ ಧನ ರೂ. 5,000/-ಗಳು ಒಳಗೊಂಡಿರುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್ ಮೊತ್ತವಾಗಿ ರೂ. 10,000/-ಗಳನ್ನು ಮಾತ್ರ ಪಾವತಿಸಬೇಕಾಗಿರುತ್ತದೆ.…
ಬಳ್ಳಾರಿ : ತಾಲ್ಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಔಷಧಿಗಳ ಮಾಹಿತಿ ಹೊಂದಿ ಜನತೆಗೆ ತಾವು ವೈದ್ಯರೆಂದು ಸುಳ್ಳು ಹೇಳಿ ವೈದ್ಯ ವೃತ್ತಿ ಮಾಡುತ್ತಿದ್ದ ನಕಲಿ ವೈದ್ಯರ 05 ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ತಿಳಿಸಿದ್ದಾರೆ. ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸೂಚನೆ ಮೇರೆಗೆ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಆರ್.ಅಬ್ದುಲ್ಲಾ ಅವರ ತಂಡ ಕಪ್ಪಗಲ್ಲು ಗ್ರಾಮಕ್ಕೆ ತೆರಳಿ ಸಾರ್ವಜನಿಕರಿಗೆ ತಾವು ವೈದ್ಯರೆಂದು ಬಿಂಬಿಸಿ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಎಸ್‌ಎಸ್‌ಎಲ್‌ಸಿ, ಪಿಯುಸಿ ತನಕ ಓದಿಕೊಂಡು ಜನತೆಗೆ ಚಿಕಿತ್ಸೆ ನೀಡುತ್ತಿದ್ದ ರಾಜಣ್ಣ ಕ್ಲಿನಿಕ್, ಶೇಕ್ಷಾವಲಿ ಕ್ಲಿನಿಕ್, ರೆಹಮಾನ್ ಕ್ಲಿನಿಕ್, ಮಹದೇವ್ ಕ್ಲಿನಿಕ್ ಮತ್ತು ಗುರು ಕ್ಲಿನಿಕ್‌ಗಳನ್ನು ಸೀಜ್ ಮಾಡಿ ಜಿಲ್ಲಾಧಿಕಾರಿಗಳ ಮುಂದಿನ ಕ್ರಮಕ್ಕಾಗಿ ವರದಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯ ಪದವಿ ಪಡೆದ ವೈದ್ಯರ ಬಳಿ…
ಬೆಂಗಳೂರು : 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮರುಸಿಂಚನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯ ಮತ್ತು ಉಲ್ಲೇಖದನ್ವಯ ಮುಖ್ಯಮಂತ್ರಿಗಳ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿತವಾದ “ಮರುಸಿಂಚನ” ಕಾರ್ಯಕ್ರಮವನ್ನು 17 ಜಿಲ್ಲೆಗಳ 93 ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದು, ಈಗಾಗಲೇ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಲ್ಲಿ ಕಲಿಕಾ ನ್ಯೂನತೆಗಳನ್ನು ಸರಿಪಡಿಸುವುದು, ತರಗತಿಗನುಗುಣವಾದ ಕಲಿಕಾ ಫಲಗಳನ್ನು ಸಾಧಿಸಲು ಹಿಂದಿನ ತರಗತಿಗಳ ಕಲಿಕಾ ಫಲಗಳನ್ನು ವೃದ್ಧಿಸುವುದು, ಪ್ರಮಾಣೀಕೃತ ಮೌಲ್ಯಮಾಪನವನ್ನು ಕೈಗೊಳ್ಳುವುದು ಹಾಗೂ 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಗುಣಾತ್ಮಕವಾಗಿ ಸಾಧಿಸುವುದು. ಇದರ ಮುಂದುವರಿದ ಭಾಗವಾಗಿ, ಮರುಸಿಂಚನ ಕಾರ್ಯಕ್ರಮವನ್ನು 93 ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಬೇಕಿದೆ. ಸದರಿ ಸಾಲಿನ…
