Subscribe to Updates
Get the latest creative news from FooBar about art, design and business.
Author: kannadanewsnow57
ಕಪ್ಪು ನಾಲಿಗೆ ಇರುವವರು ಕೆಲಸ ಮಾಡಿದರೆ ಶಾಪ ಹಾಕುತ್ತಾರೆಯೇ? ಸಾಯುವುದಿಲ್ಲವೇ? ಕಪ್ಪು ನಾಲಿಗೆಯನ್ನು ಹೊಂದಿರುವ ಯಾರಾದರೂ ನಿಮ್ಮನ್ನು ನಿಂದಿಸಿದರೆ, ಮೊದಲು ಇದನ್ನು ಮಾಡಿ. ಯಾವುದೇ ಸಮಸ್ಯೆ ಇರುವುದಿಲ್ಲ. ಸಾಮಾನ್ಯವಾಗಿ ಕಪ್ಪು ನಾಲಿಗೆ ಇರುವವರನ್ನು ಕಂಡರೆ ನಮಗೆ ಸ್ವಲ್ಪ ಭಯವಾಗುತ್ತದೆ. ಅವರು ನಮ್ಮನ್ನು ಏನಾದರೂ ಬೈದರೆ, ಅದು ಕೆಲಸ ಮಾಡುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಕಪ್ಪು ನಾಲಿಗೆಯ ಶಾಪ ನಿಜವಾಗಿಯೂ ಕೆಲಸ ಮಾಡುತ್ತದೆಯೇ? ಸಾಯುವುದಿಲ್ಲವೇ? ಕಪ್ಪು ನಾಲಿಗೆಯುಳ್ಳವರು ನಮ್ಮನ್ನು ಶಪಿಸಿದರೆ ಆ ಶಾಪದಿಂದ ಪಾರಾಗಲು ನಾವು ಏನು ಮಾಡಬೇಕು ಎಂಬ ಆಧ್ಯಾತ್ಮಿಕ ಮಾಹಿತಿಯನ್ನು ಈ ಪೋಸ್ಟ್ ಮೂಲಕ ನಾವು ತಿಳಿಯಲಿದ್ದೇವೆ . ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ…
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ರಸ್ತೆ ಸುರಕ್ಷತಾ ಸವಾಲನ್ನು ಸುಧಾರಿಸುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ, ರಸ್ತೆ ಸಂಚಾರ ಶಿಕ್ಷಣ ಸಂಸ್ಥೆ (ಐಆರ್‌ಟಿಇ) ಹಾಗೂ ಡಿಯಾಜಿಯೋ ಇಂಡಿಯಾ ಸಹಯೋಗದಲ್ಲಿ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ಸುಧಾರಣೆಗಾಗಿ ಅಧ್ಯಯನ ನಡೆಸಿದೆ. ಈ ಅಧ್ಯಯನಕ್ಕಾಗಿ ಚಾಲುಕ್ಯ ಸರ್ಕಲ್, ಕಂಟೋನ್ಮೆಂಟ್ ರೈಲು ನಿಲ್ದಾಣ ಜಂಕ್ಷನ್, ಎಚ್. ಸಿದ್ದಯ್ಯ ವೃತ್ತವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು, ಈ ಮೂರು ಜಂಕ್ಷನ್‌ಗಳಲ್ಲಿ ವೈಜ್ಞಾನಿಕ ವಿಧಾನದಲ್ಲಿ ಸಂಚಾರ ಪ್ರಮಾಣ, ರಸ್ತೆ ಬಳಕೆದಾರರ ವರ್ತನೆ ಮತ್ತು ಸುರಕ್ಷತಾ ಅಂಶಗಳ ವಿಶ್ಲೇಷಣೆ ನಡೆಸಿದೆ, ಹಾಗೆಯೇ, ತಳಮಟ್ಟದ ಸಂಶೋಧನೆ, ವಾಹನಗಳ ದಟ್ಟಣೆಯ ಟ್ರಾಕಿಂಗ್, ಸಾಮರ್ಥ್ಯ ವೃದ್ಧಿಗೆ ತೆಗೆದುಕೊಳ್ಳಬಹುದಾಗ ಕ್ರಮಗಳ ಬಗ್ಗೆಯೂ ಅಧ್ಯಯನ ನಡೆಸಿದೆ. ಜೊತೆಗೆ, ಅಧ್ಯಯನವು ಸಂಚಾರ ಚಲನವಲನ, ಪಾದಚಾರಿಗಳ ನಡೆ, ರಸ್ತೆ ವಿನ್ಯಾಸದ ಪರಿಣಾಮ ಹಾಗೂ ಯೋಜನಾ ಸುಧಾರಣೆಗಳ ಬಗ್ಗೆ ಪ್ರಮುಖ ತಿಳುವಳಿಕೆ ನೀಡಿದ್ದು, ಸಂಚಾರ ಮಾರ್ಗ ವಿಭಜನೆ, ಪಾದಚಾರಿಗಳ ಸುರಕ್ಷಿತ ರಸ್ತೆ ದ್ವೀಪಗಳು, ಸಿಗ್ನಲ್ ವ್ಯವಸ್ಥೆ ಸುಧಾರಣೆ ಮತ್ತು ಸೂಚನಾ ಫಲಕಗಳ…
