Subscribe to Updates
Get the latest creative news from FooBar about art, design and business.
Author: kannadanewsnow57
ಮಂಗಳೂರು : ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇಂದು ನಡೆಯುವ ಅಂತ್ಯಕ್ರಿಯೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಭಾಗಿಯಾಗಲಿದ್ದಾರೆ. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಇದೀಗ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ಅವರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ಹಿನ್ನೆಲೆಯಲ್ಲಿ ಮೇ 2 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಿಂದೂ ಸಂಘಟನೆಗಳು ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮೇ 2 ರಿಂದ ಮೇ 6 ರವರೆಗೆ ನಗರದಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ ವಿಧಿಸಲಾಗಿದೆ.
ಉಡುಪಿ : ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಉಡುಪಿಯಲ್ಲಿ ಮುಸ್ಲಿಂ ಯುವಕನ ಹತ್ಯೆಗೆ ಯತ್ನ ನಡೆದಿದೆ. ಹೌದು, ಉಡುಪಿ ತಾಲೂಕಿನ ಅತ್ರಾಡಿಯಲ್ಲಿ ಮುಸ್ಲಿಂ ಆಟೋ ಚಾಲಕ ಅಬೂಬಕ್ಕರ್ ಎಂಬುವರ ಮೇಲೆ ದಾಳಿಯಾಗಿದೆ. ಆಟೋ ಅಡ್ಡಗಟ್ಟಿ ಚಾಲಕ ಅಬೂಬಕ್ಕರ್ ಕೊಲೆಗೆ ಯತ್ನಿಸಲಾಗಿದೆ. ಅಬೂಬಕ್ಕರ್ ನನ್ನು ಅಡ್ಡಗಟ್ಟಿ ಸುಶಾಂತ್, ಸಂದೇಶ್ ಪೂಜಾರಿ ಎಂಬುವರು ಕೊಲೆಗೆ ಯತ್ನಿಸಿದ್ದಾರೆ ಕೂಡಲೇ ಹಿರಿಯಡ್ಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಕಾಮುಕರ ಅಟ್ಟಹಾಸ ಮುಂದುವರೆದಿದ್ದು, ಯುವಕನೊಬ್ಬ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಯುವಕನೊಬ್ಬ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ. ಏಪ್ರಿಲ್ 30 ರಂದು ಈ ಘಟನೆ ನಡೆದಿದೆ. ರಾತ್ರಿ 11:30 ರ ವೇಳೆಗೆ ಯುವತಿ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಕಾಮುಕ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಮುಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು : ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಇಂದಿನಿಂದ ಮೇ.4 ರವರೆಗೆ ಮಂಗಳೂರು ನಗರದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ದಿನಾಂಕ: 01-05-2025 ರಂದು ಮಂಗಳೂರು ನಗರ ಪೊಲೀಸ್ ಕಮೀಷನರೇಟ್‌ನ ಬಜ್ಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಹಾಸ್ ಶೆಟ್ಟಿ ಎಂಬಾತನ ಮೇಲೆ ಯಾರೋ ದುಷ್ಕರ್ಮಿಗಳು ಮಾರಕಾಯುಧಗಳಿಂದ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಈ ಹಿನ್ನಲೆಯಲ್ಲಿ ಮಂಗಳೂರು ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗಳಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕ್ಷುಬ್ಧ ವಾತಾವರಣ ಉಂಟಾಗಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂಬುದಾಗಿ ಹಾಗೂ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಮದ್ಯ ಸೇವಿಸಿ ಸಾರ್ವಜನಿಕ ಸೊತ್ತು ನಾಶ, ಹಲ್ಲೆ ಹಾಗೂ ದೊಂಬಿ ನಡೆಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯನ್ನು ಉಂಟು ಮಾಡಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ತೊಂದರೆ ಮಾಡುವ ಸಾಧ್ಯತೆಯು ಇರುವುದರಿಂದ ಮಂಗಳೂರು ನಗರದ ಪೊಲೀಸ್…
ನವದೆಹಲಿ : ಪಹಲ್ಗಾಮ್ ಉಗ್ರ ದಾಳಿ ನಡುವೆ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಈ ನಡುವೆ ಪಾಕಿಸ್ತಾನವನ್ನು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಬೆಂಬಲಿಸಿದ್ದಾನೆ. ಅಮೆರಿಕ,ಕೆನಡಾದ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಪಾಕ್ ಪರ ಬೇಹುಗಾರಿಕೆ ಮಾಡಿದ್ರೆ ಬಹುಮಾನ ಕೊಡುವುದಾಗಿ ಘೋಷಿಸಿದ್ದಾನೆ. ಭಾರತೀಯ ಮಿಲಿಟರಿ, ಸೇನಾ ಚಲನವಲನಗಳ ಬಗ್ಗೆ ತಿಳಿಸಿಕೊಟ್ರೆ 11 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಹೇಳಿದ್ದಾನೆ. ಭಾರತ ಪಾಕಿಸ್ತಾನದ ಮೇಲೆ ಯುದ್ಧ ಮಾಡಿದರೆ ಸಿಖ್ಖರು ಯುದ್ಧದಲ್ಲಿ ಭಾಗವಹಿಸಬಾರದು ಎಂದು ಅವರು ಕರೆ ನೀಡಿದರು. “ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ ಮತ್ತು ಮೋದಿಗೆ ಕೊನೆಯ ಯುದ್ಧವಾಗುತ್ತದೆ.” ಪಂಜಾಬಿಗಳು ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ. “ಪಂಜಾಬ್ ಪಾಕಿಸ್ತಾನದ ಬೆನ್ನೆಲುಬಾಗಲಿದೆ” ಎಂದು ಅವರು ವೀಡಿಯೊ ಸಂದೇಶದಲ್ಲಿ ಕರೆ ನೀಡಿದ್ದಾನೆ.
ಮುಂಬೈ: ಷೇರು ಮಾರುಕಟ್ಟೆ ಇಂದು ಅಂದರೆ ಮೇ 2, ಶುಕ್ರವಾರ, ವಾರದ ಕೊನೆಯ ವಹಿವಾಟಿನ ದಿನವಾಗಿದೆ. ಸೆನ್ಸೆಕ್ಸ್ ಸುಮಾರು 900 ಪಾಯಿಂಟ್‌ಗಳ ಏರಿಕೆಯಾಗಿ 81,100 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ 200 ಕ್ಕೂ ಹೆಚ್ಚು ಪಾಯಿಂಟ್‌ಗಳಷ್ಟು ಏರಿಕೆಯಾಗಿದ್ದು, 24,550 ಮಟ್ಟದಲ್ಲಿದೆ. ಸೆನ್ಸೆಕ್ಸ್ ಸೂಚ್ಯಂಕದ 30 ಷೇರುಗಳಲ್ಲಿ 26 ಷೇರುಗಳು ಏರಿಕೆಯಲ್ಲಿವೆ. ಅದಾನಿ ಪೋರ್ಟ್ಸ್ ಷೇರುಗಳು ಶೇ.3.30 ರಷ್ಟು ಏರಿಕೆಯಾಗಿವೆ. ಮಹೀಂದ್ರಾ, ಆಕ್ಸಿಸ್ ಬ್ಯಾಂಕ್ ಮತ್ತು ಇನ್ಫೋಸಿಸ್ ಷೇರುಗಳು ಶೇ.1.3 ರಷ್ಟು ಏರಿಕೆಯಾಗಿವೆ. ಜೊಮ್ಯಾಟೊ ಷೇರುಗಳು ಶೇ.1.80 ರಷ್ಟು ಕುಸಿದಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಮಿಶ್ರ ವ್ಯವಹಾರ ಏಷ್ಯಾದ ಮಾರುಕಟ್ಟೆಗಳಲ್ಲಿ, ಜಪಾನ್‌ನ ನಿಕ್ಕಿ ಸೂಚ್ಯಂಕವು 253 ಪಾಯಿಂಟ್‌ಗಳ (0.69%) ಏರಿಕೆಯಾಗಿ 36,706 ಕ್ಕೆ ವಹಿವಾಟು ನಡೆಸುತ್ತಿದೆ. ಕೊರಿಯಾದ ಕೋಸ್ಪಿ ಕೂಡ 4 ಪಾಯಿಂಟ್‌ಗಳನ್ನು (0.19%) ಗಳಿಸಿ 2,562 ಕ್ಕೆ ವಹಿವಾಟು ನಡೆಸುತ್ತಿದೆ. ಹಾಂಗ್ ಕಾಂಗ್ ನ ಹ್ಯಾಂಗ್ ಸೆಂಗ್ ಸೂಚ್ಯಂಕ 235 ಪಾಯಿಂಟ್ ಗಳು (1.06%) ಏರಿಕೆಯಾಗಿ 22,354 ಕ್ಕೆ ವಹಿವಾಟು…
