Subscribe to Updates
Get the latest creative news from FooBar about art, design and business.
Author: kannadanewsnow57
ನವದೆಹಲಿ : ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಫಂಗಲ್ ಚಂಡಮಾರುತದಿಂದಾಗಿ ಕರ್ನಾಟಕ, ತಮಿಳುನಾಡು ಸೇರಿ ದೇಶದ ಏಳು ರಾಜ್ಯಗಳಿಗೆ ಸವಾಲಾಗಿ ಪರಿಣಮಿಸಬಹುದು. ಈ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇಂದು ಈ ಚಂಡಮಾರುತವು ಪುದುಚೇರಿಯ ಕಾರೈಕಲ್ ಮತ್ತು ತಮಿಳುನಾಡಿನ ಮಹಾಬಲಿಪುರಂ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಇದರ ಪರಿಣಾಮದಿಂದ ತಮಿಳುನಾಡು, ಪುದುಚೇರಿ, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗ ಗಂಟೆಗೆ 100 ಕಿಲೋಮೀಟರ್ ವರೆಗೆ ಇರುತ್ತದೆ. ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ಸಿದ್ಧತೆಗಳನ್ನು ತೀವ್ರಗೊಳಿಸಿರುವ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು ಮುಂಜಾಗ್ರತಾ ಕ್ರಮವಾಗಿ ಇಂದು ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚುವಂತೆ ಆದೇಶಿಸಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯದಾದ್ಯಂತ ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಎಲ್ಲಾ ಪರೀಕ್ಷೆಗಳು ಮತ್ತು ಕೋಚಿಂಗ್ ತರಗತಿಗಳನ್ನು ರದ್ದುಗೊಳಿಸಲಾಗಿದೆ. ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೂ ಪರಿಣಾಮ…
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೈಜೀರಿಯಾದ ನೈಜರ್ ನದಿಯಲ್ಲಿ ದೋಣಿ ಮಗುಚಿ ಕನಿಷ್ಠ 100 ಪ್ರಯಾಣಿಕರು ನಾಪತ್ತೆಯಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮಹಿಳೆಯರು ಎಂದು ವರದಿಯಾಗಿದೆ. “ಶುಕ್ರವಾರ ಮುಂಜಾನೆ, ಸುಮಾರು 200 ಪ್ರಯಾಣಿಕರನ್ನು ಹೊತ್ತ ದೋಣಿ ಕೋಗಿ ರಾಜ್ಯದಿಂದ ನೆರೆಯ ಆಹಾರ ಮಾರುಕಟ್ಟೆಗಾಗಿ ಹೊರಟಿತು. ಈ ಸಮಯದಲ್ಲಿ ನೈಜರ್ ನದಿಯಲ್ಲಿ ದೋಣಿ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಎಲ್ಲಾ ಪ್ರಯಾಣಿಕರು ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ನಾವು ತೀವ್ರ ಶೋಧ ಕಾರ್ಯಾಚರಣೆಯನ್ನ ಪ್ರಾರಂಭಿಸುತ್ತಿದ್ದೇವೆ” ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ. ಕನಿಷ್ಠ 100 ಪ್ರಯಾಣಿಕರು ನಾಪತ್ತೆಯಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನದಿನಲ್ಲಿ ದೋಣಿ ಮಗುಚಲು ಓವರ್ಲೋಡ್ ಕಾರಣವಾಗಿರಬಹುದು.
