Author: kannadanewsnow57

ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸದ್ಯ ಎಲ್ಲೆಡೆ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ಪರಿಣಾಮ ಸಮೀಕ್ಷೆ ಬಂದ ಶಿಕ್ಷಕರು ಮೊಬೈಲ್ ನೆಟ್ವರ್ಕ್ ಗಾಗಿ ಮರ ಮತ್ತು ನಿರೀನ ಟ್ಯಾಂಕ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಾಗಿ ಮೊಬೈಲ್ಗೆ ನೆಟವರ್ಕ್ ಸಿಗದ ಕಾರಣ ಸಮೀಕ್ಷೆಗೆ ನಿಯುಕ್ತಿಗೊಂಡ ಶಿಕ್ಷಕರೊಬ್ಬರು ನೆಟವರ್ಕ್ಗಾಗಿ ಮರ ಹತ್ತಿದ ಪ್ರಸಂಗ ಹುಲಸೂರ ತಾಲೂಕಿನ ಮಿರಖಲ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಜರುಗಿದೆ. ಸಮೀಕ್ಷೆಗೆಂದು ನಿಯುಕ್ತಿಗೊಂಡ ಮಿರಖಲ್ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಗೋವಿಂದ ಮಹಾರಾಜ ನೆಟವರ್ಕ್ ಸಲುವಾಗಿ ಮರವೇರಿದ ಶಿಕ್ಷಕರಾಗಿದ್ದಾರೆ. ಕಳೆದ ಸೆ. 22ರಿಂದ ರಾಜ್ಯ ಸರ್ಕಾರದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಗ್ರಾಮ ಮಿರಖಲ್ನಲ್ಲಿ ನೆಟವರ್ಕ್ ಸಿಗದ ಹಿನ್ನೆಲೆ ಶಿಕ್ಷಕ ಮರ ಹತ್ತಿದ್ದಾರೆ. ಆದರೆ ಮರ ಹತ್ತಿದ ನಂತರವು ಸಹ ಸರಿಯಾದ…

Read More

ಬೆಂಗಳೂರು  : ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆಗೂ ಮುನ್ನ ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸದಲ್ಲಿ ಬೆಸ್ಕಾಂ ಮೀಟರ್‌ ರೀಡರ್‌ಗಳು ತಲ್ಲೀನರಾಗಿದ್ದು, ಆಗಸ್ಟ್ ನಲ್ಲಿ ತಡವಾಗಿ ಮೀಟರ್ ರೀಡಿಂಗ್ ನಡೆದ ಪರಿಣಾಮ ಬಿಲ್‌ ನಲ್ಲಿ ವಿದ್ಯುತ್‌ ಬಳಕೆ ಹೆಚ್ಚಾಗಿ ಹಲವು ಗ್ರಾಹಕರಿಗೆ ಪೂರ್ಣ ಮೊತ್ತ ಭರಿಸುವಂತಾಗಿದೆ. ಹೌದು,  ಪ್ರತಿ ತಿಂಗಳು ವಿದ್ಯುತ್ ಮೀಟ‌ರ್ ರೀಡರ್‌ಗಳು ನಿಗದಿತ ದಿನಾಂಕದಿಂದ ನಿಗದಿತ ದಿನಾಂಕದವರೆಗೆ ಬಳಕೆಯಾಗಿರುವ ವಿದ್ಯುತ್ ಯುನಿಟ್ ಸಂಖ್ಯೆ ಆಧರಿಸಿ ಮೀಟರ್ ರೀಡ್ ಮಾಡುತ್ತಿದ್ದರು. ಆದರೆ ಆಗಸ್ಟ್ ನಲ್ಲಿ ಬೆಸ್ಕಾಂ ಮೀಟರ್ ರೀಡರ್ ಗಳಿಗೆ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆಗೆ ಮನೆ ಆಯ್ಕೆ ಮಾಡಿರುವ ಕುರಿತು ‘ಯುಎಚ್‌ಐಡಿ’ ಸ್ಟಿಕ್ಕರ್ ಅಂಟಿಸುವ ಜವಾಬ್ದಾರಿ ನೀಡಿತ್ತು. ರಾಜ್ಯದಲ್ಲಿ ಎಲ್ಲಾ ಮೀಟರ್ ರೀಡರ್ ಗಳು ಸ್ಟಿಕ್ಕರ್ ಅಂಟಿಸುವ ಕೆಲಸದಲ್ಲಿದ್ದರು. ಮೀಟ‌ರ್ ರೀಡಿಂಗ್‌ ಗೆ ತಡವಾಗಿ ಹೋಗಿದ್ದರು, 30 ದಿನಗಳ ಬಳಕೆಯನ್ನು ಪರಿಗಣಿಸಿ ಬಿಲ್ ಜನರೇಟ್ ಮಾಡದೆ 35-40 ದಿನಗಳ ಬಳಕೆಯನ್ನು ಬಿಲ್ ಮಾಡಿದ್ದಾರೆ.…

