Subscribe to Updates
Get the latest creative news from FooBar about art, design and business.
Author: kannadanewsnow57
ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗವು (KPSC) ಜುಲೈ 12, 13 ರಂದು ವಿವಿಧ ಇಲಾಖೆಯಲ್ಲಿನ ಗ್ರೂಪ್ ಸಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮ ಪರೀಕ್ಷೆಗಳನ್ನು ನಡೆಸಲಿದೆ. ದಿನಾಂಕ:15.03.2024 ರಂದು ಅಧಿಸೂಚಿಸಿರುವ ವಿವಿಧ ಇಲಾಖೆಯಲ್ಲಿನ ಗ್ರೂಪ್-ಸಿ ಹುದ್ದೆಗಳಿಗೆ ಸಂಬಂಧಿಸಿದಂತೆ ದಿನಾಂಕ: 12-07-2025 ಕನ್ನಡ ಭಾಷಾ ಪರೀಕ್ಷೆ ಮತ್ತು 13-07-2025 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗ ಕೇಂದ್ರದಲ್ಲಿನ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಗುರುತಿಸಿ, ನಡೆಸಲು ಉದ್ದೇಶಿಸಿರುತ್ತಾರೆ. ತತ್ಸಂಬಂಧವಾಗಿ ಉಲ್ಲೇಖಿತ ಪತ್ರವನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಲಾಗಿದ್ದು, ಮೇಲ್ಕಂಡ ದಿನಾಂಕಗಳಂದು ಲಗತ್ತಿಸಿರುವ ಅನುಬಂಧದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇತರೆ ಯಾವುದೇ ಪರೀಕ್ಷಾ/ಕಾರ್ಯಕ್ರಮಗಳನ್ನು ನಿಗಧಿಪಡಿಸದೆ ಕರ್ನಾಟಕ ಲೋಕ ಸೇವಾ ಆಯೋಗದ ವತಿಯಿಂದ ನಡೆಯಲಿರುವ ಗ್ರೂಪ್- ಸಿ ವೃಂದದ ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜಿನ ಕಟ್ಟಡ/ ಕೊಠಡಿಗಳನ್ನು ಹಾಗೂ ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿ, ಉಪನ್ಯಾಸಕರು/ಸಿಬ್ಬಂದಿಗಳು ಮೇಲ್ಕಂಡ ದಿನಾಂಕಗಳಂದು ನಿಯೋಜಿಸಿರುವ…
ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆಸಿದ್ದು, ಚಿಕ್ಕಮಗಳೂರಿನಲ್ಲಿ ಮಾಂಸಕ್ಕಾಗಿ ಗಬ್ಬದ ಹಸು ಕಡಿದಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್ ವೊಂದರಲ್ಲಿ ಅಸ್ಸಾಂ ಮೂ ಲದ ಕಾರ್ಮಿಕರು ಮಾಂಸಕ್ಕಾಗಿ ಗಬ್ಬದ ಹಸುವನ್ನು ಕಡಿದು ಅಂಗಾಂಗಗಳನ್ನು ಮಣ್ಣಿನಲ್ಲಿ ಹೂಳಲು ಯತ್ನಿಸಿದ್ದಾರೆ. ಕೃತ್ಯ ಎಸ ಗಿದ ಎಲ್ಲ ಕೂಲಿ ಕಾರ್ಮಿಕರನ್ನು ಬಂಧಿಸಲಾಗಿದೆ. ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮರ್ಕಲ್ ಎಸ್ಟೇಟ್ನಲ್ಲಿ ಘಟನೆ ನಡೆದಿದೆ. ಮಾಂಸಕ್ಕಾಗಿ ಗಬ್ಬದ ಹಸುವನ್ನೇ ಅಮಾನವೀಯವಾಗಿ ಕೊಂದಿದ್ದ 6 ಅಸ್ಸಾಂ ಮೂಲದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನ ಪೀಠೋಪಕರಣ ವ್ಯಾಪಾರಿಯೊಬ್ಬರಿಗೆ ಭೂಗತ ಪಾತಕಿ ಲ್ಯಾರೆನ್ಸ್ ಬಿಷ್ಟೋಯಿ ಹೆಸರಿನಲ್ಲಿ ಬೆದರಿಸಿ ₹1 ಕೋಟಿ ಹಣ ವಸೂಲಿಗೆ ಕಿಡಿಗೇಡಿಗಳು ಯತ್ನಿಸಿರುವ ಘಟನೆ ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ವ್ಯಾಪಾರಿಗೆ ಪಾತಕಿ ಬಿಷ್ಟೋಯಿ ಹೆಸರಿನಲ್ಲಿ ಬೆದರಿಕೆ ಕರೆಬಂದಿದ್ದು, ಈ ಬಗ್ಗೆ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಷ್ಟೋಯಿ ಹೆಸರು ಬಳಸಿ ಕೊಂಡು ವ್ಯಾಪಾರಿಗೆ ಪರಿಚಿತರು ಬೆದರಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಬಿಷ್ಟೋಯಿ ಹೆಸರು ಕೇಳಿ ಬಂದಿತ್ತು. 2 ದಿನಗಳ ಹಿಂದೆ ಉದ್ಯಮಿಗೆ ಕರೆ ಮಾಡಿದ್ದ ಅಪರಿಚಿತ, ತನ್ನನ್ನು ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ತಮಗೆ 1 ಕೋಟಿ ಕೊಡದೆ ಹೋದರೆ ಮಗನನ್ನು ಅಪಹರಿ ಸುವುದಾಗಿ ಬೆದರಿಸಿದ್ದಾನೆ ಎಂದು ತಿಳಿದು ಬಂದಿದೆ.
ವಿಜಯಪುರ : 1998 ರ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ 58 ಜನರು ಸಾವನ್ನಪ್ಪಿ 250 ಜನರು ಗಾಯಗೊಂಡ ಪ್ರಮುಖ ಆರೋಪಿ ಸಾದಿಕ್ ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಗುರುವಾರ ತಿಳಿಸಿದೆ. ತಮಿಳುನಾಡಿನಾದ್ಯಂತ ಕೋಮು ಹತ್ಯೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಈತ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಗುಪ್ತಚರ” ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾ, ಭಯೋತ್ಪಾದನಾ ನಿಗ್ರಹ ದಳ ಮತ್ತು ಕೊಯಮತ್ತೂರು ನಗರ ಪೊಲೀಸರ ವಿಶೇಷ ತಂಡವು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿದೆ ಎಂದು ಎಟಿಎಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಕೊಯಮತ್ತೂರು ಮೂಲದ ಸಾದಿಕ್, ರಾಜ, ಟೈಲರ್ ರಾಜ, ವಲಂಥ ರಾಜ, ಶಹಜಹಾನ್ ಅಬ್ದುಲ್ ಮಜೀದ್ ಮಕಾಂದರ್ ಮತ್ತು ಶಹಜಹಾನ್ ಶೇಕ್ ಸೇರಿದಂತೆ ಹಲವಾರು ಹೆಸರುಗಳನ್ನು ಇಟ್ಟುಕೊಂಡಿದ್ದ. 1996 ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ಜೈಲು ವಾರ್ಡನ್ ಭೂಪಾಲನ್ ಸಾವನ್ನಪ್ಪಿದರು; 1996 ರಲ್ಲಿ ನಾಗೋರ್ನಲ್ಲಿ ನಡೆದ ಸಯೀತಾ ಕೊಲೆ…
