Author: kannadanewsnow57

ಇಂದು ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಟೈಪ್ 1 ಮಧುಮೇಹವು ಆನುವಂಶಿಕವಾಗಿ ಮಾತ್ರವಲ್ಲ, ಜೀವನಶೈಲಿಯ ಬದಲಾವಣೆಯಿಂದಲೂ ಉಂಟಾಗುತ್ತದೆ.  ಟೈಪ್-2 ಮಧುಮೇಹವು ಹಲವು ಕಾರಣಗಳಿಂದ ಉಂಟಾಗುತ್ತದೆ, ಅವುಗಳಲ್ಲಿ ಅತಿಯಾದ ತೂಕ ಹೆಚ್ಚಾಗುವುದು, ವ್ಯಾಯಾಮದ ಕೊರತೆ, ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ರಾತ್ರಿ ತುಂಬಾ ತಡವಾಗಿ ಎಚ್ಚರವಾಗಿರುವುದು ಇತ್ಯಾದಿ. ಆದರೆ ನಿಮಗೆ ಯಾವುದೇ ರೀತಿಯ ಮಧುಮೇಹವಿದ್ದರೂ, ನೀವು ಇನ್ನೂ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಆದರೆ… ಕೆಳಗೆ ಸೂಚಿಸಿದಂತೆ ನೀವು ಮಾಡಿದರೆ, ನೀವು ಮಧುಮೇಹವನ್ನು ನಿಯಂತ್ರಿಸಬಹುದು, ಅದು ಟೈಪ್ 1 ಅಥವಾ 2 ಆಗಿರಲಿ.  ಅಂಗೈಯನ್ನು ನಾಲ್ಕು ಬೆರಳುಗಳಿಂದ ಒಳಮುಖವಾಗಿ ಮಡಚಬೇಕು. ಆ ಬೆರಳುಗಳು ಅಂಗೈಯ ಮಧ್ಯಭಾಗವನ್ನು ಮುಟ್ಟಬೇಕು. ಸ್ಪರ್ಶಿಸಲು, ನೀವು ನಿಮ್ಮ ಬೆರಳುಗಳನ್ನು ಒಟ್ಟಿಗೆ ಒತ್ತಿ ಮತ್ತು ಅವುಗಳನ್ನು ದೃಢವಾಗಿ ಒತ್ತಬೇಕು. ಇದನ್ನು 10 ಬಾರಿ ಮಾಡಿ. ನಂತರ ಇನ್ನೊಂದು ಕೈಯಿಂದ ಅದೇ ರೀತಿ ಮಾಡಿ. ಇದನ್ನು ಎರಡೂ ಕೈಗಳಿಗೆ ಒಟ್ಟು 10+10=20 ಬಾರಿ ಮಾಡಬೇಕು. ಈ ಆಕ್ಯುಪ್ರೆಶರ್ ಚಿಕಿತ್ಸೆಯನ್ನು…

Read More

ನವದೆಹಲಿ : ದೇಶಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿದ್ದು, ಕಳೆದ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ 1009ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 100 ದಾಟಿದ್ರೆ, ಕೇರಳದಲ್ಲಿ ಸೋಂಕಿತರ ಸಂಖ್ಯೆ 400 ರ ಗಡಿ ಮುಟ್ಟಿದೆ. ಈ ಮೂಲಕ ದೇಶಾದ್ಯಂತ ಸೋಂಕಿತರ ಸಂಖ್ಯೆ 1009ಕ್ಕೆ ಏರಿಕೆಯಾಗಿದೆ. https://twitter.com/ANI/status/1926892365467316434?ref_src=twsrc%5Egoogle%7Ctwcamp%5Eserp%7Ctwgr%5Etweet

