Author: kannadanewsnow09

ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಮೃತಪಟ್ಟಂತ ಪತಿಯ ಸಾವಿನ ಸುದ್ದಿ ಕೇಳಿದಂತ ಪತ್ನಿಯೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವಂತ ಘಟನೆ ಶಿವಮೊಗ್ಗದ ಕಿಲ್ಲೆ ಕ್ಯಾತರ ಕ್ಯಾಂಪ್ ನಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದಂತ ಇಬ್ಬರು ಸಾವಿನಲ್ಲೂ ಒಂದಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆಸಿಗೆ ಗ್ರಾಮ ಪಂಚಾಯ್ತಿಯ ಕಿಲ್ಲೆ ಕ್ಯಾತರ ಕ್ಯಾಂಪ್ ನ ಮಂಜುನಾಥ್(25) ಅವರು ಶಿಕಾರಿಪುರದ ಬಳಿಯಲ್ಲಿ ಬೈಕ್ ಅಪಘಾತದಲ್ಲಿ ಬುಧವಾರ ಗಾಯಗೊಂಡಿದ್ದರು. ಆದರೇ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಪತಿ ಮಂಜುನಾಥ್ ಬೈಕ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿದಂತ ಪತ್ನಿ ಅಮೃತ(21) ಮನೆಗೆ ಬಂದು ತನ್ನ ವೇಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ಸಾವಿನ ಸುದ್ದಿಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. https://kannadanewsnow.com/kannada/two-cooks-injured-as-cooker-explodes-while-preparing-mid-day-meals-for-children/ https://kannadanewsnow.com/kannada/rajasthan-3-year-old-girl-falls-into-150-feet-deep-borewell-rescued/

Read More

ತುಮಕೂರು: ಮಧ್ಯಾಹ್ನದ ಬಿಸಿಯೂಟಕ್ಕಾಗಿ ಶಾಲಾ ಮಕ್ಕಳಿಗೆ ಊಟ ತಯಾರಿಸುತ್ತಿದ್ದಂತ ಸಂದರ್ಭದಲ್ಲೇ ಗ್ಯಾಸ್ ಮೇಲೆ ಇರಿಸಿದ್ದಂತ ಕುಕ್ಕರ್ ಸ್ಪೋಟಗೊಂಡು ಓರ್ವ ಅಡುಗೆ ಸಹಾಯಕಿ ಗಂಭೀರವಾಗಿ ಗಾಯಗೊಂಡು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪುರವರದಲ್ಲಿರುವಂತ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಮಧ್ಯಾಹ್ನ ಬಿಸಿಯೂಟ ತಯಾರಿಸುತ್ತಿದ್ದಂತ ಸಂದರ್ಭದಲ್ಲೇ ಕುಕ್ಕರ್ ಸ್ಪೋಟಗೊಂಡಿದೆ. ಈ ಘಟನೆಯಲ್ಲಿ ಅಡುಗೆ ಸಹಾಯಕಿ ಉಮಾದೇವಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಬ್ಬ ಅಡುಗೆ ಸಹಾಯಕಿ ಜಯ್ಯಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡಿರುವಂತ ಅಡುಗೆ ಸಹಾಯಕಿ ಉಮಾದೇವಿಯನ್ನು ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಣಮಟ್ಟದ ಕುಕ್ಕರ್ ನೀಡದೇ ಇರುವುದೇ ಘಟನೆ ಕಾರಣ ಎಂಬುದಾಗಿ ಆರೋಪಿಸಲಾಗಿದೆ. https://kannadanewsnow.com/kannada/new-years-eve-mother-two-children-die-after-falling-into-farm-pond/ https://kannadanewsnow.com/kannada/rajasthan-3-year-old-girl-falls-into-150-feet-deep-borewell-rescued/