Read More

ಇಂದಿನ ಡಿಜಿಟಲ್ ಯುಗದಲ್ಲಿ, ಮಕ್ಕಳು ನಿರಂತರವಾಗಿ ಮೊಬೈಲ್ ಗಳಿಂದ ಸುತ್ತುವರೆದಿರುತ್ತಾರೆ. ಬೆಳಿಗ್ಗೆ ಆನ್ಲೈನ್ ತರಗತಿಗಳಿಂದ ಹಿಡಿದು ತಡರಾತ್ರಿಯ ಗೇಮಿಂಗ್ವರೆಗೆ, ಮೊಬೈಲ್ ಗಳು ಅವರ ದೈನಂದಿನ ಜೀವನದಲ್ಲಿ ಪ್ರಾಬಲ್ಯ ಹೊಂದಿವೆ. ಈ ಸಾಧನಗಳು ಅನುಕೂಲತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ನೀಡುತ್ತವೆಯಾದರೂ, ಅವು ಮಕ್ಕಳ ಭಂಗಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತವೆ. ತಜ್ಞರು ಈ ಸಮಸ್ಯೆಯನ್ನು ‘ಟೆಕ್ ನೆಕ್’ ಎಂದು ಗುರುತಿಸಿದ್ದಾರೆ, ಇದು ಡಿಜಿಟಲ್ ಸಾಧನಗಳನ್ನು ಬಳಸುವಾಗ ದೀರ್ಘಕಾಲದ ಮುಂದಕ್ಕೆ ತಲೆಯ ಭಂಗಿಯಿಂದ ಉಂಟಾಗುವ ಸ್ಥಿತಿಯಾಗಿದೆ. ‘ಟೆಕ್ ನೆಕ್’ ಪರದೆಗಳನ್ನು ವೀಕ್ಷಿಸಲು ನಿರಂತರವಾಗಿ ಕುತ್ತಿಗೆಯನ್ನು ಮುಂದಕ್ಕೆ ಬಾಗಿಸುವುದರಿಂದ ಉಂಟಾಗುವ ವಿವಿಧ ಕುತ್ತಿಗೆ ಮತ್ತು ಬೆನ್ನುಮೂಳೆಯ ಸಮಸ್ಯೆಗಳನ್ನು ಒಳಗೊಂಡಿದೆ. 15 ಡಿಗ್ರಿಗಳಷ್ಟು ಸ್ವಲ್ಪ ಓರೆಯಾಗುವುದು ಸಹ ಗರ್ಭಕಂಠದ ಬೆನ್ನುಮೂಳೆಯ ಮೇಲೆ ಹೊರೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ಒತ್ತಡವು ಹೆಚ್ಚಿನ ಓರೆಯೊಂದಿಗೆ ತೀವ್ರಗೊಳ್ಳುತ್ತದೆ, ಇದು ಸ್ನಾಯುಗಳು, ಕಶೇರುಖಂಡಗಳು, ಡಿಸ್ಕ್ಗಳು, ಅಸ್ಥಿರಜ್ಜುಗಳು ಮತ್ತು ಕಾಲಾನಂತರದಲ್ಲಿ ಭಂಗಿ ಜೋಡಣೆಯ ಮೇಲೆ ಪರಿಣಾಮ ಬೀರುತ್ತದೆ. ಬೆಳೆಯುತ್ತಿರುವ ಮೂಳೆಗಳನ್ನು ಹೊಂದಿರುವ ಮಕ್ಕಳಿಗೆ, ಅಪಾಯಗಳು ಇನ್ನೂ ಹೆಚ್ಚು ಸ್ಪಷ್ಟವಾಗಿರುತ್ತವೆ.…

