Author: kannadanewsnow09

ಬೆಂಗಳೂರು: “ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ ನೀಡುವೆ, ಇಲ್ಲವಾದರೆ ಅವರು ರಾಜೀನಾಮೆ ನೀಡುತ್ತಾರಾ..” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸವಾಲೆಸೆದರು. ಬೆಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ವಾಚ್ ಕದ್ದದ್ದೋ, ಕೊಂಡದ್ದೋ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾರಾಯಣಸ್ವಾಮಿ ಅವರಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಟ ಪರಿಜ್ಞಾನ ಇರಬೇಕು. ಬರೀ ಪ್ರಚಾರಕ್ಕೆ ಮಾತನಾಡುವುದಲ್ಲ. ಅವರಿಗಿಂತ ಹೆಚ್ಚು ಜವಾಬ್ದಾರಿಯಿಂದ ನಾನು ವರ್ತಿಸುತ್ತೇನೆ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕು. ನಾನು ಪ್ರದರ್ಶಿಸಿರುವ ದಾಖಲೆ ವಿಚಾರ ಒತ್ತಟ್ಟಿಗೆ ಇರಲಿ, ಅವರೇ ಹೋಗಿ ಲೋಕಾಯುಕ್ತದಲ್ಲಿ ಪರಿಶೀಲನೆ ಮಾಡಲಿ. ಅಲ್ಲಿ ಸಲ್ಲಿಸಿರುವ ಆದಾಯ ಅಫಿಡವಿಟ್ ಸಾರ್ವಜನಿಕ ದಾಖಲೆಯಾಗಿದ್ದು, ಅದನ್ನು ಅವರೂ ಪಡೆಯಬಹುದು. 2018 ಹಾಗೂ 2023ರಲ್ಲಿ ತೋರಿಸಿಲ್ಲ…

Read More

ಬೆಂಗಳೂರು : ರಾಜ್ಯದಲ್ಲಿ ಕೈಗಾರಿಕಾ ತಂತ್ರಜ್ಞಾನ ನಾವೀನ್ಯತಾ ಪಾರ್ಕ್‌ (ಐಟಿಐಪಿ) ಸ್ಥಾಪಿಸಲು ತೈವಾನ್‌ನ ಅಲಿಜನ್ಸ್‌ ಇಂಟರ್‌ನ್ಯಾಷನಲ್ ಕಂಪನಿ ಲಿಮಿಟೆಡ್‌, ರಾಜ್ಯ ಸರ್ಕಾರದ ಜೊತೆಗೆ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಇಂದು ಇಲ್ಲಿ ಸಹಿ ಹಾಕಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಎಲೆಕ್ಟ್ರಾನಿಕ್ಸ್, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಲೆಕ್ಟ್ರಾನಿಕ್ಸ್‌, ಐಟಿ, ಬಿಟಿ ಮತ್ತು ಎಸ್‌ಆಂಡ್‌ಟಿ ಇಲಾಖೆಯ ನಿರ್ದೇಶಕ ರಾಹುಲ್‌ ಎಸ್‌. ಸಂಕನೂರ ಹಾಗೂ ಅಲಿಜನ್ಸ್‌ ಗ್ರೂಪ್‌ನ ಉಪಾಧ್ಯಕ್ಷ ಲಾರೆನ್ಸ್‌ ಚೆನ್‌ ಅವರು ತಿಳಿವಳಿಕೆ ಒಪ್ಪಂದ ಪತ್ರಕ್ಕೆ (ಎಂಒಯು) ಸಹಿ ಹಾಕಿದರು. ಈ ಯೋಜನೆಯನ್ನು ಅಲಿಜನ್ಸ್‌ ಗ್ರೂಪ್ (Allegiance Group) ಸುಮಾರು ₹ 1,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಯೊಂದಿಗೆ ಕಾರ್ಯಗತಗೊಳಿಸಲಿದೆ. 5 ವರ್ಷಗಳ ಅವಧಿಯಲ್ಲಿ ʼಐಟಿಐಪಿʼಯಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಮೂಲಕ ಸುಮಾರು…