ನವದೆಹಲಿ : ಹಾವು ಕಡಿತವನ್ನು ಘೋಷಿತ ಕಾಯಿಲೆ ಎಂದು ಕೇಂದ್ರ ಸರ್ಕಾರವು ಘೋಷಿಸಿದ್ದು, ಜನತೆಗೆ ಇದುವರೆಗೂ ಇಂಥ ಘೋಷಣೆ ಮಾಡದ ರಾಜ್ಯಗಳಿಗೆ ಇಂಥ ಘೋಷಣೆ ಮಾಡುವಂತೆ ಸರ್ಕಾರ ತಿಳಿಸಿದೆ. ಹಾವು ಕಡಿತದಿಂದ ಪ್ರತಿವರ್ಷ ದೇಶದಲ್ಲಿ 50000 ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದು, ಇದನ್ನು ತಡೆಯಲು ಕೇಂದ್ರ ಸರ್ಕಾರ ಈ ಘೋಷಣೆ ಮಾಡಿದೆ. ಹಾವು ಕಡಿತದ ಪ್ರಕರಣಗಳು ಮತ್ತು ಸಾವುಗಳನ್ನು ರಾಜ್ಯ ಸಾರ್ವಜನಿಕ ಆರೋಗ್ಯ ಕಾಯಿದೆಯ ಸಂಬಂಧಿತ ನಿಬಂಧನೆಗಳು ಅಥವಾ ಇತರ ಅನ್ವಯವಾಗುವ ಶಾಸನಗಳ ಅಡಿಯಲ್ಲಿ ಎಲ್ಲಾ ರಾಜ್ಯಗಳು “ಅಧಿಸೂಚಿಸಬಹುದಾದ ರೋಗ” ವನ್ನಾಗಿ ಮಾಡಲು ಕೇಂದ್ರವು ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿದೆ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು (ವೈದ್ಯಕೀಯ ಕಾಲೇಜುಗಳು ಸೇರಿದಂತೆ) ಎಲ್ಲಾ ಶಂಕಿತ ವರದಿಗಳನ್ನು ಕಡ್ಡಾಯವಾಗಿ ವರದಿ ಮಾಡುತ್ತವೆ, ಸಂಭವನೀಯ ಹಾವು ಕಡಿತ ಪ್ರಕರಣಗಳು ಮತ್ತು ಸಾವುಗಳು. ಹಾವು ಕಡಿತವು ಸಾರ್ವಜನಿಕ ಆರೋಗ್ಯದ ಕಾಳಜಿಯ ವಿಷಯವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಅವು ಮರಣ, ರೋಗ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುತ್ತವೆ ಎಂದು…
ಬೆಂಗಳೂರು : 2024-25ನೇ ಸಾಲಿನಲ್ಲಿ ಮೆಟ್ರಿಕ ನಂತರದ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1 ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಸ್ನಾತಕೋತ್ತರ ಪದವಿ, ವೃತ್ತಿ ಪರ ಪದವಿ ಹಾಗೂ ವೃತ್ತಿ ಪರ ಸ್ನಾತಕೋತ್ತರ ಪದವಿಗಳ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ-ನಂತರದ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ, ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದು, ಪ್ರಯುಕ್ತ ವಿದ್ಯಾರ್ಥಿಗಳ ಹಿತದೃಷ್ಟಿಯಿಚಿದ ನವೆಂಬರ 30, 2024 ರವರೆಗೆ ವಿಸ್ತರಿಸಲಾಗಿದ್ದು, ನ.30 ರ ಇಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ಸಹಾಯವಾಣಿ ದೂರವಾಣಿ ಸಂಖ್ಯೆ: 8050770005, ಅಥವಾ bcwdhelpline@gmail.com ಗೆ ಭೇಟಿ ನೀಡಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ಮಂಗನ ಕಾಯಿಲೆ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮ ಕೈಗೊಂಡಿದ್ದು, ಪೀಡಿತ ಪ್ರದೇಶಗಳಲ್ಲಿ ಸಂಚಾರಿ ಮೊಬೈಲ್ ಕ್ಲಿನಿಕ್ ಆರಂಭಿಸಲಾಗುವುದು ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವರು, ಮಲೆನಾಡು ಪ್ರದೇಶವನ್ನು ಬಹುವರ್ಷಗಳಿಂದ ಕಾಡುತ್ತಿರುವ ಮಂಗನ ಕಾಯಿಲೆ ತಡೆಗೆ ನಮ್ಮ ಸರ್ಕಾರವು ನಿರ್ಣಾಯಕ ಹೆಜ್ಜೆಯಿಟ್ಟಿದ್ದು, 2026ರ ವೇಳೆಗೆ ಕೆಎಫ್‌ಡಿ ಲಸಿಕೆ ಲಭ್ಯವಾಗಲಿದೆ. ಅಷ್ಟರೊಳಗೆ ಕಾಯಿಲೆಯನ್ನು ತಹಬದಿಗೆ ತರಲು ಒಂದೂವರೆ ತಿಂಗಳಲ್ಲಿ ಕೆಎಫ್‌ಡಿ ಪೀಡಿತ ಪ್ರದೇಶಗಳಲ್ಲಿ ಪ್ರತ್ಯೇಕ ಸಂಚಾರಿ ಮೊಬೈಲ್ ಕ್ಲಿನಿಕ್ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. https://twitter.com/KarnatakaVarthe/status/1862426767572836825
