Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್. ಅವರಿಗೆ, ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿನ ಅವರ ಮಹತ್ವದ ಸಂಶೋಧನೆಗಾಗಿ ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯವು ಡಾಕ್ಟರೇಟ್ (Ph.D) ಪದವಿಯನ್ನು ನೀಡಿ ಗೌರವಿಸಿದೆ. ಕೆ ಎನ್ ರಾಜೀವ್ ಅವರು ಮಂಡಿಸಿದ “ಕಾಂಕ್ರೀಟ್ ತಯಾರಿಕೆಯಲ್ಲಿ ದ್ವಿತೀಯ ಹಂತದ ಸಂಸ್ಕರಿಸಿದ ತ್ಯಾಜ್ಯ ನೀರಿನ ಸುಸ್ಥಿರ ಮರುಬಳಕೆ” (SUSTAINABLE REUSE OF SECONDARY TREATED WASTEWATER FOR CONCRETE MANUFACTURING) ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ಲಭಿಸಿದೆ. ಈ ಸಂಶೋಧನೆಯ ವಿಶೇಷವೆಂದರೆ, ಕಾಂಕ್ರೀಟ್ ತಯಾರಿಕೆಯಲ್ಲಿ ಸಂಸ್ಕರಿಸಿದ ನೀರನ್ನು ಬಳಸಿದಾಗ ಅದರ ಬಲ ಮತ್ತು ಗುಣಮಟ್ಟ ಹೇಗಿರುತ್ತದೆ ಎಂಬ ಪ್ರಯೋಗಾರ್ಥ ಪರೀಕ್ಷೆಗಳನ್ನು ವಿಶ್ವವಿಖ್ಯಾತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ನಡೆಸಲಾಗಿದೆ. ಅಲ್ಲದೆ, ಇವರ ಸಂಶೋಧನಾ ಪ್ರಬಂಧಗಳು ಜಾಗತಿಕ ಮಟ್ಟದ ಅತ್ಯುನ್ನತ ಶ್ರೇಣಿಯಾದ ಕ್ಯೂ-1 ಮತ್ತು ಕ್ಯೂ-2 (Q1 and Q2 Level) ನ 5 ಪ್ರತಿಷ್ಠಿತ ಅಂತಾರಾಷ್ಟ್ರೀಯ…
ಶಿವಮೊಗ್ಗ: ನಾಳೆಯಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಹೆಲಿಕಾಪ್ಟರ್ ಹಾರಾಟ ಆರಂಭಗೊಳ್ಳಲಿದೆ. ಎಲ್ಲೆಲ್ಲಿಗೆ? ಎಷ್ಟು ದರ ಎನ್ನುವ ಮಾಹಿತಿಯನ್ನು ಆಯೋಜಕರಾದಂತ ಕಿರಣ್ ದೊಡ್ಮನಿ ನೀಡಿದ್ದಾರೆ ಮುಂದೆ ಓದಿ.. ಇಂದು ಈ ಬಗ್ಗೆ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಕಿರಣ್ ದೊಡ್ಮನೆ ಅವರು, ಇದೇ ಮೊದಲ ಬಾರಿಗೆ ಸಾಗರದಲ್ಲಿ ಮಾರಿ ಜಾತ್ರೆ ಪ್ರಯುಕ್ತ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಹೆಲಿ ಟೂರಿಸಂಗೆ ಗೋಪಾಲಗೌಡ ಕ್ರೀಢಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಆ ಬಳಿಕೆ ಮೊದಲು ಬುಕ್ ಮಾಡಿದವರಿಗೆ ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಗೊಳ್ಳಲಿದೆ ಎಂದರು. ಈಗಾಗಲೇ ಹೆಲಿಕಾಪ್ಟರ್ ಮೂಲಕ ಹಾರಾಟಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿಕರು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಡೆಯವರು, ಕಾರವಾರದ ರಾಜಕಾರಣಿಯೊಬ್ಬರು, ಸ್ವಾಮೀಜಿಗಳು ಸೇರಿದಂತೆ ಹಲವರು ಬುಕ್ಕಿಂಗ್ ಮಾಡಿದ್ದಾರೆ. ಅವರೆಲ್ಲರಿಗೂ ಹೆಲಿ ಟೂರಿಸಂ…
ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹೆಲಿ ಟೂರಿಸಂಗೆ ಕಿರಣ್ ದೊಡ್ಮನೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಅನುಮತಿ ಕೋರಿದ್ದರು. ಇವರ ಮನವಿಯನ್ನು ಪರಿಶೀಲಿಸಿರುವಂತ ಶಿವಮೊಗ್ಗ ಡಿಸಿ ಸಾಗರದಲ್ಲಿ ಮಾರಿ ಜಾತ್ರೆ ಪ್ರಯುಕ್ತ ಹೆಲಿ ಟ್ಯೂರಿಸಂಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ನಾಳೆಯಿಂದ ಸಾಗರದಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಗೊಳ್ಳಲಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ದಿನಾಂಕ:03.02.2026 ರಂದು ಸಾಗರದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಪ್ರಯುಕ್ತ ದಿನಾಂಕ:05.02.2026 ರಿಂದ 09.02.2026 ರವರೆಗೆ ಪ್ರವಾಸಿಗರಿಗಾಗಿ ಹೆಲಿಕ್ಯಾಪ್ಟರ್ ಸೇವೆ ಒದಗಿಸುವ ಸಲುವಾಗಿ ಸಾಗರ ಗೋಪಾಲಗೌಡ ಕ್ರೀಡಾಂಗಣದಲ್ಲಿ ಹೆಲಿಕ್ಯಾಪ್ಟರ್ ಇಳಿಸಿ ಹಾರಿಸಲು ಹಾಗೂ “ಹೆಲಿ ಟೂರಿಸಂ” ನಡೆಸಲು ಅನುಮತಿಯನ್ನು ನೀಡುವಂತೆ ಅನುಮತಿಯನ್ನು ಕೋರಿರುತ್ತಾರೆ ಎಂದಿದ್ದಾರೆ. ಮುಂದುವರೆದು ಸಾಗರ ಮಾರಿಕಾಂಬಾ ದೇವಿಯ ಜಾತ್ರೆಯ ಸಂಬಂಧ ಸಾಗರ ಗೋಪಾಲಗೌಡ ಕ್ರೀಡಾಂಗಣದಲ್ಲಿ “ಹೆಲಿ ಟೂರಿಸಂ’ ಕಾರ್ಯಾಚರಣೆಯನ್ನು ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ…
ಶಿವಮೊಗ್ಗ: ಸಾಗರದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಆಡಳಿತ ವಿರೋಧಿ ನಡೆ ತೋರುತ್ತಿದ್ದಾರೆ. ಅವರ ನಿಲುವು ಗ್ರಾಮಾಭಿವೃದ್ಧಿಗೆ ಅಡ್ಡಿಯಾಗಿದೆ ಎಂಬುದಾಗಿ ತಾಳಗುಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬೆಕ್ಕೋಡು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಗೆ ಮುಂದಾಗಿದ್ದವನ್ನು ಮನವೊಲಿಸಿದ ಅಧ್ಯಕ್ಷ ಇಂದು ಸಾಗರ ತಾಲ್ಲೂಕು ಇಒ ಶಿವಪ್ರಕಾಶ್ ನಡೆ ಖಂಡಿಸಿ ತಾಳಗುಪ್ಪ ಗ್ರಾಮ ಪಂಚಾಯ್ತಿಯಲ್ಲಿ ಅಣಕು ಶವಯಾತ್ರೆ ಹಮ್ಮಕಕೊಳ್ಳಲಾಗಿತ್ತು. ತಾಳಗುಪ್ಪ ಗ್ರಾಮಸ್ಥರು, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು, ದಲಿತ ಸಂಘಟನೆಗಳಿಂದ ಇಒ ಶಿವಪ್ರಕಾಶ್ ನಡೆ ಖಂಡಿಸಿ ಅಣಕು ಶವಯಾತ್ರೆಗೆ ನಿರ್ಧರಿಸಲಾಗಿತ್ತು. ಆದರೆ ಅವರನ್ನು ತಾಳಗುಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬೆಕ್ಕೋಡು ಮನವೊಲಿಸಿ, ಅಣಕು ಶವಯಾತ್ರೆ ಪ್ರತಿಭಟನೆ ಮಾಡದಲ್ಲಿ ನಿಲ್ಲಿಸಿದ್ದಾರೆ. ಇಒ ಶಿವಪ್ರಕಾಶ್ ನಡೆಗೆ ಆಕ್ರೋಶ ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಗರ ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್ ಆಡಳಿತ ವಿರೋಧಿ ನಡೆಯನ್ನು ತೋರುತ್ತಿದ್ದಾರೆ. ನಾವು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಹರಾಜು ನಿಯಮ ಪಾಲಿಸಿಯೇ ಮಾಡಿದ್ದೇವೆ ಎಂದರು.…
ಅರಳಿ ಮರದ ಬುಡದಲ್ಲಿ ಈ ಒಂದು ವಸ್ತುವನ್ನು ಬಿಟ್ಟು ಬನ್ನಿ ನಿಮ್ಮ ಕೋರಿಕೆಗಳು ಏನೇ ಇದ್ದರೂ ಮೂರು ದಿನದಲ್ಲಿ ಈಡೇರುತ್ತದೆ.! ಅರಳಿ ಮರದ ಬುಡದಲ್ಲಿ ಹೋಗಿ ಈ ಒಂದು ಪುಟ್ಟ ಕೆಲಸ ಮಾಡಿದರೆ ಸಾಕು ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಆಸೆಗಳು ಇಚ್ಛೆಗಳು ಕೋರಿಕೆಗಳು ಖಂಡಿತವಾಗಿ ಈಡೇರುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಆಸೆಗಳು ಇಚ್ಛೆಗಳು ಕೋರಿಕೆಗಳು ಎನ್ನುವುದು ಇದ್ದೇ ಇರುತ್ತದೆ. ಆದರೆ ಇವುಗಳನ್ನು ಈಡೇರಿಸಿಕೊಳ್ಳಬೇಕು ಎಂದರೆ ಸತತವಾಗಿ ಪ್ರಯತ್ನ ಪಡಬೇಕು ಸತತ ಪ್ರಯತ್ನ ಪಡುವುದರ ಜೊತೆಗೆ ಅದೃಷ್ಟ ಕೂಡಿ ಬಂದರೆ ನಿಮಗೆ ಸಿಗುವ ಫಲಗಳು ದುಪ್ಪಟ್ಟಾಗುತ್ತದೆ. ಹಾಗಾದರೆ ಯಾವ ಒಂದು ಕೆಲಸವನ್ನು ಮಾಡುವುದರಿಂದ ನಿಮ್ಮ ಆಸೆಗಳು ಇಚ್ಚೆಗಳು ಈಡೇರುತ್ತದೆ ಹಾಗೂ ಯಾವ ರೀತಿ ಈಡೇರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ಶ್ರೀ ಕ್ಷೇತ್ರಪಾಲಕ ಭೂತರಾಯರ ಆರಾಧಕರು ವೇದ ಬ್ರಹ್ಮ ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ…
ಬೆಂಗಳೂರು: ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಸಾಗರ ತಾಲ್ಲೂಕಿನ ಆನಂದಪುರದ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದಂತ ಡಾ.ಪ್ರತಿಮಾ.ಡಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳಾದಂತ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಇವರು ವರದಿಯನ್ನು ಸಲ್ಲಿಸಿ ದಿನಾಂಕ: 06.11.2025ರ ದಿನಪತ್ರಿಕೆಯಲ್ಲಿ ಅಪ್ರಾಪ್ತಯ ಗರ್ಭಪಾತ: ಸರಕಾರಿ ವೈದ್ಯ ಸೇರಿ 09 ಜನರ ವಿರುದ್ಧ ಪ್ರಕರಣ ಎಂದು ಪ್ರಕಟವಾಗಿರುವ ಪತ್ರಿಕಾ ವರದಿಯಲ್ಲಿ ಡಾ|| ಪ್ರತಿಮಾ ಡಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಸಮುದಾಯ ಆರೋಗ್ಯ ಕೇಂದ್ರ ಆನಂದಪುರಂ, ಶಿವಮೊಗ್ಗ ಜಿಲ್ಲೆ ಇವರು ದಿನಾಂಕ: 17.10.2025ರಂದು ಅಪ್ರಾಪ್ತಯ ಗರ್ಭಪಾತವನ್ನು ಸಾಗರ ಖಾಸಗಿ ಆಸ್ಪತ್ರೆಯಾದ ಸಾಯಿ ಬೃಂದಾವನ ಆಸ್ಪತ್ರೆಯಲ್ಲಿ ಮಾಡಿರುತ್ತಾರೆ ಎಂದು ಪೋಲಿಸ್ ಇನ್ಸಪೆಕ್ಟರ್, ಸಾಗರ ಪೇಟೆ ಪೋಲಿಸ್ ಠಾಣೆ ಇವರು ಪ್ರಥಮ ವರ್ತಮಾನ ವರದಿಯಲ್ಲಿ ಭಾರತೀಯ ನ್ಯಾಯ…
ಶಿವಮೊಗ್ಗ : ಸಾಗರದ ಐತಿಹಾಸಿಕ ಪ್ರಸಿದ್ಧವಾದ ಶ್ರೀ ಮಾರಿಕಾಂಬಾ ದೇವಿಯ 9 ದಿನಗಳ ಜಾತ್ರೆಗೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆಯಿತು. ಬೆಳಗಿನ ಜಾವ ಶ್ರೀ ದೇವಿಗೆ ವಿಶೇಷ ಪೂಜೆ ಜೊತೆಗೆ ಮಾಂಗಲ್ಯಧಾರಣೆ ಶಾಸ್ತ ನಡೆಯಿತು. ದೇವಸ್ಥಾನದ ಅರ್ಚಕ ವೃಂದ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೊದಲ ದಿನದ ಸಾಗರದ ಮಾರಿಕಾಂಬ ದೇವಿಯ ಉಲ್ ಅಪ್ ಡೇಟ್ ಮುಂದೆ ಓದಿ.. ಮಾರಿಕಾಂಬಾ ತವರುಮನೆಯಲ್ಲಿ ಪ್ರತಿಷ್ಟಾಪನೆಗೊಂಡಿರುವ ಅಮ್ಮನವರು ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳದಲ್ಲಿಯೇ ಹಾಜರಿದ್ದರು. ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಎಎಸ್ಪಿ ಡಾ. ಬೆನಕ ಪ್ರಸಾದ್, ತಹಶೀಲ್ದಾರ್ ರಶ್ಮಿ ಹಾಲೇಶ್, ಮಾರಿಕಾಂಬ ನ್ಯಾಸ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್, ಕೋಶಾಧ್ಯಕ್ಷ ನಾಗೇಂದ್ರ ಕುಮಟ, ರವಿನಾಯ್ಡು, ಗಂಗಾಧರ ಜಂಬಿಗೆ ಇನ್ನಿತರರು ಉಪಸ್ಥಿತರಿದ್ದರು. ಅಮ್ಮನ ದರ್ಶನಕ್ಕೆ ಸರದಿ ಸಾಲು ಶ್ರೀ ಮಾರಿಕಾಂಬೆ ದರ್ಶನಕ್ಕೆ ಭಕ್ತರು ನೂಗುನುಗ್ಗಲು ಮಾಡಿದ್ದು ಕಂಡು ಬಂದಿದೆ. ರಾತ್ರಿ 9 ಗಂಟೆಯಿAದಲೇ ಮಾರಿಕಾಂಬಾ ದೇವಿ…
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 11 ಮಂದಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ವಿಶ್ವಜೀತ ಮೆಹತಾ ಅವರನ್ನು ಬಳ್ಳಾರಿ ಕಚೇರಿ ಸಹಾಯಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಬಸವರಾಜ ತನ್ನಹಳ್ಳಿ ಅವರನ್ನು ಕೊಪ್ಪಳ ತಹಶೀಲ್ದಾರ್ ಗ್ರೇಡ್-1 ಆಗಿ ವರ್ಗಾವಣೆಗೊಳಿಸಿದ್ದರೇ, ಪುರಂದರ ಕೆ ಅವರನ್ನು ಸೊರಬ ತಹಶೀಲ್ದಾರ್ ಗ್ರೇಡ್-1 ಆಗಿ ವರ್ಗಾವಣೆ ಮಾಡಲಾಗಿದೆ. ಹೀಗಿದೆ 11 ತಹಶೀಲ್ದಾರರ ವರ್ಗಾವಣೆ ಪಟ್ಟಿ
