Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಭಾರತದಲ್ಲಿ ಮಾನವ ಮೆಟಾಪ್ನ್ಯೂಮೋವೈರಸ್ (HMPV) ಪ್ರಕರಣಗಳ ಒಟ್ಟು ಸಂಖ್ಯೆ 14 ಕ್ಕೆ ತಲುಪಿದೆ. ಗುಜರಾತ್‌ನಲ್ಲಿ ಅತಿ ಹೆಚ್ಚು (4) ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ತಲಾ ಒಂದು ಪ್ರಕರಣ ಕಂಡುಬಂದಿದೆ. ಬರಾನ್‌ನಲ್ಲಿ 6 ತಿಂಗಳ ಹೆಣ್ಣು ಮಗುವಿಗೆ HMPV ಸೋಂಕು ತಗುಲಿದೆ. ಅಹಮದಾಬಾದ್‌ನಲ್ಲಿ 9 ತಿಂಗಳ ಮಗುವಿಗೆ HMPV ಪಾಸಿಟಿವ್ ಇರುವುದು ಕಂಡುಬಂದಿದೆ. ಇದಕ್ಕೂ ಮೊದಲು, ಗುರುವಾರ 3 ಪ್ರಕರಣಗಳು ಕಂಡುಬಂದಿದ್ದವು. ಇವರಲ್ಲಿ ಲಕ್ನೋದಲ್ಲಿ 60 ವರ್ಷದ ಮಹಿಳೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ 80 ವರ್ಷದ ವ್ಯಕ್ತಿ ಮತ್ತು ಹಿಮ್ಮತ್ ನಗರದಲ್ಲಿ 7 ವರ್ಷದ ಮಗು ಸೇರಿದ್ದಾರೆ. ಮೂವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ HMPV ಪ್ರಕರಣಗಳ ಹೆಚ್ಚಳದಿಂದಾಗಿ ರಾಜ್ಯಗಳು ಸಹ ಜಾಗರೂಕತೆಯನ್ನು ಹೆಚ್ಚಿಸಿವೆ. ಪಂಜಾಬ್‌ನಲ್ಲಿ, ವೃದ್ಧರು ಮತ್ತು ಮಕ್ಕಳು ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಗುಜರಾತ್‌ನಲ್ಲಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಮಾಡಲಾಗುತ್ತಿದೆ. ಹರಿಯಾಣದಲ್ಲಿಯೂ ಸಹ, ಆರೋಗ್ಯ ಇಲಾಖೆಗೆ HMPV ಪ್ರಕರಣಗಳ ಮೇಲೆ ನಿಗಾ ಇಡಲು ಆದೇಶಿಸಲಾಗಿದೆ. ಚಿಕ್ಕ ಮಕ್ಕಳು ಹೆಚ್ಚು…
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಬಡತನಕ್ಕೆ ಸಂಬಂಧಿಸಿದ ವಿವಿಧ ಆರ್ಥಿಕ ಸಂಶೋಧನಾ ವರದಿಗಳು ಪ್ರಕಟವಾಗುತ್ತಿದ್ದು, ನಗರಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಬಡತನ ವೇಗವಾಗಿ ಕಡಿಮೆಯಾಗುತ್ತಿದೆ ಮತ್ತು ಆದಾಯ ಮತ್ತು ಕೊಳ್ಳುವ ಶಕ್ತಿ ಕೂಡ ವೇಗವಾಗಿ ಹೆಚ್ಚುತ್ತಿದೆ ಎಂಬ ಅಂಶವನ್ನು ಎತ್ತಿ ತೋರಿಸುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಂಶೋಧನೆ ಬಿಡುಗಡೆ ಮಾಡಿದ ಬಡತನದ ಕುರಿತಾದ ಇತ್ತೀಚಿನ ವರದಿಯು, ಬಡವರಿಗೆ ನೇರವಾಗಿ ಪ್ರಯೋಜನವಾಗುವ ಸರ್ಕಾರಿ ಬೆಂಬಲ ಕಾರ್ಯಕ್ರಮಗಳು ಮತ್ತು ಬೆಳವಣಿಗೆಯ ಸಕಾರಾತ್ಮಕ ಪರಿಣಾಮಗಳಿಂದಾಗಿ ಬಡತನ ಕಡಿಮೆಯಾಗಿದೆ ಎಂದು ಹೇಳಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿವಾರಣೆ ವೇಗವಾಗಿ ಸಂಭವಿಸಿದೆ. 2011-12ನೇ ಸಾಲಿನಲ್ಲಿ ಗ್ರಾಮೀಣ ಬಡತನ ಶೇ. 25.7 ಮತ್ತು ನಗರ ಬಡತನ ಶೇ. 13.7 ರಷ್ಟಿದ್ದರೆ, 2023-24ನೇ ಸಾಲಿನಲ್ಲಿ ಗ್ರಾಮೀಣ ಬಡತನ ಶೇ. 4.86 ಕ್ಕೆ ಇಳಿಕೆಯಾದ್ರೆ ಮತ್ತು ನಗರ ಬಡತನ ಶೇ. 4.09 ಕ್ಕೆ ಇಳಿಯಲಿದೆ. ಈ ವರದಿಯ ಪ್ರಕಾರ, ಕಳೆದ 14 ವರ್ಷಗಳಲ್ಲಿ, ಆದಾಯದಲ್ಲಿನ ಹೆಚ್ಚಳದಿಂದಾಗಿ, ನಗರಗಳಲ್ಲಿ…
ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು, ತಮ್ಮ ಪ್ರಭಾವ ಬಳಸಿಕೊಂಡು, ಟಿ.ಚೌಡಯ್ಯ ಎಂಬುವವರ ಹೆಸರಿನಲ್ಲಿ ಅಕ್ರಮವಾಗಿ 50:50 ಅನುಪಾತದಲ್ಲಿ ನಿವೇಶನಗಳನ್ನು ಮಂಜೂರು ಮಾಡಿಸಿ, 50*80 ಅಳತೆಯ ಎರಡು ನಿವೇಶನಗಳನ್ನು ತಮ್ಮ ಮಗಳು, ಅಳಿಯನ ಹೆಸರಿಗೆ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸ್ನೇಹಮಯಿ ಕೃಷ್ಣ ಅವರು ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಮೈಸೂರು ಲೋಕಾಯುಕ್ತಕ್ಕೆ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಅವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರವರು, ತಮ್ಮ ಪ್ರಭಾವ ವನ್ನು ಬಳಸಿಕೊಂಡು, ಸರ್ಕಾರಕ್ಕೆ ಸೇರಿದ ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಸಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆ.ಚೌಡಯ್ಯ ಎಂಬುವವರ ಹೆಸರಿಗೆ 50:50 ಅನುಪಾತದಲ್ಲಿ ಒಟ್ಟು ಆರು ನಿವೇಶನಗಳನ್ನು ಅಕ್ರಮವಾಗಿ ಕೊಡಿಸಿ, ಅದರಲ್ಲಿ 50+80 ಅಡಿ ಅಳತೆಯ ಎರಡು ನಿವೇಶನಗಳನ್ನು ಅವರ ಮಗಳು ಶ್ರೀಮತಿ ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯನವರ ಹೆಸರಿಗೆ ಪಡೆದುಕೊಂಡಿರುವ ಬಗ್ಗೆ ತನಿಖೆ ನಡೆಸಿ, ಎಲ್ಲಾ ತಪಿತಸ್ಥರನ್ನು…
ಬೆಂಗಳೂರು: ಜನವರಿ.20, 2025ರಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರದಿಂದ ಬಿಯರ್ ದರ ಏರಿಕೆಗೆ ಮುಂದಾಗಿರುವುದಾಗಿ ತಿಳಿದು ಬಂದಿದೆ. ಆ ಮೂಲಕ ಮದ್ಯಪ್ರಿಯರಿಗೆ ಶಾಕ್ ನೀಡಲು ಸಜ್ಜಾಗಿದೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರವು ಶೀಘ್ರವೆ ಬಿಯರ್ ಬೆಲೆಯಲ್ಲಿ 10 ರಿಂದ 50 ರೂ.ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗಿದ್ದು, ಬಿಯರ್ ನಲ್ಲಿನ ಅಲ್ಕೋಹಾಲ್ ಅಂಶದ ಮೇಲೆ ದರ 10 ರಿಂದ 50 ರೂ.ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್ ಗಳ ಬೆಲೆ ಯಥಾಸ್ಥಿತಿ ಇರಲಿದ್ದು, ಸ್ಟ್ರಾಂಗ್ ಬಿಯರ್ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜನವರಿ 20 ರಿಂದ ದರ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಯರ್ ಪ್ರಿಯರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಐಎಂಎಲ್ ಹಾಗೂ ಬಿಯರ್ ಸ್ಪ್ಯಾಬ್‌ಗಳನ್ನು ಪರಿಷ್ಕರಿಸಲಾಗುವುದು ಎಂದು ಪ್ರಕಟಿಸಿದ್ದರು. ಅದರಂತೆ, ಐಎಂಎಲ್ ದರ ಪರಿಷ್ಕರಿಸಲಾಗಿತ್ತು. ಆದರೆ, ಬಿಯರ್ ಮೇಲಿನ…
ಚಿಕ್ಕಮಗಳೂರು : ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲೇ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತಿಯಾದ ಬೆನ್ನಲ್ಲೇ ಇದೀಗ ನಕ್ಸಲರ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಇದೀಗ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಳೆಹೊಳೆ ಕಳಸದ ವನಜಾಕ್ಷಿ, ಮುಂಡಗಾರು ಶೃಂಗೇರಿಯ ಲತಾ, ದಕ್ಷಿಣ ಕನ್ನಡದ ಕುಂತಲೂರಿನ ಸುಂದರಿ, ರಾಯಚೂರಿನ ಮಾರಪ್ಪೆ ಅರೋಳಿ, ತಮಿಳುನಾಡಿನ ವಸಂತ ಟಿ. ಕೇರಳದ ಎನ್.ಜೀಶಾ ಅವರು ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ಇದೀಗ ಪೊಲೀಸರು ಅವರು ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಕೊಪ್ಪ ತಾಲೂಕಿನ ಮೇಗೂರು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಮಗಳುರು ಜಿಲ್ಲೆಯ ಜಯಪುರ ಠಾಣಾ ವ್ಯಾಪ್ತಿಯ ಮೇಗೂರು ಅರಣ್ಯ ಪ್ರದೇಶದಲ್ಲಿ ಕೊಪ್ಪ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆ ಕೈಗೊಂಡು, 6 ಮಂದಿ ನಕ್ಸಲರು ಗುಂಡಿತೋಡಿ ಬಚ್ಚಿಟ್ಟಿದ್ದ ಎಕೆ 47, ರಿವಾಲ್ವಾರ್, ಬಂದೂಕು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮುಖ್ಯಮಂತ್ರಿ ಸಿದ್ಧರಾಮಯ್ಯ…
ಚಿಕ್ಕಮಗಳೂರು : ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲೇ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತಿಯಾದ ಬೆನ್ನಲ್ಲೇ ಇದೀಗ ನಕ್ಸಲರ ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಇದೀಗ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಳೆಹೊಳೆ ಕಳಸದ ವನಜಾಕ್ಷಿ, ಮುಂಡಗಾರು ಶೃಂಗೇರಿಯ ಲತಾ, ದಕ್ಷಿಣ ಕನ್ನಡದ ಕುಂತಲೂರಿನ ಸುಂದರಿ, ರಾಯಚೂರಿನ ಮಾರಪ್ಪೆ ಅರೋಳಿ, ತಮಿಳುನಾಡಿನ ವಸಂತ ಟಿ. ಕೇರಳದ ಎನ್.ಜೀಶಾ ಅವರು ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ಇದೀಗ ಪೊಲೀಸರು ಅವರು ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಕೊಪ್ಪ ತಾಲೂಕಿನ ಮೇಗೂರು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ವಶಕ್ಕೆ ಪಡೆದುಕೊಂಡಿದ್ದಾರೆ. ನಕ್ಸಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮುಂದೆ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತರಾಗಿದ್ದರು. ಹೀಗೆ ಶರಣಾದಂತ ಆರು ನಕ್ಸಲರಿಗೆ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿಯಲ್ಲಿ ತಲಾ 3 ಲಕ್ಷ ಸಹಾಯಧನವನ್ನು ಬಿಡುಗಡೆ ಮಾಡಿ ಆದೇಶಿಸಿದೆ. ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮಂಜೂರಾತಿ ಆದೇಶ…
