Author: kannadanewsnow09

ಬೆಂಗಳೂರು: ಬಿಎಂಟಿಸಿಯಿಂದ ಕರೆಯಲಾಗಿದ್ದಂತ ನಿರ್ವಾಹಕರ ಹುದ್ದೆ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಗೆ 1:5ರ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತಂತೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು,  ಕಲ್ಯಾಣ-ಕರ್ನಾಟಕ (371-ಜೆ) ಮೀಸಲಾತಿಯ ಸ್ಥಳೀಯ ವೃಂದದ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ದಿನಾಂಕ:14/07/2024 ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡ 75ರಷ್ಟು ಮತ್ತು ಹುದ್ದೆಗೆ ನಿಗಧಿಪಡಿಸಲಾದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡ 25ರಷ್ಟು ಅಂಕಗಳನ್ನು ಸೇರಿಸಿ ಬಂದ ಒಟ್ಟು ಶೇಕಡ ಅಂಕಗಳ ಆಧಾರದ ಮೇಲೆ ಮತ್ತು ನೇರನೇಮಕಾತಿ ಸಂಬಂಧ ಜಾರಿಯಲ್ಲಿರುವ ಸರ್ಕಾರದ ಮೀಸಲಾತಿ ನಿಯಮಾನುಸಾರ ಮೂಲದಾಖಲಾತಿಗಳ ಮತ್ತು ದೇಹದಾರ್ಢ್ಯತೆ ಪರಿಶೀಲನೆಗಾಗಿ 1:5ರ ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.  371-ಜೆ ಮೀಸಲಾತಿಯ ನಿರ್ವಾಹಕ ಹುದ್ದೆಯ ಅರ್ಹತಾ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು  ಕೊನೆಯ ಅಭ್ಯರ್ಥಿಯ ಶೇಕಡವಾರು (Cut-Off) ಅಂಕಗಳು ಈ ಕೆಳಕಂಡಂತಿದೆ ಎಂದಿದೆ. ಮೀಸಲಾತಿ ಶೇಕಡವಾರು ಸಾಮಾನ್ಯ ಮಹಿಳಾ ಮೀಸಲು ಗ್ರಾಮೀಣ ಮೀಸಲು ಕನ್ನಡ…

Read More

ಬೆಂಗಳೂರು; ಕೇಂದ್ರ ಸರ್ಕಾರದಿಂದ ಶಿರೂರು ಗುಡ್ಡ ಕುಸಿತ ಪ್ರಕರಣ ಸಂಬಂಧ ಈಗಾಗಲೇ ಪರಿಹಾರವನ್ನು ನೀಡಲಾಗಿತ್ತು. ಈಗ ಮುಂದುವರೆದು ಹೆಚ್ಚುವರಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಕುರಿತಂತೆ ಅಧಿವೇಶನದ ವೇಳೆಯಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರೂರು ಗುಡ್ಡ ಕುಸಿತ ದುರಂತವನ್ನು ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಮನವಿ ಮಾಡಿದ್ದರು. ಕಾಗೇರಿ ಅವರ ಮನವಿಯನ್ನು ಪುರಸ್ಕರಿಸಿರುವಂತ ಪ್ರಧಾನಮಂತ್ರಿ ಕಾರ್ಯಾಲಯವು, ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರಿಗೆ ಹೆಚ್ಚುವರಿಯಾಗಿ 2 ಲಕ್ಷ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ ಗಾಯಾಳುಗಳಿಗೆ ತಲಾ 50 ಸಾವಿರ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಅಂದಹಾಗೇ ಈ ಹಿಂದೆ ಎನ್ ಡಿ  ಆರ್ ಎಫ್ ನಿಧಿಯಿಂದ ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ನೀಡಲಾಗಿತ್ತು. ಈಗ ಹೆಚ್ಚುವರಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ. https://kannadanewsnow.com/kannada/helpline-for-women-call-this-number-in-case-of-emergency-need/ https://kannadanewsnow.com/kannada/state-govt-issues-guidelines-regarding-aadhaar-authentication-in-property-registration/