ವಿಜಯಪುರ : 1998 ರ ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ 58 ಜನರು ಸಾವನ್ನಪ್ಪಿ 250 ಜನರು ಗಾಯಗೊಂಡ ಪ್ರಮುಖ ಆರೋಪಿ ಸಾದಿಕ್ ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಗುರುವಾರ ತಿಳಿಸಿದೆ. ತಮಿಳುನಾಡಿನಾದ್ಯಂತ ಕೋಮು ಹತ್ಯೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಈತ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನಿರ್ದಿಷ್ಟ ಮತ್ತು ವಿಶ್ವಾಸಾರ್ಹ ಗುಪ್ತಚರ” ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾ, ಭಯೋತ್ಪಾದನಾ ನಿಗ್ರಹ ದಳ ಮತ್ತು ಕೊಯಮತ್ತೂರು ನಗರ ಪೊಲೀಸರ ವಿಶೇಷ ತಂಡವು ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿದೆ ಎಂದು ಎಟಿಎಸ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಕೊಯಮತ್ತೂರು ಮೂಲದ ಸಾದಿಕ್, ರಾಜ, ಟೈಲರ್ ರಾಜ, ವಲಂಥ ರಾಜ, ಶಹಜಹಾನ್ ಅಬ್ದುಲ್ ಮಜೀದ್ ಮಕಾಂದರ್ ಮತ್ತು ಶಹಜಹಾನ್ ಶೇಕ್ ಸೇರಿದಂತೆ ಹಲವಾರು ಹೆಸರುಗಳನ್ನು ಇಟ್ಟುಕೊಂಡಿದ್ದ. 1996 ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿಯಲ್ಲಿ ಜೈಲು ವಾರ್ಡನ್ ಭೂಪಾಲನ್ ಸಾವನ್ನಪ್ಪಿದರು; 1996 ರಲ್ಲಿ ನಾಗೋರ್ನಲ್ಲಿ ನಡೆದ ಸಯೀತಾ ಕೊಲೆ…
ಮುಂಬೈ : ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಾಸಿಕ್ -ಮುಂಬೈ ಹೆದ್ದಾರಿಯಲ್ಲಿ ಟ್ರಕ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಇಗತ್ಪುರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಗತ್ಪುರಿ ಬಳಿಯ ಮುಂಡೇಗಾಂವ್ ಫಾಟಾ ಬಳಿ ಈ ಅಪಘಾತ ಸಂಭವಿಸಿದ್ದು, ಸಿಮೆಂಟ್ ಪುಡಿ ತುಂಬಿದ ಭಾರವಾದ ಟ್ರಕ್ ಇಕೋ ಕಾರಿನ ನಡುವೆ ಡಿಕ್ಕಿಯಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಡಿಕ್ಕಿಯ ನಂತರ, ಇಕೋ ಕಾರು ಕಂಟೇನರ್ ಅಡಿಯಲ್ಲಿ ಸಿಲುಕಿಕೊಂಡು ಹಲವಾರು ಮೀಟರ್ಗಳಷ್ಟು ಎಳೆಯುತ್ತಲೇ ಇತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದಂತೆ ಒಟ್ಟು ನಾಲ್ವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಗುರು ಪೂರ್ಣಿಮಾ ದರ್ಶನಕ್ಕಾಗಿ ರಾಮದಾಸ ಬಾಬಾ ಮಠಕ್ಕೆ (ಇಗತ್ಪುರಿ) ಬಂದಿದ್ದರು ಮತ್ತು ಮುಂಬೈಗೆ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ. ಮೃತರೆಲ್ಲರೂ ಅಂಧೇರಿ (ಮುಂಬೈ) ದ ಚಾರ್ ಬಂಗಲೆ ನಿವಾಸಿಗಳು. ಇಗತ್ಪುರಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರು ದತ್ತ…