ನವದೆಹಲಿ. ಸಿಬಿಎಸ್‌ಇ ಬೋರ್ಡ್ ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ. ವರದಿಗಳ ಪ್ರಕಾರ, ಸಿಬಿಎಸ್‌ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶ 2025 ಮುಂದಿನ ವಾರ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಕಟಿಸುವ ಸಾಧ್ಯತೆ ಇದೆ. ಸಿಬಿಎಸ್‌ಇ 10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದ ನಂತರ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ cbse.gov.in, DigiLocker ಪೋರ್ಟಲ್ results.digilocker.gov.in ಮತ್ತು ಅಪ್ಲಿಕೇಶನ್ ಹಾಗೂ ಉಮಾಂಗ್ ಅಪ್ಲಿಕೇಶನ್‌ನಿಂದ ಫಲಿತಾಂಶಗಳನ್ನು ಪರಿಶೀಲಿಸಲು ಮತ್ತು ಅಂಕಪಟ್ಟಿಯ ಡಿಜಿಟಲ್ ಪ್ರತಿಯನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಈ ದಿನಾಂಕಗಳಲ್ಲಿ ಫಲಿತಾಂಶಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಪರೀಕ್ಷೆ ಮುಗಿದ 55 ದಿನಗಳಲ್ಲಿ ಸಿಬಿಎಸ್‌ಇ ಫಲಿತಾಂಶವನ್ನು ಘೋಷಿಸುತ್ತದೆ ಎಂದು ನಾವು ನಿಮಗೆ ಹೇಳೋಣ. ಆದರೆ ಅಂದಾಜಿನ ಪ್ರಕಾರ, ಈ ವರ್ಷ ಮಂಡಳಿಯು 10 ನೇ ತರಗತಿಯ ಫಲಿತಾಂಶವನ್ನು ಮೇ 10 ರಿಂದ 15 ರ ನಡುವೆ ಮತ್ತು 12 ನೇ ತರಗತಿಯ ಫಲಿತಾಂಶವನ್ನು ಮೇ…
ಬೀದರ್: ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಅವರಿಗೆ ಅಂಡರ್ ವರ್ಲ್ಡ್ ನಿಂದ ಜೀವ ಬೆದರಿಕೆ ಕರೆ ಬಂದಿರುವುದಾಗಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ, ಅಂಡರ್ ವರ್ಲ್ಡ್ ನಿಂದ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಅಂಡರ್ ವರ್ಲ್ಡ್ ಸೇರಿ ಕೆಲವು ಕಡೆಗಳಿಂದ ಕರೆಗಳು ಬಂದಿವೆ. ಈ ಹಿಂದೆಯೂ ಕೆಲವು ಬಾರಿ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ನನಗಾಗಿ ಮಂಗಳೂರಿನಲ್ಲಿ ಎನ್ಐಎ ಸ್ಥಾಪಿಸುವುದು ಬೇಡ. ಜಿಲ್ಲೆಯ ಜನಕ್ಕಾಗಿ ಮಾಡುವುದಾದರೆ ಮಾಡಲಿ ಎಂದರು. ಎಲ್ಲಿ ಹುಟ್ಟಬೇಕು, ಎಲ್ಲಿ ಸಾಯಬೇಕು ಎಂಬುದನ್ನು ಆ ದೇವರು ಬರೆದಿದ್ದಾನೆ. ನೆಮ್ಮದಿಯಾಗಿ ಸಾಯುವ ಪರಿಸ್ಥಿತಿ ಮಾಡಿಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದೇವರು ಇಟ್ಟಂತೆ ಇರಲಿ, ನಮ್ಮ ಕೈಯಲ್ಲಿ ಏನೂ ಇಲ್ಲ ಈಗ ಮಾತನಾಡುತ್ತಿದ್ದೇನೆ. ಮರಳಿ ಮತ್ತೆ ಹೋಗುತ್ತೇನೆ ಎನ್ನುವ ಗ್ಯಾರಂಟಿ ಇಲ್ಲ ಎಂದು ಹೇಳಿದ್ದಾರೆ.
