Author: kannadanewsnow57

ಬೆಂಗಳೂರು: ಬಿಬಿಎಂಪಿಯಿಂದ 11,307 ಸಂಖ್ಯಾತಿರಿಕ್ತ (Supernumerary posts) ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ.15ರ ಇಂದು ಕೊನೆಯ ದಿನವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿಯ ಪೌರಕಾ ರ್ಮಿಕರ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 15ರ ವರೆಗೆ ವಿಸ್ತರಿಸಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿತ್ತು. ಕಳೆದ ಮಾರ್ಚ್‌ನಲ್ಲಿ 11,307 ಪೌರಕಾರ್ಮಿಕರ ನೇಮಕಾ ತಿಗೆ ಅರ್ಜಿ ಆಹ್ವಾನಿಸಿದ್ದ ಬಿಬಿಎಂಪಿಯು ಏ.15ರವರೆಗೆ ಕಾಲಾ ವಕಾಶ ನೀಡಿತ್ತು. ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಹಾಗೂ ಆಡಳಿತಾತ್ಮಕ ಕಾರಣ ನೀಡಿ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 15ರ ವರೆಗೆ ವಿಸ್ತರಣೆ ಮಾಡಲಾಗಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ನೇರಪಾವತಿಯಡಿ (DPS) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಭರ್ತಿಗಾಗಿ ಸೃಜಿಸಿರುವ 11,307 ಸಂಖ್ಯಾತಿರಿಕ್ತ (Supernumerary posts) ಹುದ್ದೆಗಳನ್ನು ಸರ್ಕಾರದ ಆದೇಶ ಸಂಖ್ಯೆ: ನಅಇ 165 ಬಿಬಿಎಲ್ 2022(ಇ), ದಿನಾಂಕ: 02.03.2023, ಸರ್ಕಾರದ ಸೇರ್ಪಡೆ ಆದೇಶ ಸಂಖ್ಯೆ: ನಇ 165…

Read More

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭೂಮಿ, ಸೂರ್ಯ-ಭೂಮಿ ಎಲ್ 1 ಪಾಯಿಂಟ್ ಮತ್ತು ಚಂದ್ರನಿಂದ ಇತ್ತೀಚಿನ ಸೌರ ಸ್ಫೋಟ ಘಟನೆಗಳ ಚಿತ್ರಗಳನ್ನು ಸೆರೆಹಿಡಿದಿದೆ. ಇಸ್ರೋದ ಆದಿತ್ಯ ಎಲ್ -1 ಮತ್ತು ಚಂದ್ರಯಾನ್ -2 ಆಕಾಶದ ವಿಚಿತ್ರ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ, ಈ ಚಿತ್ರಗಳು ಬಹಿರಂಗಪಡಿಸಿರುವುದು ತುಂಬಾ ಭಯಾನಕವಾಗಿದೆ. ಇತ್ತೀಚೆಗೆ ಸೂರ್ಯನಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಇಸ್ರೋ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಶನಿವಾರ ಭೂಮಿಯ ಮೇಲೆ ಪರಿಣಾಮ ಬೀರಿದ ಪ್ರಬಲ ಸೌರ ಚಂಡಮಾರುತದ ಚಿತ್ರಗಳನ್ನು ದಾಖಲಿಸಲು ಇಸ್ರೋ ತನ್ನ ಎಲ್ಲಾ ವೀಕ್ಷಣಾ ವೇದಿಕೆಗಳು ಮತ್ತು ವ್ಯವಸ್ಥೆಗಳನ್ನು ಸಜ್ಜುಗೊಳಿಸಿತು. ಆದಿತ್ಯ-ಎಲ್1 ಮತ್ತು ಚಂದ್ರಯಾನ-2 ಎರಡೂ ಅವಲೋಕನಗಳನ್ನು ಮಾಡಿವೆ ಮತ್ತು ಚಿತ್ರಗಳನ್ನು ವಿಶ್ಲೇಷಿಸಲಾಗಿದೆ. ಆದಿತ್ಯ-ಎಲ್ 1 (ಸೋಲ್ಎಕ್ಸ್ಎಸ್ ಮತ್ತು ಎಚ್ಇಎಲ್ 1 ಒಎಸ್) ಹಡಗಿನಲ್ಲಿನ ಎಕ್ಸ್-ರೇ ಪೇಲೋಡ್ಗಳು ಕಳೆದ ಕೆಲವು ದಿನಗಳಲ್ಲಿ ಈ ಪ್ರದೇಶಗಳಿಂದ ಅನೇಕ ಎಕ್ಸ್- ಮತ್ತು ಎಂ-ಕ್ಲಾಸ್ ಜ್ವಾಲೆಗಳನ್ನು ಗಮನಿಸಿದ್ದರೆ, ಇನ್-ಸಿಟು ಮ್ಯಾಗ್ನೆಟೋಮೀಟರ್ (ಎಂಎಜಿ) ಪೇಲೋಡ್ ಸಹ ಎಲ್ 1 ಪಾಯಿಂಟ್…

