Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆಪ್ ನಲ್ಲಿ ಆಟೋ ಬುಕ್ ಮಾಡಿದ್ದ ವೇಳೆ ಕುಡಿದ ನಶೆಯಲ್ಲಿ ನಿಗದಿತ ಸ್ಥಳಕ್ಕೆ ತೆರಳದೆ ಆಟೋ ಚಾಲಕ ಬೇರೆ ಸ್ಥಳಕ್ಕೆ ತೆರಳಿದ್ದ ಸಂದರ್ಭ ಭಯ ಭೀತಾರಾದಂತಹ ಮಹಿಳೆ ಆಟೋದಿಂದ ಜಿಗಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ. ಹೌದು. ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಆಟೋ ಚಾಲಕ ಕಿರಿಕ್ ಮಾಡಿಕೊಂಡಿದ್ದು, ಆಟೋ ಚಾಲಕನ ಕಿರುಕುಳಕ್ಕೆ ಮಹಿಳೆ ಭಯ ಭೀತಾರಾಗಿದ್ದಾರೆ. ನಮ್ಮ ಯಾತ್ರೆ ಆಪ್ ನಲ್ಲಿ ಆಟೋವನ್ನು ಮಹಿಳೆ ಬುಕ್ ಮಾಡಿದ್ದಾರೆ. ನಿಗದಿದ್ದ ಸ್ಥಳಕ್ಕೆ ಹೋಗದೆ ಆಟೋ ಚಾಲಕ ಬೇರೆ ಕಡೆ ಹೋಗಿದ್ದಾನೆ. ಕುಡಿದ ನಶೆಯಲ್ಲಿ ಮಹಿಳೆಯ ಜೊತೆ ಕಿರಿಕ್ ಮಾಡಿದ್ದಾನೆ. ಈ ವೇಳೆ ಗಾಡಿ ನಿಲ್ಲಿಸಲ್ಲ ಜಿಗಿದು ಹೋಗು ಎಂದು ಚಾಲಕ ಹೇಳಿದಾಗ, ಅನಿವಾರ್ಯವಾಗಿ ಮಹಿಳೆ ಚಲಿಸುತ್ತಿದ್ದ ಆಟೋದಿಂದ ಜಿಗಿದಿದ್ದಾಳೆ. ಹೊರಮಾವಿನಿಂದ ಥಣಿಸಂದ್ರಕ್ಕೆ ಮಹಿಳೆ ಆಟೋ ಬುಕ್ ಮಾಡಿದ್ದರು. ಆದರೆ ಚಾಲಕ ಹೆಬ್ಬಾಳದತ್ತ ಆಟೋ ತಿರುಗಿಸಿದ್ದಾನೆ ಎಂದು ಮಹಿಳೆಯ ಆರೋಪಿಸಿದ್ದರು.ಇದೀಗ ಆಟೋ ಚಾಲಕನನ್ನು…
ಬೆಂಗಳೂರು : ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಬೋಧನಾ ಕಾರ್ಯಕ್ಕೆ ಅಗತ್ಯವಿರುವ ಅತಿಥಿ ಉಪನ್ಯಾಸಕರನ್ನು ಆನ್ ಲೈನ್ ಮೂಲಕ ಕೌನ್ಸೆಲಿಂಗ್ ಗೆ ವೇಳಾಪಟ್ಟಿ ಬಿಡುಗಡೆಯಾಗಿದೆ. ಕೌನ್ಸೆಲಿಂಗ್ ಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಜನವರಿ- ಫೆಬ್ರವರಿಯಲ್ಲಿ 2, 4 ಮತ್ತು 6ನೇ ಸೆಮಿಸ್ಟರ್ ತರಗತಿಗಳು ಆರಂಭವಾಗಲಿದ್ದು, ಶೈಕ್ಷಣಿಕ ಹಿತದೃಷ್ಟಿಯಿಂದ ಕಾಯಂ ಪ್ರಾಧ್ಯಾಪಕರಿಗೆ ಹಂಚಿಕೆಯಾಗಿ ಉಳಿಕೆಯಾಗುವ ಕಾರ್ಯಭಾರಕ್ಕೆ ಅನುಕೂಲವಾಗಿ ನೇಮಕ ಮಾಡುವಂತೆ ಸೂಚನೆ ನೀಡಲಾಗಿದೆ. ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜನವರಿ 3ರಿಂದ 8ರವರೆಗೆ ಅರ್ಜಿ ಸಲ್ಲಿಸಬಹುದು. ಜನವರಿ 9ರಂದು ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ತಿದ್ದುಪಡಿಗೆ ಜನವರಿ 10 ಮತ್ತು 11ರ ವರೆಗೆ ಅವಕಾಶವಿರುತ್ತದೆ. ಜನವರಿ 13ರಂದು ಪಟ್ಟಿಯ ಅನ್ವಯ ಕಾಲೇಜು ಆಯ್ಕೆಯ ಕೌನ್ಸಿಲಿಂಗ್ ನಡೆಸಲಿದ್ದು, ಜನವರಿ 30ರಂದು ಕೌನ್ಸೆಲಿಂಗ್ ನಲ್ಲಿ ಕಾಲೇಜು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಗೆ…
ಮಡಿಕೇರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ ಗೃಹ ಆರೋಗ್ಯ ಯೋಜನೆ ಕಾರ್ಯಕ್ರಮದ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಕುಮಾರ್ ಅವರು ‘ಗೃಹ ಆರೋಗ್ಯ ಕಾರ್ಯಕ್ರಮ’ದ ಬಗ್ಗೆ ಮಾಹಿತಿಯನ್ನು ನೀಡಿದರು. 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಮನೆ ಮನೆಗೆ ತೆರಳಿ ಸಾಂಕ್ರಾಮಿಕ ವಲ್ಲದ ರೋಗಗಳ ತಪಾಸಣೆ ಮತ್ತು ಪರೀಕ್ಷೆ ಮಾಡಲಾಗುತ್ತದೆ. ಯೋಜನೆಯಡಿಯಲ್ಲಿ ಎಲ್ಲಾ ಸಾರ್ವಜನಿಕರ ಆರೋಗ್ಯ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕ ವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ. ಕೊಡಗಿನಲ್ಲಿ ಜನವರಿ 6 ರಿಂದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಜನತೆಯ ಮನೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ಸಲ್ಲಿಸುವುದು ರಾಜ್ಯ ಸರ್ಕಾರದ ಯೋಜನೆಯಾಗಿದೆ. ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರನ್ನು ಒಳಗೊಂಡ 150…
ಬೆಂಗಳೂರು : ಕೆಎಎಸ್ ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದೆ. ಮುಂದಿನ ಹತ್ತು ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ. ಕೆಎಎಸ್ ಅಧಿಕಾರಿಗಳ ಬಡ್ತಿ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,ನಮಗೆ ಸಿಕ್ಕಿರುವ ವಿದ್ಯೆ ಮತ್ತು ಅವಕಾಶಗಳ ಹಿಂದೆ ಸಮಾಜದ ಋಣ ಇದೆ. ಈ ಋಣ ತೀರಿಸುವುದು ನಮ್ಮ ಜವಾಬ್ದಾರಿ. ಎರಡು ಹೊತ್ತಿನ ಊಟಕ್ಕೆ ಶ್ರಮಿಸುತ್ತಿರುವ ಕಟ್ಟ ಕಡೆಯ ಜನರ ಪರವಾಗಿ ಅಧಿಕಾರಿಗಳು ಬದ್ಧತೆ ತೋರಿಸಬೇಕು. ಅಂಬೇಡ್ಕರ್ ಅವರ ಆಶಯ ಈಡೇರಿಸಲು ನಾವು ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೀನಿ. ಮೊದಲ ಬಾರಿ ಸಿಎಂ ಆಗಿ ಹಲವಾರು ಭಾಗ್ಯಗಳು, ಈ ಬಾರಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೀನಿ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿ ಆಹಾರ, ಶಿಕ್ಷಣ, ಮಾಹಿತಿ ಹಕ್ಕುಗಳನ್ನು ಕಡ್ಡಾಯ ಮಾಡುವ ಮೂಲಕ…
2024-25ನೇ ಸಾಲಿನಿಂದ ಕೇಂದ್ರ ಪುರಸ್ಕøತ ವಿದ್ಯಾರ್ಥಿವೇತನ ಕಾರ್ಯಕ್ರಮಗಳಿಗೆ ಆಧಾರ್ ಬಯೋಮೆಟ್ರಿಕ್ ಅಥೆಂಟಿಕೇಷನ್ ಅಂಡ್ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಈ ಸಂಬಂಧ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಈ ಪ್ರಕ್ರಿಯೆಯನ್ನು ಉಚಿತವಾಗಿ ಕೈಗೊಳ್ಳಲಾಗುವುದು. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಲ್ಲಿಯೂ ಫೆಸಿಲಿಟೇಷನ್ ಕೇಂದ್ರಗಳನ್ನು ತೆರೆದು ಇ-ದೃಢೀಕರಣ ಪಡೆಯಲಾಗುತ್ತಿದೆ. ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ನಂತರ ಕಡ್ಡಾಯವಾಗಿ ಇ-ಕೆವೈಸಿ ಧೃಡೀಕರಣ ನೊಂದಣಿ ಮಾಡಿಸಲು ಕೋರಿದೆ. ಇಲ್ಲದವಾದಲ್ಲಿ ಕೇಂದ್ರ ಸರ್ಕಾರದಿಂದ ಬರುವ ಶೇ.60 ರಷ್ಟು ವಿದ್ಯಾರ್ಥಿವೇತನ ಮಂಜೂರಾಗುವುದಿಲ್ಲ ಎಂದು ಹೊಳಲ್ಕೆರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರವು ಬ್ರಾಹ್ಮಣ ಯುವತಿಯರಿಗೆ ಸಿಹಿಸುದ್ದಿ ನೀಡಿದ್ದು, ಅರ್ಚಕ, ಪುರೋಹಿತರನ್ನು ಮದುವೆಯಾಗುವ ಬ್ರಾಹ್ಮಣ ಯುವತಿಯರಿಗೆ 3 ಲಕ್ಷ ಪ್ರೋತ್ಸಾಹಧನ ನೀಡಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಅರುಂಧತಿ ಯೋಜನೆಯಡಿ ಬಡ ಬ್ರಾಹ್ಮಣ ಹುಡುಗಿಯ ಮದುವೆ ಸ೦ದರ್ಭದಲ್ಲಿ ₹25 ಸಾವಿರ ಪ್ರೋತ್ಸಾಹ ಧನ ಹಾಗೂ ಮೈತ್ರೇಯಿ ಯೋಜನೆಯಡಿ ಅರ್ಚಕರು ಮತ್ತು ಪುರೋಹಿತರನ್ನು ವಿವಾಹವಾಗುವ ಬ್ರಾಹ್ಮಣ ಯುವತಿಯರಿಗೆ ವರ್ಷಕ್ಕೆ ₹1 ಲಕ್ಷದಂತೆ ಒಟ್ಟು 3 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಅರ್ಚಕರು ಹಾಗೂ ಪುರೋಹಿತರನ್ನು ವಿವಾಹ ಆಗಲು ಯುವತಿಯರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿಯೂ ಮೈತ್ರಿ ಯೋಜನೆ ಜಾರಿಗೆ ತರಲಾಗಿದೆ. ಅರ್ಜಿ ಸಲ್ಲಿಸುವುದ ಹೇಗೆ? ಕರ್ನಾಟಕದ ಅರುಂಧತಿ ಯೋಜನೆ / ಮೈತ್ರಿ ಯೋಜನೆಗೆ ಆನ್ಲೈನ್ ಅರ್ಜಿ ಆಹ್ವಾನಿಸುತ್ತದೆ. ನೋಂದಣಿ ನಮೂನೆಗಳನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ (https://ksbdb.karnataka.gov.in/english) ಲಭ್ಯ. ಮೈತ್ರಿ ಯೋಜನೆ ಅಥವಾ ಅರುಂಧತಿ ಯೋಜನೆಗಾಗಿ ನೋಂದಣಿ ಮಾಡಲು ಹೆಡರ್ನಲ್ಲಿರುವ “ಸೈನ್ ಇನ್”…
ತುಮಕೂರು: ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚು ಮದ್ದು ಹಾಕಿಸಿದ್ದ ಎರಡೂವರೆ ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಭಕ್ತರಹಳ್ಳಿಯಲ್ಲಿ ನಡೆದಿದೆ. ಭಕ್ತರಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಚುಚ್ಚುಮದ್ದು ಹಾಕಿಸಿದ್ದ ಎರಡೂವರೆ ತಿಂಗಳ ಗಂಡು ಮಗು ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದೆ. ಮಗು ಸಾವಿಗೆ ಚುಚ್ಚುಮದ್ದು ನೀಡಿದ್ದೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಸಿಂಗೋನಹಳ್ಳಿ ಗ್ರಾಮದ ಚೈತ್ರ ಮತ್ತು ಮುರಳಿ ದಂಪತಿಯ ಎರಡೂವರೆ ತಿಂಗಳ ಗಂಡು ಮಗು ದಕ್ಷಿತ್ ಗೆ ಗುರುವಾರ ಮಧ್ಯಾಹ್ನ ಲಸಿಕೆ ಹಾಕಿಸಲಾಗಿತ್ತು. ಭಕ್ತರಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿದ್ದು, ರಾತ್ರಿ ಮಗುವಿಗೆ ಜ್ವರ ಬಂದಿದೆ. ವಿಪರೀತ ನೋವಿನಿಂದ ನರಳಿ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಸಾರಿಗೆ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಈ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎನ್ನುವಂತೆ ಮೆಟ್ರೋ ಟಿಕೆಟ್ ದರ, ನೀರಿನ ದರ ಏರಿಕೆಯ ಸುಳುವು ಹೊರ ಬಿದ್ದಿದೆ. ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಬಿಎಂಆರ್ ಸಿಎಲ್ ಮುಂದಾಗಿದೆ. ಈ ಸಂಬಂಧ ಜನವರಿ 2ನೇ ವಾರ ಅಥವಾ 3ನೇ ವಾರದಲ್ಲಿ ಬೋರ್ಡ್ ಮೀಟಿಂಗ್ ನಡೆಯಲಿದೆ. ಈ ಸಭೆಯಲ್ಲಿ ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಬಿಎಂಆರ್ ಸಿಎಲ್ ಆಹ್ವಾನಿಸಿತ್ತು ಎನ್ನಲಾಗಿದೆ. ಈ ಆಕ್ಷೇಪಣೆಗಳ ನಡುವೆಯೂ ಶೀಘ್ರವೇ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲಾಗುವಂತ ಸುಳಿವನ್ನು ಬಿಎಂಆರ್ ಸಿಎಲ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಕಾವೇರಿ ನೀರಿನ ದರವೂ ಪರಿಷ್ಕರಣೆ ಇನ್ನೂ ನಮ್ಮ ಮೆಟ್ರೋ ಟಿಕೆಟ್ ದರ ಅಷ್ಟೇ ಅಲ್ಲದೇ ಬೆಂಗಳೂರು ಜನತೆಗೆ ಬಿಗ್ ಶಾಕ್…
ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ಸಾರಿಗೆ ಇಲಾಖೆಯಲ್ಲಿ ಶೀಘ್ರವೇ 9,000 ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಶೀಘ್ರವೇ ಸಾರಿಗೆ ಇಲಾಖೆಯಲ್ಲಿ 9000 ಹೊಸ ಸಿಬ್ಬಂದಿಗಳ ನೇಮಕಾತಿ ಮಾಡಲಾಗುತ್ತದೆ. 4 ನಿಗಮಗಳಿಗೆ ಶಕ್ತಿ ಯೋಜನೆಯ 8,800 ಕೋಟಿ ಹಣ ಬಿಡುಗಡೆ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಸಿಬ್ಬಂದಿಗಳಿಗೆ ವೇತನ ಸಮಸ್ಯೆ ಆಗಿಲ್ಲ. ಮೊದಲೇ ಇತ್ತು. ಬಿಜೆಪಿಯವರು ಮಹಿಳಾ ವಿರೋಧಿಗಳು, ಹಾಗಾಗಿ ಶಕ್ತಿ ಯೋಜನೆಯನ್ನು ವಿರೋಧ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು. 2020 ಜನವರಿ 26 ರಲ್ಲಿ ಅವರು 12 ಪರ್ಸೆಂಟ್ ಟಿಕೆಟ್ ದರ ಏರಿಕೆ ಮಾಡಿದರು.ಆಗ ಜನರಿಗೆ ತೊಂದರೆ ಆಗಲಿಲ್ಲವೇ? ಬಿಜೆಪಿಯವರು 5,900 ಕೋಟಿ ರೂಪಾಯಿ ಸಾಲ ಬಿಟ್ಟು ಹೋಗಿದ್ದಾರೆ.ಬಿಜೆಪಿಯವರು 5,900 ಕೋಟಿ ಸಾಲ ಬಿಟ್ಟು ಹೋಗದೆ ಇದ್ದಿದ್ದರೆ ನಾವು ಟಿಕೆಟ್ ದರ ಏರಿಕೆ ಮಾಡುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು…
ಬೆಂಗಳೂರು : ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು / ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಬಡ್ತಿಗೆ ಅರ್ಹರಿರುವ ಸರ್ಕಾರಿ ಪ್ರೌಢ / ಪದವಿ ಪೂರ್ವ ಕಾಲೇಜುಗಳಲ್ಲಿ (ಪ್ರೌಢ ಶಾಲಾ ವಿಭಾಗ) ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-2 ಪ್ರೌಢಶಾಲಾ ಸಹ ಶಿಕ್ಷಕರುಗಳ ಜೇಷ್ಠತಾ ಪಟ್ಟಿಯನ್ನು ಉಲ್ಲೇಖ (1) ರಂತೆ ಪ್ರಕಟಿಸಿ, ಸದರಿ ಜೇಷ್ಠತಾ ಪಟ್ಟಿಯನ್ನು ಆಧರಿಸಿ ಅರ್ಹತೆ ಹೊಂದಿದ ಸಹ ಶಿಕ್ಷಕರುಗಳಿಗೆ ಸ್ಥಾನಪನ್ನ ಬಡ್ತಿಯನ್ನು ನೀಡುವ ಸಂಬಂಧವಾಗಿ ಅವಶ್ಯಕ ದಾಖಲೆಗಳನ್ನು ಸಲ್ಲಿಸಲು ಉಲ್ಲೇಖ (2) ರ ಈ ಕಚೇರಿ ಜ್ಞಾಪನದಂತೆ ತಿಳಿಸಲಾಗಿತ್ತು. ಪ್ರಸ್ತುತ ಉಲ್ಲೇಖ (3) ರಂತೆ…