ಬೆಳಗಾವಿ: ಡಿಸಿಎಂ ಡಿ.ಕೆ ಶಿವಕುಮಾರ್ ಟೆಂಪಲ್ ರನ್ ನಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ವಿನಯ್ ಗುರೂಜಿ ಅವರು ಗುರುಗಳ ದಯೆಯಿಂದ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ವಿನಯ್ ಗುರೂಜಿ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವಂತ ಯೋಗವಿದೆ. ಗುರುಗಳ ದಯೆ, ಬಲದಿಂದ ಮುಖ್ಯಮಂತ್ರಿ ಆಗಲಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಇಚ್ಚೆಯಾಗಿದೆ. ಗುರುಗಳ ದಯೆಯಿಂದ ಅವರು ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಡಿ.ಕೆ. ಶಿವಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ. ಅವರು ಸಿಎಂ ಆದರೆ ನಾನು ಖುಷಿಪಡುತ್ತೇನೆ. ನಾಟಕ ಇಲ್ಲದ ರಾಜಕಾರಣಿ ಅವರು, ಅವರಿಗೆ ನಾಟಕ ಮಾಡಲು ಬರುವುದಿಲ್ಲ. ವೈಕುಂಠ ಏಕಾದಶಿ ದಿನ ಡಿಕೆಶಿ ಸಿಎಂ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮಿಳುನಾಡಿನಲ್ಲಿ ಟೆಂಪಲ್ ರನ್ ನಡೆಸುತ್ತಿದ್ದಾರೆ. ವಿವಿಧ ದೇವಾಲಯಗಳಿಗೆ ಭೇಟಿ ನೀಡಿ…
ನವದೆಹಲಿ : ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯಕ್ಕೆ ತೆರಿಗೆ ಪಾಲಿನ ಕಂತಿನ ರೂಪದಲ್ಲಿ 6310 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರ ಶುಕ್ರವಾರ ವಿವಿಧ ರಾಜ್ಯಗಳಿಗೆ 1.73 ಲಕ್ಷ ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ 6310.40 ಕೋಟಿ ರೂ. ಬಿಡುಗಡೆ ಮಾಡಿದೆ. ಡಿಸೆಂಬರ್ ತಿಂಗಳಲ್ಲಿ 28 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ 89,086 ಕೋಟಿ ರೂ. ಬಿಡುಗಡೆ ಮಾಡಬೇಕಿತ್ತು. ಬದಲಾಗಿ ರಾಜ್ಯ ಸರ್ಕಾರಗಳಿಗೆ 1,73,030 ಕೋಟಿ ರೂ. ತೆರಿಗೆ ಹಂಚಿಕೆ ಪಾಲು ನೀಡಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ. ರಾಜ್ಯಗಳು ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸಲು ಈ ತಿಂಗಳು ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದ 15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇಕಡ 41ರಷ್ಟನ್ನು ಒಂದು ಆರ್ಥಿಕ ವರ್ಷದಲ್ಲಿ ರಾಜ್ಯಗಳ ನಡುವೆ ಕಂತುಗಳಲ್ಲಿ ಕೇಂದ್ರ ಸರ್ಕಾರವು…
