Author: kannadanewsnow57

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ತಲೆ ಕೂದಲಿನ ಸಮಸ್ಯೆ ಬರೀ ಹೆಣ್ಣು ಮಕ್ಕಳಿಗಷ್ಟೇ ಅಲ್ಲ. ಗಂಡಸರಿಗೂ ತಲೆ ಕೂದಲಿನ ಸಮಸ್ಯೆ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಅಂದರೆ ಕೂದಲು ಉದುರುವುದು, ತಲೆಯಲ್ಲಿ ಹೊಟ್ಟು ತುರಿಕೆ, ಕೂದಲು ತುಂಡಾಗುವುದು, ಬಿಳಿ ಕೂದಲು ಹೀಗೆ ಅನೇಕ ತೊಂದರೆಗಳು. ಹೊರಗಿನ ಕಾರ್ಬನ್‌ ಹೊಗೆ, ಗಡಸು ನೀರು, ಅಥವಾ ಅನಿಯಮಿತವಾದ ಜೀವನ ಶೈಲಿ, ಒತ್ತಡದಿಂದ ಈ ತೊಂದರೆಗಳು ಉಂಟಾಗಬಹುದು. ಆದರೆ ಹೆಂಗಸರಷ್ಟು ಗಂಡು ಮಕ್ಕಳು ತಮ್ಮ ತಲೆ ಕೂದಲು ಅಥವಾ ಚರ್ಮದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲ ಗಂಡಸರಿಗೆ ತಮ್ಮ ತಲೆ ಕೂದಲಿನ ಆರೈಕೆ ಮಾಡಿಕೊಳ್ಳುವ ಇಚ್ಛೆ ಇರುತ್ತದೆ. ಅಂತವರಿಗೆ ಕೆಲ ಟಿಪ್ಸ್‌ ಇಲ್ಲಿವೆ. ನಾವಿಂದು ಹೇಳುವ ತಲೆ ಕೂದಲಿನ ಆರೈಕೆಯ ಆರ್ಯುವೇದ ಟಿಪ್ಸ್‌ ಹೆಣ್ಣು ಮಕ್ಕಳು ಸೇರಿದಂತೆ ಗಂಡಸರೂ ಫಾಲೋ ಮಾಡಬಹುದು. ಇದರಿಂದ ಯಾವುದೇ ಸೈಡ್‌ ಎಪೆಕ್ಟ್‌ ಇಲ್ಲ. ಒಮ್ಮೆ ನೀವೂ ಟ್ರೈ ಮಾಡಿ ನೋಡಿ. ನಾಲ್ಕು ಚಮಚ ಮೆಂತೆ ಕಾಳುಗಳನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ತೀರಾ ನುಣ್ಣಗೆ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ರಾತ್ರಿ ನೆನಸಿಟ್ಟ ಒಣದ್ರಾಕ್ಷಿ ಮರುದಿನ ಸೇವಿಸುವುದ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೂ ದಿನವೂ ಸೇವಿಸಬಹುದು. ಹೀಗೆ ತಜ್ಞರು ಹೇಳುವ ಪ್ರಕಾರ ಒಣದ್ರಾಕ್ಷಿ ನೀರಿನಲ್ಲಿ ನೆನಸಿಟ್ಟು ಬೆಳಗ್ಗೆ ಸೇವಿಸಿದರೆ ದೇಹಕ್ಕೆ ಆಗುವ ಲಾಭಗಳ ಪಟ್ಟಿ ತಿಳಿದುಕೊಳ್ಳೋಣ. ಬೆಳಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ನೆನಸಿಟ್ಟ ಒಣದ್ರಾಕ್ಷಿ ಸೇವಿಸಿದರೆ ಆರೋಗ್ಯಕ್ಕೆ ದುಪ್ಪಟ್ಟು ಒಳ್ಳೆಯದು. ನೀರಿನಲ್ಲಿ ನೆನಸಿಟ್ಟ ಒಣದ್ರಾಕ್ಷಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿರೆ ಹೃದಯ ಹಾಗು