ಬೆಂಗಳೂರು: ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಕ್ಲಾಸ್ ಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿರ್ಮಿಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಪುರಸ್ಕೃತ ಕಾರ್ಯಕ್ರಮವಾದಂತ ಸಮಗ್ರ ಶಿಕ್ಷಣ ಕರ್ನಾಟಕದಡಿ 2022-23, 2024-25 ಮತ್ತು 2025-26ನೇ ಸಾಲಿನ ಕೇಂದ್ರ ಶಿಕ್ಷಣ ಸಚಿವಾಲಯದ ಯೋಜನಾ ಅನುಮೋದನಾ ಮಂಡಳಿ ಅನುಮೋದಿ ರಾಜ್ಯದ 3862 ಪ್ರಾಥಮಿಕ, ಪ್ರೌಢ ಮತ್ತು ಕೆ ಜಿ ಬಿ ವಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಟಿಸಿದ್ದು, ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ 2022-23ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 09.05.2022ರ ಸಭೆಯಲ್ಲಿ 1631 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಘಟಕ ವೆಚ್ಚ ರೂ. 2.4 ಲಕ್ಷದಂತೆ ಒಟ್ಟು ವೆಚ್ಚ ರೂ.3914.40ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ ಎಂದಿದ್ದಾರೆ. 2024-25ನೇ ಸಾಲಿನ…
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಿಗೆ 3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಫೆ.5ರಿಂದ ಫೆ.9ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ತಿಳಿಸಿದ್ದಾರೆ. ಅಖಿಲ ಭಾರತ ಕೋಟಾದ 3ನೇ ಸುತ್ತಿನ ಸೀಟು ಹಂಚಿಕೆಯ ವೇಳಾ ಪಟ್ಟಿ ಎಂಸಿಸಿ ಪರಿಷ್ಕರಿಸಿದ ಕಾರಣ ಫೆ.2ರ ಬದಲಿಗೆ ಫೆ.5ರಿಂದ ಇಚ್ಛೆ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಫೆ.9ರಂದು ಬೆಳಿಗ್ಗೆ 8 ಗಂಟೆವರೆಗೆ ಇಚ್ಛೆ ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ. ಈ ಹಿಂದಿನ ಸುತ್ತುಗಳಲ್ಲಿ ದಾಖಲಿಸಿದ್ದ ಇಚ್ಛೆಗಳು ಈ ಸುತ್ತಿಗೆ ಇರುವುದಿಲ್ಲ. ಹೀಗಾಗಿ ಹೊಸದಾಗಿಯೇ ಆಪ್ಷನ್ಸ್ ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ. ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಫೆ.9ರಂದು ಸಂಜೆ 5 ಗಂಟೆಗೆ ಹಾಗೂ ಅಂತಿಮ ಫಲಿತಾಂಶವನ್ನು ಫೆ.10ರಂದು ಮಧ್ಯಾಹ್ನ 1 ಗಂಟೆ ನಂತರ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಸೀಟು ಹಂಚಿಕೆಯಾದವರು ಫೆ.11ರಿಂದ 13ರವರೆಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಫೆ.13ರೊಳಗೆ ಕಾಲೇಜುಗಳಿಗೆ ವರದಿ…