ಬೆಂಗಳೂರು: ಅಂತರ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಂತ ಸಾರಿಗೆ ನೌಕರರಿಗೆ ಇಲಾಖೆಯಿಂದ ಗುಡ್ ನ್ಯೂಸ್ ನೀಡಲಾಗಿದೆ. ಇದೀಗ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂ.ಮ.ಸಾ.ಸಂಸ್ಥೆ, ಕ.ಕ.ರ.ಸಾ.ಸಂಸ್ಥೆ ಮತ್ತು ವಾ.ಕ.ರ.ಸಾ.ಸಂಸ್ಥೆಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ ನೌಕರರು ಅಂತರ ನಿಗಮ ಸಾಮಾನ್ಯ ವರ್ಗಾವಣೆಗೆ ಕೋರಿಕೆ ಮೇರೆಗೆ 1,252 ನೌಕರರು ಅಂತರ ನಿಗಮ ವರ್ಗಾವಣೆಗೊಂಡಿರುತ್ತಾರೆ. ಸದರಿ ಅಂತರ ನಿಗಮ ವರ್ಗಾವಣೆ ಆದೇಶವನ್ನು ksrtc.karnataka.gov.in ವೆಬ್‌ಸೈಟ್‌ನಲ್ಲಿ ದಿನಾಂಕ:30.12.2024 ರಂದು ಪ್ರಕಟಿಸಲಾಗಿದೆ ಎಂದಿದ್ದಾರೆ. ಸದರಿ ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲಾಗಿದ್ದು, ವರ್ಗಾವಣೆಯಾಗಿರುವ ನಿಗಮ/ಸಂಸ್ಥೆಗಳಲ್ಲಿನ ಸೇವಾ ಜೇಷ್ಠತೆ ಹಾಗೂ ಖಾಲಿ ಹುದ್ದೆಗಳಿಗನುಗುಣವಾಗಿ ಕೌನ್ಸಲಿಂಗ್ ಮೂಲಕ ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು. ಕೌನ್ಸಲಿಂಗ್ ದಿನಾಂಕ: 15.01.2025 ರಿಂದ 25.01.2025 ರವರೆಗೆ ವೆಬ್‌ಸೈಟ್ www.ksrtc.org/transfer ನಲ್ಲಿ ನಡೆಸಲಾಗುವುದು. ಒಮ್ಮೆ ಆದ್ಯತೆ ಸಲ್ಲಿಸಿದ ನಂತರ ಯಾವುದೇ…
BREAKING : ಪಂಜಾಬ್ AAP ಶಾಸಕ `ಗುರುಪ್ರೀತ್ ಬಸ್ಸಿ ಗೋಗಿ’ ನಿಗೂಢ ಸಾವು : ದೇಹದಲ್ಲಿ ಗುಂಡೇಟು ತಗುಲಿರುವುದು ಪತ್ತೆ.!
ಲುಧಿಯಾನ : ಪಂಜಾಬ್ ರಾಜ್ಯದ ಲುಧಿಯಾನ ಪಶ್ಚಿಮ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಶುಕ್ರವಾರ ರಾತ್ರಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗುರುಪ್ರೀತ್ ಬಸ್ಸಿ ಗೋಗಿ ಸಾವನ್ನು ದೃಢಪಡಿಸಿದ ಜಂಟಿ ಪೊಲೀಸ್ ಆಯುಕ್ತ ಜಸ್ಕರನ್ ಸಿಂಗ್ ತೇಜ, ಅವರನ್ನು ಡಿಎಂಸಿ ಆಸ್ಪತ್ರೆಗೆ ತರಲಾಗಿದ್ದ. ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತೇಜ ಹೇಳಿದರು. ಶಾಸಕರು ಹಗಲಿನ ನಿಯಮಿತ ಕಾರ್ಯಕ್ರಮಗಳ ನಂತರ ಘುಮರ್ ಮಂಡಿಯಲ್ಲಿರುವ ತಮ್ಮ ಮನೆಗೆ ಮರಳಿದ್ದರು. ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ಕುಟುಂಬದೊಂದಿಗೆ ಇದ್ದರು. ಆದರೆ ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ದೇಹದಲ್ಲಿ ಗುಂಡು ಇರುವುದು ಪತ್ತೆಯಾಗಿದೆ ಎಂದು ಎಂದು ಎಎಪಿ ಜಿಲ್ಲಾ ಕಾರ್ಯದರ್ಶಿ ಪರಮವೀರ್ ಸಿಂಗ್ ಹೇಳಿದ್ದಾರೆ. ಮೃತರ ಪತ್ನಿ ಡಾ. ಸುಖಚೈನ್ ಕೌರ್ ಗೋಗಿ ಗುಂಡೇಟಿನ ಶಬ್ದವನ್ನು ಕೇಳಿ ಸ್ಥಳಕ್ಕೆ ಧಾವಿಸಿ ತಮ್ಮ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಕೊಂಡರು ಎಂದು ಮೂಲಗಳು ತಿಳಿಸಿವೆ. ಭದ್ರತಾ ಸಿಬ್ಬಂದಿಯ ಸಹಾಯದಿಂದ ಕುಟುಂಬವು ಅವರನ್ನು ಡಿಎಂಸಿಎಚ್‌ಗೆ ಕರೆದೊಯ್ದರು ಎಂದು…












