Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಯಾವಾಗ ಎಂದು ಕೇಳಿದಾಗ, “ನಾವು ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಿ ಹೈಕಮಾಂಡ್ ಗೆ ಹೆಸರು ರವಾನೆ ಮಾಡುತ್ತೇವೆ. 11ರಂದು ಹೈಕಮಾಂಡ್ ನಾಯಕರು ಚರ್ಚೆ ಮಾಡಿ ಪಟ್ಟಿ ಪ್ರಕಟಿಸುತ್ತಾರೆ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯಿಸಿದರು. ಕುಮಾರಸ್ವಾಮಿ ಅವರು ಜನರಿಗೆ ಹೇಗೆ ಮುಖ ತೋರಿಸುತ್ತಾರೆ? ಬಿಜೆಪಿಗಿಂತ ಮುನ್ನ ನೀವು ಟಿಕೆಟ್ ಘೋಷಣೆ ಮಾಡಿದ್ದೀರಿ ಎಂದು ಕೇಳಿದಾಗ, “ಈಗಿನ ರಾಜಕೀಯ ನೋಡಿ ಬಹಳ ನೋವಾಗುತ್ತಿದೆ. ಕುಮಾರಸ್ವಾಮಿ ಅವರು ತಮ್ಮ ಸರ್ಕಾರವನ್ನು ಬೀಳಿಸಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನು ಈಗ ತಬ್ಬಾಡುತ್ತಿದ್ದಾರೆ. ರಾಜಕಾರಣದಲ್ಲಿ ಯಾರು ಯಾರನ್ನ ನಂಬಬೇಕು ಎಂದು ಬಹಳ ವ್ಯಥೆಯಾಗುತ್ತಿದೆ. ನಾವು ಕುಮಾರಣ್ಣ ಅವರನ್ನು 5 ವರ್ಷ ಸಿಎಂ ಮಾಡಬೇಕು ಎಂದು ಮೈತ್ರಿ ಸರ್ಕಾರ ಮಾಡಿದೆವು. ಆ ಸರ್ಕಾರ ಬೀಳಿಸಿದವರ ಜೊತೆ ಈಗ ಕುಮಾರಸ್ವಾಮಿ ಸ್ನೇಹ ಬೆಳೆಸುತ್ತಿದ್ದಾರೆ. ಅವರ ವಕ್ತಾರರಾಗಿದ್ದಾರೆ. ಇದೆಲ್ಲವನ್ನೂ ನಿರ್ಧರಿಸಲು ಜನರಿಗೆ…
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಿಂದ ಎನ್ಎಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಾಂಬರ್ ಸಮುದ್ರ ಮಾರ್ಗ ಬಳಸಿ ಎಸ್ಕೇಪ್ ಆಗಿರೋ ಶಂಕೆಯನ್ನು ವ್ಯಕ್ತಪಡಿಸಿರುವಂತ ಎನ್ಐಎ ಟೀಂ, ಮಂಗಳೂರಲ್ಲಿ ಕರಾವಳಿ ಕಾವಲು ಪಡೆಯನ್ನು ಹೈ ಅಲರ್ಟ್ ಮಾಡಿದೆ. ಮಂಗಳೂರಿನ ಕರಾವಳಿ ತೀರದಲ್ಲಿ ರಾಮೇಶ್ವರಂ ಕೆಫೆ ಸ್ಪೋಟಕ ಆರೋಪಿಯು ಸಮುದ್ರ ಮಾರ್ಗದ ಮೂಲಕ ತೆರಳಿರೋ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಎನ್ಐಎ ಅಧಿಕಾರಿಗಳು ಕರಾವಳಿ ಕಾವಲುಪಡೆಯನ್ನು ಅಲರ್ಟ್ ಮಾಡಿದ್ದಾರೆ. ಎನ್ಐಎ ಸೂಚನೆಯ ಮೇರೆಗೆ ಮಂಗಳೂರಲ್ಲಿ ಕರಾವಳಿ ಕಾವಲುಪಡೆಯಿಂದ ಪ್ರತಿ ಬೋಡ್ ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಎನ್ಐಎ ಬಿಡುಗಡೆ ಮಾಡಿರುವಂತ ಬಾಂಬರ್ ಪೋಟೋಗಳನ್ನು ಮೀನುಗಾರರಿಗೆ ತೋರಿಸಿ, ಸುಳಿವು ಸಿಗಲಿದ್ಯಾ ಅಂತ ಪತ್ತೆ ಹಚ್ಚುತ್ತಿದೆ. ಅರಬ್ಬೀ ಸಮುದ್ರದ ಆಯಕಟ್ಟಿನ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಂಗಳೂರಿನ ವಿವಿಧ ಕಡೆಯಲ್ಲಿ ಎನ್ಐಎ ಸೂಚನೆಯ ಮೇರೆಗೆ ಕರಾವಳಿ ಕಾವಲುಪಡೆಯಿಂದ ಬೋಟ್ ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಬಾಂಬರ್ ಸಮುದ್ರ ಮಾರ್ಗ ಬಳಸಿ ಪರಾರಿಯಾದ…
ಬೆಂಗಳೂರು: ರಾಜ್ಯ ಸರ್ಕಾರದಿಂದ ವಿವಾಹ ನೋದಂಣಿಗಾಗಿ ಕಚೇರಿ ಅಲೆದಾಟಕ್ಕೆ ಬ್ರೇಕ್ ಹಾಕಲಾಗಿದೆ. ಇದರ ಬದಲಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋ ನಿಮಗೆ ವಿವಾಹ ನೋಂದಣಿ ಮಾಜಿಸಬೇಕು ಅಂದ್ರೇ ಜಸ್ಟ್ ಕುಳಿತಲ್ಲೇ ಆನ್ ಲೈನ್ ಮೂಲಕ ನೋಂದಣಿ ಮಾಡಬಹುದಾಗಿದೆ. ಅದು ಹೇಗೆ ಅಂತ ಮುಂದೆ ಓದಿ. ಮದುವೆಗಳು ನಿಶ್ಚಯವಾಗಲಿ ಸ್ವರ್ಗದಲ್ಲಿ, ನೋಂದಣಿಯಾಗಲಿ ಕಾವೇರಿ 2.0ರಲ್ಲಿ, ನಿಮ್ಮ ಮನೆಯಲ್ಲೇ ನೆಮ್ಮದಿ ಗ್ಯಾರಂಟಿ ಎಂಬುದಾಗಿ ರಾಜ್ಯ ಸರ್ಕಾರ ಹೇಳಿದೆ. ಜೊತೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಸುಲಭ, ಸರಳ, ಸುಲಲಿತವಾಗಿ ವಿವಾಹ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದೆ. ಆನ್ ಲೈನ್ ನಲ್ಲೇ ವಿವಾಹ ನೋಂದಣಿಗಾಗಿ ಈ ಹಂತ ಅನುಸರಿಸಿ https://kaveri.karnataka.gov.in ಗೆ ಭೇಟಿ ನೀಡಿ. ಬಳಕೆದಾರರ ಖಾತೆಯನ್ನು ತೆರೆಯಿರಿ. ಕಾವೇರಿ ಪೋರ್ಟಲ್ ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆ ಮಾಡಿ ಮತ್ತು ವಿವರ ನಮೂದಿಸಿ ಅರ್ಜಿ ಸಲ್ಲಿಸಿ. ಗಂಡ, ಹೆಂಡತಿ ಮತ್ತು ಮೂರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ…
ಬೆಂಗಳೂರು: ಇಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ವಾಸು ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. “ವಾಸು ಅವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ನನ್ನ ಆತ್ಮೀಯರಾಗಿದ್ದ ವಾಸು ಅವರ ಜತೆ ರಾಜಕೀಯ ಪಯಣದಲ್ಲಿ ಉತ್ತಮ ಒಡನಾಟ ಹೊಂದಿದ್ದೆ. ಮೈಸೂರು ಮೇಯರ್ ಆಗಿ, ನಂತರ ಶಾಸಕರಾಗಿ ವಾಸು ಅವರು ಮೈಸೂರು, ಚಾಮರಾಜನಗರ ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಬಹಳ ನಷ್ಟ ತಂದಿದೆ ಎಂದಿದ್ದಾರೆ. ವಾಸು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ವಾಸು ಅವರ ನಿಧನಕ್ಕೆ ವಿಜಯೇಂದ್ರ ಸಂತಾಪ ಬೆಂಗಳೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜನಾನುರಾಗಿ ನಾಯಕ ಹಾಗೂ ನಮ್ಮ ಪಕ್ಷದ ಮುಖಂಡ ಕವೀಶ್…