Read More

ಶಿವಮೊಗ್ಗ: ಉಡುಪಿಯಲ್ಲಿ ರಂಗಭೂಮಿ ( ರಿ) ಉಡುಪಿ ಸಂಸ್ಥೆ ಏರ್ಪಡಿಸಿದ್ದ 46 ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಸಾಗರದ ಸ್ಪಂದನ ರಂಗತಂಡ ಮಂಜುನಾಥ್ ಎಲ್ ಬಡಿಗೇರ ಅವರ ನಿರ್ದೇಶನದಲ್ಲಿ ಅಭಿನಯಿಸಿದ ಪ್ರಾಣಪದ್ಮಿನಿ ನಾಟಕಕ್ಕೆ ತೃತೀಯ ಶ್ರೇಷ್ಠ ನಾಟಕ ಬಹುಮಾನ ಲಭಿಸಿದೆ. ಈ ನಾಟಕದ ರಂಗಬೆಳಕು ವಿಭಾಗದಲ್ಲಿ ಜೀವನ್ ಕುಮಾರ್ ಬಿ ಹೆಗ್ಗೋಡು- ಪ್ರಥಮ. ಸಂಗೀತ ವಿಭಾಗದಲ್ಲಿ ಭಾರ್ಗವ ಹೆಗ್ಗೋಡು , ಅರುಣ್ ಕುಮಾರ್ ದ್ವಿತೀಯ ಶ್ರೇಷ್ಠ ನಟಿ ವಿಭಾಗದಲ್ಲಿ ಭೂಮಿ ತೃತೀಯ ಶ್ರೇಷ್ಠ ನಟ ವಿಭಾಗದಲ್ಲಿ ಕಾರ್ತಿಕ್ ಕೆ ತೃತೀಯ ಮೆಚ್ಚುಗೆ ಬಹುಮಾನ ವಿವೇಕ್ ನಾಯಕ್ ಎಂ ಬಿ ಪಡೆದಿದ್ದಾರೆ. ನವೆಂಬರ್ 23 ರಿಂದ ಡಿಸೆಂಬರ್ 4 ರವರೆಗೆ ನಡೆದಿದ್ದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳ 12 ರಂಗತಂಡಗಳು ಭಾಗವಹಿಸಿದ್ದವು. ತೀರ್ಪುಗಾರರಾಗಿ ಕೆ ಜಿ ಮಹಾಬಲೇಶ್ವರ್ , ನಟರಾಜ ಹೊನ್ನವಳ್ಳಿ , ರಾಮುರಂಗಾಯಣ, ಗಣೇಶ್ ಕುಮಾರ್ ಎಲ್ಲೂರು, ಶಶಿಕಲಾ ಜೋಷಿ ಕಾರ್ಯನಿರ್ವಹಿಸಿದ್ದರು.

Read More

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಯುಡಬ್ಲ್ಯೂಜೆ ಮಾಜಿ ಅಧ್ಯಕ್ಷ, ರಣಕಹಳೆ ಪ್ರಾದೇಶಿಕ ಪತ್ರಿಕೆಯ ಸಂಪಾದಕರಾದಂತ ಬಿ.ಪಿ ಪ್ರಕಾಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಇಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಕರ್ನಾಯಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಕಲಂ3ರ ಉಪ ಕಲಂ 3(ಎ) ಮತ್ತು 3(ಎಂ) ಹಾಗೂ 3(4) ಅಡಿಯಲ್ಲಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರನ್ನಾಗಿ ಈ ಕೆಳಕಂಡವರನ್ನು ನಾಮನಿರ್ದೇಶನ ಮಾಡಿ ಆದೇಶಿಸಿದ್ದಾರೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಬಿ.ಪಿ ಪ್ರಕಾಶ್ ಅವರನ್ನು ನೇಮಕ ಮಾಡಿದ್ದರೇ, ಸದಸ್ಯರನ್ನಾಗಿ ಇದ್ರೀಸ್ ಖಾನ್, ಕಾರ್ತಿಕ್ ಕೆ.ಜೆ, ಎನ್ ಎಸ್ ಮಹೇಶ್ ಹಾಗೂ ಕಮಲಮ್ಮ ಅವರನ್ನು ನೇಮಕ ಮಾಡಲಾಗಿದೆ. ವರದಿ; ಗಿರೀಶ್ ರಾಜ್, ಮಂಡ್ಯ https://kannadanewsnow.com/kannada/a-massive-response-to-the-public-meeting-held-by-mla-gopalakrishna-belur-in-sagar/