Read More

ಬೆಳಗಾವಿ : ರಾಜ್ಯದಲ್ಲಿ ಮಹಾಮಳೆಗೆ ಮತ್ತೊಂದು ಬಲಿಯಾಗಿದ್ದು, ಗೋಡೆ ಕುಸಿದು 3 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಲಗಿದ್ದಾಗ ಗೋಡೆ ಕುಸಿದು ಬಾಲಕಿ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಕೀರ್ತಿಲಾ ನಾಗೇಶ್ ಪೂಜಾರಿ (3) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತೋರ್ವ ಬಾಲಕಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು : ಫಲಿತಾಂಶ ಪ್ರಕಟವಾಗದ ಅಭ್ಯರ್ಥಿಗಳಿಗೆ ತಮ್ಮ ಅರ್ಹತಾ ಪರೀಕ್ಷೆಯ ಅಂಕಗಳನ್ನು ದಾಖಲಿಸಲು KEA ತನ್ನ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ. ಅಂಕ ದಾಖಲಿಸಿದವರಿಗೆ ಮೇ 29ರ ನಂತರ SpotRank ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. https://twitter.com/KEA_karnataka/status/1926867515415613901?ref_src=twsrc%5Etfw%7Ctwcamp%5Etweetembed%7Ctwterm%5E1926867515415613901%7Ctwgr%5E61739cb2ba5afc22d03a333f35617af5b76ff164%7Ctwcon%5Es1_c10&ref_url=https%3A%2F%2Fkannadadunia.com%2Fe0b297e0b2aee0b2a8e0b2bfe0b2b8e0b2bf-ugcet-e0b2abe0b2b2e0b2bfe0b2a4e0b2bee0b282e0b2b6-e0b2aae0b38de0b2b0e0b295e0b29fe0b2b5%2F

Read More

ರಾಯಚೂರು : ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು, ಕೃಷಿ ಸಚಿವರಿದ್ದ ಹೆಲಿಕಾ್ಪಟರ್ ತುರ್ತು ಭೂಸ್ಪರ್ಶ ಮಾಡಲಾಗಿದೆ. ರಾಯಚೂರಿನಲ್ಲಿ ಕೃಷಿ ವಿಶ್ವವಿದ್ಯಾಲಯದ 14 ನೇ ಘಟಿಕೋತ್ಸವಕ್ಕೆ ಹೋಗುವ ವೇಳೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಬೆಂಗಳೂರಿನಿಂದ ಬರುವಾಗ ಚಿತ್ರದುರ್ಗದಲ್ಲಿ ಇಂಧನ ಹಾಕಿಸಲಾಗಿತ್ತು. ಬಳಿಕ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜಿಂದಾಲ್ ನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಬಳ್ಳಾರಿಯ ಜಿಂದಾಲ್ ನಿಂದ ಹೆಲಿಕಾಪ್ಟರ್ ಟೇಕ್ ಅಫ್ ಗೆ ಯತ್ನ. ಒಮ್ಮೆ ಟೇಕ್ ಆಫ್ ಆಗಿ ವಿಶೇಷ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.

Read More

ನವದೆಹಲಿ : ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮತ್ತೊಂದು ಫೋಟೋ ಬಿಡುಗಡೆಯಾಗಿದ್ದು, ವೈರಲ್ ಆಗಿದೆ. ಮೇ 23 ರಂದು ಬಿಡುಗಡೆಯಾದ ಇತ್ತೀಚಿನ ಉಪಗ್ರಹ ಚಿತ್ರವು ಭಾರತೀಯ ಸೇನೆಯ ನಿಖರವಾದ ದಾಳಿಯಾದ ಆಪರೇಷನ್ ಸಿಂಧೂರ್ ಸಮಯದಲ್ಲಿ ಮುರಿದ್‌ನಲ್ಲಿರುವ ಪಾಕಿಸ್ತಾನ ವಾಯುಪಡೆ ನೆಲೆಗೆ ಉಂಟಾದ ಹಾನಿಯನ್ನು ತೋರಿಸುತ್ತದೆ. ದಿ ಇಂಟೆಲ್ ಲ್ಯಾಬ್‌ನ ಭೂ-ಗುಪ್ತಚರ ಸಂಶೋಧಕ ಡೇಮಿಯನ್ ಸೈಮನ್ ಹಂಚಿಕೊಂಡ ಚಿತ್ರಗಳು ಭಾರತೀಯ ವಾಯುಪಡೆಯ ನಿಖರವಾದ ದಾಳಿಯಲ್ಲಿನ ಹಾನಿಯನ್ನು ಎತ್ತಿ ತೋರಿಸುತ್ತವೆ. ಇದೀಗ ಆಪರೇಷನ್​ ಸಿಂಧೂರ್​​ನಲ್ಲಿ ಮುರಿದ್ ವಾಯುನೆಲೆಯಲ್ಲಿನ ಕಮಾಂಡ್ ಮತ್ತು ಕಂಟ್ರೋಲ್ ಯೂನಿಟ್ ಕಟ್ಟಡಕ್ಕೆ ಹಾನಿಯಾಗಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. “ಈ ವರದಿಯು ಪಾಕಿಸ್ತಾನದ ಮುರಿಯ್ ವಾಯುನೆಲೆಯಲ್ಲಿನ ಹಾನಿಯನ್ನು ಎತ್ತಿ ತೋರಿಸುತ್ತದೆ – ಭಾರತೀಯ ವಾಯುಪಡೆಯ ದಾಳಿಯು ಕಮಾಂಡ್ ಮತ್ತು ಕಂಟ್ರೋಲ್ ಕಟ್ಟಡಕ್ಕೆ ರಚನಾತ್ಮಕ ಹಾನಿಯನ್ನುಂಟುಮಾಡಿದೆ, ಛಾವಣಿಯ ಒಂದು ಭಾಗವೂ ಕುಸಿದಿದೆ, ಇದು ಆಂತರಿಕ ಹಾನಿಯನ್ನುಂಟುಮಾಡುವ ಸಾಧ್ಯತೆಯಿದೆ” ಎಂದು ಸೈಮನ್ X ನಲ್ಲಿ ಬರೆದಿದ್ದಾರೆ. ದಿ…