ಯಕೃತ್‌ನ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಆಹಾರ ತಜ್ಞರ ಪ್ರಕಾರ ದಿನಂಪ್ರತಿ ನೆನಸಿದ ಒಣದ್ರಾಕ್ಷಿ ಸೇವಿಸಿದರೆ ಕರುಳು ಸ್ವಚ್ಛವಾಗುತ್ತದೆ. ಹಾಗು ಕರುಳಿಗೆ ಸಂಬಂಧಸಿದ ಯಾವುದೇ ತೊಂದರೆಯಾಗುವುದಿಲ್ಲ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಹಾಗು ಮಲಬದ್ಧತೆಯಂತಹ ಸಮಸ್ಯೆ ಕೂಡ ಇರುವುದಿಲ್ಲ. ರಕ್ತದಲ್ಲಿನ ಹಿಮೋಗ್ಲೋಬಿನ್‌ ಮಟ್ಟವನ್ನು ಹೆಚ್ಚಿಸುವಲ್ಲಿ ನೆನಸಿಟ್ಟ ಒಣದ್ರಾಕ್ಷಿ ತುಂಬಾ ಸಹಾಯ ಮಾಡುತ್ತದೆ. ಹೀಗೆ ಪ್ರತಿ ದಿನ ನೆನಸಿಟ್ಟ ಒಣದ್ರಾಕ್ಷಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹಿಮೋಗ್ಲೋಬಿನ್‌ ಮಟ್ಟ ಸಮಪ್ರಮಾಣದಲ್ಲಿರಿಸಿ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿಮ್ಮ ಮುದ್ದಾದ ಮಗುವಿನ ಚರ್ಮದ ಆರೈಕೆಯ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ. ಚಳಿಗಾಲದಲ್ಲಿ ಸಹಜವಾಗಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಒಡೆಯುವುದು ಬಿರುಕಾಗುವುದು. ಇಂತಹ ಋತುಮಾನದಲ್ಲಿ ಮಗುವಿನ ಆರೈಕೆಯ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಎಳೆಯ ಮೃದುವಾದ ಚರ್ಮದ ಆರೈಕೆ ತುಂಬಾ ನಾಜೂಕಾಗಿರಬೇಕು. ಮಗುವಿನ ಸ್ನಾನ ಸೂರ್ಯ ನೆತ್ತಿಗೆ ಬಂದ ಮೇಲೆ ಆಗಲಿ. ಬೆಳಗ್ಗೆ ಮಗುವಿಗೆ ಸ್ನಾನ ಬೇಡ. ಹೆಚ್ಚು ಹೊತ್ತು ಬಚ್ಚಲು ಮನೆಯಲ್ಲಿ ಮಗುವನ್ನು ಇರಿಸಬೇಡಿ. ಚಳಿ ಇದೆ ಎಂದು ಮಗುವಿಗೆ ತೀವ್ರವಾದ ಬಿಸಿ ನೀರು ಸ್ನಾನ ಮಾಡಿಸಬೇಡಿ. ಆದರೆ ನಮ್ಮ ಹಳೆಯ ಪದ್ಧತಿ ಏನೆಂದರೆ ತುಂಬಾ ಸುಡುವ ನೀರು ಮಗುವಿಗೆ ಹಾಕಿದರೆ ಒಳ್ಳೆಯದು ಅಂತ ಹೇಳುತ್ತಾರೆ. ಆದರೆ ಈಗಿನ ಆಧುನಿಕ ವೈದ್ಯರು ಇದನ್ನು ತಳ್ಳಿ ಹಾಕುತ್ತಾರೆ. ತುಂಬಾ ಸುಡುವ ನೀರು ಚಿಕ್ಕ ಮಕ್ಕಳಿಗೆ ಚರ್ಮದ ಮೇಲೆ ಕೆಂಪು ಕಲೆಗಳು ಅಥವಾ ಅಲರ್ಜಿ ಆಗಬಹುದು ಎಂದು ಹೇಳುತ್ತಾರೆ. ಚಳಿಗಾಲದಲ್ಲಿ ನೀರಿನ ಟಬ್‌ನಲ್ಲಿ ಹೆಚ್ಚು ಹೊತ್ತು ಮಗುವನ್ನು ಬಿಡಬೇಡಿ. ಇದರಿಂದ ಶೀತವಾಗುವ…

Read More

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ರಾಜಸ್ಥಾನದ ಪೋಖ್ರಾನ್ ನಲ್ಲಿ ತ್ರಿ-ಸೇವೆಗಳ ಉನ್ನತ ಅಧಿಕಾರಿಗಳೊಂದಿಗೆ ಉಪಸ್ಥಿತರಿರಲಿದ್ದಾರೆ. ಸ್ವಾವಲಂಬನೆಗಾಗಿ ಭಾರತದ ಪ್ರಯತ್ನಕ್ಕೆ ಸಾಕ್ಷಿಯಾಗಿರುವ ಯುದ್ಧ ಆಟವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ವೇದಿಕೆಗಳು ಮತ್ತು ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸುತ್ತದೆ. 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಾರ್ಚ್ 12 ರಂದು ರಾಜಸ್ಥಾನದ ಪೋಖ್ರಾನ್ನಲ್ಲಿ ನಡೆಯಲಿರುವ ಮೆಗಾ ಮಿಲಿಟರಿ ವ್ಯಾಯಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.    https://kannadanewsnow.com/kannada/if-china-doesnt-do-this-job-till-then-there-is-no-room-for-peace-jaishankar-said-on-lac-standoff/ https://kannadanewsnow.com/kannada/if-you-are-not-menstruating-properly-then-eat-these-foods-and-your-menstrual-cycle-will-be-fine/ ದೇಶೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರ ವೇದಿಕೆಗಳು ಮತ್ತು ವ್ಯವಸ್ಥೆಗಳನ್ನು ಒಳಗೊಂಡಿರುವ ಸ್ವಾವಲಂಬನೆಗಾಗಿ ಭಾರತದ ಪ್ರಯತ್ನಕ್ಕೆ ಸಾಕ್ಷಿಯಾಗಿರುವ ಯುದ್ಧ ಆಟ ‘ಭಾರತ್ ಶಕ್ತಿ’ಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.

Read More

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ 2020 ರಿಂದ ಉತ್ತುಂಗದಲ್ಲಿದೆ. ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಂತಿಗಾಗಿ ಉಭಯ ದೇಶಗಳ ನಡುವಿನ 20 ಕ್ಕೂ ಹೆಚ್ಚು ಮಿಲಿಟರಿ ಮಾತುಕತೆಗಳು ಸಹ ವಿಫಲವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಉತ್ತುಂಗದಲ್ಲಿದೆ.   https://kannadanewsnow.com/kannada/rameswaram-cafe-blast-case-fsl-probe-reveals-2-chemical-blasts/ https://kannadanewsnow.com/kannada/mission-370-pm-modi-to-visit-12-states-in-next-10-days/ ಏತನ್ಮಧ್ಯೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಪೂರ್ವ ಲಡಾಖ್ನಲ್ಲಿ ದೀರ್ಘಕಾಲದ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಚೀನಾ ಗಡಿ ನಿರ್ವಹಣಾ ಒಪ್ಪಂದಗಳಿಗೆ ಬದ್ಧವಾಗಿರಬೇಕು ಮತ್ತು ಚೀನಾ-ಭಾರತ ಸಂಬಂಧಗಳನ್ನು ಸುಧಾರಿಸಲು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಶಾಂತಿಯ ವಾತಾವರಣ ಇರಬೇಕು ಎಂದು ಜೈಶಂಕರ್ ಶನಿವಾರ ಹೇಳಿದ್ದಾರೆ. ಚೀನಾ ಈ ಒಪ್ಪಂದವನ್ನು ಅನುಸರಿಸದ ಹೊರತು, ಗಡಿಯಲ್ಲಿ ಶಾಂತಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಚಿಂತಕರ ಚಾವಡಿಯ ಸಂವಾದಾತ್ಮಕ ಅಧಿವೇಶನದಲ್ಲಿ, ಮೋದಿ ಸರ್ಕಾರವು ಗಡಿ ಮೂಲಸೌಕರ್ಯಗಳನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ಭಾರತ…

Read More