Author: kannadanewsnow57

ಕೊಚ್ಚಿ : ಕೇರಳದ ಚೆಂದಮಂಗಲಂನಲ್ಲಿ ಯುವಕನೊಬ್ಬ ಒಂದೇ ಕುಟುಂಬದ ಮೂವರನ್ನು ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗುರುವಾರ ಸಂಜೆ ಕುಟುಂಬದ ನೆರೆಹೊರೆಯವರಾದ ರಿತು ಜಯನ್ (28) ಅವರನ್ನು ಮೋಟಾರ್ ಸೈಕಲ್ ಸ್ಟಂಪ್‌ನಿಂದ ಹೊಡೆದಿದ್ದಾರೆ. ಅದೇ ದಿನ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಮೃತರನ್ನು ವೇಣು (65), ಉಷಾ (62) ಮತ್ತು ವಿನೀಶಾ (32) ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಜಿತಿನ್ (35) ಅವರನ್ನು ಪರ್ವೂರ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಣು ಚೆಂದಮಂಗಲಂನಲ್ಲಿ ತನ್ನ ಪತ್ನಿ ಉಷಾ, ಮಗಳು ವಿನೀಶ್ ಮತ್ತು ಅಳಿಯ ವಿನೀಶ್ ಜೊತೆ ವಾಸಿಸುತ್ತಿದ್ದಾರೆ. ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಕೊಲೆ ಮಾಡುವ ಉದ್ದೇಶದಿಂದ ರಿತು ವೇಣು ಅವರ ಮನೆಗೆ ಅತಿಕ್ರಮಣ ಮಾಡಿದ್ದಾರೆ. ರಿತು ಅವರ ಮೇಲೆ ಮೋಟಾರ್ ಸೈಕಲ್ ಸ್ಟಂಪ್‌ನಿಂದ ಹಲ್ಲೆ ನಡೆಸಿ, ನಂತರ ಚಾಕುವಿನಿಂದ ಇರಿದಿದ್ದಾನೆ. ವರದಿಗಳ ಪ್ರಕಾರ, ಈ ಘಟನೆಯ ಸಮಯದಲ್ಲಿ, ವಿನೀಶಾ ಮತ್ತು ಜಿತಿನ್ ಅವರ ಇಬ್ಬರು ಮಕ್ಕಳು…

Read More

ನವದೆಹಲಿ : ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮದುವೆಯ ವರ ಕಾರಿನಲ್ಲಿ ಸುಟ್ಟು ಕರಕಲಾಗಿರುವ ಘೋರ ಘಟನೆ ನವದೆಹಲಿಯ ಘಾಜಿಪುರದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ನಡೆದಿದೆ. ಹೌದು ಗ್ರೇಟರ್ ನೋಯ್ಡಾದ ನಿವಾಸಿ ಅನಿಲ್ ಮೃತ ವರ ಎಂದು ತಿಳಿದುಬಂದಿದೆ. ನಿನ್ನೆ ಅನೀಲ್ ಆಮಂತ್ರಣ ಪತ್ರಿಕೆ ಹಂಚಲು ಹೊರಗೆ ಹೋಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಸಂಜೆಯಾದರೂ ವಾಪಸ್ ಬಾರದ್ದನ್ನು ಕಂಡು ಕರೆ ಮಾಡಿದೆವು. ಆದರೆ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. https://twitter.com/i/status/1880269986473852975 ರಾತ್ರಿ 11:30ರ ಸುಮಾರಿಗೆ ಅನಿಲ್‌ಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿದ್ದರು ಎಂದು ಅನಿಲ್ ಅಣ್ಣ ಸುಮಿತ್ ತಿಳಿಸಿದ್ದಾರೆ. ಈ ಒಂದು ಅಪಘಾತದಲ್ಲಿ ಕಾರಿಗೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎನ್ನುವುದು ಮಾತ್ರ ತಿಳಿದಿಲ್ಲ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಡುಗೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಒಂದು ಬಾರಿಗೆ ಇಡಿಗಂಟು ಸೌಲಭ್ಯಕ್ಕೆ ಸರ್ಕಾರ ಅವಕಾಶ ನೀಡಿದೆ. ಈ ಇಡುಗಂಟು ಪಡೆಯಲು ಕಡ್ಡಾಯವಾಗಿ ಕೆಲ ದಾಖಲೆಗಳನ್ನು ಸಲ್ಲಿಸಬೇಕಿದೆ. ಅವು ಯಾವುವು ಅಂತ ಮುಂದೆ ಓದಿ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆವಿ ತ್ರಿಲೋಕ ಚಂದ್ರ ಅವರು ಸುತ್ತೋಲೆ ಹೊರಡಿಸಿದ್ದು, ಪ್ರಧಾನಮಂತ್ರಿ ಪೋಷಣೆ ಶಕ್ತಿ ನಿರ್ಮಾಣ (ಮಧ್ಯಾಹ್ನ ಉಪಹಾರ ಯೋಜನೆ) ಕಾರ್ಯಕ್ರಮದಡಿ ಆಯ್ಕೆಗೊಂಡು ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದು, ದಿನಾಂಕ:31.03.2022 ರಂದು 60 ವರ್ಷಗಳ ವಯೋಮಿತಿಯನ್ನು ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿರುವ ಮತ್ತು ಈ ದಿನಾಂಕದ ನಂತರದ ಅವಧಿಯಲ್ಲಿ 60 ವರ್ಷ ವಯೋಮಾನ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದುವ ಅಡುಗೆ ಸಿಬ್ಬಂದಿಗೆ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಸರ್ಕಾರವು ಮಂಜೂರು ಮಾಡಿ ಆದೇಶವನ್ನು ಉಲ್ಲೇಖದ ರೀತ್ಯಾ ನೀಡಿರುತ್ತದೆ. ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ನೀಡಿರುವ ಷರತ್ತುಗಳನ್ನು ಮತ್ತು ಕೆಳಕಂಡ ಸೂಚನೆಗಳನ್ನು ಅನ್ವಯಿಸಿಕೊಂಡು ಅಡುಗೆ ಸಿಬ್ಬಂದಿಗೆ ಅವರು ಸಲ್ಲಿಸಿರುವ ತಾತ್ಕಾಲಿಕ…

