Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಊಟ ಪ್ರಿಯರಿಗೆ ಸುವರ್ಣಾವಕಾಶ ಎನ್ನುವಂತೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ತಿನ್ನುವಂತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಟಗರು, ಕುರಿ ಪಟ್ಲಿ, ಕೋಳಿ, ಟಿವಿ ಸೇರಿದಂತೆ ಇತರೆ ಬಹುಮಾನ ಕೂಡ ಸಿಗಲಿದೆ. ಈ ಬಗ್ಗೆ ಆಯೋಜಕರು, ವಕೀಲರಾದಂತ ಅನಿಲ್ ರೆಡ್ಡಿ ಮಾಹಿತಿಯನ್ನು ಹಂಚಿಕೊಂಡಿದ್ದು, ಕರ್ನಾಟಕ ಸುವರ್ಣ ಸಂಭ್ರಮ -50ರ ಪ್ರಯುಕ್ತ ಬೆಂಗಳೂರಿನ ಹೆಚ್ ಎಸ್ ಆರ್ ಬಡಾವಣೆಯಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ರಾಜ್ಯ ಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 125 ಜನರಿಗೆ ಮಾತ್ರವೇ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ ರಾಜ್ಯಾಧ್ಯಂತ ಸ್ಪರ್ಧಿಗಳು ಇದರಲ್ಲಿ ಭಾಗಿಯಾಗಬಹುದಾಗಿದೆ. ಈ ಸ್ಪರ್ಧೆಯಲ್ಲಿ 125 ಸ್ಪರ್ಧಾಳುಗಳಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಮೊದಲು ಹೆಸರು ನೋಂದಾಯಿಸಿದವರಿಗೆ ಮಾತ್ರ ಅವಕಾಶವಿದೆ. ಎಲ್ಲಾ ವಯೋಮಾನದವರು ಈ ಸ್ಪರ್ಧೆಯಲ್ಲಿ ಭಾಗಿಯಾಗಬಹುದಾಗಿದೆ. ಸ್ಪರ್ಧಾರ್ಥಿಗಳಿಗೆ 45 ನಿಮಿಷಗಳ ಕಾಲಮಿತಿಯನ್ನು ರಾಗಿಮುದ್ದೆ, ನಾಟಿ ಕೋಳಿ ಸಾರು ಉಣ್ಣಲು…
2014 ರಿಂದ ಚೀನೀ ಬೆಳ್ಳುಳ್ಳಿಯನ್ನು ನಿಷೇಧಿಸಿದ್ದರೂ, ಇದನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದೆ ಮತ್ತು ಹೆಚ್ಚಿನ ಬೇಡಿಕೆಯಿದೆ. ಸ್ಥಳೀಯ ಅಡುಗೆಮನೆಗಳಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ, ಬೆಳ್ಳುಳ್ಳಿ ಸಾಮಾನ್ಯವಾಗಿ ಬಳಸುವ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ, ಇದನ್ನು ಹೆಚ್ಚಿನ ರೀತಿಯ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಇದು ವಿಶಿಷ್ಟ ಪರಿಮಳ ಮತ್ತು ಶಕ್ತಿಯುತ ವಾಸನೆಯನ್ನು ಹೊಂದಿದೆ, ಇದು ಜನಪ್ರಿಯ ಸೇರ್ಪಡೆಯಾಗಿದೆ. ರುಚಿಯನ್ನು ಹೆಚ್ಚಿಸುವುದರ ಹೊರತಾಗಿ, ಬೆಳ್ಳುಳ್ಳಿ ವಿವಿಧ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ – ಇದರಲ್ಲಿ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಪರಾವಲಂಬಿಗಳನ್ನು ಪ್ರತಿಬಂಧಿಸುವುದು ಮತ್ತು ನಾಶಪಡಿಸುವುದು, ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದು ಮತ್ತು ಯಕೃತ್ತನ್ನು ರಕ್ಷಿಸುವುದು ಸೇರಿವೆ. ತಜ್ಞರ ಪ್ರಕಾರ, ಬೆಳ್ಳುಳ್ಳಿ ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ಹೊಂದಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು, ಅನಾರೋಗ್ಯವನ್ನು ತಡೆಗಟ್ಟಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನೀವು ಆರೋಗ್ಯಕರ ಬೆಳ್ಳುಳ್ಳಿಯನ್ನು ಸೇವಿಸುವುದು ಮುಖ್ಯ. ಚೈನೀಸ್…
ಮುಂಬೈ : “ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಖುದ್ದು ಜನರಿಂದ ಮಾಹಿತಿ ಪಡೆಯಲು ಮಹಾರಾಷ್ಟ್ರದ ಮಹಾಯುತಿ (ಬಿಜೆಪಿ ಮಿತ್ರ ಪಕ್ಷಗಳು) ನಾಯಕರು ಭೇಟಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಶೇಷ ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಹಿರಂಗ ಸವಾಲು ಹಾಕಿದರು. ಮುಂಬೈನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು. “ಬಿಜೆಪಿಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿತ್ತು. ಈ ಸುಳ್ಳನ್ನು ಬಯಲು ಮಾಡಲು ನಾವು ಮಹಾರಾಷ್ಟ್ರಕ್ಕೆ ಬಂದಿದ್ದೇವೆ. ಯಾವುದೇ ಸಮಯದಲ್ಲಿ ಮಹಾಯುತಿ ನಾಯಕರು ರಾಜ್ಯಕ್ಕೆ ಭೇಟಿ ನೀಡಬಹುದು. ನೇರವಾಗಿ ಜನರ ಬಳಿಗೆ ಬಂದು ಚರ್ಚೆ ಮಾಡಬಹುದು. ನಾನೇ ಖುದ್ದಾಗಿ ನಿಂತು ಈ ವ್ಯವಸ್ಥೆ ಮಾಡಿಕೊಡುತ್ತೇನೆ.” ಎಂದು ಸವಾಲು ಹಾಕಿದರು. ರಾಜ್ಯದ ಜಿಡಿಪಿ ಏರಿಕೆ “ಗ್ಯಾರಂಟಿ ಯೋಜನೆಗಳು ಜಾರಿಗೂ ಮುನ್ನ…
ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಋತುಬಂಧದಂತಹ ಹಾರ್ಮೋನುಗಳ ಬದಲಾವಣೆಗಳು ಸೇರಿದಂತೆ ಅಂಶಗಳ ಸಂಯೋಜನೆಯಿಂದಾಗಿ ಮಹಿಳೆಯರು ಹೃದಯಾಘಾತದ ಅಪಾಯದಲ್ಲಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ನಂತಹ ಪರಿಸ್ಥಿತಿಗಳು ಹೃದ್ರೋಗಕ್ಕೆ ಕಾರಣವಾಗಬಹುದು. ಧೂಮಪಾನ, ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆಯಂತಹ ಜೀವನಶೈಲಿ ಅಂಶಗಳು ಸಹ ಮಹತ್ವದ ಪಾತ್ರವಹಿಸುತ್ತವೆ. ಒತ್ತಡ ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಸೂಕ್ಷ್ಮವಾಗಿರುತ್ತವೆ. ಇದು ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯನ್ನು ಹೆಚ್ಚು ಸವಾಲಾಗಿ ಪರಿಣಮಿಸುತ್ತದೆ. ಮಹಿಳೆಯರಲ್ಲಿ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆ ಮಾಡಲು ಜಾಗೃತಿ ಮತ್ತು ಅಪಾಯದ ಅಂಶಗಳ ಪೂರ್ವಭಾವಿ ನಿರ್ವಹಣೆ ನಿರ್ಣಾಯಕವಾಗಿದೆ. ದೆಹಲಿ ಮೂಲದ ಹೃದ್ರೋಗ ತಜ್ಞೆ ಡಾ.ರಶ್ಮಿ ಖನ್ನಾ ಅವರ ಪ್ರಕಾರ, ಮಹಿಳೆಯರಲ್ಲಿ ಹೃದಯಾಘಾತದ ಎಂಟು ಸಾಮಾನ್ಯ ಲಕ್ಷಣಗಳು ಇಲ್ಲಿವೆ. ಎದೆ ನೋವು ಅಥವಾ ಅಸ್ವಸ್ಥತೆ: ಇದು ಎದೆಯಲ್ಲಿ ಒತ್ತಡ, ಹಿಂಡುವಿಕೆ ಅಥವಾ ಹೊಟ್ಟೆ ತುಂಬಿದಂತೆ ಭಾಸವಾಗಬಹುದು. ಸಾಮಾನ್ಯವಾಗಿ ಎಡಭಾಗ ಅಥವಾ ಮಧ್ಯದಲ್ಲಿ. ಅಸ್ವಸ್ಥತೆಯು ನಿಮಿಷಗಳವರೆಗೆ…
