Author: kannadanewsnow57

ಬೆಂಗಳೂರು : ಬಿಬಿಎಂಪಿ ಪಶ್ಚಿಮ ವಲಯ ಕಲ್ಯಾಣ ವಿಭಾಗದಲ್ಲಿ ಬಹುಕೋಟಿ ಹಗರಣ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಬಿಬಿಎಂಪಿ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಅಲ್ಲದೆ ಹಲವು ದಾಖಲೆಗಳನ್ನು ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ. ಹೌದು ಬಿಬಿಎಂಪಿ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಮನೆ ಹಾಗೂ ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ದೇವಯ್ಯ ಪಾರ್ಕ್ ಬಳಿಯ ಲಲಿತಾ ನಿವಾಸ ಹಾಗೂ ವೈಯ್ಯಾಲಿಕಾವಲಿನಲ್ಲಿರುವ ಸತ್ಯಮೂರ್ತಿ ನಿವಾಸದಲ್ಲಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯ ಕಲ್ಯಾಣ ವಿಭಾಗದಲ್ಲಿ ಬಹುಕೋಟಿ ಹಗರಣ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕಲ್ಯಾಣ ಕಾರ್ಯಕ್ರಮ ಅನುಷ್ಠಾನದಲ್ಲಿ ಈ ಒಂದು ಹಗರಣ ನಡೆದಿತ್ತು. ಫಲಾನುಭವಿಗಳ ಹಣವನ್ನು ಸೊಸೈಟಿ ಗಳಿಗೆ ವರ್ಗಾಯಿಸಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿತ್ತು. ಡಿವೈಎಸ್ಪಿ ಸುನಿಲ್ ವೈ ನಾಯಕ್ ನೇತೃತ್ವದಲ್ಲಿ 8 ತಂಡಗಳಾಗಿ ದಾಳಿ…

Read More

ಬೆಂಗಳೂರು : ಪಡಿತರ ಚೀಟಿ ಹೊಂದಿರುವವರಾಗಿದ್ದರೆ, ಡಿಸೆಂಬರ್ 1 ರ ಮೊದಲು ನಿಮ್ಮ ಇ-ಕೆವೈಸಿ ಪೂರ್ಣಗೊಳಿಸುವುದು ಬಹಳ ಮುಖ್ಯ. ಇದನ್ನು ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗಬಹುದು. ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡುವಂತೆ ಸೂಚನೆಗಳನ್ನು ನೀಡಿದ್ದು, ಸೆಪ್ಟೆಂಬರ್ 1 ಕೊನೆಯ ದಿನಾಂಕವಾಗಿತ್ತು. ಆದರೆ, ಇ-ಕೆವೈಸಿ ಮಾಡದವರಿಗೆ ಸರ್ಕಾರ ಒಂದು ತಿಂಗಳು ವಿಸ್ತರಿಸಿತ್ತು. ಈಗ ಈ ದಿನಾಂಕವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಈ ದಿನಾಂಕದೊಳಗೆ ಇ-ಕೆವೈಸಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ. ಪಡಿತರ ಚೀಟಿದಾರರು ತಮ್ಮ ಗುರುತು ನೋಂದಣಿ ಅಥವಾ ಮರುನೋಂದಣಿ ಮಾಡಿಸದೇ ಇರುವ ಎಲ್ಲಾ ಸದಸ್ಯರು ನವೆಂಬರ್ 30 ರೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಬೆರಳಚ್ಚು ನೀಡಿ ಭಯೋಸಂಗ್ರಹಣೆ (ಇ-ಕೆವೈಸಿ) ಸಂಗ್ರಹಣೆ ಕಾರ್ಯ ಮಾಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ. ಆಧಾರ್…