Read More

ಶಿವಮೊಗ್ಗ: ಸಾಗರದ ನಗರಸಭೆ ಆವರಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ನಡೆಸಿದಂತ ಜನ ಸಂಪರ್ಕ ಸಭೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹರಿಸುವಂತ ಕೆಲಸ ಮಾಡಿದರು. ಜೊತೆ ಜೊತೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದಂತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಚಳಿಬಿಡಿಸಿದಂತ ಪ್ರಸಂಗವೂ ನಡೆಯಿತು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನಗರಸಭೆ ಆವರಣದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜನ ಸಂಪರ್ಕ ಸಭೆಯನ್ನು ನಡೆಸಿದರು. ಕೆಲ ದಿನಗಳ ಹಿಂದೆ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನಡೆಸಿದ್ದ ಬಳಿಕ, ನಗರ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ನಡೆಸಿದಂತ ಶಾಸಕರ ಜನ ಸಂಪರ್ಕ ಸಭೆಗೆ ಉತ್ತಮ ಪ್ರತಿಸ್ಪಂದನೆ ದೊರೆಯಿತು. 214 ಅರ್ಜಿ, ತಾಳ್ಮೆಯಿಂದಲೇ ಶಾಸಕರು ಅಹವಾಲು ಸ್ವೀಕಾರ, ಪರಿಹಾರ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ, ನಗರೋತ್ಥಾನದ ಕೆಲಸ, ಸಾಗರ ನಗರದ ಆಯ ಕಟ್ಟಿನ ಜಾಗಗಳಲ್ಲಿ ಹೆಚ್ಚುತ್ತಿರುವ ಗಾಂಜಾ ವ್ಯಸನಿಗಳು ಹಾಗೂ ತ್ಯಾಜ್ಯದ ಸಮಸ್ಯೆ ಕುರಿತಂತೆ ಸಾಗರ ನಗರಸಭೆ ಆವರಣದಲ್ಲಿ ಗುರುವಾರ…

Read More

ಬೆಂಗಳೂರು: ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ (ಕುಸ್ಮ) ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಜಿ.ಎಸ್. ಶರ್ಮಾಜಿ ಅವರ ಜನ್ಮ ಶತಾಬ್ದಿ ವರ್ಷಾಚರಣೆ ಅಂಗವಾಗಿ ಬೃಹತ್ ಶೈಕ್ಷಣಿಕ ಸಮ್ಮೇಳನವನ್ನು, ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತಂತೆ ಕುಸ್ಮ ಅಧ್ಯಕ್ಷರಾದಂತ ಎಸ್ ಸತ್ಯಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಡಿಸೆಂಬರ್ 7ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಜಯನಗರದಲ್ಲಿರುವ ಆರ್. ವಿ. ಕಾಲೇಜು ಶಿಕ್ಷಕರ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದಿದ್ದಾರೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ದಿನೇಶ್ ಕುಮಾರ್ ಪಿ ಎಸ್, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಕೆ.ವಿ. ಧನಂಜಯ, ರಿಜಿನಲ್ ಪ್ರಾವಿಡೆಂಟ್ ಕಮಿಷನರ್ -1 ಮಿಹೀರ್ ಕುಮಾರ್, ರಿಜಿನಲ್ ಪ್ರಾವಿಡೆಂಟ್ ಕಮಿಷನರ್ -2 ಅನಿಕೇತ್ ಅನಿಲ್ ಅಂಬೇಕರ್, ಬೆಂಗಳೂರು ಇಎಸ್ಐ ರೀಜನಲ್ ಡೈರೆಕ್ಟರ್ ಮನೋಜ್ ಕುಮಾರ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಅಂತ ತಿಳಿಸಿದ್ದಾರೆ. ಅನುದಾನ ರಹಿತ ಶಾಲಾ ಮಂಡಳಿಯ ಪದಾಧಿಕಾರಿಗಳು ಶಿಕ್ಷಣ ತಜ್ಞರು…