ಬೆಂಗಳೂರು: ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು ಸಿದ್ಧರಾಮಯ್ಯನವರೇ ಎಂಬುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಶ್ನಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ವಕ್ಫ್ ಮಂಡಳಿಯ ಭೂಕಳ್ಳತನದ ಮಾಫಿಯಾಗೆ ಬೇಸತ್ತು ಈ ಹಿಂದೆ ಹಾನಗಲ್ ತಾಲೂಕಿನ ಹರನಗಿರಿಯಲ್ಲಿ ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. 1964 ರಿಂದ ತಮ್ಮದೇ ಹೆಸರಿನಲ್ಲಿದ್ದ ಜಮೀನನ್ನು 2015 ರಲ್ಲಿ ಕೆಲ ಸಮಾಜಘಾತುಕರು ವಕ್ಫ್ ನಿಯಮದ ಪ್ರಕಾರ ಸಂಪೂರ್ಣ ಜಮೀನು ತಮ್ಮದಾಗಿಸಿಕೊಂಡು ಬೆಳೆದು ನಿಂತಿದ್ದ ಬೆಳೆಗಳನ್ನು ಸಂಪೂರ್ಣವಾಗಿ ನಾಶ ಮಾಡಿ ಬಡ ರೈತನ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ಬಹಿರಂಗಪಡಿಸಿದ ಮಾಧ್ಯಮದ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ಕೇಸ್ ದಾಖಲಿಸುತ್ತದೆ. ಇದರ ಕುರಿತು ಟ್ವೀಟ್ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಮೇಲೂ FIR ದಾಖಲಾಗಿದೆ ಎಂದಿದ್ದಾರೆ. ಈ ಘಟನೆಯ ಸಂಪೂರ್ಣ ಮಾಹಿತಿ ಪಡೆಯಲು ಇಂದು ಸಂಸದರಾದ ಗೋವಿಂದ ಕಾರಜೋಳ ಅವರೊಂದಿಗೆ ಬಡರೈತನ ಮನೆಗೆ ಭೇಟಿ…
ಮಂಡ್ಯ: ನಾಳೆ ಮಂಡ್ಯದ ಕೆ ಆರ್ ಎಸ್ ಡ್ಯಾಂ ಬಳಿಯಲ್ಲಿ ಸೀ ಪ್ಲೇನ್ ಪ್ರಾಯೋಗಿಕ ಹಾರಾಟ ನಡೆಸಲು ಭಾರತೀಯ ವಿಮಾನಯಾನ ಸಚಿವಾಲಯ ನಿರ್ಧರಿಸಿತ್ತು. ಅದರಂತೆ ರಾಜ್ಯ ಸರ್ಕಾರದಿಂದ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಆದರೇ ನಾಳೆ ನಿಗದಿಯಾಗಿದ್ದಂತ ಸೀ ಪ್ಲೇನ್ ಪ್ರಾಯೋಗಿಕ ಹಾರಾಟವನ್ನು ಮುಂದೂಡಿಕೆ ಮಾಡಲಾಗಿದೆ. ಭಾರತ ಸರ್ಕಾರ ವಿಮಾನಯಾನ ಸಚಿವಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರವು ಕೆ.ಆರ್.ಎಸ್ ಅಣೆಕಟ್ಟಿನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರ ನವೆಂಬರ್ 10 ರಂದು ಬೆಳಿಗ್ಗೆ 9:15 ಗಂಟೆಗೆ ಆಯೋಜಿಸಲಾಗಿದ್ದ Sea Plane Demonstration (ಸೀ ಪ್ಲೇನ್ ) ಪ್ರಾಯೋಗಿಕ ಹಾರಾಟವನ್ನು ತಾಂತ್ರಿಕ ಕಾರಣಂತರಗಳಿಂದ ಮುಂದೂಡಲಾಗಿರುತ್ತದೆ. https://kannadanewsnow.com/kannada/actor-tony-todd-best-known-for-his-horror-films-passes-away/ https://kannadanewsnow.com/kannada/nda-candidates-will-win-all-3-seats-in-assembly-bypolls-bs-yediyurappa/ https://kannadanewsnow.com/kannada/big-news-24-people-died-in-pakistans-railway-station-bomb-blast-here-is-a-scary-video/