Read More

ಬೆಂಗಳೂರು : ಆಧಾರ್ ಕಾರ್ಡ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತದ ನಾಗರಿಕರಿಗೆ ನೀಡುತ್ತದೆ. ಪ್ರಸ್ತುತ, ಇದು ಬಹಳ ಮುಖ್ಯವಾದ ದಾಖಲೆಯಾಗಿದೆ ಮತ್ತು ನೀವು ಅದನ್ನು ಹೊಂದಿಲ್ಲದಿದ್ದರೆ, ನಿಮ್ಮ ಅನೇಕ ಕೆಲಸಗಳು ಸಿಲುಕಿಕೊಳ್ಳಬಹುದು. ಅದೇ ಸಮಯದಲ್ಲಿ, ನಿಮ್ಮ ಆಧಾರ್ ಕಾರ್ಡ್ನಲ್ಲಿ ತಪ್ಪು ಇದ್ದರೆ ಅಥವಾ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇನ್ನಾವುದನ್ನಾದರೂ ನವೀಕರಿಸಲು ನೀವು ಬಯಸಿದರೆ, ನೀವು ಅದನ್ನು ಮಾಡಬಹುದು. ಉದಾಹರಣೆಗೆ, ಮದುವೆಯ ನಂತರ, ಹುಡುಗಿಯರು ತಮ್ಮ ಉಪನಾಮ ಮತ್ತು ವಿಳಾಸ ಇತ್ಯಾದಿಗಳನ್ನು ತಮ್ಮ ನೆಲೆಯಲ್ಲಿ ಬದಲಾಯಿಸಲು ಬಯಸುತ್ತಾರೆ, ಆದರೆ ಅನೇಕ ಜನರಿಗೆ ವಿಧಾನ ತಿಳಿದಿಲ್ಲ. ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನಿಮ್ಮ ಆಧಾರ್ನಲ್ಲಿ ಉಪನಾಮ ಇತ್ಯಾದಿಗಳನ್ನು ಸುಲಭವಾಗಿ ನವೀಕರಿಸುವ ಮಾರ್ಗವನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು. ಹೇಗೆ ಎಂಬುದು ಇಲ್ಲಿದೆ: ಹಂತ 1 ಮದುವೆಯ ನಂತರ, ನಿಮ್ಮ ಆಧಾರ್ ಕಾರ್ಡ್ನಲ್ಲಿ ಉಪನಾಮ, ವಿಳಾಸದಂತಹ ವಿಷಯಗಳನ್ನು ಸಹ ನೀವು ಬದಲಾಯಿಸಲು ಬಯಸಿದರೆ, ನೀವು ನಿಮ್ಮ ಗಂಡನೊಂದಿಗೆ ಹತ್ತಿರದ ಆಧಾರ್…

Read More

ಬೆಂಗಳೂರಿನಲ್ಲಿ : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿ, ಬಿಲ್ಡರ್ ಗಳಿಗೆ ಐಟಿ ಶಾಕ್ ನೀಡಿದ್ದು, ಬೆಂಗಳೂರಿನ 25 ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿ, ಬಿಲ್ಡರ್ ಗಳ ನಿವಾಸ,ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ವರದಿಯಾಗಿದೆ. ನಗರದ ಸುಮಾರು 25 ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದ್ದು, ಆಸ್ತಿ ಪಾಸ್ತಿ ಹಾಗೂ ನಗದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಶಿವಮೊಗ್ಗ : ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರಪಾಲಿಕೆಯ ಮಾದರಿಯಲ್ಲಿ ಎಲ್ಲಾ ಆಸ್ತಿಗಳನ್ನು ಎ ಮತ್ತು ಬಿ ಖಾತಾಗಳನ್ನಾಗಿ ವಿಂಗಡಿಸಿ, ರಾಜ್ಯದಾದ್ಯಂತ ಏಕರೀತಿಯ ಕರವಸೂಲಾತಿಗೆ ಹೊಸ ಕಾಯ್ದೆಯೊಂದನ್ನು ಮುಂದಿನ ಒಂದು ತಿಂಗಳೊಳಗಾಗಿ ಜಾರಿಗೊಳಿಸಲಾಗುವುದು ಎಂದು ಮಾನ್ಯ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್ ಅವರು ಹೇಳಿದರು. ಅವರು ಇಂದು ಶಿವಮೊಗ್ಗ ಮಹಾನಗರಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಜ್ಯದ ಬಹುತೇಕ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಇತ್ತೀಚಿನ ಕೆಲವು ದಶಕಗಳಿಂದೀಚೆಗೆ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಅಧಿಕೃತವಾಗಿ ಹಾಗೂ ಇನ್ನೂ ಕೆಲವು ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಎಲ್ಲಾ ಕಟ್ಟಡಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳಿಗೆ ಸಂದಾಯವಾಗಬೇಕಾದ ಭಾರೀ ಪ್ರಮಾಣದ ಕರ ವಸೂಲಾಗದೇ ಬಾಕಿ ಉಳಿಯುತ್ತಿರುವುದನ್ನು ಸರ್ಕಾರವು…

