Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಆಸ್ತಿ ವರ್ಗಾವಣೆ ಮಾಡಿಕೊಂಡು ಪೋಷಕರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳ ವಿರುದ್ದ Suo Moto case ದಾಖಲಿಸುವ ಕುರಿತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಮಹತ್ವದ ಆದೇಶ ಹೊರಡಿಸಿದೆ. ಇತ್ತೀಚೆಗೆ ರಾಜ್ಯದಲ್ಲಿ ವೃದ್ಧ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆಯ ನಂತರ ಪೋಷಕರನ್ನು ಮನೆಗೆ ಕರೆದುಕೊಂಡು ಹೋಗದೆ ಆಸ್ಪತ್ರೆಯಲ್ಲೆ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ವೃದ್ಧ ಪೋಷಕರನ್ನು ವಿಚಾರಿಸಿದಾಗ ಮಕ್ಕಳು ಪೋಷಕರ ಆಸ್ತಿಯನ್ನು ತಮ್ಮ ಹೆಸರುಗಳಿಗೆ ಬರೆಸಿಕೊಂಡು ಪೋಷಕರನ್ನು ನೋಡಿಕೊಳ್ಳಲು ಆಗದೇ, ಆರ್ಥಿಕ ಸಂಕಷ್ಟಗಳ ನೆಪ ಹೇಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ ಮತ್ತು ವಸತಿ ಉಚಿತವಾಗಿ ಸಿಗುತ್ತದೆ ಎಂದು ತಿಳಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿಯೇ ಬಿಟ್ಟು ಹೋಗುತ್ತಿರುವುದು ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನ್ಯ ಸಚಿವರ ಗಮನಕ್ಕೆ ಬಂದಿರುತ್ತದೆ. ಪೋಷಕರು ಮತ್ತು ಹಿರಿಯ ನಾಗರೀಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಸೆಕ್ಷನ್ 23 ರ ಪ್ರಕಾರ, ಮಕ್ಕಳು ಆಸ್ತಿಯನ್ನು…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ರಜಾ ಸೌಲಭ್ಯಗಳು ಹಾಗೂ ನಿಯಮಗಳ ಕುರಿತಂತೆ ಸರ್ಕಾರವು ಮಹತ್ವದ ಮಾಹಿತಿ ನೀಡಿದ್ದು, ಗಳಿಕೆ ರಜೆ, ಶಿಶುಪಾಲನಾ ರಜೆ ಸೇರಿ ಹಲವು ರಜೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ರಜೆಯನ್ನು ಹಕ್ಕೆಂದು ಪಡೆಯಲಾಗದು. ರಜೆಯನ್ನು ಮಂಜೂರು ಮಾಡುವ ಅಧಿಕಾರಿಯು ಸಾರ್ವಜನಿಕ ಹಿತ ದೃಷ್ಟಿಯಿಂದ ರಜೆ ಮಂಜೂರು ಮಾಡಬಹುದು ಅಥವಾ ತಿರಸ್ಕರಿಸಬಹುದು. ರಜೆಯ ಸ್ವರೂಪವನ್ನು ಮಾರ್ಪಡಿಸುವ ಹಾಗಿಲ್ಲ. ಸತತವಾಗಿ 4 ತಿಂಗಳಿಗಿಂತಲೂ ಹೆಚ್ಚಾಗಿ ಅನಧಿಕೃತ ಗೈರು ಹಾಜರಾದಲ್ಲಿ, ಅಂತಹ ಸರ್ಕಾರಿ ನೌಕರನನ್ನು ವಿಚಾರಣೆಗೆ ಒಳಪಡಿಸಿ (ಸಿಸಿಎ) ಪ್ರಕಾರ ಸೇವೆಯಿಂದ ವಜಾ ಮಾಡಬಹುದು. ಅನುಮತಿ ಇಲ್ಲದೆ ಗೈರು ಹಾಜರಾದಲ್ಲಿ ‘ಅನಧಿಕೃತ ಗೈರು ಹಾಜರಿ’ ಎಂದು ಪರಿಗಣಿಸಿ ಸಂಬಳವನ್ನು ಕಟಾವು ಮಾಡಲಾಗುವುದು. ರಜಾ ನಿಯಮಗಳು (ನಿಯಮ 105 ರಿಂದ 206)