Read More

ವಿಜಯಪುರ: ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಧಾರುಣವಾಗಿ ಹೊಸ ವರ್ಷದಂದೇ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಹರನಾಳ ಬಳಿಯಲ್ಲಿ ಈ ಧಾರುಣ ಘಟನೆ ನಡೆದಿದೆ. ಜಮೀನಿಗೆ ತೆರಳಿದ್ದಂತ ಗೀತಾ ಬಂಡಿ ಹಾಗೂ ಗಂಡು ಮಕ್ಕಳಾದಂತ ಶ್ರವಣ್, ಶರಣ್ ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅಂದಹಾಗೇ ಗಂಡನ ಜೊತೆಗೆ ಜಗಳವಾಡಿ ಮನೆ ಬಿಟ್ಟು ಗೀತಾ ಬಂದಿದ್ದರು. ಇಂದು ಕೃಷಿ ಹೊಂಡದ ಬಳಿಯಲ್ಲಿ ತೆರಳಿದ್ದಾಗ ಕಾಲು ಜಾರಿ ಬಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಈ ದುರಂತ ನಡೆದಿದೆ ಎನ್ನಲಾಗುತ್ತಿದೆ. ಮೃತ ಗೀತಾ ತಂದೆ ರಾಮಪ್ಪ ನಾಯ್ಕಡಿ ಎಂಬುವರಿಗೆ ಸೇರಿದಂತೆ ಕೃಷಿ ಹೊಂಡದಲ್ಲಿ ಈ ಧಾರುಣ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ದೇವರಹಿಬ್ಬರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/percent-sale-of-kannada-books-at-50-discount/ https://kannadanewsnow.com/kannada/rajasthan-3-year-old-girl-falls-into-150-feet-deep-borewell-rescued/

Read More

ನವದೆಹಲಿ: ರಾಜಸ್ಥಾನದ ಕೋಟ್ಪುಟ್ಲಿಯಲ್ಲಿ 10 ದಿನಗಳ ಹಿಂದೆ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಕೊನೆಗೂ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಚೇತನಾ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅಧಿಕಾರಿಗಳು ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಡಿಸೆಂಬರ್ 23 ರಂದು ರಾಜಸ್ಥಾನದ ಕೋಟ್ಪುಟ್ಲಿ-ಬೆಹ್ರೋರ್ ಜಿಲ್ಲೆಯ ಸರುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಯಾಲಿ ಧಾನಿಯಲ್ಲಿರುವ ತನ್ನ ತಂದೆಯ ಕೃಷಿ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಚೇತನಾ ಕೊಳವೆಬಾವಿಗೆ ಬಿದ್ದಿದ್ದಳು. ಅವಳನ್ನು ಹೊರತೆಗೆಯಲು ಉಂಗುರವನ್ನು ಬಳಸಿದ ಆರಂಭಿಕ ರಕ್ಷಣಾ ಪ್ರಯತ್ನಗಳು ವಿಫಲವಾದವು. ಎರಡು ದಿನಗಳ ವಿಫಲ ಪ್ರಯತ್ನಗಳ ನಂತರ, ಬುಧವಾರ ಬೆಳಿಗ್ಗೆ ಪೈಲಿಂಗ್ ಯಂತ್ರವನ್ನು ತರಲಾಯಿತು ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಸಮಾನಾಂತರ ಗುಂಡಿಯನ್ನು ಅಗೆಯಲಾಯಿತು. ರಕ್ಷಣಾ ಕಾರ್ಯಾಚರಣೆ ನಡೆದಿದ್ದೇಗೆ.? ರಾಜ್ಯದ ಸುದೀರ್ಘ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾದ ಈ ಕಾರ್ಯಾಚರಣೆಯಲ್ಲಿ, ಅಧಿಕಾರಿಗಳು 160 ಗಂಟೆಗಳಿಗೂ ಹೆಚ್ಚು ಕಾಲ ಹಗಲು ರಾತ್ರಿ ಕೆಲಸ…

