Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿದ್ದು, ದೇಶದಲ್ಲಿ 438 ಮಂದಿಗೆ ಕೊರೊನಾ ಸೋಂಕು ದೃಡಪಟ್ಟಿದೆ. ಭಾರತದ ಬಹು ರಾಜ್ಯಗಳಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಇತ್ತೀಚೆಗೆ ಏರಿಕೆಯಾಗುತ್ತಿರುವುದನ್ನು ಆರೋಗ್ಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹಿಂದಿನ ಅಲೆಗಳಿಗೆ ಹೋಲಿಸಿದರೆ ರಾಷ್ಟ್ರೀಯ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದರೂ, ಮುಂಬೈ, ಚೆನ್ನೈ ಮತ್ತು ಅಹಮದಾಬಾದ್‌ನಂತಹ ನಗರಗಳಲ್ಲಿ ಸೋಂಕುಗಳಲ್ಲಿ ಗಮನಾರ್ಹ ಏರಿಕೆ ದಾಖಲಾಗಿದೆ. ಮೇ ತಿಂಗಳಲ್ಲಿ ಇಲ್ಲಿಯವರೆಗೆ ಮುಂಬೈನಲ್ಲಿ 95 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ – ಜನವರಿಯಿಂದ ಮಹಾರಾಷ್ಟ್ರದ ಒಟ್ಟು 106 ಪ್ರಕರಣಗಳಿಗೆ ಹೋಲಿಸಿದರೆ ಇದು ತೀವ್ರ ಜಿಗಿತ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಕನಿಷ್ಠ 16 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಮತ್ತಷ್ಟು ಹರಡುವುದನ್ನು ತಡೆಗಟ್ಟಲು ರೋಗಿಗಳನ್ನು ಕೆಇಎಂ ಆಸ್ಪತ್ರೆಯಿಂದ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಘೋರ ದುರಂತವೊಂದು ನಡೆದಿದ್ದು, ಅಡುಗೆ ಎಣ್ಣೆ ಮಿಲ್ ನಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ರಹಮತ್ ನಗರದಲ್ಲಿ ಅಡುಗೆ ಎಣ್ಣೆ ಮಿಲ್ ನ ಬಾಯ್ಲರ್ ಸ್ಫೋಟಗೊಂಡು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ರಫಿಕ್ ಸೈಯದ್ ಕುಡುಚಿ (35) ಮೃತಪಟ್ಟಿದ್ದಾರೆ. ಜಮಖಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ :- ಮದ್ದೂರು ಪಟ್ಟಣದ ಶಿವಪುರದ ಕೊಪ್ಪ – ಮದ್ದೂರು ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ವಾಣಿಜ್ಯ ಮಳಿಗೆಗಳು, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದ ಮಾಲೀಕರಿಗೆ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ಬಿಗ್ ಶಾಕ್ ನೀಡಿದ್ದು, ಶನಿವಾರ ಬೆಳ್ಳಂಬೆಳಿಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಲಾಯಿತು. ಬೆಳ್ಳಂಬೆಳಿಗ್ಗೆ 7 ಗಂಟೆಗೆ ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರ ಬಿಗಿ ಪೊಲೀಸ್ ಭದ್ರತೆಯೊಂದಿಗೆ ತೆರಳಿದ ಲೋಕೋಪಯೋಗಿ ಎಇಇ ದೇವಾನಂದ್, ಮುಖ್ಯಾಧಿಕಾರಿ ಮೀನಾಕ್ಷಿ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಸುಮಾರು 70ಕ್ಕೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಮೂರು ದಿನಗಳ ಮುಂಚೆಯೇ ಮಳಿಗೆಗಳು, ಕಟ್ಟಡಗಳನ್ನು ಖಾಲಿ ಮಾಡುವಂತೆ ಪುರಸಭೆ, ಲೋಕೋಪಯೋಗಿ ಇಲಾಖೆಗಳು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಬಳಿಕ ಕೆಲವರು ಖಾಲಿ ಮಾಡಿದ್ದರು, ಕೆಲವರು ತೆರವು ಕಾರ್ಯಾಚರಣೆ ನಡೆಯುವುದಿಲ್ಲ ಎಂಬ ಭರವಸೆಯಲ್ಲಿ ಮನೆಯಲ್ಲಿ ಉಳಿದುಕೊಂಡಿದ್ದರು. ಮುಂಜಾನೆಯೇ ಜೆಸಿಬಿ ಕಾರ್ಯಾಚರಣೆಯ ಸದ್ದು ಕೇಳಿಸುತ್ತಿದ್ದಂತೆ ಮಳಿಗೆ ಕಟ್ಟಡಗಳಲ್ಲಿದ್ದು ಸಾಮಾನುಗಳನ್ನು ಹೊರತಂದು, ಕಣ್ಣೆದುರೇ ನೆಲಸಮ ಆಗುತ್ತಿರುವುದನ್ನು ಕಂಡು…
ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ತಿಂಗಳು ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಅಮಾನತುಗೊಂಡ ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನ “ತಪ್ಪು ಮಾಹಿತಿ” ನೀಡುತ್ತಿದೆ ಎಂದು ಭಾರತ ಶನಿವಾರ ಟೀಕಿಸಿದೆ. ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು”ವಾಗಿರುವ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ನಿಲ್ಲಿಸುವವರೆಗೆ 65 ವರ್ಷಗಳಷ್ಟು ಹಳೆಯದಾದ ಒಪ್ಪಂದವು ಸ್ಥಗಿತಗೊಳ್ಳುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಪರ್ವತನೇನಿ ಹರೀಶ್ ಹೇಳಿದ್ದಾರೆ. ಪಾಕಿಸ್ತಾನದ ಪ್ರತಿನಿಧಿಯು “ನೀರು ಜೀವನ ಮತ್ತು ಯುದ್ಧದ ಆಯುಧವಲ್ಲ” ಎಂದು ವಿಶ್ವಸಂಸ್ಥೆಯಲ್ಲಿ ಒಪ್ಪಂದದ ವಿಷಯವನ್ನು ಎತ್ತಿದ ನಂತರ ಅವರ ಪ್ರತಿಕ್ರಿಯೆ ಬಂದಿದೆ. ಪಹಲ್ಗಾಮ್ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಏಪ್ರಿಲ್ 23 ರಂದು 1960 ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತು. ಭೀಕರ ಭಯೋತ್ಪಾದಕ ದಾಳಿಗೆ “ಗಡಿಯಾಚೆಗಿನ ಸಂಪರ್ಕ” ಕಂಡುಬಂದ ನಂತರ ನವದೆಹಲಿಯ ಕ್ರಮ ಬಂದಿದೆ. ಭಾರತವು ಯಾವಾಗಲೂ ಮೇಲ್ಮಟ್ಟದ ನದಿಪಾತ್ರ ರಾಷ್ಟ್ರವಾಗಿ…
ಬಾಗಲಕೋಟೆ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ರಾಮಮಂದಿರ ಮಠದ ಲೋಕೇಶ್ವರ ಮಹಾರಾಜ ಸ್ವಾಮೀಜಿ ಬಂಧಿಸಲಾಗಿದೆ. ರಾಯಭಾಗ ತಾಲೂಕಿನ ಮೇಖಳಿಯ ರಾಮಮಂದಿರ ಮಠದ ಲೋಕೇಶ್ವರ ಮಹಾರಾಜನ ಸ್ವಾಮೀಜಿ ವಿರುದ್ಧ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ. ಮೇ.13 ರಂದು ಬಾಲಕಿಯನ್ನು ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರ ಎಸಗಿ ನಂತರ ಬಾಗಲಕೋಟೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸ್ವಾಮೀಜಿಯನ್ನು ಬಂಧಿಸಿದ್ದಾರೆ. ಲೋಕೇಶ್ವರ ಸ್ವಾಮೀಜಿ ತನ್ನ ಜೊತೆ ಅಪ್ರಾಪ್ತೆಯನ್ನು ರಾಯಚೂರು, ಬಾಗಲಕೋಟೆಯ ಲಾಡ್ಜ್ಗಳಿಗೆ ಕರೆದುಕೊಂಡು ಹೋಗಿ 2 ದಿನಗಳ ಕಾಲ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾಗಿದೆ.