Read More

ಬೆಂಗಳೂರು: ಕೋಲ್ಕತ್ತಾದಲ್ಲಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಕೊಲೆ ಘಟನೆಯ ನಂತ್ರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಠಾಣೆಗಳಲ್ಲಿ ರಾತ್ರಿ ಪಾಳಿಗೆ ಇಬ್ಬರು ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆದೇಶಿಸಲಾಗಿತ್ತು. ಈ ಬೆನ್ನಲ್ಲೇ ಮಹಿಳೆಯರ ನೆರವಿಗಾಗಿ ಸಹಾಯವಾಣಿ ಸಂಖ್ಯೆ ಶುರು ಮಾಡಿದೆ. ನಮ್ಮ ಸರ್ಕಾರವು ಮಹಿಳೆಯರ ಸುರಕ್ಷತೆ, ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿದೆ. ಮಹಿಳೆಯರು ತುರ್ತು ಹಾಗೂ ಅಗತ್ಯ ಸಂದರ್ಭಗಳಲ್ಲಿ 1091 ಅಥವಾ 080 22943225 ಗೆ ಸಂಪರ್ಕಿಸಬಹುದು. https://twitter.com/KarnatakaVarthe/status/1828024149584830932 https://kannadanewsnow.com/kannada/russia-launches-100-missiles-on-ukraine-launches-100-drones/ https://kannadanewsnow.com/kannada/state-govt-issues-guidelines-regarding-aadhaar-authentication-in-property-registration/ https://kannadanewsnow.com/kannada/indian-railways-recruitment-2019-indian-railways-recruitment-2018-for-14298-vacancies-rrb-recruitment-2024/

Read More

ಉಕ್ರೇನ್: ರಷ್ಯಾ ಸೋಮವಾರ ಬೆಳಿಗ್ಗೆ ಉಕ್ರೇನ್ ಮೇಲೆ 100 ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಸುಮಾರು 100 ದಾಳಿ ಡ್ರೋನ್ಗಳನ್ನು ಉಕ್ರೇನ್ ಮೇಲೆ ಉಡಾಯಿಸಿತು. ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ 2-1/2 ವರ್ಷಗಳ ನಂತರ ಕನಿಷ್ಠ 10 ಪ್ರದೇಶಗಳಲ್ಲಿ ವಿದ್ಯುತ್ ಅಥವಾ ಇತರ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಕೈವ್ನ ಕೆಲವು ಭಾಗಗಳು ಸೇರಿದಂತೆ ಹಲವಾರು ಸ್ಥಳಗಳಲ್ಲಿ ವಿದ್ಯುತ್ ಕಡಿತ ಮತ್ತು ನೀರು ಸರಬರಾಜು ಕಡಿತಗಳು ವರದಿಯಾಗಿವೆ. ಮಾರ್ಚ್ನಲ್ಲಿ ಉಕ್ರೇನಿಯನ್ ವಿದ್ಯುತ್ ಗ್ರಿಡ್ ಮೇಲೆ ರಷ್ಯಾ ನಾಟಕೀಯವಾಗಿ ತನ್ನ ದಾಳಿಯನ್ನು ಹೆಚ್ಚಿಸಿತು, ಜನರಿಗೆ ವಿದ್ಯುತ್ ಮತ್ತು ಹೆಚ್ಚು ಬಿಸಿಮಾಡುವ ಚಳಿಗಾಲದಲ್ಲಿ ವ್ಯವಸ್ಥೆಯನ್ನು ಕೆಳಮಟ್ಟಕ್ಕೆ ಇಳಿಸುವ ಸಂಘಟಿತ ಪ್ರಯತ್ನದಂತೆ ಕಾಣುತ್ತದೆ ಎಂದು ಕೀವ್ ಹೇಳಿದ್ದಾರೆ. ಸೋಮವಾರದ ಕ್ಷಿಪಣಿ ಮತ್ತು ಡ್ರೋನ್ ದಾಳಿಯು ವಾರಗಳಲ್ಲಿ ರಷ್ಯಾದ ಅತ್ಯಂತ ತೀವ್ರವಾಗಿದೆ, ರಷ್ಯಾದ…

