Subscribe to Updates
Get the latest creative news from FooBar about art, design and business.
Author: kannadanewsnow57
ಮಂಡ್ಯ : ಪ್ರೇಯಸಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮನನೊಂದು ಪಾಗಲ್ ಪ್ರೇಮಿಯೊಬ್ಬ ಜಿಲೆಟಿನ್ ನಿಂದ ಸ್ಪೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಸವೇಶ್ವರನಗರದ ನಿವಾಸಿ ರಾಮಚಂದ್ರ (20) ಮೃತಪ್ರೇಮಿ, ಭೋವಿ ಸಮುದಾಯಕ್ಕೆ ಸೇರಿದ ರಾಮಚಂದ್ರ ಹಾಗೂ ಕಾಳೇನಹಳ್ಳಿ ಮತ್ತೊಂದು ಸಮುದಾಯದ ಅಪ್ರಾಪ್ತೆಯೊಬ್ಬಳು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ವಿವಾಹಕ್ಕೆ ವಯಸ್ಸು ಮತ್ತು ಜಾತಿ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಒಂದೂವರೆ ವರ್ಷದ ಹಿಂದೆ ಇಬ್ಬರೂ ಮನೆ ಬಿಟ್ಟು ಪರಾರಿಯಾಗಿದ್ರು. ಅಪ್ರಾಪ್ತೆ ಪೋಷಕರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನೂ ಪತ್ತೆ ಹಚ್ಚಿ ಪೋಕ್ಸೋ ಕೇಸ್ ದಾಖಲಿಸಿ ರಾಮಚಂದ್ರನನ್ನು ಜೈಲಿಗೆ ಕಳುಹಿಸಲಾಗಿತ್ತು. ರಾಜೀ ಸಂದಾನದ ಮೂಲಕ ಇಬ್ಬರೂ ಅವರವರ ಮನೆಯಲ್ಲಿದ್ದರು. ಶನಿವಾರ ತಡರಾತ್ರಿ ಕಾಳೇನಹಳ್ಳಿ ಗ್ರಾಮದಲ್ಲಿ ರಾಮಚಂದ್ರ ಜಿಲಿಟಿನ್ ಸ್ಪೋಟಿಸಿಕೊಂಡು ಪ್ರಿಯತಮೆ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ : ಬೇಯಿಸುತ್ತಿದ್ದ ಗಂಜಿ ಪಾತ್ರೆಗೆ ಬಿದ್ದು 2 ವರ್ಷದ ಮಗು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ. ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಗಂಜಿ ಪಾತ್ರೆಗೆ ಬಿದ್ದು ಕೃಷ್ಣ ಲಂಬೋರ್ (2) ಎಂಬ ಮಗು ಮೃತಪಟ್ಟಿದೆ. ಬೀರು ಲಂಬೋರ ಸಾಕಿದ್ದ ನಾಯಿಗಳಿಗೆ ನೀಡಲು ಗಂಜಿ ಬೇಯಿಸುತ್ತಿದ್ದರು. ಈ ವೇಳೆ ಆಟವಾಡುತ್ತಿದ್ದ ಅವರ 2 ವರ್ಷದ ಮಗ ಕುದಿಯುವ ಗಂಜಿ ಪಾತ್ರೆಯಲ್ಲಿ ಬಿದ್ದು ಮೈಸುಕೊಂಡಿದೆ. ಕೂಡಲು ಗಾಯಗೊಂಡ ಮಗುವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ವಾಷಿಂಗ್ಟನ್ : ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ತಮ್ಮ 100ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಾರ್ಟರ್ ಸೆಂಟರ್ ಭಾನುವಾರ ಹೇಳಿಕೆಯಲ್ಲಿ ಈ ಮಾಹಿತಿ ನೀಡಿದೆ. ಕಾರ್ಟರ್ ಜಾರ್ಜಿಯಾದ ಪ್ಲೇನ್ಸ್ನಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಕಾರ್ಟರ್ ಅಮೆರಿಕದ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಅಧ್ಯಕ್ಷರಾಗಿದ್ದರು. ಅವರ ಪರಂಪರೆಯು ಮಾನವ ಹಕ್ಕುಗಳು ಮತ್ತು ಮಾನವೀಯತೆಯ ಸೇವೆಯಿಂದ ತುಂಬಿದೆ. ಆದರೆ ಅಧ್ಯಕ್ಷರಾಗಿದ್ದಾಗ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಜಿಮ್ಮಿ ಕಾರ್ಟರ್ ಮೆಲನೋಮಾ ಎಂಬ ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕಾರ್ಟರ್ ಅಕ್ಟೋಬರ್ 1, 1924 ರಂದು ಜಾರ್ಜಿಯಾದಲ್ಲಿ ಜನಿಸಿದರು. ಅವರ ತಂದೆ ಕೃಷಿಕರಾಗಿದ್ದರು. ಜಿಮ್ಮಿ ಕಾರ್ಟರ್ ಅವರು 1976 ರಿಂದ 1980 ರವರೆಗೆ ಯುನೈಟೆಡ್ ಸ್ಟೇಟ್ಸ್ನ 39 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಧ್ಯಕ್ಷರಾಗುವ ಮೊದಲು, ಅವರು ಯುನೈಟೆಡ್ ಸ್ಟೇಟ್ಸ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದರು, ಜಾರ್ಜಿಯಾದಲ್ಲಿ ಸೆನೆಟರ್ ಆಗಿದ್ದರು ಮತ್ತು ಜಾರ್ಜಿಯಾದ ಗವರ್ನರ್ ಆಗಿದ್ದರು. ಅವರ ಅಧ್ಯಕ್ಷೀಯ ಅಧಿಕಾರಾವಧಿಯ ನಂತರ,…
ಸೋಮಾವತಿ ಅಮವಾಸ್ಯೆ ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ದಿನ. ಸೋಮಾವತಿ ಅಮವಾಸ್ಯೆ ಎಂದರೆ ಸೋಮವಾರದಂದು ಬರುವ ಅಮವಾಸ್ಯೆ ತಿಥಿ. ಸೋಮವಾರದಂದು ಅಮಾವಾಸ್ಯೆ ಬಂದಾಗ ಸೋಮಾವತಿ ಅಮವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಡಿಸೆಂಬರ್ 30 ಸೋಮಾವತಿ ಅಮವಾಸ್ಯೆ ಬಂದಿದೆ. ಈ ದಿನವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಸೋಮಾವತಿ ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ಗೌರವಿಸಲು ಉಪವಾಸ, ಪೂಜೆ, ತರ್ಪಣ, ಪಿಂಡ ದಾನ, ದಾನಗಳನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲ, ಸೋಮಾವತಿ ಅಮಾವಾಸ್ಯೆಯು ಪೂರ್ವಜನ್ಮದ ಪಾಪಗಳನ್ನು ತೊಡೆದುಹಾಕಲು ಆಚರಣೆಗಳನ್ನು ಮಾಡಲು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಪೂರ್ವಜರಿಗೆ ಮಾಡುವ ಪೂಜೆಗಳು ಅವರ ಆಶೀರ್ವಾದ ಪಡೆಯಲು ಸಹಾಯ ಮಾಡುತ್ತದೆ. ಸೋಮಾವತಿ ಅಮಾವಾಸ್ಯೆಯ ಆಚರಣೆಯು ಪೂರ್ವಜರ ಆಶೀರ್ವಾದ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಕರ್ಮ ಸಾಲಗಳಿಂದ ವಿಮೋಚನೆಯನ್ನು ತರುತ್ತದೆ. ಸೋಮಾವತಿ ಅಮವಾಸ್ಯೆ 2024: ಪೂಜಾ ವಿಧಾನಗಳು ಉಪವಾಸ ಸೋಮಾವತಿ ಅಮಾವಾಸ್ಯೆಯ ದಿನ ಭಕ್ತರು ಅನ್ನ, ಪಾನೀಯ ಸೇವಿಸದೆ ಉಪವಾಸ ಮಾಡುತ್ತಾರೆ. ಪೂಜೆಗಳು ಮತ್ತು ಪ್ರಾರ್ಥನೆಗಳು ಈ ದಿನ ಶಿವನಿಗೆ…
ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನವೊಂದು 160 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ, ಐವರು ಯೋಧರು ಹುತಾತ್ಮರಾಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೊತ್ತೊಬ್ಬ ಯೋಧ ಹುತಾತ್ಮರಾಗಿದ್ದಾರೆ. ಉಧಂಪುರ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 28 ವರ್ಷದ ಯೋಧ ದಿವಿನ್ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಹುತಾತ್ಮರಾಗಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಆಲೂರು ನಿವಾಸಿ ದಿವಿನ್ ಹುತಾತ್ಮರಾಗಿದ್ದಾರೆ. ಈ ಮೂಲಕ ಅಪಘಾತದಲ್ಲಿ ರಾಜ್ಯದ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮೆಂಧಾರ್ನ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಮಂಗಳವಾರ ಸಂಜೆ ಯೋಧರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನವು ಕಮರಿಗೆ ಬಿದ್ದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದು, ದುರಂತದಲ್ಲಿ ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ (33) ಮಹಾಲಿಂಗಪುರದ 25 ವರ್ಷದ ಮಹೇಶ್ ಮರಿಗೊಂಡ ಹುತಾತ್ಮರಾಗಿದ್ದಾರೆ.
ನವದೆಹಲಿ : ಭಾರತದ ‘ಸ್ಪಾಡೆಕ್ಸ್’ ಮಿಷನ್ ಅನ್ನು ಪ್ರಾರಂಭಿಸಲು ಇಸ್ರೋ ಸಂಪೂರ್ಣ ಸಿದ್ಧತೆ ನಡೆಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ರಾತ್ರಿ 9:58 ಕ್ಕೆ PSLV-C60 ರಾಕೆಟ್ನಿಂದ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗುವುದು. ಈ ಕಾರ್ಯಾಚರಣೆಯ ಯಶಸ್ಸಿನೊಂದಿಗೆ, ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಬಾಹ್ಯಾಕಾಶ ‘ಡಾಕಿಂಗ್’ ತಂತ್ರಜ್ಞಾನದ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. ಅದೇ ಸಮಯದಲ್ಲಿ, ಈ ಮಿಷನ್ ಯಶಸ್ವಿಯಾದರೆ, ಭಾರತವು ತನ್ನ ಮುಂದಿನ ಕಾರ್ಯಾಚರಣೆಗಳಾದ ಚಂದ್ರಯಾನ-4, ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಮತ್ತು ಚಂದ್ರನ ಮೇಲೆ ಇಳಿಯುವ ಭಾರತೀಯ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, “ಈ ಕಾರ್ಯಾಚರಣೆಯು ಬಾಹ್ಯಾಕಾಶ ಡಾಕಿಂಗ್ ಅನ್ನು ಕರಗತ ಮಾಡಿಕೊಳ್ಳುವ ಸಾಮರ್ಥ್ಯವಿರುವ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಇರಿಸುತ್ತದೆ. ಈ ತಂತ್ರಜ್ಞಾನವು ಚಂದ್ರನಿಂದ ಮಾದರಿಗಳನ್ನು ಮರಳಿ ತರುವುದು, ಭಾರತೀಯ ಬಾಹ್ಯಾಕಾಶ ನಿಲ್ದಾಣ (ಬಿಎಎಸ್) ಉಡಾವಣೆ ಮುಂತಾದ…
ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ದಿನಾಂಕ: 31.12.2024 ರಂದು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಲ್ಲಿ ತಡರಾತ್ರಿ 2ರವರೆಗೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ: 31.12.2024 ರಂದು ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾತ್ರಿ 11:00 ಗಂಟೆಯ ನಂತರ ತಡರಾತ್ರಿ 02:00 ಗಂಟೆಯವರೆಗೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಕೆಳಕಂಡ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ ಎಂದಿದೆ. ಈ ಕೆಳಕಂಡ ಮಾರ್ಗದಲ್ಲಿ ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರದ ವ್ಯವಸ್ಥೆ 1 G-3 ಬ್ರಿಗೇಡ್ ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ 2 G-4 ಜಿಗಣಿ 3 G-2 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ 4 G-6 ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟ್ರ್ಸ್ 5 G-7 ಜನಪ್ರಿಯ ಟೌನ್ ಶಿಪ್ 6 …
ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗುತ್ತಿದೆ. ಹೊಸ ವರ್ಷಾಚರಣೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ದೃಷ್ಟಿಯಿಂದ ಪೊಲೀಸರು ಸಕಲ ಸಿದ್ಧತೆಯನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಇತರೆ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಂಗಳೂರಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಕಮೀಷನರ್ ಇಬ್ಬರು, ಜಂಟಿ ಪೊಲೀಸ್ ಕಮೀಷನರ್ ಒಬ್ಬರು, ಡಿಸಿಪಿ 15, ಎಸಿಪಿ 45, ಪಿಐ 135, ಪಿಎಸ್ಐ 530, ಎಎಸ್ಐ 655, ಹೆಚ್ ಸಿ, ಪಿಸಿ – 4,833, ಮಹಿಳಾ ಪೊಲೀಸ್ ಸಿಬ್ಬಂದಿ 1048, ಮಫ್ತಿ ಸಿಬ್ಬಂದಿ 597, ಹೋಂ ಗಾರ್ಡ್ 3170, ಸಿವಿಲ್ ಡಿಫೆನ್ಸ್ 800 ಸೇರಿದಂತೆ ಒಟ್ಟು 11,830 ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇದಲ್ಲದೇ ಕೆ ಎಸ್ ಆರ್ ಪಿಯ 72 ತುಕಡಿ, ಕೆ ಎಸ್ ಆರ್ ಪಿ ಬೆಳಗಿನ ಗಸ್ತಿಗೆ 17 ತುಕಡಿ, ಸಿಎಎರ್ ರಾತ್ರಿ ಗಸ್ತಿಗೆ 21 ತುಕಡಿ,…