Read More

ನವದೆಹಲಿ : ಜಿಎಸ್ಟಿ ನಂತರ, ಭಾರತ ಸರ್ಕಾರ ಬಡ ಮಹಿಳೆಯರಿಗೆ ಹೊಸ ಉಡುಗೊರೆಯನ್ನು ನೀಡಿದೆ. ಕಳೆದ ಸೋಮವಾರ ಪೆಟ್ರೋಲಿಯಂ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 25 ಲಕ್ಷ ಬಡ ಮಹಿಳೆಯರಿಗೆ ಹೆಚ್ಚುವರಿ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲಿದೆ. ಈ ಯೋಜನೆಯಡಿಯಲ್ಲಿ, ಭಾರತ ಸರ್ಕಾರವು ಒಟ್ಟು 105.8 ಮಿಲಿಯನ್ ಜನರಿಗೆ ಎಲ್ಪಿಜಿ ಪ್ರವೇಶವನ್ನು ಒದಗಿಸಿದೆ. ಈ ಕೆಲಸವು 2021 ರಿಂದ ಇನ್ನೂ ವೇಗವಾಗಿ ಮುಂದುವರೆದಿದೆ. ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದರ ವಿವರ ಇಲ್ಲಿದೆ. ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು: ಮಹಿಳಾ ಫಲಾನುಭವಿಯ ಆಧಾರ್ ಕಾರ್ಡ್ (ಇ-ಕೆವೈಸಿ) ಬಿಪಿಎಲ್ ಪಡಿತರ ಚೀಟಿ/ಬಡತನ ರೇಖೆ ಪ್ರಮಾಣಪತ್ರ ಬ್ಯಾಂಕ್ ಪಾಸ್ಬುಕ್/ಖಾತೆ ಸಂಖ್ಯೆ ಪಾಸ್ಪೋರ್ಟ್-ಗಾತ್ರದ ಛಾಯಾಚಿತ್ರ ವಾಸಸ್ಥಳ ಪುರಾವೆ (ಪಡಿತರ ಚೀಟಿ/ಮತದಾರರ ಐಡಿ, ಇತ್ಯಾದಿ) ಅರ್ಜಿ ಸಲ್ಲಿಸುವುದು ಹೇಗೆ? ನೀವು ಪ್ರಧಾನ ಮಂತ್ರಿ…

Read More

ಮಂಗಳೂರು : ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧವಾಗಿದೆ. ಒಳ ಮೀಸಲಾತಿ ಸಲುವಾಗಿ ನೇಮಕಾತಿ ಪ್ರಕ್ರಿಯೆ ತಡವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಾಯತ್‌ರಾಜ್‌ ಇಲಾಖೆ ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ ಶೀಘ್ರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕೆಇಎ ಮೂಲಕ ಮಾಡಿದ ನೇಮಕಾತಿ ಪೂರ್ಣವಾಗಿದ್ದು, ಕೆಪಿಎಸ್‌ನಿಂದಲೇ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ನಮ್ಮಲ್ಲಿ ಕೆಪಿಎಸ್‌ ಇ ಇರುವ ತನಕ ಜನರಿಗೆ ಉದ್ಯೋಗ ಸಿಗಲ್ಲ. ಕೆಪಿಎಸ್‌ಇ ವಿಸರ್ಜನೆ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದೇವೆ. 2.5 ಲಕ್ಷ ಖಾಲಿ ಹುದ್ದೆಗಳು ಇದ್ದು, ಸಾಂವಿಧಾನಿಕ ಸಂಸ್ಥೆ ಎನ್ನುವ ಕಾರಣಕ್ಕೆ ಹಸ್ತಕ್ಷೇಪ ಮಾಡಲು ಆಗುತ್ತಿಲ್ಲ. ಮುಂದೆ ಎಲ್ಲವೂ ಕೆಇಎಗೆ ನೀಡಲು ಯೋಚಿಸಿದ್ದೇವೆ ಎಂದು ತಿಳಿಸಿದರು. ಪಿಡಿಒಗಳ ವರ್ಗಾವಣೆ ಕೌನ್ಸೆಲಿಂಗ್‌ ಅನ್ನು ಪಾರದರ್ಶಕವಾಗಿ ಮಾಡಲಾಗಿದೆ. 12 ವರ್ಷಗಳಿಂದ ಬಾಕಿ ಉಳಿದಿರುವ ಸೀನಿಯರ್ ಪಿಡಿಒಗಳಿಒಗೆ ಬಡ್ತಿ ನೀಡುವ ವಿಚಾರ ಕೋರ್ಟ್‌ನಲ್ಲಿತ್ತು. ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಕೋರ್ಟ್ ಆದೇಶದ…