BREAKING : 24 ಗಂಟೆಗಳಲ್ಲಿ ಕೇರಳಕ್ಕೆ `ಮುಂಗಾರು ಪ್ರವೇಶ’ : ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ | Monsoon rain
ಬೆಂಗಳೂರು : 24 ಗಂಟೆಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದ್ದು, 16 ವರ್ಷಗಳ ನಂತರ ಮೊದಲಬಾರಿಗೆ ಅವಧಿಗಿಂತ ಮೊದಲು ರಾಜ್ಯದಲ್ಲಿ ಮಳೆಯಾಗಲಿದೆ. ಕೇರಳಕ್ಕೆ ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಮೂರೂ ಜಿಲ್ಲೆಗಳಿಗೆ ಶನಿವಾರದಿಂದ ಒಂದು ವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯುದಂತೆ ಸೂಚಿಸಲಾಗಿದೆ. ಹೀಗಾಗಿ ಮೀನುಗಾರರು ವಾಪಸಾಗಿದ್ದಾರೆ. ಇಂದಿನಿಂದ ಮೇ 28ರ ವರೆಗೆ ಶಿವಮೊಗ್ಗ ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಮುಂದಿನ ಐದು ದಿನ ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ನಿರಂತರವಾಗಿ ಗುಡುಗು ಸಹಿತ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಧಾರವಾಡ, ಉಡುಪಿ, ಶಿವಮೊಗ್ಗ, ಬೆಳಗಾವಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತ್ಯಧಿಕ ಭಾರೀ ಮಳೆಯಾಗಲಿದ್ದು, ಗುಡುಗು ಮಿಂಚು ಸಮೇತ ಮಳೆ…
ಬೆಂಗಳೂರು : ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗಿರುವ ಸರ್ಕಾರದ ಪ್ರಸ್ತಾವ ವಿರೋಧಿಸಿ ಮದ್ಯ ಮಾರಾಟಗಾರರು ಮೇ. 29 ರಿಂದ ಕರ್ನಾಟಕದಾದ್ಯಂತ ಮದ್ಯದಂಗಂಡಿ ಬಂದ್ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ತೀರ್ಮಾನ ಮಾಡಿದ್ದಾರೆ. ರಾಜ್ಯ ಸರ್ಕಾರವು ಮೂರು ಬಾರಿ ಮದ್ಯದ ದರ ಏರಿಕೆ ಮಾಡಿದೆ. ಇದರಿಂದ ಹಿಂದಿನ ರೀತಿಯಲ್ಲಿ ಮದ್ಯ ಮಾರಾಟ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಮದ್ಯ ಮಾರಾಟಗಾರರ ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ, ಮದ್ಯ ಮಾರಾಟಗಾರರ ಸಂಘ ಸಭೆ ಕರೆದು ಸಮಾಲೋಚನೆ ನಡೆಸಿದೆ. ಮದ್ಯ ಮಾರಾಟಗಾರರು ಈ ತಿಂಗಳು 29 ರಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್ ಕ್ಲೋಸ್ ಮಾಡಲು ತೀರ್ಮಾನ ಮಾಡಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ್ ಹೆಗ್ಡೆ ತಿಳಿಸಿದ್ದಾರೆ. ರಾಜ್ಯದಲ್ಲಿ ಜುಲೈನಿಂದ ಅಬಕಾರಿ ವರ್ಷ ಆರಂಭವಾಗಲಿದ್ದು, ಆಗ ರಾಜ್ಯದ ಎಲ್ಲಾ 13 ಸಾವಿರಕ್ಕೂ ಅಧಿಕ ಅಬಕಾರಿ ಸನ್ನದುದಾರರು ತಮ್ಮ ಲೈಸೆನ್ಸ್ ನವೀಕರಿಸಿಕೊಳ್ಳಬೇಕಿದೆ.…
ಮುಂಬೈ : ದೇಶಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿದ್ದು, ಇದೀಗ ಮಹಾರಾಷ್ಟ್ರದಲ್ಲಿ ಒಂದೇ ದಿನ 41 ಕೊರೊನಾ ಕೇಸ್ ಪತ್ತೆ, ಮೂವರು ಬಲಿ ಬಲಿಯಾಗಿದ್ದಾರೆ. ಈ ವರ್ಷದ ಜನವರಿಯಿಂದ ಮಹಾರಾಷ್ಟ್ರದಲ್ಲಿ ಎರಡು COVID-19 ಸಂಬಂಧಿತ ಸಾವುಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇಲಾಖೆಯು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಎರಡೂ ಸಾವುಗಳು ಮುಂಬೈನಿಂದ ವರದಿಯಾಗಿವೆ ಮತ್ತು ಅವು ಕೊಮೊರ್ಬಿಡಿಟಿಗಳನ್ನು ಹೊಂದಿರುವ ರೋಗಿಗಳನ್ನು ಒಳಗೊಂಡಿವೆ. ಮೃತರಲ್ಲಿ ಒಬ್ಬರಿಗೆ ಹೈಪೋಕಾಲ್ಸೆಮಿಯಾ ರೋಗಗ್ರಸ್ತವಾಗುವಿಕೆಯೊಂದಿಗೆ ನೆಫ್ರೋಟಿಕ್ ಸಿಂಡ್ರೋಮ್ ಇತ್ತು, ಆದರೆ ಇನ್ನೊಬ್ಬರು ಕ್ಯಾನ್ಸರ್ ರೋಗಿ ಎಂದು ಅದು ಹೇಳಿದೆ.