ನವದಹಲಿ : IRCTC ವೆಬ್‌ಸೈಟ್‌ನಲ್ಲಿ ಒಂದು ಸೂಪರ್ ವೈಶಿಷ್ಟ್ಯವಿದೆ. ಆದರೆ ಅನೇಕರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದರ ಹೆಸರು ‘ಪರ್ಯಾಯ ರೈಲು ವಸತಿ’ (Alternate Train Accommodation) ಅಥವಾ ‘ವಿಕಲ್ಪ್ ಯೋಜನೆ’ (Vikalp Scheme). ನೀವು ಕಾಯುವ ಟಿಕೆಟ್ ಬುಕ್ ಮಾಡುವಾಗ ಈ ಆಯ್ಕೆಯನ್ನು ಆನ್ ಮಾಡುವುದರಿಂದ ನಿಮ್ಮ ಟಿಕೆಟ್ ದೃಢೀಕರಿಸಲ್ಪಡುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ವೈಶಿಷ್ಟ್ಯವು ಒಂದೇ ಮಾರ್ಗದಲ್ಲಿ ಬೇರೆ ರೈಲಿನಲ್ಲಿ ದೃಢೀಕೃತ ಸೀಟನ್ನು ಪಡೆಯಲು ನಿಮಗೆ ಅನುಮತಿಸುತ್ತದೆ. 1. ನೈಜ-ಸಮಯದ ಲಭ್ಯತೆ ಟಿಕೆಟ್ ಬುಕ್ ಮಾಡುವಾಗ ಸೀಟು ಸಿಗದಿದ್ದರೆ ಒಂದು ಸಣ್ಣ ಉಪಾಯವಿದೆ. ರಾತ್ರಿ 11 ರಿಂದ 12 ಗಂಟೆಯ ಒಳಗೆ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿ. ಈ ಸಮಯದಲ್ಲಿ ಸಂಚಾರ ವಿರಳವಾಗಿದೆ. ಈ ವ್ಯವಸ್ಥೆಯು ವೇಗವಾಗಿ ಕೆಲಸ ಮಾಡುತ್ತದೆ. 2. ರಿಮೋಟ್ ಸ್ಥಳ ಕೋಟಾ ನೀವು ಚಿಕ್ಕ ನಿಲ್ದಾಣದಿಂದ ಬುಕ್ ಮಾಡಿದರೆ, ನಿಮಗೆ ಸೀಟು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರರ್ಥ ಪ್ರಮುಖ ನಿಲ್ದಾಣದ ಮೊದಲು ಅಥವಾ ನಂತರ…
ಮಂಗಳೂರು : ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭೀಕರ ಹತ್ಯೆಯ ವಿಡಿಯೋ ವೈರಲ್ ಆಗಿದೆ. ಮಂಗಳೂರಿನ ಬಜ್ಪೆ ಬಳಿಯಲ್ಲಿ ಜುಲೈ 22, 2022ರಂದು ಸುರತ್ಕಲ್ ಫಾಜಿಲ್ ಕೊಲೆಯಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಸುಹಾನ್ ಶೆಟ್ಟಿ ಆಗಿದ್ದರು. ಪ್ರವೀಣ್ ನೆಟ್ಟಾರು ಕೊಲೆಯ ಪ್ರತೀಕಾರವಾಗಿ ನಡೆದಿದ್ದಂತ ಕೊಲೆ ಫಾಜಿಲ್ ಆಗಿತ್ತು. ಈ ಪ್ರಕರಣ ಪ್ರಮುಖ ಆರೋಪಿ ಸುಹಾನ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆ ನೀಡಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ…











