Subscribe to Updates
Get the latest creative news from FooBar about art, design and business.
Author: kannadanewsnow57
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸುಂದರವಾದ ಕೂದಲು ಎಲ್ಲರಿಗೂ ಮುಖ್ಯವಾದ ವಿಷಯ. ಆದ್ರೆ, ಸುಮಾರು 80 ಪ್ರತಿಶತ ಪುರುಷರು ಮತ್ತು 50 ಪ್ರತಿಶತ ಮಹಿಳೆಯರು ಕೂದಲು ಉದುರುವುದು ಮತ್ತು ತೆಳುವಾಗುವಂತಹ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಈಗ ಈ ಸಮಸ್ಯೆಗೆ ಹೊಸ ಪರಿಹಾರವಿದ್ದು, ವಿಜ್ಞಾನಿಗಳು ಹೊಸ ಔಷಧವನ್ನ ಅಭಿವೃದ್ಧಿಪಡಿಸಿದ್ದಾರೆ. ಇದು ಬೆಳೆಯುವುದನ್ನ ನಿಲ್ಲಿಸಿರುವ ಕೂದಲು ಕಿರುಚೀಲಗಳನ್ನ ಪುನಃ ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದಕ್ಕೂ ಪ್ರಸ್ತುತ ಔಷಧಿಗಳಿಗೂ ಏನು ವ್ಯತ್ಯಾಸ? ಮಿನೊಕ್ಸಿಡಿಲ್ ಮತ್ತು ಫಿನಾಸ್ಟರೈಡ್ ನಂತಹ ಸಾಮಾನ್ಯವಾಗಿ ಲಭ್ಯವಿರುವ ಔಷಧಿಗಳು ಕೂದಲು ಉದುರುವಿಕೆಯನ್ನ ಮಾತ್ರ ಕಡಿಮೆ ಮಾಡುತ್ತವೆ. ಆದಾಗ್ಯೂ, PP405 ಎಂಬ ಹೊಸದಾಗಿ ಅಭಿವೃದ್ಧಿಪಡಿಸಲಾದ ಅಣುವು ಕೂದಲಿನ ಬೆಳವಣಿಗೆಯನ್ನ ಉತ್ತೇಜಿಸುತ್ತದೆ. ಇದು ಸುಪ್ತ ಕೂದಲು ಕಿರುಚೀಲಗಳನ್ನ ಜಾಗೃತಗೊಳಿಸುತ್ತದೆ. ಅದು ಹೇಗೆ ಕೆಲಸ ಮಾಡುತ್ತದೆ? ಕೂದಲು ಕೋಶಕ ಕಾಂಡಕೋಶಗಳು ಸಕ್ರಿಯವಾಗಿದ್ದಾಗ, ಅವು ಕೂದಲನ್ನು ಮತ್ತೆ ಬೆಳೆಯುತ್ತವೆ. ಅವು ಸುಪ್ತ ಸ್ಥಿತಿಯಲ್ಲಿದ್ದಾಗ, ಕೂದಲಿನ ಬೆಳವಣಿಗೆ ನಿಲ್ಲುತ್ತದೆ. ಈ ಜೀವಕೋಶಗಳು ಸಕ್ರಿಯವಾಗಿದ್ದಾಗ, ಅವು…
ಬೆಂಗಳೂರು : ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಮತ್ತು ಮಾಜಿ ದೇವದಾಸಿಯರ ಸಮಗ್ರ ಪುನರ್ವಸತಿಗಾಗಿ ಕರ್ನಾಟಕದಲ್ಲಿ ಮರು ಸಮೀಕ್ಷೆ ನಡೆಸಲು ಹಲವು ಸಂಸ್ಥೆಗಳು ಮತ್ತು ರಾಜಕಾರಣಿಗಳು ಒತ್ತಾಯಿಸಿದ್ದಾರೆ. ಇದಕ್ಕಾಗಿ, 45 ವರ್ಷಗಳ ವಯಸ್ಸಿನ ಮಿತಿಯನ್ನು ಕೈಬಿಟ್ಟು, ಎಲ್ಲಾ ವಯಸ್ಸಿನ ದೇವದಾಸಿಯರನ್ನು ಒಳಗೊಳ್ಳಬೇಕು ಮತ್ತು ಸಮೀಕ್ಷೆಯನ್ನು ಮನೆ-ಮನೆಗೆ ತೆರಳಿ ನಡೆಸಬೇಕು ಎಂದು ಆಗ್ರಹಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ದೇವದಾಸಿಯರ ಮರು ಸಮೀಕ್ಷೆಗೆ ನಿರ್ಧರಿಸಿದ್ದು, ಇಂದು ಸಿಎಂ ಚಾಲನೆ ನೀಡಿದರು.ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. https://twitter.com/CMofKarnataka/status/1963562510482563103