ಮೇಷ ರಾಶಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ, ಕೈಗೊಂಡ ಕೆಲಸಗಳು ಕಷ್ಟದಿಂದಲೂ ಪೂರ್ಣಗೊಳ್ಳುವುದಿಲ್ಲ. ಪ್ರಯಾಣಗಳು ಮುಂದೂಡಲ್ಪಡುತ್ತವೆ, ಉದ್ಯೋಗಿಗಳು ಬರಬೇಕಾದ ಸ್ಥಾನಗಳಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಮನೆಯ ಹೊರಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಪ್ರಗತಿ ಹೊಂದುತ್ತವೆ. 9980060275 ವೃಷಭ ರಾಶಿ ದೂರದ ಸಂಬಂಧಿಕರಿಂದ ನಿಮಗೆ ಶುಭ ಸುದ್ದಿ ಸಿಗುತ್ತದೆ. ಹಠಾತ್ ಧನ ಲಾಭ ಸಿಗುತ್ತದೆ. ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ. ಬಾಲ್ಯದ ಸ್ನೇಹಿತರಿಂದ ನಿಮಗೆ ಕೆಲವು ಪ್ರಮುಖ ಮಾಹಿತಿ ಸಿಗುತ್ತದೆ. ನೀವು ಹೊಸ ವಾಹನವನ್ನು ಖರೀದಿಸುತ್ತೀರಿ. ವ್ಯವಹಾರದಲ್ಲಿ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಉದ್ಯೋಗದ ವಾತಾವರಣ ಅನುಕೂಲಕರವಾಗಿರುತ್ತದೆ, ಮಿಥುನ ರಾಶಿ ದೂರ ಪ್ರಯಾಣದ ಸಮಯದಲ್ಲಿ ನೀವು ವಾಹನ ಸಮಸ್ಯೆಗಳನ್ನು ಎದುರಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಇರುತ್ತವೆ. ನೀವು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಹೊಸ ಸಾಲದ ಪ್ರಯತ್ನಗಳು ಫಲ ನೀಡುವುದಿಲ್ಲ. ವೃತ್ತಿಪರ ವ್ಯವಹಾರಗಳು ಸ್ವಲ್ಪ ಮಟ್ಟಿಗೆ ಪ್ರಗತಿ ಹೊಂದುತ್ತವೆ. ಉದ್ಯೋಗದ ವಾತಾವರಣವು ನಿರುತ್ಸಾಹಗೊಳಿಸುತ್ತದೆ,9980060275 ಕರ್ಕ ರಾಶಿ ನೀವು ಆರ್ಥಿಕವಾಗಿ ಹೆಚ್ಚಿನ…
ಜಾರ್ಖಂಡ್ : ಜಾರ್ಖಂಡ್ನಿಂದ ಒಂದು ನೈಜ ಮತ್ತು ಭಾವನಾತ್ಮಕ ಘಟನೆ ಬೆಳಕಿಗೆ ಬಂದಿದೆ, ಇದು ಲಕ್ಷಾಂತರ ಜನರ ಹೃದಯಗಳನ್ನು ಮುಟ್ಟಿದೆ. ಇಲ್ಲಿ, ಕಾಡು ಆನೆಯೊಂದು ರೈಲ್ವೆ ಹಳಿಯಲ್ಲಿ ತನ್ನ ಮಗುವಿಗೆ ಜನ್ಮ ನೀಡಲು ಪ್ರಾರಂಭಿಸಿದಾಗ, ರೈಲು ಸುಮಾರು ಎರಡು ಗಂಟೆಗಳ ಕಾಲ ನಿಂತಿತ್ತು. ಈ ಘಟನೆ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ನೋಡಿದ ನಂತರ ಜನರು ಭಾವುಕರಾಗುವುದಲ್ಲದೆ, ಮಾನವೀಯತೆ ಮತ್ತು ಕರುಣೆಯ ಈ ಉದಾಹರಣೆಯನ್ನು ಶ್ಲಾಘಿಸುತ್ತಿದ್ದಾರೆ. ವಾಸ್ತವವಾಗಿ, ಗರ್ಭಿಣಿ ಆನೆಯೊಂದು ಕಾಡಿನಿಂದ ದಾರಿ ತಪ್ಪಿ ರೈಲ್ವೆ ಹಳಿಯ ಬಳಿ ಬಂದಿತ್ತು. ನಂತರ ಅದಕ್ಕೆ ಹೆರಿಗೆ ನೋವು ಶುರುವಾಯಿತು. ಇದನ್ನು ನೋಡಿದ ರೈಲ್ವೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ರೈಲು ನಿಲ್ಲಿಸಲು ನಿರ್ಧರಿಸಿದರು. ಆನೆ ತನ್ನ ಮಗುವಿಗೆ ಭಯವಿಲ್ಲದೆ ಜನ್ಮ ನೀಡಲು ಸಾಧ್ಯವಾಗುವಂತೆ ಸುಮಾರು ಎರಡು ಗಂಟೆಗಳ ಕಾಲ ರೈಲನ್ನು ನಿಲ್ಲಿಸಲಾಯಿತು. ಈ ಸಮಯದಲ್ಲಿ, ಅಲ್ಲಿದ್ದ ಜನರು ಆನೆಯನ್ನು ದೂರದಿಂದಲೇ ನೋಡಿಕೊಂಡರು ಮತ್ತು ಅದಕ್ಕೆ…
ವಡೋದರಾ: 4 ದಶಕಗಳ ಹಳೆಯ ಸೇತುವೆ ಯೊಂದು ಕುಸಿದ ಪರಿಣಾಮ ವಾಹನ ಸಮೇತ ನದಿಗೆ ಬಿದ್ದ ಇಬ್ಬರು ಮಕ್ಕಳು ಸೇರಿ 18 ಜನರು ಸಾವನ್ನಪ್ಪಿದ ಭೀಕರ ಘಟನೆ ಗುಜರಾತ್ನಲ್ಲಿ ನಡೆದಿದೆ. 3 ವರ್ಷಗಳ ಹಿಂದೆ ಗುಜರಾತ್ನ ಮೋರ್ಬಿಯಲ್ಲಿ ಸೇತುವೆಯೊಂದು ಕುಸಿದು 135 ಜನರು ಸಾವನ್ನಪ್ಪಿದ್ದರು. ಅದರ ಬೆನ್ನ ಲ್ಲೇ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತು ರಾಷ್ಟ್ರಪತಿ ದೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ವಡೋದರಾ ಜಿಲ್ಲೆಯ ಪದ್ರಾದಲ್ಲಿ ಬೆಳಿಗ್ಗೆ 7.30 ರ ಸುಮಾರಿಗೆ ಸೇತುವೆ ಕುಸಿದಿದೆ. ರಾಜ್ಯ ಹೆದ್ದಾರಿಯ ಉದ್ದಕ್ಕೂ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ವಡೋದರಾ ಮತ್ತು ಆನಂದ್ ಅನ್ನು ಸಂಪರ್ಕಿಸುತ್ತದೆ. ಮುಜ್ಪುರ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದ್ದು, ಎರಡು ಟ್ರಕ್ಗಳು, ಒಂದು ಬೊಲೆರೊ ಜೀಪ್…
ದಾವಣಗೆರೆ : ದಾವಣಗೆರೆಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರೈಲ್ವೇ ಸೇತುವೆ ಬಳಿ ತಾಯಿ ಮಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಬಳಿ ಇರುವ ತುಂಗಭದ್ರಾ ನದಿ ಸೇತುವೆ ಬಳಿ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳನ್ನ ಗಂಗನರಸಿ ಗ್ರಾಮದ ಸುವರ್ಣಮ್ಮ (65) ಮತ್ತು ಗೌರಮ್ಮ (45) ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆಯರಿಬ್ಬರ ರುಂಡ, ಮುಂಡ ಪ್ರತ್ಯೇಕವಾಗಿದ್ದು, ಅಂಗಾಂಗಗಳು ರಕ್ತಸಿಕ್ತವಾಗಿ ಛಿದ್ರವಾಗಿವೆ. ಫೈನಾನ್ಸ್ ಸಾಲ ಕಟ್ಟಲಾಗದೆ ರೈಲಿಗೆ ತಲೆ ಕೊಟ್ಟು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಸುವರ್ಣಮ್ಮ ಅವರ ಪತಿ ನಿಧನರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದು, ಮತ್ತೊಬ್ಬ ಪುತ್ರಿ ದಿವ್ಯಾಂಗರಾಗಿದ್ದರು. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.