ಬೇಸಿಗೆ ಕಾಲ ತೀವ್ರವಾಗುತ್ತಿದ್ದು, ವಾತಾವರಣದ ಉಷ್ಣಾಂಶ ಏರುತ್ತಲಿದೆ. ಆದ ಕಾರಣ ಸಾರ್ವಜನಿಕರು ಬಿಸಿಲಿನ ತಾಪದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕು. ಜತೆಗೆ ಬೇಸಿಗೆ ಎದುರಿಸಲು ಆಯುಷ್ ಉಪಾಯಗಳನ್ನು ಅಳವಡಿಸಿಕೊಂಡು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಸಲಹೆ ನೀಡಿದ್ದಾರೆ. ವಿಶೇಷವಾಗಿ ಹಿರಿಯ ನಾಗರೀಕರು, ಮಕ್ಕಳು ತೀವ್ರ ಬಿಸಿಲಿನಿನ ತಾಪಕ್ಕೆ ಬರಬಾರದು. ಬಿಸಿಲಿನ ತಾಪದಿಂದ ಚರ್ಮ ಕಪ್ಪಾಗುವುದು, ಅಲರ್ಜಿ, ತುಟಿ ಒಣಗುವುದು, ಮೂಗಿನಲ್ಲಿ ರಕ್ತಸ್ರಾವ, ದೇಹದ ಉμÁ್ಣಂಶದಲ್ಲಿ ಏರಿಕೆ, ಸುಸ್ತು, ತಲೆಸುತ್ತುವುದು, ಎಲೆಕ್ಟ್ರೋಲೈಟ್‍ಗಳಲ್ಲಿ ಏರುಪೇರಿನಂತಹ ಲಕ್ಷಣಗಳು ಕಂಡುಬರುತ್ತವೆ. ನೀರಿನ ಮೂಲದಿಂದ ಹರಡುವ ಸಾಂಕ್ರಾಮಿಕ ರೋಗಗಳೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳನ್ನು ತಡೆಗಟ್ಟಲು ಸಾರ್ವಜನಿಕರು ವಿಶೇಷ ಜಾಗ್ರತೆ ವಹಿಸಬೇಕು. ತೀವ್ರ ಬಿಸಿಲಿದ್ದಾಗ ಮನೆಯಿಂದ ಹೊರಗಡೆ ಹೋಗಬೇಡಿ, ಅವಶ್ಯಕ ಕೆಲಸಗಳನ್ನು ಬಿಸಿಲು ಹೆಚ್ಚಾಗುವ ಮೊದಲೇ ಪೂರೈಸಿಕೊಳ್ಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮರದ ನೆರಳನ್ನು ಆಶ್ರಯಿಸಿ. ಹತ್ತಿಯ ಬಟ್ಟೆಗಳನ್ನೇ ಧರಿಸಿ, ಮೇಲಿಂದ ಮೇಲೆ ನೀರನ್ನು ಕುಡಿಯುತ್ತಿರಿ. ಮನೆಯಿಂದ…
ಬೆಂಗಳೂರು : ಕೋಲಾರದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. 2023ರ ಅಕ್ಟೋಬರ್ 23ರಂದು ಶ್ರೀನಿವಾಸಪುರ ಹೊರವಲಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಿದ್ದರು. ಶ್ರೀನಿವಾಸ್ ಪತ್ನಿ ಡಾ.ಚಂದ್ರಕಲಾ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದರು. ಚಂದ್ರಕಲಾ ಅವರ ಮನವಿ ಪುರಸ್ಕರಿಸಿರುವ ಹೈಕೋರ್ಟ್ ಇಂದು ಶ್ರೀನಿವಾಸ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶ ನೀಡಿದೆ.