ಚಿತ್ರದುರ್ಗ :ಪ್ರಾಧ್ಯಾಪಕರೊಬ್ಬರ ಜೊತೆ ಅಕ್ರಮ ಸಂಬಂಧವಿದೆ ಎಂಬ ಸುಳ್ಳು ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತು, ಬಿಎಎಂಎಸ್ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ ಮೃತ ವಿದ್ಯಾರ್ಥಿನಿಯನ್ನು 23 ವರ್ಷದ ನಿಖಿತಾ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಹೊಳಲ್ಕೆರೆಯ ಬಸವ ಲೇಔಟ್‌ನ ನಿವಾಸಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಈಕೆಯ ಹೆಸರನ್ನು ಪ್ರಾಧ್ಯಾಪಕರೊಬ್ಬರ ಜೊತೆ ತಳುಕು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕವಾಗಿ ಅಪಪ್ರಚಾರ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಡೆತ್ ನೋಟ್‌ನಲ್ಲಿ ಸ್ಫೋಟಕ ಮಾಹಿತಿ ಆತ್ಮಹತ್ಯೆಗೂ ಮುನ್ನ ನಿಖಿತಾ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.ಪ್ರಾಧ್ಯಾಪಕ ರಾಜು, ಅವರ ಪತ್ನಿ ಹಾಗೂ ಕೆಲವು ಸಹಪಾಠಿ ವಿದ್ಯಾರ್ಥಿನಿಯರು ತನ್ನ ಮಾನಸಿಕ ಕಿರುಕುಳಕ್ಕೆ ಕಾರಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದು ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದೇ ಈ ನಿರ್ಧಾರಕ್ಕೆ ಪ್ರೇರಣೆ ಎಂದು…
ಬೆಂಗಳೂರು: ದೇಶಾದ್ಯಂತ 2026-27ರ ಹೊಸ ಹಣಕಾಸು ವರ್ಷವು ಏಪ್ರಿಲ್ 1ರಿಂದ ಅಧಿಕೃತವಾಗಿ ಆರಂಭಗೊಂಡಿದೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಹೊಸ ತೆರಿಗೆ ನಿಯಮಗಳು ಹಾಗೂ ಆಮದು ಸುಂಕದ ಬದಲಾವಣೆಗಳು ಇಂದಿನಿಂದ ಜಾರಿಗೆ ಬಂದಿದ್ದು, ಸಾಮಾನ್ಯ ಜನರ ಮಾಸಿಕ ಬಜೆಟ್ ಮೇಲೆ ಇದು ನೇರ ಪರಿಣಾಮ ಬೀರಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ಮತ್ತು 56ನೇ ಜಿಎಸ್ಟಿ ಕೌನ್ಸಿಲ್ ಸಭೆಯ ನಿರ್ಧಾರಗಳ ಅನ್ವಯ, ಹಲವು