Read More

ಧಾರವಾಡ : ಗಣರಾಜ್ಯೋತ್ಸವದ ದಿನಾಚರಣೆಯ ಅಂಗವಾಗಿ 2025 ರ ಜನವರಿ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ. 50 ರಷ್ಟು ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ (ದೂರವಾಣಿ ಸಂಖ್ಯೆ: 080-22107705) ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‍ಲೈನ್ https://kpp.karnataka.gov.in (ಆನ್‍ಲೈನ್ ಪುಸ್ತಕ ಖರೀದಿಗೆ ಇಲ್ಲಿ ವೀಕ್ಷಿಸಿ ವಿಭಾಗ) ನಲ್ಲಿ ಕೂಡ ಈ ಶೇ. 50 ರಷ್ಟು ರಿಯಾಯಿತಿ ಲಭ್ಯವಿರುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಇಲ್ಲಿಯವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ,…

Read More

ಧಾರವಾಡ : 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಖಾಸಗಿ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಸಂಸ್ಥೆ, ಟ್ರಸ್ಟ್, ಕಂಪನಿ, ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಇತರ ಆಸ್ತಕರು ನಿಗಧಿತ ಅರ್ಜಿ ನಮೂನೆಗಳಲ್ಲಿ ಏಪ್ರೀಲ್ 30, 2025 ರೊಳಗಾಗಿ https://pue.karnataka.gov.in/ ವೆಬ್ ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು. ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಇದ್ದಲ್ಲಿ 2025-26 ನೇ ಶೈಕ್ಷಣಿಕ ಸಾಲಿಗೆ ಮಂಜೂರಾತಿಯನ್ನು ನೀಡಲಾಗುವುದು. ಮೇ 1, 2025 ರ ನಂತರ ಸಲ್ಲಿಸಿದ ಪ್ರಸ್ತಾವನೆಗಳನ್ನು 2025-26 ನೇ ಶೈಕ್ಷಣಿಕ ಸಾಲಿಗೆ ಮಂಜೂರಾತಿಯನ್ನು ನೀಡಲಾಗುವುದಿಲ್ಲಾ. ಇಂತಹ ಪ್ರಸ್ತಾವನೆಗಳನ್ನು ಪರಿಶೀಲಿಸಿ ನಿಯಾಮಾನುಸಾರ ಇದ್ದಲ್ಲಿ 2026-27 ನೇ ಶೈಕ್ಷಣಿಕ ಸಾಲಿಗೆ ಪರಿಗಣಿಸಲಾಗುವುದು. https://dpue-pragathi.karnataka.gov.in/newcollege2025 ಲಿಂಕ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ಅರ್ಜಿ ಸಲ್ಲಿಸಿದ ನಂತರ ಒಂದು ಪ್ರತಿಯನ್ನು ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣ ಎದುರು, ಕಾಲೇಜು ರಸ್ತೆ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪ ನಿರ್ದೇಶಕರ ಕಛೇರಿಗೆ ಸಲ್ಲಿಸಬೇಕೆಂದು…

Read More

ನವದೆಹಲಿ: ಉಕ್ಕಿನ ಮನುಷ್ಯ ಎಂದು ಬಣ್ಣಿಸಲ್ಪಡುವ ಸರ್ದಾರ್ ವಲ್ಲಭಾಯಿ ಪಟೇಲರ ನಂತರ ದೇಶಕಂಡ ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು 2025ರ ನೂತನ ಕ್ಯಾಲೆಂಡರ್ ಹೊಸವರ್ಷದ ದಿನವಾದ ಇಂದು ನವದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿಯಾಗಿ ಶುಭಾಶಯ ಕೋರಿ, ಆಶೀರ್ವಾದ ಪಡೆದರು. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ರಾಜ್ಯದಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ಸಚಿವರುಗಳ ವಿರುದ್ಧದ ಆರೋಪಗಳ ಕುರಿತು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲ ವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ ಸೂಕ್ತ ಮಾರ್ಗದರ್ಶನವನ್ನು ಕೋರಲಾಯಿತು ಎಂದಿದ್ದಾರೆ. ದೇಶ ಸುಭದ್ರತೆಗಾಗಿ ಪ್ರಧಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಐತಿಹಾಸಿಕ ಹೆಜ್ಜೆಗಳನ್ನಿಡುತ್ತಿರುವ ಮಾನ್ಯ ಅಮಿತ್ ಶಾ ಜೀ ಯವರು ಪಕ್ಷ ಸಂಘಟನೆಗಾಗಿಯೂ ಅಷ್ಟೇ ಬದ್ಧತೆ ಹಾಗೂ ಕಾಳಜಿ ವಹಿಸುವುದು ಪ್ರತಿಯೊಬ್ಬ…