ಶ್ರೀನಗರ : ಕತ್ರಾದ ಮಾತಾ ವೈಷ್ಣೋದೇವಿ ದೇವಸ್ಥಾನದ ಶಿಬಿರದಲ್ಲಿ ಮದ್ಯ ಸೇವಿಸಿದ ಆರೋಪದ ಮೇಲೆ ಓರ್ಹಾನ್ ಅವತ್ರಮಣಿ ಅಲಿಯಾಸ್ ಓರಿ ಸೇರಿದಂತೆ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಾತಾ ವೈಷ್ಣೋದೇವಿ ದೇವಸ್ಥಾನದ ಮೂಲ ಶಿಬಿರವಾದ ಕತ್ರಾದಲ್ಲಿರುವ ಹೋಟೆಲ್‌ನಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಓರ್ಹಾನ್ ಅವತ್ರಮಣಿ ಅಲಿಯಾಸ್ ಓರಿ ಮತ್ತು ಇತರ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿರುವ ಎಂಟು ಜನರಲ್ಲಿ ರಷ್ಯಾದ ಪ್ರಜೆ ಅನಸ್ತಾಸಿಲಾ ಅರ್ಜಮಾಸ್ಕಿನಾ ಸೇರಿದ್ದಾರೆ, ಅವರು ಓರಿ ಮತ್ತು ಅವರ ಸ್ನೇಹಿತರೊಂದಿಗೆ ಕತ್ರಾಗೆ ಹೋಗಿದ್ದರು. ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶವನ್ನು ಉಲ್ಲಂಘಿಸಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಓರ್ಹಾನ್ ಅವತ್ರಮಣಿ, ದರ್ಶನ್ ಸಿಂಗ್, ಪಾರ್ಥ್ ರೈನಾ, ಹೃತಿಕ್ ಸಿಂಗ್, ರಾಶಿ ದತ್ತ, ರಕ್ಷಿತಾ ಭೋಗಲ್, ಶಗುನ್ ಕೊಹ್ಲಿ ಮತ್ತು ಅನಸ್ತಸಿಲಾ ಅರ್ಜಮಸ್ಕಿನಾ ವಿರುದ್ಧ ಕತ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (ಸಂಖ್ಯೆ 72/25) ದಾಖಲಾಗಿದೆ. ಅವರ ವಿರುದ್ಧ…
ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಂದೆ ದೇವೇಂದ್ರ ಪ್ರಧಾನ್ ಸೋಮವಾರ ಬೆಳಿಗ್ಗೆ 10:30 ಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ದೇವೇಂದ್ರ ಪ್ರಧಾನ್ ಅವರು ಅಟಲ್ ಬಿಹಾರ್ ವಾಜಪೇಯಿ ಅವರ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಇದಲ್ಲದೆ, ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿದ್ದರು. ದೇವೇಂದ್ರ ಪ್ರಧಾನ್ ರಾಜಕೀಯಕ್ಕೆ ಸೇರುವ ಮೊದಲು ಸರ್ಕಾರಿ ವೈದ್ಯರಾಗಿದ್ದರು. ಮಾಹಿತಿಯ ಪ್ರಕಾರ, ಅವರ ಪಾರ್ಥಿವ ಶರೀರವನ್ನು ದೆಹಲಿಯ ಏಮ್ಸ್ ನಿಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸಕ್ಕೆ ತರಲಾಗುವುದು. ಇದಾದ ನಂತರ, ಪಾರ್ಥಿವ ಶರೀರವನ್ನು ಭುವನೇಶ್ವರಕ್ಕೆ ಮತ್ತು ನಂತರ ಪುರಿ ಸ್ವರ್ಗ ದ್ವಾರಕ್ಕೆ ಅಂತಿಮ ವಿಧಿಗಳಿಗಾಗಿ ಕೊಂಡೊಯ್ಯಲಾಗುತ್ತದೆ. ದೇವೇಂದ್ರ ಪ್ರಧಾನ್ ಅವರು ಜುಲೈ 16, 1941 ರಂದು ಅವಿಭಜಿತ ಧೆಂಕನಲ್ ಜಿಲ್ಲೆಯಲ್ಲಿ ಜನಿಸಿದರು. ಮಾಹಿತಿಯ ಪ್ರಕಾರ, ವೃತ್ತಿಯಲ್ಲಿ ವೈದ್ಯರಾಗಿರುವ ದೇವೇಂದ್ರ ಪ್ರಧಾನ್ ಅವರ ಬಲವಾದ ಇಚ್ಛಾಶಕ್ತಿ ಅವರನ್ನು ರಾಜಕೀಯಕ್ಕೆ ಕರೆತಂದಿತು. ರಾಜಕಾರಣಿಯಾಗುವ…