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆ ನಡೆಯುವ 3 ಕ್ಷೇತ್ರಗಳಲ್ಲೂ ಬಿಜೆಪಿ- ಎನ್‍ಡಿಎ ಅಭ್ಯರ್ಥಿಗಳ ಗೆಲುವು ಖಚಿತ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಂಡೂರು ಕ್ಷೇತ್ರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಈಗಾಗಲೇ 3 ಕ್ಷೇತ್ರಗಳಿಗೆ ಹೋಗಿ ಬಂದಿದ್ದೇನೆ. ವಾತಾವರಣ ದಿನೇದಿನೇ ಬಿಜೆಪಿ ಪರವಾಗಿ ಬದಲಾಗುತ್ತಿದೆ. ಮುಖ್ಯಮಂತ್ರಿ ಇನ್ನೂ 2 ದಿನ ಇಲ್ಲೇ ಠಿಕಾಣಿ ಹೂಡಿದ್ದನ್ನು ನೋಡಿದಾಗ ಅವರಿಗೆ ಸೋಲಿನ ಆತಂಕ ಮೂಡಿದಂತಿದೆ. 3 ಕ್ಷೇತ್ರಗಳಲ್ಲಿ ಬಿಜೆಪಿ- ಎನ್‍ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು. ಇವತ್ತು ಸಂಜೆವರೆಗೆ ಇಲ್ಲಿದ್ದು ಶಿಗ್ಗಾಂವಿ ಕಡೆ ಪ್ರವಾಸ ಮಾಡುವುದಾಗಿ ಅವರು ತಿಳಿಸಿದರು. ಸಂಡೂರಿನಲ್ಲಿ ಹಿನ್ನಡೆ ಆಗುವುದು ಮನವರಿಕೆ ಆದುದರಿಂದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ಇಲ್ಲಿ ಬೀಡು ಬಿಟ್ಟಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕೋವಿಡ್ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲೇ ಕೆಲಸಗಳು ಆಗಿವೆ. ಎಲ್ಲವನ್ನೂ…
ನವದೆಹಲಿ: ದೊಡ್ಡ ಪರದೆ ಮತ್ತು ದೂರದರ್ಶನ ದಂತಕಥೆ, ಮುಖ್ಯವಾಗಿ ಭಯಾನಕ ಚಿತ್ರಗಳಿಗೆ ಹೆಸರುವಾಸಿಯಾದ ನಟ ಟೋನಿ ಟಾಡ್ ತಮ್ಮ 69 ನೇ ವಯಸ್ಸಿನಲ್ಲಿ ನಿಧನರಾದರು. ಟಾಡ್ ನವೆಂಬರ್.6 ರಂದು ಲಾಸ್ ಏಂಜಲೀಸ್ ನ ತಮ್ಮ ನಿವಾಸದಲ್ಲಿ ನಿಧನರಾದರು. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಟಾಡ್ ಕ್ಯಾಂಡಿಮ್ಯಾನ್ ನಲ್ಲಿ ಕೊಲೆಗಾರನ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದರು ಮತ್ತು ಅದರ 2021 ರ ಮುಂದುವರಿದ ಭಾಗದಲ್ಲಿಯೂ ಕಾಣಿಸಿಕೊಂಡರು. ಅವರು ಭಯಾನಕ ಸರಣಿಯಾದ ಫೈನಲ್ ಡೆಸ್ಟಿನೇಷನ್ ಮತ್ತು ಯುದ್ಧ ನಾಟಕ ಪ್ಲಾಟೂನ್ ನಲ್ಲಿಯೂ ಕಾಣಿಸಿಕೊಂಡರು. ಟಾಡ್ ಅವರ ನಟನಾ ಕ್ರೆಡಿಟ್ಗಳಲ್ಲಿ 240 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ನಾಲ್ಕು ದಶಕಗಳ ಟಿವಿ ವೃತ್ತಿಜೀವನ ಸೇರಿವೆ. ಡಿಸೆಂಬರ್ 4, 1954 ರಂದು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಜನಿಸಿದ ಟಾಡ್ ದೊಡ್ಡ ಪರದೆಗಾಗಿ ನಿರಂತರವಾಗಿ ನಟಿಸುವಾಗ ದೂರದರ್ಶನ ಮಾಧ್ಯಮದಲ್ಲಿ ಆಗಾಗ್ಗೆ ತೊಡಗಿಸಿಕೊಂಡರು. 21 ಜಂಪ್ ಸ್ಟ್ರೀಟ್, ನೈಟ್ ಕೋರ್ಟ್, ಮ್ಯಾಕ್ ಗೈವರ್, ಮ್ಯಾಟ್ಲಾಕ್, ಜೇಕ್ ಅಂಡ್ ದಿ ಫಾಟ್ಮನ್, ಲಾ…