Read More

ಬಳ್ಳಾರಿ : ಕುರುಗೋಡು ಜೆಸ್ಕಾಂ ವ್ಯಾಪ್ತಿಯ ಬಾದನಹಟ್ಟಿ ಶಾಲೆಯ ಮೇಲೆ ಹಾದು ಹೋಗುವ ಅಪಾಯಕಾರಿ 110ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ 110/33/11 ಕೆವಿ ಕುರುಗೊಡು ಉಪ-ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ವಿವಿಧ 11ಕೆ.ವಿ ಮಾರ್ಗಗಳಲ್ಲಿ ಜ.03 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-1 ಕುರುಗೋಡು ಅರ್ಬನ್ ಮಾರ್ಗದ ಉಜ್ಜಲ್‌ಪೇಟೆ, ನೀಲಮ್ಮನ ಮಠ, ಸುಣ್ಣದ ಬಟ್ಟಿ, ಇಂದಿರಾನಗರ, ಬಳ್ಳಾರಿ ರಸ್ತೆ, ಸೂರ್ಯ ನಾರಾಯಣ ರೆಡ್ಡಿ ಕಾಲೋನಿ, ಬಾದನಹಟ್ಟಿ ರಸ್ತೆ, ಹರಿಕೃಪಾ ಕಾಲೋನಿ, ಸದಾಶಿವ ನಗರ, ಗೌಡರ ಓಣಿ. ಎಫ್-2 ಗೆಣಿಕೆಹಾಳ್ ಐಪಿ ಫೀಡರ್ ಮಾರ್ಗದ ಹೊಸ ಗೆಣಿಕೆಹಾಳ್, ಹಳೇ ಗೆಣಿಕೆಹಾಳ್, ಬಸವಪುರ, ಅನ್ನಪೂರ್ಣೇಶ್ವರಿ ಕ್ಯಾಂಪ್, ವದ್ದಟ್ಟಿ ಕ್ರಾಸ್ ಗ್ರಾಮಗಳು. ಎಫ್-3 ಕಲ್ಲುಕಂಬ ಐಪಿ ಫೀಡರ್ ಮಾರ್ಗದ ಯಲ್ಲಾಪುರ ಕ್ರಾಸ್, ಮಾರುತಿ ಕ್ಯಾಂಪ್, ಶ್ರೀನಿವಾಸ ಕ್ಯಾಂಪ್, ಲಕ್ಷ್ಮೀ ಪುರ, ಕಲ್ಲುಕಂಭ, ಕೆರೆಕೆರೆ, ಮುಷ್ಟಗಟ್ಟ ಗ್ರಾಮಗಳು. ಎಫ್-4 ಹೆಚ್.ವೀರಾಪುರ ಎನ್.ಜೆ.ವೈ…