ಬೆಂಗಳೂರು : ಬೆಂಗಳೂರಿನಲ್ಲಿ ಪ್ರಿಯಕರನಿಗಾಗಿ 3 ಮಕ್ಕಳನ್ನು ಬಿಟ್ಟು ತಾಯಿ ಒಬ್ಬಳು ಓಡಿ ಹೋಗಿದ್ದು, ಹೆಂಡತಿಗಾಗಿ ಗಂಡ ಗೋಳಾಟ ನಡೆಸಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ಘಟನೆ ನಡೆದಿದ್ದು, 11 ವರ್ಷದ ಹಿಂದೆ ಮಂಜುನಾಥ್ ಎಂಬುವರ ಜೊತೆಗೆ ಮದುವೆಯಾಗಿದ್ದ ಲೀಲಾವತಿ ಭಾನುವಾರ ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ. ತಾಯಿಗಾಗಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಲೀಲಾವತಿ ಪ್ರಿಯಕರನೊಂದಿಗೆ ಓಡಿ ಹೋಗಿದ್ದು, ಪೊಲೀಸರ ಮುಂದೆಯೂ ನನಗೆ ಪ್ರಿಯಕರ ಬೇಕೆಂದು ಪಟ್ಟು ಹಿಡಿದಿದ್ದಾಳೆ. ಇದರಿಂದ ಗಂಟ ಮಂಜುನಾಥ್ ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಗೋಳಾಟ ನಡೆಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಯೋಜನೆಗಳು ಕುರಿತ ಮಾಹಿತಿಯನ್ನು ಈ ಕೆಳಕಂಡಂತೆ ನೀಡಲಾಗಿದೆ. ಸ್ವಯಂ ಉದ್ಯೋಗ ಕಾರ್ಯಕ್ರಮಗಳು : ನೇರಸಾಲ ಯೋಜನೆ-ಕಿರು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ನಿಗಮದಿಂದ ಸಹಾಯಧನ ಮತ್ತು ನೇರಸಾಲ ಮಂಜೂರು ಮಾಡಲಾಗುತ್ತದೆ. ಹೈನುಗಾರಿಕೆ (ಬ್ಯಾಂಕ್ಗಳ ಸಹಯೋಗದೊಂದಿಗೆ)-ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ಹಸುಗಳಿಗೆ ಘಟಕ ವೆಚ್ಚದ ಶೇ. 50 ರಷ್ಷು ಅಥವಾ ಗರಿಷ್ಟ ರೂ. 1.25ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಸ್ವಾವಲಂಬಿ ಸಾರಥಿ (ಬ್ಯಾಂಕ್ಗಳ ಸಹಯೋಗದೊಂದಿಗೆ)-ಸರಕು ವಾಹನ / ಟ್ಯಾಕ್ಸಿ (ಹಳದಿ ಬೋರ್ಡ್) ಉದ್ದೇಶದಡಿ ಘಟಕ ವೆಚ್ಚದ ಶೇ. 75 ರಷ್ಟು ಅಥವಾ ಗರಿಷ್ಟ ರೂ. 4 ಲಕ್ಷಗಳ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ. ಉದ್ಯಮ ಶೀಲತಾ ಯೋಜನೆ- (ಬ್ಯಾಂಕ್ಗಳ ಸಹಯೋಗದೊಂದಿಗೆ) ಇತರೆ ಉದ್ದೇಶ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಘಟಕ ವೆಚ್ಚದ ಶೇ.70ರಷ್ಟು ಸಹಾಯಧನ ಅಥವಾ ಗರಿಷ್ಟ ರೂ. 2 ಲಕ್ಷ ಸಹಾಯಧನ ನೀಡಲಾಗುತ್ತದೆ.…
ಬೆಂಗಳೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಶಿವನಗೆರೆ ಗ್ರಾಮದ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಪೊಲೀಸರು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ದೇವಸ್ಥಾನದ ಬಳಿ ಮಾಂಸಾಹಾರ ಸೇವಿಸುವ ಬಗ್ಗೆ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ತಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ತುಮಕೂರು ಜಿಲ್ಲೆಯ ಶಿವನಗೆರೆ ಗ್ರಾಮದಲ್ಲಿರುವ ಶ್ರೀ ಹೊನ್ನೇಶ್ವರ ದೇವರ ದೇವಸ್ಥಾನದ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವಿಸುವುದನ್ನು ನಿಷೇಧಿಸುವ ನ್ಯಾಯವ್ಯಾಪ್ತಿಯ ಪೊಲೀಸರು ಹೊರಡಿಸಿದ ನಿರ್ದೇಶನವನ್ನು ಟ್ರಸ್ಟ್ ಪ್ರಶ್ನಿಸಿದೆ. ಜುಲೈ 13, 2024 ರಂದು ಪ್ರಕಟವಾದ ಪ್ರಶ್ನಾರ್ಹ ನೋಟಿಸ್, ಹೈಕೋರ್ಟ್ನ ಹಿಂದಿನ ಆದೇಶವನ್ನು ಉಲ್ಲೇಖಿಸುತ್ತದೆ. ನಿರ್ದಿಷ್ಟ ಪ್ರದೇಶದೊಳಗೆ ಪ್ರಾಣಿ ಬಲಿ ಅಥವಾ ಮಾಂಸ ಸೇವನೆಯ ಮೇಲಿನ ನಿಷೇಧದ ಯಾವುದೇ ಉಲ್ಲಂಘನೆಯು ದಂಡದ ಕ್ರಮಕ್ಕೆ ಕಾರಣವಾಗುತ್ತದೆ ಎಂದು…
ಬೆಳಗಾವಿ : ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮತ್ತೊಂದು ಕರ್ಮಕಂಡ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ನರ್ಸ್ ವೇಷ ಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೌದು, ಯುವತಿಯೊಬ್ಬಳು ನರ್ಸ್ ಗಳಂತೆ ವೇಷತೊಟ್ಟು ಬಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಸನಾ ಶೇಖ್ ಎಂಬ ಯುವತಿ ಬಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ರಂತೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆ ವಿಭಾಗವೊಂದರ ಮುಖ್ಯಸ್ಥರ ಕುಮ್ಮಕ್ಕಿನಿಂದ ಯುವತಿ ಈ ರೀತಿ ಮಾಡುತ್ತಿದ್ದಾಳೆ ಎನ್ನಲಾಗಿದೆ. ಪ್ರಶ್ನಿಸಿದಾಗ ತಾನು ತರಬೇತಿಗೆ ಬದಿದ್ದಾಗಿ ಹೇಳಿಕೊಳ್ಳುತ್ತಿದ್ದು, ಆದರೆ ತರಬೇತಿಗೆಂದು ಆಕೆಯನ್ನು ಬಿಮ್ಸ್ ಆಸ್ಪತ್ರೆಯಲ್ಲಿ ನೇಮಕ ಮಾಡಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆ ಮುಖ್ಯಸ್ಥರೊಬ್ಬರು ಯುವತಿಯನ್ನು ಕರೆತಂದಿದ್ದು, ತಮಗೆ ಬೇಕಾದ ರೋಗಿಗಳನ್ನು ಇಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಜಿಕಲ್ ವಾರ್ಡ್, ಒಟಿಯಲ್ಲಿ ಯುವತಿ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದು, ಈ ಬಗ್ಗೆ ಬಿಮ್ಸ್ ನಿರ್ದೇಶಕರು ಹಾಗೂ ಸರ್ಜನ್ ಯುವತಿ ಸನಾಳ ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸೋನಿಯಾ ಗಾಂಧಿಗೆ ಮಹಿಳಾ ಸಂಘಟನೆಗಳ ಒಕ್ಕೂಟ ಪತ್ರ ಬರೆದಿದ್ದಾರೆ. ಹೌದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯದ 10 ಮಹಿಳಾ ಸಂಘಟನೆಗಳು, 40 ಮಹಿಳಾ ಹೋರಾಟಗಾರರು ಸೋನಿಯಾಗಾಂಧಿಗೆ ಪತ್ರ ಬರೆದಿದ್ದು, ಎಸ್ ಐಟಿ ತನಿಖೆಯ ಬಗ್ಗೆ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಆರೋಪಿ ಚಿನ್ನಯ್ಯನ ಬಂಧನ, ಸುಜಾತ್ ಭಟ್ ಪ್ರಕರಣ ಹಾಗೂ ಮಾಧ್ಯಮಗಳ ವರದಿ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೊಂದವರು ಯಾರು ಹೆಸರಿನಲ್ಲಿ ಸೋನಿಯಾಗಾಂಧಿಗೆ ಪತ್ರ ಬರೆಯಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆಯೂ ಹೋರಾಟಗಾರರು ಪ್ರಸ್ತಾಪಿಸಿದ್ದಾರೆ. ಧರ್ಮಸ್ಥಳ ಕೇಸ್ ನಲ್ಲಿ ಷಡ್ಯಂತ್ರ ನಡೆದಿದೆ ಇದರಲ್ಲಿ ಹುರುಳಿಲ್ಲ ಎಂದು ಡಿ.ಕೆ. ಶಿವಕುಮಾರ್ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಡಿಸಿಎಂ ಡಿಕೆಶಿ ಹೇಳಿಕೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಪಕ್ಷಗಳ ಒತ್ತಡಕ್ಕೆ ಮಣಿದು ಧರ್ಮಸ್ಥಳದ ವರದಿ ಮಾಡುವ ಯೂಟ್ಯೂಬ್ ಚಾನೆಲ್ ಗಳನ್ನು ನಿಷೇಧ ಮಾಡಿದ್ದಾರೆ ಎಂದು ಹೇಳಿವೆ. ಇನ್ನು ಸೋನಿಯಾಗಾಂಧಿಗೆ ಬರೆದ ಪತ್ರದಲ್ಲಿ…
ಬೆಂಗಳೂರು: ಅಧಿಕ ರಕ್ತದೊತ್ತಡ ಇನ್ನು ಮುಂದೆ ವೃದ್ಧರನ್ನು ಕಾಡುವ ಕಾಯಿಲೆಯಲ್ಲ. ಆರು ವಾರಗಳ ವಯಸ್ಸಿನ ಮಕ್ಕಳು ಕೂಡ ರಾಜ್ಯದಲ್ಲಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 2024-25ರಲ್ಲಿ ರಾಜ್ಯ ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಲ್ಲಿ ಸುಮಾರು 7.2 ಲಕ್ಷ ಮಕ್ಕಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ. ಆರೋಗ್ಯ ಇಲಾಖೆಯು ಪ್ರತಿ ವರ್ಷ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಮತ್ತು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಅಡಿಯಲ್ಲಿ ಬರುವ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 6 ವಾರಗಳಿಂದ 18 ವರ್ಷ ವಯಸ್ಸಿನ ಮಕ್ಕಳ ನಿಯಮಿತ ತಪಾಸಣೆ ನಡೆಸುತ್ತದೆ. 