Read More

ಬೆಂಗಳೂರು : ಕೃಷಿ ಚಟುವಟಿಕೆಗಳಲ್ಲಿ ಭೂಮಿ ಸಿದ್ದಪಡಿಸುವಿಕೆ ಬಹು ಮುಖ್ಯ ಸಾಗುವಳಿ ಕ್ರಮ. ಇದರ ಮೊದಲ ಹಂತ ಬೇಸಿಗೆ ಉಳುಮೆ ಅಥವಾ ಮಾಗಿ ಉಳುಮೆ. ರೈತ ಬಾಂಧವರು ಮೇ ತಿಂಗಳಿನಲ್ಲಿ ಎಂ.ಬಿ ನೇಗಿಲಿನಿಂದ ಹೊಲವನ್ನು ಉಳುಮೆ ಮಾಡಬೇಕು. ಇದರಿಂದ ಮಣ್ಣು ಸಡಿಲಗೊಂಡು ಕೆಳಗಡೆ ಇರುವಂತಹ ಸಮೃದ್ಧವಾದ ಪೋಷಕಾಂಶಯುಕ್ತ ಮಣ್ಣು ಮೇಲ್ಬಾಗಕ್ಕೆ ಬರುತ್ತದೆ. ಸೂರ್ಯನ ಕಿರಣಗಳ ಶಾಖಕ್ಕೆ ಒಳಗಾಗುವುದರಿಂದ ಮಣ್ಣು ಹೆಚ್ಚು ಫಲವತ್ತತೆಯನ್ನು ಹೊಂದುತ್ತದೆ. ಉಳುಮೆ ಮಾಡಿದ ಮಣ್ಣು ಸೂಕ್ಷ್ಮ ಜೀವಿಗಳಿಗೆ ಹಾಗೂ ರೈತನ ಮಿತ್ರ ಎರೆಹುಳುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಇದಲ್ಲದೆ ಮಾಗಿ ಉಳುಮೆ ಮಾಡುವುದರಿಂದ ಕಳೆಗಳ ಹತೋಟಿ ಮಾಡಬಹುದು ಮತ್ತು ಮಣ್ಣಿನಲ್ಲಿ ಅವಿತಿರುವಂತಹ ಕೀಟ ಹಾಗೂ ಅವುಗಳ ತತ್ತಿಗಳು ಮತ್ತು ಕೋಶಗಳು ಸೂರ್ಯನ ಶಾಖಕ್ಕೆ ಒಡ್ಡಿಕೊಂಡು ಅವುಗಳ ಸಂತತಿ ಕಡಿಮೆ ಆಗುತ್ತದೆ ಮತ್ತು ಸಮರ್ಪಕವಾಗಿ ಹತೋಟಿ ಆಗುತ್ತದೆ. ಮಾಗಿ ಉಳುಮೆ ಮಾಡುವ ಮೊದಲು ರೈತರು ತಮ್ಮ ಹೊಲಗಳಿಗೆ ಹೆಕ್ಟೆರಿಗೆ 10 ಟನ್‍ಗಳಷ್ಟು ಕೊಟ್ಟಿಗೆ ಅಥವಾ ಸಗಣಿ ಗೊಬ್ಬರವನ್ನು ಸಮನಾಗಿ ಹರಡಿ ನಂತರ…