Read More

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 4-12-2025 ರಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳನ್ನು ಮುಂದಿವೆ ಓದಿ.. ಅಧ್ಯಕ್ಷರು, ಹಾಸನ ಜಿಲ್ಲಾ ಒಕ್ಕಲಿಗರ ಸಂಘ (ರಿ), ಹಾಸನ ಜಿಲ್ಲೆ, ಹಾಸನ ಇವರಿಗೆ ಎಸ್.ಎಂ.ಕೆ ನಗರ ವಸತಿ ಬಡಾವಣೆಯ ಸಿ.ಎ ನಿವೇಶನ ಸಂ: 4/7 ಮತ್ತು 4/9 ರಲ್ಲಿನ ನಾಗರೀಕ ಸೌಲಭ್ಯ ನಿವೇಶನದ 3964 ಚ.ಮೀವುಳ್ಳ (42652 ಚ.ಅಡಿ) ನಾಗರೀಕ ನಿವೇಶನವನ್ನು ಗ್ರಾಮೀಣ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನ ಉದ್ದೇಶಕ್ಕಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ರೂ.3,76,61,716/- ಗಳನ್ನು ನಿಗದಿಪಡಿಸಿ ಹಂಚಿಕೆ ಮಾಡಲಾಗಿದೆ. ಸದರಿ ಸಂಸ್ಥೆಯವರು ಮಂಜೂರಾತಿ ಕೋರಿ ಸಲ್ಲಿಸಿದ ಅರ್ಜಿಯೊಂದಿಗೆ ರೂ.37,66,236/- ಗಳನ್ನು ಪಾವತಿಸಿರುತ್ತಾರೆ. ಬಾಕಿ ಮೊತ್ತ ರೂ.3,38,95,480/- ಗಳನ್ನು ಪಾವತಿಸಬೇಕಾಗಿರುತ್ತದೆ. ಸದರಿ ಬಾಕಿ ಮೊತ್ತಕ್ಕೆ ವಿನಾಯಿತಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ವಿವಿಧ ನಗರ ಯೋಜನಾ ಪ್ರಾಧಿಕಾರಗಳು / ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ನಿವೇಶನಗಳನ್ನು ಬ್ಲಾಕ್ ಕಾಂಗ್ರೆಸ್…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಕೆಲ ಮಹತ್ವದ ಮಸೂದೆಗಳಿಗೆ ಅನುಮೋದನೆ ನೀಡಲಾಯಿತು. ಆ ಮಸೂದೆಗಳ ವಿವರ ಈ ಕೆಳಗಿನಂತಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳ ವಿವರ… ಒಳಾಡಳಿತ ಇಲಾಖೆ: 1 “ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025ಕ್ಕೆ ಅನುಮೋದನೆ ನೀಡಿದೆ. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ: 2.ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ನೀಡಿದೆ. 3. “ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕ, 2025ಕ್ಕೆ ಅನುಮೋದನೆ ನೀಡಿದೆ. ಕಂದಾಯ ಇಲಾಖೆ: 4. “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆ ನೀಡಿದೆ. 5. “ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕಾನೂನುಗಳ (ತಿದ್ದುಪಡಿ) ವಿಧೇಯಕ, 2025″ಕ್ಕೆ ಅನುಮೋದನೆ ನೀಡಿದೆ. ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ:…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಜಿ.ಎಂ ತೋಟಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಬಾಪಟ್ ಅವರನ್ನು ನೇಮಕ ಮಾಡಲಾಯಿತು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಆಯ್ಕೆಗಾಗಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಮೊಗ್ಗ ಟೈಮ್ಸ್ ಪತ್ರಿಕೆಯ ಜಿಎಂ ತೋಟಪ್ಪ ಹಾಗೂ ನುಡಿಗಿಡ ರಾಘವೇಂದ್ರ ಬಾಪಟ್ ಅವರು ಸ್ಪರ್ಧೆ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಇಬ್ಬರಿಗೂ ತಲಾ 7 ಮತಗಳು ಚಲಾವಣೆಯಾಗಿ ಸಮಗೊಂಡಿದ್ದವು. ಶಿವಮೊಗ್ಗ ಜಿಲ್ಲಾ ಸಮಿತಿಯಿಂದ ಆಗಮಿಸಿದ್ದಂತ ಅಧ್ಯಕ್ಷರಾದಂತ ವೈದ್ಯ, ಉಪಾಧ್ಯಕ್ಷರಾದಂತ ಹುಚ್ಚರಾಯಪ್ಪ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ಕೋಶಾಧ್ಯಕ್ಷರಾದಂತ ರೋಹಿತ್, ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಅವರು ಇಬ್ಬರನ್ನು ಮನವೊಲಿಸಿದ ಬಳಿಕ ಹಿರಿತನದಲ್ಲಿ ಜಿ.ಎಂ.ತೋಟಪ್ಪ ಅವರನ್ನು ಅಧ್ಯಕ್ಷರನ್ನಾಗಿ, ರಾಘವೇಂದ್ರ ಬಾಪಟ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಈ ವೇಳೆ ಮಾತನಾಡಿದಂತ ಶಿವಮೊಗ್ಗ…

