Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಮೆಸ್ಕಾಂ ( MESCOM ) ವಿದ್ಯುತ್ ಗ್ರಾಹಕರ ಅನುಕೂಲಕ್ಕಾಗಿ ಸಾರ್ವಜನಿಕ ರಜಾ ದಿನಗಳಲ್ಲಿಯೂ ಬಿಲ್ ಪಾವತಿ ಕೌಂಟರ್ ತೆರೆದಿರಲು ಕ್ರಮವಹಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸೊರಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯಪ್ರಕಾಶ್ ಮಾಹಿತಿ ನೀಡಿದ್ದು, ಗ್ರಾಹಕರಿಗೆ ಮೆಸ್ಕಾಂ ಬಿಲ್ಲುಗಳನ್ನು ಪಾವತಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜಾ ದಿನಗಳಲ್ಲಿಯೂ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ತೆರೆದಿರಲು ನಿರ್ಧರಿಸಲಾಗಿದೆ ಅಂತ ತಿಳಿಸಿದ್ದಾರೆ. ಸಾರ್ವತ್ರಿಕ ರಜಾ ದಿನಗಳಾದಂತ ದಿನಾಂಕ 13-07-2024ರ ಎರಡನೇ ಶನಿವಾರ, ದಿನಾಂಕ 17-07-2024ರ ಮೋಹರಂ ಕೊನೆಯ ದಿನ, ದಿನಾಂಕ 27-07-2024ರ ನಾಲ್ಕನೇ ಶನಿವಾರ ಹಾಗೂ ದಿನಾಂಕ 28-07-2024ರ ಭಾನುವಾರದಂದು ಸೊರಬ ಉಪ ವಿಭಾಗ ವ್ಯಾಪ್ತಿಯಲ್ಲಿನ ಎಲ್ಲಾ ನಗದು ಕೌಂಟರ್ ಗಳು ತೆರೆದಿರಲಾಗಿರುತ್ತದೆ ಅಂತ ಹೇಳಿದ್ದಾರೆ. ವಿದ್ಯುತ್ ಗ್ರಾಹಕರು ಸದರಿ ರಜಾ ದಿನಗಳಂದು ತೆರೆದಿರುವ ನಗದು ಕೌಂಟರ್ ಗಳಿಗೆ ತೆರಳಿ, ವಿದ್ಯುತ್ ಬಿಲ್ ಬಾಕಿ ಇದ್ದರೇ ಪಾವತಿಸಿ, ಸದುಪಯೋಗ ಪಡೆದುಕೊಳ್ಳಿ. ವಿದ್ಯುತ್ ಸಂಪರ್ಕ ನಿಲುಗಡೆಗೆ ಅವಕಾಶ ನೀಡದಂತೆ, ನಿಗದಿತ ಅವಧಿಯೊಳಗೆ ಬಿಲ್…
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಲಂಡನ್ನ ಲಾರ್ಡ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಯುವ ವೇಗದ ರೂಪದಲ್ಲಿ ಉದಯೋನ್ಮುಖ ತಾರೆಗೆ ಸಾಕ್ಷಿಯಾದ ಜೇಮ್ಸ್ ಆಂಡರ್ಸನ್ ತಮ್ಮ ಪ್ರಸಿದ್ಧ ಟೆಸ್ಟ್ ವೃತ್ತಿಜೀವನವನ್ನು ಅದ್ಭುತ ರೀತಿಯಲ್ಲಿ ಕೊನೆಗೊಳಿಸಿದರು. ಇಂಗ್ಲೆಂಡ್ ಕ್ರಿಕೆಟ್ನ ದಿಗ್ಗಜ ಆಟಗಾರ ಆಂಡರ್ಸನ್ 40,031 ಲೀಗಲ್ ಬಾಲ್ಗಳನ್ನು ಎಸೆದು 704 ವಿಕೆಟ್ಗಳನ್ನು ಪಡೆದಿದ್ದಾರೆ. ಆಂಡರ್ಸನ್ ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ದಿನದಂದು ಸಂವೇದನಾಶೀಲ ಎಸೆತದೊಂದಿಗೆ ಒಂದು ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 114 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಟೆಸ್ಟ್ ಪಂದ್ಯವು ಕೇವಲ ಎರಡು ದಿನಗಳು ಮತ್ತು ಒಂದು ಸೆಷನ್ ನಲ್ಲಿ ಕೊನೆಗೊಂಡಿತು. ಆಂಡರ್ಸನ್ ತಮ್ಮ ಅಂತಿಮ ಟೆಸ್ಟ್ನಲ್ಲಿ ನಾಲ್ಕು ವಿಕೆಟ್ಗಳೊಂದಿಗೆ ಕೊಡುಗೆ ನೀಡಿದರೆ, ಚೊಚ್ಚಲ ಆಟಗಾರ ಗುಸ್ ಅಟ್ಕಿನ್ಸನ್ 12 ವಿಕೆಟ್ಗಳೊಂದಿಗೆ ಮಿಂಚಿದರು – ಮೊದಲ ಇನ್ನಿಂಗ್ಸ್ನಲ್ಲಿ ಏಳು ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳು, ಆಂಡರ್ಸನ್ಗೆ ಸೂಕ್ತ ವಿದಾಯವನ್ನು ನೀಡಿದರು.…
ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ನಟ ಕಳೆದ ಕೆಲವು ವಾರಗಳಿಂದ ತಮ್ಮ ಇತ್ತೀಚಿನ ಚಿತ್ರ ಸರ್ಫಿರಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚಿತ್ರದ ಪ್ರಚಾರ ಪ್ರವಾಸದ ಸಮಯದಲ್ಲಿ ಅಕ್ಷಯ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರ ಪ್ರಚಾರ ತಂಡದ ಕೆಲವು ಸದಸ್ಯರು ಕೋವಿಡ್ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ ಎಂದು ಅವರಿಗೆ ತಿಳಿಯಿತು. ಅವರು ಪರೀಕ್ಷೆಗೆ ಒಳಗಾಗಲು ನಿರ್ಧರಿಸಿದರು ಮತ್ತು ಫಲಿತಾಂಶಗಳು ಶುಕ್ರವಾರ (ಜುಲೈ 12) ಮುಂಜಾನೆ ಧನಾತ್ಮಕವಾಗಿ ಬಂದವು. ಅವನು ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದ್ದಾನೆ. ಅವರ ಇತ್ತೀಚಿನ ಚಿತ್ರ ಸರ್ಫಿರಾ ಬಗ್ಗೆ ಮಾತನಾಡುವುದಾದರೆ, ಇದು ತಮಿಳು ಚಿತ್ರ ಸೂರರೈ ಪೊಟ್ರುವಿನ ಡಬ್ಬಿಂಗ್ ಚಿತ್ರವಾಗಿದೆ. ಇದು ಅಕ್ಷಯ್ ಕುಮಾರ್ ಅವರ ವೃತ್ತಿಜೀವನದ 150 ನೇ ಚಿತ್ರವಾಗಿದೆ. ಸುಧಾ ಕೊಂಗರ ನಿರ್ದೇಶನದ ಈ ಚಿತ್ರದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್ ಮತ್ತು ತಮಿಳು ಸೂಪರ್ ಸ್ಟಾರ್ ಸೂರ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. https://kannadanewsnow.com/kannada/important-information-for-railway-passengers-change-in-movement-of-these-trains-in-view-of-work/ https://kannadanewsnow.com/kannada/aparnas-departed-aparna-immersed-in-panchabhutas-still-only-a-memory-of-acha-kannada-narrator/
ಬೆಂಗಳೂರು: ವಿವಿಧ ರೈಲ್ವೆ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆಯನ್ನು ಮಾಡಲಾಗಿದೆ ಅಂತ ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಕಾಮಗಾರಿ ಹಿನ್ನೆಲೆ: ಈ ರೈಲುಗಳ ಸೇವೆಯಲ್ಲಿ ಬದಲಾವಣೆ ನಿಟ್ಟೂರು ಮತ್ತು ಸಂಪಿಗೆ ರೋಡ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ 62ರಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ: ರೈಲುಗಳ ಸಂಚಾರ ರದ್ದು: ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಾಮರಾಜನಗರ-ಯಶವಂತಪುರ (16239), ಯಶವಂತಪುರ-ಚಾಮರಾಜನಗರ (16240), ತುಮಕೂರು-ಕೆಎಸ್ಆರ್ ಬೆಂಗಳೂರು (06576), ಕೆಎಸ್ಆರ್ ಬೆಂಗಳೂರು-ತುಮಕೂರು (06575), ಯಶವಂತಪುರ-ಶಿವಮೊಗ್ಗ ಟೌನ್ (16579) ಮತ್ತು ಶಿವಮೊಗ್ಗ ಟೌನ್-ಯಶವಂತಪುರ (16580) ರೈಲುಗಳನ್ನು ಜುಲೈ 18 & 25 ರಂದು ರದ್ದು ಪಡಿಸಲಾಗುತ್ತಿದೆ. ಭಾಗಶಃ ರದ್ದು: ಜುಲೈ 18 & 25 ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ನಿಲ್ದಾಣಗಳ ನಡುವೆ ಸಂಚರಿಸುವ (06571/06572) ರೈಲುಗಳನ್ನು ಹಿರೇಹಳ್ಳಿ-ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ತಾಳಗುಪ್ಪ-ಕೆಎಸ್ಆರ್ ಬೆಂಗಳೂರು (20652) ರೈಲು, ಕೆಎಸ್ಆರ್ ಬೆಂಗಳೂರು-ಧಾರವಾಡ-ಕೆಎಸ್ಆರ್ ಬೆಂಗಳೂರು (12725/12726)…
ಶಿವಮೊಗ್ಗ: ನಾಳೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. 2024-25ನೇ ಸಾಲಿಗೆ ಲಯನ್ಸ್ ಕ್ಲಬ್ ಗೆ ಆಯ್ಕೆಯಾದಂತ ಅಧ್ಯಕ್ಷರು, ಸದಸ್ಯರು ನಾಳೆ ಪದಗ್ರಹಣ ಮಾಡಲಿದ್ದಾರೆ. ಈ ಕುರಿತಂತೆ ಶುಕ್ರವಾರದಂದು ಸಾಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ನೂತನ ಅಧ್ಯಕ್ಷರಾದ ಜಿ.ಕೆ ಕೃಷ್ಣಮೂರ್ತಿ ಅವರು, ಸೇವೆಯೇ ತನ್ನ ಮೂಲ ಉದ್ದೇಶದೊಂದಿಗೆ 1917ರಲ್ಲಿ ಮಲ್ಟಿನ್ ಜೋನ್ಸ್ ಅವರು ಅಮೇರಿಕಾದಲ್ಲಿ ಲಯನ್ಸ್ ಕ್ಲಬ್ ಸಂಸ್ಥೆಯನ್ನು ಆರಂಭಿಸಿದರು. ಈ ಸಂಸ್ಥೆ ಈಗ ಜಗತ್ತಿನಾಧ್ಯಂತ ವಿಸ್ತರಣೆಗೊಂಡಿದೆ. ಸುಮಾರು 210 ದೇಶಗಳಲ್ಲಿ ಕೆಲಸ ಮಾಡುತ್ತಿರುವ ಲಯನ್ಸ್ ಕ್ಲಪ್, 1973ರಲ್ಲಿ 68ನೇಯ ರಾಷ್ಟ್ರವಾಗಿ ಭಾರತಕ್ಕೆ ಕಾಲಿಟ್ಟಿತು ಅಂತ ಮಾಹಿತಿ ನೀಡಿದರು. 1973ರಲ್ಲಿ ಪ್ರಪ್ರಥಮವಾಗಿ ಸಾಗರದಲ್ಲಿ ಲಯನ್ಸ್ ಸಂಸ್ಥೆ ಪ್ರಾರಂಭಗೊಂಡಿತು. ಲಯನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಖ್ಯಾತ ದಾನಿಗಳಾದ ದಿ.ಚಿಪ್ಪಳ್ಳಿ ಗೋಪಾಲಕೃಷ್ಣ ಅವರು ಸೇವೆ ಸಲ್ಲಿಸಿದರು. ಕಾರ್ಯದರ್ಶಿಯಾಗಿ ದಿ.ರಮೇಶ್ ಭಟ್ ಕಾರ್ಯ ನಿರ್ವಹಿಸಿದರು ಎಂದರು. ಕಳೆದ ವರ್ಷ 50 ವಸಂತಗಳನ್ನು…
ಬೆಂಗಳೂರು : ಯಾವ ಹೊಂದಾಣಿಕೆ ರಾಜಕಾರಣವೂ ನಡೆದಿಲ್ಲ. ಎಲ್ಲವೂ ಸುಳ್ಳು. ರಾಜ್ಯದಲ್ಲಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಉತ್ತರಿಸಿದ ಅವರು “ಚುನಾವಣೆ ಹೊತ್ತಿನಲ್ಲಿ ತಳಮಟ್ಟದ ಪರಿಸ್ಥಿತಿಯನ್ನು ಸರಿಯಾಗಿ ಅರಿಯಲು ಆಗಲಿಲ್ಲ. ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಲಿ ಎಂದು ನಾವೇ ಒಂದಷ್ಟು ಜನ ಮಂತ್ರಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳಿದ್ದೆವು. ಇದರಲ್ಲಿ ಒಂದಷ್ಟು ಜನ ಗೆದ್ದಿದ್ದಾರೆ. ಒಂದಷ್ಟು ಜನ ಸೋತಿದ್ದಾರೆ. ಮುಂದಕ್ಕೆ ಇವರುಗಳು ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ, ಬೆಳೆಯುತ್ತಾರೆ” ಎಂದರು. “ಎಲ್ಲಾ ಕಾರ್ಯಕರ್ತರು, ಮುಖಂಡರು, ಗೆದ್ದವರು, ಸೋತವರು ಎಲ್ಲರು ಸೇರಿ ಎಐಸಿಸಿ ಸತ್ಯಶೋದನಾ ಸಮಿತಿಗೆ ಪರಿಸ್ಥಿತಿ ಅರಿಯಲು ಅಹವಾಲು ಸಲ್ಲಿಸಿದ್ದೆವು. ಅದರಂತೆ ಎಲ್ಲರು ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮುಂದಕ್ಕೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ…
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಇಂದು ಇಡೀ ದಿನ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದರು. ಈ ಬಳಿಕ ಹೆಚ್ಚಿನ ವಿಚಾರಣೆಗಾಗಿ ಬಿ.ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸದ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಅಲ್ಲದೇ ಮೊದಲು ಬಿ.ನಾಗೇಂದ್ರ ಅವರ ಪಿಎ ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದರು. ಆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇಂದು ಇಡೀ ದಿನ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಇಡಿ ಅಧಿಕಾರಿಗಳು ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ವಿಚಾರಣೆ ನಡೆಸಿದರು. ಆ ಬಳಿಕ ಇಡಿ ಅಧಿಕಾರಿಗಳು ಬಿ.ನಾಗೇಂದ್ರ ಅವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಒಂದೆಡೆ ಎಸ್ಐಟಿ ಅಧಿಕಾರಿಗಳು ವಾಲ್ಮೀಕಿ ನಿಗಮದ ಹಣ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿದ್ದರೇ, ಮತ್ತೊಂದೆಡೆ ಇಡಿ…
ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ವಿದ್ಯಾರ್ಥಿಗಳಿಗೆ ಪೌಷ್ಠಿಕತೆ ಹೆಚ್ಚಿಸಲು ವಾರವಿಡೀ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರು, ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗೆ ರಜಾ ದಿನ ಹೊರತುಪಡಿಸಿ, ವಾರದ 6 ದಿನವೂ ಮೊಟ್ಟೆ ವಿತರಣೆಗೆ ನಿರ್ಧರಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಅದು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. ಈ ಮೊದಲು ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ವಾರಕ್ಕೊಮ್ಮೆ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ನಮ್ಮ ಸರ್ಕಾರ ಅದನ್ನು 10ನೇ ತರಗತಿಯವರೆಗೆ ವಿಸ್ತರಿಸಿದೆ. ವಾರದಲ್ಲಿ ಒಂದು ದಿನದ ಬದಲು ಎರಡು ದಿನಕ್ಕೆ ಹೆಚ್ಚಿಸಲಾಗಿತ್ತು. ಇನ್ನು