ಬೆಂಗಳೂರು : ಮಾತೃ ಇಲಾಖೆಯಿಂದ ಅನ್ಯ ಸೇವೆ/ನಿಯೋಜನೆಯ ಮೇಲೆ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ ಕೆ.ಜಿ.ಐ.ಡಿ. ಆನ್‌ಲೈನ್ ಸೇವೆಗಳನ್ನು ಒದಗಿಸಲು NTT DDO Code (Non Treasury Transaction DDO Code) ಗಳನ್ನು ಉಪಯೋಗಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ಆದೇಶದಲ್ಲಿ ಏನಿದೆ? ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮೆಯ ಎಲ್ಲಾ ಸೇವೆಗಳನ್ನು ಪ್ರಸ್ತುತ ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗಿದೆ. ಈ ಸೇವೆಗಳನ್ನು ಪಡೆಯಲು ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಅರ್ಜಿಗಳನ್ನು ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳ ಮುಖಾಂತರ ವಿಮಾ ಇಲಾಖೆಗೆ ಸಲ್ಲಿಸಬೇಕಿರುತ್ತದೆ. ವೇತನ ಬಟವಾಡೆ ಅಧಿಕಾರಿಗಳು/ಮೇಲಧಿಕಾರಿಗಳಿಗೆ ವಿಮಾ ಇಲಾಖೆಯ Login ಅನ್ನು ಖಜಾನೆ-II ರಲ್ಲಿ DDO Code ಆಧಾರದ ಮೇಲೆ ನೀಡಲಾಗಿರುತ್ತದೆ. ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳು ಮತ್ತು ನೌಕರರು ನಿಯೋಜನೆಯ ಮೇಲೆ ನಿಗಮ, ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಂತಹ ಕಛೇರಿಗಳಲ್ಲಿ…
ಪ್ರಸಕ್ತ (2024-25) ಸಾಲಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವೆಬ್‍ಸೈಟ್ https://ssp.karnataka.gov.in ಮೂಲಕ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ(ಆದಾಯದ ಮಿತಿ 2.50 ಲಕ್ಷ), ಆಧಾರ್ ಕಾರ್ಡ್ ಬ್ಯಾಂಕ್‍ಖಾತೆಗೆ ಆಧಾರ್ ಸಂಖ್ಯೆಯನ್ನು ಎನ್‍ಪಿಸಿಐ ಮೂಲಕ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು ಅಥವಾ ಅಂಚೆ ಕಚೇರಿಯಲ್ಲಿ ಐಪಿಪಿಬಿ ಖಾತೆ ಹೊಂದಿರಬೇಕು(ಆಧಾರ್ ಕಾರ್ಡ್ ಇ-ಕೆವೈಸಿ ಆಗಿರಬೇಕು). ದೂರವಾಣಿ ಸಂಖ್ಯೆ (ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಆಗಿರುವ ದೂರವಾಣಿ ಸಂಖ್ಯೆ ಕಡ್ಡಾಯವಾಗಿರಬೇಕು). ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿ, ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ, ಅಧ್ಯಯನ-ಬೋನೋಪೈಡ್ ಪ್ರಮಾಣ ಪತ್ರ, ಪ್ರಸಕ್ತ ಕೋರ್ಸ್‍ನ ಶುಲ್ಕ ರಶೀದಿ ಪ್ರತಿ ಹಾಗೂ…
ನವದೆಹಲಿ : ಸಂವಿಧಾನವನ್ನು ತಿದ್ದುಪಡಿ ಮಾಡುವ ಎರಡು ಮಸೂದೆಗಳು – ಮತ್ತು 2034 ರ ವೇಳೆಗೆ ಏಕಕಾಲದಲ್ಲಿ ಫೆಡರಲ್ ಮತ್ತು ರಾಜ್ಯ ಚುನಾವಣೆಗಳನ್ನು ಅನುಮತಿಸಲು – ಶುಕ್ರವಾರ ಬೆಳಿಗ್ಗೆ 39 ಸದಸ್ಯರ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿದೆ, ಲೋಕಸಭೆಯ ಚಳಿಗಾಲದ ಅಧಿವೇಶನದ ಅಂತಿಮ ಕಾರ್ಯವು ಅನಪೇಕ್ಷಿತವಾಗಿದೆ. ಕಾಂಗ್ರೆಸ್ ಸಂಸದರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮನೀಶ್ ತಿವಾರಿ ಮತ್ತು ತೃಣಮೂಲದ ಕಲ್ಯಾಣ್ ಬ್ಯಾನರ್ಜಿ ಮತ್ತು ಸಾಕೇತ್ ಗೋಖಲೆ ಅವರು ಸಮಿತಿಯಲ್ಲಿ ವಿರೋಧ ಪಕ್ಷದವರಾಗಿದ್ದರೆ, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಬಿತ್ ಪಾತ್ರ ಮತ್ತು ಅನಿಲ್ ಬಲುನಿ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಪ್ಯಾನೆಲ್‌ನಲ್ಲಿರುವ ಇತರರು – ಸಣ್ಣ ಪಕ್ಷಗಳು ಪ್ರಾತಿನಿಧ್ಯವನ್ನು ಕೋರಿದ ನಂತರ 31 ರಿಂದ ವಿಸ್ತರಿಸಲಾಯಿತು – ಮಹಾರಾಷ್ಟ್ರದ ಪ್ರತಿಸ್ಪರ್ಧಿ ಶಿವಸೇನೆ ಮತ್ತು ಎನ್‌ಸಿಪಿ ಬಣಗಳು ಮತ್ತು ಬಿಜೆಪಿಯ ಎರಡು ಮಿತ್ರಪಕ್ಷಗಳು; ಎರಡನೆಯದು ಇನ್ನೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಅಥವಾ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ…
ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಅವರಿಗೆ ಜಾಮೀನು ಆದೇಶವನ್ನು ಬೆಳಗಾವಿಯ ಜೆಎಂಎಫ್ ಸಿ ಕೋರ್ಟ್ ಕಾಯ್ದಿರಿಸಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ. ಇಂದು ಬೆಳಗ್ಗೆ ಸಿ.ಟಿ. ರವಿ ಅವರನ್ನು ಬೆಳಗಾವಿಯ ಜೆಎಂಎಫ್ ಸಿ ಕೋರ್ಟ್ ಪೊಲೀಸರು ಹಾಜರುಪಡಿಸಿದ್ದು, ಸಿ.ಟಿ ರವಿ ಪರ ವಕೀಲ ಎಂ.ಬಿ ಜಿರಲಿ ವಾದ ಮಾಡಿದ್ದಾರೆ. ವಿಚಾರಣೆ ನಡೆಸಿದ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶರು, ಸಿ.ಟಿ. ರವಿ ಅವರಿಗೆ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಠಾಣೆಯಲ್ಲಿ BNS ಕಾಯ್ದೆ 75 ಮತ್ತು 79ರ ಅಡಿ ಕಾಯ್ದೆ, ಲೈಂಗಿಕ ಕಿರುಕುಳ, ಮಹಿಳಾ ಇಚ್ಛೆ ವಿರುದ್ಧ, ಅಶ್ಲೀಲತೆ ತೋರುವುದು, ಲೈಂಗಿಕ ಬಣ್ಣದ ಬಗ್ಗೆ ಟೀಕೆ ಹಾಗೂ ಮಹಿಳೆಯ ನಮ್ರತೆ, ಅವಮಾನಿಸುವ ಉದ್ದೇಶದಿಂದ ಸನ್ನೆ…
ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಅವರಿಗೆ ಜಾಮೀನು ಆದೇಶವನ್ನು ಬೆಳಗಾವಿಯ ಜೆಎಂಎಫ್ ಸಿ ಕೋರ್ಟ್ ಕಾಯ್ದಿರಿಸಿದೆ. ಇಂದು ಬೆಳಗ್ಗೆ ಸಿ.ಟಿ. ರವಿ ಅವರನ್ನು ಬೆಳಗಾವಿಯ ಜೆಎಂಎಫ್ ಸಿ ಕೋರ್ಟ್ ಪೊಲೀಸರು ಹಾಜರುಪಡಿಸಿದ್ದು, ಸಿ.ಟಿ ರವಿ ಪರ ವಕೀಲ ಎಂ.ಬಿ ಜಿರಲಿ ವಾದ ಮಾಡಿದ್ದಾರೆ. ವಿಚಾರಣೆ ನಡೆಸಿದ ಜೆಎಂಎಫ್ ಸಿ ಕೋರ್ಟ್ ನ ನ್ಯಾಯಾಧೀಶರು, ಸಿ.ಟಿ. ರವಿ ಅವರಿಗೆ ಜಾಮೀನು ಆದೇಶವನ್ನು ಕಾಯ್ದಿರಿಸಿದೆ. ಈ ವೇಳೆ ನ್ಯಾಯಾಧೀಶರು ವಿಚಾರಣೆಯನ್ನು ಆರಂಭಿಸಿದರು. ಬೆಳಗಾವಿಯ ಜೆಎಂಎಫ್ ಸಿ ಕೋರ್ಟಲ್ಲಿ ವಿಚಾರಣೆ ಆರಂಭವಾದಾಗ ಜಡ್ಜ್ ಗೆ ಕೈಮುಗಿದು ನಿಂತಾಗ ನ್ಯಾಯಾಧೀಶೆ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದರು. ಈ ವೇಳೆ ಸಿಟಿ ರವಿ ಅವರು 58 ವರ್ಷ ಎಂದು ತಿಳಿಸಿದರು. ಈ ವೇಳೆ ಸಿಟಿ ರವಿ ಪರ ವಕೀಲ ಎಂಬಿ ಜಿರಲಿ ವಾದ ಆರಂಭಿಸಿದರು. ಸಿಟಿ ರವಿಯವರು ಸಾಮಾನ್ಯ ವ್ಯಕ್ತಿಯು ಅಲ್ಲ ರೌಡಿಯು…