ವಸ್ತುಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ವಿಶೇಷವಾಗಿ ಜಿಎಸ್ಟಿ ಸ್ಲ್ಯಾಬ್‌ಗಳನ್ನು 5% ಮತ್ತು 18% ಕ್ಕೆ ಸರಳೀಕರಿಸಿರುವುದು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. ಜನಸಾಮಾನ್ಯರಿಗೆ ನಿರಾಳ: ಅಗ್ಗವಾಗಲಿರುವ ವಸ್ತುಗಳು ಸ್ಮಾರ್ಟ್‌ಫೋನ್‌ಗಳು, ಜೀವ ರಕ್ಷಕ ಔಷಧಿಗಳು ಹಾಗೂ ಬಟ್ಟೆಗಳ ಬೆಲೆ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ಸಮಾಧಾನ ತಂದಿದೆ. ಆರೋಗ್ಯ ಕ್ಷೇತ್ರ: 17 ಅತ್ಯಗತ್ಯ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿತಗೊಳಿಸಲಾಗಿದೆ. ಇದರಿಂದ ಮಧುಮೇಹ (Diabetes) ಮತ್ತು ಕ್ಯಾನ್ಸರ್ ಚಿಕಿತ್ಸೆಯ ವೆಚ್ಚ ಗಣನೀಯವಾಗಿ ತಗ್ಗಲಿದೆ. ಎಲೆಕ್ಟ್ರಾನಿಕ್ಸ್: ಭಾರತದಲ್ಲಿ…
ನವದೆಹಲಿ: ದೇಶದಲ್ಲಿ ಬಹುನಿರೀಕ್ಷಿತ ಡಿಜಿಟಲ್ ಜನಗಣತಿಯ ಮೊದಲ ಹಂತದ ಪ್ರಕ್ರಿಯೆ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ. ಈ ಮಹತ್ವದ ಅಭಿಯಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ನಿವಾಸಗಳಲ್ಲೇ ಆನ್‌ಲೈನ್ ಮೂಲಕ ಫಾರ್ಮ್ ಭರ್ತಿ ಮಾಡುವ ಮೂಲಕ ಚಾಲನೆ ನೀಡಿದರು. ರಾಷ್ಟ್ರಪತಿ ಭವನದಲ್ಲಿ ಮೊದಲ ಹೆಜ್ಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜನಗಣತಿಯಲ್ಲಿ ಪಾಲ್ಗೊಳ್ಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. “ರಾಷ್ಟ್ರಪತಿ ಭವನದಲ್ಲಿ ‘ಜನಗಣತಿ 2027’ ಕ್ಕಾಗಿ ಭಾರತ ಸರ್ಕಾರದ ‘ಸ್ವಯಂ-ಗಣತಿ’ (Self-Enumeration) ಉಪಕ್ರಮದಲ್ಲಿ ಭಾಗವಹಿಸಿದ್ದೇನೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಪ್ರಕ್ರಿಯೆಯನ್ನು ಡಿಜಿಟಲ್ ಮಾಧ್ಯಮದ ಮೂಲಕ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಂದ ಸ್ವಯಂ-ಗಣತಿ ಪೂರ್ಣ ತಮ್ಮ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ನಾನು ನನ್ನ ಸ್ವಯಂ-ಗಣತಿಯನ್ನು ಪೂರ್ಣಗೊಳಿಸಿದ್ದೇನೆ. ಇಂದು ಜನಗಣತಿ 2027ರ ಮೊದಲ ಹಂತ ಆರಂಭವಾಗುತ್ತಿದ್ದು,…