Read More

ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಗೆ ನೋಂದಣೆ ಚಾಲ್ತಿಯಲ್ಲಿದ್ದು, ಅರ್ಹರು ಸೇವಾ ಸಿಂಧು ಪೋರ್ಟಲ್ ಅಥವಾ ಹತ್ತಿರದ ಗ್ರಾಮ ಒನ್, ಶಿವಮೊಗ್ಗ ಒನ್ ಕೇಂದ್ರಗಳ ಮೂಲಕ ಆನ್‌ಲೈನ್ ನೋಂದಣಿ ಆಹ್ವಾನಿಸಿದೆ. 2022-23ನೇ ಹಾಗೂ ನಂತರದ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ (ವೃತ್ತಿಪರ ಸೇರಿದಂತೆ) ಹಾಗೂ ಯಾವುದೇ ಡಿಪ್ಲೊಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂ. 3000/- (ಪದವೀಧರ ನಿರುದ್ಯೋಗಿಗಳು) ಹಾಗೂ ರೂ. 1500/- (ಡಿಪ್ಲೋಮಾ ಪಡೆದ ನಿರುದ್ಯೋಗಿಗಳು) ನೇರ ನಗದು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. 2022-23ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣಾರಾದವರು, ಪದವಿ/ಡಿಪ್ಲೊಮಾ ನಂತರ ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವ್ಯಾಸಂಗ ಮುಂದುವರಿಸದೇ ಇರುವವರು, ಕರ್ನಾಟಕದಲ್ಲಿ ವಾಸವಿರುವವರು ಯುವನಿಧಿ ಯೋಜನೆಗೆ ನೊಂದಣಿ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸಾಗರ ರಸ್ತೆ, 2ನೇ…

Read More

ನವದೆಹಲಿ : ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ, ಈ ಸುದ್ದಿ ನಿಮಗೆ ತುಂಬಾ ಮುಖ್ಯವಾಗಿದೆ. ಇತ್ತೀಚೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ನೀಡಿದ ನಾಗರಿಕರಿಗೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಸರ್ಕಾರ ಹೊರಡಿಸಿರುವ ಈ ಹೊಸ ಸಲಹೆಯ ಪ್ರಕಾರ, ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹೆಚ್ಚು ಹಳೆಯ ಆಧಾರ್ ಕಾರ್ಡ್ ನವೀಕರಿಸುವುದು ಕಡ್ಡಾಯವಾಗಿದೆ. ಉಚಿತವಾಗಿ ಅಪ್ ಡೇಟ್ ಮಾಡಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ಸರ್ಕಾರಿ ಸೇವೆಗಳನ್ನು ಪಡೆಯಲು ಅಥವಾ ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಇತರ ಹಣಕಾಸು ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಆಧಾರ್ ಕಾರ್ಡ್ ಬಳಸಲಾಗುವ ದಾಖಲೆಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಧಾರ್ ಕಾರ್ಡ್ 10 ವರ್ಷ ಹಳೆಯದಾಗಿದ್ದರೆ, ಸಮಯಕ್ಕೆ ತಕ್ಕಂತೆ ನಿಮ್ಮ ದಾಖಲೆಗಳಲ್ಲಿ ಬದಲಾವಣೆಗಳಾಗಬಹುದು. ನಿಮ್ಮ ವಿಳಾಸದಲ್ಲಿನ ಬದಲಾವಣೆ, ಮೊಬೈಲ್ ಸಂಖ್ಯೆಯ ಬದಲಾವಣೆ ಅಥವಾ ಬಯೋಮೆಟ್ರಿಕ್ ಮಾಹಿತಿಯಲ್ಲಿ ವ್ಯತ್ಯಾಸ ಸಂಭವಿಸಬಹುದು. ಆದ್ದರಿಂದ, ಆಧಾರ್ ಕಾರ್ಡ್…