ವಾರವಿಡೀ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. https://kannadanewsnow.com/kannada/cauvery-water-sharing-issue-siddaramaiah-calls-all-party-meeting-on-july-14/ https://kannadanewsnow.com/kannada/aparnas-departed-aparna-immersed-in-panchabhutas-still-only-a-memory-of-acha-kannada-narrator/
ಬೆಂಗಳೂರು : ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಹಾಗೂ ರಾಜ್ಯದ ಮುಂದಿನ ನಡೆ ಏನು ಎಂಬ ಕುರಿತು ಜುಲೈ 14 ರಂದು ಸರ್ವಪಕ್ಷ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಈ ಕುರಿತು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಈ ಬಾರಿ ವಾಡಿಕೆ ಮಳೆ ಆಗುವುದೆಂಬ ಹವಾಮಾನ ಮುನ್ಸೂಚನೆ ಇದ್ದರೂ ಈ ವರೆಗೆ ಶೇ. 28 ರಷ್ಟು ಒಳಹರಿವಿನ ಕೊರತೆ ಇದೆ. ಇದನ್ನು CWRC ಸ್ಪಷ್ಟವಾಗಿ ನಮ್ಮ ನಿಲುವನ್ನು ಹೇಳಿದ್ದೆವು. ಜೊತೆಗೆ ಜುಲೈ ಅಂತ್ಯದ ವರೆಗೆ ಯಾವುದೇ ತೀರ್ಮಾನ ಮಾಡದಂತೆ ಮನವಿ ಮಾಡಿದ್ದೆವು. ಆದರೂ CWRC ಅವರು ಜುಲೈ 12 ರಿಂದ ಪ್ರತಿ ದಿನ ಒಂದು ಟಿಎಂಸಿ…
ಶಿವಮೊಗ್ಗ : ಶಿವಮೊಗ್ಗ ಅಪರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕ ಮಾಡಲು 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅನುಭವ ಹೊಂದಿರುವ ನ್ಯಾಯವಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ (ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ನ್ಯಾಯವಾದಿಯಾಗಿ ನೋಂದಣಿ ಆಗಿರುವ ಬಗ್ಗೆ ನೋಂದಣಿ ಸಂಖ್ಯೆಯೊಂದಿಗೆ ವಿವರ, ಇತ್ಯಾದಿ) ಅರ್ಜಿ ಸಿದ್ದಪಡಿಸಿ ಜುಲೈ 23 ರ ಸಂಜೆ 05 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ನ್ಯಾಯಾಂಗ ಶಾಖೆಯಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಯನ್ನು ಕಚೇರಿಯ ಸಮಯದಲ್ಲಿ ನ್ಯಾಯಾಂಗ ಶಾಖೆಯನ್ನು ಖುದ್ದಾಗಿ ಹಾಗೂ ದೂರವಾಣಿ ಸಂಖ್ಯೆ: 08182-221100/221010 -9110642146 ರಲ್ಲಿ ಪಡೆಯಬಹುದು ಎಂದು ಅಪರ ಜಿಲ್ಲಾಧಿಕಾರಿಗಳು ಶಿವಮೊಗ್ಗ ತಿಳಿಸಿದ್ದಾರೆ. https://kannadanewsnow.com/kannada/steps-will-be-taken-to-remove-encroachments-on-hmt-land-across-the-country-union-minister-hd-kumaraswamy/ https://kannadanewsnow.com/kannada/dont-rename-ramanagara-district-mp-dr-cn-manjunath-to-cm/