Read More

ಬೆಂಗಳೂರು: ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ಪಾಲಿಕೆ ಬಜಾರ್‌ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿದೆ. ವಿಜಯನಗರ ಬಸ್‌ ಹಾಗೂ ಮೆಟ್ರೋ ನಿಲ್ದಾಣಗಳ ಬಳಿ ಸ್ಥಾಪಿಸಲಾಗಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಜಯನಗರ ಬಸ್/ಮೇಟ್ರೊ ನಿಲ್ದಾಣದ ಬಳಿ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಲ್ಲಿ ಹವಾನಿಯಂತ್ರಿತ ಮಾರುಕಟ್ಟೆಯನ್ನು ನಿರ್ಮಿಸಲಾಗಿರುತ್ತದೆ. ಹವಾನಿಯಂತ್ರಿತ ಮಾರುಕಟ್ಟೆಯಾದ “ಪಾಲಿಕೆ ಬಜಾರ್” ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಹೊಂದಿರುತ್ತದೆ. ಪಾಲಿಕೆ ಬಜಾರ್ ಮಾರುಕಟ್ಟೆಯ ವಿವರಗಳು:  ಉದ್ದೇಶಿತ ಯೋಜನೆಯ ಮಾದರಿ:- ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಹವಾನಿಯಂತ್ರಿತ ಮಾರುಕಟ್ಟೆ.  ಯೋಜನೆಯ ಒಟ್ಟು ಅಂದಾಜು ಮೊತ್ತ 13 ಕೋಟಿ ರೂ.  ಅನುದಾನದ ವಿವರ:  2017-18ನೇ ಸಾಲಿನಲ್ಲಿ 5 ಕೋಟಿ ರೂ.  2021-22ನೇ ಸಾಲಿನಲ್ಲಿ 8 ಕೋಟಿ ರೂ.  ಕಾಮಗಾರಿಯ ಸ್ಥಳ:- ವಿಜಯನಗರ ಬಸ್/ಮೇಟ್ರೊ ನಿಲ್ದಾಣದ ಬಳಿ.  ಪಾಲಿಕೆ…

Read More

ಲಂಡನ್: ಇಂಗ್ಲೆಂಡ್ನ ಮಾಜಿ ಮ್ಯಾನೇಜರ್ ಸ್ವೆನ್-ಗೊರಾನ್ ಎರಿಕ್ಸನ್ ತಮ್ಮ 76 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಇಟಲಿಯ ಕ್ರೀಡಾ ಪತ್ರಕರ್ತ ಫ್ಯಾಬ್ರಿಜಿಯೊ ರೊಮಾನೊ ವರದಿ ಮಾಡಿದ್ದಾರೆ. ಎರಿಕ್ಸನ್ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಸ್ವೀಡಿಷ್ ಮ್ಯಾನೇಜರ್ ಯುರೋಪಿನ ವಿವಿಧ ಲೀಗ್ಗಳಲ್ಲಿ 18 ಟ್ರೋಫಿಗಳನ್ನು ಗೆದ್ದರು, ರೋಮಾ, ಲಾಜಿಯೊ, ಬೆನ್ಫಿಕಾ ಮತ್ತು ಮ್ಯಾಂಚೆಸ್ಟರ್ ಸಿಟಿಯಂತಹ ಕ್ಲಬ್ಗಳನ್ನು ನಿರ್ವಹಿಸಿದರು. ಅತ್ಯಂತ ಗಮನಾರ್ಹವಾಗಿ, ಅವರು 2001 ರಿಂದ 2006 ರವರೆಗೆ ಇಂಗ್ಲೆಂಡ್ ’00 ರ ಗೋಲ್ಡನ್ ಜನರೇಷನ್’ ಅನ್ನು ನಿರ್ವಹಿಸಿದರು, ಲ್ಯಾಂಪಾರ್ಡ್, ಗೆರಾರ್ಡ್, ಸ್ಕೋಲ್ಸ್, ರೂನಿ, ಬೆಕ್ಹ್ಯಾಮ್ ಮುಂತಾದವರನ್ನು ನಿರ್ವಹಿಸಿದರು, ಆದರೆ ಅವರೊಂದಿಗೆ ಏನನ್ನೂ ಗೆಲ್ಲಲು ವಿಫಲರಾದರು. https://twitter.com/FabrizioRomano/status/1828030542912147507 https://kannadanewsnow.com/kannada/good-news-for-state-government-employees-special-casual-leave-granted-to-kas-exam-tomorrow/ https://kannadanewsnow.com/kannada/kpsc-kas-exam-tomorrow-additional-ksrtc-bus-facility-for-candidates/