Read More

ನವದೆಹಲಿ: ನನ್ನ ದೇಶದ ಜನರು ನನಗೆ ಮತ ಚಲಾಯಿಸುತ್ತಾರೆ” ಎಂದು ನಾನು ನಂಬುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, “ನಾನು ಹಿಂದೂ-ಮುಸ್ಲಿಂ ಮಾಡುವ ದಿನ, ನಾನು ಸಾರ್ವಜನಿಕ ಬದುಕಿಗೆ ಅನರ್ಹನಾಗುತ್ತೇನೆ” ಮತ್ತು “ನಾನು ಹಿಂದೂ-ಮುಸ್ಲಿಂ ಮಾಡುವುದಿಲ್ಲ ಎಂಬುದು ನನ್ನ ಸಂಕಲ್ಪ” ಎಂದು ಹೇಳಿದರು. ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ ನಂತರ ನೀಡಿದ ಸಂದರ್ಶನದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಹೆಚ್ಚು ಮಕ್ಕಳ ಹೆರುವವರಿಗೆ ದೇಶದ ಆಸ್ತಿ ಹಂಚಿಕೆಯಾಗಲಿದೆ ಎಂದು ನಾನು ಹೇಳುವಾಗ ಎಲ್ಲೂ ಮುಸ್ಲಿಂ ಎಂಬ ಪದ ಬಳಸಿಲ್ಲ. 11 ಮಕ್ಕಳಿದ್ದಾರೆ ಎಂಬ ಹೇಳಿಕೆ ಬಂದಾಗ ಏಕೆ ಅದನ್ನು ಮುಸ್ಲಿಮರಿಗೇ ಜೋಡಿಸುತ್ತೀರಿ? ಏಕೆ ಮುಸಲ್ಮಾನರಿಗೆ ಅನ್ಯಾಯ ಮಾಡುತ್ತೀರಿ ನೀವು? ಇಲ್ಲಿನ ಬಡ ಕುಟುಂಬಗಳಲ್ಲೂ ಇದೇ ಪರಿಸ್ಥಿತಿ ಇದೆ. ಅವರಿಗೆ ಮಕ್ಕಳನ್ನು ಓದಿಸಲೂ ಆಗುತ್ತಿಲ್ಲ, ಯಾವುದೇ ಸಮಾಜ ಇರಲಿ. ಎಲ್ಲಿ ಬಡತನ ಇದೆಯೋ ಅಲ್ಲಿ ಮಕ್ಕಳೂ ಹೆಚ್ಚಿದ್ದಾರೆ. ನಾನು ಎಲ್ಲೂ ಹಿಂದೂ-ಮುಸ್ಲಿಂ ಎಂದಿಲ್ಲ.…

Read More

ಬೆಂಗಳೂರು : ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಮೇ 21ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳ ಕೆಲವೆಡೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಾವಣಗೆರೆ, ಕೊಡಗು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಮಂಡ್ಯ, ಬಳ್ಳಾರಿ, ಹಾಸನದಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಿತ್ರದುರ್ಗ, ಕೋಲಾರ, ವಿಜಯನಗರ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗುವ ಸಾಧ್ಯತೆಯಿದೆ.

Read More

ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್ ನಿಂದ ಬೆಂಗಳೂರಿಗೆ ನಾಳೆ ವಾಪಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಂದೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಜೈಲು ಸೇರಿದ್ದರು. ಇದೀಗ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣ ನಾಳೆಯೇ ಬೆಂಗಳೂರಿಗೆ ಆಗಮಿಸಿ ಕೋರ್ಟ್ ಗೆ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹರಿಯಾಣದ ಅಕಲ್ ಟ್ರಾವೆಲ್ಸ್ ನಿಂದ ಪ್ರಜ್ವಲ್ ಗೆ ಟಿಕೆಟ್ ಬುಕಿಂಗ್ ಮಾಡಲಾಗಿದೆ. ಬ್ಯುಸಿನೆಸ್ ಕ್ಲಾಸ್ ನಲ್ಲಿ ಅವರ ಟಿಕೆಟ್ ಬುಕ್ ಆಗಿದ್ದು, ಮೇ 16 ರಂದು ಮಧ್ಯರಾತ್ರಿ 12:30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಲ್ಯಾಂಡ್ ಆಗುವ ಲುಫ್ತಾನ್ಸಾ ಏರ್ಲೈನ್ಸ್ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದಾರೆ ಎನ್ನಲಾಗಿದೆ.

