Subscribe to Updates
Get the latest creative news from FooBar about art, design and business.
Author: kannadanewsnow09
ವಿಜಯಪುರ: ಜಿಲ್ಲೆಯಲ್ಲಿ ಬುಲೆರೋ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಡಿಕ್ಕಿಯ ರಭಸಕ್ಕೆ ಬೈಕ್ ಸವಾರರ ರುಂಡ ದೇಹದಿಂದಲೇ ಬೇರ್ಪಟ್ಟಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ಬಳಿಯಲ್ಲಿ ಬುಲೆರೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ರಾಯಚೂರು ಜಿಲ್ಲೆಯ ಜಕ್ಕೇರ ತಾಂಡಾದ ವಜ್ರಮುನಿ ಚೌವ್ಹಾಣ್ ಎಂಬಾತ ರುಂಡವೇ ದೇಹದಿಂದ ಬೇರ್ಪಟ್ಟಿದೆ. ವಿಜಯಪುರಕ್ಕೆ ಕಬ್ಬು ಕಟಾವು ಮಾಡೋದಕ್ಕೆ ತೆರಳುತ್ತಿದ್ದಂತ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ. ಬುಲೆರೋ ವಾಹನ ಡಿಕ್ಕಿಯಾದ ರಭಸಕ್ಕೆ ವಜ್ರಮುನಿ ದೇಹದಿಂದಲೇ ರುಂಡ ಹಾರಿ ಬೇರ್ಪಟ್ಟಿದೆ. ಸ್ಥಳಕ್ಕೆ ಆಗಮಿಸಿದಂತ ಬಸವನಬಾಗೇವಾಡಿ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. https://kannadanewsnow.com/kannada/jee-main-session-1-admit-card-released-download-by-following-this-step/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) ಜಂಟಿ ಪ್ರವೇಶ ಪರೀಕ್ಷೆ (Joint Entrance Examination -JEE) ಮೇನ್ 2025 ರ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಜೆಇಇ ಮೇನ್ 2025 ಹಾಲ್ ಟಿಕೆಟ್ಗಳನ್ನು ಅಧಿಕೃತ ವೆಬ್ಸೈಟ್ – jeemain.nta.nic.in ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ವರ್ಷ, ಜೆಇಇ ಮೇನ್ 2025 ಸೆಷನ್ 1 ಅನ್ನು 2025 ರ ಜನವರಿ 22 ರಿಂದ 30 ರವರೆಗೆ ನಡೆಸಲಾಗುವುದು. ಅಧಿಕೃತ ಸೂಚನೆ ಮತ್ತು ಹಿಂದಿನ ಎನ್ಟಿಎ ಪ್ರವೃತ್ತಿಯ ಪ್ರಕಾರ, ಪರೀಕ್ಷಾ ದಿನಾಂಕಕ್ಕೆ ಮೂರು ದಿನಗಳ ಮೊದಲು ಹಾಲ್ ಟಿಕೆಟ್ಗಳನ್ನು ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅದಕ್ಕೆ ಅನುಗುಣವಾಗಿ ಪ್ರಯಾಣದ ವ್ಯವಸ್ಥೆಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಲು ಈ ತಿಂಗಳ ಆರಂಭದಲ್ಲಿ ಸಿಟಿ ಸ್ಲಿಪ್ ಅನ್ನು ಬಿಡುಗಡೆ ಮಾಡಲಾಯಿತು. ಜೆಇಇ ಮೇನ್ಸ್ ಪ್ರವೇಶ ಪತ್ರವು ಪರೀಕ್ಷೆಗೆ ಹಾಜರಾಗಲು ಅತ್ಯಗತ್ಯ ದಾಖಲೆಯಾಗಿದೆ ಎಂದು ಅಭ್ಯರ್ಥಿಗಳು ತಿಳಿದಿರಬೇಕು. ಅದಿಲ್ಲದೆ, ಅವರನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.…