Read More

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ನಾಳೆ ಕೆಪಿಎಸ್ಸಿಯಿಂದ ನಡೆಯುತ್ತಿರುವಂತ ಕೆಎಎಸ್ ಪೂರ್ವಭಾವಿ ಪರೀಕ್ಷೆ ಬರೆಯಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ, ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರ ಉಪ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ:27.08.2024 ಮಂಗಳವಾರದಂದು ನಡೆಸಲು ಕರ್ನಾಟಕ ಲೋಕಸೇವಾ ಆಯೋಗವು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಸದರಿ ಪರೀಕ್ಷೆಗೆ ಅನುವಾಗುವ 214 ಸರ್ಕಾರಿ, 189 ಅನುದಾನಿತ ಮತ್ತು 161 ಶಾಸಗಿ ಶಾಲಾ-ಕಾಲೇಜುಗಳು ಸೇರಿದಂತೆ, ಒಟ್ಟಾರೆ 564 ಪರೀಕ್ಷಾ ಉಪ ಕೇಂದ್ರಗಳಿಗೆ, ಅನ್ವಯಿಸಿದಂತೆ ಒಂದು ದಿನದ (ದಿನಾಂಕ: 27.08.2024) ವಿಶೇಷ/ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ ಎಂದಿದ್ದಾರೆ. ಸದರಿ ದಿನಾಂಕವನ್ನು ಸಾರ್ವತ್ರಿಕ ರಜೆಯನ್ನಾಗಿ Negotiable Instrument Act 1881ರ ಅಡಿಯಲ್ಲಿ ಘೋಷಿಸಲಾಗಿದೆ. ಮುಂದುವರೆದು, ಮೇಲೆ ತಿಳಿಸಿರುವ ಪರೀಕ್ಷಾ ಉಪ ಕೇಂದ್ರಗಳಲ್ಲಿ ದಿನಾಂಕ:27.08.2024ರಂದು…

Read More

ಬೆಂಗಳೂರು: ನಾಳೆ ಕೆಪಿಎಸ್ಸಿಯಿಂದ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಾರಿಗೆ ಬಸ್ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕುರಿತಂತೆ ಕೆಎಸ್ಆರ್ ಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 27.08.2024 ರಂದು ಕರ್ನಾಟಕ ಲೋಕಸೇವಾ ಆಯೋಗದ 2023-24ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಪೂರ್ವಭಾವಿ ಪರೀಕ್ಷೆ ನಡೆಸಲಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿರುವಂತಹ ಸುಮಾರು ಅಭ್ಯರ್ಥಿಗಳಿಗೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲಾಗಳಾದ ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ಇನ್ನಿತರೆ ಜಿಲ್ಲೆಗಳಿಗೆ ಪರೀಕ್ಷೆ ಕೇಂದ್ರಗಳನ್ನು ಗುರುತಿಸಿದ್ದು ನಿಗದಿತ ಸಮಯದೊಳಗೆ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಎಕ್ಸ್ ಖಾತೆ ಮೂಲಕ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸುಮಾರು ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದು ತ್ವರಿತಗತಿಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನಿಯಮಾನುಸಾರ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಸನ್ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿರವರು ಕೋರಿರುತ್ತಾರೆ ಎಂದಿದೆ. ಅದರಂತೆ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ…