ಔರಂಗಾಬಾದ್: ತನ್ನ ದಿವಂಗತ ಪತ್ನಿಯ ಮೇಲೆ ಕ್ರೌರ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿ ಮತ್ತು ಆತನ ಕುಟುಂಬದ ವಿರುದ್ಧ 20 ವರ್ಷಗಳ ಹಿಂದೆ ವಿಧಿಸಲಾಗಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠ ರದ್ದುಗೊಳಿಸಿದೆ. ಆಕೆಯನ್ನು ನಿಂದಿಸುವುದು, ಟಿವಿ ನೋಡಲು ಬಿಡದಿರುವುದು, ದೇವಸ್ಥಾನಕ್ಕೆ ಒಬ್ಬಂಟಿಯಾಗಿ ಭೇಟಿ ನೀಡುವುದನ್ನು ನಿಷೇಧಿಸುವುದು ಮತ್ತು ಕಾರ್ಪೆಟ್ ಮೇಲೆ ಮಲಗುವಂತೆ ಮಾಡಿದ ಆರೋಪಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅಡಿಯಲ್ಲಿ “ಕಠಿಣ” ಕ್ರಮಗಳಿಗೆ ಸಮನಾಗುವುದಿಲ್ಲ ಎಂದು ನ್ಯಾಯಾಲಯ ಕಂಡುಕೊಂಡಿದೆ. ಹೆಚ್ಚಾಗಿ ಕೌಟುಂಬಿಕ ವಿಷಯಗಳನ್ನು ಕೇಂದ್ರೀಕರಿಸಿದ ಆರೋಪಗಳು ದೈಹಿಕ ಅಥವಾ ಮಾನಸಿಕ ಕ್ರೌರ್ಯದ ಮಟ್ಟಕ್ಕೆ ಏರಿಲ್ಲ ಎಂದು ಹೈಕೋರ್ಟ್ ಗಮನಿಸಿದೆ. ಐಪಿಸಿ ಸೆಕ್ಷನ್ 498 ಎ ಮತ್ತು 306 ರ ಅಡಿಯಲ್ಲಿ ಕ್ರೌರ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೆಳ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ವ್ಯಕ್ತಿ, ಅವನ ಪೋಷಕರು ಮತ್ತು ಅವನ ಸಹೋದರನನ್ನು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಖುಲಾಸೆಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಶಿಕ್ಷೆಯ ವಿರುದ್ಧ…
ಬೆಳಗಾವಿ: ರಾಜ್ಯದಲ್ಲಿ ಬೆಚ್ಚಿ ಬೀಳಿಸು ಘಟನೆ ಎನ್ನುವಂತೆ ಕಿಡಿಗೇಡಿಗಳು ಗ್ರಾಮ ಪಂಚಾಯ್ತಿ ಕಟ್ಟಡ ಮೇಲೆಯೇ ತಡರಾತ್ರಿ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿರುವಂತ ಘಟನೆ ನಡೆದಿದೆ. ಬೆಳಗಾವಿ ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯ್ತಿ ಕಟ್ಟಡ ಮೇಲೆ ನಿನ್ನೆ ತಡರಾತ್ರಿ ಎರಡು ಗುಂಪುಗಳ ಮಧ್ಯೆ ತೀವ್ರ ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿದಾಗ, ತಡರಾತ್ರಿ ಕಿಡಿಗೇಡಿಗಳಿಂದ ಗ್ರಾಮ ಪಂಚಾಯ್ತಿ ಕಟ್ಟಕ್ಕೆ ಬೆಂಕಿ ಹಚ್ಚಿರುವುದಾಗಿ ಹೇಳಲಾಗುತ್ತಿದೆ. ಕಲಕಾಂಬ ಗ್ರಾಮ ಪಂಚಾಯ್ತಿ ಬಳಿಗೆ ತಡರಾತ್ರಿ ಆಗಮಿಸಿದಂತ ಕಿಡಿಗೇಡಿಗಳು ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ಸುರಿದು, ಬಟ್ಟೆ ಹಾಕಿ, ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಕೃತ್ಯದ ಬಳಿಕ ಗ್ರಾಮ ಪಂಚಾಯ್ತಿ ಕಟ್ಟಡದಲ್ಲಿನ ಸಿಸಿಟಿವಿಯನ್ನು ಕೂಡ ಸಿಕ್ಕಿ ಬೀಳುವ ಭಯದಿಂದ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರ ಬಂದೋಬಸ್ತ್ ಕೈಗೊಳ್ಳಲಾಗಿದೆ. https://kannadanewsnow.com/kannada/neeraj-chopra-to-be-coached-by-javelin-legend-jan-zelezny/ https://kannadanewsnow.com/kannada/are-you-struggling-with-sleepless-nights-if-you-follow-these-5-tips-sleep-is-guaranteed/