ಉತ್ತರ ಪ್ರದೇಶದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗೀಸರ್ ಅನಿಲ ಸೋರಿಕೆಯಾಗಿ ಗಂಡ ಮತ್ತು ಹೆಂಡತಿ ನೋವಿನಿಂದ ಸಾವನ್ನಪ್ಪಿದ್ದಾರೆ. ಹಾಪುರ್ ಜಿಲ್ಲೆಯ ಘರ್ ಕೊತ್ವಾಲಿ ಪ್ರದೇಶದ ಮೊಹಲ್ಲಾ ಛೋಟಾ ಬಜಾರ್ ನಿವಾಸಿ ನವೀನ್ ಗುಪ್ತಾ, ಘರ್ ತಹಸಿಲ್‌ನಲ್ಲಿ ಅಂಚೆಚೀಟಿ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು. ಹೋಳಿ ಆಡಿದ ನಂತರ, ಹರಿ ಗುಪ್ತಾ ಅವರ ಮಗ ನವೀನ್ ಗುಪ್ತಾ (38 ವರ್ಷ) ಮತ್ತು ಅವರ ಪತ್ನಿ ಬಬಿತಾ ಗುಪ್ತಾ (36 ವರ್ಷ) ಸ್ನಾನಗೃಹದಲ್ಲಿ ಕೈಕಾಲು ತೊಳೆಯುತ್ತಿದ್ದರು. ಇದ್ದಕ್ಕಿದ್ದಂತೆ, ಸ್ನಾನಗೃಹದಲ್ಲಿನ ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ, ಗಂಡ ಮತ್ತು ಹೆಂಡತಿ ಇಬ್ಬರೂ ಪ್ರಜ್ಞೆ ತಪ್ಪಿ ಬಿದ್ದರು. ಅವರು ಪ್ರಜ್ಞೆ ತಪ್ಪಿದ ತಕ್ಷಣ, ಕುಟುಂಬ ಸದಸ್ಯರು ಪತಿ ಮತ್ತು ಪತ್ನಿ ಇಬ್ಬರನ್ನೂ ಸ್ಥಳೀಯ ನರ್ಸಿಂಗ್ ಹೋಂಗೆ ದಾಖಲಿಸಿದರು. ಅಲ್ಲಿ ವೈದ್ಯರು ಅವನನ್ನು ಮೀರತ್‌ಗೆ ಕರೆದೊಯ್ಯಲು ಸೂಚಿಸಿದರು. ಇಬ್ಬರನ್ನೂ ಅವರ ಕುಟುಂಬ ಸದಸ್ಯರು ಮೀರತ್‌ಗೆ ಕರೆದೊಯ್ದರು. ಆದರೆ, ಮೀರತ್‌ನ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆಂದು ಘೋಷಿಸಿದರು. ಹೋಳಿ ಹಬ್ಬದಂದು ಪತಿ-ಪತ್ನಿ…
ಬೆಂಗಳೂರು: ರಾಜ್ಯದಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ 65 ಕಾರ್ಖಾನೆಗಳು 3,101.91 ಕೋಟಿ ರೂ.ಗಳು ಪಾವತಿ ಮಾಡುವುದು ಬಾಕಿ ಇದೆ. ಶೀಘ್ರ ಹಣ ಪಾವತಿಸುವಂತೆ 33 ಸಕ್ಕರೆ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ರವರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ ರಾಜ್ಯದಲ್ಲಿ ಒಟ್ಟು 99 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳ ಪೈಕಿ 79 ಕಾರ್ಖಾನೆಗಳು ಪ್ರಸ್ತುತ ಕಾರ್ಯನಿರತವಾಗಿವೆ. 2024-25ನೇ ಹಂಗಾಮಿನಲ್ಲಿ 2025ರ ಫೆ. 28ರ ಅಂತ್ಯಕ್ಕೆ ಕಬ್ಬು ಸರಬರಾಜು ಮಾಡಿದ ರೈತರಿಗೆ 17,596.92 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಬೇಕಿದ್ದು, ಅವುಗಳಲ್ಲಿ 14,655.91 ಕೋಟಿ ರೂ. ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 2024-25ನೇ ಸಾಲಿನ ಕಬ್ಬು ಅರೆಯುವ ಹಂಗಾಮು ಚಾಲ್ತಿಯಲ್ಲಿದ್ದು, ಕಬ್ಬು ಬಿಲ್ಲು ಪಾವತಿಸಲು ಅವಕಾಶವಿರುತ್ತದೆ. ಆದಾಗ್ಯೂ, 2024-25ನೇ ಹಂಗಾಮಿನಲ್ಲಿ ಕಬ್ಬು ಬಿಲ್ಲು ಉಳಿಸಿಕೊಂಡಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಇದೇ ಜನವರಿ16 ಮತ್ತು…
ಬೆಳಗಾವಿ : ಯುವಕನೊಬ್ಬ ಬಾಲಕಿಗೆ ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಇದರಿಂದ ಬೇಸತ್ತು ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೌದು ಚಿಕಿತ್ಸೆ ಫಲಿಸಿದೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಬೆಳಗಾವಿಯ ಘಟಪ್ರಭಾ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಬಿಮ್ಸ್ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಪ್ರೀತಿಸುವಂತೆ ಬಾಲಕಿಯನ್ನು ಸಿದ್ದಲಿಂಗ ಪೂಜಾರಿ (21) ಎನ್ನುವ ಯುವಕ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಬಾಲಕಿ ಬೆಂಕಿ ಹಚ್ಚಿಕೊಂಡು…
ಬೆಂಗಳೂರು : 2005-06 ಮತ್ತು 2006-07 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರರು ಹಳೆಯ ಡಿಫೈನ್ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ. ವಿಷಯಕ್ಕೆ ಸಂಬಂದಿಸಿದಂತೆ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ದಿನಾಂಕ: 01-04-2006 ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ, ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ಶಿಕ್ಷಕರುಗಳನ್ನು ಹಳೆಯ ಡಿಫ್ರೆಂಡ್ ಪಿಂಚಣಿ ಸೌಲಭ್ಯಕ, ಒಳಪಡಿಸುವ ಸಂಬಂಧ, ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಸಲ್ಲಿಸಿದ್ದ ವಸ್ತಾವನೆಗಳನ್ನು ಉಲ್ಲೇಖ-02 ರ ಪತ್ರದಲ್ಲಿ ಅಡಕಗೊಳಿಸಿ ಸಲ್ಲಿಸಲಾಗಿತ್ತು ಈ ಸಂಬಂಧ ಉಲ್ಲೇಖ-03 ರ ಪತ್ರದಲ್ಲಿ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸರ್ಕಾರದ ಆದೇಶ ಸಂಖ್ಯೆ ಅಇ-ಪಿಇಎನ್/99/2024 ದಿನಾಂಕ 24-01-2024 ರಸ್ತೆಯ ಎನ್.ಪಿ.ಎಸ್ ನಿಂದ ಒಪಿಎಸ್ ಗೆ ಒಳಪಡುವ…