Read More

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮತ್ತೆ 6 ಮಂದಿ ಡಿವೈಎಸ್‌ಪಿ (ಸಿಎಲ್) ರವರುಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಕೆಳಕಂಡ ಡಿವೈಎಸ್‌ಪಿ (ಸಿವಿಲ್) ರವರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ/ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. ವರ್ಗಾವಣೆಗೊಂಡು ಡಿವೈಎಸ್ ಪಿ (ಸಿವಿಲ್) ಅಧಿಕಾರಿಗಳು 1 ಮ್ಯಾಥೀವ್ ಥಾಮಸ್ ಕೆ.ಟಿ 2 ರಾಜಣ್ಣ ಟಿ.ಬಿ 3 ಸ್ನೇಹರಾಜ್ ಎನ್ 4 ಸಿ.ಕೆ. ಅಶ್ವಥನಾರಾಯಣ 5 ಲಕ್ಷ್ಮಯ್ಯ.ವಿ 6 ಪದ್ಮಶ್ರೀ ಗುಂಜೀಕರ್

Read More

ಬೆಂಗಳೂರು : ಸಿವಿಲ್ ಸ್ವರೂಪದ ವ್ಯಾಜ್ಯಗಳ ಮಾಹಿತಿ / ಪ್ರಕರಣಗಳನ್ನು ನಿರ್ವಹಿಸುವಲ್ಲಿ ಪೊಲೀಸ್ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖ-1ರ ಸುತ್ತೋಲೆ ಅನುಸಾರ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ವಿಷಯಗಳನ್ನು ನಿರ್ವಹಿಸುವ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ ಸುತ್ತೋಲೆಯನ್ನು ಈಗಾಗಲೇ ಹೊರಡಿಸಲಾಗಿತ್ತು. ಆದರೆ, ಕರ್ನಾಟಕ ಗೌರವಾನ್ವಿತ ಉಚ್ಛ ನ್ಯಾಯಾಯಲಯವು, ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ಡಬ್ಲ್ಯೂಪಿ ಸಂಖ್ಯೆ: 52846/2016, ದಿನಾಂಕ: 16/06/2023) ಪ್ರಕರಣದಲ್ಲಿ ಕಂಡಿಕೆ ಸಂಖ್ಯೆ: 19 ರಲ್ಲಿ ಈ ಕೆಳಗಿನಂತೆ ಅಭಿಪ್ರಾಯ ಮತ್ತು ನಿರ್ದೇಶನವನ್ನು ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿರ್ದೇಶನದನ್ವಯ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವ ಕುರಿತಂತೆ ಮಾರ್ಗದರ್ಶಿ ಸೂಚಿಗಳನ್ನು ಈ ಸುತ್ತೋಲೆ ಅಡಿಯಲ್ಲಿ ನೀಡಲಾಗಿದ್ದು, ಕಾರಣ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಸುತ್ತೋಲೆಯನ್ವಯ ಹಾಗೂ ಮಾರ್ಗಸೂಚಿ ಅನುಸಾರ ಸಿವಿಲ್…