ಭೋಪಾಲ್ : ಮಧ್ಯಪ್ರದೇಶದ ಮಂಡ್ಸೌರ್ನ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕಡ್ ರಾಷ್ಟೀಯ ಹೆದ್ದಾರಿಯಲ್ಲಿ ಕಾರಿನಿಂದ ಇಳಿದು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಜೆಪಿ ನಾಯಕನೋರ್ವ ಮಹಿಳೆ ಜೊತೆ ನಡು ರಸ್ತೆಯಲ್ಲೇ ಸೆಕ್ಸ್ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಡ್ಸೌರ್ ಜಿಲ್ಲೆಯ ಬನಿ ಗ್ರಾಮದ ನಿವಾಸಿಯಾಗಿರುವ ಮನೋಹರ್ ಲಾಲ್ ಧಾಕಡ್, ಹೊಸದಾಗಿ ನಿರ್ಮಿಸಿದ 8 ಪಥದ ಹೆದ್ದಾರಿಯಲ್ಲಿ ಆಕ್ಷೇಪಾರ್ಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಮಹಿಳೆಯೊಂದಿಗೆ ಆಕ್ಷೇಪಾರ್ಹ ಕೃತ್ಯ ಎಸಗಿದ ಸುಮಾರು ಮೂರೂವರೆ ನಿಮಿಷಗಳ ವಿಡಿಯೋ ವೈರಲ್ ಆಗಿದೆ. ಏತನ್ಮಧ್ಯೆ, ಧಕಾಡ್ ಮಹಾಸಭಾ ಯುವ ಸಂಘ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದೆ. ಬಿಜೆಪಿ ಕೂಡ ಧಕಾಡ್ನಿಂದ ದೂರ ಸರಿದಿದೆ. ಅವರು ಪಕ್ಷದ ಪ್ರಾಥಮಿಕ ಸದಸ್ಯರಲ್ಲ ಮತ್ತು ಆನ್ಲೈನ್ ನೋಂದಣಿ ಮೂಲಕ ಸೇರಿದ್ದಾರೆ ಎಂದು ಪಕ್ಷ ಸ್ಪಷ್ಟನೆನೀಡಿದೆ.…
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಆಟವಾಡುತ್ತಾ, ಹಾಡುತ್ತ ಇರುವಾಗಲೇ ಸಣ್ಣ ಮಕ್ಕಳು ಕೂಡ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಹೃದಯಾಘಾತ ಸಾವುಗಳು.. ಒಂದು ಜಿಲ್ಲೆ ಅಥವಾ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶಾದ್ಯಂತ ಹಲವು ಅಧ್ಯಯನಗಳು ನಡೆದಿವೆ..ಇದು ಏಕೆ ಹೀಗೆ.. ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದ್ದು..ಭಾರತದಲ್ಲಿ ಶೇಕಡಾ 66 ರಷ್ಟು ಹೃದಯಾಘಾತಕ್ಕೆ ಕಾರಣ.. ಕಡಿಮೆ ಹೋಮೋಸಿಸ್ಟೈನ್ ಮಟ್ಟಗಳು ಹೌದು, ರಕ್ತದಲ್ಲಿ ಹೋಮೋಸಿಸ್ಟೈನ್ ಹೆಚ್ಚಿನ ಮಟ್ಟದಲ್ಲಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಟಾಟಾ 1MG ಲ್ಯಾಬ್ಸ್ ಪ್ರಕಟಿಸಿದ ವರದಿಯ ಪ್ರಕಾರ, 66% ಭಾರತೀಯರ ರಕ್ತದಲ್ಲಿ ಹೆಚ್ಚಿನ ಮಟ್ಟದ ಹೋಮೋಸಿಸ್ಟೈನ್ ಇದ್ದು, ಇದು ವಿವಿಧ ಹೃದಯ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಹೃದ್ರೋಗ ತಜ್ಞರು ಹೇಳಿದ್ದಾರೆ. ಹೋಮೋಸಿಸ್ಟೈನ್ ಒಂದು ಅಮೈನೋ ಆಮ್ಲ. ಈ ಆಮ್ಲ ಪೂರಕವು ಮೂರು ಪ್ರಮುಖ ಜೀವಸತ್ವಗಳ ಕೊರತೆಯನ್ನು ಸೂಚಿಸುತ್ತದೆ: ವಿಟಮಿನ್ ಬಿ 12, ವಿಟಮಿನ್ ಬಿ 6 ಮತ್ತು ವಿಟಮಿನ್ ಬಿ 9. ಒಬ್ಬ ವ್ಯಕ್ತಿಗೆ ಸರಾಸರಿ ಪ್ರತಿ ಲೀಟರ್‌ಗೆ 5 ರಿಂದ 15 ಮೈಕ್ರೋಮೋಲ್‌ಗಳ…