ಮುಂಬೈ: ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಟೆಂಪೋಗೆ ವೇಗವಾಗಿ ಬಂದ ಟ್ರಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯ ವಿವರ: ಸಮೃದ್ಧಿ ಮಹಾಮಾರ್ಗದಲ್ಲಿ ಶುಚಿಗೊಳಿಸುವ ಕೆಲಸ ಮುಗಿಸಿ, ಮಹಿಳಾ ಕಾರ್ಮಿಕರ ಗುಂಪು ಮನೆಗೆ ಹಿಂದಿರುಗಲು ಟೆಂಪೋ ಏರಿ ಕುಳಿತಿದ್ದರು. ಚಾಲಕ ಸೇರಿದಂತೆ ಒಟ್ಟು 11 ಜನರಿದ್ದ ಟೆಂಪೋ ಚಲಿಸಲು ಸಿದ್ಧವಾಗುತ್ತಿದ್ದಂತೆ, ಮುಂಬೈ ಕಡೆಗೆ ಸಾಗುತ್ತಿದ್ದ ವೇಗದ ಟ್ರಕ್ ಕಡ್ವಾಂಚಿ ಗ್ರಾಮದ ಬಳಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಟೆಂಪೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಏಳು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಜಾಲ್ನಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಗುರುತು: ಮೃತಪಟ್ಟವರಲ್ಲಿ ಅಲ್ಕಾಬಾಯಿ ಅದ್ಮನೆ (45), ಲಕ್ಷ್ಮೀಬಾಯಿ ಮದನ್ (35), ಮೀನಾ ಅದ್ಮನೆ (45), ಕಾಂಚನ್ ಅದ್ಮನೆ…
ಬೆಂಗಳೂರು: ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕ ಓಡಾಟಕ್ಕೆ ಬಳಕೆಯಾಗುವ ನಕ್ಷೆಯ ಕಾಲುದಾರಿ ಮತ್ತು ಬಂಡಿದಾರಿಗಳನ್ನು ಮುಚ್ಚುವುದು ಅಥವಾ ಅಡ್ಡಿಪಡಿಸುವುದು ಕಾನೂನುಬಾಹಿರ ಎಂದು ಕಂದಾಯ ಇಲಾಖೆ ಎಚ್ಚರಿಸಿದೆ. ಇಂತಹ ದಾರಿಗಳನ್ನು ಅತಿಕ್ರಮಿಸಿದರೆ ಸಂಬಂಧಪಟ್ಟ ತಹಶೀಲ್ದಾರ್‌ಗೆ ದೂರು ನೀಡಬಹುದಾಗಿದ್ದು, ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಲು ಅವಕಾಶವಿದೆ. ಕಾನೂನು ಏನು ಹೇಳುತ್ತದೆ? ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 59ರಂತೆ: ದಾರಿಯ ಹಕ್ಕುಗಳು ಮತ್ತು ಇತರ ಅನುಭೋಗದ ಹಕ್ಕುಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಜಮೀನಿನ ಮಾಲೀಕರು ಒಪ್ಪುವ ಸಂದರ್ಭದಲ್ಲಿ ಇಂತಹ ಹಕ್ಕುಗಳನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ದಿ ಇಂಡಿಯನ್ ಅಸೆಸ್‌ಮೆಂಟ್ ಆಕ್ಟ್ 1882: ಈ ಕಾಯ್ದೆಯಡಿ ಪ್ರತಿಯೊಬ್ಬ ಜಮೀನಿನ ಮಾಲೀಕರು ತಮ್ಮ ಭೂಮಿಗೆ ಪ್ರವೇಶಿಸುವ ಮತ್ತು ವಹಿವಾಟು ನಡೆಸುವ ಹಕ್ಕನ್ನು ಹೊಂದಿರುತ್ತಾರೆ. ನೆರೆಹೊರೆಯವರು ಈ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ. ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 147: ಭೂಮಿ ಮತ್ತು ನೀರಿನ ಹಕ್ಕಿನ ಬಳಕೆಗೆ ಸಂಬಂಧಿಸಿದಂತೆ ಶಾಂತಿ ಭಂಗ ಉಂಟಾದಾಗ ಅದನ್ನು ನಿವಾರಿಸಲು ತಹಶೀಲ್ದಾರ್‌ಗೆ…
ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ. ಆದರೆ ಅನೇಕ ಬಾರಿ ನಾವು ಒಂದಕ್ಕಿಂತ ಹೆಚ್ಚು ಸಿಮ್ಗಳನ್ನು ಹೊಂದಿರುತ್ತೇವೆ ಮತ್ತು ಯಾವುದೋ ಒಂದು ಸಿಮ್ಗೆ ರಿಚಾರ್ಜ್ ಮಾಡುವುದನ್ನು ಮರೆತುಬಿಡುತ್ತೇವೆ ಅಥವಾ ಉದ್ದೇಶಪೂರ್ವಕವಾಗಿ ಮಾಡಿಸುವುದಿಲ್ಲ. ಹೀಗಾದಾಗ ಆ ಸಿಮ್ ಕಾರ್ಡ್ ಎಷ್ಟು ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ ಮತ್ತು ಯಾವಾಗ ಬಂದ್ ಆಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮತ್ತು ಟೆಲಿಕಾಂ ಕಂಪನಿಗಳ ನಿಯಮಗಳ ವಿವರ ಇಲ್ಲಿದೆ: 1. ಇನ್ ಕಮಿಂಗ್ ಸೇವೆ ಯಾವಾಗ ನಿಲ್ಲುತ್ತದೆ? ಸಾಮಾನ್ಯವಾಗಿ ನಿಮ್ಮ ರಿಚಾರ್ಜ್ ವ್ಯಾಲಿಡಿಟಿ (ಸಿಂಧುತ್ವ) ಮುಗಿದ ತಕ್ಷಣ, ಔಟ್ ಗೋಯಿಂಗ್ (ಕರೆ ಮಾಡುವ) ಸೌಲಭ್ಯ ಸ್ಥಗಿತಗೊಳ್ಳುತ್ತದೆ. ಆದರೆ, ಇನ್ ಕಮಿಂಗ್ (ಕರೆ ಸ್ವೀಕರಿಸುವ) ಸೌಲಭ್ಯವು ಕಂಪನಿಗಳ ಆಧಾರದ ಮೇಲೆ ಮುಂದಿನ 7 ರಿಂದ 15 ದಿನಗಳವರೆಗೆ ಚಾಲ್ತಿಯಲ್ಲಿರಬಹುದು. 2. ಸಿಮ್ ಕಾರ್ಡ್ ಸಂಪೂರ್ಣವಾಗಿ ಯಾವಾಗ ಬಂದ್ ಆಗುತ್ತದೆ? ಟೆಲಿಕಾಂ ಕಂಪನಿಗಳ ನಿಯಮಗಳ ಪ್ರಕಾರ, ನೀವು ಸತತವಾಗಿ 90 ದಿನಗಳವರೆಗೆ (ಸುಮಾರು 3…
ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆಗೆ (ಪಾನ್) ಅತ್ಯಂತ ಮಹತ್ವದ ಸ್ಥಾನವಿದೆ. ಶುಭ ಸಮಾರಂಭಗಳಿಂದ ಹಿಡಿದು ದೇವರ ಪೂಜೆಯವರೆಗೆ ವೀಳ್ಯದೆಲೆ ಇಲ್ಲದೆ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಆದರೆ, ಕೇವಲ ಸಾಂಪ್ರದಾಯಿಕ ದೃಷ್ಟಿಯಿಂದಷ್ಟೇ ಅಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ವೀಳ್ಯದೆಲೆ ಅಥವಾ ಪಾನ್ ಸೇವನೆ ಮಾಡುವುದು ಅತ್ಯಂತ ಲಾಭದಾಯಕ ಎಂದು ಆಯುರ್ವೇದ ಮತ್ತು ಆಧುನಿಕ ಸಂಶೋಧನೆಗಳು ತಿಳಿಸಿವೆ. ಊಟದ ನಂತರ ಒಂದು ಪಾನ್ ಸೇವಿಸುವುದರಿಂದ ದೇಹಕ್ಕೆ ಸಿಗುವ ಪ್ರಮುಖ ಪ್ರಯೋಜನಗಳು ಇಲ್ಲಿವೆ: 1. ಜೀರ್ಣಕ್ರಿಯೆಗೆ ಸಹಕಾರಿ: ಪಾನ್ ಸೇವನೆಯಿಂದ ಲಾಲಾರಸದ ಉತ್ಪತ್ತಿ ಹೆಚ್ಚಾಗುತ್ತದೆ. ಇದರಲ್ಲಿರುವ ಕಿಣ್ವಗಳು ಆಹಾರವನ್ನು ಸುಲಭವಾಗಿ ಜೀರ್ಣಿಸಲು ಸಹಾಯ ಮಾಡುತ್ತವೆ. ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ವೀಳ್ಯದೆಲೆ ಉತ್ತಮ ಮದ್ದು. 2. ಮಲಬದ್ಧತೆ ನಿವಾರಣೆ: ವೀಳ್ಯದೆಲೆಯಲ್ಲಿ ಹೇರಳವಾದ ನಾರಿನಂಶವಿರುತ್ತದೆ. ಇದು ಕರುಳಿನ ಆರೋಗ್ಯವನ್ನು ಕಾಪಾಡುವುದಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ನೆರವಾಗುತ್ತದೆ. 3. ಬಾಯಿಯ ಆರೋಗ್ಯ ಮತ್ತು ದುರ್ವಾಸನೆ ಮುಕ್ತಿ: ಪಾನ್ ಜಗಿಯುವುದರಿಂದ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದು ಬಾಯಿಯ ದುರ್ವಾಸನೆಯನ್ನು ತಡೆಗಟ್ಟುವುದಲ್ಲದೆ,…
ಬೆಂಗಳೂರು: ದೈನಂದಿನ ಜೀವನದಲ್ಲಿ ಎದುರಾಗುವ ಆಕಸ್ಮಿಕ ಅವಘಡಗಳು, ಆರೋಗ್ಯ ಸಮಸ್ಯೆಗಳು ಅಥವಾ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ತಕ್ಷಣದ ನೆರವು ಪಡೆಯಲು ಅನುಕೂಲವಾಗುವಂತೆ ವಿವಿಧ ಇಲಾಖೆಗಳ ಪ್ರಮುಖ ಸಹಾಯವಾಣಿ ಸಂಖ್ಯೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಂಕಷ್ಟದ ಸಮಯದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಗೊಂದಲ ನಿವಾರಿಸಲು ಈ ಕೆಳಗಿನ ಸಂಖ್ಯೆಗಳು ಸಹಕಾರಿಯಾಗಲಿವೆ. ಪ್ರಮುಖ ತುರ್ತು ಸೇವೆಗಳು: ಪೊಲೀಸ್ ನೆರವು: 100 ಅಗ್ನಿಶಾಮಕ ಸೇವೆ: 101 ಆಂಬ್ಯುಲೆನ್ಸ್ (ತುರ್ತು ವೈದ್ಯಕೀಯ ಸೇವೆ): 102 ರಾಜ್ಯ ಮಟ್ಟದ ಆರೋಗ್ಯ ಸಹಾಯವಾಣಿ: 104 ಎಲ್ಲಾ ತುರ್ತು ಸೇವೆಗಳಿಗೂ ಏಕೀಕೃತ ಸಂಖ್ಯೆ: 112 ಸಂಚಾರ ಮತ್ತು ಅಪಘಾತ ಸಹಾಯವಾಣಿ: ಸಂಚಾರ ಪೊಲೀಸ್: 103 ರಸ್ತೆ ಅಪಘಾತ/ಸಂಚಾರ ಸಹಾಯವಾಣಿ: 1073 ವಾಯು ಅವಘಡ: 1071 ರೈಲು ಅಪಘಾತ: 1072 ಮಹಿಳೆ ಮತ್ತು ಮಕ್ಕಳ ಸುರಕ್ಷತೆ: ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಹಿಂಸೆ ತಡೆ: 181 ಸಂಕಷ್ಟದಲ್ಲಿರುವ ಮಹಿಳೆಯರ ಸಹಾಯವಾಣಿ: 1091 ಮಕ್ಕಳ ಸಹಾಯವಾಣಿ (Child Helpline): 1098 ರೈಲ್ವೆ ಮತ್ತು ಇತರೆ ಸೇವೆಗಳು:…