ಬೆಂಗಳೂರು: ಮಾರಾಟ ಪ್ರಮಾಣಪತ್ರ ನೋಂದಣಿಯ ಅನುಸಾರ ಬ್ಯಾಂಕ್ ಹೆಸರಿಗೆ ಇ-ಖಾತಾವನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ ಮುಂದಿದೆ ಓದಿ. ಬ್ಯಾಂಕ್ ಹೆಸರಿಗೆ ಇ-ಖಾತಾ ಪಡೆದುಕೊಳ್ಳೋದಕ್ಕೆ ಇಚ್ಚಿಸುವವರು https://bbmpeaasthi.karnataka.gov.in ಜಾಣಕ್ಕೆ ಭೇಟಿ ನೀಡಬೇಕು. ಆ ನಂತ್ರ ನಾಗರಿಕ ವಿಧಾನದಲ್ಲಿ ಲಾಗಿನ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು. ಪಿಐಡಿ ಸಂಖ್ಯೆಯನ್ನು ಆಯ್ಕೆ ಮಾಡಿ, ಅಂದರೆ ಪಿಐಡಿ ಅಥವಾ ಹೆಸರು ಬಳಸಿಕೊಂಡು ಆಯ್ಕೆಗಳ ಆಧಾರದ ಮೇಲೆ ಆಸ್ತಿಯನ್ನು ಗುರುತಿಸಿ ಮತ್ತು ಅರ್ಜಿ ಸಲ್ಲಿಸಲು ಮುಂದುವರೆಯಿರಿ. ತೆರಿಗೆ ಪಾವತಿಸಿದ ರಶೀದಿ ವಿವರ ಒದಗಿಸಿ ಅಂದರೆ ಆಸ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆ ಎಸ್ ಎ ಎಸ್ ಸಂಖ್ಯೆಯನ್ನು ನಮೂದಿಸಬೇಕು. ಈ ಬಳಿಕ ಮಾರಾಟ ಪ್ರಮಾಣಪತ್ರ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ. ಅಂದರೆ ಮಾರಾಟ ಪ್ರಮಾಣಪತ್ರದ ಆಧಾರದ ಮೇಲೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳ ಹೆಸರನ್ನು ದಾಖಲಿಸಲು Do not have the registered deed ಆಯ್ಕೆ ಮಾಡಿ. ಈ ಎಲ್ಲಾ ಹಂತದ ಬಳಿಕ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ನಿಮ್ಮ…
ಮುಂಬೈ: ಅಪಾರ್ಮೆಂಟ್ ಗೆ ನುಗ್ಗಿ ಬಾಲಿವುಡ್ ನಟ ಸೈಫ್ ಆಲಿಖಾನ್ ಅವರಿಗೆ ಚಾಕು ಇರಿದು ಗಾಯಗೊಳಿಸಿದ್ದರ ಸಂಬಂಧ ಪೊಲೀಸರು ಓರ್ವ ಶಂಕಿತ ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸದ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಓರ್ವ ಶಂಕಿತನನ್ನು ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶಂಕಿತನನ್ನು ಇಂದು ಮುಂಜಾನೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪ್ರಸ್ತುತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. https://kannadanewsnow.com/kannada/cm-siddaramaiah-announces-rs-6-crore-reward-for-olympic-medal-winners/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/
ಮಂಗಳೂರು: ಒಲಂಪಿಕ್ ನಲ್ಲಿ ಮೆಡಲ್ ತಂದವರಿಗೆ 6 ಕೋಟಿ ರೂಪಾಯಿ ಕೊಡ್ತೀವಿ. ಹಾಗೆಯೇ ಏಷ್ಯಾ ಕ್ರೀಡಾಕೂಟ ಮತ್ತು ರಾಷ್ಟ್ರಮಟ್ಟದಲ್ಲಿ ಪದಕ ತಂದವರಿಗೂ ನಗದು ಬಹುಮಾನ ಕೊಡುತ್ತಿದ್ದೇವೆ. ಈ ಪ್ರೋತ್ಸಾಹ ಸದುಪಯೋಗಪಡಿಸಿಕೊಂಡು ಮೆಡಲ್ ಗಳನ್ನು ತಂದು ಕ್ರೀಡಾಕ್ಷೇತ್ರವನ್ನು ಬೆಳಗಿಸಿ, ಬೆಳೆಸಿ ಎಂದು ಕರೆ ನೀಡಿದರು. ಅಗತ್ಯ ವೇದಿಕೆ ಮತ್ತು ಉತ್ತಮ ಪ್ರೋತ್ಸಾಹ ಇಲ್ಲದಿದ್ದರೆ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳು ಬೆಳವಣಿಗೆ ಆಗಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸರ್ಕಾರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಹಾಜರಾತಿ ಸೇರಿ ಇನ್ನಿತರೆ ರಿಯಾಯ್ತಿಗಳನ್ನು ಕೊಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪುನರುಚ್ಚರಿಸಿದರು. ಮುಂದಿನ ಬಜೆಟ್ ನಲ್ಲಿ ಮಂಗಳೂರು ಮತ್ತು ಉಡುಪಿ ಕ್ರೀಡಾಂಗಣಗಳ ಉನ್ನತೀಕರಣಕ್ಕೆ ತಲಾ 3 ಕೋಟಿ ರೂಪಾಯಿ ನಿಗಧಿ ಮಾಡ್ತೀನಿ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದರು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಶೇ2 ರಷ್ಟು ಉದ್ಯೋಗಗಳು ಕ್ರೀಡಾಟುಗಳಿಗೆ ಮೀಸಲು ಇಡಲಾಗುವುದು. ಜೊತೆಗೆ…