Read More

ಮೈಸೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿನ ಮಹಾ ಕುಂಭಮೇಳದ ಬೆನ್ನಲ್ಲೇ ಕರ್ನಾಟಕದಲ್ಲೂ ಕುಂಭಮೇಳ ಆಯೋಜಿಸಲು ಡೇಟ್ ಫಿಕ್ಸ್ ಆಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದಂತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು, ಫೆಬ್ರವರಿ 10, 11 ಮತ್ತು 12ರಂದು ಮೂರು ದಿನಗಳ ಕಾಲ ಟಿ.ನರಸೀಪುರದ ಮೂರು ನದಿಗಳ ಸಂಗಮ ಸ್ಥಳದಲ್ಲಿ ಕುಂಭಮೇಳವನ್ನು ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಪ್ರತಿ ಮೂರು ವರ್ಷಗಳಿಗೊಮ್ಮೆ ಟಿ.ನರಸೀಪುರದಲ್ಲಿ ಕುಂಭಮೇಳ ನಡೆಯುತ್ತದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 10 ಕೋಟಿ ನೀಡುವಂತೆ ಜಿಲ್ಲಾಡಳಿತ ಪ್ರಸ್ತಾವನೆಯನ್ನು ಸಲ್ಲಿಸಿದೆ. ಕಳೆದ ಬಾರಿ 4 ಕೋಟಿ ಕೊಡಲಾಗಿತ್ತು. ಈ ಬಾರಿ 5 ರಿಂದ 6 ಕೋಟಿ ನೀಡುವ ನಿರೀಕ್ಷೆಯಿದೆ ಎಂದರು. ಮೂರು ದಿನಗಳ ಕಾಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಟಿ.ನರಸೀಪುರದಲ್ಲಿನ ಕುಂಭಮೇಳದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ನಾನು ಕೂಡ ಪುಣ್ಯಸ್ನಾನ ಮಾಡುತ್ತೇನೆ. ನನಗೆ ಧಾರ್ಮಿಕ ಆಚರಣೆಗಳಿಗೆ ವೈಯಕ್ತಿಕವಾಗಿ ವಿರೋಧವಿಲ್ಲ. ಅವರವರ ಧಾರ್ಮಿಕ ನಂಬಿಕೆಯಂತೆ ಆಚರಣೆ ಮಾಡುತ್ತಾರೆ. ಇದು ಸಂವಿಧಾನಾತ್ಮಕ ಹಕ್ಕು…