2024-25ನೇ ಸಾಲಿಗೆ 5 ವಾರದ ಕೋಳಿ ಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ತಲಾ 20ರಂತೆ ಕೋಳಿ ಮರಿಗಳನ್ನು ವಿತರಿಸಿ ಆದಾಯ ಹೆಚ್ಚಿಸುವ ಕಾರ್ಯಕ್ರಮ ಅನುಷ್ಟಾನಗೊಳಿಸುತ್ತಿದ್ದು, ಈ ಸಂಬಂಧ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.15 ಕೊನೆಯ ದಿನ. ರೈತ ಮಹಿಳೆಯರು, ಸ್ವ-ಸಹಾಯ ಗುಂಪಿನ ಸದಸ್ಯರು, ಪ್ರಾಥಮಿಕ ಕೋಳಿ ಸಹಕಾರ ಸಂಘಗಳಲ್ಲಿರುವ ಮಹಿಳಾ ಸದಸ್ಯರು ಮತ್ತು ರೈತ ಉತ್ಪಾದಕ ಸಂಸ್ಥೆಯ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಅಗತ್ಯ ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ಪಶು ವೈದ್ಯಾಧಿಕಾರಿ(ಆಡಳಿತ) ಅಥವಾ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಪಶುವೈದ್ಯಾಧಿಕಾರಿ 9482943111, ಚಳ್ಳಕೆರೆ 9448816499, ಹೊಳಲ್ಕೆರೆ 9972965479, ಹೊದುರ್ಗ 9945298407, ಹಿರಿಯೂರು 9483451044, ಮೊಳಕಾಲ್ಮೂರು 9900964820 ಗೆ ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮತ್ತೊಮ್ಮೆ ಸರ್ಜರಿ ಮಾಡಿದ್ದು, ಇಬ್ಬರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸ್ಥಳ ನಿರೀಕ್ಷಣೆಯಲ್ಲಿರುವ ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ ವರ್ಗಾವಣೆಗೊಂಡ ಅಧಿಕಾರಿಗಳು ಸುರೇಕಾ : ಕೆಎಎಸ್ (ಹಿ.ಶ್ರೇ) ಅಧಿಕಾರಿ- ಕುಲಸಚಿವರು (ಆಡಳಿತ) ಬೀದರ್ ವಿಶ್ವವಿದ್ಯಾಲಯ ಬೀದರ್-ಹುದ್ದೆಗೆ ರಜನಿಕಾಂತ : ಕೆಎಎಸ್ (ಕಿ.ಶ್ರೇ) ಅಧಿಕಾರಿ- ಆಡಳಿತ ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು-ಹುದ್ದೆಗೆ
ಬೆಂಗಳೂರು: 384 ಕೆಎಎಸ್ ಅಧಿಕಾರಿಗಳ ಹುದ್ದೆ ನೇಮಕಾತಿಗಾಗಿ ಪೂರ್ವಭಾವಿ ಮರು ಪರೀಕ್ಷೆಗೆ ಡೇಟ್ ಫೀಕ್ಸ್ ಮಾಡಲಾಗಿದೆ. ಡಿ.29, 2024ರಂದು ಪರೀಕ್ಷೆ ನಡೆಸಲು ನಿಗದಿ ಪಡಿಸಲಾಗಿದೆ. ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಖ್ಯೆ : ಪಿಎಸ್ ಸಿ 509 ಇ(1)/2023-24, ದಿನಾಂಕ 26-02-2024 ರಂದು ನಡೆಸಲು ಅಧಿಸೂಚನೆ ಹೊರಡಿಸಿದ್ದು, ಪೂರ್ವಭಾವಿ ಮರುಪರೀಕ್ಷೆಯನ್ನು ದಿನಾಂಕ:29-12-2024ರಂದು ನಡೆಸಲು ನಿಗದಿಪಡಿಸಿರುತ್ತದೆ. ಸದರಿ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಅಭ್ಯರ್ಥಿಗಳು ಆಯೋಗದ ವೆಬ್ ಸೈಟ್ನ Applicant Login ನಿಂದ ದಿನಾಂಕ:26-11-2024ರಂದು ತಂತ್ರಾಂಶದಲಿನ ದೋಷದಿಂದಾಗಿ ಪ್ರವೇಶ ಪತ್ರವನ್ನು Download ಮಾಡಿಕೊಂಡಿರುತ್ತಾರೆಂದು ತಿಳಿದುಬಂದಿರುತ್ತದೆ, ಆಯೋಗವು ದಿನಾಂಕ:29-12-2024ರ ಪೂರ್ವಭಾವಿ ಮರುಪರೀಕ್ಷೆಯ ಸಂಬಂಧ ಯಾವುದೇ ಪ್ರವೇಶ ಪತ್ರವನ್ನು ಆಯೋಗದ ವೆಬ್‌ಸೈಟ್‌ನಲ್ಲಿ.. ಅಧಿಕೃತವಾಗಿ ಬಿಡುಗಡೆ ಮಾಡಿರುವುದಿಲ್ಲವಾದ ಕಾರಣ ತಾಂತ್ರಿಕ ದೋಷದಿಂದಾಗಿ ಪ್ರಸ್ತುತ Download ಮಾಡಿಕೊಂಡಿರುವ ಪ್ರದೇಶ ಪತ್ರಗಳನ್ನು ಅಸಿಂಧುಗೊಳಿಸಿದೆ. ಮುಂದುವರೆದು, ಎಲಾ., ಅಭ್ಯರ್ಥಿಗಳಿಗೆ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರವನ್ನು Download ಮಾಡಿಕೊಳ್ಳುವ ಕುರಿತು ತಿಳಿಸಲಾಗಿದೆ.
ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ತುಟ್ಟಿ ಭತ್ಯೆಯ ದರಗಳನ್ನು 1ನೇ ಜುಲೈ 2024 ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ 8.50% ರಿಂದ 10.75% ಕ್ಕೆ ಪರಿಷ್ಕರಿಸಿ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ತುಟ್ಟಿ ಭತ್ಯೆ ದಿನಾಂಕ: 01.07.2024 ರಿಂದ ಶೇ. 3% (ಶೇ. 50% ರಿಂದ 53%) ಹೆಚ್ಚಳ ಮಾಡಲಾಗಿದು. ಆರನೇ ವೇತನ ಆಯೋಗದ ವರದಿಯಂತೆ 2024 ರ ವೇತನ ಶ್ರೇಣಗಳ ಮೇಲೆ ಕರ್ನಾಟಕ ರಾಜ್ಯ ಸರ್ಕಾರ ದಿನಾಂಕ 01.07.2024 ಮಾಹೆಗೆ ಮಾತ್ರ 2.25% (. 42.5% 0 45.25%) 2018 ರ ವೇತನ ಶ್ರೇಣಗಳ ಮೇಲೆ ಹೆಚ್ಚಾಗಿರುವ ತುಟ್ಟಿ ಭತ್ಯೆ ಮೊತ್ತ ಈ ಕೇಳಗೆ ತೋರಿಸಲಾಗಿದೆ. ಈ ಹೆಚ್ಚಳವು ಕೇವಲ ಜುಲೈ-2024 ರ ಮಾಹೆಗೆ ಮಾತ್ರ ಮತ್ತು ಹಿಂಬಾಕಿಗೆ ಅನ್ವಯವಾಗುತ್ತದೆ.
ಬೆಂಗಳೂರು : ನೋಂದಾಯಿತ ಕಾರ್ಮಿಕರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಪಿಂಚಣಿದಾರರು ಮಂಡಳಿಯಿಂದ ಪಿಂಚಣಿ ಪಡೆಯುತ್ತಿದ್ದ ಅವಧಿಯಲ್ಲಿ ಮರಣ ಹೊಂದಿದ್ದಲ್ಲಿ ಮಾತ್ರ ಅವರ ಪತಿ/ ಪತ್ನಿ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು ಮಂಡಳಿಯಿಂದ ನೀಡಿರುವ ಮೃತ ಫಲಾನುಭವಿಯ ಗುರುತಿನ ಚೀಟಿಯ ನಕಲು ಪ್ರತಿ ಪಿಂಚಣಿ ಮಂಜೂರಾತಿ ಆದೇಶ ರೇಷನ್ ಕಾರ್ಡ್ ಪ್ರತಿ ನೋಂದಣಿದಾರರ ಆಧಾರ್ ಕಾರ್ಡ್ ಪ್ರತಿ ಅವಲಂಬಿತರ ಬ್ಯಾಂಕ್ ಖಾತೆ ವಿವರ ಮರಣ ಪ್ರಮಾಣ ಪತ್ರ ಮೃತರ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ ಅವಲಂಬಿತರ ವಾಸಸ್ಥಳ ಪ್ರಮಾಣ ಪತ್ರ ಅರ್ಜಿದಾರರ ಕೋರಿಕೆ ಪತ್ರ