Read More

ನವದೆಹಲಿ: ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ ಆರೋಪದ ಮೇಲೆ 2021 ರ ನವೆಂಬರ್ನಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯ ಸಮಯದಲ್ಲಿ ಸೇವೆ ಸಲ್ಲಿಸಿದ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಮತ್ತು ಮಂಡಳಿಯ ಸದಸ್ಯರಿಗೆ ಸೆಬಿ ಶೋಕಾಸ್ ನೋಟಿಸ್ ನೀಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ನ ಷೇರುಗಳು ಸೋಮವಾರ ಶೇಕಡಾ 4 ಕ್ಕಿಂತ ಹೆಚ್ಚು ಕುಸಿದು ಎನ್ಎಸ್ಇಯಲ್ಲಿ 530 ರೂ.ಗೆ ಕೊನೆಗೊಂಡವು. ಪ್ರವರ್ತಕ ವರ್ಗೀಕರಣ ಮಾನದಂಡಗಳನ್ನು ಶರ್ಮಾ ಅನುಸರಿಸುತ್ತಿಲ್ಲ ಎಂಬ ಆರೋಪಕ್ಕೆ ಮಾರುಕಟ್ಟೆ ನಿಯಂತ್ರಕರಿಂದ ನೋಟಿಸ್ ಗಳು ಬಂದಿವೆ. ಆರ್ಬಿಐನ ಒಳಹರಿವಿನ ಆಧಾರದ ಮೇಲೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಈ ವರ್ಷದ ಜನವರಿಯಲ್ಲಿ, ಫೆಬ್ರವರಿ 29 ರಿಂದ ಜಾರಿಗೆ ಬರುವಂತೆ ಯಾವುದೇ ಗ್ರಾಹಕರ ಖಾತೆಯಲ್ಲಿ ಠೇವಣಿ ಅಥವಾ ಟಾಪ್-ಅಪ್ಗಳನ್ನು ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಅನ್ನು ನಿಷೇಧಿಸಲು ಕೇಂದ್ರ ಬ್ಯಾಂಕ್ ನಿರ್ದೇಶನ ನೀಡಿತು. https://kannadanewsnow.com/kannada/bengaluru-power-outages-in-these-areas-on-august-28/ https://kannadanewsnow.com/kannada/indian-railways-recruitment-2019-indian-railways-recruitment-2018-for-14298-vacancies-rrb-recruitment-2024/

Read More

ಬೆಂಗಳೂರು: ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲಿನಲ್ಲಿ ರಾಜಾತಿಥ್ಯ ನೀಡಿದಂತ ಪೋಟೋಗಳು ವೈರಲ್ ಆಗುತ್ತಿದ್ದ ಬೆನ್ನಲ್ಲೇ, ಈಗ ಆಗಸ್ಟ್.12ರಂದೇ ಜೈಲು ಅಧಿಕಾರಿಗಳಿಗೆ ಕಾರಾಗೃಹ ಡಿಜಿಪಿ ಬರೆದಿದ್ದಂತ ಪತ್ರ ಕೂಡ ವೈರಲ್ ಆಗಿದೆ. ಹಾಗಾದ್ರೇ ಪರಪ್ಪನ ಅಗ್ರಹಾರ ಜೈಲಲ್ಲಿ ನಡೆಯುತ್ತಿರುವಂತ ಕರ್ಮಕಾಂಡ ಮೊದಲೈ ಗೊತ್ತಿತ್ತ ಎಂಬ ಅನುಮಾನಕ್ಕೂ ಕಾರಣವಾಗಿದೆ. ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್, ಜೊತೆಗೆ ರೌಡಿ ಶೀಟರ್ ಗಳು. ಹೀಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯವನ್ನು ಸ್ವೀಕರಿಸುತ್ತ ಕುಳಿತಿರುವಂತ ನಟ ದರ್ಶನ್ ಪೋಟೋ ವೈರಲ್ ಆಗಿದೆ. ಜೊತೆಗೆ ರೌಡಿ ಶೀಟರ್ ಸತ್ಯ ಎಂಬಾತನ ಜೊತೆಗೆ ವೀಡಿಯೋ ಕಾಲ್ ಮಾಡಿದ್ದರ ವೀಡಿಯೋ ಕೂಡ ವೈರಲ್ ಆಗಿತ್ತು. ಓ ಜೈಲಲ್ಲಿಯೂ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ದುಡ್ಡು ಕೊಟ್ರೆ ರಾಜಾತಿಥ್ಯ ಸಿಗುತ್ತದೆ ಎಂಬುದಾಗಿ ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ. ಆಗಸ್ಟ್.22ರಂದು ನಡೆದಿದ್ದಂತ ಘಟನೆ, ಈಗ ವೈರಲ್ ಆಗಿದೆ ಎಂಬುದಾಗಿ ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಸ್ಪಷ್ಟ ಪಡಿಸಿದ್ದರು. ಆ ಬೆನ್ನಲ್ಲೇ…

Read More