Read More

ಬೆಂಗಳೂರು : ಕೈಗಾರಿಕಾ ತರಬೇತಿ ಉದ್ಯೋಗ ಇಲಾಖೆ ವತಿಯಿಂದ ಯುವನಿಧಿ ಯೋಜನೆಯಡಿ ನೋಂದಣಿ ಆಗುವ ಪದವೀಧರರಿಗೆ / ಸ್ನಾತಕೋತ್ತರ ಪದವೀಧರರಿಗೆ ಮಾಹೆಯಾನ ರೂ.3000/- ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ಮಾಹೆಯಾನ ರೂ.1500/- ನಿರುದ್ಯೋಗ ಭತ್ಯೆಯವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತಿದೆ. ಯುವನಿಧಿ ಯೋಜನೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ನೋದಾಯಿಸಲು “ಯುವನಿಧಿ ವಿಶೇಷ ನೋಂದಣಿ ಅಭಿಯಾನ”ವನ್ನು ಜನವರಿ 6 ರಿಂದ 20 ರವರಗೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಂಗಳೂರು. ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು. ಸಿಓಇ ಕಟ್ಟಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ತುಮಕೂರು ರಸ್ತೆ, ಪೀಣ್ಯ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗ ವಿನಿಮಯ ಕಛೇರಿಗಳು ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುವನಿಧಿ ಸಹಾಯವಾಣಿ ಹಾಗೂ ನೋಂದಣಿ ಕೇಂದ್ರಗಳನ್ನು ತರೆಯಲಾಗಿದ್ದು, ಈ ಕೇಂದ್ರಗಳಲ್ಲಿ ಅಥವಾ ವೆಬ್ ಸೈಟ್ www.sevasindhugs.karnataka.gov.in ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಕರ್ನಾಟದಲ್ಲಿ ವಾಸವಿರುವವರು…

Read More

ಗದಗ : ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ನದಿ ನೀರಿನ ಮಾದರಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಈ ನೀರು ಸದ್ಯ ಕುಡಿಯಲು ಯೋಗ್ಯವಿಲ್ಲವೆಂದು ಪ್ರಾಥಮಿಕ ವರದಿ ತಿಳಿಸಿದೆ. ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವಾಗಿರುವ ಅಂಶ ಪತ್ತೆ ಹಚ್ಚಲು ನದಿ ನೀರಿನ ಮಾದರಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ನೀರು ಕುಡಿಯಲು ಯೋಗ್ಯ ಅಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ. ನದಿ ನೀರು ಹಸಿರು ಬಣ್ಣಕ್ಕೆ ತಿರುಗಲು ಕಾರಣವಾಗಿರುವ ಬಗ್ಗೆ ವೈಜ್ಞಾನಿಕ ಅಂಶ ಪರಿಶೀಲಿಸಲು ಸಹ ಸೂಕ್ತ ಕ್ರಮ ಕೈಗೊಳ್ಳಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಈ ನೀರನ್ನು ಉಪಯೋಗಿಸದಂತೆ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Read More

ಬೆಂಗಳೂರು : 2025 ಹೊಸ ವರ್ಷಕ್ಕೆ ಹೊಸ ಕಾರು ಹಾಗೂ ಬೈಕ್ ಖರೀದಿಸುವವರಿಗೆ ಇದೀಗ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಹೌದು ಹೊಸ ಕಾರು ಹಾಗೂ ಬೈಕ್ ಕೊಂಡುಕೊಳ್ಳುವವರಿಗೆ ಖರೀದಿಯ ನೋಂದಣಿ ಶುಲ್ಕ ತಲಾ 1000 ರೂ. ಹಾಗೂ 500 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ. ಈಗಾಗಲೇ ಬೆಳಗಾವಿಯ ಅಧಿವೇಶನದಲ್ಲಿ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಳದ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹೌದು ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ, ಹೊಸ ಬೈಕ್ ಹಾಗೂ ಕಾರು ಖರೀದಿಸುವ ನೊಂದಣಿ ಶುಲ್ಕ ಹೆಚ್ಚಳ ಮಾಡುವ ಕುರಿತು ಮಸೂದೆ ಮಂಡನೆ ಮಾಡಲಾಗಿತ್ತು. ಹಾಗಾಗಿ ಫೆಬ್ರವರಿಯಿಂದ ಪರಿಷ್ಕೃತ ದರ ಜಾರಿ ಆಗಲಿದೆ.ದರ ಹೆಚ್ಚಳದಿಂದ ಬಂದ ಹಣವನ್ನು ಯೆಲ್ಲೋ ಬೋರ್ಡ್ ಚಾಲಕರ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ದರ ಹೆಚ್ಚಳ ಸಂಬಂದ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಸದ್ಯ ವಾಹನ್ – 4 ನಲ್ಲಿ ಅಪ್​ಡೇಟ್ ಮಾಡಲಾಗುತ್ತಿದೆ‌.…