Read More

ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆ ಇತಿಹಾಸದಲ್ಲೇ ಹೊಸ ಅಲೆಯನ್ನು ಉದ್ಯೋಗ ನೇಮಕಾತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಸೃಷ್ಠಿಸಿದ್ದಾರೆ. ಅದೇ ಎರಡೂವರೆ ವರ್ಷದಲ್ಲೇ ಸಾರಿಗೆ ಇಲಾಖೆಯಲ್ಲಿ ಖಾಲಿ ಇದ್ದಂತ ಬರೋಬ್ಬರಿ 10,000 ಉದ್ಯೋಗ ನೇಮಕಾತಿಯನ್ನು ನಡೆಸಲಾಗಿದೆ. ಹೌದು.. ಸಾರಿಗೆ ಸಂಸ್ಥೆಗಳಲ್ಲಿ 10000 ನೇಮಕಾತಿ ಎರಡುವರೆ ವರ್ಷದ ಅವಧಿಯಲ್ಲಿ ಅನ್ನುವುದು ಸುಲಭದ ಮಾತಲ್ಲ. ಅದರಲ್ಲೂ ಒಂದೇ ಒಂದು ವಿವಾದವಿಲ್ಲದೇ, ಭ್ರಷ್ಟಾಚಾರ ರಹಿತ,‌ಪಾರದರ್ಶಕ ನೇಮಕಾತಿ ಅಂದರೆ ಮೆಚ್ಚಲೇಬೇಕು. ವಿರೋಧ‌ಪಕ್ಷವಾದ ಬಿ.ಜೆ.ಪಿ ಅವರಿಗೆ ತಾವು ಕೆಲಸ‌ ಮಾಡಿ‌, ಸಾಧಿಸಿ ತೋರಿಸಿ ಕ್ರೆಡಿಟ್ ತೆಗೆದುಕೊಳ್ಳುವ ಅಭ್ಯಾಸವಿಲ್ಲ. ಕ್ಷುಲ್ಲಕ ಕಾರಣಗಳಿಗೆ ಟ್ಟೀಟ್ ಮೇಲೆ ಟ್ಟೀಟ್ ಮಾಡಿ ಸಾಧನೆ ಮಾಡುವ ಖಯಾಲಿ ಬಹಳಷ್ಟಿದೆ. ಈ ಮುನ್ನುಡಿಗೆ ಕಾರಣವಾಗಿರುವುದು ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1000 ಚಾಲನಾ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಅನುಮೋದನೆ‌ ಪಡೆದು ಆದೇಶ‌ ಕೂಡ ಹೊರಬಿದ್ದಿದೆ. ಇಲ್ಲಿಯವರೆಗೆ ಕಳೆದ ಎರಡುವರೆ ವರ್ಷದಲ್ಲಿ ನಾಲ್ಕು ನಿಗಮಗಳಲ್ಲಿನ ನೇಮಕಾತಿ ವಿವರ, ಅನುಕಂಪದ ನೌಕರಿಯೂ ಒಳಗೊಂಡು ಒಟ್ಟು 9989 ನೇಮಕಾತಿ ಮಾಡಲಾಗಿದೆ. ಹೀಗಿದೆ ನಿಗಮವಾರು ನೇಮಕಾತಿಗಳ ವಿವರ ಕೆ ಎಸ್ ಆರ್…

Read More