ಬೆಂಗಳೂರು: ನಗರದಲ್ಲಿ ಬಿಲ್ಡರ್ ಗಳಿಂದ ಫ್ಲಾಟ್ ಖರೀದಿಸುವವರಿಗೆ ಮೋಸ ಮಾಡೋದು ಅಲ್ಲಲ್ಲಿ ನಡೆಯುತ್ತಿದೆ. ಬರೋಬ್ಬರಿ 1.2 ಕೋಟಿ ಮೌಲ್ಯದ ಒಂದೇ ಫ್ಲಾಟ್ ಅನ್ನು ಹಲವರಿಗೆ ಬಿಲ್ಡರ್ ಮಾರಾಟ ಮಾಡಿದ್ದಾರೆ. ಈ ಕಾರಣದಿಂದ ಎಫ್ಐಆರ್ ಕೂಡ ದಾಖಲಾಗಿದೆ. ಬೆಂಗಳೂರಿನ ಬನಶಂಕರಿಯಲ್ಲಿನ 1.2 ಕೋಟಿ ಮೌಲ್ಯದ ಫ್ಲಾಟ್ ಅನ್ನು ವಿದ್ಯಾಸಾಗರ್ ಎಂಬುವರು ಖರೀದಿಸಿದ್ದರು. ಇವರಿಗಷ್ಟೇ ಅಲ್ಲದೇ ಅದೇ ಫ್ಲಾಟ್ ಅನ್ನು ಬಿಲ್ಡರ್ ಐವರಿಗೆ ಮಾರಾಟ ಮಾಡಿದ್ದಾರೆ. ವಿದ್ಯಾಸಾಗರ್ ಅವರು ಬ್ಯಾಂಕ್ ಗೆ ತೆರಳಿ ತಾನು ಖರೀದಿಸಿ ಫ್ಲಾಟ್ ಮೇಲೆ ಲೋನ್ ಪಡೆಯೋದಕ್ಕೆ ಹೋದಾಗ ಇತರರಿಗೂ ಅದೇ ಫ್ಲಾಟ್ ಅನ್ನು ಬಿಲ್ಡರ್ ಮಾರಾಟ ಮಾಡಿರೋದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ವಿದ್ಯಾಸಾಗರ್ ಅವರು ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ರಾಜರಾಜೇಶ್ವರಿ ಬಿಲ್ಡ್ ಕಾನ್ ಪ್ರೈ.ಲಿ, ನೆಟ್ಕಲಪ್ಪ ಸರ್ಕಲ್ ಬಸವನಗುಡಿಯ ಬಿಲ್ಡರ್ ಗಳಾಗಿರುವ ರಂಜಿತ್ ಶಾ, ಮಿತೇಶ್ ಶಾ ಹಾಗೂ ಹರೀಶ್ ಮೇಲೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ. ಅಂದಹಾಗೇ 2023ರಿಂದ ಬನಶಂಕರಿಯ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಟೆಲಿ ಮನಸ್ ಎನ್ನುವಂತ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಹಾಯವಾಣಿಗೆ ಕರೆ ಮಾಡಿದರೇ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಟೆಲಿ ಮನಸ್ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಈ ಸಹಾಯವಾಣಿಯು ದಿನದ 24/7 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದಿದೆ. ನೆರವು ಪಡೆಯಲು ಇಚ್ಛಿಸುವವರು ಟೆಲಿ ಮನಸ್ ಸಹಾಯವಾಣಿ 14416 ಅಥವಾ 1800-89-14416 ಕ್ಕೆ ಕರೆ ಮಾಡಿ ಎಂಬುದಾಗಿ ತಿಳಿಸಿದೆ. ಯಾವೆಲ್ಲ ಸಮಸ್ಯೆಗೆ ಪರಿಹಾರ? ಪರೀಕ್ಷೆಯ ಒತ್ತಡ ಕೌಟುಂಬಿಕ ಸಮಸ್ಯೆ ಮಾದಕವಸ್ತುಗಳ ವ್ಯಸನ ಜ್ಞಾಪಕ ಶಕ್ತಿ ಸಮಸ್ಯೆ ಮಾನಸಿಕ ಒತ್ತಡ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/ https://kannadanewsnow.com/kannada/state-ii-puc-students-notice-provision-for-correction-of-wrong-in-mark-sheet/
ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೆ ಭಾರತದ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಸ್ಥಾನ ಪಡೆದಿದ್ದಾರೆ. ಹೀಗಿದೆ ಚಾಂಪಿಯನ್ಸ್ ಟ್ರೋಫಿಯ ಭಾರತದ ಆಟಗಾರರ ಬಲಿಷ್ಠ ತಂಡದ ಪಟ್ಟಿ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷ್ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ. https://twitter.com/ANI/status/1880547917813133727
ಬೆಂಗಳೂರು: ನಗರದಲ್ಲಿ ಫೆಬ್ರವರಿ.1ರಿಂದ 17ರವರೆಗೆ ಏರೋ ಇಂಡಿಯಾ -2025ರ ಪ್ರದರ್ಶನ ನಡೆಯಲಿದೆ. ಈ ಹಿನ್ನಲೆಯಲ್ಲಿ ಯಲಹಂಕ ಸುತ್ತಾಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಬಿಬಿಎಂಪಿ ಆದೇಶಿಸಿದೆ. ಈ ಸಂಬಂಧ ಬಿಬಿಎಂಪಿಯ ಯಲಹಂಕದ ಜಂಟಿ ವಲಯ ಆಯುಕ್ತ ಮೊಹದ್ ನಯೀಮ್ ಮೊಯಿನ್ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಜನವರಿ 23ರಿಂದ ಫೆಬ್ರವರಿ.17ರವರೆಗೆ ಯಲಹಂಕದ ವಾಯುನೆಲೆಯಿಂದ 13 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ಮಾಡದಂತೆ ಸೂಚಿಸಿದ್ದಾರೆ. ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವಂತೆಯೂ ಸೂಚಿಸಿರುವಂತ ಅವರು, ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಹಾರ ತಯಾರಿಕೆ, ಮಾರಾಟವನ್ನು ನಿಷೇಧಿಸಿದ್ದಾರೆ. ಒಂದು ವೇಳೆ ಈ ನಿಯಮ ಮೀರಿದ್ರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. https://kannadanewsnow.com/kannada/aero-show-from-jan-23-to-feb-17-crane-height-to-be-reduced-in-and-around-yelahanka/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/
ಕೋಲ್ಕತ್ತಾ: ಕಳೆದ ವರ್ಷ ಕೋಲ್ಕತಾದ ಆರ್ ಜಿ ಕಾರ್ ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂಜೋಯ್ ರಾಯ್ ದೋಷಿ ಎಂದು ಸಾಬೀತಾಗಿದೆ. ಕಳೆದ ವರ್ಷ ಕೋಲ್ಕತ್ತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ನಾಗರಿಕ ಸ್ವಯಂಸೇವಕನನ್ನು ಸಿಬಿಐ ನ್ಯಾಯಾಲಯ ಶನಿವಾರ ದೋಷಿ ಎಂದು ಘೋಷಿಸಿದೆ. ಕೋಲ್ಕತಾ ಪೊಲೀಸರ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಅವರನ್ನು ಆಗಸ್ಟ್ 9 ರಂದು ಭೀಕರ ಘಟನೆ ನಡೆದ ಒಂದು ದಿನದ ನಂತರ ಬಂಧಿಸಲಾಯಿತು ಮತ್ತು ಅತ್ಯಾಚಾರ ಮತ್ತು ಕೊಲೆ ಆರೋಪವನ್ನು ಹೊರಿಸಲಾಯಿತು. “ನಿಮಗೆ ಶಿಕ್ಷೆಯಾಗಬೇಕು” ಎಂದು ನ್ಯಾಯಾಧೀಶರು ಹೇಳಿದರು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಸೋಮವಾರ ಪ್ರಕಟಿಸಲಿದೆ. https://kannadanewsnow.com/kannada/aero-show-from-jan-23-to-feb-17-crane-height-to-be-reduced-in-and-around-yelahanka/ https://kannadanewsnow.com/kannada/bpl-apl-cardholders-note-january-31-is-the-last-date-for-e-kyc-otherwise-the-ration-will-not-come/