ಬೆಳಗಾವಿ: ಜಿಲ್ಲೆಯ ಪ್ರಸಿದ್ಧವಾದಂತ ರಾಮಮಂದಿರವೊಂದನ್ನು ಬಾಂಬ್ ಇಟ್ಟು ಸ್ಪೋಟಿಸೋದಾಗಿ ಅಲ್ಲಾ ಹು ಹೆಸರಿನಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರವನ್ನು ಕಳಿಸಿರೋ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿರುವಂತ 101 ವರ್ಷಗಳ ಇತಿಹಾಸ ಹೊಂದಿರುವಂತ ರಾಮಮಂದಿರವನ್ನು ಸ್ಪೋಟಿಸೋದಾಗಿ ಅಲ್ಲಾ ಹು ಹೆಸರಿನಲ್ಲಿ ಹಿಂದಿಯಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರವನ್ನು ಕಳುಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿರುವಂತ ಶ್ರೀರಾಮ ಮಂದಿರವನ್ನು ಸ್ಪೋಟಿಸೋದಾಗಿ ಫೆಬ್ರವರಿ.7 ಹಾಗೂ ಫೆಬ್ರವರಿ 28ರಂದು ಅಲ್ಲಾ ಹು ಹೆಸರಿನಲ್ಲಿ ದುಷ್ಕರ್ಮಿಗಳಿಂದ ಬೆದರಿಕೆ ಪತ್ರವನ್ನು ಕುಳುಹಿಸಲಾಗಿದೆ. ಫೆಬ್ರವರಿ.7ರಂದು ಕಳುಹಿಸಲಾಗಿರುವಂತ ಮೊದಲ ಪತ್ರವು ರಾಮಮಂದಿರದ ಗರ್ಭಗುಡಿಯಲ್ಲಿ ಪತ್ತೆಯಾಗಿದೆ. ಫೆಬ್ರವರಿ.2ರಂದು ಎರಡನೇ ಬೆದರಿಕೆ ಪತ್ರವು ಹನುಮಾನ್ ಗುಡಿಯಲ್ಲಿ ಸಿಕ್ಕಿದೆ. ಈ ಪತ್ರಗಳನ್ನು ಪೊಲೀಸರಿಗೆ ದೇವಾಲಯದ ಅರ್ಚಕರು ನೀಡಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಬೆಂಗಳೂರು ಸ್ಪೋಟದ ಬೆನ್ನಲ್ಲೇ ಶ್ರೀರಾಮಮಂದಿರ ಸ್ಪೋಟಿಸೋದಾಗಿ ಕಳುಹಿಸಿರೋ ಬೆದರಿಕೆ ಪತ್ರ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ. https://kannadanewsnow.com/kannada/nia-releases-new-pics-of-bangalore-cafe-bomber/ https://kannadanewsnow.com/kannada/breaking-muslim-cleric-hacked-to-death-over-flex-issue-in-mysuru/
ಬೆಂಗಳೂರು: ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ಪುಣೆಯಲ್ಲಿದ್ದಾನೆ ಎಂದು ನಂಬಲಾಗಿದೆ ಎಂದು ಲೋಕಮತ್ ವರದಿ ಮಾಡಿದೆ. ಅಲ್ಲದೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ಬಾಂಬರ್ ಹೊಸ ಪೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಫೋಟದ ನಂತರ ಆರೋಪಿಗಳು ಕರ್ನಾಟಕದ ಬಳ್ಳಾರಿಗೆ ಬಸ್ ನಲ್ಲಿ ಪ್ರಯಾಣಿಸಿ ನಂತರ ಭಟ್ಕಳ, ಗೋಕರ್ಣ, ಬೆಳಗಾವಿ ಮತ್ತು ಕೊಲ್ಹಾಪುರ ಮೂಲಕ ಪುಣೆಗೆ ತೆರಳಿದರು ಎಂದು ವರದಿಯಾಗಿದೆ. ಆದಾಗ್ಯೂ, ಶಂಕಿತ ಭಯೋತ್ಪಾದಕ ಪುಣೆಯನ್ನು ತಲುಪಿದ್ದಾನೆಯೇ ಅಥವಾ ಮಾರ್ಗಮಧ್ಯೆ ಬಸ್ಸುಗಳನ್ನು ಬದಲಾಯಿಸಿದ್ದಾನೆಯೇ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ದೃಢಪಡಿಸಿಲ್ಲ ಎಂದು ವರದಿ ತಿಳಿಸಿದೆ. ಏತನ್ಮಧ್ಯೆ, ಎನ್ಐಎ ಶನಿವಾರ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಆರೋಪಿಗಳ ಹಲವಾರು ಸಿಸಿಟಿವಿ ಚಿತ್ರಗಳನ್ನು ಹಂಚಿಕೊಂಡಿದೆ. “ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರನ್ನು ಗುರುತಿಸಲು ಎನ್ಐಎ ನಾಗರಿಕರ ಸಹಕಾರವನ್ನು ಕೋರಿದೆ. ಯಾವುದೇ ಮಾಹಿತಿಯೊಂದಿಗೆ 08029510900, 8904241100, ಅಥವಾ ಇಮೇಲ್ info.blr.nia@gov.in ಗೆ ಕರೆ ಮಾಡಿ.…
ನವದೆಹಲಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಗತ್ಯ ವಸ್ತುಗಳನ್ನು ಪಡೆಯಲು ಪಡಿತರ ಚೀಟಿಯನ್ನು ( Ration Card ) ಪ್ರತ್ಯೇಕವಾಗಿ ನೀಡಲಾಗುತ್ತದೆ ಮತ್ತು ಅದನ್ನು ವಿಳಾಸ ಅಥವಾ ನಿವಾಸದ ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ( Delhi High Court ) ಹೇಳಿದೆ. ದೆಹಲಿಯ ಕಟ್ ಪುತಲಿ ಕಾಲೋನಿಯ ನಿವಾಸಿಗಳು ಮರು ಅಭಿವೃದ್ಧಿಯ ನಂತರ ಪುನರ್ವಸತಿ ಯೋಜನೆಯಡಿ ಪರ್ಯಾಯ ವಸತಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್, ಈ ಯೋಜನೆಯಡಿ ಪ್ರಯೋಜನ ಪಡೆಯಲು ಪಡಿತರ ಚೀಟಿಯನ್ನು ಕಡ್ಡಾಯ ದಾಖಲೆಯಾಗಿ ಬಳಸುವುದು ನಿರಂಕುಶ ಮತ್ತು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟರು. ಪಡಿತರ ಚೀಟಿಯ ವ್ಯಾಖ್ಯಾನದ ಪ್ರಕಾರ, ಅದನ್ನು ವಿತರಿಸುವ ಉದ್ದೇಶವು ನ್ಯಾಯಬೆಲೆ ಅಂಗಡಿಗಳ ಮೂಲಕ ಅಗತ್ಯ ಆಹಾರ ಪದಾರ್ಥಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ, ಇದು ಯಾವುದೇ ಪಡಿತರ ಚೀಟಿದಾರರಿಗೆ ವಾಸಸ್ಥಳದ ಗುರುತಿನ ಪುರಾವೆಯಾಗುವುದಿಲ್ಲ ಎಂದು ನ್ಯಾಯಾಲಯ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ. ಪಡಿತರ ಚೀಟಿ ಹೊಂದಿರುವವರು ಪಡಿತರ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಇಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ (ಎಸ್ಎಚ್ಎಲ್ಸಿಸಿ) 63ನೇ ಸಭೆಯಲ್ಲಿ, ರಾಜ್ಯದಾದ್ಯಂತ 27,067 ಉದ್ಯೋಗಗಳನ್ನು ಸೃಷ್ಟಿಸುವ ₹ 17835.9 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಇದರಲ್ಲಿ ₹ 8220.05 ಕೋಟಿ ಮೊತ್ತದ 6 ಹೊಸ ಯೋಜನೆಗಳು ಮತ್ತು ₹ 9,615.85 ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳು ಇವೆ. ʼಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹೊಸ ಹೂಡಿಕೆ ಮತ್ತು ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ದೊರೆತಿರುವ ಅನುಮತಿಗಳಿಂದ ಈ ಜಿಲ್ಲೆಗಳಲ್ಲಿ ಒಟ್ಟಾರೆ ₹ 10,433.72 ಕೋಟಿ ಮೊತ್ತದ ಬಂಡವಾಳ ಹೂಡಿಕೆ ಆಗಲಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ‘ವಿಸ್ಟ್ರಾನ್ ಇನ್ಫೊಕಾಂ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ₹ 2095 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ಫೋನ್ ತಯಾರಿಕಾ ಘಟಕ ಆರಂಭಿಸಲಿದೆ. ಇದರಿಂದ…