Read More

ನವದೆಹಲಿ: ಪ್ರತ್ಯೇಕ ತಮಿಳು ದೇಶಕ್ಕೆ ಆಗ್ರಹಿಸಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಡ್ಡಿ ಉಂಟು ಮಾಡುತ್ತಿರುವ ಶ್ರೀಲಂಕಾ ಮೂಲದ ಲಿಬರೇಷನ್ ಆಫ್ ತಮಿಳ್ ಟೈಗರ್ಸ್ ಈಳಂ (ಎಲ್ ಟಿಟಿ) ಸಂಘಟನೆಯ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದೆ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 ರ ಸೆಕ್ಷನ್ 3 ರ ಉಪ ವಿಭಾಗಗಳು (1) ಮತ್ತು (3) ಅನ್ನು ಅನ್ವಯಿಸಿ ಕೇಂದ್ರವು ನಿಷೇಧ ಹೇರಿದೆ. ಗೆಜೆಟೆಡ್ ಅಧಿಸೂಚನೆಯಲ್ಲಿ, ಗೃಹ ಸಚಿವಾಲಯವು ಎಲ್ಟಿಟಿಇ ಶ್ರೀಲಂಕಾ ಮೂಲದ ಸಂಘಟನೆಯಾಗಿದೆ ಆದರೆ ಭಾರತದ ಭೂಪ್ರದೇಶದಲ್ಲಿ ಬೆಂಬಲಿಗರು, ಅನುಕಂಪ ಹೊಂದಿರುವವರು ಮತ್ತು ಏಜೆಂಟರನ್ನು ಹೊಂದಿದೆ ಎಂದು ಗಮನಿಸಿದೆ. “ಎಲ್ಟಿಟಿಇ ಇನ್ನೂ ದೇಶದ ಸಮಗ್ರತೆ ಮತ್ತು ಭದ್ರತೆಗೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಶ್ರೀಲಂಕಾದಲ್ಲಿ ಮೇ 2009 ರಲ್ಲಿ ಮಿಲಿಟರಿ ಸೋಲಿನ ನಂತರವೂ, ಎಲ್ಟಿಟಿಇ ‘ಈಳಂ’ (ತಮಿಳರಿಗೆ ಸ್ವತಂತ್ರ ದೇಶ) ಪರಿಕಲ್ಪನೆಯನ್ನು ಕೈಬಿಟ್ಟಿಲ್ಲ ಮತ್ತು ನಿಧಿಸಂಗ್ರಹ ಮತ್ತು ಪ್ರಚಾರ ಚಟುವಟಿಕೆಗಳನ್ನು…

Read More

ಮುಂಬೈ : 12 ವರ್ಷದ ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಅವರ ಸುರಕ್ಷತೆ ಮತ್ತು ಭದ್ರತೆ ಅತ್ಯುನ್ನತವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಸಂದೀಪ್ ಮರ್ನೆ ಮತ್ತು ನೀಲಾ ಗೋಖಲೆ ಅವರ ನ್ಯಾಯಪೀಠವು 25 ವಾರಗಳ ಗರ್ಭಧಾರಣೆಯ ನಂತರ ಗರ್ಭಪಾತಕ್ಕೆ ಶಿಫಾರಸು ಮಾಡಿ ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿತು. ಬಾಲಕಿಯ ತಾಯಿ ಹೈಕೋರ್ಟ್ನಲ್ಲಿ ಸಲ್ಲಿಸಿದ ಅರ್ಜಿಯ ಪ್ರಕಾರ, ಬಾಲಕಿಯ ಮೇಲೆ ಆಕೆಯ 14 ವರ್ಷದ ಸಹೋದರ ಅತ್ಯಾಚಾರ ಎಸಗಿದ್ದಾನೆ ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಬಾಲಕಿ ತನ್ನ ತಾಯಿಗೆ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ್ದಳು ಮತ್ತು ಅವಳನ್ನು ಆಸ್ಪತ್ರೆಗೆ ಕರೆದೊಯ್ದಾಗ, ಗರ್ಭಧಾರಣೆ ಪತ್ತೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ತನ್ನ ಹಿರಿಯ ಸಹೋದರ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಹೊಂದಿದ್ದಾನೆ ಎಂದು ಹುಡುಗಿ ಬಹಿರಂಗಪಡಿಸಿದಳು. ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವನು ಅವಳಿಗೆ ಬೆದರಿಕೆ ಹಾಕಿದ್ದಾನೆ. ತಾಯಿಯ ದೂರಿನ…