2024-25ರಲ್ಲಿ ಅವರು 40 ಸ್ಥಿತಿಗಳಿಗೆ 1.23 ಕೋಟಿ ಮಕ್ಕಳನ್ನು ಪರೀಕ್ಷಿಸಿದರು. ಅವರನ್ನು ಮೊದಲ ಬಾರಿಗೆ ಅಧಿಕ ರಕ್ತದೊತ್ತಡಕ್ಕಾಗಿ ಪರೀಕ್ಷಿಸಲಾಯಿತು. ರೋಗನಿರ್ಣಯ ಮಾಡಿದ ಮಕ್ಕಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC) ಅಥವಾ ಎಂಪನೇಲ್ಡ್ ಆಸ್ಪತ್ರೆಗಳಿಗೆ ಉಲ್ಲೇಖಿಸಲಾಗುತ್ತದೆ, ಅಲ್ಲಿ ಅವರಿಗೆ ಔಷಧಿಗಳನ್ನು ಸೂಚಿಸಲಾಗುತ್ತದೆ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡಲು ಸಲಹೆಗಳನ್ನು ನೀಡಲಾಗುತ್ತದೆ. ಕರ್ನಾಟಕದಲ್ಲಿ ಬುಧವಾರ ಅಧಿಕ ರಕ್ತದೊತ್ತಡದ…
ಬೆಂಗಳೂರು : ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ ಯಿಂದ ಪ್ರದಾನ ಮಾಡಲಾಗುವ 2025-26ನೇ ಸಾಲಿನ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದ 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರು ಸೇರಿ 31 ಶಿಕ್ಷಕರು ಆಯ್ಕೆಯಾಗಿ ದ್ದಾರೆ. ಪಿಯು ವಿಭಾಗದಲ್ಲಿ 10 ಉಪನ್ಯಾಸಕರು, ಪ್ರಾಂಶುಪಾಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಉತ್ತಮ ಶಿಕ್ಷಕರು ಪಟ್ಟಿಯಲ್ಲಿನ ಇಬ್ಬರು ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಪುಲೆ’ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 25,000 ರು. ನಗದು ಮತ್ತು ಫಲಕ ಒಳಗೊಂಡಿದೆ. ಸೆ.5ರಂದು ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಓರ್ವ ವಿಶೇಷ ಶಿಕ್ಷಕರೂ ಒಳಗೊಂಡಂತೆ) 2025-26 ನೇ ಸಾಲಿಗೆ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ. ರಾಜ್ಯ…
ಬೆಂಗಳೂರು: ಚಿನ್ನದಂಘಡಿಗೆ ನುಗ್ಗಿದ್ದ ಕಳ್ಳರ ಗ್ಯಾಂಗ್ ಪ್ಲಾಸ್ಟಿಕ್ ಗನ್ ತೋರಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೊಹಮ್ಮದ್ ರಫಿಕ್, ಮೊಹಮ್ಮದ್ ಇಬ್ತೇಕರ್, ರಂಶಾದ್ ಬಂಧಿತ ಆರೋಪಿಗಳು. ನಾಲ್ವರ ಪೈಕಿ ಮೂವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತರು ಉಡುಪಿ, ಒಡಿಶಾ, ಮಂಗಳೂರು ಮೂಲದ ಆರೋಪಿಗಳು ಎನ್ನಲಾಗಿದೆ. ಜೂನ್ 25ರಂದು ಮಾಗಡಿ ರಸ್ತೆಯ ಮಾಚೇನಹಳ್ಳಿಯಲ್ಲಿ ಜ್ಯುವೆಲ್ಲರಿ ಶಾಪ್ ಗೆ ಗ್ಯಾಂಗ್ ವೊಂದು ನುಗ್ಗಿತ್ತು. ಪ್ಲಾಸ್ಟಿಕ್ ಗನ್ ಹಿಡಿದು ಅಂಗಡಿ ಮಾಲೀಕನನ್ನು ಬೆದರಿಸಿ 90 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸದ್ಯ ಬಂಧಿತ ಆರೋಪಿಗಳಿಂದ 90 ಗ್ರಾಂ ಚಿನ್ನ, ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.