Read More

ರಾಜ್ಯ ಸರ್ಕಾರವು ಅಲ್ಪಸಂಖ್ಯಾತ ಸಮುದಾಯವರಿಗೆ ಸಿಹಿಸುದ್ದಿ ನೀಡಿದ್ದು, ಸ್ವಾವಲಂಬಿ ಸಾರಥಿ ಸೇರಿದಂತೆ ವಿವಿಧ ಯೋಜನೆಗಳಡಿ ಸಾಲ, ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ವೃತ್ತಿ ಪ್ರೋತ್ಸಾಹ ಯೋಜನೆ, ಶ್ರಮಶಕ್ತಿ ಯೋಜನೆ, ಸ್ವಾವಲಂಬಿ ಸಾರಥಿಯೋಜನೆ (ಪ್ಯಾಸೆಂಜರ್ ಅಟೋ ರಿಕ್ಷಾ, ಟ್ಯಾಕ್ಸಿ, ಗೂಡ್ಸ್), ನೇರಸಾಲ ವ್ಯಾಪಾರ ಉದ್ದಿಮೆ, ವಿದೇಶ ವ್ಯಾಸಾಂಗಕ್ಕೆ ಸಾಲ ಯೋಜನೆ, ಮಹಿಳಾ ಸ್ವ ಸಹಾಯ ಸಂಘ ಯೋಜನೆ, ಸಾಂತ್ವನ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಯೋಜನೆಗಳಡಿ ಸಾಲ, ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ವೆಬ್ಸೈಚಟ್ https://kmdconline.karnataka.gov.in ಮೂಲಕ ಅಕ್ಟೋಬರ 16, 2025ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0836-2748226 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು : ಕೇಂದ್ರ ಸರ್ಕಾರದ ಐಟಿ ಕಾಯ್ದೆಯಡಿ ವಿಷಯ ನಿರ್ಬಂಧಿಸುವ ಮಾರ್ಗಸೂಚಿಗಳನ್ನ ಪ್ರಶ್ನಿಸಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದೆ ಟ್ವಿಟರ್) ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ದೇಶದ ಕಾನೂನುಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಮ್ಮ ತೀರ್ಪಿನಲ್ಲಿ, ಅಮೆರಿಕದಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸುವ ಕಂಪನಿಯು ಭಾರತದಲ್ಲಿ ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಇಂದಿನ ಅಗತ್ಯವಾಗಿದೆ ಮತ್ತು ಕಂಪನಿಗಳು ನಿಯಂತ್ರಣವಿಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ಸಂವಿಧಾನದ 19ನೇ ವಿಧಿಯು ನಾಗರಿಕರಿಗೆ ಮಾತ್ರ ಮುಕ್ತ ಅಭಿವ್ಯಕ್ತಿಯನ್ನು ರಕ್ಷಿಸುತ್ತದೆ, ಅಂದರೆ ಅದನ್ನು ವಿದೇಶಿ ಕಂಪನಿಗಳು ಅಥವಾ ನಾಗರಿಕರಲ್ಲದವರಿಗೆ ಅನ್ವಯಿಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಟ್ವಿಟರ್ ಯುನೈಟೆಡ್ ಸ್ಟೇಟ್ಸ್‌’ನಲ್ಲಿನ ಕಾನೂನುಗಳನ್ನ ಅನುಸರಿಸುತ್ತದೆ ಆದರೆ ಭಾರತದಲ್ಲಿ ಜಾರಿಗೆ ತರಲಾದ ಡೌನ್ ಆದೇಶಗಳನ್ನ ಪಾಲಿಸಲು ನಿರಾಕರಿಸುತ್ತಿದೆ ಎಂದು ಹೈಕೋರ್ಟ್ ಹೇಳಿದೆ.…

Read More

ಬೆಂಗಳೂರು : ಬೆಂಗಳೂರು ರಾಜ್ಯದ ಗರ್ಭಿಣಿಯನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಕರೆದೊಯ್ದು ಭ್ರೂಣ ಹತ್ಯೆ ಮಾಡಿಸುವ ಪ್ರಕರಣವನ್ನು ಆರೋಗ್ಯ ಇಲಾಖೆಯು ರಹಸ್ಯ ಕಾರ್ಯಾಚರಣೆ ಮೂಲಕ ಭೇದಿಸಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದ್ದು, ಮಳವಳ್ಳಿಯ 30 ವರ್ಷದ ಮಹಿಳೆಗೆ 3 ಜನ ಹೆಣ್ಣುಮಕ್ಕಳಿದ್ದ ಹಿನ್ನೆಲೆಯಲ್ಲಿ ಅಕ್ರಮವಾಗಿ ಏಜೆಂಟ್ ಮೂಲಕ ಲಿಂಗಪತ್ತೆ ಮಾಡಿದ್ದರು. ಮತ್ತೆ ಹೆಣ್ಣು ಅಂತಾ ಗೊತ್ತಾದಾಗ, ಐದು ತಿಂಗಳ ಗರ್ಭಿಣಿಯಾಗಿದ್ದರೂ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಭ್ರೂಣ ಹತ್ಯೆಗೆ ಮುಂದಾಗಿದ್ದನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂ ಮೇಲೆ ಕರ್ನಾಟಕ ಮತ್ತು ಆಂಧ್ರದ ವೈದ್ಯರ ತಂಡ ಕಾರ್ಯಾಚರಣೆ ನಡೆಸಿದಾಗ, ಭ್ರೂಣ ಹತ್ಯೆ ನಡೆಸುತ್ತಿರುವುದು ಖಚಿತಪಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಸರ್ಕಾರ, ಇಲಾಖೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು…

Read More