Read More

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ಗೆ ವ್ಯಕ್ತಿಯೊಬ್ಬರು ಬಲಿಯಾದ ಬೆನ್ನಲ್ಲೇ, ಸೋಂಕಿನ ಲಕ್ಷಣ ಹೊಂದಿರುವವರನ್ನು ಪರೀಕ್ಷೆಗೊಳಪಡಿಸಲು ಸರ್ಕಾರ ಸೂಚಿಸಿದೆ. ಈ ನಡುವೆ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 47ಕ್ಕೆ ಏರಿಕೆ ಆಗಿರುವುದು ಕೊಂಚ ಆತಂಕ ಮೂಡಿಸಿರುವ ನಡುವೆಯೇ ಬೆಂಗಳೂರು ಸೇರಿ 10 ಕಡೆ ಕೋವಿಡ್ ಟೆಸ್ಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 47 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬೆಂಗಳೂರು ಒಂದರಲ್ಲೇ 32 ಪ್ರಕರಣ ದಾಖಲಾಗಿವೆ. ಕೋವಿಡ್ -19 ರ ತಪಾಸಣಾ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಪರೀಕ್ಷಾ ಮಾದರಿಗಳನ್ನು ನಿಗದಿಪಡಿಸಿದ ಪ್ರಯೋಗಶಾಲೆಗಳಿಗೆ ಪರೀಕ್ಷೆಗಾಗಿ ಸಲ್ಲಿಸುವ ಕುರಿತು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ. ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, RT-PCR & RAT ಕೋವಿಡ್-19 ರ ಪರೀಕ್ಷೆ ನಡೆಸಲು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯದಂತೆ ದಿನ ನಿತ್ಯ 150 ರಿಂದ 200 ಪರೀಕ್ಷೆಗೆ ನಿಗದಿಪಡಿಸಲಾಗಿದ್ದು, ಎಲ್ಲಾ SARI ಪ್ರಕರಣಗಳಿಗೆ…

Read More

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು ಮತ್ತೆ ಮೂವರಿಗೆ ಸೋಂಕು ದೃಢಪಟ್ಟಿದೆ. ಹೌದು, ಇಂದು ಮೂವರಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷನಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಡಿಜೆಹಳ್ಳಿ, ಸಿವಿರಾಮನ್ ನಗರ ಹಾಗೂ ಜೈ ಭುವನೇಶ್ವರಿ ನಗರದ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೂವರಿಗೂ ಯಾವುದೇ ಟ್ರಾವೆಲ್ ಹಿಸ್ಟ್ರಿ ಇಲ್ಲ. ಆದಾಗ್ಯೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮೂವರನ್ನೂ ಹೋಂ ಐಸೋಲೇಷನ್ ಮಾಡಿ ಚಿಕಿತ್ಸೆ ನಿಡಲಾಗುತ್ತಿದೆ.