ಬೆಂಗಳೂರು: ಸಾರಿಗೆ ನೌಕರರು ಕರೆ ನೀಡಿದ್ದ ಡಿ.31ರ ಮುಷ್ಕರವನ್ನು ಕೈಬಿಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದ್ದು ಸಂಕ್ರಾಂತಿಯ ಬಳಿಕ ಸಭೆ ನಡೆಸಿ ಬೇಡಿಕೆಗಳ ಪರಿಶೀಲನೆ ಮಾಡುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಸಂಘಟನೆಗಳು ಮುಷ್ಕರವನ್ನು ಮುಂದೂಡಿವೆ. ಸಾರಿಗೆ ಮುಷ್ಕರವನ್ನು ಜಂಟಿ ಕ್ರಿಯಾ ಸಮಿತಿ ಹಿಂಪಡೆದಿದ್ದು,. ಡಿಸೆಂಬರ್.31ರಂದು ನಡೆಸಲು ನಿರ್ಧರಿಸಿದ್ದಂತ ಪ್ರತಿಭಟನೆಯನ್ನು ವಾಪಾಸ್ ಪಡೆಯಲಾಗಿದೆ. ಹೀಗಾಗಿ ಮಂಗಳವಾರದಂದು ಎಂದಿನಂತೆ ಸಾರಿಗೆ ಬಸ್ಸುಗಳು ರಾಜ್ಯಾಧ್ಯಂತ ಸಂಚಾರ ನಡೆಸಲಿದ್ದಾವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಾರಿಗೆ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮಹತ್ವದ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಸಾರಿಗೆ ಸಿಬ್ಬಂದಿಗಳ ಬೇಡಿಕೆ ಈಡೇರಿಸುವಂತ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಸರ್ಕಾರ ಹಾಗೂ ಸಾರಿಗೆ ಸಿಬ್ಬಂದಿಗಳ ಜೊತೆಗಿನ ಸಂಧಾನ ಸಕ್ಸಸ್ ಆಗಿದ್ದು, ಡಿಸೆಂಬರ್.31ರಂದು ನಡೆಸಲು ನಿರ್ಧರಿಸಿದ್ದಂತ ಮುಷ್ಕರವನ್ನು ಹಿಂಪಡೆದಿರುವುದಾಗಿ ತಿಳಿದು ಬಂದಿದೆ. ಸಂಕ್ರಾಂತಿ ಬಳಿಕ ಮುಷ್ಕರ ನಡೆಸೋ ಬಗ್ಗೆ ನಿರ್ಧಾರವನ್ನು ಕೈಗೊಳ್ಳೋದಾಗಿ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ ಎನ್ನಲಾಗಿದೆ.
ನವದೆಹಲಿ : ಹೊಸ ವರ್ಷಕ್ಕೆ ವಾಹನ ಸವಾರರಿಗೆ ಸಿಹಿಸುದ್ದಿ ಸಿಗಲಿದ್ದು, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಮತ್ತು ಬಳಕೆಯನ್ನು ಹೆಚ್ಚಿಸಲು ಮುಂಬರುವ ಕೇಂದ್ರ ಬಜೆಟ್ನಲ್ಲಿ ಕನಿಷ್ಠ ವೇತನವನ್ನು ಹೆಚ್ಚಿಸಲು ಸಲಹೆ ನೀಡಿದೆ. CII 2025-26 ರ ಆರ್ಥಿಕ ವರ್ಷದ ಸಾಮಾನ್ಯ ಬಜೆಟ್ಗೆ ತನ್ನ ಸಲಹೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಮನವಿ ಮಾಡಿದೆ. ಇಂಧನ ಬೆಲೆಗಳು ಹಣದುಬ್ಬರವನ್ನು ಗಣನೀಯವಾಗಿ ಹೆಚ್ಚಿಸುವುದರಿಂದ, ವಿಶೇಷವಾಗಿ ಕಡಿಮೆ ಆದಾಯದ ಮಟ್ಟದಲ್ಲಿ ಬಳಕೆಯನ್ನು ಹೆಚ್ಚಿಸಲು ಈ ಸಡಿಲಿಕೆಯನ್ನು ನೀಡಬೇಕು ಎಂದು ಉದ್ಯಮ ಸಂಸ್ಥೆ ಹೇಳಿದೆ. ವರದಿಗಳ ಪ್ರಕಾರ, ವಾರ್ಷಿಕ 20 ಲಕ್ಷ ರೂಪಾಯಿವರೆಗಿನ ವೈಯಕ್ತಿಕ ಆದಾಯದ ಕನಿಷ್ಠ ತೆರಿಗೆ ದರಗಳನ್ನು ಕಡಿಮೆ ಮಾಡಲು ಬಜೆಟ್ ಪರಿಗಣಿಸಬಹುದು ಎಂದು CII ಹೇಳಿದೆ. ಇದು ಬಳಕೆಯ ಚಕ್ರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಹೆಚ್ಚಿನ ಬೆಳವಣಿಗೆ ಮತ್ತು ಹೆಚ್ಚಿನ ತೆರಿಗೆ ಆದಾಯ. ವ್ಯಕ್ತಿಗಳಿಗೆ ಗರಿಷ್ಠ ಕನಿಷ್ಠ ದರವಾದ 42.74…