Read More

ಬೆಂಗಳೂರು : ಬರದಿಂದ ತತ್ತರಿಸಿರುವ ರೈತರಿಗೆ ಇದೀಗ ಬ್ಯಾಂಕುಗಳು ಶಾಕ್ ನೀಡಿದ್ದು, ಬರ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿವೆ. ರಾಜ್ಯ ಸರ್ಕಾರ ಬರ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡಿದರೆ, ಆ ಹಣ ಇದೀಗ ಬ್ಯಾಂಕ್ ಸಾಲಕ್ಕೆ ಹೊಂದಿಸಿಕೊಳ್ಳಲಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರಿಗೆ ಸರ್ಕಾರ ಬರ ಪರಿಹಾರ ಜಮೆ ಮಾಡಿದೆ. ಆದರೆ ಕೆಲ ಬ್ಯಾಂಕ್‌ಗಳು ರೈತರ ಬೆಳೆಸಾಲಕ್ಕೆ ಹೊಂದಿಸಿಕೊಳ್ಳುತ್ತಿದ್ದಾರೆ. ಇದು ರೈತರಿಗೆ ತಿಳಿಯುತ್ತಿದ್ದಂತೆ ಬ್ಯಾಂಕಿಗೆ ತೆರಳಿದರೆ ಬೆಳೆ ಸಾಲಕ್ಕೆ ಹೊಂದಿಸಿಕೊಳ್ಳಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಬರದಿಂದ ಸಂಕಷ್ಟದಲ್ಲಿರುವ ರೈತರಿಗಾಗಿ ಪರಿಹಾರ ಬಿಡುಗಡೆ ಮಾಡಿದೆ. ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಒಣ ಬೇಸಾಯಕ್ಕೆ 8,500 ರೂ., ನೀರಾವರಿಗೆ 17,000 ರೂ., ಬಹುವಾರ್ಷಿಕ/ ತೋಟಗಾರಿಕೆ ಬೆಳೆಗೆ 22,500 ರೂ.ವರೆಗೆ ಪರಿಹಾರವನ್ನು ಸರ್ಕಾರ ನಿಗದಿಪಡಿಸಲಾಗಿದೆ. ಬೆಳೆ ಪರಿಹಾರದ ಹಣವನ್ನು ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳು ವಂತಿಲ್ಲ. ಒಂದು ವೇಳೆ ಮಾಡಿಕೊಂಡರೆ ಬ್ಯಾಂಕ್ ಅಧಿಕಾರಿಗಳೇ ಹೊಣೆಗಾರರು ಎಂದು ಎಚ್ಚರಿಕೆ…

Read More

ಬೆಂಗಳೂರು : ರಾಜ್ಯದ ಪ್ರೌಢಶಾಲೆ ಶಿಕ್ಷಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಶಾಕ್ ನೀಡಿದ್ದು, ಶಿಕ್ಷಕರ 15 ರಜೆ ಕಡಿತ ಮಾಡಿದ್ದು, ಇಂದಿನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದೆ. ಜೂನ್-ಜುಲೈನಲ್ಲಿ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ-2ಗೆ ನೋಂದಾಯಿಸಿರುವ ವಿದ್ಯಾರ್ಥಿಗಳಿಗೆ ಮೇ 15 ರಿಂದ ಜೂನ್ 5ರವರೆಗೆ ಆಯಾ ಪ್ರೌಢಶಾಲೆ ಗಳಲ್ಲಿ ವಿಶೇಷ ತರಗತಿಗಳನ್ನು ನಡೆಸುವಂತೆ ಕರ್ನಾಟಕ ಶಾಲಾ ಪರೀಕ್ಷೆಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶನ ನೀಡಿದೆ. ಮಂಗಳವಾರ ಸಂಜೆಯೇ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆಯಾ ವಿಷಯದ ಶಿಕ್ಷಕರುಗಳೇ ಶಾಲೆಗಳಿಗೆ ಹಾಜರಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಫೇಲಾಗಿರುವ, ಫಲಿತಾಂಶ ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಬೇಕೆಂದು ಸೂಚಿಸಲಾಗಿದೆ.

Read More