ಬೆಂಗಳೂರು: ಇಂಧಾನ ಇಲಾಖೆಯ ವೆಬ್ ಸೈಟ್ ಸಾಫ್ಟ್ ವೇರ್ ಅಪ್ ಡೇಟ್ ಕಾರಣದಿಂದಾಗಿ ಮಾರ್ಚ್.10ರ ನಾಳೆಯಿಂದ ಮಾ. 19ರವರೆಗೆ 10 ದಿನಗಳ ಕಾಲ ಆನ್ ಲೈನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬಿಲ್ ಸೇರಿದಂತೆ ಇತರೆ ಸೇವೆಗಳು ಸ್ಥಗತಗೊಳಿಸಲಾಗುತ್ತಿದೆ. ಈ ಕುರಿತಂತೆ ಇಂಧನ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ ಎಲ್ಲಾ ಎಸ್ಕಾಂಗಳ ಆನ್ ಲೈನ್ ಸೇವೆಗಳು ಹತ್ತು ದಿನಗಳ ಕಾಲ ಸೇವೆಗಳು ಲಭ್ಯವಿರುವುದಿಲ್ಲ. ಮಾರ್ಚ್.10ರ ನಾಳೆಯಿಂದ ಮಾ. 19ರವರೆಗೆ ಹತ್ತು ದಿನಗಳ ಕಾಲ ಲಭ್ಯವಿರುವುದಿಲ್ಲ ಎಂದಿದೆ. ತಂತ್ರಾಂಶವು ಕಾರ್ಯಾರಂಭಗೊಂಡ ನಂತ್ರ ಪರೀಕ್ಷೆಯ ಬಳಿಕ ಸುಮಾರು 15 ದಿನಗಳ ಕಾಲಾವಕಾಶ ಬೇಕಿರುವುದರಿಂದ ಈ ಸಮಯದಲ್ಲಿ ತಂತ್ರಾಂಶದ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಮಾರ್ಚ್.20ರ ನಂತ್ರ ಈ ಆನ್ ಲೈನ್ ಸೇವೆ ಸರಿಯಾಗಲಿದ್ದು, ಗ್ರಾಹಕರು ವಿದ್ಯುತ್ ಪಾವತಿ ಮಾಡದೇ ಇದ್ದರೂ ಸಂಪರ್ಕ ಕಡಿತಗೊಳಿಸೋದಿಲ್ಲ ಅಂತ ಎಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಿದೆ. ನಾಳೆಯಿಂದ ಈ ಎಲ್ಲಾ ಜಿಲ್ಲೆಗಳ ಎಸ್ಕಾಂ…
ಬಳ್ಳಾರಿ : ಡೇ ನಲ್ಮ್ ಯೋಜನೆಯಡಿ ಪಿಎಂ ಸ್ವನಿಧಿ (ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಯೋಜನೆ) ಹಾಗೂ ನಿರಾಶ್ರಿತರಿಗೆ ಆಶ್ರಯ ಕೇಂದ್ರದ ಸೌಲಭ್ಯ (Night Shelter) ಈ ಎರಡು ಯೋಜನೆಯಲ್ಲಿ ಅತ್ಯುತ್ತಮ ಗುರಿ ಸಾಧನೆಗೆ ಬಳ್ಳಾರಿ ಮಹಾನಗರ ಪಾಲಿಕೆಗೆ 2 ರಾಜ್ಯ ಪ್ರಶಸ್ತಿಗಳು ಲಭಿಸಿವೆ. ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಡೇ ನಲ್ಮ್ ಯೋಜನೆಯಡಿ ಪಿಎಂ ಸ್ವನಿಧಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಲಾಗುವ ಸಾಲ ಯೋಜನೆಯಡಿ ಸಮರ್ಪಕ ಅನುಷ್ಠಾನದಲ್ಲಿ ಪ್ರಥಮ ಸ್ಥಾನ ಪಡೆದ ಬಳ್ಳಾರಿ ಮಹಾನಗರ ಪಾಲಿಕೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದೇರೀತಿಯಾಗಿ ಡೇ ನಲ್ಮ್ ಯೋಜನೆಯಡಿ ನಿರಾಶ್ರಿತರ ಕೇಂದ್ರದ ಉತ್ತಮ ನಿರ್ವಹಣೆಗಾಗಿ ಬಳ್ಳಾರಿ ಮಹಾನಗರ ಪಾಲಿಕೆಗೆ ಇನ್ನೊಂದು ಪ್ರಶಸ್ತಿಯನ್ನು ನೀಡಲಾಯಿತು. ಎರಡು ಪ್ರಶಸ್ತಿಗಳನ್ನು ಕೌಶಲ್ಯಾಭಿವೃದ್ದಿ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಮತ್ತು ನಲ್ಮ್ ಅಭಿಯಾನ ನಿರ್ದೇಶಕರಾದ…