Read More

ಶಿವಮೊಗ್ಗ: ಕಾಮಗಾರಿ ನಡೆಸಿದ್ದಂತ ಬಾಕಿ ಬಿಲ್ ಬಿಡುಗಡೆಗಾಗಿ 1.20 ಲಕ್ಷ ಲಂಚ ಸ್ವೀಕರಿಸುತ್ತಿದ್ದಂತ ವೇಳೆಯಲ್ಲೇ ಕರ್ನಾಟಕ ನಿರಾವರಿ ನಿಗಮದ ಸೆಕ್ಷನ್ ಆಫೀಸರ್, ಲೈಟ್ ಮಜದೂರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದಲ್ಲಿ ಕರ್ನಾಟಕ ನಿರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತ, ಬಿಆರ್ ಪಿ ವ್ಯಾಪ್ತಿಯ ಭದ್ರಾವತಿ ತಾಲ್ಲೂಕು ಗೋಂಧಿ ಬಲದಂಡೆ ನಾಲೆಯ ಶೀಲ್ಡ್ ತೆಗೆಯಲು ಇ-ಟೆಂಡರ್ ಪಡೆದು, 2023ರಲ್ಲಿ ಡಿಸೆಂಬರ್ ನಲ್ಲಿ ಗುತ್ತಿಗೆದಾರ ವಿ.ರವಿ ಎಂಬುವರು ಪಡೆದಿದ್ದರು. 2023ರ ಡಿಸೆಂಬರ್ ನಲ್ಲೇ ಕೆಲಸ ಪ್ರಾರಂಭಿಸಿ 2024ರ ಜನವರಿಗೆ ಕಾಮಗಾರಿ ಮುಕ್ತಾಯಗೊಳಿಸಿದ್ದರು. ಆದರೇ ಬಾಕಿ ಬಿಲ್ ಪಾವತಿ ಮಾಡಿರಲಿಲ್ಲ. ದಿನಾಂಕ 27-12-2024ರಂದು ಡಿಬಿ ಹಳ್ಳಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿಗೆ ಹೋಗಿ, ಕಚೇರಿಯಲ್ಲಿದ್ದಂತ ಸೆಕ್ಷನ್ ಆಫೀಸರ್ ಕೊಟ್ರಪ್ಪ.ಟಿ ಭೇಟಿ ಮಾಡಿ, ಮಂಜೂರು ಮಾಡುವಂತೆ ಕೋರಿದ್ದರು. ಸೆಕ್ಷನ್ ಆಫೀಸರ್ ಬಾಕಿ ಕಾಮಗಾರಿ ಬಿಲ್ ಬಿಡುಗಡೆಗೆ 1.20 ಲಕ್ಷ ಲಂಚಕ್ಕೆ ಭೇಡಿಕೆ ಇಟ್ಟಿದ್ದರು. ಇದನ್ನು ಗುತ್ತಿಗೆದಾರ ರವಿ ವಾಯ್ಸ್ ರೆಕಾರ್ಡ್ ಮಾಡಿಕೊಂಡು ದಾಖಲೆ ಸಹಿತ…

Read More

ಬಳ್ಳಾರಿ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಕೌಶಲ್ಯ ಮತ್ತು ರೋಜ್‌ಗಾರ್ ಮೇಳ ಅಡಿ ಜ.03 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ), ಇಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುಮಾರು 40 ರಿಂದ 50 ಕಂಪನಿಗಳು ಭಾಗವಹಿಸಲಿದ್ದು, ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಲು ಉದ್ದೇಶಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆವುಳ್ಳ ಉದ್ಯೋಕಾಂಕ್ಷಿಗಳು ಪೂರಕ ದಾಖಲಾತಿಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು ನೋಂದಣಿಗಾಗಿ ಇಲಾಖೆಯಿಂದ ಸೃಜಿಸಲಾಗಿರುವ ಗೂಗಲ್ ಫಾರ್ಮ್ ಲಿಂಕ್ https://forms.gle/YhbVhDQqMmHRF1uV7 ರಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯ ಮಿಷನ್ ಕಚೇರಿ ಅಥವಾ ದೂ.08392-294230 ಮತ್ತು ಮೊ.9844444958, 6361607038 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶ್ಯಲಾಭಿವೃದ್ಧಿ ಅಧಿಕಾರಿ ಪ್ರಾಣೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://kannadanewsnow.com/kannada/good-news-for-farmers-in-the-state-details-of-rabi-crop-survey-allowed-to-be-recorded-through-mobile-app/ https://kannadanewsnow.com/kannada/hubballi-miscreants-stab-yuka-to-death-on-new-years-day/

Read More