Read More

ನವದೆಹಲಿ : ಮಾರ್ಚ್ ತಿಂಗಳಲ್ಲಿ ನೌಕರರ ರಾಜ್ಯ ವಿಮಾ ನಿಗಮ (ESIC) ಅಡಿಯಲ್ಲಿ ಉದ್ಯೋಗದಲ್ಲಿರುವ ಜನರ ಸಂಖ್ಯೆಯಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಒದಗಿಸಿದ ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ 16.3 ಲಕ್ಷ ಹೊಸ ಜನರನ್ನು ESIC ಗೆ ಸೇರಿಸಲಾಗಿದೆ. ಇದು ಫೆಬ್ರವರಿಗಿಂತ ಶೇ. 5.79 ರಷ್ಟು ಹೆಚ್ಚಾಗಿದೆ. ಫೆಬ್ರವರಿಯಲ್ಲಿ, 15.4 ಲಕ್ಷ ಜನರು ESIC ಅಡಿಯಲ್ಲಿ ಒಳಪಟ್ಟಿದ್ದರು. ಕೇವಲ ಉದ್ಯೋಗಿಗಳು ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯ ಕಂಪನಿಗಳು ಮತ್ತು ಕಾರ್ಖಾನೆಗಳು ಸಹ ESIC ನಲ್ಲಿ ನೋಂದಾಯಿಸಿಕೊಂಡಿವೆ. ಮಾರ್ಚ್‌ನಲ್ಲಿ 31,514 ಹೊಸ ಕಂಪನಿಗಳು ESIC ನಲ್ಲಿ ದಾಖಲಾಗಿದ್ದು, ಫೆಬ್ರವರಿಗಿಂತ ಶೇ. 33.9 ರಷ್ಟು ಹೆಚ್ಚಾಗಿದೆ. ಫೆಬ್ರವರಿಯಲ್ಲಿ 23,526 ಕಂಪನಿಗಳು ನೋಂದಾಯಿಸಿಕೊಂಡಿದ್ದವು. ಇದರರ್ಥ ಮಾರ್ಚ್‌ನಲ್ಲಿ ಹೆಚ್ಚಿನ ಜನರಿಗೆ ಉದ್ಯೋಗ ಸಿಕ್ಕಿತು ಮತ್ತು ಹೆಚ್ಚಿನ ಕಂಪನಿಗಳು ESIC ಯ ಸಾಮಾಜಿಕ ಭದ್ರತಾ ಯೋಜನೆಗೆ ಸೇರಿಕೊಂಡವು. ಯುವಕರು ಮತ್ತು ಮಹಿಳೆಯರು ಉದ್ಯೋಗದಲ್ಲಿ ದೊಡ್ಡ ಶಕ್ತಿಯಾದರು. ಈ ಹೆಚ್ಚುತ್ತಿರುವ ಭಾಗವಹಿಸುವಿಕೆಯಲ್ಲಿ ಯುವಕರು ದೊಡ್ಡ ಪಾತ್ರ…

Read More

ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಸುಪಾರಿ ಕೊಟ್ಟು ಪತಿಯನ್ನೇ ಪತ್ನಿ ಹತ್ಯೆ ಮಾಡಿಸಿರುವ ಘಟನೆ ನಡೆದಿದೆ. ಹೌದು, ಸುಪಾರಿ ಕೊಟ್ಟು ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ಚಿಕ್ಕಮಗಳೂರಿನ ಎನ್ ಆರ್ ಪುರ ತಾಲೂಕಿನ ಕರಗುಂದ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಎನ್ ಆರ್ ಪುರ ಪಟ್ಟಣದ ಸುದರ್ಶನ್ ಎಂದು ಗುರುತಿಸಲಾಗಿದೆ. 10 ವರ್ಷಗಳ ಹಿಂದೆ ಕಮಲ ಸುದರ್ಶನ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಮಲಾ ಶಿವರಾಜ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ನಂತರ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಸುದರ್ಶನ್  ಗೆ ನಿದ್ರೆ ಮಾತ್ರೆ ನೀಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಸದ್ಯ ಸುದರ್ಶನ್ ಪತ್ನಿ ಕಮಲ, ಆಕೆಯ ಪ್ರಿಯಕರ ಎಸ್ ಶಿವರಾಜ್ ಹಾಗೂ ಆತನ ಇನ್ನಿಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

Read More