Read More

ನವದೆಹಲಿ : ಭಾರತ ಸರ್ಕಾರವು ನಡೆಸುತ್ತಿರುವ ಪಡಿತರ ಯೋಜನೆಗಳು ದೇಶದ ಬಡ ಮತ್ತು ನಿರ್ಗತಿಕ ಜನರಿಗೆ ಸಂಜೀವಿನಿಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಪಡಿತರ ಚೀಟಿದಾರರಿಗೆ ಕಡಿಮೆ ದರದಲ್ಲಿ ಧಾನ್ಯಗಳನ್ನು ನೀಡಲಾಗುತ್ತದೆ. ಆದರೆ ಈಗ ಸರ್ಕಾರವು ಪಡಿತರ ಚೀಟಿಯಲ್ಲಿ ಲಭ್ಯವಿರುವ ಪಡಿತರ ಪ್ರಮಾಣ ಮತ್ತು ನಿಯಮಗಳನ್ನು ಬದಲಾಯಿಸಿದೆ, ಇದು ಜನವರಿ 1, 2025 ರಿಂದ ಅನ್ವಯವಾಗಲಿದೆ. ಪಡಿತರ ಪ್ರಮಾಣದಲ್ಲಿ ಬದಲಾವಣೆ: ಪಡಿತರ ಚೀಟಿಯಲ್ಲಿ ಈ ಹಿಂದೆ ಒಂದು ಘಟಕದಲ್ಲಿ 3 ಕೆಜಿ ಅಕ್ಕಿ, 2 ಕೆಜಿ ಗೋಧಿ ನೀಡಲಾಗುತ್ತಿತ್ತು, ಈಗ 2 ಕೆಜಿ ಗೋಧಿ ಮತ್ತು 2.5 ಕೆಜಿ ಅಕ್ಕಿಗೆ ಬದಲಾಗಿದೆ. ಅಂದರೆ ಅಕ್ಕಿಯ ಪ್ರಮಾಣ ಅರ್ಧ ಕಿಲೋ ಕಡಿಮೆಯಾಗಿದೆ, ಗೋಧಿಯ ಪ್ರಮಾಣವನ್ನು ಅರ್ಧ ಕಿಲೋ ಹೆಚ್ಚಿಸಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ನೀಡುವ ಪಡಿತರವನ್ನು ಕೂಡ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ 14 ಕೆಜಿ ಗೋಧಿ ಮತ್ತು 21 ಕೆಜಿ ಅಕ್ಕಿ ಸಿಗುತ್ತಿತ್ತು, ಆದರೆ ಈಗ ಅದನ್ನು 18…

Read More

ಬೆಂಗಳೂರು : ಇತ್ತೀಚಿಗೆ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ಬೆಂಗಳೂರು ನಗರ ಕೂಡ ಇದೀಗ ಮಹಿಳೆಯರಿಗೆ ಸೇಫ್ ಅಲ್ಲ ಎನ್ನುವಂತಿದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿಯೇ ಯುವತಿಗೆ ಕಾಮುಕನೊಬ್ಬ ಕೆಟ್ಟದಾಗಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಹೌದು ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾದ ಕಾಮುಕರ ಉಪಟಳ. ಕತ್ತಲಲ್ಲಿ ಹೋಗುತ್ತಿದ್ದ ಯುವತಿಗೆ ಬ್ಯಾಡ್ ಆಗಿ ಮೈಮುಟ್ಟಿ ಕಿರುಕುಳ ನೀಡಿದ್ದಾನೆ. ಬೈಕ್ ಸವಾರನಿಂದ ನಡು ಬೀದಿಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನವೆಂಬರ್ 11 ರ ರಾತ್ರಿ ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪುಂಡನ ನೀತಿ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಇದೀಗ ಸೆರೆಯಾಗಿದೆ. ಘಟನೆ ನಡೆದ ಕೂಡಲೇ ಯುವತಿ ರಾಮಮೂರ್ತಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕಾಮುಕ ಅರುಣ್ ಎನ್ನುವ ಆರೋಪಿಯನ್ನು ಕೂಡಲೆ ಅರೆಸ್ಟ್ ಮಾಡಿ ಪ್ರಕರಣವನ್ನು…

Read More

ಬೆಂಗಳೂರು : ಮುಸ್ಲಿಮರಿಗೆ ವೋಟ್ ಹಕ್ಕು ಇಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಚಿವ ಹೆಚ್.ಸಿ ಮಹದೇವಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಹೆಚ್.ಸಿ. ಮಹದೇವಪ್ಪ, ಅಷ್ಟೊಂದು ಹೋರಾಟ ನಡೆಸಿ ಬಾಬಾ ಸಾಹೇಬರು ಒಂದು ಮತ ಒಂದು ಮೌಲ್ಯವನ್ನು ಜಾರಿ ಮಾಡಿದ ಕಾರಣವನ್ನು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಇನ್ನು ಧರ್ಮದ ಹೆಸರಲ್ಲಿ ರಾಜಕೀಯ ದ್ವೇಷ ಹರಡುವ ಇಂತವರು ತಮ್ಮ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಹೇಳಿದ್ದಾರೆ. https://twitter.com/CMahadevappa/status/1861448019545067596?ref_src=twsrc%5Etfw%7Ctwcamp%5Etweetembed%7Ctwterm%5E1861448019545067596%7Ctwgr%5Efcc813bc77447d769a5b6272dd4ff4a23039deaf%7Ctwcon%5Es1_&ref_url=https%3A%2F%2Fkannadadunia.com%2Flive-news%2Fmuslims-should-be-deprived-of-vote-minister-h-c-mahadevappa-condemns-chandrasekhara-swamijis-statement%2F ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಹಾಗೂ ದೇಶದಲ್ಲಿ ವಕ್ಫ್ ಮಂಡಳಿ ಇಲ್ಲದಂತೆ ಮಾಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದರು.

Read More