Read More

ವಾಷಿಂಗ್ಟನ್ : ಇಂದಿನಿಂದ ಅಮೆರಿಕದಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಯುಗ ಆರಂಭವಾಗಲಿದೆ. ಇಂದು ಅಮೆರಿಕದ 47 ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ರಾತ್ರಿ 10.30 ಕ್ಕೆ ಡೊನಾಲ್ಟ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಟ್ರಂಪ್ ಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಟೆಕ್ ಸಿಇಒಗಳಾದ ಎಲೋನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್ಬರ್ಗ್ ಭಾಗವಹಿಸಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಟೆಸ್ಲಾ, ಅಮೆಜಾನ್ ಮತ್ತು ಮೆಟಾ ಸಿಇಒಗಳು ಟ್ರಂಪ್ ಅವರ ಕ್ಯಾಬಿನೆಟ್ ನಾಮನಿರ್ದೇಶಿತರು ಮತ್ತು ಇತರ ಚುನಾಯಿತ ಅಧಿಕಾರಿಗಳೊಂದಿಗೆ ಕುಳಿತುಕೊಳ್ಳಲಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ. ಬೆಜೋಸ್ ಅವರ ಅಮೆಜಾನ್ ಮತ್ತು ಜುಕರ್ಬರ್ಗ್ ಅವರ ಮೆಟಾ ಎರಡೂ ಟ್ರಂಪ್ ಪದಗ್ರಹಣಕ್ಕೆ ತಲಾ 1 ಮಿಲಿಯನ್ ಡಾಲರ್ ಕೊಡುಗೆ ನೀಡಿವೆ. ಟೆಸ್ಲಾ, ಸ್ಪೇಸ್ಎಕ್ಸ್ ಮತ್ತು ಎಕ್ಸ್ ಮುಖ್ಯಸ್ಥರಾಗಿರುವ ಮಸ್ಕ್, ನವೆಂಬರ್ನಲ್ಲಿ ಟ್ರಂಪ್…

Read More

ಬೆಂಗಳೂರು: ರಾಜ್ಯ ಸರ್ಕಾರವು ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದು, ಇಂದಿನಿಂದ ಜಾರಿಗೆ ಬರುವಂತೆ ಬಿಯರ್ ದರ ಏರಿಕೆ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರವು ಬಿಯರ್ ಬೆಲೆಯಲ್ಲಿ 10 ರಿಂದ 50 ರೂ.ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗಿದ್ದು, ಬಿಯರ್ ನಲ್ಲಿನ ಅಲ್ಕೋಹಾಲ್ ಅಂಶದ ಮೇಲೆ ದರ 10 ರಿಂದ 50 ರೂ.ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್ ಗಳ ಬೆಲೆ ಯಥಾಸ್ಥಿತಿ ಇರಲಿದ್ದು, ಸ್ಟ್ರಾಂಗ್ ಬಿಯರ್ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದಿನಿಂದಲೇ ದರ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಯರ್ ಪ್ರಿಯರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಐಎಂಎಲ್‌ ಹಾಗೂ ಬಿಯರ್‌ ಸ್ಪ್ಯಾಬ್‌ಗಳನ್ನು ಪರಿಷ್ಕರಿಸಲಾಗುವುದು ಎಂದು ಪ್ರಕಟಿಸಿದ್ದರು. ಅದರಂತೆ, ಐಎಂಎಲ್‌ ದರ ಪರಿಷ್ಕರಿಸಲಾಗಿತ್ತು. ಆದರೆ, ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಅಲ್ಕೋಹಾಲ್‌ ಪ್ರಮಾಣಕ್ಕೆ ತಕ್ಕಂತೆ ಪರಿಷ್ಕರಿಸಲು…

Read More

ಹಾಸನ : ರಾಜ್ಯದಲ್ಲಿ ಆನ್ ಲೈನ್ ಗೇಮ್ ಗೆ ಮತ್ತೊಂದು ಬಲಿಯಾಗಿದ್ದು, ಡೆತ್ ನೋಟ್ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ. ಬೇಲೂರು ಬಸ್ ನಿಲ್ದಾಣದ ಬಳಿಯಿರುವ ಪುಷ್ಪಗಿರಿ ಲಾಡ್ಜ್ ನಲ್ಲಿ ಬೇಲೂರು ತಾಲೂಕಿನ ಚೋಕನಹಳ್ಳಿ ಗ್ರಾಮದ ರಾಕೇಶ್ ಗೌಡ (23) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಕೇಶ್ ಟಾಟಾ ಕ್ಯಾಪಿಟಲ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಹಲವಾರು ತಿಂಗಳಿಂದ ಆನ್ ಲೈನ್ ಗೇಮ್ ಆಡುತ್ತಿದ್ದ ಎನ್ನಲಾಗಿದೆ. ರಮ್ಮಿ ಗೇಮ್ ನಲ್ಲಿ ಆಟವಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದ ರಾಕೇಶ್ ಗೌಡ ಇದೀಗ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಮ್ಮಿ ಆನ್ ಲೈನ್ ಗೇಮ್ ಬ್ಯಾನ್ ಮಾಡಬೇಕು, ಯಾರೂ ಗೇಮ್ ಆಡಬೇಡಿ ಎಂದು ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾನೆ.

Read More